ಸಂಕ್ರಾಂತಿ ಕಾವ್ಯ ಸುಗ್ಗಿ
ನೀವಾದರೂ ಹೇಳಬಲ್ಲಿರಾ ?
ನೂತನದೋಶೆಟ್ಟಿ
ಕಾಸಿಗಾದರೂ ಒಂದಷ್ಟು
ನಿರುಮ್ಮಳತೆ ಸಿಕ್ಕರೆ ವಿಳಾಸ ಹೇಳುವಿರಾ?
ಕವಿತೆ ಬರೆಯುವ ಕೈಗೆ ಪ್ರಶ್ನೆಗಳ ಸೂಜಿಮೊನೆಯ ಸೆಳಕು
ಶನಿ, ರಾಹು, ಕೇತು ಗ್ರಹಣಗಳ
ಗ್ರಹಚಾರ ಬಿಡಿಸಿಕೊಂಡಿರಲ್ಲಾ
ಹೊಳೆವ ಉಂಗುರದ ಬೆರಳುಗಳು ಹಾಕಿದಕವಡೆಯ
ಭೀತಿಗೆ ಏನು ಮಾಡುವಿರಿ ?
ಪುರಭವನದೆದುರುಜೈಕಾರದ
ಜಿದ್ದಾಜಿದ್ದಿನಲ್ಲಿ
ನಸುಕಿನ ಕಸಪೊರಕೆಯ ಕೈ
ಬಾಚುವ ಸತ್ತ ನಾಯಿಯ ವಾಕರಿಕೆಯಲ್ಲಿ
ಉಣಲಾರದ ಸಂಕಟಕ್ಕೆಯಾರಕೈತುತ್ತು ?
ಮಾತಿನಲ್ಲಿ ಮತದಘಾಟು ಹಿಡಿಯುವವರು
ಗಾಂಧಿ, ಬಸವ, ಅಂಬೇಡ್ಕರರನ್ನು
ಬೇಕಾದಾಗ ಅಷ್ಟಷ್ಟು ಬಳಸುತ್ತಾರೆ
ಬಿಸಿಗೆ ಮಂಜುಕರಗಿದ್ದುಅರಿವಿಗೂ ಬಾರದಂತೆ
ತತ್ವಗಳನ್ನು ಹೊದಿಕೆಯಿಂದಾಚೆ
ಎಳೆಯುವವರ ಕಂಡಿರಾ?
ಕವಿತೆಯದಾದರೂಅದೇಕಥೆ
ರೊಚ್ಚು, ರಚ್ಚೆಗಳ ದಂಡಿಗೆ
ಕೊAಬು, ಕಹಳೆಗಳ ದಾಂಗುಡಿ
ಬರೆಯುವ ಕೈಗಳು ಕುಲುಕಿದ್ದುಉಂಟೇ ?
ಸಿದ್ಧಾಂತದ ತಥ್ಯತೀಡಿದರೆತಾನೇ?
ಕಾಸಿಗಾದರೂ ಒಂದಷ್ಟು
ನಿರುಮ್ಮಳತೆ ಸಿಕ್ಕರೆ
ವಿಳಾಸ, ನೀವಾದರೂ ಹೇಳುವಿರಾ?
ಕೇಳುತ್ತಿರುವುದು ನಾನೇ?
ನಿಮ್ಮೆದೆಯ ಪ್ರಶ್ನೆಗೆ
ಧ್ವನಿ ಮೂಡಿದೆ ಅಷ್ಟೇ .