ಕೊಡವಿ ( ಕನ್ಯೆ )
ಕವಿತೆ ಕೊಡವಿ ( ಕನ್ಯೆ ) ಭಾಮಿನಿ ಷಟ್ಪದಿ ಅಭಿಜ್ಞಾ ಪಿ ಎಮ್ ಗೌಡ ಕೊಡವಿ ಕಂಗಳ ಕಾಂತಿ ಹೆಚ್ಟುತಬಡವಿ ಹೆಣ್ಣಲಿ ಕಾಶ ತುಂಬಿದೆನಡುವೆ ನೊಸಲದ ನಲಿವ ಹೆರಳದು ನಿತ್ಯ ಜೀಕುತಿದೆಕೊಡುಗೆ ನೀಡುವ ಮನದ ಬಿಂಬದಿಗಡನೆ ಹೊಳೆಯುವ ಹೃದಯ ಸಾಕ್ಷಿಯುಜಡಿಪ ಕೂಜನ ಕಂಪಿನಲೆಯಲಿ ಕುಣಿದು ಜಿಗಿಯುತಿದೆ|| ಮೊಗದ ಭಾಷೆಯು ಕೂಗಿ ಹೇಳಿದೆನಗುವ ಮನಸಿನ ನೂರು ಭಾವವಮಗುವ ಮುಗ್ದತೆ ಮೀರಿ ನಿಂತಿದ ಭವ್ಯ ಕೌಮಾರಿಜಗದ ಚೆಲುವದು ತುಂಬಿ ಕೊಂಡಿದೆಗಗನ ಚುಂಬಿತ ವೃಕ್ಷ ರಾಶಿಯುಸುಗುಣ ಸದ್ಗುಣಿ ನಿತ್ಯ ಶೋಭಿತ ಚೆಲ್ವಿ […]
ಗಜಲ್
ಗಜಲ್ ಸಿದ್ಧರಾಮ ಕೂಡ್ಲಿಗಿ ಪರಿಶ್ರಮದಿಂದ ನೆಲಕೆ ಉದುರಿದ ಬೆವರ ಮುತ್ತುಗಳನ್ನು ಮತ್ತೆ ಪಡೆಯಲಾಗುವುದಿಲ್ಲ ಕಾಲಗರ್ಭದಲ್ಲಿ ಕರಗಿಹೋಗುವ ಬದುಕಿನ ಚಿತ್ರಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ನಗರಗಳ ತುಂಬಾ ಇರುಳಾದರೆ ಸಾಕು ಬಗೆ ಬಗೆಯ ಭಾವಗಳ ವೇಷಗಳ ಕುಣಿತ ಮಣಿತ ಬೆಳಕಿನಲಿ ವಿನಾಕಾರಣ ಸೋರಿಹೋಗುವ ಕ್ಷಣಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ಬೀದಿಯ ಬದಿಯಲ್ಲಿ ಖಾಲಿ ಪಾತ್ರೆಯಂಥ ಹೊಟ್ಟೆ ಖಾಲಿ ತಟ್ಟೆಯಂಥ ಕಣ್ಣುಗಳು ಸಿರಿತನದ ಸೊಕ್ಕಿನಲಿ ಚೆಲ್ಲಿದ ಅನ್ನದ ಅಗುಳುಗಳನ್ನು ಮತ್ತೆ ಪಡೆಯಲಾಗುವುದಿಲ್ಲ – ಮಸಣದಂತಹ ಖಾಲಿ ಎದೆಯಲಿ ಮಿಡಿತವೊಂದನ್ನು ಬಿಟ್ಟು […]
ಹಾಯ್ಕುಗಳು
