ಕವಿತೆ
ಕಾಯುತಿದೆ ಗಗನ
ಪ್ರೊ. ರಾಜನಂದಾ ಘಾರ್ಗಿ
ಸತ್ತ ಸಂಬಂದಗಳ
ಹೊರೆ ಇಳಿಸಿಕೊಳ್ಳುತ್ತ
ಹಳಸಿದ ಸಿದ್ಧಾಂತಗಳ ಅಳಿಸಿ
ಹೊಸ ಅಧ್ಯಾಯದಲಿ
ನಿಧಾನವಾಗಿ ಬಿಚ್ಚಿ ಕೊಳ್ಳುತ್ತಿದ್ದೆನೆ
ಒಂದೊಂದೇ ಪದರು
ಕಳಚಿಕೊಳ್ಳುತ್ತಿದ್ದೆನೆ
ಭಾವಗಳು ಅರಳಿದಂತೆ
ಪರಿಮಳ ಸೂಸಿದಂತೆ
ಪ್ರಜ್ಞೆ ಪಸರಿಸಿದೆ
ಹೊಸ ದಿಗಂತ ಗೊಚರಿಸುತ್ತಿದೆ
ಹೊಸ ದಾರಿ ತೊರುತಿದೆ
ತೂಕಡಿಸುತ್ತಿದ್ದ ಸಂವೇದನೆಗಳ
ಸೂಕ್ಷ್ಮತೆಯ ನವಿರು ಕಳೆದು
ಗಟ್ಟಿಯಾಗಿ ನೆಲೆಗೊಳ್ಳುತ್ತಿವೆ
ಕರಗಿ ಹೊಗುತ್ತಿದ್ದ ಅಸ್ಮಿತೆಯ
ಹಿಡಿದು ನಿಲ್ಲಿಸುತ್ತಿವೆ
ರೆಕ್ಕೆಗಳು ಬಿಚ್ಚಿ ಕೊಳ್ಳುತಿವೆ
ವಿಶಾಲ ಗಗನ ಕಾಯುತಿದೆ
ಕೈ ಬೀಸಿ ಕರೆಯುತಿದೆ
********************************
ಸೊಗಸಾಗಿದೆ ಕವಿತೆ
Thanks