ಡಾ.ಅಜಿತ್ ಹರೀಶಿ ಕಾವ್ಯಗುಚ್ಛ
ಡಾ.ಅಜಿತ್ ಹರೀಶಿ ಕಾವ್ಯಗುಚ್ಛ ನಿರೀಕ್ಷೆ ಗೀಜಗನ ಗೂಡಿನಂತಿದ್ದ ಮನಮನೆಯೇ ಮುರಿದ ದಿನಬುಗಿಲೆದ್ದ ಹಗೆಗೆ ಸತ್ತುಒಡಹುಟ್ಟಿದವರ ನೆನೆದು ಅತ್ತುತಿಳಿಯಾದ ಮನವು ಋಜುಒಡೆದದ್ದು ನಾಜೂಕು ಗಾಜುಚೂರುಗಳ ಜೋಡಿಸಲೇಹೃದಯಗಳು ಬೆಸೆಯಲೇಬೇಕು ಸಂಬಂಧ ನಾಳೆಗೊಂದು. ನಕ್ಕು ಹಗುರಾಗುತ್ತಿದ್ದ ಬಾಳುಒಣ ಜಂಭದ ರೀತಿಗೆ ಹಾಳುಮಾತು ಮಸಣವಾಗಿದೆತುಮುಲ ಸರಿಪಡಿಸಲಾಗದೆಭಾವನೆಗಳು ಹೊಂದದೆಮುನಿಸು ಸರಿಸಿಸೋತರೇನಂತೆ ನಗಿಸಿಮರಳಿ ಬಂದರೆ ಮನ್ನಿಸಿಬಾರದಿದ್ದರೆ ಕ್ಷಮಿಸಿಕಾಯ್ದರೆ ನಗು ನಾಳೆಗೊಂದು. ಮೀನಿನ ಹೆಜ್ಜೆ ಕಡಲ ದಾರಿಗುಂಟ ಸಾಗಿದೆನೆಲ ನುಂಗುವವರೆಗೂ ನಡೆದೆಕಾಲ, ನಿನ್ನ ಹೆಜ್ಜೆ ಗುರುತೊಂದೆಅಳಿಸಿ ಸಾಗಿತ್ತು, ಕಾಣಗೊಡದೆ. ಕಾಮ ಮೋಹಾದಿಗಳ ಕಡಿಯಲುಬಹುದೂರದ ದಾರಿಯು ಗೋಜಲುಪ್ರೀತಿತ್ಯಾಗಕ್ಕೂ ಮುಳ್ಳಿನ […]
ಸ್ಮಿತಾ ಅಮೃತರಾಜ್ ಕಾವ್ಯಗುಚ್ಛ
ಸ್ಮಿತಾ ಅಮೃತರಾಜ್ ಕವಿತೆಗಳು ಪುರಾವೆ ಸಾಬೀತು ಪಡಿಸಲುಸೂಜಿ ಕಣ್ಣಿನಿಂದ ಹುಡುಕಿದರೂಕಿತ್ತು ಹೋದ ಒಂದು ಎಳೆನೂಲಿನ ನೇಯ್ಗೆಗೆ ಪುರಾವೆಗಳೇಸಿಗುತ್ತಿಲ್ಲ. ಎದೆಯ ತಳದಲ್ಲಿ ಸೋಸಿಉಳಿದ ಅಪ್ಪಟ ತಿಳಿ ಸತ್ಯವೊಂದುಅಗೋಚರವಾಗಿ ಕದಡಿ ಪ್ರತಿಬಿಂಬಮಸುಕು ಮಸುಕಾದುದ್ದಕ್ಕೆ ಪುರಾವೆಯಕಡತಗಳನ್ನು ಹೇಗೆ ಶೋಧಿಸುವುದು? ಬೆಳ್ಳಗೆ ಹೊಳೆದದ್ದುಕನ್ನಡಿಯಂತೆ ಪ್ರತಿಫಲಿಸಿದ್ದುಹಗಲಿನಷ್ಟು ನಿಚ್ಚಳವಾಗಿ ತೋರಿದ್ದುಎಲ್ಲವೂ ಕನಸಿನಂತೆ ಕರಗಿರುವಾಗಅರ್ಥವಿರದ ಪುರಾವೆ ಒದಗಿಸುವುದುವೃಥಾ ಶ್ರಮವಷ್ಟೆ. ಕಣ್ಣ ರೆಪ್ಪೆಯೊಳಗೆ ಅಚ್ಚೊತ್ತಿ ನಿಂತಸ್ಪಷ್ಟ ಬಿಂಬವೊಂದನ್ನು ಆಕಾರವೇ ಇಲ್ಲವೆಂದುಅಳಿಸಲು ಸಾಧ್ಯವೇ?. ಪದ್ಯ ಹೊಸೆದುರಾಗ ಕಟ್ಟಿ ತೇಲಿ ಬಂದಗಾನ ಗಾಯನದ ಇಂಪುಕವಿತೆ ಹುಟ್ಟಿದ ಕ್ಷಣಗಳಿಗೆಕಾಡಿದ ಭಾವವಷ್ಟೇ ಸಾಕ್ಷಿ. ಸಾಕ್ಷಿಯುಳಿಸದೇಹಕ್ಕಿ […]
ಕಾವ್ಯಯಾನ
ಮಾಲತಿ ಶಶಿದರ್ ಒಂದು ಪ್ರೇಮಕವಿತೆ ಒಲವೆಕಗ್ಗತ್ತಲಲ್ಲಿ ಹೊಳೆವ ಬಂಧಕ್ಕಾಗಿ ಹಾತೊರೆದಿರುವೆಕಡಲಾದ ನಿನ್ನ ಒಂದು ಹನಿಯಾಗಿ ಸೇರಿರುವೆ ನಿನ್ನ ಚಲುವಿಗೆ ಪುರಾವೆಯಾಗಬಲ್ಲೆನೇ ನಾನು..ನಮ್ಮಿಬ್ಬರ ಮಿಲನ ಕಂಡು ಮಣ್ಣು, ಮಳೆ ಹನಿ ನಾಚದೆನು ನಿನ್ನೊಲವ ಸ್ಫೂರ್ತಿಯಲಿ ಆಗಸದಲ್ಲಿ ತೇಲಿಹೆನು,ಹೆಗಲ ಮೇಲೆ ಒರಗುವಾಸೆ ದಾಟಿ ಬಳಿಗೆ ಬಂದಿಹೆನು ನನ್ನೊಳಗೆ ಅವಿತಿರುವ ನೀನೊಂದು ಸುಂದರ ಗುಟ್ಟುಏಕಾಂತದಲ್ಲೂ ನಿನ್ನದೇ ಪರಿಮಳ, ನಿನ್ನದೇ ನೆನಪು.. ಬೇಸಿಗೆ ಆಗಸ ವಸಂತವಾಗಿದೇದೂರದ ಕಾಡು ನಿನ್ನೆಸರ ಕೂಗಿದೆ.. ಅಣುವಿನ ವಿದಳನದಂತೆ ನಮ್ಮ ಬಂಧ ದಿನೇ ದಿನೇ ಸಿಡಿದಿದೆಬೆರಳುಗಳ ಹೊಸ ಭಾಷೆಯ […]
ಕಾವ್ಯಯಾನ
