Category: ಕಾವ್ಯಯಾನ

ಕಾವ್ಯಯಾನ

ಉಳಿವಿಗಾಗಿ ಹೋರಾಟ

ಕವಿತೆ ಉಳಿವಿಗಾಗಿ ಹೋರಾಟ ಲಕ್ಷ್ಮೀದೇವಿ ಕಮ್ಮಾರ ಇತಿಮಿತಿಗಳ ಪರದೆ ಹರಿದುಬಯಲಲಿ ಒಂದಾಗಲುನಿಂತಲ್ಲೇ ನಿಂತು ಕೋಳೆಯುವ ಮೋದಲುಸಾಗಬೇಕು ನಾವು ಮುಂದು ಮುಂದುಹೋಸ ದಾರಿ ಕಂಡುಕೊಂಡು ಅವರ ಜೀವನ ಅವರಿಗೆನಮ್ಮ ಜೀವನದ ದಾರಿ ನಮಗೆನಾವೆ ಸವಿಸಬೇಕುಹೊಟ್ಟೆ, ಬಟ್ಟೆಗೆ ಗಟ್ಟಿ ನೆಲೆ ಕಂಡುಕೊಳ್ಳಲುನಾವು ಹೆಣಗಾಡಬೇಕು ಹುಚ್ಚು ಮನದ ಹಂಬಲಕೊಯಾರ ಮೇಲಿನ ರೊಚ್ಚಿಗೊಭಂಡಾಯದ ಕಿಚ್ಚಿಗೊಹಾಕಿಕೊಂಡ ಕಗ್ಗಂಟುಗಳ ಬಿಚ್ಚುಕೊಂಡು ನಮ್ಮಳುವಿಗಾಗಿ ಗೊಡ್ಡುಸಂಪ್ರದಾಯ,ಮರ್ಯಾದೆಗಳ ಮಡುವಿನಿಂದ ಮೇಲೆ ಬಂದುಗಟ್ಟಿನೆಲೆ ಕಾಣಬೇಕುನಮ್ಮೋಳಗಿನ ಶಕ್ತಿ ಅನಾವರಣಗೊಳ್ಳಬೇಕು ಕತ್ತಲೆಯಲಿ ಭೂಗತ ವಾಗುವ ಬದಲುಬೆಳಕಿಗೆ ಬಿದ್ದು,ಬಾಳು ಬೆಳಗಬೇಕುಕತ್ತಲಲಿದ್ದವರಿಗೆ ದೀಪದುಡಗರೆನಾವು ನೀಡಬೇಕು *******************************

ನಿನ್ನ ಪ್ರೀತಿಗೆ ಅದರ ರೀತಿಗೆ

ಕವಿತೆ ನಿನ್ನ ಪ್ರೀತಿಗೆ ಅದರ ರೀತಿಗೆ ಜಯಶ್ರೀ ಭ.ಭಂಡಾರಿ. ಎಲ್ಲಿಯೋ ಇದ್ದ ನೀನುನನ್ನಲ್ಲಿ ಪ್ರೀತಿ ಮೂಡಿಸಿದೆನಿನ್ನ ತಿರಸ್ಕರಿಸುತಲಿದ್ದ ನಾಒಲವಿನ ಸಿರಿಯಾದೆ ನಿನ್ನಲಿ ಸೆರೆಯಾದೆ ನೀ ಕವಿಯಾದೆ ನಾ ಕವಿತೆಯಾದೆನೀ ಗೀತೆಯಾದೆ ನಾ ಭಾವವಾದೆನಿನ್ನ ರಾಗವಾದರೆ ನಾ ಪಲ್ಲವಿಯಾದೆನೀ ಹೆಜ್ಜೆಯಾದರೆ ನಾ ಗೆಜ್ಜೆಯಾದೆ ಬಿಟ್ಟಿರಲಾರದ ನೆರಳಾದೆವುಜೀವಕೆ ಜೀವ ನಂಟಾದೆವುಬಿಡಿಸಲಾರದ ಬಂಧಿಗಳಾದೆವುಎಂದೆಂದಿಗೂ ಒಲವ ಜೇನಾದೆವು ಮೌನಿ ಅವನಿಗೆ ಮಾತಾದೆನಗುವಿಗೆ ಅಮೃತಧಾರೆಯಾದೆಕಂಗಳಕಾಂತಿಗೆ ಜ್ಯೋತಿಯಾದೆಉಸಿರಿಗೆ ಚೈತನ್ಯದ ಚಿಲುಮೆಯಾದೆ ದೂರದಲಿ ಇರುವವ ಬಂಗಾರದಂತವಬಾಳದಾರಿಗೆ ಗುರಿ ತೋರಿದವಮನದನ್ನೆಗೆ ಕನಸತೋರಣವಾಗಿಸಿದವಬೆವರಗುಳಿಕೆನ್ನೆಯವ ನನ್ನವನವ ಕಣ್ಣಮಿಂಚಿಗೆ ಸೋತುಬಂದವಮುತ್ತುಗಳ ಮಾಲೆ ತೊಡಿಸಿದವಕೊರಳ […]

