Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಶಾಯರಿಗಳು ಮರುಳಸಿದ್ದಪ್ಪ ದೊಡ್ಡಮನಿ (ಕೂದಲಾ)                                                                            ನಿನ್ನ ಕೂದಲ ಹಾಂಗ ಹಗೂರಕ ನಿನ್ನ ಗಲ್ಲಕ್ಕ ಹಾರಿಕೊತ ಮುತ್ತಿಡತಾವು ಅವು ಎಷ್ಟು ಪುಣ್ಯಾ ಮಾಡ್ಯಾವು. ನೀ ಬಾಚಿ ಕಟ್ಟಿದ ಮುಡಿ ಬಿಚ್ಚಿ ಜಾಡಿಸಿದರ ಹುಚ್ಚು ಬಿಡಬೇಕು ಅವನ್ನೋಡಿದ ಹರೇದ ಹುಡುಗರಿಗೆ ಹುಚ್ಚು ಹಿಡಿ ಬೇಕು.  ಕಟ್ಟಿದ ಮುಡಿ ಬಿಚ್ಚಿ ಜಾಡಿಸಿದರ ನವಿಲು ಕುಣದಂಗಕ್ಕೈತಿ ನವಿಲಿನ ಕುಣತಕ್ಕ ನನಗರ ಒಂದ್ ನಮೂನಿ ಆಕ್ಕೈತಿ. ನಿನ್ನ ಮುಂಗುರುಳು ಎಷ್ಟು ಚಂದ ಮುಖದ ಮ್ಯಾಗ ಹಾರಾಡತಾವು ಅವುಕ ಸಲಿಗಿ ಕೊಟ್ಟಿ ಅಂತ ಕಾಣತೈತಿ ಎಲ್ಲೆಂದ್ರಲ್ಲಿ […]

ಅನುವಾದ ಸಂಗಾತಿ

ಇನ್ನಿಲ್ಲ ಕ್ಲೀಷೆಗಳು ಮೂಲ: ಆಕ್ತೇವಿಯೋ ಪಾಜ಼್  ಕನ್ನಡಕ್ಕೆ: ಮೇಗರವಳ್ಳಿ ರಮೇಶ್ ಸು೦ದರ ಮುಖಸೂರ್ಯನಿಗೆ ದಳ ಬಿಚ್ಚಿ ಕೊಳ್ಳುವ ಡೈಸಿ ಹೂವಿನ ಹಾಗೆನೀನೂ ತೆರೆ ನಿನ್ನ ಮುಖವನ್ನು ನನಗೆಪುಟಗಳನು ತೆರೆದ೦ತೆ ಪತ್ರಿಕೆಯ ಒಳಗೆ. ಸಮ್ಮೋಹಕ ಮುಗುಳು ನಗೆಯಓ, ನಿಯತಕಾಲಿಕೆಯ ಸು೦ದರಿಮರುಳಾಗಿ ಬಿಡುವರು ಮ೦ದಿ ನಿನ್ನ ಮೋಡಿಗೆ. ಎಷ್ಟು ಕವನಗಳು ಹುಟ್ಟಿಕೊ೦ಡಿಹವು ನಿನಗಾಗಿ?ಎಷ್ಟು ಜನ “ಡಾ೦ಟೆ” ಗಳು ಬರೆದಿಹರು ನಿನಗಾಗಿ?ಓ, ಬಿಯಾಟ್ರಿಸ್,ಕಾಡುವ ನಿನ್ನ ಮಾಯೆಸೃಜಿಸುವುದು ಭ್ರಮೆ. ಆದರಿ೦ದು, ಮತ್ತೊ೦ದು ಕ್ಲೀಷೆಯಲಿಬರೆಯುವುದಿಲ್ಲ ಈ ಕವಿತೆ ನಿನಗಾಗಿಇಲ್ಲ, ಇನ್ನಿಲ್ಲ ಕ್ಲೀಷೆ. ಯಾರ ಸೌ೦ದರ್ಯಅವರ […]

ಕಾವ್ಯಯಾನ

ಗಝಲ್ ಎ. ಹೇಮಗಂಗಾ ಸ್ಫಟಿಕದಂತೆ ಸದಾ ನಿರ್ಮಲ ಹೃದಯದವನು ನನ್ನ ರಾಜಕುಮಾರ ಕನಕದಂತೆ ಸದಾ ಹೊಳೆಯುವ ರೂಪದವನು ನನ್ನ ರಾಜಕುಮಾರ ಸವಿಮಾತಿನಲಿ ಮೊಗ್ಗು ಮನಸ ಅರಳಿಸಿದವನು ನನ್ನ ರಾಜಕುಮಾರ ಕಿರುನಗೆಯಲಿ ಮೋಡಿ ಮಾಡುತ ಚಿತ್ತ ಕಲಕಿದವನು ನನ್ನ ರಾಜಕುಮಾರ ಬೆಂಗಾಡಾದ ಬಾಳಲಿ ಚೈತ್ರ ಮೂಡಿಸಿದವನು ನನ್ನ ರಾಜಕುಮಾರ ಒಲವಿನಾರಾಧನೆಯೇ ತಪವೆಂದು ತೋರಿದವನು ನನ್ನ ರಾಜಕುಮಾರ ಸಪ್ತಪದಿಯಲಿ ಒಂದಾಗಿ ಸಗ್ಗವನೇ ಸೃಜಿಸಿದವನು ನನ್ನ ರಾಜಕುಮಾರ ಮಧುರ ಮಿಲನದ ನಶೆಯಲಿ ಮೈ ಮರೆಸಿದವನು ನನ್ನ ರಾಜಕುಮಾರ ತೋಳಬಂಧನದಿ ಪಿಸುಮಾತುಗಳ ಉಸುರಿದವನು […]

ಕಾವ್ಯಯಾನ

ಶಂಕಿತರು-ಸೊಂಕಿತರು ನಾಗರಾಜ ಮಸೂತಿ.. ಹೆಜ್ಜೆ ಗುರುತುಗಳು ಮಾಯವಾಗಿ ಕಂಗಾಲದ ರಸ್ತೆಗಳು, ಮೇಲ್ಮುಖವಾಗಿ ಮುಗಿಲನ್ನೆ ದಿಟ್ಟಿಸುವ ಗಿಡಮರಗಳು, ಗಿಜಗೂಡುವ ಸರಕಾರಿ ಕಛೇರಿಗಳ ಖಾಲಿ ಮನಸ್ಥಿತಿಯ ಗೋಡೆಗಳು, ಬೆಳಕು ಕಾಣದೆ ಕತ್ತಲಾವರಿಸಿದ ದವಾಖಾನ ಕೋಣಿಗಳು, ಫಿನಾಯಿಲ್ ವಾಸನೆ ಆವರಿಸಿಕೊಂಡು ತಳತಳ ಅನ್ನುತ್ತಿವೆ ಅಮವಾಸ್ಯೆ ಪೂಜೆಗೆ ಸಿದ್ಧವಾದಂತೆ, ಓಣಿಯ ಬೀದಿಗಳೆಲ್ಲ ಲೊಚುಗುಟ್ಟುತ್ತಿವೆ ಸಿಂಗಾರಗೊಂಡು, ಗಟಾರಗಳೆಲ್ಲ ಕಂದಮ್ಮಗಳಂತೆ ಪೌಡರ್ ಬಳಿದುಕೊಂಡು ವಧು ವರರ ವೇದಿಕೆಗೆ ಸಿದ್ಧವಾದಂತಿವೆ ಸಂಜೆ ಹೊತ್ತಿಗೆ ಕತ್ತಲೆ ಮೆತ್ತಿಕೊಂಡ ಆವರಣಕ್ಕೆಲ್ಲ ಬೀದಿ ದೀಪಗಳು ಬೆಳಕು ಹರಿಸಿ, ಕಛೇರಿ ಕಟ್ಟಡಗಳು, ಲೈಟ್ […]

ಕಾವ್ಯಯಾನ

ಯಾತ್ರಿಕ ವಿಭಾ ಪುರೋಹಿತ್ ಜಗದೆದೆಯ ತುಂಬ ಹತ್ತಿ ಉರಿಯುತ್ತಿದೆ ಬತ್ತಲಾರದ ಜ್ವಾಲೆ. ಹಾದಿ ಮುಗಿಯುವುದಿಲ್ಲ ಮುಗಿದರದು ಹಾದಿಯಲ್ಲ ! ಯಾತ್ರೆ ಮುಂದುವರೆದಿದೆ ಹೊಸ ಹೊಸ ದೇಶ ಪ್ರದೇಶವನು ತೆಕ್ಕೆಯೊಳಗೆ ನುಂಗಿದೆ. ನೂರು,ಸಾವಿರ,ಲಕ್ಷಗಳ ದಾಟುತ್ತಲಿದೆ ರಕ್ತಬೀಜಾಸುರನ ನೆತ್ತರಿನ ಹನಿಗಳಿಗಿಂತ ವಿಷಾಣು ಹರಡುತ್ತ,ಹಬ್ಬುತ್ತ ರಕ್ಕಸನಂತೆ ಮೀರಿ ಬೆಳೆಯುತ್ತಲಿದೆ ಮನುಕುಲವ ಕಂಗೆಡಿಸುತ್ತಿದೆ. ಹೊರಗಿಂದ ಬಂದವರು ಸುಮ್ಮನೆ ಬರಲಿಲ್ಲ ಇಂದಿಗೂ ಹಂಚುತ್ತಲೇ ಇರುವರು ಬೆನ್ನು ಹಿಂದೆ ನಿಂತು ಚೂರಿ ಹಾಕಿದರು ಕಾಡುಪಾಪದ ರುಚಿಗೆ ಸೋತವರು ಸಂಜೆ ಹಕ್ಕಿಯ ದನಿಗೆ ಕಿವುಡರಾದವರು ನೋವು ಕೇಕೆ […]

