Category: ಕಾವ್ಯಯಾನ

ಕಾವ್ಯಯಾನ

ಶುಭಾಶಯ ವೀಣಾ ರಮೇಶ್ ಅದೆಷ್ಟೋ ಪ್ರೇಮ ಪತ್ರಗಳುವಸಂತನ ಕುಂಚದಲಿಪ್ರೇಮ ತಳಿರಿನ ಚಿಗುರಿನಲಿ,ಬರೆದುರವಾನಿಸಿದೆ,ಸ್ವೀಕರಿಸು ನಲ್ಲೇ ನಿನ್ನದೊಂದುಮುಗುಳು ನಗೆ ಬೀರಿ ಕೆಂಪು ಗುಲಾಬಿಯಂತೆನಾಚಿ ನಿಂತೆ ನೀನುಇರುಳು ಚಲುವ ಹಣತೆ ಪ್ರೇಮದ ಅರಸಿ ನೀನುಲಜ್ಜೆ ಕೆಂಪಿನಲಿ ಅರಳಿದಪ್ರಣಯ ಪ್ರಣೀತೆ ಎದೆಯ ಸಿಹಿಯೊಳಗೆಚೆಲ್ಲಿರುವುದು ಬರಿದಾಗದಸಂಪ್ರೀತಿಬಣ್ಣದ ಹಚ್ಚೆಯಲಿಬರೆದಿರುವುದು ನಿನ್ನಹೆಸರಿನ ಪ್ರೀತಿ ತೂಗು ಮಂಚದಲ್ಲಿಮೌನ ಪ್ರೇಮ,ಹರೆಯಕೂಗಿದೆ ನಿನ್ನ ಜೊತೆಮೇಘ ಶ್ಯಾಮ ರಾಧೆನಾವಿಬ್ಬರೂ ತೂಗಿದಂತೆ ಕತ್ತಲ ಕಂಬಳಿ ಕಿತ್ತೊಗೆದುಪೂರ್ಣ ಚಂದಿರಹೃದಯ ಬಾನಿಗೆ ಇಳಿದುಪ್ರಣಯ ಹಾದಿಗೆಮಧುಚಂದಿರನ ಸೆಳೆದುಪ್ರೇಮ ಚಂದಿರ ಈಗಸಿಹಿ ನಗೆಯಲಿ ಬಿರಿದು ************************************

ಪ್ರೇಮ ಅರುಣ ರಾವ್ ಹೃದಯದರಮನೆಯಲ್ಲಿ ಹೊಸ ರಾಗತಾಳ ಮೇಳಗಳ ಅಲೆಗಳೆಬ್ಬಿಸುವನಿನಗೆ ಪ್ರೇಮವೆಂಬ ಎರಡಕ್ಷರವೆ ಸಾಕೇ? ನೋಡದಿದ್ದರೆ ಸತ್ತೇ ಹೋಗುವೆನೆಂದೆನಿಸಿಇರುಳೆಲ್ಲಾ ಕಾಡಿಸಿ ಹಗಲಲ್ಲಿ ಬೇಯಿಸುವನಿನಗೆ ಪ್ರೇಮವೆಂಬ ಎರಡಕ್ಷರವೆ ಸಾಕೇ? ಒಮ್ಮೊಮ್ಮೆ ಸರಸ ಮತ್ತೊಮ್ಮೆ ವಿರಸವಿರಸವನ್ನೂ ಅಮೃತದಂತೆ ಸವಿಜೇನಾಗಿಸುವನಿನಗೆ ಪ್ರೇಮವೆಂಬ ಎರಡಕ್ಷರವೆ ಸಾಕೇ? ಕ್ಷಣ ಕ್ಷಣವು ಅನುದಿನವು ನೆನಪಿನಅಂಗಳದಲ್ಲಿ ಹಗುರವಾಗಿ ತೇಲಿಸುವನಿನಗೆ ಪ್ರೇಮವೆಂಬ ಎರಡಕ್ಷರವೆ ಸಾಕೇ? ತ್ಯಾಗದ ಪ್ರತಿರೂಪ ಅಭಿಮಾನದ ಅನುರೂಪಮರೆತೆವೆಂದರೂ ಮರೆಯಲಾಗದನಿನಗೆ ಪ್ರೇಮವೆಂಬ ಎರಡಕ್ಷರವೆ ಸಾಕೇ? ನಿನಗೆ ನೀ ಸರಿಸಾಟಿ ಗಗನಕ್ಕಿಂತಲೂ ಮೇಟಿಆಸೂರ್ಯ ಚಂದ್ರಾರ್ಕವಾಗಿಹನಿನಗೆ ಪ್ರೇಮವೆಂಬ ಎರಡಕ್ಷರವೆ ಸಾಕೇ? […]

