ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಹಮೀದ್ ಹಸನ್ ಮಾಡೂರು ಕವಿತೆ “ನರಕಾಗ್ನಿ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು ಕ “ನರಕಾಗ್ನಿ” ಸಾವಿಲ್ಲ….ಆತ್ಮಕ್ಕೂ ಸಾವಿಲ್ಲಪರಮಾತ್ಮನಿಗೂ ಸಾವಿಲ್ಲ,! ಸಾವು ಶರೀರಕ್ಕಷ್ಟೇಆತ್ಮವು ಶರೀರ ತ್ಯಜಿಸಿ ಸೇರುತ್ತೇಪರಮಾತ್ಮನ ಪಾವನ ಸನ್ನಿದಾನಕ್ಕೆ,! ಪಾಪದ ಕೊಡ ತುಂಬಿದಆತ್ಮವನು ಒಲ್ಲೆನು ಪರಮಾತ್ಮನುನರಕವೆಂಬ ಆಗ್ನಿಯ ನೀ ಬಾಯೊಳಗೆ.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಕವಿತೆ “ನರಕಾಗ್ನಿ” Read Post »

ಕಾವ್ಯಯಾನ

ಪರವಿನಬಾನು ಯಲಿಗಾರ “ಜಾತ್ರೆಯೊಂದು ಮುಗಿದಿತ್ತು”

ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ “ಜಾತ್ರೆಯೊಂದು ಮುಗಿದಿತ್ತು” ಜಂಭದಿಂದ , ಗತ್ತು ತೋರಿದ್ದ ,ಡೊಳ್ಳು , ನಗಾರಿಯ ಸದ್ದುಮೂಲೆ ಸೇರಿತ್ತು. ಹಗಲು , ರಾತ್ರಿ ಗಂಟಲುಅರಚಿಕೊಂಡ ಧ್ವನಿವರ್ಧಕ ,ತಣ್ಣಗಾಗಿದ್ದವು. ತಮ್ಮ ಸರಕಿಗೆ ಬೆಲೆ ಕೂಗಿದಮಾರಾಟಗಾರರು , ಹುರುಪಿನಿಂದಲಾಭ ನಷ್ಟದ ಲೆಕ್ಕದಲ್ಲಿದ್ದರು. ಮನೆ , ಮನೆಗಳಲ್ಲಿ ತುಂಬಿದನೆಂಟರು , ನಕ್ಕು ನಲಿದುಸ್ವ ಊರಿಗೆ ಮುಖ ಮಾಡಿದರು. ಊರಿನ ಹಾದಿ , ಬೀದಿಯಲಿಕಸದ ರಾಶಿ ಸಣ್ಣಗೆ ಕೊಳೆತುಗಬ್ಬು ನಾರಲು ಶುರುವಾಯಿತು . ದಣಿವರಿಯದೇ ಹುರುಪಿನಿಂದಸಿಂಗರಿಸಿಕೋಂಡು ,  ಅತ್ತಿತ್ತ ಸುಳಿದತರುಣ , ತರುಣೀಯರು ಸುಸ್ತಾಗಿದ್ದರು ಉತ್ಸವದಲ್ಲಿ ಪಲ್ಲಕ್ಕಿ ಹೊತ್ತವರುಪುನೀರಾದೆವೆಂದು ಬೀಗಿದ್ದರು ,ಮೂರ್ತಿ ಮಾತ್ರಾ ಶಾಂತವಾಗಿತ್ತು. ಗುಡಿಯಲ್ಲಿರುವ ದೇವರುಜಾತ್ರೆಗೆ ಬಂದ ಭಕ್ತರಪಾಪ – ಪುಣ್ಯಗಳ ಲೆಕ್ಕಾಚಾರದಲ್ಲಿದ್ದ. ಮುಗಿದಿದ್ದ ಜಾತ್ರೆ ಬರೀ ದೇವರದ್ದಲ್ಲ , ಮುಂದೊಂದು ದಿನ,ನಮ್ಮ ಬದುಕಿನದ್ದೂ ಸಹ . ಇದ್ದಾಗಿನ ಸದ್ದು ಗದ್ದಲ ಒಮ್ಮೆಗೆನಿಶ್ಯಬ್ದವಾಗುತ್ತದೆ , ಆತ್ಮವೆಂಬ ದೇವರುಪಾಪ – ಪುಣ್ಯಗಳ ತೂಕ  ಹಾಕುವುದು…. ಪರವಿನಬಾನು ಯಲಿಗಾರ    

ಪರವಿನಬಾನು ಯಲಿಗಾರ “ಜಾತ್ರೆಯೊಂದು ಮುಗಿದಿತ್ತು” Read Post »

ಕಾವ್ಯಯಾನ

“ಕಟ್ಟಬೇಕಿದೆ ನಾಡೊಂದನು” ಬಸವರಾಜ್ ಚೌಡ್ಕಿ

ಕಾವ್ಯ ಸಂಗಾತಿ “ಕಟ್ಟಬೇಕಿದೆ ನಾಡೊಂದನು” ಬಸವರಾಜ್ ಚೌಡ್ಕಿ ಕಟ್ಟಬೇಕಿದೆ ನಾವು ನಾಡೊಂದನಸರಿ ಸಮಾನತೆಯ ಬಿಡೊಂದನ.!!ಪ!! ಬಿತ್ತರಿಸುತಿಹರಿಂದು ಆ ಜಾತಿ ನಂದೆಂದುಕತ್ತರಿಸಿ ಹಾಕೋಣ ಜಾತಿಯ ಗಿಡವಿಂದುಎಚ್ಚರಿಸಿ ನಡೆ ನೀ ಮೌಢ್ಯತೆಯ ಕೊಂದುಉಚ್ಚರಿಸು ನಾವೆಲ್ಲ ಭಾರತೀಯರೆಂದು ಕಟ್ಟಿಹರು ನಾಡ ಬಿಸಿಲು ಬೇವರಲಿ ಬೆಂದುಕೊಟ್ಟಿಹರು ಸ್ವಾತಂತ್ರ್ಯ ಲಕ್ಷ ಬಲಿದಾನ ಗೈದುಬರೆದರು ಸಂವಿಧಾನ ಸಮಪಾಲಿರಲೆಂದುಕರೆ ಕೊಟ್ಟರು ಅಸ್ಪೃಶ್ಯತೆ ತೊಲಗಲಿ ಎಂದು ಸ್ಮರಿಸೋಣ ನಮ್ಮವರ ತ್ಯಾಗ ಬಲಿದಾನವನ್ನುಕೊರೋಣ ಹಿರಿ ಜೀವಗಳಿಗೆ ಶಾಂತಿಯನ್ನುತೊರೆಯೋಣ ನಾವು ಜಾತಿ ಮತ ಪಂಥಗಳನ್ನಮರೆಯೋಣ ಅಸೂಯೆ ಬೇಧ ಭಾವಗಳನ್ನು ಕಿತ್ತೋಣ ಜಾತಿ ಧರ್ಮದ ಜಾಲಿಯ ಮುಳ್ಳುಬಿತ್ತೋಣ ಮನುಜ ಮತದ ಪ್ರೀತಿ ಬಿಳಿ ಎಳ್ಳುಹಚ್ಚೋಣ ಅನ್ಯೋನ್ಯತೆಯ ಅಮೃತ ಬಳ್ಳಿಬಿಚ್ಚೋಣ ಕಟ್ಟಿರುವ ಕೋಮುವಾದದ ಸರಪಳಿ ಬಸವರಾಜ್ ಚೌಡ್ಕಿ

“ಕಟ್ಟಬೇಕಿದೆ ನಾಡೊಂದನು” ಬಸವರಾಜ್ ಚೌಡ್ಕಿ Read Post »

ಕಾವ್ಯಯಾನ

ಅನಸೂಯ ಜಹಗೀರದಾರ ಅವರ ಗಜಲ್

ಕಾವ್ಯ ಸಂಗಾತಿ ಅನಸೂಯ ಜಹಗೀರದಾರ ಗಜಲ್ ನಿನ್ನ ಪಥದಲಿ ನಾನಿರುವೆ ಎಂದು ನಂಬುವುದು ಹುಸಿ ಮಾತುನನ್ನ ದಾರಿಯಲಿ ನಿನ್ನ ಹೆಜ್ಜೆಗಳಿವೆ ಎಂದು ತಿಳಿಯುವುದು ಹುಸಿಮಾತು ನೀನಾಡಿದ ಮಾತುಗಳಲಿ ಮಿಥ್ಯದ ನರ್ತನ ವಿಜೃಂಭಿಸಿರಬಹುದುನಿನ್ನೊಂದಿಗಿದ್ದ ಸಮಯದಲಿ  ಮುಖವಾಡ ಧರಿಸಿಲ್ಲವೆನ್ನುವುದು ಹುಸಿಮಾತು ಯಾವ ಕೋನದಿಂದ ನೋಡಿದರೂ ಸಂಪೂರ್ಣ ಕೇಂದ್ರ ಸೆಳೆಯದುಕಣ್ಣೆರಡು ನೋಟ ಅದೇ ಆದರೂ ಗ್ರಹಿಕೆ ಒಂದೇ ಆದೀತೆನ್ನುವುದು ಹುಸಿ ಮಾತು ಒಂದೇ ದೋಣಿಯ ಪಯಣಿಗರು ನಿಜವದು ಇಲ್ಲವೆನ್ನಲಾಗದುಜಗದ ಕಟು ವಾಸ್ತವದ ಜೊತೆ ನಿನ್ನನ್ನೂ ಲೋಕ ಒಪ್ಪಿಕೊಳ್ಳುವುದು ಹುಸಿಮಾತು ಹಕ್ಕುಗಳನ್ನು ಚಲಾಯಿಸುತ್ತಲೇ ನಡೆದಲ್ಲಿ ಪ್ರೀತಿ ಗೆ ಅಲ್ಲಿ ಜಾಗವಿಲ್ಲ #ಅನುಕೇಳಿ ಯಾಚಿಸಿ ಕಾಡಿಸಿ ಪಡೆವ ಸುಖ ಸಂತಸ ನಿಜವೆನ್ನುವುದು ಹುಸಿಮಾತು ಅನಸೂಯ ಜಹಗೀರದಾರ

ಅನಸೂಯ ಜಹಗೀರದಾರ ಅವರ ಗಜಲ್ Read Post »

ಇತರೆ

“ಹೆಣ್ಣು ಎದುರಿಸುತ್ತಿರುವ ಅತ್ಯಾಚಾರವೆಂಬ ಸವಾಲು” ಡಾ.ಸುಮತಿ ಪಿ.

