ಅಂತರ
ರೇಷ್ಮಾ ಕಂದಕೂರ.
ಒಂದಾಗಿದ್ದ ಸಂಬಂಧ
ಇಂದೇಕೋ ಅಂತರ ಕಾಯ್ದುಕೊಂಡಿದೆ
ಭಾವತರಂಗದ ಉಬ್ಬು ತಗ್ಗುಗಳು
ಲಗ್ಗೆ ಇಟ್ಟಿವೆ ಮನದಾಳದ ಕಡಲಲಿ
ಸಂತಸದ ಕ್ಷಣಗಳು
ತೆರೆ ಮರೆಗೆ ಸರಿದಿವೆ
ನಾ ನೀ ಎಂಬಂತಹ ಸ್ಥಿತ್ಯಂತರದಿ
ರೂಪಾಂತರ ಹೊಂದಿವೆ
ಬಂಧು ಬಂಧುರವೇ
ಹೇಳ ಹೆಸರಿಲ್ಲದಂತೆ ಹೋಗಿವೆ
ಬಾಳ ಸವಿಗಾನಕೆ
ಅಂತರದ ಬಾಗೀನ ಪಡೆದಿದೆ
ಅಂತರಾಳದಿ ಅಲೆಗಳೆದ್ದು
ಬಾನಂಚಿನ ಚಂದ್ರನೆ ಕೆಂಪಾಗಿ
ಸೋಂಪಾಗಿ ಬೆಳೆದ ಮರಕೆ
ಬರಸಿಡಲು ಹೊಕ್ಕಾಗಿದೆ.
****************************