ಪ್ರೇಮದ ಹನಿಗಳು ಸುವಿಧಾ ಹಡಿನಬಾಳ ೧) ಅವಳು ನಕ್ಕಾಗಮೂಡಿದ ಗುಳಿಕೆನ್ನೆಯ ಸುಳಿಯಲಿಅವ ಬಿದ್ದ ಅವಳಪ್ರೇಮದ ಅಲೆಯಲಿ ೨) ನಲ್ಲ ನೀ ಹಚ್ಚಿದಪ್ರೇಮದ ಹಣತೆನಂದಾದೀಪದಂತೆಮಿನುಗುತಿದೆ ನನ್ನತನುಮನದಲಿ ಅನುದಿನ ೩) ಅವಳ ಪ್ರೀತಿಯ ಕರೆಗೆಅವ ಕರಗುತಿಲ್ಲಒಂಥರಾ ಚ್ಯಾಯಿಂಗ್ಗಮ್ ನಂತೆ ೪) ಪ್ರೇಮವೆಂದರೆಹೃದಯದಾ ಆಲಾಪತನುಮನದಲಿ ಪುಳಕನೆನಪಿನಲ್ಲೆ ಜಳಕಹತ್ತಿರಿರಲು ಬೆರಳತುದಿ ಸೋಂಕಿದರೂಕೆಂಪೇರುವ ಕೆನ್ನೆದೂರಿರಲು ಹಿತವಾಗಿಸುಡುವ ಬೇನೆ ೫) ಬಾನು ಭೂಮಿಒಂದಾಗುವ ಹೊತ್ತುಜಗಕೆ ಸಾರಿದೆ ಪ್ರೇಮನಿತ್ಯ ನಿರಂತರ ಹೊಸತು **************************

ಇನಿಯ ಅಕ್ಷತಾ ಜಗದೀಶ ಪ್ರೇಮದ ಕಡಲಾಚೆ ಇಚೆಗಿನದಡದೊಳು ಮೂಡಿದ ನಮ್ಮ ‌ಪ್ರೇಮ..ಈಗ ಒಂದೇ ‌ದೋಣಿಯೊಳು ಕುಳಿತುಸಾಗಬೇಕೆನಿಸುತಿದೆ …ಈ‌ ನಮ್ಮ ಪಯಣ… ವಿಶಾಲ ಕಡಲಿನಂತೆ‌ ನಿನ್ನ ‌ಪ್ರೇಮಅಪರಿಮಿತ…ನಿನ್ನ ‌ಬಾಹುಬಂಧನದೊಳು ನಾನಾಗಿಹೆಮೂಕ ವಿಸ್ಮಯ….ಬಾಳೆಂಬ ಪ್ರೀತಿಯ ದೋಣಿಗೆಇನಿಯನೇ ನೀನಾಗು ನಾವಿಕನಿನ್ನ ಮಾತಿನ ಅಲೆಯೊಳುಮೌನವಾಗಿ ಸಾಗುವೆ ನಾ ನಿರಂತರ.. ಸ್ನೇಹದ ಈ ಅನುಬಂಧ..ಪ್ರೇಮದ ಬಂಧವಾಯ್ತು..ನನ್ನ ‌ಕನಸಿನ ಲೋಕನಿನ್ನಿಂದ ನನಸಾಯ್ತು…ಸೆರೆ ಹಿಡಿದೆ ಕಣ್ಣಲ್ಲೇ…ಕಡಲಾಳದ ಮುತ್ತಿನ ಹಾಗೆ..ನನ್ನ ನಾಳೆಯ ಬಾಳಿಗೆನೀನಾದೆ ಮಾಸದ ಹಣತೆ.. ***********************************

ಪ್ರೇಮ ನಳಿನ ಡಿ. ಆತ್ಮ ವಿಹೀನರಿಗೆಪ್ರೇಮವೆಂದರೆ ಬರೀ ಅದೇ,ಕಾಮಣ್ಣನ ಮಕ್ಕಳೆಷ್ಟೋ ವಾಸಿಪ್ರೇಮ ಹಬ್ಬಿಸಲು ಸುಟ್ಟುಅಮರರಾದ ಒಲುಮೆ ಬಲ್ಲವರು ಕೆಲವರಿಗೆ ಪ್ರೇಮವೆಂದರೆ ಅದೇ,ಬರೀ ಮಾತು, ಮೈಯ ಮಿಸುಕಾಟ,ನಿರ್ವಾಣಕ್ಕೊಂದು ಸುಳ್ಳು,ಕೇಸರಿ ಧೋತಿಗಳೊಂದು ನೆಪ, ಕೆಲವರಿಗೆ ಪ್ರೇಮವೆಂದರೆ ಬರೀ ಅದೇ,ಗಲ್ಲಿ ಗಲ್ಲಿಯಲಿ ಹುಡುಕಾಟ,ನೋಟಕ್ಕಾಗಿ ಅಲೆದಾಟ,ನೋಡಿಕೊಂಡೇ ಮುಗಿದು ಹೋಗುವ ಚಟ, ಕೆಲವರಿಗೆ ಪ್ರೇಮವೆಂದರೆ ಬರೀ ಅದೇ,ಮತ್ತೆ ಕೆಲವರಿಗೆ ಹಾಗಲ್ಲ,ಒಂದು ನೋಟ, ಒಂದೇ ಭೇಟಿ,ಪ್ರೀತಿ ಸಹಿ ಸಾಕು,ಇಡೀ ಜೀವನ ಹಾಗೇ ಸವೆಸಲು *******************************