ಕವಿತೆ ಹಾಯ್ಕುಗಳು ಭಾರತಿ ರವೀಂದ್ರ 1) ಲಾಸ್ಯ ಬುವಿ ಮೊಗದಿಚಿಗುರೊಡೆದ ಲಾಸ್ಯಮೇಘ ಮಿಂಚಲು. 2) ಸಾಕ್ಷಿ ಕಣ್ಣಂಚು ಹನಿ :ಬಿಕ್ಕಲು, ಬಿಟ್ಟು ಹೋದನೆನಪು ಸಾಕ್ಷಿ. 3) ಸತ್ಯ ಕತ್ತಲು ಭ್ರಮೆಸುಳ್ಳಿನ ಕನ್ನಡಿಗೆಬೆಳಕು ಸತ್ಯ. 4) ಮಲ್ಲಿಗೆ ಮಾತು ಮಲ್ಲಿಗೆಸುಗಂಧದ ಸೊಗಸುನುಡಿ ಸಂಗೀತ 5) ಸೋನೆ ನೆನಪು ಸೋನೆ:ಕಣ್ಣು ಹಸಿ ಯಾಗಿಸಿಹೃದಯ ಒದ್ದೆ. *************************
ಯಾರು ಬಂದರು
ಕವಿತೆ ಯಾರು ಬಂದರು ಡಾಲಿ ವಿಜಯ ಕುಮಾರ್.ಕೆ.ವಿ. ಯಾರು ಬಂದರು ಸಖಿಯೇಎಲ್ಲಿ ಹೋದರು…. ಬೆಳ್ಳಿ ಬೆಳಕು ಬರುವ ಮುನ್ನಮಲ್ಲೆ ಮುಡಿಸ ಬಂದರು.ರಾಶಿ ಹಿಮದ ತಂಪು ಸುರಿದುಮುತ್ತ ಎರಚಿ ಹೋದರು. ಪಚ್ಚೆ ಹಸಿರ ಸೀರೆಯುಡಿಸಿಬೆಟ್ಟಬಯಲೆ ಕುಚ್ಚವೂಶರಧಿಯಗಲ ಸೆರಗ ಹೊದಿಸಿಮೈಯಮುಚ್ಚಿ ಹೋದರು. ಅಡವಿಯೊಳಗೆ ತೊಟ್ಟಿಲಿಟ್ಟುಒಲವ ತೂಗ ಬಂದರು.ನಭದ ನೂಲು ಇಳೆಗೆ ಇಳಿಸಿನಲ್ಲೆ ಮುಟ್ಟಿ ಹೋದರು. ಅಲ್ಲಿ ಯಾರೋ ಕಂಡ ಹಾಗೆಕರಗಿ ನದಿಯ ತಂದರು.ಇಲ್ಲಿ ಯಾರೋ ಕೂಗಿದಾಗೆಜಲಧಿಯೊಳಗೆ ಹೋದರು. ಬಿದಿರಕೊಳಲ ಶ್ಯಾಮನೇನೆರಾಧೆ ನಿದಿರೆ ಕದ್ದವ.ಗರಿಯ ಮುಡಿದ ಗೊಲ್ಲನೇನೆನಿನ್ನ ಕಂಡು ಹೋದವ… ***************************************************
ಅಭಿವ್ಯಕ್ತ
ಕವಿತೆ ಅಭಿವ್ಯಕ್ತ ವೀಣಾ ರಮೇಶ್ ನೀನು ಅನುಭವನಾನು ಅನುಭಾವವಾಗಿನೀನು ವ್ಯಕ್ತ,ನಾನು ಅಭಿವ್ಯಕ್ತವಾಗಿನನ್ನ ಏಕಾಂತದಲ್ಲೂನೀ ಕಾಂತವಾಗಿ ಮಾತು ಬೆತ್ತಲೆಯಾಗಿಮೌನ ಕತ್ತಲೆಯ ಪ್ರತಿಶೂನ್ಯದಲ್ಲೂ ನನ್ನಾವರಿಸಿಮೌನ ಬಗೆದುದಿಗಂತ ದೆತ್ತರಕ್ಕೂಸವಿ ಮಾತಿನ ಮೆಟ್ಟಿಲಾಗಿರುವೆ ಬಿರುಬಿಸಿಲoತೆ ವಿರಹದನಿನ್ನುಸಿರು ಸುಟ್ಟರೂಮಳೆಯಾಗಿ ನಾನು ಇನ್ನಷ್ಟೂ ಸುರಿದುಒಂದಿಷ್ಟು ನನ್ನುಸಿರು ಸೇರಿಸಿ ಕವಿದ ಮೋಡ ದೊಳಗೆ..