ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಈ ಯುದ್ಧ ಗೆಲ್ಲಲು

ಡಾ .ಪ್ರಸನ್ನ ಹೆಗಡೆ

ಈ ಯುದ್ಧ ಗೆಲ್ಲಲು
ಶಸ್ತ್ರಾಸ್ತ್ರ ಬೇಕಿಲ್ಲ
ಮುಖಗವಚವಷ್ಟೆ ಸಾಕು

ಈ ಯುದ್ಧ ಗೆಲ್ಲಲು
ಹೊರ ನಡೆಯ ಬೇಕಿಲ್ಲ
ಒಳಗಿದ್ದರಷ್ಟೆ ಸಾಕು

ಈ ಯುದ್ಧ ಗೆಲ್ಲಲು
ಬೊಬ್ಬಿರಿಯಬೇಕಿಲ್ಲ
ಮೌನಾಸ್ತ್ರವಷ್ಟೆ ಸಾಕು

ಈ ಯುದ್ಧ ಗೆಲ್ಲಲು
ಕಿತ್ತುಕೊಳ್ಳುವುದು ಬೇಕಿಲ್ಲ
ಹಂಚಿ ತಿಂದರಷ್ಟೆ ಸಾಕು

ಈ ಯುದ್ಧ ಗೆಲ್ಲಲು
ಮಲ್ಲ ಶಾಸ್ತ್ರ ಬೇಕಿಲ್ಲ
ಉಸಿರ್ವಿದ್ಯೆ ಯಷ್ಟೆ ಸಾಕು

ಈ ಯುದ್ಧ ಗೆಲ್ಲಲು
ಅಂತರಿಕಿಕ್ಷಕ್ಹಾರ ಬೇಕಿಲ್ಲ
ಅಂತರದ ಮಂತ್ರ ಸಾಕು

ಈ ಯುದ್ಧ ಗೆಲ್ಲಲು
ಸೈನ್ಯವೇ ಬೇಕಿಲ್ಲ
ಆತ್ಮಬಲ ಒಂದೇ ಸಾಕು.

*******

About The Author

Leave a Reply

You cannot copy content of this page

Scroll to Top