ಕಾವ್ಯಯಾನ

ಮಬ್ಯಾನ್ ಮಾತು! ರುದ್ರಸ್ವಾಮಿ ಹರ್ತಿಕೋಟೆ ಮಬ್ಯಾನ್ ಮಾತು! ೧) ಧ್ಯಾನಕ್ಕೆ ಕುಳಿತವರನ್ನು ಹೆಚ್ಚು ಕಾಡುವುದು ಅವಳು ಮತ್ತು ಅವಳು ಮಾತ್ರ! ೨) ಅವಳು ಪತಿವ್ರತೆ ಎಂದು ಮಾತಾನಾಡುವವರು ಅವಳ ಬೆತ್ತಲೆ ಕನಸ ಕಾಣದೆ ಇರರು! ೩) ಅವನು ಎಷ್ಟು ರಸಿಕನೆಂಬುದು ಅವನ ಹೆಂಡತಿಗಿಂತ ಅವನ ಸೆಕ್ರೆಟರಿಗೆ ಗೊತ್ತು! ೪) ಕವಿ ಬರೆದದ್ದನ್ನು ಕವಿಯೇ ಅರ್ಥೈಸಿದರೆ ರಸಭಂಗವಾಗುತ್ತದೆ! ೫) ಇಲ್ಲಿ ಹೆಚ್ಚು ಪ್ರೀತಿಸುವವರು ಹುಚ್ಚರಾಗುತ್ತಾರೆ ಇಲ್ಲವೇ ಹುತಾತ್ಮರಾಗುತ್ತಾರೆ! ೬) ಗಂಡಿಗಿಂತ ಹೆಣ್ಣು ಮೊದಲ ರಾತ್ರಿ ಏನೂ ಗೊತ್ತಿಲ್ಲದಂತೆ ನಟಿಸುತ್ತಾಳೆ! […]

ಕಾವ್ಯಯಾನ

ನಿವೇಧನ ಬಿ ಅರುಣ್ ಕುಮಾರ್ ಮಧುರ ಭಾವಗಳ ಸಂಕ್ರಮಣ ಪ್ರೇಮಾಮೃತದ ಹೊಂಗಿರಣ ಬಂಧು ಬಾಂಧವರ ತೋರಣ ಸಪ್ತಪದಿ ಮಾಂಗಲ್ಯಧಾರಣ ಓಲಗ ಅಕ್ಷತೆಯ ಸಂಗಮ ಭಾವ ಭಾವಮೈದುನ ಬಾಂಧವ್ಯ ಕುಟುಂಬಗಳೆರಡರ ಕಲ್ಯಾಣ ಗಟ್ಟಿಮೇಳದ ಪರಿಣಯ ರತಿ ಪತಿ ದಾಂಪತ್ಯ ಸ್ಫೂರ್ತಿ ಮಂದ ಪ್ರಕಾಶ ಅರುಂಧತಿ ದೇಹವೆರಡು ಸೀತಾರಾಮ ದಾರಿಯೊಂದು ಅರ್ಧನಾರೀಶ್ವರ ಅನುರಾಗದ ಮಧು ಚಂದ್ರ ಮಿಥುನ ಹಕ್ಕಿಗಳ ಸಮ್ಮಿಲನ ಹಸಿರುಮಲೆಗೆ ಗರ್ಭಧಾರಣ ಶುಭ ಕಾಮನೆಯ ಹೂರಣ ಸರಸ ವಿರಸಗಳ ಆಲಿಂಗನ ಸಹಬಾಳ್ವೆಯಲಿ ಸಂತಾನ ರಂಗಿನ ರಂಗೋಲಿ ಅಂಗಳ ಮನ […]