ನೂತನ ಅವರ ಹೊಸ ಕವಿತೆ ನೂತನ ದೋಶೆಟ್ಟಿ ಸಾಲುಗಟ್ಟಿದ ವಾಹನಗಳ ಸಂದಿನಲ್ಲಿಚಟಚಟನೆ ಜಿಗಿಯುವ ಪುಟ್ಟ ಕಾಲುಗಳುದೇಹವಿಡೀ ಲೋಹದ ಗೋಲದೊಳಗೆ ತೂರಿಕೈಕಾಲು ಬಿಡಿಬಿಡಿಯಾಗಿ ಹೊರಬರುವ ಆಟ ಮಿಂಚುವ ಕಣ್ಣುಗಳ ಸುತ್ತ ಕಪ್ಪು ಕಾಡಿಗೆಸೆರೆ ಹಿಡಿಯುವ ದಾಹಮಿರಮಿರನೆ ಹೊಳೆವ ಕದಪುಗಳುಬಾಲ್ಯವನ್ನು ನುಂಗಿ ಉಬ್ಬಿ ಗರಿಗರಿಯಾಗುತ್ತಿರುವವು ಒಡ್ಡಿದ ಕೈಮೇಲೆ ಬೀಳುವ ಕನಸ ಕಾಸುಗಳುಸಂಜೆಗತ್ತಲಲ್ಲಿ ಕರಗುವುದ ತಿಳಿದೂಸುಡುಬಿಸಿಲಲಿ ಮೈ ಮಣಿಸುವ ಕಸುವುಸೊಂಟಕ್ಕೆ ಬಿಗಿದ ದಾವಣಿಯುಸಡಿಲವಾಗುವುದಕ್ಕೆ ಪೂರ್ವಹಾದಿಬದಿಯ ದೊಂಬರಾಟದಲ್ಲಿ ತಯಾರಿ ಬಡಿಯುವವನ ತಮಟೆ ತಾಳಕ್ಕೆಬಾಗಿ ಬಳುಕುವ ನೋಡುಕಣ್ಸನ್ನೆ, ಕೈಸನ್ನೆ, ಬಾಯ್ಸನ್ನೆಗಳ ಪಾಠಉಣ್ಣುವ ಅನ್ನದಲಿ ಸುಖ […]
ಕಾವ್ಯಯಾನ
ಆಸೆ ಪೂಜಾ ನಾಯಕ್ ಝಗಝಗಿಸುವಾ ಆಸೆನಳನಳಿಸುವಾ ಆಸೆಮೊಮ್ಮೊದಲ ವಸಂತ ಋತು,ಕೋಗಿಲೆಗೆ ಕಂಠದ ಮಾಧುರ್ಯವ ಹೊರಹೊಮ್ಮಿಸುವ ಆಸೆ.ಕವಿಗೆ ಕಾವ್ಯದಾ ರಚನೆಯಮೇಲಾಸೆಕಲಾಕಾರನಿಗೆ ಚಿತ್ರ ಬಿಡಿಸುವ ಆಸೆಶಿಲ್ಪಿಗೆ ಮೂರ್ತಿಯ ಕೆತ್ತುವುದರಲ್ಲಾಸೆನಟರಾಜನಿಗೆ ತನ್ನ ನೃತ್ಯದಾಮೇಲಾಸೆಪ್ರೇಮಿಗೆ ಪ್ರೇಯಸಿಯೊಡಗೂಡಿ ನಲಿಯುವಾ ಆಸೆ ಮಾಗಿಯ ಚಳಿಯು ಇನಿಯನಿಗೆ ಆದರೆ,ಚಂದ್ರನ ಬೆಳದಿಂಗಳು ಗೆಳತಿಗೆಹತ್ತಾರು ಬಣ್ಣದಾ ಕನಸಿನಾ ಲೋಕದೊಳು ಚಿಟ್ಟೆಯ ಹಾಗೆ ನಲಿ-ನಲಿದು,ಏಕಾಂತದಲಿ ಕುಳಿತಾಗ ಕವಿತೆಯ ಬರೆದು, ಎಲ್ಲರೊಡಗೂಡಿ ಹಾಡುವ ಆಸೆ ಎನಗೆ.ಆಸೆ ಎಂಬುದು ಬಿಡಲಿಲ್ಲ ಗೌತಮ ಬುದ್ಧನನೇಅವನಿಗೂ ಕೂಡ ಇತ್ತೊಂದು ಆಸೆ,ಆಸೆಯ ಬಿಡಬೇಕು ಎನ್ನುವ ಮಹದಾಸೆ.ಆಸೆ ಎಂಬುದು ಎಲ್ಲರಾ […]
