ಕಾವ್ಯಯಾನ
ಗಝಲ್ ಶಂಕರಾನಂದ ಹೆಬ್ಬಾಳ ಬಡತನದ ಬವಣೆ ನೋವು ನಲಿವುಗಳಲಿ ಕಂಡೆ ಒಳಿತು ಕೆಡಕುಗಳ ನಿತ್ಯಸತ್ಯವ ಆಂತರ್ಯದಲಿ ಕಂಡೆ….!!! ಬಣ್ಣನೆಗೆ ನಿಲುಕದ ಮಾರ್ಮಿಕ ಕಟುಸತ್ಯಗಳ ಜೊತೆ ಜೀವಂತ ಹೆಣದಂತೆ ಬದುಕಿ ಇರುವವರಲಿ ಕಂಡೆ…!!! ಸೋತು ಸೊರಗಿ ಮೂಕವಾದ ಬದುಕಿನಲಿ ಸುಕ್ಕುಗಟ್ಟಿದ ಚರ್ಮ ಬತ್ತಿದ ಬೆವರಿನಲಿ ಕಂಡೆ…!!! ಹರಿದ ಚಿಂದಿ ಬಟ್ಟೆಗಳ ನಡುವೆ ನಾಳೆ ಶ್ರೀಮಂತನಾಗುವೆ ಎನ್ನುವ ಕನಸ ಹೊತ್ತುಕೊಂಡಿರುವ ಬಡವರಲಿ ಕಂಡೆ…!!! ಕೊನೆತನಕ ದುಡಿದರು ಬಡತನ ದೂರಾಗಲಿಲ್ಲ ಎಂಬ ಅಭಿನವನ ಮಾತು ಸುಳ್ಳಲ್ಲ ಎನ್ನುವರ ಮನದಲಿ ಕಂಡೆ…!!! ************
ಕಾವ್ಯಯಾನ
ನನ್ನೊಳಗೆ ನೀನಿರುವಾಗ… ಬಿದಲೋಟಿ ರಂಗನಾಥ್ ನನ್ನೊಳಗೆ ನೀನಿರುವಾಗ ಭಯದ ಬೆಂಕಿಯನ್ನು ಹಾರುವುದು ಕಷ್ಟವೇನಲ್ಲ ಸುಡುವ ನೆಲದ ತಂಪಿಗೆ ನೀನೆ ಬರೆದ ಪ್ರೇಮ ಪತ್ರವಿರುವಾಗ ಕಾಮನ ಬಿಲ್ಲು ಮಾತಾಡುವುದು ಕಷ್ಟವೇ ಅಲ್ಲ ಪರಿಷೆಯಲ್ಲು ಧ್ಯಾನ ನೇರಗೆರೆಯ ಮೇಲೆ ನಿಂತಿರುವಾಗ ಮನಸು ಯಾವ ಮೂಲೆಯಿಂದ ಪಲ್ಲಟಗೊಳ್ಳುವುದು ಹೇಳು ? ನಗುವ ಚಂದಿರನ ಮುದ್ದಿಸಿದ ನೀನು ಪ್ರೇಮದ ಹೂವಿನ ಸುಗಂಧವ ಮೂಸದೇ ಹೋದೆ ನಿನ್ನೊಳಗಿನ ದಾರಿಯ ಮೇಲೆ ಬೆಳೆದ ಮುಳ್ಳುಗಳು ಚುಚ್ಚುವಾಗ ಜಾತಿಯ ಬಣ್ಣಕೆ ಕಣ್ಣು ಮಂಜಾಗಿದ್ದು ಹೃದಯದ ಕಣಿವೆಗಳಲ್ಲಿ ಕಂದರ […]
ಕಾವ್ಯಯಾನ
ಅವರು ಒಪ್ಪುವುದಿಲ್ಲ. ! ವಿಜಯಶ್ರೀ ಹಾಲಾಡಿ ಕಾಫಿಯಲ್ಲಿ ಕಹಿ ಇರಬೇಕುಬದುಕಿನ ಹಾಗೆ ಮುತ್ತುಗದ ಹೂ ರಸಕುಡಿವ ಮಳೆಹಕ್ಕಿರೆಕ್ಕೆ ಸುಟ್ಟುಕೊಳ್ಳುತ್ತದೆ ಬೂದಿಯಾದ ದಿನಗಳಆಲಾಪಿಸುವ ಇರುಳಹಕ್ಕಿನಿರಾಳ ಕಂಡುಕೊಳ್ಳುತ್ತದೆ ದಟ್ಟ ನೋವು ಒಸರುವಅಂಟಿನ ಮರ ಯಾರಸಾಂತ್ವನಕ್ಕೂ ಕಾಯುವುದಿಲ್ಲ ಬೋರಲು ಬಿದ್ದ ಆಕಾಶಬುವಿಯ ಕಣ್ಣೀರಿಗೇನೂಕರಗಿದ್ದು ಕಂಡಿಲ್ಲ ನದಿಯಲ್ಲಿ ತೇಲಿಬಂದಹಸಿಮರ -ನಾಗರಿಕತೆಯಹೆಣವೆಂದು ಅವರು ಒಪ್ಪುವುದಿಲ್ಲ. *********
ಕಾವ್ಯಯಾನ
ಸೂತಕ ಶಾಂತಾ ಜೆ ಅಳದಂಗಡಿ ಹುಚ್ಚು ತುರಗ ಈ ಮನ ದಿಕ್ಕೆಟ್ಟು ಓಡುತಿದೆ ಕಾಣಲು ಹೂ ಬನ ಪ್ರೀತಿ ಎಂದರೆ ನೀರ್ಗುಳ್ಳೆ ಒಲವ ನುಡಿಯಲಿರುವುದೆಲ್ಲ ಸುಳ್ಳೆ ಹೂವ ಮಧುವ ಹೀರುವ ವರೆಗು ಮೋಹದ ಮಾತುಗಳ ಬೆರಗು ದಾಹ ತೀರಿದಮೇಲೆ ನದಿಯ ಹಂಗಿಲ್ಲ ವಶವಾದನಂತರ ಅವಳು ನಲ್ಲೆಯಲ್ಲ ಪ್ರೇಮ ಸಾಯುತ್ತೆ ನರಳಿ ನರಳಿ ಬಾರದೆಂದಿಗೂ ಅದು ಮರಳಿ ಮರುದಿನವೂ ರವಿ ಉದಯಿಸುತ್ತಾನೆ ಹೊಂಗಿರಣಗಳ ಭುವಿಗೆಲ್ಲ ಚೆಲ್ಲುತ್ತಾನೆ ಸತ್ತಪ್ರೀತಿಯ ಸೂತಕ ಆನಂದಿಸಲಾಗದು ಸುಂದರ ಬೆಳಕ ಮೈ ಮರೆತರೆ ಒಂದು ಕ್ಷಣ […]
ಕಾವ್ಯಯಾನ
ನೀನೀಗ ಇದ್ದಿದ್ದರೆ ಚೈತ್ರಾ ಶಿವಯೋಗಿಮಠ “ನೀನೀಗ ಇದ್ದಿದ್ದರೆ” ಆ ಕಲ್ಪನೆಯೇ ಚಂದ ಬಹುಶಃ ಹೋಗುತ್ತಿದ್ದೆವು ಗಿರಿ-ಕಣಿವೆಗಳ ಮೇಲೆ ಹತ್ತಿಳಿಯಲು!, ಹೂವಿಂದ ಹೂವಿಗೆ ಹಾರುವ ಬಣ್ಣದ ಚಿಟ್ಟೆಗಳ ಹಿಡಿಯಲು, ಓಡುವ ನದಿಯ ಬೆನ್ನುಹತ್ತಲು, ಹಿಮ ಪರ್ವತಗಳ ಮೇಲೇರಿ ಹಿಮದ ಬೊಂಬೆಯ ಮಾಡಿ ನಲಿಯಲು.. ನೀನೀಗ ಇದ್ದಿದ್ದರೆ ಬಹುಶಃ ನನ್ನೆಲ್ಲ ಕ್ಷಣಗಳು ಅಪ್ಪನೆಂಬ ಮಂತ್ರ ಪಠಣವೇ! ಹೊಸ ಪುಸ್ತಕಗಳೋದುವ ನನ್ನ ನೆಚ್ಚಿನ ಸಹಪಾಠಿಯಾಗುತ್ತಿದ್ದೆ ಬಂದ ಹೊಸ ಸಿನಿಮಾಗಳ ನನ್ನ ಖಾಸಗಿ ವಿಮರ್ಶಕನಾಗುತ್ತಿದ್ದೆ! ಎಲ್ಲ ಪ್ರಚಲಿತ ವಿಷಯಗಳ ಮೆಚ್ಚಿನ ವಿಶ್ಲೇಷಕನಾಗುತ್ತಿದ್ದೆ! ನೀನೀಗ […]
ಕಾವ್ಯಯಾನ
