ಪ್ರೇಮದ ಹನಿಗಳು
ಸುವಿಧಾ ಹಡಿನಬಾಳ
೧) ಅವಳು ನಕ್ಕಾಗ
ಮೂಡಿದ ಗುಳಿ
ಕೆನ್ನೆಯ ಸುಳಿಯಲಿ
ಅವ ಬಿದ್ದ ಅವಳ
ಪ್ರೇಮದ ಅಲೆಯಲಿ
೨) ನಲ್ಲ ನೀ ಹಚ್ಚಿದ
ಪ್ರೇಮದ ಹಣತೆ
ನಂದಾದೀಪದಂತೆ
ಮಿನುಗುತಿದೆ ನನ್ನ
ತನುಮನದಲಿ ಅನುದಿನ
೩) ಅವಳ ಪ್ರೀತಿಯ ಕರೆಗೆ
ಅವ ಕರಗುತಿಲ್ಲ
ಒಂಥರಾ ಚ್ಯಾಯಿಂಗ್
ಗಮ್ ನಂತೆ
೪) ಪ್ರೇಮವೆಂದರೆ
ಹೃದಯದಾ ಆಲಾಪ
ತನುಮನದಲಿ ಪುಳಕ
ನೆನಪಿನಲ್ಲೆ ಜಳಕ
ಹತ್ತಿರಿರಲು ಬೆರಳ
ತುದಿ ಸೋಂಕಿದರೂ
ಕೆಂಪೇರುವ ಕೆನ್ನೆ
ದೂರಿರಲು ಹಿತವಾಗಿ
ಸುಡುವ ಬೇನೆ
೫) ಬಾನು ಭೂಮಿ
ಒಂದಾಗುವ ಹೊತ್ತು
ಜಗಕೆ ಸಾರಿದೆ ಪ್ರೇಮ
ನಿತ್ಯ ನಿರಂತರ ಹೊಸತು
**************************