ಬಂಡವಾಳವು ಭಂಡತನದಲ್ಲಿಯೇ ಮೀಯುತಿದೆ ಹಣವು ಮಾತಾಡದೆ ಗುಣವು ಮಾತಾಡಬೇಕು

ಕಸುವು

ಕೆಂಡದಲಿ ಪುಟವಿಟ್ಟ ಚಿನ್ನವು ಜಯ ಜಯ ಕಾರ್ಮಿಕ ಕಸುವು

ನಿಷ್ಠೆ,ನಂಬಿಕೆ, ಪ್ರೀತಿ,ಮಮತೆಗಳೆಲ್ಲ ಕಪ್ಪ ಕೇಳುತ್ತಿವೆ ದುಡಿದ ಕೈ ಈಗ ಹತಾಶೆಯ ಗಾಯದಲಿ ದಣಿದಿದೆ

ಆ ನಿಸ್ತೇಜ ಕಣ್ಣುಗಳಲ್ಲಿ ಬಿರಿದ ನೆಲ, ಕಮರಿದ ಫಸಲು ನಿನ್ನ ಹೆಣದ ಮೇಲೆ ಚದುರಂಗ ಆಡುತ್ತಾರೆ ಎಲ್ಲರೂ

ಕೋಟಿ ವಿದ್ಯೆಯ ಬಿಟ್ಟು ಮೇಟಿ ಹಿಡಿಯಲು ಬಂದ ಮಗನ ಭವಿಷ್ಯ ಗಾಳಿಗಿಟ್ಟ ಹಣತೆ ಮನೆ ಮಂದಿಯಲ್ಲ ಬೆವರು ಬಸಿದರೂ ಹಸಿರಾಗದ…

ರೈತಗಜಲ್ ಹಸಿರುಸಿರಿನ ಸಿರಿ ನೀನು ಧರಣಿ ಮೇಲೆ ದಯೆಬಾರದೆ ಮಳೆರಾಯಾಹರಸುವ ಹೆಸರೇ ನೀರು ಸುರಿಯುತ್ತ ಇಳೆಯ ಬೆರೆಯಬಾರದೆ ಮಳೆರಾಯಾ ನೇಗಿಲು…

ಉತ್ತರಿಸಲು ನಿಂತರೆ ನನ್ನ ಕೆಲಸವನ್ನು ದುಡಿಮೆ ಅಥವಾ ಕೆಲಸವೆಂದು ಪರಿಗಣಿಸುವಿರೆ?

ಅಸ್ಪೃಶ್ಯರಾಗಿದ್ದೇವೆ!

ನಾವೆಲ್ಲರೂ ಈಗ ಸಮಾನರಾಗಿದ್ದೇವೆ ನಾಲ್ಕು ಗೋಡೆಗಳ ನಡುವೆ ಬಂಧಿಗಳಾಗಿದ್ದೇವೆ ನಮ್ಮ ತಪ್ಪಿಲ್ಲದೆಯೂ, ಬೇರೊಬ್ಬರ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುವ ಬಲಿಪಶುಗಳಾಗಿದ್ದೇವೆ

ಕೆಸರುಂಡ ಕೈಗಳಿವು ಮೊಸರಿನ ಸಂಗವ ತೊರೆದಿವೆ ನಿಟ್ಟುಸಿರ ತಾಪ ಕೊನರುತ್ತಿದೆ ಬಿರುಕು ಬಿಟ್ಟ ಪಾದದಲಿ

ಬೆಳೆದ ಬೆಳೆಗೆ ಈಗಲಾದರೂ ಬೆಲೆ ಬರುವುದೆಂದು ಕಾದಿದ್ದೇನೆ ಕಷ್ಟ ಕೋಟಲೆ ಆಗಲಾದರೂ ಕಳೆವುದೆಂದು ನಿರೀಕ್ಷಿಸಿದ್ದೇನೆ