Category: ಕಾವ್ಯಯಾನ

ಕಾವ್ಯಯಾನ

ಮಳೆ ಹನಿಗಳು

ಮಳೆ ಹನಿಗಳು ವಿಶ್ವನಾಥ ಎನ್. ನೇರಳಕಟ್ಟೆ ಮಳೆಯಿರದ ಇರುಳಿನಲಿಗಡಿಯಾರದ ಮುಳ್ಳಿಗೂವಿರಹ ವೇದನೆ* ನನಗೆ ಗೊತ್ತಿದೆಮಳೆ ಪ್ರಿಯತಮೆಯಿದ್ದಂತೆಪ್ರೀತಿಸುವವರನ್ನು ಹೆಚ್ಚು ಆಟವಾಡಿಸುತ್ತದೆ* ಅಬ್ಬ! ಮಳೆ ಬಂತುಇನ್ನು ನನ್ನ ಕಣ್ಣೀರುಯಾರಿಗೂ ತಿಳಿಯುವುದಿಲ್ಲ* ದೇವರೂ ಅಳುತ್ತಾನೆ ನನ್ನಂತೆಎಂದು ತಿಳಿದು ಸಮಾಧಾನವಾಯಿತುಮಳೆ ಬಂದಾಗ* ಮಳೆಯ ಜೊತೆಗೆ ಬಂದಅವಳ ಕನವರಿಕೆ, ಕನಸುಗಳಿಗೆತೆರಿಗೆ ಕಟ್ಟಬೇಕಾಗಿಲ್ಲ* ಮಳೆ ಬಂದಾಗಕೊಡೆ ಮರೆತುಬಂದವನು‘ನೆನೆದ’* ಕಲ್ಲಿನಂಥ ಕಲ್ಲೂಕರಗಿತು‘ನೆನೆದಾಗ’* ಪ್ರಕೃತಿ ಸುರಿಸಿತು ಕಣ್ಣೀರುಮನುಷ್ಯತೊಯ್ದುಹೋಗಿದ್ದಾನೆ* ಸುರಿಯುತ್ತಿದ್ದ ಮಳೆನಿಂತಾಗಮನಸ್ಸೆಲ್ಲ ಖಾಲಿ ಖಾಲಿ*******************************

ಕ್ಲಿಯೋ ಪಾತ್ರ..

ಸೌಂದರ್ಯವೆನ್ನುವರೆ ಕಾಮತುಂಬಿದ ಚರ್ಯೆ
ಸತ್ಯ ಶಿವ ಸುಂದರತೆ ಸರ್ವರ್ತುಕ ಮಾತು |
ಶೀಲವಿಲ್ಲದ ಚೆಲುವು ಜೀವವಿಲ್ಲದ ದೇಹ
ಇದ್ದು ಇಲ್ಲದ ತರವೆ ಸರ್ವತ್ರ ನಾತು ||

ಮಳೆ ಪದ್ಯಗಳು ಮಳೆಯ ಸೊಬಗು ವ್ಯೆಷ್ಣವಿ ವಿನಯ್ ಅಲ್ಲಲ್ಲಿಹಚ್ಚ ಹಸಿರಿನ ಎಲೆ ಮೇಲೆಮಳೆಯ ಮುತ್ತುಬಿದ್ದಿತುಮಳೆಯ ಮುತ್ತುಸ್ವಾತಿ ಮುತ್ತಾಗಿತ್ತು..! ಜಿಟಿಜಿಟಿ ಜಿನುಗುವ ಮುತ್ತಿನಮಣಿಯುಕಡಲಂತೆ ಮೋಡಕೆ ಕರಗುವುದೇ ಸೊಗಸುಸುಂದರ ಮಳೆ ಬರುವ ಸಮಯದಲ್ಲಿತುಂತುರು ಹನಿಗಳ ಸಪ್ಪಳದಲ್ಲಿಮೆಲ್ಲನೆ ಸವಿಗಾನವೊಂದು ಕೇಳುತ್ತಿದ್ದರೆಮುಳುಗಿತು ಆನಂದದಲ್ಲಿನನ್ನ ಮನಸ್ಸು…!! **********

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಒಡನಿದ್ದವಳೊಂದು ದಿನ……..

ಕವಿತೆ ಒಡನಿದ್ದವಳೊಂದು ದಿನ…….. ಬೆಂಶ್ರೀ ರವೀಂದ್ರ ಒಡನಿದ್ದವಳೊಂದು ದಿನ …………..………………………………ಕರಗಿಹೋದೆ ಕಾಲದಲಿರುವೆಯೆಂದುಕಾದೆ ಚೈತ್ರದ ಯುಗಾದಿಗಾಗಿ ರವಿರಶ್ಮಿಯಲಿರುವೆಯೆಂದುಕಾದೆ ವೈಶಾಖದ ಬಿಸಿಲಿಗಾಗಿ ಬುವಿಯಲಿರುವೆಯೆಂದುಕಾದೆ ಜೇಷ್ಠದ ಕಾರಹುಣ್ಣಿಮೆಗಾಗಿ ಗಾಳಿಯಲಿರುವೆಯೆಂದುಕಾದೆ ಆಷಾಢದ ಸುಳಿಗಾಗಿ ಮೋಡದಲಿರುವೆಯೆಂದುಕಾದೆ ಶ್ರಾವಣ ಮಳೆಗಾಗಿ ಬುದ್ದಿಶಕ್ತಿಲಿರುವೆಯೆಂದುಕಾದೆ ಭಾದ್ರಪದದ ಚೌತಿಗಾಗಿ ಗೊಂಬೆಯಲಿರುವೆಯೆಂದುಕಾದೆ ಆಶ್ವಯುಜದ ದಸರೆಗಾಗಿ ದೀಪದಲಿರುವೆಯೆಂದುಕಾದೆ ಕಾರ್ತಿಕದ ದೀಪಾವಳಿಗಾಗಿ ಕೃಷ್ಣನುಡಿಯಲಿರುವೆಯೆಂದುಕಾದೆ ಮಾರ್ಗಶಿರದ ಗೀತಾಹಬ್ಬಕಾಗಿ ಸುಗ್ಗಿಯಲಿರುವೆಯೆಂದುಕಾದೆ ಪುಷ್ಯದ ಸಂಕ್ರಾಂತಿಗಾಗಿ ವಿರಾಗದಲಿರುವೆಯೆಂದುಕಾದೆ ಮಾಘದ ಶಿವರಾತ್ರಿಗಾಗಿ ಬಣ್ಣಗಳಲಿರುವೆಯೆಂದುಕಾದೆ ಫಾಲ್ಗುಣದ ಹೋಳಿಗಾಗಿ ವಸಂತನ ರಮ್ಯತೆಯಲಿಗ್ರೀಷ್ಮನ ಬಿಸಿ ಗಾಳಿಯಲಿವರ್ಷನ ಮರುಹುಟ್ಟಿನಲಿಶರದನ ಸಡಗರದಲಿಹೇಮಂತನ ಹಿಮದಲಿಶಿಶಿರನ ವಿರಕ್ತಿ ರಕ್ತಿಯಲಿಹುಡುಕಿದೆ ಹುಡುಗಿಈಗಅರಿವಾಯ್ತು ನೀ […]

Back To Top