ಗೆಳೆಯ

ಕವಿತೆ

ಗೆಳೆಯ

ಪ್ರೊ ವಿಜಯಲಕ್ಷ್ಮಿ ಪುಟ್ಟಿ

pink flowers in tilt shift lens

ಗೆಳೆಯ
ನಿನ್ನ ಮನದ
ಮೂಲೆಯಲಿ
ನನಗೊಂದು
ಪುಟ್ಟ ಗುಡಿಸಲು ಇರಲಿ
ಅಲ್ಲಿ
ನನ್ನ ಭಾವ ಕನಸುಗಳ
ಬಿಚ್ಚಬೇಕು
ನನ್ನಲಹರಿ ನಾದಕೆ
ಕವನ ಕಟ್ಟಬೇಕು
ಮುಕ್ತ ಅಭಿವ್ಯಕ್ತಿಗೆ
ಹೃದಯ ತೆರೆದು
ಮಾತನಾಡಲು
ಸಿದ್ಧಗೊಳ್ಳಬೇಕು
ಅಪ್ಪನಿಲ್ಲದ ಬದುಕು
ನೆಲೆಗೊಳ್ಳಲಿ ನಿನ್ನಲಿ
ನನ್ನ ಪ್ರೇಮ ಸ್ನೇಹ
ಕರುಣೆ ವಾತ್ಸಲ್ಯ
ದಣಿದಿರುವ ದೇಹಕೆ
ಬಳಲಿ ಬೆಂಡಾದ ಗೂಡು
ಪ್ರೀತಿ ಚಿಲುಮೆ ನೀಡು
ನಿನ್ನ ಸಾಮಿಪ್ಯ
ನನಗೆ ಶ್ರೀರಕ್ಷೆಗೆ
ನಿನ್ನ ಮಧುರ
ಅಮರ ಪ್ರೇಮ
ಇಗೋ ನಿನಗೆ ನಮನ
ಬದುಕಿಸು ನನ್ನ
ನೂರು ಭಾವಗಳ ಜೀವನ
ಗೆಳೆಯ
ನಿನ್ನ ಎದೆಯ
ಮೂಲೆಯಲಿ
ಬದುಕಲು
ಅನುವು ಮಾಡಿಕೊಡು
ನಿನ್ನೊಂದಿಗಿರುವೆ
ಬೆಚ್ಚಗೆ ನೋವ ಮರೆತು

*********************************

Leave a Reply