ನನ್ನ ಮುಚ್ಚಿದರೂಹಾಲುನಗುವಿಗೂ ಬಿಳಿಮುಗಿಲು ಮೆಚ್ಚಿದರೂ,ತಿಂಗಳ ಬೆಳಕುವಿರಮಿಸದಂತೆ ಚಂದ್ರಮನಂತೆ ನಿನ್ನ ಇಡಿಯಾಗಿತುಂಬಿ ಕೊಳ್ಳುವೆ ನಿನ್ನೊಲುಮೆಗೆ ಆಲಾಪವಾಗಿಅಧೀತ ಪ್ರೀತಿಗೆ ಅನುರಾಗವಾಗಿನಾ ರಾಗವಾಗಿಅತೀತವಾಗಿರುವೆ *********************************
ಗಂಗಾವತಿ
ಕವಿತೆ ಗಂಗಾವತಿ ಜ್ಯೋತಿ ಬಳ್ಳಾರಿ ಗಂಗಾವತಿ ಎಂದರೆ,ಬರೀ ಊರಲ್ಲ,ದೇಶಕ್ಕೆ ಅನ್ನ ನೀಡುವ ನಾಡು,ನಮ್ಮ ಭತ್ತದ ನಾಡು. ಗಂಗಾವತಿ ಎಂದರೆ,ಬರೀ ಇತಿಹಾಸವಲ್ಲ,ರಾಮಾಯಣಕ್ಕೆ ಸಾಕ್ಷಿಯಾದ,ಆಂಜಿನೇಯ ಜನಿಸಿದ ನಾಡು.ಗತ ಇತಿಹಾಸ ಸಾರುವಮೊರೆರ ತಟ್ಟೆಗಳ ಬೀಡು. ಗಂಗಾವತಿ ಬರಿ ಊರಲ್ಲಪರನಾರಿ ಸಹೋದರ,ಗಂಡುಗಲಿ ಕುಮಾರರಾಮ,ಗಂಡು ಮೆಟ್ಟಿದ ನಾಡು,ಆಧ್ಯಾತ್ಮದ ಗುರು ಹೆರೂರುವಿರುಪನಗೌಡರ ಹುಟ್ಟಿದ ಬೀಡು. ಗಂಗಾವತಿ ಎಂದರೆ,ಬರೀ ಹೆಸರಲ್ಲ,ಜನರ ಉಸಿರಲ್ಲೂ,ಆರಾಧ್ಯದೈವ ಚನ್ನಬಸವ ತಾತನ ಪೂಜಿಸುವಬೀಡು.ತಾಯಿ ಗ್ರಾಮದೇವತೆ ದುರ್ಗಾದೇವಿ ಆಶೀರ್ವದಿಸಿದ ಊರು. ಗಂಗಾವತಿ ಎಂದರೆ,ಬರೀ ಪ್ರಾಂತ್ಯವಲ್ಲ,ಕವಿ, ಇತಿಹಾಸಕಾರರ ನೆಲೆಬೀಡು,ಹಾಸ್ಯ ಚಕ್ರವರ್ತಿ ಪ್ರಾಣೇಶ್,ಇತಿಹಾಸ ತಜ್ಞ ಕೋಲ್ಕಾರರ ತವರೂರು. ಗಂಗಾವತಿ […]
ತಮಟೆ ಬೇಕಾಗಿದೆ
ಕವಿತೆ ತಮಟೆ ಬೇಕಾಗಿದೆ ಎನ್.