ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-15 ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ. ಲೇ:ಸವಿತಾ ದೇಶಮುಖ  ೧೯೪೭ರ ಸಮಯ… ದೇಶಕ್ಕೆ ಸ್ವಾತಂತ್ರ್ಯದ ಸುಳಿವು ಸಿಗುತ್ತಿದ್ದಂತೆಯೇ, ಜಯದೇವಿ ತಾಯಿಯವರು ಸ್ತ್ರೀಯರನ್ನು ಒಗ್ಗೂಡಿಸಿ ಸಭೆಗಳನ್ನು ನಡೆಸಲಾರಂಭಿಸಿದರು.ಸ್ವಾಭಿಮಾನಿ ಸಮಾಜ, ಸ್ತ್ರೀಯರ ಕರ್ತವ್ಯ ಮತ್ತು ಸ್ವಾತಂತ್ರ ಭಾರತದ ಬದುಕಿನ ಬಗ್ಗೆ ಊರು-ಊರುಗಳಲ್ಲಿ ಜಾಗೃತಿ ಮೂಡಿಸಿದರು. ಮನೆಯಲ್ಲಿ ಗಂಡನ ಆರೋಗ್ಯ ಸರಿಯಿಲ್ಲದಿದ್ದರೂ, ಕುಟುಂಬದ ಬೆಂಬಲದೊಂದಿಗೆ ಅವರು ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಕೊಂಡರು. ಕೊನೆಗೂ… ಆ ಮಹಾನ್ ಕ್ಷಣ ಬಂತು ಭಾರತ ಮಾತೆ ಬಿಡುಗಡೆ ಹೊಂದುವ ದಿನ ಬಂದೇಬಿಟ್ಟಿತು… ಭಾರತದ ಕೊನೆಯ ಬ್ರಿಟನ್  ವೈಸರಾಯ ಲೂಯಿಸ್ ಲಾರ್ಡ್ ಮೌಂಟ್ ಬೆಂಟನ್   ಭಾರತಕ್ಕೆ ಸ್ವಾತಂತ್ರ್ಯವನ್ನು ಘೋಷಿಸಿದ…… ೧೪-೮-೧೯೪೭ ರಂದು ದೇಶ ಸ್ವಾತಂತ್ರ್ಯವಾಗುವ ಸಂತಸದ ಮುನ್ನಾ ದಿನ…. ಅಂದು ಸಂಜೆ ತಾಯಿ ಸಂಗವ್ವನವರು,  ಅಜ್ಜಿಯಂದಿರಾದ ಬಸವ್ವಬಾಯಿ ವಾರದ ಮತ್ತು ಗೌರವ್ವ ಬಾಯಿ ವಾರದ ಮುಂತಾದ ಹಿರಿಯರೊಡನೆ ಜಯದೇವಿ ತಾಯಿಯವರು ಶಿವಯೋಗಿ ಸಿದ್ದರಾಮೇಶ್ವರನ ಮಂದಿರದಲ್ಲಿ ಅವನ ಸನ್ನಿಧಿಗೆ ಬಂದರು …ಮೊಟ್ಟಮೊದಲ ಬಾರಿಗೆ ಸಿದ್ದರಾಮನ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಿದರು ‌.ಇಡೀ ರಾತ್ರಿ ಅಲ್ಲಿಯೇ ಉಳಿದರು…. ಆ ಕಡೆ ದೇಶ ಸ್ವಾತಂತ್ರವಾಗುತ್ತಿದ್ದರೆ ಈಕಡೆ ಎಲ್ಲ ತಾಯಿಯಂದಿರು ಮಂದಿರದಲ್ಲಿ ಪೂಜೆ ಪುನಸ್ಕಾರ ಸಲ್ಲಿಸುತ್ತಿದ್ದರು‌. ಧ್ಯಾನ ಭಜನೆ ಜಾಗರಣೆಯು ಪ್ರಾರಂಭವಾಗಿತ್ತು. ೧೫-೮-೧೯೪೭ ರ ಸುಪ್ರಭಾತದಲ್ಲಿ ಗೌರವ್ವಬಾಯಿ ವಾರದ ಧ್ವಜಾರೋಹಣ ಮಾಡಿದರು.  ಎಲ್ಲರೂ ಕೂಡಿ ಇಡೀ ಊರಿಗೆ ಊಟ ಕೊಟ್ಟರು .ಸ್ವಾತಂತ್ರದ ಸಂಭ್ರಮಾಚರಣೆ ಮಾಡಿದರು. ಸ್ವಾತಂತ್ರ್ಯ ಸಿಗುವ ಹಿಂದಿನ ದಿನದಿಂದ ಅಂದರೆ ೧೪ ರಿಂದ ೧೮ ತಾರೀಖಿನ ಮುಂಜಾನೆಯವರೆಗೂ  ಮೂರು ದಿನ ಮತ್ತು ನಾಲ್ಕು ರಾತ್ರಿಗಳು ಸತತವಾಗಿ ಎಲ್ಲ ತಾಯಂದಿರು ದೇವಾಲಯದ ಆವರಣದಲ್ಲಿಯೇ ಹಗಲು ಹೊತ್ತು ಚರಕದ ಮೂಲಕ ನೂಲ ತೆಗೆಯುವ ನೇಯ್ಗಗೆ ಕಾಯಕ ಮತ್ತು ಅನ್ನದಾಸೋಹ ಮಾಡಿದರು….ರಾತ್ರಿ ಹೊತ್ತು ಸಿದ್ದರಾಮನ ಸನ್ನಿಧಿಯಲ್ಲಿ ಕಾಲ ಕಳೆದರು.ಊರಿನ ಎಲ್ಲರಿಗೂ ಅನ್ನದಾಸೋಹ ನಡೆಯಿತು.ಮೂರು ದಿನಗಳ ಕಾಲ ಸೇವೆ, ಭಕ್ತಿ ಮತ್ತು ಕಾಯಕ ಒಂದಾಗಿ ಬೆಸೆದವು. ಭಾರತಾಂಬೆಯ ಬಿಡುಗಡೆಯ ಸಂದರ್ಭವನ್ನು ಜಯದೇವಿ ತಾಯಿಯವರು ನಮ್ಮೆದುರಿಗೆ ಈ ರೀತಿಯಾಗಿ ವಿವರಿಸಿ ಹೇಳುತ್ತಿದ್ದರು…….  ಭಾರತಭೂಮಿಯ ಇತಿಹಾಸದಲ್ಲಿ ಒಂದು ಹೊಸ ಬೆಳಗಿನ ಉದಯವಾಗಿತ್ತು. ಶತಮಾನಗಳ ದಾಸ್ಯದಿಂದ ಬಳಲಿದ ಜನರ ಹೃದಯಗಳಲ್ಲಿ, ಆ ದಿನ ಉದಯಿಸಿದ ಸೂರ್ಯ ಕೇವಲ ಬೆಳಕನ್ನ ಅಲ್ಲಸ್ವಾತಂತ್ರ್ಯದ ಉಸಿರಾಟಕ್ಕೆ ಉಸಿರು ತಂದನು.  “ಭಾರತ ದೇಶಕ್ಕೆ ಸ್ವಾತಂತ್ರ್ಯ”……ಘೋಷಣೆ ಆಗುತ್ತಿದ್ದಂತೆ, ದೇಶದಾದ್ಯಂತ ಒಂದು ಅದ್ಭುತ ಭಾವನಾತ್ಮಕ ಅಲೆ ಹರಡಿತು.ಗ್ರಾಮದಿಂದ ನಗರವರೆಗೆ, ಶ್ರೀಮಂತರಿಂದ ಬಡವರವರೆಗೆ ಪ್ರತಿ ಹೃದಯದಲ್ಲೂ ಒಂದೇ ಮಾತು……“ನಾವು ಸ್ವತಂತ್ರರು!”ರಾತ್ರಿಯ ಮಧ್ಯದಲ್ಲಿ ರೇಡಿಯೋಗಳ ಮುಂದೆ ಕುಳಿತು ಜನರ ಕಣ್ಣುಗಳು ಕಣ್ಣೀರಿನಿಂದ ತುಂಬಿಕೊಂಡವು……ಆ ಕಣ್ಣೀರು… ಅನೇಕ ಶೂರರು ವೀರರ ತ್ಯಾಗ ಬಲಿದಾನದ ಕನಸು ನೆರವೇರಿದ ಸಂತಸದ ಕಣ್ಣೀರು……!!!ಎಲ್ಲಿ ನೋಡಿದರಲ್ಲಿ ಹಬ್ಬದ ಸಂಭ್ರಮದ ವಾತಾವರಣಮಕ್ಕಳು ಯುವಕರು ಹಿರಿಯರು ಓಡಾಡುತ್ತಾ “ವಂದೇ ಮಾತರಂ” ಎಂದು ಕೂಗುತ್ತಿದ್ದರು, ಮಹಿಳೆಯರು ಮನೆ ಮುಂಭಾಗ ರಂಗೋಲಿ ಹಾಕಿ, ದೀಪ ಬೆಳಗಿಸಿ ಹಬ್ಬ ಆಚರಿಸುತ್ತಿದ್ದರು, ಎಲ್ಲಹಳೆಯ ಕಷ್ಟಗಳನ್ನು ಮರೆತು ಎಲ್ಲರೂ ಪರಸ್ಪರ ಅಪ್ಪಿಕೊಂಡು ಹರ್ಷ ವ್ಯಕ್ತಪಡಿಸುತ್ತಿದ್ದರು. ರಸ್ತೆಗಳು ಜನಸಾಗರದಿಂದ ತುಂಬಿ ಹೋಗಿದ್ದವು.ತ್ರಿವರ್ಣ ಧ್ವಜವು ಗಾಳಿಯಲ್ಲಿ ಹಾರಾಡುತ್ತಿತ್ತು…… *ಜನರ ಹೃದಯದಲಿ ಗರ್ವದ ಬಾವುಟ ಹಾರಾಡುತಿತ್ತು..*ಜನರು ನೃತ್ಯ ಮಾಡಿ, ಹಾಡಿ, ಸಿಹಿ ಹಂಚಿಕೊಂಡು ಉಲ್ಲಾಸದಲ್ಲಿ ಮುಳುಗಿದ್ದರು. ಅಂದು ಕೆಲವರು ತಮ್ಮ ಜೀವವನ್ನು ತ್ಯಾಗ ಮಾಡಿದವರನ್ನು ನೆನೆದು ಮೌನವಾಗಿ ಕಣ್ಣೀರಿಟ್ಟರು.ಸುಭಾಷ್ ಚಂದ್ರ ಬೋಸ್- ಭಗತ್ ಸಿಂಗ್ ಹೀಗೆ ಅನೇಕ ವೀರರ ಬಲಿದಾನವೇ ಈ ಸ್ವಾತಂತ್ರ್ಯದ ಬೆಲೆ ಎಂಬ ಅರಿವು ಜನರಲ್ಲಿ ಗಾಢವಾಗಿತ್ತು.ಹೃದಯಗಳಲ್ಲಿ ಒಂದೇ ಭಾವನೆ….“ಇದು ನಮ್ಮ ದೇಶ… ನಮ್ಮ ಸ್ವಾತಂತ್ರ್ಯ… ನಮ್ಮ ಭವಿಷ್ಯ!”ಆ ದಿನದ ಹರುಷವನ್ನು ಪದಗಳಲ್ಲಿ ಸಂಪೂರ್ಣವಾಗಿ ಹಿಡಿಯಲು ಸಾಧ್ಯವಿಲ್ಲ.ಅದು ನಮ್ಮ ದೇಶದ ಪುನರ್ಜನ್ಮ ಸಂದರ್ಭ….ದೇಶದ ಆತ್ಮ ಪುನಃ ಹುಟ್ಟಿದ ಕ್ಷಣ…….ಆ ಕ್ಷಣದಲ್ಲೇ ಜನರು ಭವಿಷ್ಯದ ಕನಸುಗಳನ್ನು ಕಟ್ಟಿಕೊಂಡರು….ನಮ್ಮ ಭಾರತ ದೇಶವು ಅಂದಿನಿಂದಬಡತನವಿಲ್ಲದ ದೇಶ, ಸಮಾನತೆಯ ಸಮಾಜ, ಶಾಂತಿಯ ಭಾರತ ಕಟ್ಟವ ಕನಸು ಕಂಡುಕೊಳ್ಳಲಾರಂಭಿಸಿದ್ದೇವು…ಆದರೆ…ಆ ಹರುಷದ ನಡುವೆಯೇ ವಿಭಜನೆಯ ನೋವು ಕೂಡ ಎಲ್ಲ ಹೃದಯಗಳನ್ನು ಕಾಡುತ್ತಿತ್ತು. ಆದರೂ, ಆ ದಿನದ ಸಂತೋಷದ ಹೊಳೆಯು ಆ ನೋವನ್ನು ಸಹ ಮಸುಕಾಗಿಸಿತು.೧೯೪೭ ರ ಆ ದಿನ…ಭಾರತದ ಪ್ರತಿಯೊಂದು ಹೃದಯವೂ ಒಂದೇ ಲಯದಲ್ಲಿ ಹಾಡುತಿತ್ತು…….