ಕಾವ್ಯಯಾನ

ಮಾಲತಿ ಶಶಿದರ್ ಒಂದು ಪ್ರೇಮಕವಿತೆ

ಒಲವೆ
ಕಗ್ಗತ್ತಲಲ್ಲಿ ಹೊಳೆವ ಬಂಧಕ್ಕಾಗಿ ಹಾತೊರೆದಿರುವೆ
ಕಡಲಾದ ನಿನ್ನ ಒಂದು ಹನಿಯಾಗಿ ಸೇರಿರುವೆ

ನಿನ್ನ ಚಲುವಿಗೆ ಪುರಾವೆಯಾಗಬಲ್ಲೆನೇ ನಾನು..
ನಮ್ಮಿಬ್ಬರ ಮಿಲನ ಕಂಡು ಮಣ್ಣು, ಮಳೆ ಹನಿ ನಾಚದೆನು

ನಿನ್ನೊಲವ ಸ್ಫೂರ್ತಿಯಲಿ ಆಗಸದಲ್ಲಿ ತೇಲಿಹೆನು,
ಹೆಗಲ ಮೇಲೆ ಒರಗುವಾಸೆ ದಾಟಿ ಬಳಿಗೆ ಬಂದಿಹೆನು

ನನ್ನೊಳಗೆ ಅವಿತಿರುವ ನೀನೊಂದು ಸುಂದರ ಗುಟ್ಟು
ಏಕಾಂತದಲ್ಲೂ ನಿನ್ನದೇ ಪರಿಮಳ, ನಿನ್ನದೇ ನೆನಪು..

ಬೇಸಿಗೆ ಆಗಸ ವಸಂತವಾಗಿದೇ
ದೂರದ ಕಾಡು ನಿನ್ನೆಸರ ಕೂಗಿದೆ..

ಅಣುವಿನ ವಿದಳನದಂತೆ ನಮ್ಮ ಬಂಧ ದಿನೇ ದಿನೇ ಸಿಡಿದಿದೆ
ಬೆರಳುಗಳ ಹೊಸ ಭಾಷೆಯ ಈ ಪಾಪಿ ಹೃದಯ ಅರಿವುದೆ?

ಇದೊಂದು ಜನ್ಮ ಸಾಕೆ ಹುಡುಗ ನಿನ್ನ ಸೇರಿ ಬಾಳಲು..
ಒಂದೇ ಒಂದು ಹೃದಯ ಸಾಕೆ ನಿನ್ನ ಪ್ರೀತಿ ಮಾಡಲು..

***********************

2 thoughts on “ಕಾವ್ಯಯಾನ

  1. ‘ಅಣುವಿನ ವಿದಳನ’ ವಿಜ್ಞಾನ ಶಿಕ್ಷಕಿಯಾಗಿದ್ದು ಸಾರ್ಥಕ. ಹೃದಯವೇ ಕೈಯಲ್ಲಿದೆಯೇನೋ ಅನ್ಸುತ್ತೆ.

Leave a Reply

Back To Top