ಕಾವ್ಯಯಾನ
ಪ್ರೀತಿಸಲಾಗುವುದಿಲ್ಲವಲ್ಲ ದೀಪಾ ಗೋನಾಳ.. ದ್ವೇಷಿಸುವಷ್ಟು ಸುಲಭವಾಗಿ ಪ್ರೀತಿಸಲಾಗುವುದಿಲ್ಲವಲ್ಲ ಎನೆಲ್ಲ ನೋವು ಹತಾಷೆ, ಸಂಕಟ ಅನುಭವಿಸಿಯು ಅನದೆ ಉಳಿಯಬೇಕಲ್ಲ ಹಾವು ತುಳಿದರೂ ಹೂವು ತುಳಿದದ್ದೆಂದು ಸಂಭಾಳಿಸಬೇಕಲ್ಲ ಕನಸು ಕನವರಿಕೆ ಬೆಸುಗೆ ಹಾಕಿ ಚೆಂದದ ಮಾತ ಹೇಳಿದಾಗಲೂ ಮುನಿಸು ಮಾಡುವ ಗೆಳೆಯನ ಉಳಿಸಿಕೊಳಬೇಕಲ್ಲ ಕಾಡಿಗೆಯಿಟ್ಟ ಕಣ್ಕೆಳಗಿನ ಕಪ್ಪು ವರ್ತುಲಕೆ ಬೆಳ್ಳಂಬೆಳ್ಳಗಿನ ಪೌಡರು ಹಾಕಿ ನಿಂದು, ಒಂದೂದ್ದದ ನಿದ್ದೆ ಮಾಡಿದೆ ಕನಸಿನ ತುಂಬ ನೀನೆ ಎಂದಂದು ಅವನ ಕನಸಿನ ಹೆಣಿಕೆಗೆ ದಾರವಾಗಬೇಕಲ್ಲ ಭುಜ ಹಿಡಿದು ಅಲುಗಿಸಿದಾಗೆಲ್ಲ ಕಳೆದು ಹೋದ ಚಿಂತೆಜಾತ್ರೆಯ ಮುಚ್ಚಿಟ್ಟು […]
ಕಾವ್ಯಯಾನ
ತಾಳು ಮನವೆ. ಚೈತ್ರಾ ಶಿವಯೋಗಿಮಠ ತಲ್ಲಣಿಸದಿರು ಮನವೆ! ದಟ್ಟೈಸುವ ಕಾರ್ಮೋಡಗಳ ಸುರಿದು ಹಗುರಾಗಿ ಮತ್ತೆ ಕಂಗೊಳಿಸದೆ ನೀಲ ನಭವು??? ತಲ್ಲಣಿಸದಿರು ಮನವೆ! ಕಗ್ಗತ್ತಲ ಒಡಲ ಹರಿದು ಪ್ರಖರವಾಗಿ ಇರುಳ ಗರ್ಭದಿ ಜನಿಸಿ ಬರುವನಲ್ಲವೆ ಇನನು?? ತಲ್ಲಣಿಸದಿರು ಮನವೆ! ಬೊಬ್ಬೆಯಿಟ್ಟು ಚಂಡಿಹಿಡಿದ ಕಂದನ ಹಾಲುಣಿಸಿ ಸಂತೈಸಲು ಬರಲಾರಳೇನು ಅಬ್ಬೆಯು?? ತಲ್ಲಣಿಸದಿರು ಮನವೆ! ಶೀತ ಹೇಮಂತನ ಕೊರೆತವ ಕರಗಿಸಿ ಬಿಸುಪ ಮುದ ನೀಡಲು ಬರುವಳಲವೆ ಗ್ರೀಷ್ಮಳು? ತಲ್ಲಣಿಸದಿರು ಮನವೆ! ಕಾಲಚಕ್ರವದು ನಿಲದೆ ತಿರುಗುವುದು ಅಹಿತವು ಅಳಿದು ಹಿತವು ನಿನಗಾಗಿ ಬಾರದೆ?? […]
ಕಾವ್ಯಯಾನ
