Category: ಕಾವ್ಯಯಾನ

ಕಾವ್ಯಯಾನ

ಮನಿಷಾ

ಕವಿತೆ ಮನಿಷಾ ವೀಣಾ ನಿರಂಜನ್ ಮೊದಲೇ ಕುರುಡಿಯಾಗಿದ್ದನ್ಯಾಯ ದೇವತೆಯಮೂಗಿಯನ್ನಾಗಿಸಿದರು ಮಗಳೇನಿನ್ನ ನಾಲಿಗೆ ಕತ್ತರಿಸಿಅವರ ಗಂಡಸುತನಕ್ಕೆ ಧಿಕ್ಕಾರವಿರಲಿ ಅವರ ಬೆಚ್ಚನೆಯ ಮನೆಗಳಲ್ಲಿಬಚ್ಚಿಟ್ಟ ನಿಧಿಯಂತೆ ನೀನೂ ಕೂಡಅರಿತಿದ್ದರೆ ಸಾಕಿತ್ತು ಅವರುಹತ್ತೂ ಕಡೆ ಚಾಚಿದ ವಿಷ ಸರ್ಪಗಳಹೆಡೆ ಮುರಿದು ಕಟ್ಟುತ್ತಿದ್ದರು ಅರಿಯದಾದರೆ ಅವರುನಿನ್ನೊಳಗಿನ ಕುಡಿಯನ್ನುಹೊರಲಾರದಷ್ಟು ಪಾಪದಮೂಟೆ ಹೊತ್ತು ನಡೆದರುಸಾವೂ ಕೂಡ ಸಹಜವಾಗಿಸುಳಿಯಲಾರದಿನ್ನು ಅವರ ಬಳಿ ಇಲ್ಲಿ ವಿಲ ವಿಲ ಒದ್ದಾಡುತ್ತಿದ್ದಾಳೆನ್ಯಾಯ ದೇವತೆನಿನ್ನ ನೆತ್ತರ ಬಿಸಿಯ ಸೋಕಿಉರಿಯುತ್ತಿದ್ದಾಳೆ ನಖಶಿಖಾಂತಸತ್ಯದ ನಾಲಿಗೆಯು ನೇತಾಡುತ್ತಿದೆನಿನ್ನ ನಾಲಿಗೆಯ ಹಾಗೇ ತೀರ್ಪು ಏನಾದರೇನು ಮಗಳೇನಿನ್ನ ಜೀವಕ್ಕೆ ಬೆಲೆ ಕಟ್ಟಲಾದಿತೇಬೇಡ […]

ಹೊತ್ತು ಬಂದಿದೆ

ಕವಿತೆ ಹೊತ್ತು ಬಂದಿದೆ ಗಾಂಧಿ ನೀನುದಿಸಿದನಾಡಿನಲೀ… ತೊನೆವ ತರುಗಳಕತ್ತು ಹಿಚುಕಿಜಲದ ಕಣ್ಣಿಗಿರಿವ ಹೊತ್ತು ಬಂದಿದೆ ಹರಿವರಿವ ನದಿಯದಿಕ್ಕು ದಿವಾಳಿಯಾಗಿಸಿಬರಿದಾಗಿಸುವ ಹೊತ್ತು ಬಂದಿದೆ ಖಗ ಮೃಗ ಹುಳ ಹುಪ್ಪಟೆಗಳನ್ನು ಬಿಡದೇ ಹುರಿದುರಿದು ಮುಕ್ಕುವ ಹೊತ್ತು ಬಂದಿದೆ ಸಾವಿರಾರು ವರುಷಗಳ ತಪೋನಿರತ ಶಿಲಾತಪಸಿಗಳಎದೆಗೆ ಮದ್ದಿಕ್ಕುವ ಹೊತ್ತು ಬಂದಿದೆ ಕಿವಿಗಡಚಿಕ್ಕುವಬೈರಿಗೆಗಳನ್ನಿಕ್ಕಿನೆಲದೊಡಲ ರಕ್ತ ಬಸಿವ ಹೊತ್ತು ಬಂದಿದೆ ಹೊತ್ತಿಗೊತ್ತಿಗೆ ಉರಿವ ದಿನಕರನ ಸಖ ಓಜೋನನ ಛಿದ್ರವಾಗಿಸುವ ಹೊತ್ತು ಬಂದಿದೆ ಚಂದಿರನ ಅಂಗಳದಲ್ಲಿಳಿವಮಂಗಳನ ಕೇರಿಯಲ್ಲಿಸುತ್ತುವ ಹೊತ್ತು ಬಂದರೂ… ವಿಜ್ಞಾನ ಜ್ಞಾನವೋ,ಅಜ್ಞಾನವೋ ಮಂಕುಗವಿದ ಬುದ್ದಿಗೆ ಲದ್ದಿ […]

