Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಅರಿಯದ ಹಾಡು ಡಾ.ವೈ.ಎಂ.ಯಾಕೊಳ್ಳಿ ಗಜದಾಲಯದಲಿ ಮೂಡಿದ ಸುಂದರ ರಾಗ. ತೇಲಿ ಬಂದಿತು ಅಂತಪುರದ ಹಂಸತೂಲಿಕದೊಳಗೆ ಬಗೆಯಿತು ರಾಣಿಯ ಎದೆಯನು ಯಾರಿಗೂ ತಿಳಿಯದ ಹಾಗೆ ತಡೆಯಲೇ ಇಲ್ಲ ಕಾವಲುಭಟರ ಸಾವಿರ ಕಾಲಾಳುಗಳ ಪಡೆ ಕೊಟ್ಟಳು ಮನವನು ಎಂದೂ ನೋಡದ ದನಿಗೆ ಮನವನು ಬಗೆದ ರಾಗವ ಬೆನ್ನತ್ತಿ ಹೊರಟೇ ಬಿಟ್ಟಿತು ನಿಲ್ಲದೆ ಎರಡು ಗಳಿಗೆ ಲೋಕದ ವಿಕಾರ ಧರಿಸಿತ್ತು ಮಾನವನ ಆಕಾರ, ಎಲ್ಲಿದೆ ವಿವೇಚನೆ ಒಲಿದ ಎದೆಗೆ ತಡಮಾಡದೇ ಕೊಟ್ಟಿತು ದಾನ ಹೃದಯವ ಮಾವುತನ ಎದೆಯೊಸಗೆಗೆ ಆಹಾ !ಲೋಕದ‌ ಕಣ್ಣಿಗೆ […]

ಕಾವ್ಯಯಾನ

ತುಂಟ ಮೋಡವೊಂದು ಫಾಲ್ಗುಣ ಗೌಡ ಅಚವೆ ಎಲ್ಲಿಂದಲೋ ಹಾರಿಬಂದ ತುಂಟ ಮೋಡವೊಂದು  ನನ್ನೆದೆಗೆ ಬಂದುತನ್ನೊಳಗಿನ ಹನಿ ಹನಿಇಬ್ಬನಿಗರೆಯಿತು ಅಂಗಳದ ಸಂಜೆ ಗತ್ತಲುಬೆರಗುಗಣ್ಣಿನ ಚುಕ್ಕೆಗಳುಅಗಾಧ ನೀಲಾಕಾಶಹಿಮಕಣಗಳ ಹೊತ್ತು ತಂದ ಗಾಳಿನನ್ನ ತೆಕ್ಕೆಯಿಂದ ಹೊರಬಿದ್ದವು ಆ ಬೆಳ್ಳಿ ಮೋಡ ಬಂದದ್ದೇ ತಡ:ಎದೆಯ ತುಂಬೆಲ್ಲನಾದದ ನವನೀತವಾಗಿನೀರವ ಮೌನದ ಮಜಲುಗಳುಶಬ್ದವಾಗಿಸಾಲು ಬೆಳ್ಳಕ್ಕಿಗಳಾದವು ತಿಳಿ ನೀರ ಸರೋವರದ ಆವಿಯೋಕಡಲ ಅಲೆ ಮಿಂಚಿನಹಿತ ನೋವ ಸ್ಪರ್ಶವೋಗಾಳಿ ಮರದ ಮೌನಭಾಷೆಯಇನಿದನಿಗೆ ದಂಗಾಗಿದಿಗಂತಕ್ಕಾಗಿ ಕಾದುಕುಳಿತದಂಡೆಯೋಏನೂ ಹೊಳೆಯಲಿಲ್ಲ ನನ್ನ ಏಕಾಂತವನ್ನು ಹಾದಆ ತುಂಟ ಮೋಡನೋಡ ನೋಡುತ್ತಿದ್ದಂತೆನಕ್ಷತ್ರಗಳಲ್ಲಡಗಿದ ಮಿಂಚಂತೆಮೈ ತುಂಬಿಬಂದುಅಕ್ಷರದಲ್ಲಡಗಿತು! *******