ಕಾವ್ಯಯಾನ

ಬದುಕು ಎನ್. ಆರ್. ರೂಪಶ್ರೀ ಬೀಸುವ ಗಾಳಿ ಹಾರುವ ಮುಂಗುರುಳು ಮತ್ತೆ ನೀಡಬಹುದು ಹೊಸ ಸಂತೋಷ. ಬಾನ ಚುಕ್ಕಿ ಹೊಳೆಯುವ ಚಂದಿರ ಮತ್ತೆ ಬರಬಹುದು ಆನಂದ. ಹಕ್ಕಿಯ ಗಾನ ಮರಗಳ ಕಲರವ ಮತ್ತೆ ತರಬಹುದು ಚೇತನ. ತಿಳಿ ನೀರ ಅಲೆಗಳಲ್ಲಿ ತೇಲುತ್ತಾ ಸಾಗುವ ಗುಳ್ಳೆಗಳ ನಡುವೆ ಮತ್ತೊಮ್ಮೆ ಚಿಮ್ಮಬಹುದು ಚಿಲುಮೆ. ಇಂತಹ ಎಲ್ಲಾ ಆಶಾ ಭಾವನೆಗಳ ನಡುವೆ ಜೀವಿಸಲೇಬೇಕಾದ ಅನಿವಾರ್ಯತೆ. ಇದ್ಯಾವುದೂ ಆಗದಿದ್ದರೂ ಆಗುತ್ತದೆ ಎನ್ನುವ ನಂಬಿಕೆ ಬಹುಶ: ಇದೇ ಇರಬಹುದು ಬದುಕು. ********

ಕಾವ್ಯಯಾನ

ಬದುಕು ಬೀಸುವ ಗಾಳಿ ಹಾರುವ ಮುಂಗುರುಳು ಮತ್ತೆ ನೀಡಬಹುದು ಹೊಸ ಸಂತೋಷ. ಬಾನ ಚುಕ್ಕಿ ಹೊಳೆಯುವ ಚಂದಿರ ಮತ್ತೆ ಬರಬಹುದು ಆನಂದ. ಹಕ್ಕಿಯ ಗಾನ ಮರಗಳ ಕಲರವ ಮತ್ತೆ ತರಬಹುದು ಚೇತನ. ತಿಳಿ ನೀರ ಅಲೆಗಳಲ್ಲಿ ತೇಲುತ್ತಾ ಸಾಗುವ ಗುಳ್ಳೆಗಳ ನಡುವೆ ಮತ್ತೊಮ್ಮೆ ಚಿಮ್ಮಬಹುದು ಚಿಲುಮೆ. ಇಂತಹ ಎಲ್ಲಾ ಆಶಾ ಭಾವನೆಗಳ ನಡುವೆ ಜೀವಿಸಲೇಬೇಕಾದ ಅನಿವಾರ್ಯತೆ. ಇದ್ಯಾವುದೂ ಆಗದಿದ್ದರೂ ಆಗುತ್ತದೆ ಎನ್ನುವ ನಂಬಿಕೆ ಬಹುಶ: ಇದೇ ಇರಬಹುದು ಬದುಕು. ******

ಕಾವ್ಯಯಾನ

ಕೊನೆಯ ಸತ್ಯ 6 ಶಾಲಿನಿ ಆರ್. ಮುಳ್ಳು ಗಿಡಗಂಟಿಗಳ ಜಾಡು ಮುಗಿಯದ ದಾರಿಯಿದು ಬರಿ ಕಾಡು, ಪಾಚಿ ಗಟ್ಟಿದ ನೆಲಕೆ ಆರದ ನೋವ ಜಾರುತಿರುವ ಸಂಬಂಧಗಳ  ಅವಯವ, ಅಂತರಂಗಕಿದು ಆಳದ ಅರಿವಿಲ್ಲ ಬರಿ ಹೂಳು ತುಂಬಿದೆ ಆಳದೆಲ್ಲೆಲ್ಲ, ಬೆಚ್ಚಗಿನ ನೆನಪಿಗು ಚಳಿಯ ಜಾಡು ಸದ್ದಿಲದೆ ಮುರಿಯುತಿದೆ ಮನದ ಎಲುಬಿನ ಗೂಡು, ತರ ತರದ ಪ್ರೀತಿಗು ಮುಖವಾಡದ  ತುತ್ತು, ಬಿಂಕದಲಿ ಬೀಗುತಿದೆ ಭ್ರಮೆ’ ನನ್ನ ಸೊತ್ತು, ಹೂಳ ತೆಗೆಯದ ಹೊರತು ಕೇಳ, ತಿಳಿಯದು ಅಂತರಾಳದ ಮೇಳ, ಅರಿಯಲಾರದ ನಿಜತನ […]

Back To Top