
ಪ್ರೇಮಕವಿತೆ
ಶ್ರೀಲಕ್ಷ್ಮೀ ಅದ್ಯಪಾಡಿ.

ತಡೆದು ಬಿಡು ಸಮಯವನು….
ಸರಿಯುತಿಹುದು ಸಮಯ ಜಿದ್ದಿಗೆಬಿದ್ದಂತೆ
ಒಂದು ಕ್ಷಣ ಒಂದೇ ಒಂದು ಕ್ಷಣ
ತಡೆದುಬಿಡುಇದ್ದಲ್ಲೆ ಇರುವಂತೆ
ಉಸುರದೇ ಉಳಿದ ಸಾವಿರ ಮಾತುಗಳೋ
ಒಂದೊಂದೇ ಕಾದಿಹವು
ಸರತಿಯಸಾಲಿನಲಿನಿಂತಂತೆ
ಇದೀಗ….. ನಿನ್ನೊಂದಿಗೆ
ಒಂದೊಂದಾಗಿ ಭಾವಗಳ ಹಂಚಿಕೊಳ್ಳಬೇಕಿದೆ
ಕಾಮನಬಿಲ್ಲಿನರಂಗಿನಂತೆ
ಮನಸಾರೆ ನೆನಪಿನ ದಾರದಿ ಪೋಣಿಸಿದ
ಒಲವಿನಹೂವುಗಳಂತೆ
ಓಡುವ ಹೊತ್ತನೂ ಮೀರಿ ನಿನ್ನೊಳುಬೆರೆಯಬೇಕಿದೆ
ಬೆರೆತು ನಿನ್ನುಸಿರಿನೊಳುನನ್ನುಸಿರೇಬೆವೆಯಬೇಕಿದೆ
ನಿನ್ನ ಕಣ್ಣೊಲವನೇ ಬೆಚ್ಚಗೆ ಹೊದ್ದು ಮೈಮರೆತು
ಮಾಗಿಯಚಳಿಯು ಸಹ ಅಸೂಯೆ ಪಡುವಂತೆ
ಹಂಗಿಸಬೇಕಿದೆ
ನಿನ್ನ ಬೆರಗಿನ ಪ್ರತಿ ಗುಂಗಿನ ಬೀಜಗಳ
ನನ್ನಾಳದೊಳು ಪಡೆದು
ಬರುವ ನಾಳೆಗಳೂಭೇಟಿಗೆಕಾತರಿಸಿದಂತೆ
ನಿನಗಾಗಿಹೂವರಳಿಸಿನಗಬೇಕಿದೆ
ಆಗಸವೇ
ಒಲವಿನರಂಗನು ಪಡೆದು
ನಮ್ಮ ಪ್ರೇಮವನುಹರಸುವಂತೆ
****************************************