ಫಿವಟ್ ಕವಿತೆ…

ಕವಿತೆ ಫಿವಟ್ ಕವಿತೆ…. ಹುಳಿಯಾರ್ ಷಬ್ಬೀರ್ 01 ಬರೆಯಲೆಂದುಕುಳಿತಾಗಅವಳನ್ನು ಬರೆದೆನನ್ನನ್ನು ನಾನೇಮರೆತೆ….! 02 ಕಣ್ಣಲ್ಲಿ ಕದ್ದುಮನಸ್ಸಲ್ಲಿಇಳಿಯುವ ಮುನ್ನಗಂಟಲಿಗೆಇಳಿಸಿದ್ದೆನೀ ಕೊಟ್ಟದೊಡ್ಡ ವರ…! 03 ಗುಂಡು ಅವಳುಇಬ್ಬರೂ ನಶೆಯೇಗುಂಡು ತಾತ್ಕಾಲಿಕ ನಶೆಅವಳು ನಶೆಯಪರಾಕಾಷ್ಠೆ….! 04 ಮನಸ್ಸಿಗೆನೈವೇದ್ಯ ಎಣ್ಣೆಯಲ್ಲಿಆಗಬೇಕಂತೆನೋವುನಿರಾಳವಾಗಲುಲೋಟ ಚಿಯರ್ಸ್ಎನ್ನಲು…! 05 ಕುಡಿದಷ್ಟುಮಾತು ಜಾಸ್ತಿ ಆಯಿತುಪದೇ ಪದೇಅವಳ ನೆನಪುಆಯಿತು…! **************************

ಪಾತ್ರ

ಚಂದ್ರಿಕಾ ನಾಗರಾಜ್ ಬರೆಯುತ್ತಾರೆ–
ಹುಡುಕಬೇಡಿ
ಹಾಗೊಂದು ವೇಳೆ ಸಿಕ್ಕರೆ
ನಿಮ್ಮೊಳಗೆ ಹಿಡಿದಿಟ್ಟುಕೊಳ್ಳಿ

ಗಾಯ

ಕವಿತೆ ಗಾಯ ಕಾತ್ಯಾಯಿನಿ ಕುಂಜಿಬೆಟ್ಟು ನಾನೇ ಒಂದು ಗಾಯ!ಆಳವಾಗುತ್ತಲೇ ಇರುತ್ತೇನೆಹೃದಯದ ತಳದವರೆಗೂ…!ನೋವಿನ ಹಲ್ಲಿಗೇ ನಾಲಗೆಯುಮತ್ತೆ ಮತ್ತೆ ತುಡಿಯುವಂತೆತಾನೇ ತಾನಾಗಿ ನೊಂದು ಕೀವಾಗಿ ನವೆಯಾಗಿಬೆರಳುಗಳನ್ನು ತುಡಿಸುತ್ತದೆನಿದ್ದೆಯಲ್ಲೂ ಅಭ್ಯಾಸವಾಗಿ! ” ಉಬ್ಬಸಕ್ಕಾದರೂ ಮದ್ದುಂಟು… ಅಭ್ಯಾಸಕ್ಕಿಲ್ಲ!” ಎ೦ದುಬಿಟ್ಟರುಹಾಗನ್ನುವುದೇ ಅಭ್ಯಾಸವಾಗಿದ್ದಗೀಳುತಜ್ಞರು! ಬದುಕಿನ ಕಷ್ಟಗಳನ್ನು ಹಾಡುಹಗಲಲ್ಲೇ ಕಂಡುಹನಿಹನಿದು ಬತ್ತಿವೆ ಕಂಗಳ ಕೆರೆಗಳು !ವಿಲಿವಿಲಿ ಒದ್ದಾಡುತ್ತಿವೆ ಕಣ್ಣ ಮೀನುಗಳು!ನಿದ್ದೆಯಲ್ಲಿ ನಕ್ಷತ್ರ ಸುಟ್ಟುಕಣ್ಣಬೊಂಬೆಗಳು ಉರುಳಿಬಾಯಿಯ ವಸಡಿಗೆ ಬೀಳುತ್ತವೆಹಲ್ಲುಗಳು ಕಳಚಿ ಹೃದಯಕ್ಕೇ ಉದುರಿಕಚ್ಚಿ ಕಚ್ಚಿ ಕಿತ್ತು ತಿನ್ನತೊಡಗುತ್ತವೆ!ಕೈಗಳು ತಲೆಯನ್ನೇ ಕಿತ್ತುಪಕ್ಕಕ್ಕೆ ಎಸೆಯುತ್ತವೆಮೆದುಳನ್ನೇ ಗೆದ್ದಲು ತಿನ್ನುವನೋವನ್ನು ಸಹಿಸಲಾಗದೆ ಚೀರಿ!ಮುಂಡವು ಮಂಡೆಯಿಲ್ಲದೆಯೇಆಗ […]

ಅವಳೂ ಹಾಗೇ .

