ಕವಿತೆ
ಎಷ್ಟು ಬರೆದರೇನು?
ಸುರಭಿ ಲತಾ
ಏನು ಬರೆದರೇನು
ಎದೆಯ ನೋವು ಇಂಗದೆ
ಏನು ಬರೆದರೇನು
ಎದೆಯ ಕಾವು ಆರದೆ
ಒಳಿತು ಕಾಲವದು ಬರದೆ
ಕೊರಗಿದೆ ಕನವರಿಕೆಯಲಿ
ಬರವಸೆಗಳವು ಕಾಣದೆ
ಮೂಡಿ ಬಂತು ಕವಿತೆಯಲಿ
ಸುಟ್ಟು ಹೋದ ನೂಲ
ಮತ್ತೆ ಎಣಿಯ ಲಾಗದು
ಸತ್ತು ಹೋದ ಕಾಲ
ಮತ್ತೆಂದು ಬರಲಾರದು
ನೊಂದ ಬದುಕಿದು
ಬದಲುವ ಲಕ್ಷಣ ಕಾಣದು
ನಡೆವ ದಾರಿಯಿದು
ಸುಮ್ಮನಂತೂ ಕೂರದು
ಎಷ್ಟು ಬರೆದರೇನು
ಮುಗಿಯದು ಈ ಪದಗಳು
ಇಷ್ಟ ವಾದರೆ ತಾನೆ ಏನು
ಕಷ್ಟವು ಬದುಕಿನ ದಿನಗಳು
************************