ಕಾವ್ಯಯಾನ

ಗತ್ತಿನ ಭಾಷೆ ಗೊತ್ತಿಲ್ಲ ಮಧುಸೂದನ ಮದ್ದೂರು ಅಳುವ ಮುಗಿಲಿನಿಂದ ಕಣ್ಣೀರ ಕಡವ ಪಡೆದು ಭೋರ್ಗೆರೆವ ಕಡಲ ಮೇಲೆ ಯಾತನೆಯ ಯಾನ ಬಯಸಿದ್ದೇನೆ.. ನಿನ್ನ ನೆನಪು ಮಾಸಿ ಸೋಲುಗಳು ಗೆಲುವುಗಳಾಗಲೆಂಬ ಬಯಕೆಯಿಂದಲೂ ಭ್ರಮೆಯಿಂದಲೂ…. ನಗೆಯ ಕೋಟೆಗೆ ಲಗ್ಗೆಯಿಟ್ಟು ಅಳುವ ಆಳೋ ಸಂತಸದ ತೇರನ್ನೇರಿ ಮೈ ಮರೆತ್ತಿದ್ದೇನೆ.. ನಿನ್ನ ಒನಪು ಕಾಡದಿರಲೆಂಬ ಜಂಭದಿಂದಲೂ ಆತಂಕದಿಂದಲೂ… ಬಯಕೆ ಭ್ರಾಂತಿಯಾಗುವುದೋ ಜಂಭ ಕರಗಿ ನಿನ್ನೆದೆಗೆ ಒರಗುವನೋ ಗೊತ್ತಾಗುತ್ತಿಲ್ಲ.. ಕಾರಣ ಹೃದಯಕೆ ಗತ್ತಿನ ಭಾಷೆ ಗೊತ್ತಿಲ್ಲವಲ್ಲ.. **********

ಕಾವ್ಯಯಾನ

ದೇದೀಪ್ಯಮಾನ ರೇಶ್ಮಾ ಗುಳೇದಗುಡ್ಡಾಕರ್ ಎಲ್ಲ ಕಳೆದುಕೊಂಡೆ ಎಂದುಗೀಳಿಟ್ಟವು ಸುತ್ತಲಿನ ಜನಮನಗಳುಮನದಲ್ಲೆ ನಕ್ಕು ಮಾತಿಗಾಗಿಅನುಕಂಪ ತೂರಿದವರೆಷ್ಟೊ…ನನ್ನದಲ್ಲದ ವಸ್ತುಗಳಿಗೆಬೆಲೆಕಟ್ಟಿ ಮುನಿದವರೆಷ್ಟೋ..!! ಇವುಗಳ ಮಧ್ಯೆ ನನ್ನಲ್ಲಿಎನೀಲ್ಲ ಎಂದರೊ ಮಡುಗಟ್ಟಿಎದೆಯಾಳದಲಿ ಹುದುಗಿಸಣ್ಣ ಸದ್ದು ಮಾಡುತ್ತಿತ್ತು “ನನ್ನತನ “ದೇಹ ಮಾಗಿ ,ಬದುಕು ಬೆಂದರೂಪರಿಪಕ್ವವಾಗಿ ನನ್ನೇ ಬಿಗಿದಪ್ಪಿ ಸಂತೈಸುತ ಒಳಗಣ್ಣ ತೆರಸುತ ಭರವಸೆಯಲೋಕಕ್ಕೆ ಲಗ್ಗೆ ಇಟ್ಟುಭಾವನೆಗಳ ಸಂಘರ್ಷಕೆ ಉದ್ವೇಗ ಗಳಅರ್ತನಾದಕೆ ಮೌನ ಸವಿ ಸಾಗರವಉಡುಗೂರೆ ನೀಡಿ ಜೀವನದ ಪ್ರೀತಿಯಕಲಿಸಿ ಉತ್ಸಹಾದ ಬುಗ್ಗೆಯ ಹರಿಸಿತುಕಳೆದುಕೊಂಡಷ್ಟು ಬದುಕಿನಲ್ಲಿಪಡೆಯುವದು ಅಗಾಧ ಬದ್ದತೆಭರವಸೆಯ ಕಿರಣ ದೇದೀಪ್ಯಮಾನವಾಯಿತು …. *******  

ಕಾವ್ಯಯಾನ

ಸಾಮರಸ್ಯ ನೆನಪಾಗುತ್ತಾರೆ ಈದ್ ದಿನ ಬಾನು,ಅಹ್ಮದರು ಯುಗಾದಿ ದೀಪಾವಳಿಗೆ ಶುಭ ಕೋರುವ ಇವರು ಅಳುವಲ್ಲಿ ನಗುವಲ್ಲಿ ಒಂದಾಗುವ ನಾವು ಕಾಣುವ ಕನಸುಗಳಿಗೆ ಬಿಳಿಹಸಿರುಕೇಸರಿ ಎಂಬ ಭೇದವಿಲ್ಲ ಅಂತರಂಗದ ಮಿಡಿತ ನಮ್ಮದು ವೇಷ-ಭೂಷ, ಆಚಾರ-ವಿಚಾರಗಳಿಲ್ಲದ ನಮ್ಮ ಸ್ನೇಹ ತೊಟ್ಟಿದೆ ಸಾಮರಸ್ಯದ ಅಂಗಿಯನ್ನು ಇಣುಕಲಾರವು ಜಾತಿ ಮತ ಧರ್ಮಗಳು ಹೆಡೆಮುರಿ ಕಟ್ಟಿಕೊಂಡು ಬಿದ್ದಿರುತ್ತವೆ ಅವು. ***** ಗೌರಿ.ಚಂದ್ರಕೇಸರಿ

