
ಪ್ರೇಮ
ನಳಿನ ಡಿ.

ಆತ್ಮ ವಿಹೀನರಿಗೆ
ಪ್ರೇಮವೆಂದರೆ ಬರೀ ಅದೇ,
ಕಾಮಣ್ಣನ ಮಕ್ಕಳೆಷ್ಟೋ ವಾಸಿ
ಪ್ರೇಮ ಹಬ್ಬಿಸಲು ಸುಟ್ಟು
ಅಮರರಾದ ಒಲುಮೆ ಬಲ್ಲವರು
ಕೆಲವರಿಗೆ ಪ್ರೇಮವೆಂದರೆ ಅದೇ,
ಬರೀ ಮಾತು, ಮೈಯ ಮಿಸುಕಾಟ,
ನಿರ್ವಾಣಕ್ಕೊಂದು ಸುಳ್ಳು,
ಕೇಸರಿ ಧೋತಿಗಳೊಂದು ನೆಪ,
ಕೆಲವರಿಗೆ ಪ್ರೇಮವೆಂದರೆ ಬರೀ ಅದೇ,
ಗಲ್ಲಿ ಗಲ್ಲಿಯಲಿ ಹುಡುಕಾಟ,
ನೋಟಕ್ಕಾಗಿ ಅಲೆದಾಟ,
ನೋಡಿಕೊಂಡೇ ಮುಗಿದು ಹೋಗುವ ಚಟ,
ಕೆಲವರಿಗೆ ಪ್ರೇಮವೆಂದರೆ ಬರೀ ಅದೇ,
ಮತ್ತೆ ಕೆಲವರಿಗೆ ಹಾಗಲ್ಲ,
ಒಂದು ನೋಟ, ಒಂದೇ ಭೇಟಿ,
ಪ್ರೀತಿ ಸಹಿ ಸಾಕು,
ಇಡೀ ಜೀವನ ಹಾಗೇ ಸವೆಸಲು
*******************************