ಅತೀತ

ಕವಿತೆ ಅತೀತ ಪವಿತ್ರಾ ಕಾಯುತಿಹರಲವರಲ್ಲಿನಿನ್ನಾಗಮಕೆ…ಇಹದ ಜಂಜಡದ ಜಾತ್ರೆಯಜಯಿಸದಲವರುಕೆಲವರದು ಪಲಾಯನಪರದ ಸುಖವನರಸಿ. ಸೋಲಿನಲು ಗೆಲುವುಗೆಲುವಿನಲಿ ನಗೆ ಬುಗ್ಗೆಎನಮೀರಿಪರೆ ಶಾಂತಿ ನೆಮ್ಮದಿಯಲಿಕೇಕೆ ಕಿಲಕಿಲ ಕೇಳರಿತ ನಗುವ ಮೊಗಸೊಗದ ಸೋಗೆಯಲೆ ಹಲವರಹೊಟ್ಟೆಗೆ ಕಿಚ್ಚಿಡುವ ಕಾಯಕವುಸಾಗುತಲಿ ಬೀಗುತಲಿ ಬಿಡದೆ ಎಲ್ಲರನೂ ತನ್ನಾಲಿಂಗನದತೆಕ್ಕೆಯೊಳು ಆಹುತಿಗೈವ ವಿಧಿಕೂಟಮಾಟ ತಪ್ಪಿಪರೆ ಅವರುಇವರಿಂದು ನಾಳೆ ಅವರುಎಲ್ಲರದೊಂದೊಂದು ನಿಗಧಿ ದಿನದಿನಪನಿಗೆ ಭೇದವಿರದೆ ಬಿಡುವಿರದೆನಡೆದುದೇ ಹಾದಿ. ಮಕ್ಕಳದು ಬೇಡ ಇರಲಿನ್ನಷ್ಟು ದಿನಈಗ ತಾನೆ ಮದುವೆನಡೆ ನಾಳೆ ಬರುವೆಹಂಬಲಿಪ ಯುವಕನೋರ್ವನ ಮನವಿಗೆಮಣಿವನೇ ಅವನುಧೈತ ಧೂತ ಹೆಸರೆಂದರೆ ಭಯ ಅದಕೇನೋ ಅದರನುಭವಸಾಧುವಾಗದು ನಿಲುಕದೂ ಬಣ್ಣನೆಗೆಗಳಿಗೆ […]

ಕವಾಟಗಳ ಮಧ್ಯೆ ಬೆಳಕಿಂಡಿ

ಕವಿತೆ ಕವಾಟಗಳ ಮಧ್ಯೆ ಬೆಳಕಿಂಡಿ ಸುತ್ತು ಗೋಡೆಗಳ ಕಟ್ಟಿತೆರೆಯದ ಕವಾಟಗಳ ಮಧ್ಯೆನಾನೆಂಬ ನಾನು ಬೇಧವಳಿದುಒಂದಾಗಲಿಜೀವ ಪರಮಾತ್ಮಸಂತ ಶರಣರ ಅಹವಾಲು ನೋವಿರದ ಹಸಿದ ಸ್ವಾರ್ಥಬರಡಾದ ಎದೆಯ ಅಮೃತಬರಿದೆ ಬಡಿಯುವ ಮಿಡಿತ ಕಳೆದು ಹೋಗಿಹ ನಾವುಕದ ತಟ್ಟಿ ಕರೆಯೋಣಇಂದಲ್ಲ ನಾಳೆ ತೆರೆದೀತುತಟ್ಟಿದ ಕೈಗಳ ತಬ್ಬೀತುಸಂತ ಶರಣರು ನಕ್ಕಾರು. ***************************