ರವಿಕುಮಾರ್ ಟೆಲೆಕ್ಸ್ ನನ್ನ ತಮಟೆ ಹರಿದು ಹೋಗಿದೆ ಎದೆಯಗಲ ಚರ್ಮ ಬೇಕಾಗಿದೆಸತ್ತ ದನದ್ದು…. ತಮಟೆ ಸದ್ದಿನೊಳಗೆದುಃಖ ದೂರುಗಳ ಜಗಕೆಆಡಿ ಹಗುರಗೊಳ್ಳಬೇಕಿದೆ ಜುಂಗು ಕಿತ್ತು ರಂಪಿಗೆ ಆಡಿಸಿಅಡಗಲ್ಲಿನಲ್ಲಿತಟ್ಟಿ ಹದ ಮಾಡಿಹದಿನಾರು ಎಳೆ ಬಿಗಿದುಎಳೆ ಬಿಸಿಲಿಗಿಡಿದುಅಲುಗು ಅಲುಗಿಗೂ…ಕಂಟ ಕಾವು ರಣಬಾಜಿ,ಹುಲಿ ಹೊಡೆತಎರಡೇಟು…ಗಸ್ತಿನೋವು ನೀಗಿಸಿಕೊಳ್ಳಬೇಕಿದೆಶತಮಾನಗಳದ್ದುಈಗೀಗ ವರ್ತಮಾನದ್ದೂ…. ಸತ್ತದನವೊಂದಿದ್ದರೆಕೊಟ್ಟು ಬಿಡಿನನ್ನ ತಮಟೆ ಹರಿದು ಹೋಗಿದೆ.// ಕಾಡುಕತ್ತಲೆಬಿಳಿಯ ತೊಗಲ ದೊರೆ ದೇಶ ತೊಲಗಿದಕರಿಯ ತೊಗಲ ಬಿಳಿಯ ಬಟ್ಟೆದೇಶ ಜನರ ಬಗೆ ಬಗೆದುಸುಲಿತಿದೆ ಹಾಡಹಗಲೆಸುಳ್ಳು ಮಾತು ಕಳ್ಳನಡೆಪೊಳ್ಳು ಧರ್ಮದ ಇಷವಯ್ಯಸತ್ತಂತಿಹರನು ಬಡಿದೆಚ್ಚರಿಸಲುತಮಟೆಯೊಂದು […]
ಗುಪ್ತಗಾಮಿನಿ
ಕವಿತೆ ಗುಪ್ತಗಾಮಿನಿ ಸಂಗಮೇಶ್ವರ ಶಿ.ಕುಲಕರ್ಣಿ ನಿನಗೆ ನಾನ್ಯಾರು?ಕೇಳದಿರು ಹೇಳದಿರುಅಲ್ಲಿ ಕಾಡುವ ಒಗಟುಎದುರಾಗದಿರಲಿನಿನಗೆ ನನಗೆ ಇಬ್ಬರಿಗೂ…. ನನಗೆ ನೀನ್ಯಾರು?ಹೇಳುವೆ ಸಾರಿ ಸಾರಿಆತ್ಮದಲಿ ಆರೂಢವಾಗಿರುವಅಗೋಚರ ಆಕೃತಿ!ಪ್ರತಿಕ್ಷಣದ ಸ್ಮೃತಿ!! ಅಲ್ಲಿ ನೀನು ಇಲ್ಲಿ ನಾನುಅನ್ನುವ ಅಂತರದ ಮಾತೆಲ್ಲಿಆಣೆ ಮಾಡುವೆ ಬೇಕಾದರೆ;ಅಂತರಂಗ ಆಕ್ರಮಿಸಿದಮೊದಲ ದೊರೆಸಾನಿ ನೀನಿಲ್ಲಿ! ಉಬ್ಬುತಗ್ಗಿನ ಚರ್ಮದ-ಹೊದಿಕೆಯ ಮೋಹದಲ್ಲಿಮರೆತುಹೋಗುವ ಪಿಂಡವಲ್ಲ;ಎಲ್ಲ ದಾಟಿ ಅನಂತ ಹುಡುಕುವಅದಮ್ಯ ಚೇತನ! ನನಗೊಂದು ನಿನಗೊಂದುಬೇರೆಯದೇ ಕೋಳ,ಕಳಚಿ ಕೈಬಿಡುವ ಕೈಕಟ್ಟು ಅಲ್ಲ ಬಿಡು.ಇದರ ಮಧ್ಯೆ ನಮ್ಮದುಸಾವಿನಾಚೆಗೂ ಸಾಗುವ ಬಂಧ! ಈ ಜೀವಕ್ಕೆ ಅರ್ಧಜೀವ ನೀನು! ****************************
ಮಾಗಿಯ ಪದ್ಯಗಳು