ಕವಿತೆ ಅವಳೂ ಹಾಗೇ . ಡಾ. ರೇಣುಕಾ ಅರುಣ ಕಠಾರಿ ಬೀಜ ಸಸಿಯಾಗುವ ಹಾಗೆ,ಸಸಿ ಮರವಾಗುವ ಹಾಗೆ,ಮರದಲಿ ಕಾಯಾಗಿ ಹಣ್ಣಾದ ಹಾಗೇಅವಳೂ ಹಾಗೆ., ಮಳೆ ಹನಿಗೆ ಸೂರ್ಯ ಚುಂಬನಕಾಮನ ಬಿಲ್ಲಿನಂದದ ಹಾಗೇಅವಳೂ ಹಾಗೇ., ಮುಡಿಬಿಟ್ಟು ಮೊಲೆಮೂಡಿಚಿತ್ತರಾದಿ ರವಕೆ ಬಿಗಿಯಾದ ಹಾಗೇಅವಳೂ ಹಾಗೇ., ನಿತ್ಯವೂ ಕುಡಿ ಕುಡಿದಷ್ಟುಮಧು ತು..$ ತುಂಬಿ ಬಂದುಕಪ್ಪೆ ಚಿಪ್ಪಿನ ಮುತ್ತಿನ ಹೊಳಪಿನ ಹಾಗೇಅವಳೂ ಹಾಗೇ., ಮೈಮುರಿದು ನಾಚಿ ಕೆನ್ನೆ ಕೆಂಪಾದAತೆಮುಸ್ಸೂಂಜೆ ಮೂಡಣ ನಕ್ಕಂತೆಅವಳೂ ಹಾಗೇ., ಬಯಕೆಯ ಕಾತರಕೆ ಬಾಯಾರಿದಳವಳುಬಾಯಾರಿದೆ ನೆಲಕ್ಕೆಮಳೆ ಬೀಳುವ ತವಕವು ಕಾದಂತೆಅವಳೂ […]

ಕ್ಷಮಿಸು ಮಗಳೇ,

ಕವಿತೆ ಕ್ಷಮಿಸು ಮಗಳೇ, ಬಾಲಾಜಿ ಕುಂಬಾರ ಕ್ಷಮಿಸು ಮಗಳೇ,ನಿನಗೆ ನಾಲಿಗೆ ಕತ್ತರಿಸಿದಾಗನಮಗೂ ನಾಲಿಗೆ ಮೇಲೆ ಗಾಯವಾಗಿದೆ,ಆದರೆ ಮಾತನಾಡಲು ಆಗಲಿಲ್ಲ.ಮಾತು ಮೌನವಾಗಿದೆ, ವೇದನೆ ಮಿತಿಮೀರಿದೆ, ಕ್ಷಮಿಸು ಮಗಳೇ,ನಿನಗೆ ಕಾಲು ಕತ್ತರಿಸಿ, ಕೈ ಮುರಿದಾಗಕಾಲುಗಳಿಗೆ ನೋವಾಗಿದೆ,ಕೈಗಳಿಗೆ ಬೀಗಗಳಿವೆ, ಕೈಕಟ್ಟಿ ಕುಳಿತಿದ್ದೇವೆನಿನ್ನ ‘ಜೀವ’ ಕಳೆದುಕೊಂಡು,ಮತ್ತದೇ ಸೂತಕದ ಮನೆಯಲ್ಲಿ, ಕ್ಷಮಿಸು ಮಗಳೇ,ಇದು ‘ರಾಮರಾಜ್ಯ’ ಇಲ್ಲಿ ಸ್ವಾತಂತ್ರ್ಯವಾಗಿತಿರುಗಾಡುವಂತೆ ಹೇಳಿದ್ದೇವೆ, ಆದರೆರಾಮರಾಜ್ಯದ ಕೀಚಕರ ಕೈಯಿಂದ ನಿನ್ನನ್ನುರಕ್ಷಿಸಲು ಆಗದೇ, ನಾವು ಅಪರಾಧಿಗಳಾಗಿದ್ದೇವೆ. ಕ್ಷಮಿಸು ಮಗಳೇ,ಈಗ ಕೌರ್ಯ ಮೆರೆಯುತ್ತಿದೆ, ನ್ಯಾಯ ಗಂಟಲಲ್ಲಿ ಉಸಿರುಗಟ್ಟಿದೆ, ಇನ್ನು ಮನುಷ್ಯತ್ವ ಎಂಬುದು ಮರೀಚಿಕೆಯಾಗಿದೆ, […]