ಹಾಯ್ಕುಗಳು

ಹಾಯ್ಕುಗಳು ವಿ.ಹರಿನಾಥ ಬಾಬು ಕೂಗಿತು ಕೋಳಿಹರಿಯಿತು ಬೆಳಕುನಗುವ ಸೂರ್ಯ ಉರಿವ ಬೆಂಕಿಒಲೆಯ ಮೇಲೆ ಅನ್ನಹಸಿದ ಕಂದ ಸೂರ್ಯ ಸಿಟ್ಟಾದಭೂಮಿ ಬಳಲಿ ಬೆಂಡುಹಾಳಾದ ರೈತ ಜೋರಾದ ಮಳೆಕೊಚ್ಚಿಹೋದ ಫಸಲುಹತಾಷ ರೈತ ತುಂತುರು ಹನಿಪುಲಕಗೊಂಡ ಭೂಮಿಪ್ರಸನ್ನ ಜನ ****************************

ನೆನಪುಗಳು:

ಕವಿತೆ ನೆನಪುಗಳು: ಡಾ. ಅರಕಲಗೂಡು ನೀಲಕಂಠ ಮೂರ್ತಿ 1.ನೆನಪುಗಳೇ ಹಾಗೆ —ಒಮ್ಮೆ ಚುಚ್ಚುಸೂಜಿಗಳುಒಮ್ಮೆ ಚಕ್ಕಳಗುಳಿ ಬೆರಳುಗಳುಮತ್ತೊಮ್ಮೆ ಮುಗುಳುನಗೆಯ ಜೋಕುಗಳುಇನ್ನೊಮ್ಮೆ ಕಣ್ಣ ಬಸಿಯುವ ಹಳೆಯ ಹೊಗೆಯ ಅಲೆಗಳು…ಮತ್ತುಪಿಸುಮಾತಲಿ ಮುಲುಗುವಒಲವಿನ ಬಿಸಿ ಬಂಧುರ ಬಂಧನಗಳು…! 2.ನೆನಪುಗಳು —ಪ್ರಪ್ರಥಮ ಮಳೆಗೆ ವಟಗುಟ್ಟುವಕೊರಕಲ ಕಪ್ಪೆಗಳು;ಹರೆಯದ ಹುತ್ತದಲಿ ಭುಸುಗುಟ್ಟುಮತ್ತೆಲ್ಲೋ ಹರಿದು ಮರೆಯಾದಹಾವಿನ ಪೊರೆಗಳು…!ನೆನಪುಗಳು ಏಕಾಂತದಲಿ ಕಳಚುತ್ತವೆದಿರಿಸು ಒಂದೊಂದಾಗಿ,ಎಂದೋ ಹಂಬಲಿಸಿದ ಬಿಸಿಯಬೆಂಕಿಯಾಗಿ… 3.ನೆನಪುಗಳು —ಕಳೆದುಹೋದ ಕೋಲ್ಮಿಂಚಿನ ಹಸಿರ ಚಿಗುರುಈ ಋತು ಒಣಗಿ ಉದುರುವ ತರಗು…ಸಗಣಿ ಗೋಡೆಗೆಸೆವುದು ಬೆರಣಿಗಾಗಿ,ಆ ಬೆರಣಿಯುರಿದು ಬೆಂಕಿ…ಅಷ್ಟೆ! ಎಂಥ ಸುಕೃತವೋ ಏನೋ —ನೆನಪಿನ […]