ಮಕ್ಕಳಪದ್ಯ ಅಪ್ಪನೇ ಪ್ರೀತಿ ನಾಗರೇಖಾ ಗಾಂವಕರ ಅಪ್ಪನದೇಕೆ ಕಂಚಿನಕಂಠ ನಿನ್ನಂತಿಲ್ಲಲ್ಲಾ ಕಣ್ಣುಗಳಂತೂ ಕೆಂಡದ ಉಂಡೆ ನೋಡಲು ಆಗೊಲ್ಲ ಅಮ್ಮ ಪುಕ್ಕಲು ನಾನಲ್ಲ. ಆದರೂಅಮ್ಮ ಅಪ್ಪನೇ ಪ್ರೀತಿ ಎದೆಯೊಳಗೊಂದು ಮೀಟುವ ತಂತಿ ಕಾರಣ ಹೇಳಮ್ಮ ಕೈಗಳ ಹಿಡಿದು ವಠಾರ ನಡೆದು ನಡೆಯಲು ಕಲಿಸಿದನು ದಾರಿಯ ಮಧ್ಯೆ ಸಿಕ್ಕವರಲ್ಲಿ’ ಮಗಳೆಂದು ಹೊಗಳಿದನು ಬೈಕಲಿ ಕೂರಿಸಿ, ಮರಗಿಡ ತೋರಿಸಿ, ಮನವನು ತಣಿಸುವನು ಅಪ್ಪನು ನಿನಗಿಂತ ಪ್ರಿಯನವನು. ಆಗೀಗೊಮ್ಮೆ ಉಪ್ಪಿನಮೂಟೆ ಮಾಡುತ ಮುದ್ದಿಸುವ ಮರುಕ್ಷಣ ನನ್ನ ಹಠವನು ಕಂಡು ಕೋಲನು ತೋರಿಸುವ ಅಮ್ಮಾ, […]
ಗಝಲ್
ಗಝಲ್ ಸ್ಮಿತಾ ರಾಘವೇಂದ್ರ ನಟನೆಯೋ ನಿಜವೋ ನಂಟನ್ನು ಹುಸಿಯಾಗಿಸಬೇಡ ಬಳ್ಳಿಯ ಬೇರು ಚಿವುಟಿ ಚಿಗುರೆಲೆ ಹುಡುಕಬೇಡ ತುಪ್ಪದಂಥ ಒಲವಲ್ಲಿ ಉಪ್ಪು ಬೆರೆಸುವುದು ಸುಲಭ ಒಪ್ಪು ತಪ್ಪುಗಳ ಬರಿದೆ ಕೆದಕೆದಕಿ ಕೆಡಿಸಬೇಡ ಹೊಟ್ಟೆಯೊಳಗಿನ ಕಿಚ್ಚು ಉರಿದು ಸುಟ್ಟಿದೆ ಸೆರಗನ್ನು ಸಿಹಿ ಕೊಡುವ ನೆಪದಿ ಸವಿಯ ಸೂರೆ ಮಾಡಬೇಡ ಹಸಿರೆಲೆಯಾಗೇ ಬಹುದಿನ ಇರಲಾಗದು ನಿಜ ಹಣ್ಣಾಗುವ ಮೊದಲೇ ಹಿಸಿದು ಉದುರಿಸಬೇಡ ಹುತ್ತವ ಬಡಿಬಡಿದು ಹಾವು ಸಾಯಿಸುವ ಭ್ರಮೆಬೇಡ ಯಾವ ಹುತ್ತದಲಿ ಯಾವ ಹಾವೋ ಕೈಹಾಕಬೇಡ ಎಷ್ಟು ಅರಿತರೇನು ಸೋಗಿನ ಸ್ನೇಹಗಳ […]
ಕಾವ್ಯಯಾನ
ಮಣ್ಣಾಗುವ ಮುನ್ನ ಮರವಾಗುವೆ ಪ್ಯಾರಿಸುತ ನನ್ನೆಲ್ಲ ಪ್ರೀತಿ ಮಣ್ಣಾಗುವ ಮುನ್ನ ನೀ ಬಂದು ಬೀಜವ ನಡು ಇಂದಲ್ಲ, ನಾಳೆ ಎಂದಾದರೊಮ್ಮೆ ಮೊಳೆಕೆ ಬಿಡುವದು ನೋಡು ಹಸಿರಾಗಿ ಚಿಗುರಲಿ,ಮರವಾಗಿ ಬೆಳೆಯಲಿ ನಾ ಆರೈಕೆ ಮಾಡುವೆ ಬಿಡು ಹಿಂತಿರುಗಿ ನೋಡದೆ, ಮರು ಏನು ಹೇಳದೆ ಹೊಸದಾರಿ ಹಿಡಿದುಬಿಡು ಹೀಗೊಮ್ಮೆ ಬೈದುಬಿಡು, ನೆನಪಲ್ಲೆ ಕೊಂದುಬಿಡು ದೇಹಕ್ಕೆ ಉಸಿರೆ ಆಸರೆಯಂತೆ ಉಸಿರಂತೆ ಇದ್ದವಳು ನೀ ಹೋದ ಮೇಲೆ ಈ ದೇಹವೀಗ ಶವದಂತೆ ನೋಡು ನೀ ಬಂದು ಸುಟ್ಟರು ಇಲ್ಲವೇ, ಮಣ್ಣಲ್ಲಿ ಹೂತರು, ಅಲ್ಲಿ […]
ಕಾವ್ಯಯಾನ
ಹರೆಯದ ಹಬ್ಬ ಗೌರಿ.ಚಂದ್ರಕೇಸರಿ. ಹಣ್ಣೆಲೆಗಳೆಲ್ಲ ಉದುರಿ ಹೊಸತೊಂದು ಚಿಗುರಿಗೆ ಹಾದಿ ಮಾಡಿಕೊಟ್ಟಿವೆ ಎಳೆಯ ಹಸಿರ ಹೊದ್ದು ತೂಗಿ ತೊನೆದಾಡುವ ಪ್ರಕೃತಿಗೆ ಮತ್ತೊಂದು ಹುಟ್ಟಿನ ಸಡಗರ, ಸಂಭ್ರಮ. ದುಂಬಿ, ಚಿಟ್ಟೆಗಳ ಝೇಂಕಾರ ಬಾನಾಡಿಗಳ ಚಿಲಿಪಿಲಿ ವಾಲಗ ಸಮಷ್ಠಿಗೆಲ್ಲ ಬಿಡುವಿಲ್ಲದ ಕಾಯಕ ಮೊದಲ ಬಾರಿ ಅರಳಿ ನಿಂತ ಕುವರಿಯಂತೆ ವಧು ಧರಿಸಿದ ನಾಚಿಕೆಯಂತೆ ಇಳೆಗೆಲ್ಲ ಹರೆಯದ ಹಬ್ಬ. ಸಿಂಗಾರಗೊಂಡ ಪ್ರಕೃತಿಗೆ ಭುವಿಯೆಲ್ಲ ಹಸಿರ ತಳಿರ ತೋರಣ ಅರಳಿ ನಿಂತ ಸುಮಗಳ ಅಕ್ಷತೆ ರಂಗೇರಿದ ಕೆನ್ನೆ ತುಂಬ ಸರ‍್ಯನೆರಚಿದ ಚೈತ್ರದೋಕುಳಿ.
ಕಾವ್ಯಯಾನ
ಇಂತಿಷ್ಟೇ ಮನವಿ. ಮಧುಸೂದನ ಮದ್ದೂರು ಕನಸಲು ನೀ ಕಾಡುವೆ ಇಪ್ಪತ್ತು ವರುಷದ ಬಳಿಕ ಬಂದ ಓಲೆಯಂತೆ… ಓಲೆಯನ್ಬು ಬಿಚ್ಚಲು ಒಲೆಯಲ್ಲಿ ಕಾದು ಕಾದಬೆಚ್ಚಗಿನ ನೆನಪುಗಳು ನೆನಪುಗಳ ಬೆನ್ನಟ್ಟಲು ಮಾಯಜಿಂಕೆ ಬೆನ್ನಟ್ಟಿದಂತೆ.. ಬೆನ್ನಟ್ಟುತ್ತ ಬೆವರುತಾ ಬೇಸರಿಸಿ ಕೂರಲು ಸೋತನೆಂಬ ಅಪಮಾನದ ಕುದಿ… ಕುದಿ ಹೃದಯವಿದು ಕಾಯಿಸದೇ ಬಂದು ಬಿಡು ನನ್ನದೆಗೆ ನಿನ್ನುಡುಗ ಗಿಡುಗ ಇನ್ನೂ ಕಾಯಲಾರ… ಕಾದು ಸಂಭ್ರಮಿಸಲು ವಯಸ್ಸು ಮೀರಿದೆ ಬೆಳ್ಳಿಗೂದಲು ಇಣುಕಿವೆ.. ಇಣುಕಿದ ಬೆಳ್ಳಿಗೂದಲಿನಲ್ಲೂ ನಿನ್ನ ಬಂಗಾರದ ನೆನಪು ಒಸರಿವೆ.. ಬಂದು ಬಿಡು ಈ ಪ್ರೇಮ […]