ಪ್ರೇಮಕವಿತೆ ಶ್ರೀಲಕ್ಷ್ಮೀ ಅದ್ಯಪಾಡಿ. ತಡೆದು ಬಿಡು ಸಮಯವನು….ಸರಿಯುತಿಹುದು ಸಮಯ ಜಿದ್ದಿಗೆಬಿದ್ದಂತೆಒಂದು ಕ್ಷಣ ಒಂದೇ ಒಂದು ಕ್ಷಣತಡೆದುಬಿಡುಇದ್ದಲ್ಲೆ ಇರುವಂತೆಉಸುರದೇ ಉಳಿದ ಸಾವಿರ ಮಾತುಗಳೋಒಂದೊಂದೇ ಕಾದಿಹವುಸರತಿಯಸಾಲಿನಲಿನಿಂತಂತೆಇದೀಗ….. ನಿನ್ನೊಂದಿಗೆಒಂದೊಂದಾಗಿ ಭಾವಗಳ ಹಂಚಿಕೊಳ್ಳಬೇಕಿದೆಕಾಮನಬಿಲ್ಲಿನರಂಗಿನಂತೆಮನಸಾರೆ ನೆನಪಿನ ದಾರದಿ ಪೋಣಿಸಿದಒಲವಿನಹೂವುಗಳಂತೆಓಡುವ ಹೊತ್ತನೂ ಮೀರಿ ನಿನ್ನೊಳುಬೆರೆಯಬೇಕಿದೆಬೆರೆತು ನಿನ್ನುಸಿರಿನೊಳುನನ್ನುಸಿರೇಬೆವೆಯಬೇಕಿದೆನಿನ್ನ ಕಣ್ಣೊಲವನೇ ಬೆಚ್ಚಗೆ ಹೊದ್ದು ಮೈಮರೆತುಮಾಗಿಯಚಳಿಯು ಸಹ ಅಸೂಯೆ ಪಡುವಂತೆಹಂಗಿಸಬೇಕಿದೆನಿನ್ನ ಬೆರಗಿನ ಪ್ರತಿ ಗುಂಗಿನ ಬೀಜಗಳನನ್ನಾಳದೊಳು ಪಡೆದುಬರುವ ನಾಳೆಗಳೂಭೇಟಿಗೆಕಾತರಿಸಿದಂತೆನಿನಗಾಗಿಹೂವರಳಿಸಿನಗಬೇಕಿದೆಆಗಸವೇಒಲವಿನರಂಗನು ಪಡೆದುನಮ್ಮ ಪ್ರೇಮವನುಹರಸುವಂತೆ ****************************************

ಅಂತರ ರೇಷ್ಮಾ ಕಂದಕೂರ. ಒಂದಾಗಿದ್ದ ಸಂಬಂಧಇಂದೇಕೋ ಅಂತರ ಕಾಯ್ದುಕೊಂಡಿದೆಭಾವತರಂಗದ ಉಬ್ಬು ತಗ್ಗುಗಳುಲಗ್ಗೆ ಇಟ್ಟಿವೆ ಮನದಾಳದ ಕಡಲಲಿ ಸಂತಸದ ಕ್ಷಣಗಳುತೆರೆ ಮರೆಗೆ ಸರಿದಿವೆನಾ ನೀ ಎಂಬಂತಹ ಸ್ಥಿತ್ಯಂತರದಿರೂಪಾಂತರ ಹೊಂದಿವೆ ಬಂಧು ಬಂಧುರವೇಹೇಳ ಹೆಸರಿಲ್ಲದಂತೆ ಹೋಗಿವೆಬಾಳ ಸವಿಗಾನಕೆಅಂತರದ ಬಾಗೀನ ಪಡೆದಿದೆ ಅಂತರಾಳದಿ ಅಲೆಗಳೆದ್ದುಬಾನಂಚಿನ ಚಂದ್ರನೆ ಕೆಂಪಾಗಿಸೋಂಪಾಗಿ ಬೆಳೆದ ಮರಕೆಬರಸಿಡಲು ಹೊಕ್ಕಾಗಿದೆ. ****************************