ಗಝಲ್

ಗಝಲ್ ಶುಭಲಕ್ಷ್ಮಿ ಆರ್ ನಾಯಕ ಹೃದಯ ಸಿರಿವಂತಿಕೆಗೆ ಅರಮನೆ ಗುಡಿಮನೆಗಳೆಂಬ ಭೇದವುಂಟೇ ಸಖೀಗುಣ ಅವಗುಣಗಳಿಗೆ ಬಡವನು ಬಲ್ಲಿದನೆಂಬ ಅಂತರಗಳುಂಟೇ ಸಖೀ ಅವರವರ ಭಾವಗಳಲಿ ಅವರವರ ಅರಿವಿಂಗೆ ಬಂದಂತೆ ಮಾಡುತಿಹರುಸನ್ನಡತೆ ದುರ್ನಡತೆಗಳಿಗೆ ನಾನು ನೀನೆಂಬ ದೂರಗಳುಂಟೇ ಸಖೀ ಸಂಕುಚಿತ ಭಾವದಲಿ ಸ್ವಾರ್ಥದ ಬೆಂಬತ್ತಿ ತಮ್ಮ ತನಗಳ ಮರೆತಿಹರುಜೀವನದಿ ಸ್ವಾರ್ಥವೆಂಬ ಮುಸುಕಿಗೆ ಬಲಿಯಾಗಿ ಗೆದ್ದವರುಂಟೇ ಸಖೀ ಬಡವನಲಿ ಕಾಣಬಹುದಲ್ಲವೇ ನಯ ವಿನಯತುಂಬಿರುವ ವಿಶಾಲ ಹೃದಯವಅವನ ಕಷ್ಟ ತ್ಯಾಗ ಸಹನೆಗಳ ಅಸಹನೆಯಿಂದ ಮರೆಯಲುಂಟೇ ಸಖೀ ಸಂಕುಚಿತ ಸ್ವಾರ್ಥದ ಬದುಕ ಕಂಡು ಶುಭ […]

ಮಂಜು

ಕವಿತೆ ಮಂಜು ನಳಿನ ಡಿ ಕಾಡುಮಲ್ಲಿಕಾರ್ಜುನನ ಚರಣ ಸೇರಲು ಹಾಡುಹಗಲೇ ಹಂಬಲಿಸಿ,ಬಿದ್ದ ವರುಣನ ತಿರಸ್ಕರಿಸಿ,ಮಾಟಗಾರ ಮಹಾಮಹಿಮ, ಓಜಸ್ವಿ ಓಡೋಡಿ ಹಿಡಿಯಲಾರೆ,ತಪ್ಪಾದರೂ ತಿರುಗಿ ಬರಲಾರೆ,ಕನವರಿಸಿ ಕಾಡಹಾದಿಯ ತಪ್ಪಿಸಿ,ಊರಿಗೆ ದಾರಿ ಒಪ್ಪಿಸಿ,ಗೂಬೆ ಕೂಗಿಗೆ ಕಾಗೆ ಓಡಿಸಿ,ಮುಸ್ಸಂಜೆ ಕಳೆಯಲು, ಬೆಟ್ಟದ ಬಂಡೆಗೆ ಬೆನ್ನುಹಾಸಿ,ಮರೆತು ಹೋದರೂ ಹುಡುಕಿ ತರುವ ಯಾಚಕ,ಸುಭದ್ರ ಸನಿಹದ ಇಳಿಮುಖ ಪ್ರತಿಫಲನ,ಪ್ರೇಮದ ವಕ್ರೀಭವನ,ಘಟಿಸುವವರೆಗೂ,ಮಂಜು ಅರಸಿ ಹಬ್ಬಿ ಕವಿಯುವವರೆಗೂ,ತಬ್ಬಿಬ್ಬು ಮನಸು…ಮಂಜು ನಗಲಿ,ಮಳೆ ಬರಲಿ..ನನ್ನಿರವು ನಿನ್ನಲ್ಲಿ ಸದಾ ಇರಲಿ.. ***********************************