ಕಾವ್ಯಯಾನ
ತಿರುಗಾಟ ಭಾಗ್ಯ ಸಿ ಏಕೆ ತಿರುಗುವೆ ಅತ್ತಿಂದಿತ್ತಅತ್ತ ಪ್ರಳಯ ಇತ್ತ ಕೋಲಾಹಲತಿನ್ನುವ ಕೂಳಿಗೂ ಪರದಾಟ ಅಲ್ಲಿತುಸುವೆ ಹೆಚ್ಚಾಗಿ ಕಿತ್ತಾಡುತ್ತಿರುವರಿಲ್ಲಿ ಮೌಲ್ಯಾಧಾರಿತ ಸಮಸ್ಯೆಗಳು ಸಾಕಷ್ಟಿವೆಕ್ಲಿಷ್ಟತೆಗಳು ಜೇಡರ ಬಲೆಯಂತಾಗಿವೆಹೊರಾಡಬೇಕಿದೆ ಒಳಗಿನ ಶತ್ರುವಿನೊಂದಿಗೆಸಮಾಜ ಸ್ವಾಸ್ಯ ಕಾಪಾಡುವ ಗುರಿಯೊಂದಿಗೆ ಮಣ್ಣು, ಗಾಳಿ, ಬೆಳಕು ನೀರಿನ ಮಿಶ್ರಣಹೋದರೆ ಹೋಯಿತು ಬೆಲೆ ಇಲ್ಲಆತ್ಮ ಸತ್ಯವದು ಹೊಲಸು ಮಾಡಿಕೊಳ್ಳಬೇಡಿಲೆಕ್ಕ ತೀರಿಸಲೇ ಬೇಕು ಮರೆಯಬೇಡಿ ಏಕೆ ತಿರುಗುವೆ ಅತ್ತಿಂದಿತ್ತತಿರುಗಾಟ ಪರಿಹಾರವಲ್ಲಎಣೆ ಬಲೆಯನು ಬಿಗಿಯಾಗಿಬೀಳಲಿ ಮಿಕ ತಲೆಕೆಳಗಾಗಿ *****************************************
ಕಾವ್ಯಯಾನ
ಸ್ವಾತಿ ಹನಿ ಅನಿತಾ ಕೃಷ್ಣಮೂರ್ತಿ ಕಂಡಿಲ್ಲ ನೇರವಾಗಿ ನಾನೆಂದು ನಿನ್ನಕಂಡಿದ್ದು ಆ ಬಾನಿನ ಮೇಘಗಳಲಿ.ಈ ತಂಪೆರೆವ ತಂಗಾಳಿಯಲಿನಗುತಿರುವ ಗುಲಾಬಿಯ ಪಕಳೆಯಲಿ. ಕಂಡಿಲ್ಲ ನೇರವಾಗಿ ನಾನೆಂದು ನಿನ್ಜಕಂಡಿದ್ದು ಇಬ್ಬನಿಯ ಪಾರದರ್ಶಕತೆಯ ನುಣುಪಿನಲಿ,ಆ ಆಗಸದ ಬಾನಾಡಿಯ ಹಾರಾಟದಲಿಕಪ್ಪೆಚಿಪ್ಪಲಿ ಅಡಗಿ ಸ್ವಾತಿಹನಿಯ ಮುತ್ತಿನಲಿ. ಕಂಡಿಲ್ಲ ನೇರವಾಗಿ ನಾನೆಂದು ನಿನ್ನಕಂಡಿದ್ದು ನಾ ಬರೆವ ಪದಗಳ ಭಾವದಲಿ,ಮಿಂಚಾಗಿ ಮಿಂಚಿ, ಸಂಚನು ತರುವ ಆಲೋಚನೆಯಲಿ,ಎದೆಯ ಏರಿಳಿತದ ಬಡಿತದಲಿ. ************************