ಗಝಲ್

ಕವಿತೆ ಗಝಲ್ ರತ್ನರಾಯ ಮಲ್ಲ ಒರಟಾದ ಅಧರಗಳಲಿ ನುಲಿಯುತಿದೆ ನಿನ್ನದೆ ಹೆಸರುಎದೆಯ ಎಡ ಭಾಗದಲ್ಲಿ ಕುಣಿಯುತಿದೆ ನಿನ್ನದೆ ಉಸಿರು ಹಗಲಿರುಳು ಕಳೆಯುತಿರುವೆ ನಿನ್ನಯ ಕನವರಿಕೆಯಲ್ಲಿಕನಸುಗಳೆಂಬ ಹೆಪ್ಪಿನಿಂದ ಭಾವವು ಆಗಿದೆ ಮೊಸರು ಈ ರಾತ್ರಿಯು ಹರಿಯುತಿದೆ ನಿದ್ರೆಯ ಆಲಿಂಗನವಿಲ್ಲದೆಹಾಸಿಗೆಯ ತುಂಬೆಲ್ಲ ಬರಿ ನಿನ್ನ ಮಾದಕತೆಯ ಒಸರು ಗಾಳಿ ಬೀಸುತಿದೆ ಅನುರಾಗದ ಕಡಲು ಭೋರ್ಗರೆಯಲುಕಂಗಳ ಬಾಯಾರಿಕೆಯಲ್ಲಿ ಬರಿ ನಿನ್ನ ಬಿಂಬದೆ ಕೊಸರು ‘ಮಲ್ಲಿ’ಯ ಈ ಬಿಳಿ ಬಾಹುಗಳು ನಿನ್ನನ್ನೇ ಹುಡುಕುತಿವೆಅಂತರವನ್ನು ಮುಗಿಸಲು ಅನುವಾಗಿದೆ ಪ್ರಣಯದ ಕೆಸರು ********************************

ಸೌಹಾರ್ದ

ಕವಿತೆ ಸೌಹಾರ್ದ ರೇಷ್ಮಾ ಕಂದಕೂರು ಜಾತಿಮತದ ಭೇದಾಗ್ನಿ ಮನೆ ಮನಗಳಲಿ ಆಗ್ನಿಸ್ಪರ್ಷ ಗೈದಿದೆಪ್ರೀತಿ ವಿಶ್ವಾಸದ ದ್ವಂಸವಾಗುತ ನೀತಿ ನಿಯಮ ಸಾಯುತಿದೆ ನೂರು ಮತಗಳ ಸಾರ ಒಂದೇ ತಿಳಿಯದ ಗಾಂಪರೊಡೆಯನಂತಿದೆಭ್ರಾಂತಿ ಮೋಹಗಳು ದೇಶಪ್ರೇಮ ನೆಮ್ಮದಿಗೆ ಭೀತಿ ಹಬ್ಬಿಸುತಿದೆ ಕೋಮು ಸೌಹಾರ್ಧವನು ಕ್ರೋದಾಗ್ನಿಯಲಿ ತಳ್ಳುತಲಿದೆಸದ್ಗುಣಗಳು ಕ್ಷಾಮಕೆ ತುತ್ತಾಗಿ ಮಾನವೀಯತೆ ಬೆಂದಾಗಿದೆ ಜಾತಿ ಜಂಜಡದಲಿ ನೀತಿಯನು ಬಲಿಕೊಟ್ಟು ಗಹಗಹಿಸುತಿದೆಕುಟಿಲತೆ ವರ್ಧಿಸಿ ಭಾವೈಕ್ಯತೆಗೆ ಮಸಿಬಳಿದಂತಾಗಿದೆ ದಯೆ ಪ್ರೇಮ ಗುಣ ಬೆಳೆಸಿಬಿದ್ದವರನೆತ್ತಿ ಪೋಷಿಸುವಂತಾಗಬೇಕಿದೆಸ್ನೇಹ ಸೌಗಂಧವ ತಾಗಿ ಸಿಪ್ರೀತಿರಸ ಉಣಿಸುವಂತಾಗಬೇಕಿದೆ ************************

Back To Top