ಕಾವ್ಯಯಾನ

ಭಾವ ಬಂಧುರ ರೇಮಾಸಂ ಬಂಧುರದ ಭಾವದಲಿ ಬಿದ್ದಿರುವೆ ನಲ್ಲ, ಬಿಡದೆ ಮನದಿ ನಿನ್ನ ಸಾಯುವ ಮಾತೇಕೆ ? ಇರುವೆ ನಾ ನಿನ್ನುಸಿರಲಿ ಹಠ ಮಾಡದಿರು ಸಖ ಮುನಿಸಿನಲಿ/ ನಾನಿರುವೆ ಕರ್ಮದ ಪಥದಲಿ ಗೊತ್ತೇನು ಒಲವೇ//ಪ// ಸಂತೈಸಿದ ಎನ್ನ ಮನಕೆ ಮುಗಿದಿಲ್ಲ ಬಾಳು / ಕಂಡ ಕಣ್ಣ ಕನಸು ಆಗುವದೇ ಗೋಳು/ ಬರಡಾಗಲು ಮನಸು ನಿನದಲ್ಲ ಮರುಳೇ/ ಬಾ ಎನಲು ನಾ ಹೋಗಿರುವೆನೇನು ನಿನ್ನಲ್ಲೇ ಇರುವೆನು ಗೊತ್ತೇನು ಒಲವೇ// ನೀನೇಕೆ ಬಡಪಾಪಿ ಜೀವನಕೆ ಚೇತನವಾಗಿರುವೆ/ ಎನ್ನ ಹೃದಯವಿದೆ ನಿನ್ನಲ್ಲೇ […]

ಕಾವ್ಯಯಾನ

ಹೀಗೊಂದು ಕವಿತೆ ಎಸ್ ನಾಗಶ್ರೀ ಹೀಗೆ ಬಿರುಸುಮಳೆಯಲ್ಲೇ ಒಮ್ಮೊಮ್ಮೆ ಗೆಳೆತನಗಳು ಗಾಢವಾಗುವುದು ಬೇಡಬೇಡವೆಂದರೂ ಹುಣಸೆಮರದಡಿಯಲಿ ನಿಂತು ಗುಡುಗು ಸಿಡಿಲಿಗೆ ಬೆಚ್ಚುತ್ತಾ ಬಿದ್ದ ಕಾಯಿಗಳ ಕಣ್ಣಲ್ಲೇ ಭಾಗಮಾಡುತ್ತಾ ನಿನ್ನೆಯೊಂದು ಇತ್ತು ನಾಳೆ ಬರುವುದು ಇಂದು ಅರ್ಧ ಮುಗಿದಿದೆಯೆಂಬ ಯಾವ ಕುರುಹೂ ಕಾಣದಂತೆ ಮುಗಿಲಿನ ಮಾತಿಗೆ ಭುವಿ ಕಿವಿಯಾನಿಸಿ ಮತ್ತೆ ಮತ್ತೆ ಅರೆಶಬ್ದಗಳಲಿ ಉತ್ತರಿಸುವುದ ನೋಡುವುದೂ ಜೀವಮಾನದ ಅನುಭವ ಹಾಗೆ ಒಂದೊಮ್ಮೆ ಬಿರುಮಳೆಯಲ್ಲಿ ಸಿಕ್ಕ ಗೆಳತಿ ಇನ್ನು ಹತ್ತು ವರ್ಷಕ್ಕೆ ನೇಣು ಬಿಗಿದುಕೊಂಡಳು ಒಡಲಲ್ಲಿ ಐದು ತಿಂಗಳ ಹಸುಗೂಸು ಎಷ್ಟು […]

