ಸಂಕ್ರಾಂತಿ ಕಾವ್ಯ ಸುಗ್ಗಿ
ಸಂಕ್ರಾಂತಿ.
ಸಾತುಗೌಡ ಬಡಗೇರಿ
ರೈತರ ಮೊಗದಿ ನಲಿವು ಕಾಣುವ
ವರುಷದ ಮೊದಲ ಹಬ್ಬದಿನ.
ಉತ್ತರಾಯಣದ ಪುಣ್ಯದ ಕಾಲವು
ಸಂಕ್ರಾಂತಿ ಹಬ್ಬದ ಈ ಸುದಿನ.
ಬನ್ನಿ!ಬಂಧುಗಳೇ..ನಾಡ ಪ್ರಜೆಗಳೇ
ಎಳ್ಳು ಬೆಲ್ಲದ ಸಿಹಿ ಸವಿಯೋಣ.
ಹಳೆಯದು ಮರೆತು ಹೊಸ ಕನಸನ್ನು
ಕಟ್ಟುತ ಹರುಷದಿ ತೇಲೋಣ.
ಗಿಡಮರ ಚಿಗುರಿ ಹೂವದು ಅರಳಿ
ಕೇಳಲು ಕೋಗಿಲೆ ಇಂಚರವು.
ನಾಡಜನತೆಯ ಮನೆಮನ ಪುಳಕವು
ಕಾಣಲು ಸಂಕ್ರಾಂತಿ ಸಡಗರವು.
ಎತ್ತಿಗೆ ಬಣ್ಣದ ಚಿತ್ತಾರ ಬಳಿಯುತ
ಹಬ್ಬದ ಖುಷಿಯ ಕಾಣುವರು.
ಸಕಲರ ಮನೆಯಲಿ ರಂಗೋಲಿ ಹಾಕುತ
ದೇವನ ಭಕ್ತಿಲಿ ಭಜಿಸುವರು.
ಸಂಕ್ರಾಂತಿ ಸಡಗರ ಉಳಿಯಲಿ ಅನುದಿನ
ನಾಡಿನ ಸಂಸ್ಕೃತಿ ಹಿರಿತನವು.
ಸಕಲರ ಬಾಳು ನೆಮ್ಮದಿ ಕಾಣಲು
ದೈವದ ಅನುಗ್ರಹ ಬಯಸುವೆವು.
ಚಂದ ಪದ್ಯ..
ಧನ್ಯವಾದಗಳು
ಸಂಕ್ರಾಂತಿಯ ಸೂಕ್ತವಾದ ಚಂದದ ಕವಿತೆ….
ಧನ್ಯವಾದಗಳು ತಮಗೆ
ಚೆಂದದ ಕವನ
ಚೆಂದದ ಕವನ
ಚಂದದ ಕವಿತೆ
ಸುಂದರವಾಗಿ ಮೂಡಿಬಂದಿದೆ ಸರ್