ಕಾವ್ಯಯಾನ
ಗಝಲ್ ಸುಜಾತ ಲಕ್ಷ್ಮೀಪುರ ಮಾತು ಮಾತಿಗೆ ಕಿಡಿ ತಾಗಿಸಿ ಸುಡುವುದು ಸಹಜ ಧರ್ಮವಲ್ಲಸುಮ್ಮನೇ ಮೌನದ ಅಗಾಧ ಕೂಪಕೆ ದೂಡುವುದು ಸರಿಯಲ್ಲ. ಮೌನವೂ ಮಣಭಾರವಾಗಿ ಕಾಡುವುದಿಲ್ಲವೆ ಏಕಾಂತದಿಕಣ್ಣಿನಲ್ಲೇ ಒಲವನು ಸೂಸಬಹುದು ಕೊಲ್ಲುವುದು ತರವಲ್ಲ ತಪ್ಪು ಮಾಡಿ ಕ್ಷಮೆ ಕೇಳುವುದೇ ದೊಡ್ಡ ವಿಚಾರವಲ್ಲಾಪ್ರೀತಿಗೆ ಶರಣಾಗಲು ಅಹಂಕಾರ ಸರಿಸುವುದು ಸೋಲಲ್ಲ ಬೆಳಕು ಮೂಡಲು ತಮವು ಅಳಿದೂ ಜಗವೆಲ್ಲಾ ಬೆಳಗುತ್ತದೆಮೈಮನವೆಲ್ಲ ಆವರಿಸಲು ಒಲವಲ್ಲದೆ ಬೇರೆ ಪಥವಿಲ್ಲ ಶಿವೆ,ಕಾಡುವ ಬಳ್ಳಿ ಬಿಡಿಸಿಕೊಳ್ಳುವುದು ಸಾಧ್ಯವೆ ನಿನ್ನಂತೆಎರಡಳಿದು ಒಂದಾಗಲು ಸವಿ ಪ್ರೇಮವಲ್ಲದೆ ಜಗವಿಲ್ಲ *******************************.
ಕಾವ್ಯಯಾನ
ನಿನ್ನ ಸೇರೋ ತವಕ ಪ್ಯಾರಿಸುತ ನಿನ್ನೂರು ದಾರಿಯು ಸವಿದಷ್ಟುದೂರಹವೆ ತುಂಬಿದ ಗಾಲಿಗಳು ಉರುಳಿದಷ್ಟುಮತ್ತಷ್ಟು ದೂರಉರುಳಿ ಹೊರಟ ಗಾಲಿಯಲ್ಲಿ ಹವೆಯಿತ್ತುನಿನ್ನ ನೆನೆದು ಬರುತ್ತಿರುವ ನನ್ನಲ್ಲಿ ಚಲವಿತ್ತುಪ್ರಯಾಸಗೊಂಡೆ,ಅನಾಯಾಸಗೊಂಡೆಕತ್ತಲು ಆವರಿಸಿದ ಕಪ್ಪು ಹೊಲದ ನಟ್ಟ ನಡುವೆಬೆಳೆದಿದ್ದ ಒಂಟಿ ಬೇವಿನಮರದಬುಡದಲ್ಲಿ ಮಗ್ಗಲು ಭುವಿಗೆ ಹೊಂದಿಸಿಮಲಗಿಕೊಂಡುನಿನ್ನ ಸೇರೋ ಕನಸು ಕಾಣುತ್ತಿದ್ದೆಕನಸನ್ನು ಭಗ್ನ ಮಾಡಿ,ಮತ್ತೆನಿನ್ನೂರು