ಗಝಲ್ ಸ್ಮಿತಾ ರಾಘವೇಂದ್ರ ಗಜಲ್ ಎಡ ಬಿಡದೇ ಸುಳಿದಾಡುವ ನೋವು ಹಿಂಸೆ ನೀಡುತ್ತದೆ. ಗವ್ ಎನ್ನುವ ತಣ್ಣಗಿನ ಮೌನ ಉಸಿರುಗಟ್ಟಿಸುತ್ತದೆ. ಗಾಳಿಯಲಿ ವಿಹರಿಸುವಾಗ ಭಾವಗಳು ಸದಾ ನಿರಾಳ/ ಬಣ್ಣದ ಚಿತ್ರಗಳ ಹಿಂದಿನ ಅಳಲು ಹೆಪ್ಪುಗಟ್ಟುತ್ತದೆ. ನೋಟಕ್ಕೆ ನಿಲುಕಿದ್ದೆಲ್ಲ ನಂಬಲರ್ಹವೇನು ಇಲ್ಲಿ/ ತಾಳ್ಮೆ ಕಳೆದುಕೊಂಡಾಗ ಸತ್ಯವೂ ಸುಳ್ಳೆನಿಸುತ್ತದೆ ತಡರಾತ್ರಿಯಲಿ ಬೆಚ್ಚಿ ಬೆವರೊಡೆದ ಒದ್ದೆ ನೆನಪು / ಕದ ಮುಚ್ಚುವಾಗ ಅಂತರಂಗ ತುಟಿ ಬಿರಿಯುತ್ತದೆ. ಆಡಿಕೊಂಬವರ ಅನುರಾಗವೋ ಭ್ರಮೆಯ ಮುಸುಕು/ ಆಪ್ತ”ಸ್ಮಿತ”ಕುಹಕವೆನಿಸಿದಾಗ ಎಲ್ಲವೂ ಸ್ತಬ್ಧವಾಗುತ್ತದೆ **************
ಕಾವ್ಯಯಾನ
ಈ ದಾರಿಗಳಿಗೆ ಎಷ್ಟೊಂದು ಮುಖ ಸತ್ಯಮಂಗಲ ಮಹಾದೇವ ಬದುಕು ಒಂದು ಜೀವನ ನೂರು ಮೊಗ ಒಂದು ಮುಖವಾಡ ಹಲವು ಪದ್ಯ ಒಂದೇ ಅನೇಕ ಪದಗಳು ಜೀವ ಒಂದೇ ಜೀವಿಸುವ ದಾರಿ ನೂರು ಆಯ್ಕೆಗೊಂದು ಮುಖ ನಡೆಗೊಂದು ಮುಖ ನೋಟದ ದಾರಿಗೂ ಒಂದು ಮುಖ ಮುಖವಾಡದೊಳಗೆ ಉಸಿರುಕಟ್ಟುವಾಗ ಝಳ ಝಳನೆ ಉದುರುವ ನೀರು ಉಪ್ಪು ನದಿಯ ನೋಡಿ ಖುಷಿ ಇಟ್ಟೆ ಕಾಲು ಒಳಸೆಳೆತದ ದಾವಂತ ಬೊಗಸಯಲ್ಲೆ ಹಿಡಿದು ಕುಡಿದೆ ಜೀವ ಉಳಿಸಿಕೊಂಡೆ ಈಗ ಜೀವ ಆ ನೀರಿನ ಹೆಸರಲ್ಲಿದೆ […]
ಕಾವ್ಯಯಾನ
ಮರಳಿ ಕಟ್ಟಬೇಕಲ್ಲವೇ ಸಂಮ್ಮೋದ ವಾಡಪ್ಪಿ ಹದವಾದ ಮಣ್ಣ ಅಡಿಯಿಂದ ತೇವವಾದ ಕಣ್ಣು, ನೋವುಂಡ ಒಡಲಿಂದ ಎದ್ದುನಿಲ್ಲುತಿದೆ ಒಂದು ಮೊಳಕೆ ಚಿಗುರೊಡೆದು ಟಿಸಿಲಾಗಿ ಹರಡಿದೆ ಬೆಂದ ಧರೆಗೆ ಆಗಸದ ಮುತ್ತು ಈ ಕೂಸಿಗಾಗಿಯೆ ಮೇಲೇಳಲೆಂದು ಕೂಸು ನಗುನಗುತ ಉದರದಿ ಸರಿದು ಕಾಲಿಗೆ ಶಕ್ತಿ ಅಲ್ಪ, ಅಂಬೆಗಾಲಲಿ ಎದ್ದು ಹಗಲಿರುಳು ಓಟ ಕಲಿಸುತಿದೆ ಜೀವನ ಪಾಠ ತಾಯ ಸೆರಗಲಿ ಧೈರ್ಯ, ವಸುದೇವನ ಮೌಲ್ಯ ಎತ್ತರವಾಗುತಿದೆ ಬಾಳು, ಧ್ಯೇಯಗಳ ತುಂಬಿ ಕೌಶಲ್ಯಲ ಅತ್ತ ಇತ್ತ, ಕಲಿಕೆ ಅನುಭವಗಳು, ನವ್ಯಗ್ರಹಿಕೆ ನಡೆಯು ನುಡಿಯು,ಹೊಸ […]
ಕಾವ್ಯಯಾನ