ವಾರದ ಕವಿತೆ

ಹೆಸರಿಲ್ಲದ ಕವಿತೆ ಸ್ಮಿತಾಅಮೃತರಾಜ್. ಸಂಪಾಜೆ ಹೆಸರಿಲ್ಲದ ಕವಿತೆ ನಾನು ಹಠಕ್ಕೆ ಬಿದ್ದವಳಂತೆ ತಾಳ್ಮೆಯಿಂದ ಕಾಯುತ್ತಲೇ ಇದ್ದೇನೆ ಹಾಗೇ ಬಂದು ಹೀಗೇ ಹೋದ ಕವಿತೆಯನ್ನೊಮ್ಮೆ ಎಳೆದು ತಂದೇ ತೀರುವೆನೆಂಬಂತೆ. ಗೊತ್ತಿದೆ, ಬಲವಾದ ಕಾರಣವಿಲ್ಲದೆ ಕವಿತೆ ಕಾಣೆಯಾಗುವುದಿಲ್ಲ. ಅಥವಾ ಮತ್ಯಾವುದೋ ಗಳಿಗೆ ಸದ್ದಿಲ್ಲದೇ ಪಕ್ಕಕ್ಕೆ ಬಂದು ಆತುಕೊಳ್ಳುವ ಅದರ ಆತುರಕ್ಕೆ ಅವಸರ ಸಲ್ಲವೆಂಬುದೂ.. ಕಾಡಿದ್ದು ಒತ್ತರಿಸಿ ಬಂದು ಯಾವುದೋ ಒಂದು ಕ್ಷಣದಲ್ಲಿ ಪದಗಳಾಗಿದ್ದಕ್ಕೆ.. ನಿನಗೆ ಪದ್ಯ ಹೊಸೆಯುವುದೊಂದೇ ಕೆಲಸವಾ? ನಮಗೆ ನೋಡು ಓದೋಕ್ಕಾದರೂ ಪುರುಸೊತ್ತು ಬೇಡವಾ? ಪಾಪ! ಹೌದಲ್ವಾ! ಅವರ […]

ಕಾವ್ಯಯಾನ

ಈ ಯುದ್ಧ ಗೆಲ್ಲಲು ಡಾ .ಪ್ರಸನ್ನ ಹೆಗಡೆ ಈ ಯುದ್ಧ ಗೆಲ್ಲಲು ಶಸ್ತ್ರಾಸ್ತ್ರ ಬೇಕಿಲ್ಲ ಮುಖಗವಚವಷ್ಟೆ ಸಾಕು ಈ ಯುದ್ಧ ಗೆಲ್ಲಲು ಹೊರ ನಡೆಯ ಬೇಕಿಲ್ಲ ಒಳಗಿದ್ದರಷ್ಟೆ ಸಾಕು ಈ ಯುದ್ಧ ಗೆಲ್ಲಲು ಬೊಬ್ಬಿರಿಯಬೇಕಿಲ್ಲ ಮೌನಾಸ್ತ್ರವಷ್ಟೆ ಸಾಕು ಈ ಯುದ್ಧ ಗೆಲ್ಲಲು ಕಿತ್ತುಕೊಳ್ಳುವುದು ಬೇಕಿಲ್ಲ ಹಂಚಿ ತಿಂದರಷ್ಟೆ ಸಾಕು ಈ ಯುದ್ಧ ಗೆಲ್ಲಲು ಮಲ್ಲ ಶಾಸ್ತ್ರ ಬೇಕಿಲ್ಲ ಉಸಿರ್ವಿದ್ಯೆ ಯಷ್ಟೆ ಸಾಕು ಈ ಯುದ್ಧ ಗೆಲ್ಲಲು ಅಂತರಿಕಿಕ್ಷಕ್ಹಾರ ಬೇಕಿಲ್ಲ ಅಂತರದ ಮಂತ್ರ ಸಾಕು ಈ ಯುದ್ಧ ಗೆಲ್ಲಲು […]

ಕಾವ್ಯಯಾನ

ಶಾಯರಿ ಮರುಳಸಿದ್ದಪ್ಪ ದೊಡ್ಡಮನಿ (೧) ಹರೇ ಬಂದ್ರ ಅದು ಖರೇನ ಹೇಳತೈತಿ ಯಾವಾಗ್ಲೂ ನಕ್ಕೊಂತನ ಇರತೈತಿ ಹರೇ ಅನ್ನುದು ಹುಚ್ಚು ಕೊಡಿಯಾಗಿರತೈತಿ ಬೇಕಾದವರನ್ನ ಬೇಕಾದಂಗ ತಿರುಗುಸತೈತಿ. (೨) ಪ್ರೀತಿ ಅನ್ನು ವಿಷ ಕುಡದೇನಿ ಸಾಯಾಕ ಒದ್ದ್ಯಾಡಕ ಹತ್ತೇನಿ ನೀ ಬಂದ್ರ ನಾಕು ದಿನ ಬದುಕತೇನಿ ಇಲ್ಲಂದ್ರ ಸಾವಿನ ಕೂಡ ಮಲಗತೇನಿ. (೩) ಪ್ರೀತಿ ಮಾಡವರ ಮೂಗಿನ ತುದಿ ಮ್ಯಾಲ ಸಿಟ್ಟಿರತೈತಿ ಅವರಿಗೆ ಅದೇ ತಾನೇ ಪ್ರೀತಿ ಹುಟ್ಟಿಗೊಂಡಿರತೈತಿ ಮಾತಾಡವ್ರನ್ನ ಕಂಡ್ರ ಸಿಟ್ಟುಬರತೈತಿ. (೪) ಪ್ರೀತಿ ಸಮುದ್ರ ಒಡಿತೇಂದ್ರ […]

Back To Top