Category: ಕಾವ್ಯಯಾನ

ಕಾವ್ಯಯಾನ

ಮುಸ್ಸಂಜೆ

ಕೊರಡಿನ ಆಸನ ಕೂಡಾ
ನಿನ್ನ ತೋಳ ದಿಂಬಿಗೆ
ನಾ ತಲೆ ಆನಿಸಲು
ರೇಶಿಮೆ ಸುಪ್ಪತ್ತಿಯ
ಸ್ಪರ್ಶ ಆಗಿದೆ

ಮಾತು ಮತ್ತು ಹೂ

ಕವಿತೆ ಮಾತು ಮತ್ತು ಹೂ ಸಿದ್ಧರಾಮ ಕೂಡ್ಲಿಗಿ ಅವರಿವರು ಆಡಿದ ಮಾತುಗಳನೀಗ ಹೆಕ್ಕುವುದೇ ಒಂದು ಕೆಲಸವಾಗಿದೆ – ಕೆಲವು- ತರಗೆಲೆಗಳಂತೆ ಕಣ್ಣೆದುರೇ ತೂರಿಹೋಗುತ್ತವೆ – ಕೆಲವು- ನೆಲದಾಳದ ಎದೆಯಲಿ ಭದ್ರವಾಗಿ ಕೂತು ಚಿಂತಿಸಿ, ಮೊಳಕೆಯೊಡೆದು ಗಿಡವಾಗುತ್ತವೆ ಕೆಲವು ಹೂವರಳಿಸುತ್ತವೆ ಕೆಲವು ಮುಳ್ಳುಗಳಾಗುತ್ತವೆ – ಕೆಲವಂತೂ- ಹೆಮ್ಮರಗಳಾಗಿ ಬೀಳಲು ಬಿಟ್ಟುಬಿಡುತ್ತವೆ – ಕೆಲವು- ಮಾತುಗಳನ್ನು ಕನ್ನಡಿಯ ಮುಂದೂ ಆಡಿದ್ದೇನೆ ಅದು ಮುಗುಳ್ನಕ್ಕು ಸುಮ್ಮನೆ ನುಂಗಿ ಗೋಡೆಗೆ ಆನಿಕೊಂಡಿದೆ – ಅವರಿವರ ಎದೆಗಳ ಹುದುಲಿನಲ್ಲಿ ಸಿಕ್ಕಿಹಾಕಿಕೊಂಡ ಮಾತುಗಳನ್ನೂ ನಾನೀಗ ಕಿತ್ತು […]

ನಾನೊಂದು… ದ್ವಂದ್ವ.!?

ಅಮೃತ ಅರ್ಪಿಸಿದಾಕ್ಷಣವೇ
ವಿಷ ಕಕ್ಕಬಲ್ಲ ಕಾರ್ಕೂಟಕನೂ ನಾ..!
ಕಾರಣ ನಾ ದ್ವಂದ್ವ.!!
ಹಾಗಾಗಿ ಎಚ್ಚರದಿಂದ ಇರು ನೀ
ನನಗೆ ಅಪರಿಮಿತ ಮುಖವಾಡಗಳಿವೆ!!!

ನೆತ್ತರ ಚಿತ್ತಾರ

ಆಸೆಗಳನ್ನು ಕೊಂದು
ಎಲ್ಲೆಲ್ಲೂ ನೆತ್ತರಿನ ಚಿತ್ತಾರ ಚಿಲುಮಿಸಿ
ಅರೆಸುಟ್ಟ ಅನಾಥ ಶವಗಳಂತೆ ಭಾವನೆಗಳು
ಕನಸಿನಲ್ಲಿನ ಕನವರಿಕೆಗಳು

ಪ್ರಭುವೂ ಪಾರಿವಾಳವೂ

ಪ್ರಭುವಿಗೆ ಸಿಟ್ಟು ಬಂತು
ದೊರೆ ಬಂದರೂ ದೂರ ಹೋಗವು
ತೊಳೆದರೂ ತೊರೆಯವು ವಾಸನೆ
ಶತಮಾನಗಳ ಕಮಟು ; ಸಾಯಿಸಿಬಿಡಿ