ಲಾಲಿತ್ಯ ಚಂದ್ರಪ್ರಭ ನಗುವೆ ಮೈವೆತ್ತ ಆ ಮಧುರ ಕ್ಷಣದಲಿಬೆಳಕನರಸುತ್ತ ನನ್ನ ಕಣ್ಣೊಳುನೀ ನುಡಿದೆ-‘ ಪ್ರೀತಿಸು ಕವಿತೆಯನುಅದು ನಿನ್ನ ಪ್ರೀತಿಸುವುದು…ಆಗಹೊಳೆಯುವ ಪದಗಳ ಲಾಲಿತ್ಯ ನೋಡು.’. ನಾ ನಿನ್ನ ಪ್ರೀತಿಸಿದೆ….ನಿನ್ನ ನುಡಿಯ ಸತ್ಯ ವೇದ್ಯವಾಗಿತ್ತುನನ್ನ ಲೇಖನಿಯಲಿ ಅರಳಿದನಿನ್ನ ಕವನಗಳು… ನಿನ್ನನಗುವೊಂದು ಕವನನಡೆ ಇನ್ನೊಂದುಮುನಿಸೊಂದು ಕವನಒಲುಮೆ ಮತ್ತೊಂದು… ನೀನಿಲ್ಲದಿರುವಾಗಲೂಕೈಹಿಡಿದು ನಡೆಸುತಿದೆ ಕವಿತೆತೆರೆ ಮರೆಯ ಹಣತೆಯಾಗಿಹೆಜ್ಜೆ ಹೆಜ್ಜೆಯಲೂ…. ****************************

ಗಜಲ್ ಸಿದ್ಧರಾಮ ಹೊನ್ಕಲ್ ಕದ್ದು ಕದ್ದು ನೋಡುವುದೇಕೆ ಹೀಗೆ ಕಾಡುವುದೇಕೆ ಸಖಿಮನ ತುಂಬಾ ಪರಸ್ಪರ ನಾವಿರಲು ಈ ಬಿಗುಮಾನವೇಕೆ ಸಖಿ ಬಿಟ್ಟಿರಲಾರೆವು ಅನುದಿನ ಪ್ರೀತಿಯೋ ಜಗಳವೋ ಒಂದೇಎಷ್ಟು ದಿನದ ಮಾತಿದು ಆದರೀಗೆ ಮಾಡುವುದೇಕೆ ಸಖಿ ಉಸಿರುಸಿರಲಿ ಪ್ರೇಮದಿ ಮನಸು ಬೆರೆತು ಹೋಗಿರುವದುಕ್ಷಣ ಕಣ್ಣ ಮುಂದೆ ಕಾಣದಿದ್ದರೆ ಚಡಪಡಿಸುವದೇಕೆ ಸಖಿ ಮನದ ಬಾಗಿಲು ಮುಚ್ಚೋದು ತೆರಿಯೋದು ಮಾಡಬೇಡಹಂಬಲಿಸಿ ಕಾದು ಕುಳಿತವಗೆ ಹುಚ್ಚನಂತೆ ಕಾಣುವುದೇಕೆ ಸಖಿ ನಾ ಎಲ್ಲಿದ್ದರೂ ಹೇಗಿದ್ದರೂ ಸದಾ ನಿನ್ನ ನೆನಪಲಿರುವುದುಯೋಚಿಸು ಹೊನ್ನಸಿರಿ’ಅಗಲಿ ಸುಖದಿ ಇರಲಾಗದೇಕೆ ಸಖಿ

ಮೊದಲ ಸ್ಪರ್ಶ ಮಾಲತಿ ಶಶಿಧರ್ ಮೊದಲ ಸ್ಪರ್ಶಮೈ ನಡುಕ ರೋಮಾಂಚಕಅದುರಿದಧರ, ಸಾಲು ಬೆವರಪದದಲ್ಲಿಡುವ ಕಸರತ್ತು ರೋಮ ರೋಮದಬಳ್ಳಿಯಲ್ಲೂ ಮೈನೆರೆದಹೂಗಳುಮನದಲ್ಲಲ್ಲಲ್ಲಿ ಬೆಳಗಿದನಕ್ಷತ್ರಗಳ ಸಾಲು ನೆನೆದು ನೆನೆದುಏರಿ ಕಾವುಬಿಸಿಯುಸಿರಲೇ ಬರೆದಶೃಂಗಾರ ರಸ ಅದೆಂತಾ ಮಾಂತ್ರಿಕಮೊದಲ ಸ್ಪರ್ಶತಣ್ಣಗೆ ಸೋಕಿಬಿಸಿ ಏರಿಸುವ ಆಟಅಣುರೇಣುವಿನಲ್ಲೂಅದರದ್ದೇ ಜೂಜಾಟ..

Back To Top