*ಜೈ ಹಿಂದ*.. ಜೈ ಹಿಂದ್… ಭಾರತ ಮಾತೆಗೆ ಜಯವಾಗಲಿ…. ಭಾರತ ಮಾತಾ ಕಿ ಜೈ ಎನ್ನುವ ಕೂಗು ಎಲ್ಲಡೇಗೂ ಕೇಳುತ್ತಿತ್ತು…….!!!! ಭಾರತೀಯರು ಸ್ವಾತಂತ್ರ್ಯದ ದಿನಗಳನ್ನು ಅನುಭವಿಸುವದ್ರಲ್ಲಿಯೇ ದೇಶಕ್ಕೆ ಒಂದು ದೊಡ್ಡ ಅಘಾತ ಕಾದಿತ್ತು ….ಸ್ವಾತಂತ್ರ ಲಭಿಸಿದ ಕೆಲವು ತಿಂಗಳೊಳಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹತ್ತೆ ಆಗಿತ್ತು……..ಈ ದುರಂತ ಜಯದೇವಿ ತಾಯಿಯವರನ್ನು ಬಹಳ ದುಃಖಕ್ಕೆ ಇಡುಮಾಡಿತ್ತು…  ತಾಯಿಯವರು ಹೇಳುತ್ತಿದ್ದಂತೆ ಗಾಂಧೀಜಿಯವರು ತೀರಿಕೊಂಡಾಗ ಇಡೀ ದೇಶವೇ ಸ್ಮಶಾಣದ ಮೌನದಲಿ ಮುಳಗಿತ್ತು.. ಅಘಾತಕ್ಕೆ ಒಳಗಾಗಿತ್ತು…ಗಾಂಧೀಜಿಯವರ ಹತ್ಯೆ (೧೯೪೮ ಜನವರಿ ೩0) ದೇಶದ ಇತಿಹಾಸದಲ್ಲಿ ಅತಿ ದುಃಖಭರಿತ ಕ್ಷಣವಾಗಿತ್ತು….. ಜನ- ಮನಗಳನ್ನು ತಲ್ಲಣಗೊಳಿಸಿತು. ಜಯದೇವಿ ತಾಯಿಯವರು ಈ ಸುದ್ದಿಯನ್ನು ಕೇಳಿದಾಗ ಅವರ ಮನ ಕುಸಿದುಹೋಯಿತು. ….“ದೇಶಕ್ಕೆ ಅಹಿಂಸೆಯ ದೀಪ ಹಚ್ಚಿದ ಮಹಾತ್ಮನನ್ನು ಕತ್ತಲೆಯು ನುಂಗಿದೆ. ಅಹಿಂಸೆಯ ಪಾಠ ಹೇಳಿಕೊಟ್ಟ ಮಹಾತ್ಮರು ಹಿಂಸೆಯ ಅಟ್ಟಹಾಸಕ್ಕೆಬಲಿಯಾದರು….ಅವರು ಬದುಕಿದ್ದರೆ ನಮ್ಮ ಹಾದಿ ಬೆಳಗುತ್ತಿತ್ತು… ಈಗ ನಮ್ಮೊಳಗೆ ನಾವು ಬೆಳಕಾಗಬೇಕು.ಗಾಂಧೀಜಿಯವರ ದೇಹ ಹೋಗಿರಬಹುದು, ಆದರೆ ಅವರ ತತ್ತ್ವಗಳು ಸಾಯುವುದಿಲ್ಲ” ಎಂದು ಜನರಿಗೆ ಧೈರ್ಯ ತುಂಬಿದರು.ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯಿತು.. ಜೊತೆಗೆ ಹೃದಯದಲ್ಲಿ ಒಂದು ದಿಟ್ಟ ಸಂಕಲ್ಪ ಹುಟ್ಟಿತು….. ಗಾಂಧೀಜಿಯ ಆಚಾರ ವಿಚಾರಗಳನ್ನು ಮುಂದುವರಿಸಿಕೊಂಡು ಹೋಗುವ ಪಣತೊಟ್ಟರು. ದೇಶದಾದ್ಯಂತ .. ಜನರ ನೋವು ಆಕ್ರೋಶದಲಿ ಮೂಳಗಿರುವುದನ್ನು ನೋಡಿದಾಗ….. ಗಾಂಧೀಜಿಯವರು ಜನರ ಮೇಲೆ ಅದೆಷ್ಟು ಪ್ರಭಾವ ಬೀರಿದ್ದರು ಎನ್ನುವುದು ತೋರುತ್ತಿತ್ತು….“ಇನ್ನು ಮುಂದೆ ದೇಶಕ್ಕೆ ದಾರಿ ತೋರುವರು ಯಾರು?! ಎಂಬ ಪ್ರಶ್ನೆ ಜನರನ್ನು ಕಾಡಿತು.ಹೊಸತಾಗಿ ಸಿಕ್ಕ ಸ್ವಾತಂತ್ರ್ಯದ ಸ್ಥಿರತೆಗೆ ಬಗ್ಗೆ ಯೋಚಿಸಿ ಜನರಲ್ಲಿ ಭಯ ಉಂಟಾಯಿತು. ಜೊತೆ ಜೊತೆಗೆ ಧರ್ಮ, ಜಾತಿ ಭೇದಗಳಿಂದ ದೂರ ಇರಬೇಕು ಎಂಬ ಅರಿವು ಮೂಡಿಸುವ ಸಲುವಾಗಿಗ್ರಾಮಗಳಲ್ಲಿ, ನಗರಗಳಲ್ಲಿ ಶೋಕ ಸಭೆಗಳು ನಡೆದಸಿದರು….. ಗಾಂಧೀಜಿಯವರು ಬೋಧಿಸಿದ ಅಹಿಂಸೆ, ಸತ್ಯದ ಮಾರ್ಗವನ್ನು ಮತ್ತೆ ನೆನಪಿಸಿಕೊಟ್ಟರು .ಜನರು ತಮ್ಮೊಳಗಿನ ನಾಯಕತ್ವವನ್ನು ಹುಡುಕಲು ಪ್ರೇರೇಪಿಸಿದರು.“ನಾವು ಗಾಂಧೀಜಿಯವರಂತೆ ಬದುಕಬೇಕು” ಎಂಬ ಮನೋಭಾವನ್ನು ಬೆಳೆಸಲು ಸತತವಾಗಿ ಪ್ರಯತ್ನಿಸಿದರು .ಜಯದೇವಿ ತಾಯಿಯವರು ಜನರನ್ನು ಉದ್ದೇಶಿಸಿ“ಗಾಂಧೀಜಿಯವರ ರಕ್ತದ ಪ್ರತಿಯೊಂದು ಹನಿ ನಮ್ಮ ಹೃದಯದಲ್ಲಿ ದೇಶಭಕ್ತಿಯ ಬೀಜವಾಗಬೇಕು.ಕೋಪದಿಂದ ಅಲ್ಲ, ಪ್ರೀತಿಯಿಂದ ಈ ದೇಶವನ್ನು ಕಟ್ಟೋಣ…..ಗಾಂಧೀಜಿಯವರ ಹತ್ಯೆ ಕೇವಲ ಒಬ್ಬ ಮಹಾನ್ ವ್ಯಕ್ತಿಯ ಮರಣವಲ್ಲ,ಅದು ಒಂದು ಯುಗದ ಅಂತ ಆದರೆ ಮತ್ತೊಂದು ಯುಗದ ಆರಂಭವೂ ಹೌದು …. ಜನರು ಅವರ ಮಾರ್ಗವನ್ನು ಅನುಸರಿಸಲು ಪ್ರೇರೇಪಿತವಾಗು ಕ್ಷಣ ಬಂದೋದಗಿದೆ .ನಾವೆಲ್ಲರೂ ಸೇರಿ ಭಾರತ ಮಾತೆಯ ಸೇವೆ ಗ್ಯ್ಯೋಣ ಎಂದು ಸಾರಿದರು. ಗಾಂಧೀಜಿಯವರ ಹತ್ಯೆಯಾದ ಸಮಯದಲ್ಲಿ ಜಾತಿ ಮತಗಳ ಮಧ್ಯೆ ಕಲಹ ಪ್ರಾರಂಭವಾಗಿತ್ತು ಸಾಮರಸ್ಯ ಕಳೆದು ಹೋಗಿದ್ದು ಬಹುತೇಕ ಜನರು ಜಾತಿಗಲಭೆ ನಡೆಯುತ್ತಿದ್ದವು ಅಲ್ಲಲ್ಲಿ ಭಾವಿಸಿ ತಾಯಿಯವರು ಸಹನೆ ಸಾಮರಸ್ಯದಂತ ವಿಚಾರಗಳನ್ನು ಜನರಿಗೆ ಮನದಟ್ಟು ಮಾಡಿಕೊಳ್ಳುವಲ್ಲಿ  ಪ್ರಯತ್ನ ಪಟ್ಟರು. ಗಾಢ ದುಃಖ, ಆತಂಕ ಮತ್ತು ಜಾಗೃತಿ ತುಂಬಿದ ಒಂದು ಭಾಷಣವನ್ನು ಜತದೇವಿ ತಾಯಿಯವರು“ಸಹೋದರ ಸಹೋದರಿಯರೇ…”ಇಂದು ನಮ್ಮ ಹೃದಯಗಳು ಒಡೆದಿವೆ…ನಮ್ಮ ದೇಶದ ಆತ್ಮವೇ ಆಗಿದ್ದ ಮಹಾತ್ಮ ಗಾಂಧೀಜಿ ಅವರು ನಮ್ಮನ್ನೆ ಬಿಟ್ಟು ಹೋಗಿದ್ದಾರೆ.ಅವರ ದೇಹ ಕೊನೆಗೊಂಡಿರಬಹುದು… ಆದರೆ ಅವರ ಚಿಂತನೆ, ಅವರ ಅಹಿಂಸೆಯ ಮಾರ್ಗ ಯಾವತ್ತೂ ಸಾಯುವುದಿಲ್ಲ.ಇಂತಹ ಸಮಯದಲ್ಲಿ, ಕೆಲವರು ಜಾತಿ-ಧರ್ಮದ ಹೆಸರಿನಲ್ಲಿ ಮತ್ತೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.ಆದರೆ ನಾನು ಒಂದು ಪ್ರಶ್ನೆ ಕೇಳುತ್ತೇನೆಗಾಂಧೀಜಿ ಅವರು ತಮ್ಮ ಪ್ರಾಣವನ್ನೇ ಕೊಟ್ಟದ್ದು ಏಕೆ?ಅವರು ಹಿಂದು, ಮುಸ್ಲಿಂ, ದಲಿತ, ಬ್ರಾಹ್ಮಣ… ಎನ್ನದೇ“ನಾವು ಎಲ್ಲರೂ ಭಾರತೀಯರು” ಎಂದು ಬದುಕಿದರು…ಅದೇ ಮಾತನ್ನು ಅವರು ಕೊನೆಯ ಉಸಿರಿನಲ್ಲೂ ಹೇಳಿ ಹೋಗಿದ್ದಾರೆ.ಇಂದು ನಾವು ಜಗಳ ಮಾಡಿದರೆ…ಅದು ಗಾಂಧೀಜಿಯವರ ಆತ್ಮಕ್ಕೆ ನೋವು ಕೊಡುತ್ತದೆ.ಅವರು ನಮಗೆ ತೋರಿಸಿದ ದಾರಿ — ಪ್ರೀತಿ, ಸಹನೆ, ಸೌಹಾರ್ದ — ಅದನ್ನೇ ನಾವು ಅನುಸರಿಸಬೇಕು.ಜಾತಿ ಎನ್ನುವುದು ನಮ್ಮ ನಡುವೆ ಗೋಡೆ ಕಟ್ಟಲು ಅಲ್ಲ…ಅದು ವೈವಿಧ್ಯದ ಸುಂದರತೆಯನ್ನು ಅರಿಯಲು.ಇಂದು ನಾನು ನಿಮಗೆ ವಿನಂತಿ ಮಾಡುತ್ತೇನೆ  ಕೋಪ ದ್ವೇಷ ಕಲಹವನ್ನು ಬಿಡಿ…ಹೃದಯವನ್ನು ತೆರೆದುಕೊಳ್ಳಿ…ಒಬ್ಬರನ್ನೊಬ್ಬರು ಅಪ್ಪಿಕೊಳ್ಳಿ…ಗಾಂಧೀಜಿ ಜೀವಂತವಾಗಿರುವುದು ನಮ್ಮ ನಡೆ-ನುಡಿಯಲ್ಲಿ…ನಮ್ಮ ಒಗ್ಗಟ್ಟಿನಲ್ಲಿ… ನಮ್ಮ ಮಾನವೀಯತೆಯಲ್ಲಿ…ನಾವು ಒಟ್ಟಿಗೆ ನಿಂತರೆ… ಭಾರತ ಸದಾ ಶಕ್ತಿಶಾಲಿಯಾಗಿರುತ್ತದೆ. “ಸಿದ್ದರಾಮ ಬಸವ| ಬುದ್ಧ ಗಾಂಧೀಜಿಯುತಿದ್ದಲು ಜನ ಮನ ದುಡದಾರ- ಲೋಕವೂಶುದ್ಧ ಸದಾಚಾರಿ ಮಾಡಲು!!”