ಹೇಳು ಸಿವನೆ

ಕವಿತೆ ಹೇಳು ಸಿವನೆ ಸುವಿಧಾ ಹಡಿನಬಾಳ ೧ ಜಗವ ಕಾಯುವಜಗದೊಡೆಯನಿಗೆರಕ್ತದಾಹವೆಂಬ ಭ್ರಮೆಯನಂಬಬೇಕೆ ಸಿವನೆ? ೨ ಹೆತ್ತ ತಾಯಿಮುದ್ದು ಮಡದಿಮಮತೆಯ ಕೂಸುಹೆಣ್ಣೇ ಆದರೂ ಅನ್ಯರಮೇಲೆ ಅತ್ಯಾಚಾರ ಗೈವಗಂಡು ಕಾಮಿಯ ಎದೆಯಲ್ಲಿಕರುಣವಿಲ್ಲವೆ ಸಿವನೆ? ೩ ತುತ್ತಿನ ಚೀಲ ತುಂಬಲುಗೇಣುದ್ದ ದೇಹವ ಮುಚ್ಚಲುಬೆಚ್ಚನೆಯ ಸೂರು ಹೊಂದಲುನೆಮ್ಮದಿಯ ಬದುಕ ಬಾಳಲುಕೋಟಿ ಕೋಟಿ ದುಡ್ಡುಆಸ್ತಿ ಬೇಕೆ ಸಿವನೆ? ೪ ಮೈಯ ರಕ್ತ ಒಂದೇಕುಡಿವ ಜಲವು ಒಂದೇತಿನ್ನುವ ಅನ್ನವೊಂದೇಪೊರೆವ ಧರಣಿಯೊಂದೇಮತ್ತೆ ನಾನು ನೀನುಅವನು ಅವಳುಮೇಲು ಕೀಳುಹೇಗೆ ಸಿವನೆ? ೫ ಹುಟ್ಟಿ ಬಂದಾಗಿದೆಚೆಂದ ಬಾಳು ಮುಂದಿದೆಹಮ್ಮು ಬಿಮ್ಮು […]

ಗಜಲ್

ಗಜಲ್ ರತ್ನರಾಯಮಲ್ಲ ನಿನ್ನಯ ಬಾಹುಗಳಲ್ಲಿ ಇರುಳನ್ನು ಕಳೆಯುತಿರುವೆ ಹಗಲು ಕಾವಲಿಗಿದೆಮಧುಬನದ ರಸಮಂಚವನು ಜೋಡಿಸುತಿರುವೆ ಹಗಲು ಕಾವಲಿಗಿದೆ ಸಂಪ್ರದಾಯದ ಜೋಳಿಗೆಯಲ್ಲಿ ಪ್ರೇಮವನ್ನು ಬಂಧಿಸಿಡಬೇಡ ಚೆಲುವೆನಿನ್ನ ಮಡಿಲಲಿ ಚಂದದ ಚುಕ್ಕಿಗಳನು ಎಣಿಸುತಿರುವೆ ಹಗಲು ಕಾವಲಿಗಿದೆ ಪ್ರೀತಿಯ ರಸಸ್ವಾದ ಮುಗಿಯದ ಪಾಕ ಮಧುಶಾಲೆ ಅಡಗಿದೆ ನಿನ್ನೊಳಗೆನಿನ್ನಯ ಒಲವಿನ ಕೊಳದಲಿ ಈಜು ಕಲಿಯುತಿರುವೆ ಹಗಲು ಕಾವಲಿಗಿದೆ ನಿನ್ನ ಕೈ ಬಳೆಯ ಝೇಂಕಾರಕೆ ಮನದ ಕತ್ತಲ ಕೋಣೆಯು ಹೊಳೆಯುತಿದೆನಿನ್ನಯ ಸಾಂಗತ್ಯದಲಿ ರಸಸವಿ ಅನುಭವಿಸುತಿರುವೆ ಹಗಲು ಕಾವಲಿಗಿದೆ ಅನುರಾಗದ ಕಡಲಲಿ ಮುತ್ತುಗಳನ್ನು ಅರಸುತಿರುವನು ‘ಮಲ್ಲಿ’ ಹುಚ್ಚನಂತೆಮಿದುವಾದ […]

ಪ್ರೇಮಿಗಳ ದಿನವಲ್ಲ ನನಗದು ಕರಾಳದಿನ!?