ಮಹಿಳಾ ಸಂಗಾತಿ ಡಾ.ಸುಮತಿ ಪಿ. “ಹೆಣ್ಣು ಎದುರಿಸುತ್ತಿರುವ ಅತ್ಯಾಚಾರವೆಂಬ ಸವಾಲು” ನಮ್ಮ ಹಿಂದಿನವರು ಹೇಳಿದ್ದನ್ನು ಕೇಳಿದ್ದೆ.”ಹೆಣ್ಣೆಂದರೆ ಸೆರಗಿನಲ್ಲಿ ಕಟ್ಟಿಕೊಂಡ ಕೆಂಡದಂತೆ”ಎಂದು.ಆಗ ಹೆಣ್ಣಿಗೆ ಸ್ವಾತಂತ್ರ್ಯವಿಲ್ಲದ ಸಮಯ.ಮನೆಯ ನಾಲ್ಕು ಗೋಡೆಯ ಒಳಗಿದ್ದು,ಯಾವ ರೀತಿಯ ಮನೋಭಾವ ಇತ್ತೆಂದರೆ ಸ್ವಚಂದವಾಗಿ ಹಾರಾಡುವ ಸ್ವಾತಂತ್ರ್ಯವಿರದ ಪಂಜರದಲ್ಲಿರುವ ಹಕ್ಕಿಯಂತೆ. ಆಗ ಹೆಣ್ಣಿಗೆ ಶಿಕ್ಷಣ ನೀಡುತ್ತಿರಲಿಲ್ಲ. ಏನಿದ್ದರೂ ಮನೆ ಕೆಲಸ,ಅಡುಗೆ, ಗಂಡ, ಮಕ್ಕಳು, ಕುಟುಂಬ,ಸಂಸಾರ, ನೆಂಟರು ಇಷ್ಟಕ್ಕೆ ಅವಳ ಸಂಪರ್ಕ ಸೀಮಿತವಾಗಿತ್ತು.ಈ ಕಾಲದಲ್ಲಿ  ಹೆಣ್ಣಿಗೆ ಗಂಡಿನಂತೆಯೇ ಶಿಕ್ಷಣ,ಸ್ವಾತಂತ್ರ ಎಲ್ಲವೂ ಸುಲಭವಾಗಿ ದೊರಕಿದರೂ,ಹೆಣ್ಣಿನೆದುರಿಗೆ ಸವಾಲುಗಳ ಸರಮಾಲೆಯೇ ಇದೆಯೆಂದರೆ ತಪ್ಪಾಗಲಾರದು.ಅದರಲ್ಲಿಯೂ ಬಹುದೊಡ್ಡ ಸವಾಲೆಂದರೆ ಪ್ರಾಣಕಂಟಕವಾದ ಅತ್ಯಾಚಾರ.   “ಎಲ್ಲಿ ಸ್ತೀಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ”ಎಂಬ ಮೇರು ಸಂಸ್ಕೃತಿಯ ನಮ್ಮ ಭಾರತ ದೇಶದಲ್ಲಿ ಇದೀಗ ಅತ್ಯಾಚಾರವೆಂಬ ಕತ್ತಲು ಕವಿದಿದೆ.ಮನುಷ್ಯನ ನಾಗರಿಕತೆಗೆ ಮಂಕು ಕವಿದಿದೆಆಧುನಿಕತೆಯ ಹೆಸರಲ್ಲಿ,ಜೀವನ ಕ್ರಮ ಬದಲಾಗುತ್ತಿದೆ. ಸಂಸ್ಕೃತಿ ,ಸಂಸ್ಕಾರ ಮರೆಯಾಗುತ್ತಿದೆ. ಕುಟುಂಬದಲ್ಲಿ, ಸಮಾಜದಲ್ಲಿ ಕಟ್ಟುಪಾಡಿನ ಕ್ರಮಗಳು ಮರೆಯಾಗಿವೆ, ಮದುವೆಯೆನ್ನುವುದು ಚೌಕಟ್ಟು ಮೀರಿದೆ,ಹೆಣ್ಣಿಗೆ ನೀಡಿದ ಸ್ವಾತಂತ್ರ್ಯ ಸ್ವೇಚ್ಛಾಚಾರಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಅವಿಭಕ್ತ ಕುಟುಂಬ ಜೀವ ಕಳೆದುಕೊಂಡು,ವಿಭಕ್ತ ಕುಟುಂಬದಲ್ಲಿ,ಹೇಳುವವರು ಕೇಳುವವರಿಲ್ಲದೇ, ಸ್ವಾತಂತ್ರ್ಯದ ಹೆಸರಲ್ಲಿ ಯುವಕರು ನಡೆದದ್ದೇ ದಾರಿ ಎಂಬಂತಾಗಿದೆ.ಕಡಿವಾಣವಿಲ್ಲದ ಕುದುರೆಯಂತೆ, ಯೌವನದ ಮರ್ಕಟ ಮನದಲಿ ಉದಿಸುವ ಹುಚ್ಚು ಕನಸುಗಳ ಬೆನ್ನೇರಿ,ಸಾಗುವ ಜೀವನ,ಕನಸುಗಳು ಈಡೇರದೇ,ಸೋಲೊಪ್ಪಲಾಗದೆ ದುರಂತ ಅಂತ್ಯ ಕಾಣುತ್ತಿದೆ.      