Read Post »

ಕಾವ್ಯ ದರ್ಪಣ

ಡಾ.ಅನ್ನಪೂರ್ಣ ಹಿರೇಮಠ ಅವರ ಗಜಲ್

ಕಾವ್ಯಸಂಗಾತಿ ಡಾ.ಅನ್ನಪೂರ್ಣ ಹಿರೇಮಠ ಗಜಲ್ ನೀನಿರದ ಏಕಾಂತ ಕೊಲ್ಲುತಿದೆಯೋ ಕಾಂತನೀನಿಲ್ಲದ ಬೇಸರವೇ ಸುಡುತಿದೆಯೋ ಕಾಂತ ಹೇಳಲಾಗದ ದುಃಖ ತಾನೇ ಬಿಕ್ಕಳಿಸುತಿದೆ ಅಲ್ಲೇಕಕ್ಕುಲತೆಯ ಒಲವು ಸೋರಗುತಿದೆಯೋ ಕಾಂತ ಒಡಲಾಳದೆ ಕೋಲಾಹಲವೆದ್ದು ವಿರಹದ ಗಾಳಿಮುತ್ತುಗಳಿಲ್ಲದ ಗಲ್ಲ ನಿಲ್ಲದಾಗಿದೆಯೋ ಕಾಂತ ನೋವು ಸುಡುಗಾಡನೇ ಮೆದ್ದು ಪೆದ್ದಾಗಿದೆ ಬಿದ್ದುಸರಸವಿಲ್ಲದ ಸೊಲ್ಲು ಅಡಗೋಗಿದೆಯೋ ಕಾಂತ ಅದೇನೋ ತಳಮಳ ತಾಪದೆ ಒದ್ದಾಡುತಿದೆ ನೆನಪಅಪ್ಪುಗೆಗಾಗಿ ತನು ತೊಳಲಾಡುತಿದೆಯೋ ಕಾಂತ ಜೀವಕುಸುಮದಂಬಲ ಹಲುಬಿ ಹಿಂಡುತಿದೆ ಹಿಸುಕಿಹಸಿದ ಕಣ್ಣಂಚಿನ ಕಾತುರ ಕಂಗೆಟ್ಟಿದೆಯೋ ಕಾಂತ ಅನುಳ ವೇದನೆ ಒಂದೇ ಸವನೆ ಕತ್ತು ಕೊಯ್ಯುತಿದೆಭರವಸೆಯೇ ಮಣ್ಣಾಗಿ ಕೊಳೆಯುತಿದೆಯೋ ಕಾಂತ ಡಾ ಅನ್ನಪೂರ್ಣ ಹಿರೇಮಠ