ಕವಿತೆ ಪ್ರೇಮಿಗಳ ದಿನವಲ್ಲ ನನಗದು ಕರಾಳದಿನ!? ಶೀಲಾ ಸುರೇಶ್ ಕೊರಳುಬ್ಬಿಸಿ ಬಿಕ್ಕುತ್ತಲೇಕಾಯಬೇಕು ಸೆರಗೆಳೆವಸಖನಿಗಾಗಿ…ಬಂದವನೆದುರು ನಾಚಿಕೆಯಸೋಗಾಕಿಬಿನ್ನಾಣದ ನಡೆಹೊತ್ತುಬೆನ್ನಾಕಿ ನಿಂತಿದ್ದುಜಿನುಗಿದ ಹನಿ ಕಾಣದಿರಲೆಂದು ತಡಮಾಡಲೇ ಇಲ್ಲಮುಖತಿರುಗಿಸಿತಡಕಾಡಿದ್ದು ದೀಪವಾರಿಸಲೆಂದುಹುಚ್ಚಾಟಗಳ ಸಹಿಸಿಯೂಕಾದಿದ್ದು ಪೂರೈಸಿದಬಯಕೆ ತಂದ ಹಣವೆಷ್ಟೆಂದು ಬೆತ್ತಲಾದ ದೇಹಕ್ಕೆಮುಚ್ಚಲಾರದ ನೋಟುಗಳುಗಹಗಹಿಸಿ ನಕ್ಕಗಂತೂಮಡುಗಟ್ಟಿದ ಮೌನಕದತೆರೆದು ಬೀದಿಬದಿಯ ಕೊನೆಯಲ್ಲಿಮತ್ತೆ ಬೆಂಕಿಯಾಗಿತ್ತು ಸುಕ್ಕುಗಟ್ಟಿದ ನೆರಿಗೆಹಾಸಿಗೆ ಹೊದಿಕೆಸರಿಪಡಿಸಿನಡುಗುವ ಮೈಯನ್ನೊಮ್ಮೆಕೊಡವಿ ಬಿಗಿಯಾಗಿಸಿನಗೆಯಾದಳು ಸೆರಗಚಾಚಿ…. ಹೋಗಿಬರುವ ನಾಲ್ಕುಗಾಲಿಗಳು ಬೆಳಕನಾರಿಸಲೆ ಇಲ್ಲ.‌‌.ತೂರಾಡುತ್ತಲೇ ಬಂದುಗಪ್ಪೆಂದು ಬಡಿದ ವಾಸನೆಎಸೆದ ಕಾಸು ಮಡಿಲುತುಂಬಲಿಲ್ಲಹಸಿವನೀಗಿಸಲೂ ಇಲ್ಲಸೋತ ದೇಹ ಕುಸಿದುಕಣ್ಣೀರಾದದ್ದು ಕಂದನಕನಸಿಗೆ ನೀರಾಕುವುದೇಗೆಂದು ತಿಳಿಯದೆ. ಕೆಂಪು ಹೂವಿಗೆ ಸೋತುಹರಿಸಿದ್ದು ಕೆಂಪು […]