ದಾರಿ ಹಿಡಿಯಲುಪ್ರೇರೇಪಿಸಿದ್ದು ಅದೇ ಸೊಳ್ಳೆಅದು ನೀನೋ ಅಥವಾ ನಿಜವಾಗಿಯೂ ಸೊಳ್ಳೆಯೂತರ್ಕಕ್ಕೆ ಇಳಿಯುದಿಲ್ಲಅದು ಕಚ್ಚಿ ಹೋದ ಜಾಗದಲ್ಲಿ ನೀ ಕಚ್ಚಿದ ಹೋಲಿಕೆಯಿದೆದಾರಿಯುದ್ದಕ್ಕೂ ಮೈಲುಗಲ್ಲಿನ ಮೇಲೂ ನಿನ್ನದೇಸ್ವಾಗತಗೀತೆ,ಅದೆಷ್ಟು ಚಂದ ಅನ್ನುತ್ತಿಯಾ…?ನೋಡುತ್ತಾ,ಕೇಳುತ್ತಾ ಅಲ್ಲೇ ನಿಂತುಬಿಡಬೇಕುಇಲ್ಲ,ನಿನ್ನ […]
ಕಾವ್ಯಯಾನ
ಅವರು-ಇವರು ಕೆ.ಎ. ಎಂ. ಅನ್ಸಾರಿ ಮುಸ್ಸಂಜೆಯ ಹೊತ್ತುಮನೆಯತ್ತಹೆಜ್ಜೆಯಿಡಲುಮಡದಿಯಬಾಡಿದ ಮುಖ ದರ್ಶನ… ಗೊತ್ತಾ ಇವರು ಇನ್ನಿಲ್ಲವಾದರಂತೆ…ನಾನುಇನ್ನಾ ಲಿಲ್ಲಾಹ್.. ಎನ್ನುವಾಗಮೊಗದಲ್ಲಿ ನಗುವ ಕಂಡ ಅವಳು…ನಗಬಾರದೆಂದಳು… ಒಂದೆರಡು ವರುಷಗಳ ಹಿಂದೆಇವರು ಅವರನ್ನುಕೊಂದಿ ದ್ದರು..ಸಾವಿಗೆ ಸಂಭ್ರಮಿಸಬಾರದು.. ದಫನ ವಾಗಿರಬಹುದೇ..ನಾ ಕೇಳಿದ ಪ್ರಶ್ನೆ..ಹೌದು. ಈಗ ಮುಗಿದಿರಬಹುದೆನುವಉತ್ತರ.. ಇವರು-ಅವರುಇಬ್ಬರೂ ಊರಿನವರು ..ಅದೇನೋ ಜಗಳ ತಾರಕಕ್ಕೇರಿದಾಗಇರಿತದಿಂದ ಅವರುಪರಲೋಕ ತಲುಪಿದ್ದರು..ಇಂದು ಇವರ ಸರದಿ.. ಮೆಲ್ಲನೆ ಮಸೀದಿಯತ್ತ ಹೆಜ್ಜೆ ಹಾಕಿದೆ..ಪಕ್ಕದಲೇ ಖಬರಸ್ಥಾನ.ಗುಂಪು ಕಟ್ಟಿ ನಡೆದ ಇವರುಒಬ್ಬಂಟಿ ಮಲಗಿದ್ದರು..ಹೊತ್ತೊಯ್ದವರು ಮಣ್ಣು ಮಾಡಿಮರಳಿದ್ದರು.. ಬಡ-ಸಿರಿವಂತ ರೆಲ್ಲರೂಮಲಗುವ ತಾಣವಿದು..ಇವರೀಗ ಒಬ್ಬಂಟಿ..ಸುಮ್ಮನೇ ಪಕ್ಕದಲಿ ಯಾರು ಮಲಗಿರುವುದೆಂದುಕುತೂಹಲದಿ […]