ಗಂಗಾವತಿ

ಕವಿತೆ

ಗಂಗಾವತಿ

ಜ್ಯೋತಿ ಬಳ್ಳಾರಿ

ಗಂಗಾವತಿ ಎಂದರೆ,
ಬರೀ ಊರಲ್ಲ,
ದೇಶಕ್ಕೆ ಅನ್ನ ನೀಡುವ ನಾಡು,
ನಮ್ಮ ಭತ್ತದ ನಾಡು.

ಗಂಗಾವತಿ ಎಂದರೆ,
ಬರೀ ಇತಿಹಾಸವಲ್ಲ,
ರಾಮಾಯಣಕ್ಕೆ ಸಾಕ್ಷಿಯಾದ,
ಆಂಜಿನೇಯ ಜನಿಸಿದ ನಾಡು.
ಗತ ಇತಿಹಾಸ ಸಾರುವ
ಮೊರೆರ ತಟ್ಟೆಗಳ ಬೀಡು.

ಗಂಗಾವತಿ ಬರಿ ಊರಲ್ಲ
ಪರನಾರಿ ಸಹೋದರ,
ಗಂಡುಗಲಿ ಕುಮಾರರಾಮ,
ಗಂಡು ಮೆಟ್ಟಿದ ನಾಡು,
ಆಧ್ಯಾತ್ಮದ ಗುರು ಹೆರೂರು
ವಿರುಪನಗೌಡರ ಹುಟ್ಟಿದ ಬೀಡು.

ಗಂಗಾವತಿ ಎಂದರೆ,
ಬರೀ ಹೆಸರಲ್ಲ,
ಜನರ ಉಸಿರಲ್ಲೂ,
ಆರಾಧ್ಯದೈವ ಚನ್ನಬಸವ ತಾತನ ಪೂಜಿಸುವಬೀಡು.ತಾಯಿ ಗ್ರಾಮದೇವತೆ ದುರ್ಗಾದೇವಿ ಆಶೀರ್ವದಿಸಿದ ಊರು.

ಗಂಗಾವತಿ ಎಂದರೆ,
ಬರೀ ಪ್ರಾಂತ್ಯವಲ್ಲ,
ಕವಿ, ಇತಿಹಾಸಕಾರರ ನೆಲೆಬೀಡು,
ಹಾಸ್ಯ ಚಕ್ರವರ್ತಿ ಪ್ರಾಣೇಶ್,
ಇತಿಹಾಸ ತಜ್ಞ ಕೋಲ್ಕಾರರ ತವರೂರು.

ಗಂಗಾವತಿ ಬರಿ ಊರಲ್ಲ,
ವಾನಭಧ್ರೇಶ್ವರ,ಪಂಪಾಸರೋವರ, ವಿಜಯನಗರ ಅರಸರ ಮೂಲ ತಾಣ ಆನೆಗೊಂದಿಯ ಕೋಟೆಯ ನಾಡು.

ಗಂಗಾವತಿ ಎಂದರೆ,
ಬರೀ ಸಾಧನೆಯಬೀಡಲ್ಲ,
ಕಣಕಣದಲ್ಲೂ ಸಂಸ್ಕಾರವನ್ನು,
ತೋರುವ ನೆಲವಿದು.

ಗಂಗಾವತಿಯ ಒಮ್ಮೆ ನೋಡು
ಹಚ್ಚ ಹಸುರಿನ ಬಯಲು ಸೀಮೆಯ ಮಲೆನಾಡು,
ನದಿ ಗುಡ್ಡ ಬೆಟ್ಟಗಳ ಸೌಂದರ್ಯದ ಸ್ವರ್ಗದ ಬೀಡು.

ಗಂಗಾವತಿ ಎಂದರೆ,
ಬರೀ ಸೌಹಾರ್ದವಲ್ಲ,
ಹಿಂದೂ ಮುಸ್ಲಿಂ ಕ್ರೈಸ್ತರ,
ಸರ್ವಜನಾಂಗದ ಶಾಂತಿಯ ತೋಟವಿದು.

***************************************

Leave a Reply

Back To Top