ಪ್ರಸ್ತುತ ಸಮಾಜದಲ್ಲಿ ಅತ್ಯಾಚಾರವೆಂಬುದು ದಿನನಿತ್ಯದ ಸಾಮಾನ್ಯ ಘಟನೆಯೆಂಬಂತೆ ಕಂಡುಬರುವುದು ಕಳವಳಕಾರಿ ಸಂಗತಿ.ದಿನಕಳೆದಂತೆ ಅತ್ಯಾಚಾರದ ಘಟನೆಗಳು ಮಿತಿಮೀರಿ ನಡೆಯುತ್ತಿವೆ.ಒಂದೊಂದು ಪ್ರಕರಣವೂ ನಿಯತ್ತಿನ ಹೆಣ್ಣುಮಕ್ಕಳಲ್ಲಿ ಭಯ ಮೂಡಿಸುತ್ತಿದೆ!. ಅದರಲ್ಲೂ ಹೆಣ್ಣು ಮಗಳೊಬ್ಬಳು ಸ್ವಂತ ಅಣ್ಣ-ತಮ್ಮಂದಿರಿಂದೇಕೆ!,ಜನ್ಮಕ್ಕೆ ಕಾರಣವಾದ ತಂದೆಯಿಂದಲೇ ಅತ್ಯಾಚಾರಕ್ಕೆ ಒಳಗಾಗುತ್ತಿದ್ದರೆ,ಇದಕ್ಕಿಂತ ಹೇಯ,ಹೀನ ಕೃತ್ಯ ಬೇರೆ ಉಂಟೇ? ಹಾಗಾದರೆ ನಾಗರಿಕತೆ ಎತ್ತ ಸಾಗುತ್ತಿದೆ?     “ವಿನಾಶ ಕಾಲೇ ವಿಪರೀತ ಬುದ್ಧಿ “ಎಂಬಂತೆ ಇದು ಹೀಗೆ ಮುಂದುವರಿದರೆ ಸಂಸ್ಕೃತಿ ,ಸಂಸ್ಕಾರದಲ್ಲಿ ಜಗತ್ತನ್ನೇ ಗೆದ್ದು  ಬೀಗಿ ನಿಂತ ಬಾರತ ಅತ್ಯಾಚಾರದಂತಹ ಹೇಯ ಕೃತ್ಯಗಳಿಂದ ಜಗತ್ತಿನೆದುರು ತಲೆತಗ್ಗಿಸಿ ನಿಲ್ಲುವಂತಾದರೂ ಆಶ್ಚರ್ಯವಿಲ್ಲ.!“ಎರಡೂ ಕೈ ಸೇರಿದಾಗ ಮಾತ್ರ ಚಪ್ಪಾಳೆ” ಎಂಬಂತೆ, ಅತ್ಯಾಚಾರಕ್ಕೆ ಗಂಡನ್ನು ಕಾರಣವಾಗಿಸುವಾಗ,ಹೆಣ್ಣಿನ ತಪ್ಪನ್ನು  ಮುಚ್ಚಿಡಲಾಗದು. ಹೆಣ್ಣಿನ ನಡೆ,ನುಡಿ ಕೂಡ ಅವಳ ಅತ್ಯಾಚಾರಕ್ಕೆ ಕಾರಣವಾಗಬಹುದು ಎಂಬುವುದು ಗಮನಿಸಬೇಕಾದ  ಅಂಶವಾಗುತ್ತದೆ.ಆದ್ದರಿಂದ ಹೆಣ್ಣಿನ ಅತ್ಯಾಚಾರದಲ್ಲಿ ಗಂಡಿನ ಪಾತ್ರ ಹೆಚ್ಚಿದ್ದರೂ,ಹೆಣ್ಣಿಗೆ ಎಚ್ಚರಿಕೆಯ ನಡೆಯಿರಬೇಕು.ಗಂಡಸರು ಹೆಣ್ಣಿಗೂ ತನ್ನಂತೆ ಮನಸ್ಸು ಇದೆ,ಆಸೆ,ಆಕಾಂಕ್ಷೆಯಿದೆ ಎಂಬುದನ್ನು ಅರಿಯಬೇಕು.ಪರಸ್ಪರ ಗೌರವ, ಸಹಕಾರ, ಸಹಜೀವನ ಇರಬೇಕು.ಕಾನೂನು ಕೂಡ ಕಟ್ಟುನಿಟ್ಟಿರಬೇಕು.ಹೆಣ್ಣು ತನ್ನ ಮೇಲೆ ನಡೆದ ಅತ್ಯಾಚಾರವನ್ನು ಸಾಬೀತುಪಡಿಸುವ ಮನೋಸ್ಥೈರ್ಯ ಮೂಡಿಸಿಕೊಳ್ಳಬೇಕು.ಅತ್ಯಾಚಾರ ಸಾಬೀತಾದರೆ ಮರಣದಂಡನೆ ವಿಧಿಸಬೇಕು.ಸುಳ್ಳು ಸಾಕ್ಷಿ,ಹಣದಿಂದ, ಅಧಿಕಾರ ಪ್ರಭಾವದಿಂದ ನುಸುಳಲು ಬಿಡಬಾರದು.ಒಟ್ಟಿನಲ್ಲಿ ಅತ್ಯಾಚಾರ ತಡೆಯಬೇಕಾದರೆ,ಗಂಡು ಹೆಣ್ಣಿಗೆ ಅರಿವಿನ ಶಿಕ್ಷಣ,ಮಾನಸಿಕ ಚಿಕಿತ್ಸೆ,ಹೆಣ್ಣಿನ ಬಗ್ಗೆ ಬದಲಾಗಬೇಕಾದ ಮನೋಭಾವ,ಕಠಿಣ ಕಾನೂನು,ಪ್ರಜ್ಞಾವಂತ ಸಮಾಜದೊಂದಿಗೆ ,ಹೆತ್ತವರೂ ಜಾಗೃತರಾಗಿರಬೇಕು, ಅತ್ಯಾಚಾರ ಮುಕ್ತ ಸಮಾಜ ನಿರ್ಮಾಣವಾಗಬೇಕು. ಡಾ.ಸುಮತಿ ಪಿ