ಅವಳು ನಾಗರೇಖಾ ಗಾಂವಕರ ಅವಳು -1 ಬಿಂಬಕ್ಕೆ ಸರಿಯಾಗಿ ಪ್ರತಿಬಿಂಬ ಮೂಡಿಸುವ ಕನ್ನಡಿಯ ನಾಜೂಕಿನಿಂದಲೇ ಕಾಯ್ದಿರಿಸಿದ್ದಾಳೆ ಅವಳು ಕನ್ನಡಿ ಹೇಳುತ್ತಲೇ ಇರುವ ಬಿಂಬ ಪ್ರತಿಬಿಂಬದ ಸರಳ ಸೂತ್ರ ಆಕೆಗೇನೂ ಅರ್ಥವಾಗುವುದಿಲ್ಲ. ತಲ್ಲಣಗಳ ತಕ್ಕಡಿ ಹಿಡಿದೇ ಎದುರು ಬದುರಾಗುವ ಮುಖಗಳು ಬಿಂಬ ಪ್ರತಿಬಿಂಬವಾದರೂ ಒಂದನ್ನೊಂದು ಬೆಂಬಲಿಸುವುದೇ ಇಲ್ಲ ಬಿಂಬದ ಎಡಕೈ ಎತ್ತಿದರೆ ಕನ್ನಡಿಯಲ್ಲಿ ಏರುವ ಬಲಗೈ ಕನ್ನಡಿಯ ಬೆನ್ನಿಗಂಟಿದ ಪಾದರಸದ ಲೇಪನ ಅಲ್ಲಲ್ಲಿ ಕಿತ್ತು ಹೋಗಿದೆ ಈಗೀಗ ಬಿಂಬ ಪ್ರತಿಬಿಂಬ ಮೂಡಿಸುವುದು ಕನ್ನಡಿಗೂ ಕಷ್ಟವಾಗಿದೆ. ಆದರೂ ಆ ಕನ್ನಡಿಯಲ್ಲಿಯೇ […]
ಕಾವ್ಯಯಾನ
ವರ್ಕ್ ಫ್ರಂ ಹೋಂ ಸುಜಾತಾಗುಪ್ತ ವರ್ಕ್ ಫ್ರಂ ಹೋಂ ವರ್ಕ್ ಫ್ರಂ ಹೋಂ ಕೇಳಲು ಖುಷಿಯಾಯಿತು ಕರೋನ ಬಿಸಿಯಲು ಮನ ತಂಪಾಯ್ತು ಪತಿರಾಯನ ಸಾಂಗತ್ಯಕೆ ವಾರಾಂತ್ಯವೇ ಬೇಕಿಲ್ಲ ಅಹಾ..ಎನಿಸಿತು ಆ ಕ್ಷಣ. ಮನೆಯಲ್ಲೇ ಇದ್ದರೂ ಕಂಪ್ಯೂಟರ್ ಸಂಗ ಉಷೆ ಸಂಧ್ಯೆಯ ಸ್ವಾಗತಿಸೋತನಕ ತಪ್ಪದ ಬವಣೆ.. ಆಯ್ತು ಮನೆಯೇ ಕಛೇರಿ.. ಕರೋನ ಬೆನ್ನಲೆ ಬಂತು ಮಕ್ಕಳಿಗೆ ಬೇಸಿಗೆ ರಜೆ ಶಾಲೆಯು ಸ್ವೇಚ್ಛೆಯ ನೀಡಿತ್ತು ಕರೋನ ಅದ ನುಂಗಿತ್ತು ರಜೆಯ ಮಜದ ಮೂಡಲ್ಲಿದ್ದ ಮಕ್ಕಳಿಗೆ ಗೃಹ ಬಂಧನ… ಅದೆಂಥ ವಿಪರ್ಯಾಸ.. […]
ಕಾವ್ಯಯಾನ
ಪದ್ಯ ಸೌತೇಕಾಯಿ ಅಶ್ವಥ್ ಪದ್ಯ ಸೌತೇಕಾಯಿ ರಾಮನವಮಿಗೆಂದೇ ಪೋಷಿಸಿ ಪಾಲಿಸಿ ಬೆಳೆಯಿಸಿದ ಸೌತೇಬಳ್ಳಿ ನೀರುಣಿಸಿ ಹೂವರಳಿ, ಈಚು ಕಾಯಾಗಿ ಹೊರಳಿ ಮರಿ ಮುನ್ನೂರೆಣಿಸುವ ಉದ್ದ ಬಳ್ಳಿ ರುಚಿಯಲ್ಲೆಣೆಯಿಲ್ಲ ಹೋಲಿಕೆಯೆಲ್ಲಾ ಸಣ್ಣ ಹೇಳತೀರದ ಹೊಳಪು, ಕೆನೆಯಂಥಾ ಬಣ್ಣ ಬಾಯಿ ತಾಕಿದರಾಗ ಗರಿಗರಿಯಾದ ಸದ್ದು ನಾಲಗೆಯು ಬಾಚಿ ಮಾಡುವುದು ಮುದ್ದು ತಣ್ಣನೆಯ ಆ ಅನುಭವ ತರಿಸುವುದು ಮುಗುಳ್ನಗೆ ಹೊತ್ತ ಮುಖವನ್ನೊಂದು ಎಂಥಾ ಬದಲಾವಣೆ , ಮನ ಧಿಮ್ಮಗೆ ಸಾಧ್ಯವುಂಟೇ ಒಂದು ಸೌತೇಕಾಯಿಗೆ ನುಂಗಿಯಾದ ಮೇಲೆ ರುಚಿಯೆಲ್ಲ ಮಾಯ ಆದರೂ ಮುಗಿದೇ […]
ಕಾವ್ಯಯಾನ
ಮಾರ್ಕೆಟ್ಟು, ಮಾತು ಮತ್ತು ಶಬರಿ ಅಂಜನಾ ಹೆಗಡೆ ಬ್ರ್ಯಾಂಡೆಡ್ ಶರ್ಟು ತೊಟ್ಟು ಸರ್ವಾಲಂಕೃತನಾದ ರಾಮ ಮಾರ್ಕೆಟ್ಟಿನಲ್ಲಿ… ಇದೇ ಮೊದಲಭೇಟಿ!! ಕಣ್ಣಗಲಿಸಿ “ಹೌ ಆರ್ ಯೂ” ಎಂದು ಕೈ ಕುಲುಕಿದೆ ಥಟ್ಟನೆ ಪ್ರತ್ಯಕ್ಷನಾಗಿದ್ದಕ್ಕೆ ಒಂದು ಪ್ರೀತಿಯ ಆಲಿಂಗನ… ಬಿಲ್ಲು ಬಾಣಗಳೆಲ್ಲಿ ಎಂದೆ… ಉತ್ತರವಿಲ್ಲ ಕಣ್ಣು ಮಿಟಕಿಸಿದ ಥೇಟು ಕಮರ್ಷಿಯಲ್ ಸಿನೆಮಾವೊಂದರ ನಾಯಕನಂತೆ… ಕಣ್ತಪ್ಪಿಸಿಕೊಂಡಿದ್ದ ಟೀನೇಜಿನ ಕನಸೊಂದು ವನವಾಸದಿಂದ ಮಾರ್ಕೆಟ್ಟಿಗೆ… ಮಿಟಕಿಸಿದ್ದು ಎಡಗಣ್ಣೋ ಬಲಗಡೆಯದೋ ಗೊಂದಲ… ಕೌಸಲ್ಯೆ ಸುಮಿತ್ರೆ ಅಹಲ್ಯೆ ಸೀತೆ…. ಎಲ್ಲರ ಪ್ರೀತಿಯ ರಾಮ ಅದ್ಯಾರ ಹಂಬಲಗಳ ಉತ್ಸವಮೂರ್ತಿ […]
ಗಝಲ್
ಗಝಲ್ ವಿನಿ ಬೆಂಗಳೂರು ಒಲವ ಬಂಧದಲಿ ಮನವು ಉಲ್ಲಾಸದಿ ತೇಲುತಿದೆಯಲ್ಲ ಗೆಳತಿ ಬಾಳ ಪಯಣದಲಿ ಸಂತಸವೆ ತುಂಬುತಿದೆಲ್ಲ ಗೆಳತಿ ಪ್ರಕೃತಿಗೆ ಮತ್ತೆ ಚೈತ್ರ ಮೂಡಿಸಿ ವಸಂತ ನಗುತಿದೆಯಲ್ಲ ನೋಡು ಕವಿ ಮನದಲಿ ಶೃಂಗಾರ ಕಾವ್ಯಕೆ ಮುನ್ನುಡಿ ಬರೆದಿದೆಯಲ್ಲ ಗೆಳತಿ ಮೊದಲ ಮಳೆಗೆ ಹೂಗಳರಲಿ ಸುಗಂಧವನು ಬಿರುತಿದೆಯಲ್ಲ ಇಲ್ಲಿ ಭೃಂಗವದು ಮಕರಂದ ಬಯಸಿ ಹೂಗಳಲಿ ಮಧುವ ಹೀರುತಿದೆಯಲ್ಲ ಗೆಳತಿ ಬೀಸುವ ಗಾಳಿಯಲಿ ಮಾಧುರ್ಯ ತುಂಬಿ ಸೆಳೆಯುತಿದೆಯಲ್ಲ ತಂಪಾದ ಮನದಲಿ ಹೊಸ ಕನಸುಗಳು ಮೂಡುತಿದೆಯಲ್ಲ ಗೆಳತಿ ಕಣ್ಗಳು ತುಂಬಿ ಬಯಕೆಗಳನು […]