ಡಾ.ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

ಕಾವ್ಯಯಾನ

ಎ.ಹೇಮಗಂಗಾ ಅವರ ತನಗಗಳು

ಕಾವ್ಯ ಸಂಗಾತಿ ಎ.ಹೇಮಗಂಗಾ ತನಗಗಳು ಕೆಂಡದಂತೆ ಕಾದಿದೆಪಲ್ಲಂಗವಿಂದು ನಲ್ಲಕಾರಣ ಈ ವಿರಹಗ್ರೀಷ್ಮ ಋತುವು ಅಲ್ಲ ಕದಪು ಕೆಂಪಾಗಿದೆಬಿಸಿ ಉಸಿರು ತಾಗಿನಲ್ಲ ಬಳಿ ಬರಲುತೋಳಲಿ ಬಳಸಲು ನಿನ್ನ ಅನುಪಸ್ಥಿತಿನಿತ್ಯವೂ ಕಾಡುತಿದೆಅತಿಯಾದ ಪ್ರೀತಿಯೇನನ್ನನ್ನು ಕೊಲ್ಲುತಿದೆ ಒಮ್ಮೊಮ್ಮೆ ಬಿಸಿಗಾಳಿಮಗದೊಮ್ಮೆ ತಂಗಾಳಿಹವೆ ಬಲು ಚಂಚಲಬಂಡೆ ಮಾತ್ರ ಅಚಲ ಮೈ ಶಾಖ ಹೆಚ್ಚಿಸಿದೆವೈಶಾಖದ ಬಿಸಿಲುಒಣಗಿ ಉದುರಿದೆಮರಗಳ ಟಿಸಿಲು ಊಟದಲಿ ಕೊಂಚವೂತಿಳಿಯುತ್ತಿಲ್ಲ ಸ್ವಾದಬಿಸಿಲ ತಾಪದಿಂದಮೊಗದ ತುಂಬ ಸ್ವೇದ ಬದುಕೀಗ ನರಕಹೆಚ್ಚಿದೆ ತಾಪಮಾನಕಾದ ಕಾವಲಿ ಭೂಮಿಕಾಣದಾದ ವರುಣ ತಡೆಯಬಲ್ಲೆ ನಾನುಬೇಸಿಗೆಯ ಈ ಧಗೆಸಹಿಸಲಾರೆ ಎಂದೂನಲ್ಲನಾದರೆ ಹಗೆ ಕೆರೆ ಕುಂಟೆಗಳೀಗನೀರಿಲ್ಲದೇ ಬರಡುನಿನ್ನ ಸ್ಪರ್ಶವಿರದೇತನುವಿಂದು ಕೊರಡು ಅಪರೂಪದ ಮಳೆರಸ್ತೆ ಗುಂಡಿ ತುಂಬಿತುಹರುಷದಿಂದ ಮಗುಅಲ್ಲಿ ಕುಪ್ಪಳಿಸಿತು ಎ.ಹೇಮಗಂಗಾ

ಎ.ಹೇಮಗಂಗಾ ಅವರ ತನಗಗಳು Read Post »

ಕಾವ್ಯಯಾನ

ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ “ಮೌನದ ಆಲಾಪನೆ”

ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಸುರತ್ಕಲ್ “ಮೌನದ ಆಲಾಪನೆ” ಒಲವು ಬಾಡಿತೇಕೆ ಹೇಳು ಮನವೇಬತ್ತಿ ಹೋದವೇ ಭಾವಗಳುನಲಿವ ಹೃದಯದ ಬಡಿತ ನಿಂತಿತೇಸೋತು ಸೊರಗಿದೆ  ಬಂಧಗಳು ಕಣ್ಣು ಕಣ್ಣಲಿ ಬೆಸೆದು ನೋಟವುಹೊಸತು ಲೋಕವ ಕಟ್ಟಿದೆಮಣ್ಣು ಮಾಡಿದೆ ಎದೆಯ ಕನಸನುಪ್ರೇಮದರಮನೆ ಕುಸಿದಿದೆ ಮಾತು ಬಾರದ ಮೂಕ ಹಕ್ಕಿಯತೆರದಿ ಜೀವನವಾಗಿದೆತಂತಿ ಹರಿದ ಜೀವ ನಾದದಲಿಮೌನದ ಆಲಾಪನೆ ಕೇಳಿದೆ ಬಾಳ ಪಯಣದಿ ಆಸರೆ ಇಲ್ಲದೆಬಾಡಿ ಹೋಗಿದೆ ಬಯಕೆಯುಓಡಿ ಬರುವೆಯಾ ಒಮ್ಮೆಯಾದರೂಕೊನೆಗೆ ನೋಡುವಾಸೆಯು ಅನುರಾಧಾ ರಾಜೀವ್ ಸುರತ್ಕಲ್

ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ “ಮೌನದ ಆಲಾಪನೆ” Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಅಪ್ಪನ ಶವ ನಕ್ಕಿತಲ್ಲ.!”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಅಪ್ಪನ ಶವ ನಕ್ಕಿತಲ್ಲ.!” ಅಪ್ಪನಿಗೆ ತನ್ನ ಮಕ್ಕಳು ಎಂದಿಗೂಭಾರ ಅನಿಸಲೆ ಇಲ್ಲ.ಅದ್ಯಾಕೋ ಅಪ್ಪ ಮಕ್ಕಳಿಗೆಭಾರವಾಗಿ ಬಿಟ್ಟ………… ಆರು ಹೆತ್ತರೂ ತನ್ನ ಮಕ್ಕಳಿಗೆ ಏನುಕೊರತೆಯಾಗದಂತೆ ಸಾಕಿದನಲ್ಲಅದ್ಯಾಕೋ ಅಪ್ಪನ ಸಾಕೋಕೆಮಕ್ಕಳಿಗೆ ಹಣದ ಕೊರತೆ ಆಯಿತಲ್ಲ………. ಎರಡೆರಡು ತಿಂಗಳಿಗೊಮ್ಮೆ ಒಬ್ಬೊಬ್ಬರುಜೋಪಾನ ಮಾಡುವರಲ್ಲಆಸ್ತಿಯ ಹಂಚಿಕೊಂಡಂತೆ ಅಪ್ಪನನ್ನೂಸಹ ಹಂಚಿಕೊಂಡು ಬಿಟ್ಚರಲ್ಲ………….. ಅಪ್ಪನ ಮಾನಸಿಕ ಸ್ಥಿತಿಯ ಪರಿವೆಅವರಿಗೆ ಆಗಲೆ ಇಲ್ಲಆದರೂ ಅಪ್ಪ ಎಲ್ಲ ಒಳಗೊಳಗೆನುಂಗಿದನಲ್ಲ…………… ಹೆಂಡತಿ ಇದ್ದಾಗ ನೋಡು ನನ್ನಮಕ್ಕಳನ್ನ ಅಂತಿದ್ದ ಬೀಗತಿದ್ದಅವಳಿಲ್ಲದಾಗ ಆತನೆ ಕುಗ್ಗಿದ್ದಹಾಸಿಗೆ ಹಿಡಿದ ದಿನದಿಂದಲೆ ನಗುವದನ್ನೆನಿಲ್ಲಿಸಿದ………… ಈಗೀಗ ನೀನ್ಯಾಕ ನನ್ನ ಒಬ್ಬಂಟಿ ಮಾಡಿಹೋದೆ ಅಂತಿದ್ದಎಲ್ಲದರಲ್ಲೂ ಮೊದಲೆನ್ನುವವಳುಸಾವಲ್ಲೂ ಮೊದಲೆ ಆದೆ………… ನನ್ನ ಮಾತ್ರ ಎಲ್ಲವ ಅನುಭವಿಸಿಬಾ ಎಂದೆ ಎನುತಿದ್ದಆಗಾಗ ಹಲಬುತ್ತಿದ್ದ ಮಕ್ಕಳಿಗೆ ಇದ್ಯಾವುದರಪರಿವೆ ಆಗದಂತೆ ಇದ್ದ …….. ಇನ್ನೂ ಯಾವಾಗ ಸಾಯತಾನೋ?ಎನ್ನುವರೆಲ್ಲಅದೇನಾಸೆಯ ಇಟ್ಟುಕೊಂಡಿದ್ದ ಗೊತ್ತಿಲ್ಲಅಂತು ಇಂತು ಕೊನೆಯ ಕ್ಷಣ ಬಂದಿತಲ್ಲ …….. ಇಷ್ಟು ದಿನ ನಗದ ಅಪ್ಪ ಆದ್ರೂ ಇಂದುಅಪ್ಪನ ಶವ ನಕ್ಕಿತಲ್ಲಮಕ್ಕಳು ಮಕ್ಕಳು ಅಂತಿದ್ದೆ ಮಕ್ಕಳಿಗಾಗಿಮನೆ ಮಾಡಿದೆ……….. ಅವರಿಷ್ಟದ ಗಾಡಿ ಕೊಡಿಸಿದೆನೀನೆ ಕಟ್ಟಿಸಿಕೊಟ್ಟ ಮನೆಯಲ್ಲಿ ಜಾಗವಿಲ್ಲನಿನ್ನ ಅಂತಿಮ ಯಾತ್ರೆಗೆದೊಡ್ಡ ದೊಡ್ಡ ಗಾಡಿಗಳಿದ್ದರೂ ಮುಕ್ತಿರಥವೆಗತಿಯಾಗಿತ್ತು ನಿನ್ನ  ಬಾಡಿಗೆಎನ್ನುತಲೆ ಅಪ್ಪನ ಶವ ನಗತಿತ್ತು……… ಅಪ್ಪನಿಗಾಗಿ ಬಡಿದಾಡಲೆ ಇಲ್ಲಅಪ್ಪನ ಹಣಕ್ಕಾಗಿ ಹೆಣದ ಮುಂದೆಬಡಿದಾಡಿದರಲ್ಲಆಗಲೂ ಅಪ್ಪನ ಶವ ನಗತಿತ್ತು …….. ನನ್ನವರೆಂದವರು ಯಾರೂನನ್ನವರಾಗಿರಲೆ ಇಲ್ಲಅಪ್ಪನ ಜೋಪಾನ ನಾ ಮಾಡಿದೆನಾ ಮಾಡಿದೆ ಎನ್ನುವರೆ ಎಲ್ಲ ………. ಎಲ್ಲವೂ ಅಪ್ಪನ ಶವದ ಮುಂದೆ ನಡೆದಿತ್ತಲ್ಲಅದೆಷ್ಟಂತ ಬಡದಾಡತಿರಿ ಅಂತಕೇಳೋಕ ಆತ ಇಲ್ಲಆತನ ಶವ ಮಾತ್ರ ನಗತಿತ್ತಲ್ಲ……. ಇವರ ಕಣ್ಣೀರ ಕೂಗು ಕೇಳದಷ್ಟುದೂರ ಹಂಗಿನ ಮಾತು ಮನಸಿಗೆಮುಟ್ಟದಂತೆ ಮಲಗಿ ಬಿಟ್ಟಿದ್ದಅಪ್ಪನ ಶವ ಈಗಂತೂ ಜೋರಾಗಿ ನಗತಿತ್ತು…… ಇನ್ನ್ಯಾರ ಅಪ್ಪ ಎನ್ನುವಿರಿ? ಎರಡೆರಡುತಿಂಗಳಿಗೊಮ್ಮೆ ಮನೆಯಿಂದ ಮನೆಗೆಊರಿಂದ ಊರಿಗೆ ಅದಾರನ್ನತಂದಿರಿಸಿಕೊಳ್ಳುವಿರಿ?ಎಂದುಕೇಳುತಲೆ ಇತ್ತು. ಅಪ್ಪ ಶವ ನಗತಾನೆ ಇತ್ತು………. ಬದುಕಿದ್ದಾಗಲೆ ಯಾವ ಮಾತು ಮನಸಮುಟ್ಟಲೆ ಇಲ್ಲ, ತಟ್ಟಲೆ ಇಲ್ಲಈಗೆಲ್ಲಿ ಮುಟ್ಟುವವು? ಯಾರಮನಸ್ಸ ತಟ್ಟುವವು…………. ಕಲಹ,ಕದನ,ರೋದನ,ಸಿಟ್ಟುಎಲ್ಲವ ಎಲ್ಲರೂ ಶವದ ಮುಂದೆಹೊರ ಹಾಕುವವರೆ ಬಿಕ್ಕಿ ಬಿಕ್ಕಿಅದಾವುದಕ್ಕೋ ಅಳುವರೆಲ್ಲ………….. ಅದ ಕೇಳೋಕೆ ಯಾರಿಗೂ ಪುರಸೊತ್ತಿಲ್ಲಯಾಕಂದ್ರ ಅಲ್ಲಿದ್ದವರೆಲ್ಲ ಹೇಳತಿದ್ರಲ್ಲಲಗೂಣ ಹೆಣ ಎತ್ತರಲ್ಲ, ಇವರೆಲ್ಲ ಅತ್ತರೆಊರ ಜನ ನೋಡಿ ಅಯ್ಯೋ ಪಾಪ ಅಂದರಲ್ಲ….. ಪಾಪ! ಅವರಿಗೇನ ಗೊತ್ತು, ಮಕ್ಕಳ ಸ್ವಾರ್ಥದುರಾಸೆ ಅಪ್ಪನಿಗಷ್ಟೆ ಗೊತ್ತಿತ್ತಲ್ಲಆತನ ಶವ ನಕ್ಕಿದ್ದು ಅವರಾರಿಗೂ ಗೊತ್ತೆಆಗಲೆ ಇಲ್ಲ ……… ಅಂತು-ಇಂತು ಅಪ್ಪನ ಅಂತಿಮಯಾತ್ರೆಮುಗಸಿದ್ರಲ್ಲ. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಅಪ್ಪನ ಶವ ನಕ್ಕಿತಲ್ಲ.!” Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ “ತ್ರಿವಿಧ ದಾಸೋಹ ಮೂರ್ತಿ ಶಿವಯೋಗ ಸಾಧಕ ಶ್ರೀ ಮೃತ್ಯುಂಜಯ ಸ್ವಾಮಿಗಳು” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಶರಣ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ “ತ್ರಿವಿಧ ದಾಸೋಹ ಮೂರ್ತಿ ಶಿವಯೋಗ ಸಾಧಕ ಶ್ರೀ ಮೃತ್ಯುಂಜಯ ಸ್ವಾಮಿಗಳು” ಬಸವೋತ್ತರ ಕಾಲದ ಶರಣರು ಮತ್ತು ಶಿವಯೋಗ ಸಾಧಕರಲ್ಲಿ ಪರಮ ಪೂಜ್ಯ ಶ್ರೀ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಕಾರ್ಯ ಅವಿಸ್ಮರಣೀಯ.ಇವರ ಕರ ಸಂಜಾತ ಹಾಗೂ ಅವರ ಪಡಿನೆರಳಿನಂತೆ ಬದುಕಿ ಬಸವ ಜಯಂತಿ ಆಚರಣೆ ಆರಂಭಿಸಿದ ಧೀಮಂತ ಶಿವಯೋಗಿ ಶ್ರೀ ಮೃತ್ಯುಂಜಯ ಸ್ವಾಮಿಗಳು. ಕಾಶಿ ಬಿಟ್ಟು ಅಥಣಿಗೆ ಬಂದ ಬಾಲಕ ಶ್ರೀ ಮೃತ್ಯುಂಜಯ ಸ್ವಾಮಿಗಳು. ಅವತ್ತಿನ ಶ್ರೇಷ್ಠ ಲಿಂಗಾಯತ ಧರ್ಮದ ಹಿರಿಯ ಸ್ವಾಮಿಗಳು ನಾಯಕನೂರಿನ ಕಾಶಿನಾಥ ಶಾಸ್ತ್ರಿಗಳು ಅವರಿಗೆ ಭೇಟಿ ಮಾಡಿ ತಾವು ಕಾಶಿಗೆ ಹೋಗ ಬೇಕೆನ್ನುವ ಪ್ರಬಲ ಇಚ್ಛೆಯನ್ನು ಮೃತ್ಯುಂಜಯ ಸ್ವಾಮಿಗಳು ವ್ಯಕ್ತ ಪಡಿಸುತ್ತ ಕಾಶಿಗೆ ಹೋಗುವ ತಯಾರಿ ಬಗ್ಗೆ ಕಾಶಿನಾಥ ಶಾಸ್ತ್ರಿಗಳನ್ನು ಕೇಳಿದರು. ಆಗ ಶ್ರೀ ಕಾಶಿನಾಥ  ಶಾಸ್ತ್ರಿಗಳು ದೂರದ ಊರಿಗೆ ಹೋಗಿ ತಿಳಿಯದ ಸಂಸ್ಕೃತ ಭಾಷೆ ಕಲಿಯುವಕ್ಕಿಂತ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಹತ್ತಿರ ವಚನ ಸಾಹಿತ್ಯ ಮತ್ತು ಶಿವಯೋಗ ಸಾಧನೆ ಮಾಡು ಎಂದು ಸಲಹೆ ನೀಡಿದರಂತೆ.  ಅವರ ಸಲಹೆ ಮತ್ತು ವಿಚಾರದಂತೆ ಶ್ರೀ ಮೃತ್ಯುಂಜಯ ಸ್ವಾಮಿಗಳು ನೇರವಾಗಿ ಅಥಣಿಗೆ ಬಂದು ತಮ್ಮ ಅಧ್ಯಯನ ವಿದ್ಯಾಭ್ಯಾಸದ ಇಚ್ಛೆಯನ್ನು ವ್ಯಕ್ತ ಪಡಿಸಿದರು. ಆಗ ಅಥಣಿ ಶ್ರೀ ಗಳು ಇವರನ್ನು ಪರೀಕ್ಷಿಸಲೆಂದು ಬಾಲಕನತ್ತ ಹೆಚ್ಚು ಗಮನ ನೀಡದೆ ಸುಮ್ಮನಾದರು.  ಏಕೋ ಬೇಸರಗೊಂಡ ಬಾಲಕ ಶ್ರೀ ಮೃತ್ಯುಂಜಯ ಸ್ವಾಮಿಗಳು ಅಲ್ಲಿರುವ ಮಠದ ಸೇವಕರನ್ನು ವಿಚಾರಿಸುತ್ತಾ, ಯಾವ ಕೆಲಸ ಮಾಡಿದರೆ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಪ್ರೀತಿಗೆ ಪಾತ್ರರಾಗುತ್ತೇವೆ ಎಂದು ಕೇಳಿದರು. ಆಗ ಮಠದ ಸ್ಥಳೀಯರು ಶಿವಯೋಗಿಗಳಿಗೆ ಬೆಳಿಗ್ಗೆ ಐದಕ್ಕೆದ್ದು ಮಠದ ಅಂಗಳ ಕಸ ಹೊಡೆದು ಬರುವ ಭಕ್ತರಿಗೆ ಬಿಸಿ ನೀರು ಕಾಯಿಸುವುದು ಅವರಿಗೆ ಪ್ರೀತಿಯ ಕೆಲಸ. ನೀನು ಬೆಳಿಗ್ಗೆ ನಾಲ್ಕಕ್ಕೆ ಎದ್ದು ಈ ಕೆಲಸ ಮಾಡಿದರೆ, ನಿನ್ನನ್ನು ಶಿವಯೋಗಿಗಳು ಶಿಷ್ಯನನ್ನಾಗಿ ಸ್ವೀಕರಿಸುವರು ಎಂದು ಸಲಹೆ ನೀಡಿದರಂತೆ.  ಇದರಿಂದ ಪುಳುಕಿತನಾದ ಶ್ರೀ ಮೃತ್ಯುಂಜಯ ಸ್ವಾಮಿಗಳು ಬೆಳಿಗ್ಗೆ ನಾಲ್ಕಕ್ಕೆ ಎದ್ದು ಮಠದ ಕಸ ಹೊಡೆದು ಬರುವ ಭಕ್ತರಿಗೆ ಬಿಸಿ ನೀರು ಕಾಯಿಸಿ ಮತ್ತೆ ತಮ್ಮ ಕೋಣೆಗೆ ಹೋಗಿ ಮಲಗಿದರು. ಬೆಳಿಗ್ಗೆ ಎಂದಿನಂತೆ ಎದ್ದು ಮಠದ ಕಸ ಹೊಡೆಯಲು ಪೂಜ್ಯ ಶ್ರೀ ಮುರುಗೇಂದ್ರ ಶಿವಯೋಗಿಗಳು ಇದ್ದಾಗ ಮಠವು ಸಂಪೂರ್ಣ ಸ್ವಚ್ಛವಾಗಿತ್ತು. ಹಿತ್ತಲದಲ್ಲಿ ನೀರು ಕಾಯಿಸಲು ಹೋದಾಗ  ಅಲ್ಲಿ ಹಂಡೆಯಲ್ಲಿ ನೀರು ಬೆಂಕಿಯಾಗಿದ್ದವು.  