“ಹೆಣ್ಣು ಎದುರಿಸುತ್ತಿರುವ ಅತ್ಯಾಚಾರವೆಂಬ ಸವಾಲು” ಡಾ.ಸುಮತಿ ಪಿ. Read Post »

gaade
ಇತರೆ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ
​ಗಾದೆಗಳ ವಿಶ್ಲೇಷಣೆ
ನಿಜ ಆಡಿದರೆ ನಿಷ್ಠುರ, ಸುಳ್ಳಾಡಿದರೆ ಮತ್ಸರ

Read Post »

ಕಾವ್ಯಯಾನ

ಸಿ.ಎಚ್.ಮಧುಕುಮಾರ ಕವಿತೆ,”ಕವಿಪತ್ನಿಯ ಅಳಲು”

ಕಾವ್ಯ ಸಂಗಾತಿ ಸಿ.ಎಚ್.ಮಧುಕುಮಾರ “ಕವಿಪತ್ನಿಯ ಅಳಲು” ಸಂಸಾರದ ನೊಗಭಾರವ ನನ್ನೊಬ್ಬಳಿಗೇ ಹೊರಿಸಿಅಕ್ಷರ ಜಾತ್ರೆಗಳಲಿ ಜೋಳಿಗೆ ಹಿಡಿದುಊರೂರು ಸುತ್ತುವ ಅರೆಜೋಗಿಯೇಬೆಚ್ಚಿಬೀಳಿಸುವ ನಿನ್ನ ಕವಿತೆಯ ಕೊನೆಯ ಸಾಲುಗಳನೆನೆನೆನೆದು ಹಣ್ಣಾಗಿರುವೆಈ ಹೆಣ್ಣಿಗಾಗಿ ಚೂರು ಸಮಯವಿದೆಯೆ? ನೀನಿತ್ತ ಆ ಎರಡು ಮಕ್ಕಳೋನಿನ್ನದೇ ಅಪರಾವತಾರ ಎಂಬಂತೆಅರ್ಥವಾಗದ ಭಾಷೆಯಲ್ಲಿ ವ್ಯವಹರಿಸುತ್ತಿವೆ!ನಿಭಾಯಿಸಲು ಹೊಸ ಭಾಷ್ಯ ಬರೆಯಬೇಕಿದೆ ಚೂರು ಸಮಯವಿದೆಯೆ? ನನ್ನ ದಾರಿ ಸುಗಮಗೊಳಿಸಲು? ಕವಿಯ ಸ್ಪೂರ್ತಿಯ ಮೂಲ ‘ಕವಿಪತ್ನಿಯೇ ಇರಬೇಕೆಂದು’ಹಾಲು,ತರಕಾರಿ.ದಿನಸಿ ತರಲೆಂದು ಹೊರಹೋದಾಗಲೆಲ್ಲನಿಮ್ಮದೆ ಓದುಗರು ಕಣ್ಣಭಾಷೆಯಲಿ ಪ್ರತಿಕ್ರಿಯಿಸುತ್ತಿದ್ದಾರೆ!ಅರ್ಥೈಸಿಕೊಳ್ಳಲಾಗುತ್ತಿಲ್ಲ ಚೂರೇ ಚೂರು ಸಮಯವಿದ್ದರೆಬಂದು ಬಿಡಿ ಒಂದು ಬಾರಿ ನನ್ನೊಂದಿಗೆ. ಅರಿಸಿನ ಕುಂಕುಮ ತೆಗೆದುಕೊಳ್ಳಲುಮನೆಗೆ ಬರುವ ಮುತ್ತೈದೆಯರು ಕೇಳುತಿಹರು ನಿಮ್ಮನ್ನುನಿಮ್ಮ ನಗು, ಹರಟೆಯ ಗಂಟು ಮೂಟೆ ಕಟ್ಟಿಹೊರಟು ಬನ್ನಿ ಮನೆಗೆನಿಮ್ಮೆಲ್ಲ ಕವಿತೆಯ ಪ್ರಸವಗಳು ಇಲ್ಲಿಯೇ ಆಗಲಿ! – ಸಿ.ಎಚ್.ಮಧುಕುಮಾರ