ಓ.. ಮನಸೇ

ಕವಿತೆ ಓ.. ಮನಸೇ ವಿಭಾ ಪುರೋಹಿತ್ ಕ್ಷಣದ ಏಕಾಂತದಲಿಅಮೂರ್ತವಾಗಿನನ್ನೆದುರಲ್ಲೇಯಿರುವಿಎದೆಯಲ್ಲಿ ಗೆಜ್ಜೆ ಕಟ್ಟಿ ಥಕಥಕಕುಣಿಸಿ ಅಟ್ಟಕ್ಕೇರಿದ ಅತಿರೇಕನಿನ್ನ ನೋಡಬೇಕೆಂಬಉತ್ಕಟತೆ ಜಲಪಾತಕ್ಕೂಜೋರಾಗಿ ಜೀಕಿದೆಹಾರಿದ ಹನಿಗಳುಚಂದಿರನ ಗಲ್ಲಕ್ಕೆ ಸವರಿದ್ದೇ ತಡತಂಪಿನಲ್ಲೇ ತಾಪ ಅನುಭವಿಸಿಧಗಧಗ ಉರಿಯುತ್ತ ಉರುಳಿಅವಳ ಸ್ಪರ್ಶಕ್ಕೆ ಘರ್ಷಕ್ಕೆಆತು ಕೂತಿರುವೆಮರಿ ಭಾಷ್ಪವಾಗಿನುಡಿಯುತಿರೆ ಮಿಡಿಗಾವ್ಯ ಓ… ಮನಸೇ ಅದ್ಭುತ !ಏನೋ ಭೋರ್ಗರೆತಅದರಲ್ಲೊಂದು ಥಳುಕುಸಣ್ಣ ಸೆಳೆತ ದೇದೀಪ್ಯಮಾನಊಹಿಸಿರಲಿಲ್ಲಶಬ್ದಾತೀತ ಅನುಭೂತಿಮನಸ್ಸು ವಿಚಾರಗಳುಆಯಸ್ಸಿನ ಅಂಕೆವಯಸ್ಸಿನ ಶಂಕೆಇವೆರಡನ್ನೂ ಮೀರಿದನಳನಳಿಸುವ ತಾಜಾತನನವೊನವೋನ್ಮೇಶಎಂಥ ವಿಚಿತ್ರ !ಮನಸಿಗೆ ಪ್ರವಾಸ ಪ್ರಯಾಸಇದ್ದಂತಿಲ್ಲಥಟ್ಟಂತ ಪ್ರತ್ಯಕ್ಷಥಟ್ಟಂತ ಅಂತರ್ಧಾನಸೇರದ ದಾರಿಯೇನಲ್ಲಸೇರುವೆ ಎಂದಾದರೊಮ್ಮೆ

ಎರಡು ಕವಿತೆಗಳು

ಕವಿತೆ ಧನಪಾಲ ನಾಗರಾಜಪ್ಪ ಧನ ನಿನ್ನದನಿಕೇಳರಾರೂನಿನ್ನಪಾಡುನೋಡರಾರೂನೆಲ, ಜಲಜನ, ಮನಅಂತೆಲ್ಲಾ ಯಾಕೆ‌ ಬಡಬಡಿಸುವೆ?ಧನವೇ ಇಂಧನಧನವೇ ಪ್ರಧಾನಜಮಾನ ಇದರ ದೀವಾನನಿನಗೆ ಅರ್ಥವಾಗದೆ ಧನು? ಜಾಡ್ಯ ಇಲ್ಲಿಯ ತನಕಏಡ್ಸ್ ಒಂದರ ಹೊರತುಬಹುತೇಕ ಜಾಡ್ಯಗಳಿಗೆಇಲಾಜು ಮಾಡಬಲ್ಲರುಈಗಿನ ವೈದ್ಯರುಶ್ಲಾಘನೀಯ ಸಾಧನೆಯೇ ಸರಿ ಜಾತಿಯ ಅಹಂ ಕೂಡಾಮಾರಕ ಜಾಡ್ಯ ಅಲ್ಲವೆ?ದೂರವಿರಿ ಇದು ಸಾಂಕ್ರಾಮಿಕಮುಂದೆ ಎಂದಾದರೂಏಡ್ಸಿಗೂ ಸಹಔಷಧ ಕಂಡುಹಿಡಿಯಬಹುದೇನೋ!ಆದರೆ ಜಾತಿಯ ಜಾಡ್ಯಕ್ಕೆಮದ್ದು ಅದೆಂದು ಸಿಗುವುದೋ ಧನು? ***************************************

Back To Top