ಗಜ಼ಲ್

ಗಜ಼ಲ್ ಅಮರೇಶ ಎಂಕೆ ಎನ್ನೆದೆಯ ಮರುಭೂಮಿಯಲ್ಲಿ ನಿನ್ನೊಲವಿನ ಓಯಾಸಿಸ್ ಕೇಳುತ್ತಿದ್ದೆನೀ ಮರೆತಿದ್ದರೆ ಮರಳಾಗಿ ಬಿಸಿಲಿಗೆ ಸವೆದು ಹುಡಿಯಾಗಿ ಹೋಗುತ್ತಿದ್ದೆ ಎನ್ನ ಬದುಕಿನಲ್ಲಿ ಎತ್ತರದ ಸ್ಥಾನ ಖಾಲಿ ಇಲ್ಲ ನೀನು ಆವರಿಸಿರುವಾಗನಡೆದ ಹೆಜ್ಜೆ ಗುರುತನು ಅಳಿಸಿ ಹೋಗಿದ್ದರೆ ನೆನಪಾಗಿ ಉಳಿಯುತ್ತಿದ್ದೆ ಬಣ್ಣ ಬಣ್ಣದ ಚಿಟ್ಟೆಯ ಚಿಕ್ಕ ಚಿಕ್ಕ ರೆಕ್ಕೆ ಬಡಿತ ಹೃದಯದ ಬಡಿತವಾಗಿದೆಸಹಿಸದೆ ಕಪ್ಪು ಚುಕ್ಕಿ ಜೀವನದಲ್ಲಿ ಜಾಗ ಕೇಳಿದ್ದರೆ ಕುರೂಪಿ ಆಗುತ್ತಿದ್ದೆ ಆ ಮುಗುಳುನಗುವು ಅಳಿಯದೆ ಉಳಿದುಬಿಟ್ಟಿದೆ ಕಣ್ಣರೆಪ್ಪೆಯ ಒಳಗೆಕನಸಾಗಿ ಕ್ಷಣಮಾತ್ರದಲ್ಲಿ ಕಾಣೆಯಾಗಿದ್ದರೆ ಅಪಜಯ ಹೊಂದುತ್ತಿದ್ದೆ ‘ಅಮರ’ಪ್ರೇಮಕ್ಕೆ […]

ಗುಲಾಬಿ ಮುಖ

ಕವಿತೆ ಗುಲಾಬಿ ಮುಖ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಚೆನ್ನ ಮಲ್ಲಿಕಾಜು೯ನನಮುರಿದ ಅಲುಗು ಎದೆಯಲ್ಲಿನರಳುವ ನೋವು ಎಂದ ಅಕ್ಕನ ನೋವು ನೋಯದವರೆತ್ತ ಬಲ್ಲರು ? ನಿನ್ನ ಪದ ಪದಗಳುಹೆಜ್ಜೆ ಹೆಜ್ಜೆಗೂ ನನ್ನ ಊರು ಪಾದಗಳನ್ನು ಬಗೆದುಎದೆಯಲ್ಲಿ ಮುರಿದ ಅಲುಗುಗಳಾದರೂನೆತ್ತರು ಸುರಿಯುವ ಹೃದಯದಲ್ಲಿ ನೀನು ಹೂವಂತೆ ಅರಳುತ್ತಿರುತ್ತಿನನ್ನ ಕವನಗಳ ಒಳಗಿಂದಲೇ ಪದ ಪದಗಳ ಮುಳ್ಳುಗಳನ್ನೊಡೆದು ಗುಲಾಬಿಮುಖವರಳಿಸಿ ಮುಗುಳು ನಗುತ್ತಲೇ ಇರುತ್ತಿ … ನಿನ್ನ ನಾಲಗೆ ಚೂರಿಯಾದರೂನನ್ನ ಹೃದಯ ಕೇಕಾಗಿಯೇ ಇರುತ್ತದೆತುಂಡು ತುಂಡುಗಳು ಬಾಯ್ತೆರೆದುನೀನು ನನ್ನ ಎದೆಯಲ್ಲಿ ಹುಟ್ಟಿದದಿನವನ್ನು ನೆನಪಿಸಿಕೊಳ್ಳುತ್ತನಿನ್ನ ಮುಂದೆ‘ಹ್ಯಾಪಿ ಬತ್೯ಡೇ […]

Back To Top