ಸಿ.ಎಚ್.ಮಧುಕುಮಾರ ಕವಿತೆ,”ಕವಿಪತ್ನಿಯ ಅಳಲು” Read Post »

ಕಾವ್ಯಯಾನ

“ಸಾವ ತುಟಿಯೂ ನಗು ಹೊತ್ತಿರಬೇಕು” ಡಾ ಬಿ ಎನ್‌ ತಾರಾ ಧಾರವಾಡ

ಕಾವ್ಯ ಸಂಗಾತಿ ಡಾ ಬಿ ಎನ್‌ ತಾರಾ ಧಾರವಾಡ “ಸಾವ ತುಟಿಯೂ ನಗು ಹೊತ್ತಿರಬೇಕು” ಬದುಕು ಹೆಂಗಿರಬೇಕು,ಕತ್ತಲ ಗರ್ಭದಲ್ಲೂಬೆಳಕು ಹೊತ್ತಿರಬೇಕು.ಹಸಿವು ಅಸಾಧ್ಯವಾದರೂಆಸೆಯ ದೀಪವೊಂದುಎದೆಯಲಿ ಹೊತ್ತಿರಬೇಕು.ಬಿದ್ದೆವೆಂದು ಭಯಪಟ್ಟು ಮೌನವಾದರೆ,ಬದುಕು ಪಾಠಕಲಿಸೋದಿಲ್ಲ.ಕಣ್ಣೀರ ಹನಿಗಳು ನೆಲ ಸೇರುವ ಮುನ್ನ, ಮುತ್ತಾಗುವಷ್ಟುಮೌಲ್ಯವಿರಬೇಕು.ಹಾರದೆ ಮುರಿದ ಕನಸುಗಳ  ಹೊಸ ಕನಸಿನ ಬೀಜ ಮೊಳಕೆಯೊಡೆಯಬೇಕು.ನೋವಿನ ಪ್ರತಿಯೊಂದು ಹೆಜ್ಜೆಯ ಹಿಂದೆಯೂ,ಅರ್ಥವುಮೌನವಾಗಿ ನಗಬೇಕು.ಸೋಲಿನ ನೆರಳು ಮೇಲೆ ಬಿದ್ದರೂ,ಕಾಲದ ಹೊಡೆತಎದೆ ಚೂರಿದರೂಧೈರ್ಯವೆಂಬ ಬೇರು ಇರಬೇಕು. ನಗು  ನಗುತಿರಬೇಕು ಸಾವಿರ ನೋವಿಗೆಉತ್ತರವಾಗಬೇಕು.ಕೊನೆಯ ಉಸಿರಿನ ಕ್ಷಣದಲ್ಲೂ,ಜೀವನ ಜಯಿಸಿದತೃಪ್ತಿಯಿರಬೇಕು.ಸಾವ ಬಂದಾಗದೇಹ ಮೌನವಾದರೂ,ಮನಸ್ಸು ಮಾತ್ರ ರಾಗ ಹಾಡುತ್ತಿರಬೇಕು. ಬದುಕಿದ ಜೀವಕ್ಕೆಸಾವ ತುಟಿಯೂನಗುವ ಹೊತ್ತಿರಬೇಕು.ಕತ್ತಲ ಗರ್ಭದಲ್ಲೂಬೆಳಕು ಹೊತ್ತಿರಬೇಕ,ಕಣ್ಣೀರ ಹನಿಗಳುನೆಲ ಸೇರುವ ಮುನ್ನ,ಮುತ್ತಾಗುವಷ್ಟ ಮೌಲ್ಯವಿರಬೇಕು.ಆಕಾಶಕ್ಕೆ ಹಾರದೆ ,ಹೊಸ ಕನಸಿನ ಬೀಜನೋವಿನ ಪ್ರತಿಯೊಂದುಹೆಜ್ಜೆಯ ಹಿಂದೆಯೂ,ಅರ್ಥ ಮೌನವಾಗಿ ನಗಬೇಕು.ಭ್ರಮಿಸಬಾರದು.ಕಾಲದ ಹೊಡೆತ ಎದೆ ಚೂರಿದರೂ ಸಹ,ಧೈರ್ಯವೆಂಬ ನಡುಗದ ಬೇರು ಇರಬೇಕು. ನಗು ಸಣ್ಣದಾದರೂ ಸಾಕು,ಅದು ಸಾವಿರ ನೋವಿಗೆ ಉತ್ತರವಾಗಬೇಕು. ಉಸಿರಿನ  ಕ್ಷಣದಲ್ಲೂ,ಜೀವನ ಜಯಿಸಿದೆವೆಂಬ ತೃಪ್ತಿಯಿರಬೇಕು.ಮನಸ್ಸು  ಹಾಡುತ್ತಿರಬೇಕು.ಸಾವ ತುಟಿಯೂನಗುವ ಹೊತ್ತಿರಬೇಕು. ಡಾ ತಾರಾ ಬಿ ಎನ್ ಧಾರವಾಡ

