ಅತೀತ

ಕವಿತೆ

ಅತೀತ

ಪವಿತ್ರಾ

ಕಾಯುತಿಹರಲವರಲ್ಲಿ
ನಿನ್ನಾಗಮಕೆ…
ಇಹದ ಜಂಜಡದ ಜಾತ್ರೆಯ
ಜಯಿಸದಲವರು
ಕೆಲವರದು ಪಲಾಯನ
ಪರದ ಸುಖವನರಸಿ.

ಸೋಲಿನಲು ಗೆಲುವು
ಗೆಲುವಿನಲಿ ನಗೆ ಬುಗ್ಗೆ
ಎನಮೀರಿಪರೆ ಶಾಂತಿ ನೆಮ್ಮದಿಯಲಿ
ಕೇಕೆ ಕಿಲಕಿಲ ಕೇಳರಿತ ನಗುವ ಮೊಗ
ಸೊಗದ ಸೋಗೆಯಲೆ ಹಲವರ
ಹೊಟ್ಟೆಗೆ ಕಿಚ್ಚಿಡುವ ಕಾಯಕವು
ಸಾಗುತಲಿ ಬೀಗುತಲಿ

ಬಿಡದೆ ಎಲ್ಲರನೂ ತನ್ನಾಲಿಂಗನದ
ತೆಕ್ಕೆಯೊಳು ಆಹುತಿಗೈವ ವಿಧಿಕೂಟ
ಮಾಟ ತಪ್ಪಿಪರೆ ಅವರು
ಇವರಿಂದು ನಾಳೆ ಅವರು
ಎಲ್ಲರದೊಂದೊಂದು ನಿಗಧಿ ದಿನ
ದಿನಪನಿಗೆ ಭೇದವಿರದೆ ಬಿಡುವಿರದೆ
ನಡೆದುದೇ ಹಾದಿ.

abstract wave of colors

ಮಕ್ಕಳದು ಬೇಡ ಇರಲಿನ್ನಷ್ಟು ದಿನ
ಈಗ ತಾನೆ ಮದುವೆ
ನಡೆ ನಾಳೆ ಬರುವೆ
ಹಂಬಲಿಪ ಯುವಕನೋರ್ವನ ಮನವಿಗೆ
ಮಣಿವನೇ ಅವನು
ಧೈತ ಧೂತ ಹೆಸರೆಂದರೆ ಭಯ

ಅದಕೇನೋ ಅದರನುಭವ
ಸಾಧುವಾಗದು ನಿಲುಕದೂ ಬಣ್ಣನೆಗೆ
ಗಳಿಗೆ ಗಳಿಗೆಗೆ ಕರೆಗಂಟೆ
ನಿನಾದ ಎಚ್ಚರದ ಸಪ್ಪಳವೊ
ಮಧುರವೊ ಆ ದಿನದ ಸಾಮಿಪ್ಯ
ತನು ತೇಯ್ದು ಉಸಿರು ನಿಲುವ ದಿನ.

***********************************************

One thought on “ಅತೀತ

  1. ಕರೋನಾ ಪೀಡೀತನಾಗಿ ಚೇತರಿಸಿಕೊಂಡ ನನಗೆ ಈ ಕವನ ಸಾಂತ್ವನ ಹೇಳಿದೆ.

Leave a Reply

Back To Top