ಕವಿತೆ ಮಾಗಿಯ ಪದ್ಯಗಳು ಪ್ರೇಮಲೀಲಾ ಕಲ್ಕೆರೆ ಕೌದಿ ಕವುಚಿಕಂಬಳಿ ಹುಳುವಾದರೂಅಡಗಲೊಲ್ಲದ ಚಳಿ ಬೆಳಗಾಗ ಬರುವಚುರುಕು ಬಿಸಿಲಿನ ನೆನಪೇಬಿಸಿ ಹುಟ್ಟಿಸಬಲ್ಲದುಒಳಗೆ ಉರಿಮುಖದ ಸೂರ್ಯ, ನಿನ್ನ ಆಗಮನಅದೆಷ್ಟು ಬೆಚ್ಚಗೆಜಡ ಮಾಗಿಗೆ !! 2 ತುಂಟ ಸೂರ್ಯ,ಎಲ್ಲಿ ಅಡಗಿದ್ದೆ ನೀನು ?ಇಷ್ಟೊಂದು ತಡವೇಕೆಮನೆಗೆ ಬರಲು ?? ಗುಟ್ಟೇನಿದೆ ,ಆ ನಿಶೆಯ ಜೊತೆನಿನ್ನ ಚೆಲ್ಲಾಟಜಗಕೇ ಗೊತ್ತು! ತರವಲ್ಲ ಬಿಡು,ತರವಲ್ಲ ಬಿಡು, ಆ ಕಪ್ಪುನಿಶೆಯಲಿಏನುಂಟು ಚೆಲುವು?ಬಿತ್ತಿದ್ದ ಬೆಳೆಯುವಇಳೆಗೆ ಮಿಗಿಲು?? ******************************************
“ಅಂತರ್ಬಹಿರಂಗ”
ಕವಿತೆ “ಅಂತರ್ಬಹಿರಂಗ“ ಉದಯ ಧರ್ಮಸ್ಥಳ ನಿದ್ದೆಯ ಮುಂಜಾವಿನಲ್ಲಿಮುಂಜಾವಿನ ನಿದ್ದೆಯಲ್ಲಿಮಂಪರು ಭಾವಗಳೊಂದಷ್ಟುಮತಿಯ ತೋಪಿನಲ್ಲಿಗತಿ ಲಯದ ಸಾಲು ತುರುಕಿದ ಕಾಡತೂಸುಗಳಂತೆಶಬ್ದಗಳಲ್ಲದೆಮೌನ ಅಕ್ಷರದುಂಡೆಗಳು ! ಎತ್ತೆತ್ತಲೋ ಎಸೆದೆರಗುವಂತಾಗಿಧಮಿಲ್ ಧಮಿಲ್ ಧಮಿಲ್ಹೊರಗುಗುಳುವಾಗಹಿಡಿದುದಾಖಲಾಗಿಸುವಾಗಅರೆಬಿರಿದ ಕಣ್ಣೆಡೆಯಿಂದದೃಷ್ಟಿ ಕಾಣುವ ಪಂಕ್ತಿ ಪದಅದೇನೋ ಅಪರೂಪದಆಗೀಗ ಬರುವ ಅತಿಥಿಯಂತೆನಕ್ಕಣರಳಿಸಿ ಬೀಸಿದ ಓರೆನೋಟ ! ಧಿಂಗಣ ಕುಣಿದ ರಂಗದಂಗಳದವೇಶಗಳಾಗಿ ಬಣ್ಣಬಣ್ಣ ಕಟ್ಟಿದೊಗಲೆ ದೊಗಲೆಯೊಳಗೆಅಂಡು ಬಿಗಿದ ಹಳೆಬಟ್ಟೆಯ ಹಿಂಡುಮೇಲೆ ಮಿರಮಿರನೆ ಝಗಮಗಿಸುವರಾಜನುಡುವ ರಂಗುರಂಗಿನ ಪೋಷಾಕಿನೊಳಗಿಂದಜೀವ ಲಕಲಕ ಲಕಾ ಭಾಷೆಯುಚ್ಛಾರ ! ಅದೇನೋ ಮೊರದಗಲತಡ್ಪೆ ಕಿರೀಟದ ಬಣ್ಣದ ವೇಶಅರಚಿ ಅರಚಿ ಬೆದರಿಸಿಅರ್ಥವಾಗದಿದ್ದರೂಅರ್ಥ ಮಾತಾಡುವಂತೆ ಕಂಡರೆಅದು […]