“ಸಾವ ತುಟಿಯೂ ನಗು ಹೊತ್ತಿರಬೇಕು” ಡಾ ಬಿ ಎನ್‌ ತಾರಾ ಧಾರವಾಡ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ ಅವರ ಕವಿತೆ “ನೆನಪಾಗುತ್ತಾರೆ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ನೆನಪಾಗುತ್ತಾರೆ” ಗೆಳೆಯರೆಸತ್ಯ ಶುದ್ಧತೆಗೆಇಲ್ಲ ಬೆಲೆ ಗೌರವಉಪ್ಪಿನಲ್ಲಿ ಕಾಣದ ಇರುವೆಗಳುಸಕ್ಕರೆಯಲ್ಲಿ ಮುಕ್ಕುತ್ತವೆ.ಹಾಲು ಮಾರುವವನುಓಣಿ ಕೇರಿ ತಿರುಗಬೇಕುಹಾಲು ಕೊಳ್ಳುವವರು ಕೇಳುತ್ತಾರೆನೀರೆಷ್ಟು ಬೆರೆಸಿದೆಯೆಂದುಆಲ್ಕೊಹಾಲ್ ಮಾರುವವನಅಂಗಡಿಯಲ್ಲಿ ಜನ ಜಂಗುಳಿಅವರೆ ಸಾರಾಯಿಯಲ್ಲಿನೀರು ಸೋಡಾ ಬೆರೆಸಿ ಸಂಭ್ರಮಿಸುತ್ತಾರೆಮನುಷ್ಯನಿಗೆ ಪಶುವೆಂದರೆಎಲ್ಲಿಲ್ಲದ ಕೋಪಸಿಂಹ ಹುಲಿಯೆಂದರೆಹಿಗ್ಗಿ ಕುಣಿಯುತ್ತಾನೆ.ಪಾಪ ಅವನಿಗೆ ಗೊತ್ತಿಲ್ಲಅವುಗಳು ಪಶುವೆಂದುತಿಳಿ ನೀರಿನಲ್ಲಿ ಎಂದೂ ಮೀನು ವಾಸಿಸುವುದಿಲ್ಲಕೊಳಚೆಯಲ್ಲಿ ಅವುಗಳ ಸಂತೆಸತ್ಯ ಹೇಳುವವನಿಂದುಒಂಟಿಯಾಗುತ್ತಿದ್ದಾನೆಸುಳ್ಳಿಗೆ ಸನ್ಮಾನದ  ಪಟ್ಟನೆನಪಾಗುತ್ತಾರೆಬುದ್ಧ ಬಸವ ಬಾಪುಸತ್ಯ ಹೇಳಿ ಬಿಟ್ಟು ಹೋದರು ಜಗವ ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ ಅವರ ಕವಿತೆ “ನೆನಪಾಗುತ್ತಾರೆ” Read Post »