ಯಾರೋ ಈ ಕಾರ್ಯ ಮಾಡಿರ ಬಹುದೆಂದು ಶಿವಯೋಗಿಗಳು ಅಂದು ತಾವು ಕಾಯಕ ಮಾಡದ ಕಾರಣ ಎರಡೂ ಹೊತ್ತು  ಪ್ರಸಾದ ಸೇವಿಸದೆ ಮಲಗುತ್ತಾರೆ. ಮತ್ತೆ ಬೆಳಿಗ್ಗೆ ಶ್ರೀ ಮೃತ್ಯುಂಜಯ ಸ್ವಾಮಿಗಳು ತಮ್ಮ ಬೆಳಗಿನ ಜಾವದ ಮಠದ ಕಸ ಹೊಡೆದು ಬರುವ ಭಕ್ತರಿಗೆ ಬಿಸಿ ನೀರು ಕಾಯಿಸುವ ಕಾರ್ಯ ಮುಂದುವರೆಸುತ್ತಾರೆ. ಮತ್ತೆ ಎಂದಿನಂತೆ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳು ನಿರಾಸೆಯಾಗುತ್ತಾರೆ. ಮತ್ತೆ ಪ್ರಸಾದ ಸೇವಿಸದೆ ಮಠದ ಇತರ ಕಾರ್ಯ ಮಾಡುತ್ತಾ ಇಷ್ಟ ಲಿಂಗ ಪೂಜೆ ಸಲ್ಲಿಸಿ ಮಲಗುತ್ತಾರೆ.  ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಉಪವಾಸದ  ಕೆಲಸ ಮಠದ ಯಾರಿಗೂ ಗೊತ್ತಾಗುವುದಿಲ್ಲ. ಒಂದು ದಿನ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳು ಈ ಕೆಲಸ ಮಾಡುತ್ತಾರೆ ಎಂದು ನೋಡ ಬೇಕೆಂದು ರಾತ್ರಿಯಿಡಿ ಎಚ್ಚರವಿದ್ದು  ಯಾರು ಈ ಕಾರ್ಯವನ್ನು ಮಾಡುತ್ತಾರೆ ಎಂದು ನೋಡುತ್ತಾ ಕುಳಿತು ಕೊಳ್ಳುತ್ತಾರೆ. ಬೆಳಿಗ್ಗೆ ಬಾಲಕ ಮತ್ತೆ ಮಠದ ಕಸವ ಹೊಡೆಯಲು ಮುಂದಾದಾಗ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳು ಬಾಲಕನ ಕೈಯನ್ನು ಗಟ್ಟಿಯಾಗಿ ಹಿಡಿದು ಏಕೆ ಹೀಗೆ ಅಪರಾತ್ರಿಯಲ್ಲಿ ನೀನು ಕಸವನ್ನು ಹೊಡೆಯುತ್ತಿ ಎಂದು ಗದರಿಸಿದಾಗ ಬಾಲಕ ಭಯ ಪಟ್ಟು ಜೋರಾಗಿ ಅಳತೊಡಗಿದನು. ಆಗ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳು ಬಾಲಕ ಶ್ರೀ ಮೃತ್ಯುಂಜಯ ಸ್ವಾಮಿಗಳನ್ನು ಅಪ್ಪಿ ಮುದ್ದಾಡಿ ಅವರಿಗೆ ಲಿಂಗ ದೀಕ್ಷೆ ನೀಡಿ ಅಪ್ಪಟ ಬಸವ ತತ್ವ ಅಧ್ಯಯನ ಮಾಡಲು ಅವಕಾಶ ಮಾಡಿ ಕೊಡುವುದಲ್ಲದೆ. ಧಾರವಾಡದ ಡಬಗಳ್ಳಿ ಮಠದ ಉಸ್ತುವಾರಿ ನೋಡಿಕೊಳ್ಳಲು ಹೇಳುತ್ತಾರೆ. ಮುರುಘಾ ಪರಂಪರೆಯ ಶ್ರೇಷ್ಠ ಶಿವಯೋಗ ಸಾಧಕರನ್ನಾಗಿ ಮಾಡಿ ಧಾರವಾಡ ಮುಳುಗುಂದ ಮುಂತಾದ ಅನೇಕ ಮಠಗಳಲ್ಲಿ ಪೂಜ್ಯರಾದ ಶ್ರೀ ಮೃತ್ಯುಂಜಯ ಸ್ವಾಮಿಗಳು ತಮ್ಮ ಗುರು ಲಿಂಗ ಜಂಗಮ ಸೇವೆ ಸಲ್ಲಿಸಿದ ಅಪ್ರತಿಮ ಶರಣ ಸಂಸ್ಕೃತಿ ಪ್ರಚಾರಕರಾಗಿ ಪ್ರತಿಯೊಬ್ಬರಿಗೂ ಆದರಣೀಯರಾಗಿದ್ದಾರೆ.  ಧಾರವಾಡದ ಶ್ರೀ ಮುರುಘಾ ಮಠದ ಶ್ರೀ ಮೃತ್ಯುಂಜಯ ಸ್ವಾಮಿಗಳವರು (ಮೃತ್ಯುಂಜಯ ಅಪ್ಪಗಳು) ಕರ್ನಾಟಕದ ಶರಣ ಪರಂಪರೆಯ ಉಜ್ವಲ ಚೇತನಗಳಲ್ಲೊಬ್ಬರು. ಅವರ ಜೀವನ ಚರಿತ್ರೆಯ ಅರಿತುಕೊಳ್ಳುವುದು ನಮ್ಮ ಪುಣ್ಯದ ಕೆಲಸ. 1. *ಜನನ ಮತ್ತು ಬಾಲ್ಯ* ಜನನ: ಇವರು 1888ರ ಏಪ್ರಿಲ್ 9 ರಂದು ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ-ತಾಯಿ: ಇವರ ತಂದೆ ಕಂತಯ್ಯ ಸ್ವಾಮಿ ಮತ್ತು ತಾಯಿ ಚೆನ್ನವೀರಮ್ಮ. ಬಾಲ್ಯ: ಇವರ ಪೂರ್ವಾಶ್ರಮದ ಹೆಸರು ಮೃತ್ಯುಂಜಯ. ಬಾಲ್ಯದಲ್ಲೇ ಸಂಗೀತ ಮತ್ತು ಆಧ್ಯಾತ್ಮಿಕತೆಯತ್ತ ವಿಶೇಷ ಒಲವು ಹೊಂದಿದ್ದರು.  2. *ಶಿಕ್ಷಣ ಮತ್ತು ಸನ್ಯಾಸ* ಪ್ರಾಥಮಿಕ ಶಿಕ್ಷಣದ ನಂತರ, ಇವರು ಗದಗದ ತೋಂಟದಾರ್ಯ ಮಠದಲ್ಲಿ ಸಂಸ್ಕೃತ ಮತ್ತು ಕನ್ನಡ ಸಾಹಿತ್ಯವನ್ನು ಅಭ್ಯಾಸ ಮಾಡಿದರು. ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳ ಪ್ರಭಾವಕ್ಕೆ ಒಳಗಾದ ಇವರು, ಅವರಿಂದ ಲಿಂಗದೀಕ್ಷೆ ಮತ್ತು ಸನ್ಯಾಸ ಸ್ವೀಕರಿಸಿದರು.  3. ಧಾರವಾಡದ ಮುರುಘಾ ಮಠಕ್ಕೆ ಆಗಮನ (1916) ಮೃತ್ಯುಂಜಯ ಸ್ವಾಮಿಗಳು 1916ರಲ್ಲಿ ಧಾರವಾಡದ ಮುರುಘಾ ಮಠಕ್ಕೆ ಬಂದಾಗ, ಮಠವು ಕೇವಲ ಒಂದು ಸಣ್ಣ ಕೊಠಡಿಯಂತಿದ್ದು, ಸುತ್ತಲೂ ಮುಳ್ಳಿನ ಕಂಟಿಗಳಿಂದ ಕೂಡಿತ್ತು. ತಮ್ಮ ಸಂಕಲ್ಪಶಕ್ತಿಯಿಂದ ಪಾಳುಬಿದ್ದಿದ್ದ ಮಠವನ್ನು ಇಂದು ನಾವು ನೋಡುತ್ತಿರುವ ಭವ್ಯ ದಾಸೋಹ ಕೇಂದ್ರವಾಗಿ ಪರಿವರ್ತಿಸಿದರು.  4. ಪ್ರಮುಖ ಕಾರ್ಯಗಳು ಮತ್ತು ಸಾಧನೆಗಳು ತ್ರಿವಿಧ ದಾಸೋಹ: ಅನ್ನ, ಜ್ಞಾನ ಮತ್ತು ಅಧ್ಯಾತ್ಮ – ಈ ಮೂರೂ ದಾಸೋಹಗಳನ್ನು ಮಠದಲ್ಲಿ ನಿರಂತರವಾಗಿ ನಡೆಸಿಕೊಂಡು ಬಂದರು. ಉಚಿತ ಪ್ರಸಾದ ನಿಲಯ (1917): ಬಡ ವಿದ್ಯಾರ್ಥಿಗಳಿಗಾಗಿ 1917ರಲ್ಲಿ ಉಚಿತ ಪ್ರಸಾದ ನಿಲಯವನ್ನು ಸ್ಥಾಪಿಸಿದರು. ಇಂದು ಈ ನಿಲಯಕ್ಕೆ 100 ವರ್ಷಗಳ ಇತಿಹಾಸವಿದ್ದು, ಸಾವಿರಾರು ಬಡ ಮಕ್ಕಳು ಇಲ್ಲಿ ಕಲಿತು ಉನ್ನತ ಹುದ್ದೆಗಳಲ್ಲಿದ್ದಾರೆ. 63 ಪುರಾತನರ ವಸತಿ ನಿಲಯ: ಶಿವಶರಣರ ನೆನಪಿಗಾಗಿ 63 ಕೊಠಡಿಗಳ ವಸತಿ ನಿಲಯವನ್ನು ನಿರ್ಮಿಸಿ, ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದರು. ಅಖಿಲ ಭಾರತ ಶಿವಾನುಭವ ಸಂಸ್ಥೆ: ಶರಣ ತತ್ವಗಳ ಪ್ರಸಾರಕ್ಕಾಗಿ ಈ ಸಂಸ್ಥೆಯನ್ನು ಸ್ಥಾಪಿಸಿ, ನಾಡಿನಾದ್ಯಂತ ಧಾರ್ಮಿಕ ಜಾಗೃತಿ ಮೂಡಿಸಿದರು.  5. ವ್ಯಕ್ತಿತ್ವ ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೃತ್ಯುಂಜಯ ಅಪ್ಪಗಳು, ಯಾರೇ ಮಠಕ್ಕೆ ಬಂದರೂ ಪ್ರಸಾದ ಮಾಡದೆ ಕಳುಹಿಸುತ್ತಿರಲಿಲ್ಲ. ಇವರು ಕೇವಲ ಧಾರ್ಮಿಕ ಗುರುವಾಗಿರದೆ, ಶಿಕ್ಷಣ ತಜ್ಞರಾಗಿ ಮತ್ತು ಸಮಾಜ ಸುಧಾರಕರಾಗಿ ನಾಡಿನ ಜನರ ಮನಸ್ಸಿನಲ್ಲಿ ನೆಲೆಸಿದ್ದಾರೆ.  ಬಯಲಲ್ಲಿ ಬಯಲಾದರು  1916ರಲ್ಲಿ ಧಾರವಾಡದ ಮುರುಘಾ ಮಠಕ್ಕೆ ಆಗಮಿಸಿದ ಅವರು, ಸುಮಾರು 48 ವರ್ಷಗಳ ಕಾಲ ಮಠದ ಪೀಠಾಧ್ಯಕ್ಷರಾಗಿ ಸೇವೆ ಸಲ್ಲಿಸಿ, ಅನ್ನ ಮತ್ತು ಜ್ಞಾನ ದಾಸೋಹದ ಮೂಲಕ ಮಠವನ್ನು ನಾಡಿನ ಪ್ರಮುಖ ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರವನ್ನಾಗಿ ರೂಪಿಸಿದರು.  ಧಾರವಾಡದ ಮುರುಘಾ ಮಠದ ಕೀರ್ತಿಶೇಷರಾದ ಶ್ರೀ ಮೃತ್ಯುಂಜಯ ಸ್ವಾಮಿಗಳು (ಮೃತ್ಯುಂಜಯ ಅಪ್ಪಗಳು) 1964ರ ಜೂನ್ 16 ರಂದು ಲಿಂಗೈಕ್ಯರಾದರು. ಡಾ ಡಿ ಸಿ ಪಾವಟೆ ಅವರು ಕರ್ನಾಟಕ ವಿಶ್ವ ವಿದ್ಯಾಲಯ ಸ್ಥಾಪಿಸಿ ಜ್ಞಾನ ದಾಸೋಹ ಮಾಡಿದ್ದಾರೆ. ಅವರಿಗೆ ಪೂರಕವಾಗಿ ಶ್ರೀ ಮೃತ್ಯುಂಜಯ ಸ್ವಾಮಿಗಳು ಅನ್ನ ದಾಸೋಹ ನೀಡಿ ಬಡ ವಿದ್ಯಾರ್ಥಿಗಳಿಗೆ ದಾರಿದೀಪವಾದರು. ಬಡ ಮಕ್ಕಳ ಶೈಕ್ಷಣಿಕ ಮತ್ತು ಆರ್ಥಿಕ ಸಂಕಷ್ಟ ನಿವಾರಿಸಿ ಉಚಿತ ಪ್ರಸಾದ ನಿಲಯವನ್ನು ಸ್ಥಾಪಿಸಿ ಅವರ ಉಜ್ವಲ ಭವಿಷ್ಯದ ರೂವಾರಿಯಾದರು. ಇವರ ನಂತರ ಪೀಠವನ್ನಲಂಕರಿಸಿದ ಶ್ರೀ ಮಹಾಂತ ಅಪ್ಪಗಳು ಮೃತ್ಯುಂಜಯ ಅಪ್ಪಗಳ ಹಾದಿಯಲ್ಲೇ ನಡೆದು ಮಠವನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರು __________________________ ಡಾಶಶಿಕಾಂತ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು ಮಾಲಿಕೆ “ತ್ರಿವಿಧ ದಾಸೋಹ ಮೂರ್ತಿ ಶಿವಯೋಗ ಸಾಧಕ ಶ್ರೀ ಮೃತ್ಯುಂಜಯ ಸ್ವಾಮಿಗಳು” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ನಿಮ್ಮೊಂದಿಗೆ

