ಕವಿತೆ
ನಿನ್ನ ಪ್ರೀತಿಗೆ ಅದರ ರೀತಿಗೆ
ಜಯಶ್ರೀ ಭ.ಭಂಡಾರಿ.
ಎಲ್ಲಿಯೋ ಇದ್ದ ನೀನು
ನನ್ನಲ್ಲಿ ಪ್ರೀತಿ ಮೂಡಿಸಿದೆ
ನಿನ್ನ ತಿರಸ್ಕರಿಸುತಲಿದ್ದ ನಾ
ಒಲವಿನ ಸಿರಿಯಾದೆ ನಿನ್ನಲಿ ಸೆರೆಯಾದೆ
ನೀ ಕವಿಯಾದೆ ನಾ ಕವಿತೆಯಾದೆ
ನೀ ಗೀತೆಯಾದೆ ನಾ ಭಾವವಾದೆ
ನಿನ್ನ ರಾಗವಾದರೆ ನಾ ಪಲ್ಲವಿಯಾದೆ
ನೀ ಹೆಜ್ಜೆಯಾದರೆ ನಾ ಗೆಜ್ಜೆಯಾದೆ
ಬಿಟ್ಟಿರಲಾರದ ನೆರಳಾದೆವು
ಜೀವಕೆ ಜೀವ ನಂಟಾದೆವು
ಬಿಡಿಸಲಾರದ ಬಂಧಿಗಳಾದೆವು
ಎಂದೆಂದಿಗೂ ಒಲವ ಜೇನಾದೆವು
ಮೌನಿ ಅವನಿಗೆ ಮಾತಾದೆ
ನಗುವಿಗೆ ಅಮೃತಧಾರೆಯಾದೆ
ಕಂಗಳಕಾಂತಿಗೆ ಜ್ಯೋತಿಯಾದೆ
ಉಸಿರಿಗೆ ಚೈತನ್ಯದ ಚಿಲುಮೆಯಾದೆ
ದೂರದಲಿ ಇರುವವ ಬಂಗಾರದಂತವ
ಬಾಳದಾರಿಗೆ ಗುರಿ ತೋರಿದವ
ಮನದನ್ನೆಗೆ ಕನಸತೋರಣವಾಗಿಸಿದವ
ಬೆವರಗುಳಿಕೆನ್ನೆಯವ ನನ್ನವನವ
ಕಣ್ಣಮಿಂಚಿಗೆ ಸೋತುಬಂದವ
ಮುತ್ತುಗಳ ಮಾಲೆ ತೊಡಿಸಿದವ
ಕೊರಳ ತುಂಬ ಜೇನಹರಿಸಿದವ
ಹೆರಳಿಗೆ ಮಲ್ಲೆಮಾಲೆ ಮುಡಿಸಿದವ
ಮರೆಯಲೆ ಹೆಂಗ ಮರೆತು ಇರಲಿ ಹೆಂಗ
ಅವ ಏನಂದರೂ ನನಗ ಚಂದ
ವೈಯಾರಿ ನೀ ಒಲಿದದ್ದು ಸೊಗಸೆಂದ
ಮುನಸಿನರಾಯ ಬಿರುನುಡಿದರು ಆನಂದ.
ಬಾಳದಾರಿಯಲಿ ಬಿಂಕ ಬಿಟ್ಟವ
ಹೂಪಲ್ಲಕ್ಕಿಯಲಿ ಹೊತ್ತುತಂದವ
ಅವನೆ ಎಲ್ಲ ಅವನಿಲ್ಲದೆ ಏನಿಲ್ಲ
ಅವನೆ ನನ್ನ ನಲ್ಲ ನಗುವಿನಲೆ ಸೆಳೆವನಲ್ಲ
*******************************
Thanks