Category: ಕಾವ್ಯಯಾನ
ಕಾವ್ಯಯಾನ
ಸಂಕ್ರಾಂತಿ ಕಾವ್ಯ ಸುಗ್ಗಿ ಖುಷಿ ಬೆಳೆಯಬಹುದು. ತಮ್ಮಣ್ಣ ಬೀಗಾರ ಅದೆಲ್ಲೋ ಕಾಣಿಸಿದಬಣ್ಣದ ಚಂಡಿನಂತಹುದೊಂದು ಟಿವಿಯಲ್ಲಿ ಕಾಣಿಸಿತುಮತ್ತೆ ಮತ್ತೆ ಕಾಣುತ್ತ ಜಗತ್ತನ್ನೇ ಆವರಿಸಿತುಜನರೆಲ್ಲ… ದಿಕ್ಕೆಟ್ಟು ಓಡತೊಡಗಿದರುಚಂಡು ಚಂಡಲ್ಲ… ಉದ್ಯೋಗವನ್ನು ಉಂಡುಹಾಕಿತುಯಾರು ಯಾರನ್ನೋ ಹಿಡಿದು ಬಡಿದು ಆಸ್ಪತ್ರೆ ಸೇರಿಸಿತುಮತ್ತೆ ಅದರದ್ದೇ ಸುದ್ದಿ ಹಾಗೂ ಲದ್ದಿವಿಮಾನ ನಿಲ್ಲಿಸಿ ರೈಲು ಬಂಧಿಸಿಬರಿಗಾಲಲ್ಲಿ ಓಡಿಸಿತು… ಜನರನ್ನು ಪೀಡಿಸಿತುಯಾರು ಯಾರೋ ಈ ಚಂಡನ್ನು ಹಿಡಿದುಗೋಲು ಹೊಡೆದರುಕೆಲವರು ಬಹುಮಾನ ಪಡೆದರು… ಇನ್ನೂ ಕೆಲವರುರೂಪಾಂತರಿಸಿ ಮಾರಿದರು… ಕರಾಳ ಚಿತ್ರ ಬರೆಸಿನಾಲ್ಕು ದಾರಿಯಲ್ಲಿ ನೆಟ್ಟು ಹೆದರಿಸಿದರುಬರಬರುತ್ತ ಚಂಡು ಸಹಜವಾಯಿತುಆದರೆ ಬದುಕು ಸಹಜವಾಗಲಿಲ್ಲಕೆಲವರ ಹೊಟ್ಟೆಯಲ್ಲಿ ಚಂಡು ಆಡುತ್ತಲೇ ಇದೆಈಗ ಅದಕ್ಕೆ ಸೂಜಿ ಚುಚ್ಚಿಪುಸ್ಸ್‍ಗೊಳಿಸಿ ಆಟ ನಿಲ್ಲಿಸುತ್ತಾರಂತೆಮತ್ತೆ ಸಂಕ್ರಾಂತಿಯ ಬಣ್ಣದ ಕಾಳಿನಂತೆಸವಿಮಾತು ಕೇಳುತ್ತಿದೆಸಕ್ಕರೆ ಕಾಳು ಕರಗಿದಂತೆ ಕಷ್ಟ ಕರಗಬಹುದುಅಥವಾ ಸವಿಮಾತೂ ಕರಗಬಹುದುಹಬ್ಬದ ಪ್ರೀತಿಯ ಬೆಸುಗೆ ನಮ್ಮಲ್ಲಿ ಇದ್ದರೆ…ಖುಷಿ ಬೆಳೆಯಬಹುದು.