ಶಾಲಿನಿ ಕೆಮ್ಮಣ್ಣು ಅವರ ಕವಿತೆ “ಬಹುಮುಖ”

ಕಾವ್ಯ ಸಂಗಾತಿ ಶಾಲಿನಿ ಕೆಮ್ಮಣ್ಣು “ಬಹುಮುಖ” ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ದರ್ಪಣದಿಂದ ಕಾಣದು ಮೂರ್ಖದರ್ಪದ ಅಹಮ್ಮಿನ ಕೋರೆಮುಖತೊಡಲುಬೇಕು ದಿನವೂ ಬಹುಮುಖನಾನು ನೀನು ಕೊನೆಯಾಗುವ ತನಕ ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ದಿನಗಳೆದಂತೆ ಬರಿದಾಗುವ ದೇಹಇಲ್ಲದ ಬಯಸುವ ಮನುಜನ ಮೋಹಎಂದಿಗೂ ತೀರದ ಸ್ವಾರ್ಥದ ದಾಹಜಗದಲಿ ನಿಲ್ಲದ ದುಗುಡದ ವಾಹ ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ಮೋಸದ ಬಲೆಯಲಿ ಚಿನ್ನದ ಮೀನುಪರಿಶ್ರಮಕಿಲ್ಲಿ  ಸಿಗುವುದೆ ಜೇನುಮರಗಳ ಕಡಿದು ಬರಿದಾಗಿದೆ ಕಾನುಕಡಲಿನ ಮೊರೆತಕೆ ಬಾಗಿದೆ ಬಾನು ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ನನ್ನವರು ಪರರು ನಡುವೆ ನಾ ಯಾರುಅರಿಯದೆ ಸಾಗಿದೆ ಜನಪದ ತೇರುಅಂಕಿಯ ಅಂಕುಶದಿ ಬಡಿದಾಡುವ ಜನರುಮಾನವ ಮರೆತು ಯುದ್ಧವ ಸಾರುತಲಿಹರು ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ಶಾಲಿನಿ ಕೆಮ್ಮಣ್ಣು

ಶಾಲಿನಿ ಕೆಮ್ಮಣ್ಣು ಅವರ ಕವಿತೆ “ಬಹುಮುಖ” Read Post »

ನಿಮ್ಮೊಂದಿಗೆ

ಪ್ರಶಾಂತ್ ಬೆಳತೂರು ಅವರ ಕವಿತೆ “ನೀವು..ಮತ್ತೂ… ಈ..ಪ್ರೇಮ”

ಕಾವ್ಯ ಸಂಗಾತಿ ಪ್ರಶಾಂತ್ ಬೆಳತೂರು “ನೀವು..ಮತ್ತೂ… ಈ..ಪ್ರೇಮ” ಈ ಪ್ರೇಮವೆಂಬುದುಮಹಾಕವಿಯೊಬ್ಬ ಬರೆದಅನವಶ್ಯಕವಿವರಣೆಗಳನ್ನೊಳಗೊಂಡ ಮಹಾಕಾದಂಬರಿಯಂತೆ ರಸಹೀನವಾದುದಲ್ಲ..! ಅದು..!ಎಲ್ಲೋ..ದೂರದಲ್ಲಿ..!ಅಜ್ಞಾತವಾಗಿ ಕೂತಅನಾಮಿಕನೊಬ್ಬನ ಎದೆಯಲ್ಲಿತಣ್ಣಗೆ ಹುಟ್ಟಿಕೊಂಡಬಲು ಸೂಕ್ಷ್ಮ ಮತ್ತು ತೀವ್ರ ಮೊನಚುಳ್ಳಆತ್ಮಸಂವೇದನೆಯಗಂಭೀರ ದನಿಯ ಹಿನ್ನೆಲೆಯಲ್ಲಿಹೃದಯದಲ್ಲೊಂದುಸಣ್ಣಗೆ ಕಂಪನ ಉಂಟು ಮಾಡಬಲ್ಲಎರಡೇ ಎರಡು ಸಾಲಿನಬಂಡಾಯದ ಬೆಂಕಿಯಂತಹಕಾವ್ಯ ರೂಪಕ..! ಒಮ್ಮೆಲೇ ಸುಡುವುದಿಲ್ಲನಿಮ್ಮನ್ನು ಅದುನಿಧಾನವಾಗಿ ಹೆಜ್ಜೆಯೂರುತ್ತದೆಸಮ್ಮೋಹನಗೊಳಿಸುತ್ತದೆ..!ಎಷ್ಟೇ ಎಚ್ಚರಿಕೆ ವಹಿಸಿದರೂಕ್ಷಣಾರ್ಧದಲ್ಲಿ ಕಣ್ಮುಂದಿನಹಾದಿಯನ್ನು ಮರೆಸಿ ಬಿಡುತ್ತದೆ..! ಸರಿಯಾದಒಂದೇ ಒಂದು ವಿಳಾಸವಿಲ್ಲಅದರ ತೆಕ್ಕೆಯೊಳಗೆಗೂಡು ಮರೆತ ಹಕ್ಕಿಯಂತೆಬಯಲ ತುಂಬಾಎಲ್ಲೆಲ್ಲೂ ಹಾರಿ ವಿಹರಿಸುತ್ತಾಆನಂದದಲ್ಲಿತೇಲಿಸುತ್ತದೆನೀವು ಕಾಣದಿರುವಹೊಸ ಭ್ರಮಾ ಲೋಕಗಳಲ್ಲಿಮಿಂಚಿನ ಸಂಚಲನ ಸೃಷ್ಟಿಸಿಕಣ್ಣನ್ನು ಕುರುಡಾಗಿಸುತ್ತದೆ..! ಅಚ್ಚರಿಯೇನಿಸುವುದಿಲ್ಲಯಾರೊಬ್ಬರಿಗೂಎದೆಗೂಡಿನಲ್ಲಿನೂರಾರು ಕನಸುಗಳಿಗೆಮೊಟ್ಟೆಯಿಟ್ಟು ಮರಿ ಮಾಡುವಾಗಆದರೆಎಷ್ಟು ಕಾಲಹೀಗೆ ಕನಸಿನಲ್ಲಿ ಹಾರುವಿರಿ?ಹಾರುವ ರೆಕ್ಕೆಗಂಟಿಕೊಂಡೇಬೆನ್ನೇರಿರುತ್ತದೆಒಂದು ಸಣ್ಣ ಆತಂಕಅಥವಾಬಿರುಕು ಮೂಡಿಸುವನಿಮ್ಮದೇ ನೆರಳುಗಳ ಛಾಯೆ..! ತತ್ ಕ್ಷಣಪ್ರೇಮದ ಕನಸುಗಳಿಂದನಿಜಕ್ಕೂ ಎಚ್ಚರವಾಗುತ್ತೀರಿ..!ಆರಂಭದಲ್ಲಿಕಣ್ಣೀರು ಹಾಕುತ್ತಾಕೂಗಾಡುತ್ತೀರಿವಾಗ್ವಾದಗಳಲ್ಲಿಗುದ್ದಾಡುತ್ತಾ ಜಿದ್ದಿಗೆ ಬಿದ್ದಂತೆವರ್ತಿಸುತ್ತೀರಿದನಿಯೆತ್ತುವುದನ್ನು ಕಲಿಯುತ್ತೀರಿಪ್ರತಿಭಟಿಸುತ್ತೀರಿ..! ಆದರೆ ವಿಪರ್ಯಾಸ..!ಕಾಲ ಸರಿದಂತೆಲ್ಲಾತಣ್ಣಾಗುಗುತ್ತೀರಿತುಂಬಾ ಆಳದಲ್ಲಿ ಬಿದ್ದಿರುತ್ತೀರಿಮೌನವಾಗುತ್ತೀರಿಕೊನೆಗೊಮ್ಮೆಗಂಭೀರವಾಗಿಏಕಾಂತದ ಸಂಜೆಗಳಲ್ಲಿಸುಖಾಸುಮ್ಮನೆತಾವೊಬ್ಬರೇ ತಮ್ಮಷ್ಟಕ್ಕೆ ತಾವೇಕಳೆದು ಹೋಗುತ್ತೀರಿ…! ಧಾವಂತವಿಲ್ಲನಿಮಗೆ ಬದುಕಿನಲ್ಲಿಗುನುಗುತ್ತದೆ ಕಿವಿಗಳಿಗೆಶೋಕದಲ್ಲೂ ನೆಮ್ಮದಿ ತರಬಲ್ಲಮಹಮ್ಮದ್ ರಫಿಕಿಶೋರ್ ಕುಮಾರ್ , ಮುಖೇಶ್ ಮನ್ನಾಡೇಯಯಾವೊದಾದರೊಂದುಹಳೆಯ ಹಾಡು..! ಕೂತುಬಿಡುತ್ತೀರಿಪ್ರೇಮದ ಹರಿವಿನಲ್ಲಿಮುಗುಳ್ನಗುವ ಬುಧ್ಧನಂತೆಆಗ ನಿಜಕ್ಕೂ ಕೇಳಿಸುತ್ತದೆಪ್ರೇಮದ ಒಳದನಿಪಿಸುಗುಡುತ್ತೀರಿನೀವು ಕೂಡ ಅದರೊಟ್ಟಿಗೆಬೆಂಕಿಯನ್ನು ಬೆಳಕಾಗಿಸಿಕೊಂಡಕಲಾತ್ಮಕಕವಿತೆಯೊಂದರ ಹಾಗೆ…! ಪ್ರಶಾಂತ್ ಬೆಳತೂರು

ಪ್ರಶಾಂತ್ ಬೆಳತೂರು ಅವರ ಕವಿತೆ “ನೀವು..ಮತ್ತೂ… ಈ..ಪ್ರೇಮ” Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಮನದ ಮಗು ಹಠ ಮಾಡುವ ಮುನ್ನ ಬಂದುಬಿಡುನೊಂದು ಬಿಕ್ಕಿ ಅಳುವ ಮುನ್ನ ಬಂದುಬಿಡು ಇರಲಿ ಮೈಲುಗಟ್ಟಲೇ ಅಂತರ  ಇಬ್ಬರ ನಡುವೆ ನೆನಪು ನರಳುತ ಮಾಸುವ ಮುನ್ನ ಬಂದುಬಿಡು  ನನಗೂ ಇದೆ ಹಗಲು ದುಡಿಯುವ ಜವಾಬ್ದಾರಿಇರುಳ ಕನಸು ಸಾಯುವ ಮುನ್ನ ಬಂದುಬಿಡು ಜೊತೆ ಬಾಳುವ ಅವಕಾಶವೇ ಇಲ್ಲ ನಮಗೆಪ್ರೀತಿಯ ಎದೆಬಡಿತ ನಿಲ್ಲುವ ಮುನ್ನ ಬಂದುಬಿಡು ವಾಣಿಯ ಈ ಜನ್ಮವೆನೋ ಕಳೆಯುವುದು ವಿರಹದಿಮರುಜನ್ಮದಿ ಮತ್ಯಾರೋ ಕೈ ಹಿಡಿವ ಮುನ್ನ ಬಂದುಬಿಡು ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

ಡಾ. ಪುಷ್ಪಾವತಿ ಶಲವದಿಮಠ ಅವರ ಕವಿತೆ “ಅರಿವಿನ ದಾರಿ ಹುಡುಕುತ”

ಕಾವ್ಯ ಸಂಗಾತಿ ಡಾ. ಪುಷ್ಪಾವತಿ ಶಲವದಿಮಠ “ಅರಿವಿನ ದಾರಿ ಹುಡುಕುತ” ಇದ್ದು ಬಿಡು ಸುಮ್ಮನೆ  ಬುದ್ಧನಂತೆ ಸುಮ್ಮನಿದ್ದುಬಿಡುಹೊರಟು ಬಿಡು ಈ ಜಗದ ಜಂಜಡ ಕಳೆದುಕೊಂಡು ಬಿಡು  ಹೊರಟು ಬಿಡು ನೀನುನಡೆವ ದಾರಿ ದೊಡ್ಡದಿದೆಕಲ್ಲು ಮುಳ್ಳು ಚುಚ್ಚಬಹುದುರಕ್ತ ಒಸರಬಹುದುಮುಲಾಮು ಹಚ್ಚಿಕೋಪಟ್ಟಿ ಕಟ್ಟಿಕೋನಡೆಯುವುದು  ಮಾತ್ರ ಬಿಡಬೇಡಎಲ್ಲೂ ನಿಲ್ಲಬೇಡಾ ನಡೆಯುತ್ತಲೇ ಇದ್ದುಬಿಡು ನಿನ್ನ ಅಂಜಿಸುವವರುಹೀಯಾಳಿಸುವವರುಅನುಮಾನಿಸುವವರುಹಿಂದೆಳೆಯುವವರುತೆಗಳುವವರುಬೈಯುವವರುನೂರೆಂಟು ಮಂದಿ ಇರಬಹುದುಬಿಟ್ಟು ಬಿಡು ಮಂದಿಯ ಸಹವಾಸಮನದ ಮಾತು ಕೇಳು ಸಾಕು ನಿನ್ನ ಕಷ್ಟ ಕಣ್ಣಿರಿಗೂ ಕರುಗುವರಿಲ್ಲಈ ದುರ್ಬಲತೆಯ ನೀಗಲೇ ಬೇಕು ನೀನುನಿನಗೆ ನೀನು ಆಸರೆಯಾಗಬೇಕುಕಾಲ ನಿಲ್ಲುವುದಿಲ್ಲನೀನು ನಿಂತರೆ ಹೇಗೆ?!ತಳ್ಳಿಕೊಂಡೆ ಹೋಗಿಬಿಡುವುದು ಕಾಲಜೊತೆಗೆ ನಿಲ್ಲುವರಿಲ್ಲನಿಲ್ಲಬೇಡ  ನೀನು ಓಡು ಓಡುಯಾರಿಗೂ ಕಾಯಬೇಡಯಾರೂ ಕಾದಿಲ್ಲ ನಿನಗಾಗಿ ಒಂಟಿ ಪಯಣವೆಂದು ಬೇಸರಸದಿರುದೂರದ  ದಡ ಸೇರಲುಒಂಟಿಯಾಗಿಯೇ ನಡೆಯಬೇಕುನಿನ್ನ ಪಾಪ ಪುಣ್ಯಗಳ ಮೂಟೆ ಹೆಗಲಿಗೆರಿಸಿಕೊಂಡುನಡೆದು ಬಿಡು ಮೋಹ ಮಮಕಾರಗಳ ತೊರೆದುಬುದ್ಧ ಬಸವ ನಡೆಯಲಿಲ್ಲವೇಅವರ ದಾರಿಯೇನು ಸಲೀಸಾಗಿತ್ತೆ?! ಬೆಳಕಿನ ಅರಮನೆಗೆನೂರಾರು ದಾರಿಗಳಿವೆಯಂತೆನಡೆದು ಬಿಡು ಬೆಳಕಿನೆಡೆಗೆಸವಿ ಸಗ್ಗ ಪಡೆಯಲುಇಹದ ಕಗ್ಗ ಬಿಡಿಸಿಕೊಳ್ಳಬೇಕುಬಿಡಿಸಿಕೊಂಡು ಬಿಡುಅಲ್ಲಮ ನಡೆದ ದಾರಿಅಕ್ಕ ನಡೆದ ದಾರಿನಿನ್ನೆದುರಿಗಿದೆಆ ದಾರಿಗುಂಟ ನಡೆದು ಬಿಡುಸಿಗಬಹುದು ನಿನಗೆಅರಿವಿನ ಮನೆಬೆಳಕಿನ ಅರಮನೆ ತೊರೆದು ಬಿಡು ಸಾವಿರ ಚಿಂತೆಇದ್ದು ಬಿಡು ಬುದ್ಧನಂತೆಹೊರಟು ಬಿಡು ಹೊರಟು ಬಿಡುಬಿಟ್ಟು ಅವರಿವರ ಚಿಂತೆಅರಿವ ದಾರಿ ಹುಡುಕುತಕನಕ ಶರೀಫರು ಮೀಟಿದತಂಬೂರಿ ಮೀಟತ…..  ಡಾ. ಪುಷ್ಪಾವತಿ ಶಲವದಿಮಠ

ಡಾ. ಪುಷ್ಪಾವತಿ ಶಲವದಿಮಠ ಅವರ ಕವಿತೆ “ಅರಿವಿನ ದಾರಿ ಹುಡುಕುತ” Read Post »

You cannot copy content of this page

Scroll to Top