ಲಾಲಿತ್ಯ

ಚಂದ್ರಪ್ರಭ

Persons Hands With Rainbow Colors

ನಗುವೆ ಮೈವೆತ್ತ ಆ ಮಧುರ ಕ್ಷಣದಲಿ
ಬೆಳಕನರಸುತ್ತ ನನ್ನ ಕಣ್ಣೊಳು
ನೀ ನುಡಿದೆ-
‘ ಪ್ರೀತಿಸು ಕವಿತೆಯನು
ಅದು ನಿನ್ನ ಪ್ರೀತಿಸುವುದು…ಆಗ
ಹೊಳೆಯುವ ಪದಗಳ ಲಾಲಿತ್ಯ ನೋಡು.’.

ನಾ ನಿನ್ನ ಪ್ರೀತಿಸಿದೆ….
ನಿನ್ನ ನುಡಿಯ ಸತ್ಯ ವೇದ್ಯವಾಗಿತ್ತು
ನನ್ನ ಲೇಖನಿಯಲಿ ಅರಳಿದ
ನಿನ್ನ ಕವನಗಳು…

ನಿನ್ನ
ನಗುವೊಂದು ಕವನ
ನಡೆ ಇನ್ನೊಂದು
ಮುನಿಸೊಂದು ಕವನ
ಒಲುಮೆ ಮತ್ತೊಂದು…

ನೀನಿಲ್ಲದಿರುವಾಗಲೂ
ಕೈಹಿಡಿದು ನಡೆಸುತಿದೆ ಕವಿತೆ
ತೆರೆ ಮರೆಯ ಹಣತೆಯಾಗಿ
ಹೆಜ್ಜೆ ಹೆಜ್ಜೆಯಲೂ….

****************************

Leave a Reply

Back To Top