ಕಥಾಗುಚ್ಛ

“ಒಬ್ಬ” ಸಣ್ಣ ಕಥೆ ನಾಗರಾಜ ಬಿ. ನಾಯ್ಕ ಅವರಿಂದ

ಕಥಾ ಸಂಗಾತಿ ನಾಗರಾಜ ಬಿ. ನಾಯ್ಕ “ಒಬ್ಬ”  ಗುಡ್ಡದ ತುದಿಗೆ ಒಂಟಿ ಮನೆ. ಅಲ್ಲಿಂದ ಹೊರಗೆ ನೋಡಿದರೆ ಕಣ್ಣು ಮುಟ್ಟುವಷ್ಟು ಕಡಲು. ಅವನು ಆಗಾಗ ನಿಂತು ಆ ಕಡಲನ್ನು ನೋಡುವನು. ಅಲೆಗಳ ಕುಣಿತ ಅವನೊಳಗೆ ಹೊಸ ಸಂಚಲನವ ನೀಡುವುದು.  ತನಗೆ ಎಷ್ಟು ವರ್ಷ ಗೊತ್ತಿಲ್ಲ ಅವನಿಗೆ. ತನ್ನವರು ಎನ್ನುವರು ಯಾರೂ ಪರಿಚಯವಿಲ್ಲ ಅವನಿಗೆ. ಸುಮ್ಮನೆ ದುಡಿಯುವುದು, ತಿನ್ನುವುದು ಅದೊಂದೇ ಅವನ ಗುರುತು. ಎಲ್ಲರಿಗೂ ಅವನು ಬೇಕು. ಆದರೆ ಅವನು ಮಾತ್ರ ಒಂಟಿ. ಯಾವ ಹಂಗೂ ಇರದ ಬದುಕು ಅವನದ್ದು . ಒಮ್ಮೊಮ್ಮೆ ಆಕಾಶ ನೋಡುತ್ತಾ ಮಲಗುವ. ನೋಡಿದ ಆಗಸದಲ್ಲಿ ಯಾರದೋ ಮುಖ ಅವನಿಗೆ ಕಾಣುವುದು. ವಿಚಿತ್ರ ಎನಿಸುವುದು ಅವನಿಗೆ ಮೋಡಗಳಲ್ಲಿ, ಆಕಾಶದಲ್ಲಿ ಮುಖಗಳು ಕಾಣುವುದು. ಒಮ್ಮೊಮ್ಮೆ ಓಡಾಡುವ ಜನರ ನಡುವಿನ ಮುಖದ ಭಾವವನ್ನ ಅವನು ಗುರುತಿಸುವ. ಅವರಾರು ತನ್ನವರಲ್ಲ ಎನಿಸುವುದು ಅವನಿಗೆ. ವ್ಯವಹಾರ ಎನಿಸುವ ಜೀವನ ಅವನಿಗೆ ಬೇಸರ ತರಿಸುವುದು. ಆದರೂ ಅವನು ಬದುಕುವನು ಅವರೊಟ್ಟಿಗೆ. ಅವರೆಲ್ಲರೂ ಒಂಟಿ ಅಂದುಕೊಳ್ಳುವನು ಆಗಾಗ. ಆದರೆ ಅವರ ಮುಖಭಾವದಲ್ಲಿ ಅವರಾರು ಒಂಟಿ ಎನ್ನುವುದು ಇರುವುದಿಲ್ಲ ಎಂದುಕೊಂಡು ಮನೆಗೆ ಹೋದರೆ ಮಾತನಾಡಿಸುವ ಜೀವಗಳು ಅನೇಕ ಅವರಿಗೆ ಎಂದುಕೊಳ್ಳುವನು. ಆದರೆ ಅವನಿಗೆ ಯಾರಿಲ್ಲ ಮಾತನಾಡುವವರು. ಯಾರು ಇಲ್ಲದ ಮನೆಯಲ್ಲಿ ಸಾಕಿದ ಬೆಕ್ಕು, ಸಾಕಿದ ನಾಯಿ ಒಂದೆರಡು ಆಕಳು ಇವುಗಳನ್ನು ಬಿಟ್ಟರೆ ಅವನಿಗೆ ತನ್ನವರು ಎನ್ನುವರು ಯಾರು ಇಲ್ಲ. ಆದರೆ ಅವುಗಳೇ ಅವನ ಸರ್ವಸ್ವ. ಕಾಡಿನ ದಾರಿ. ದಿನಾಲು ಒಂಟಿ ಸಾಗುವವನು. ಅವನೆಂದುಕೊಂಡಂತೆ ಅವನ ಬದುಕು. ಹಸಿವೆಯಾದರೆ ತಿನ್ನುವನು ಅನ್ನವನ್ನು. ಯಾರೋ ಕೊಟ್ಟ ಹಣ್ಣನ್ನು ,ಯಾರು ಕಟ್ಟಿಕೊಟ್ಟ ರೊಟ್ಟಿಯನ್ನು. ಹಸಿವಿಗೆ ಎಂದು ಉಣ್ಣುವಾಗ ಕೊಟ್ಟ ಕರಗಳನ್ನು ಎಣಿಸುವ ಆತ ಮುಖವನ್ನ ಸ್ಮರಿಸುವ ಹಂಚಿ ತಿನ್ನುವ ತನ್ನೊಟ್ಟಿಗೆ ಬಂದ ಬೆಕ್ಕು ನಾಯಿ ದನ ಕರುಗಳ ಜೊತೆ.        ಬೀಸುವ ಗಾಳಿಗೆ ಮೈಯೊಡ್ಡಿ ಕುಳಿತಾಗ ಅವನಲ್ಲಿ ಹೊಸ ಹುರುಪು. ಮರದ ನೆರಳಿಗೆ ಎಂದು ಬಂದು ಕುಳಿತಾಗ ಹಕ್ಕಿಗಳು ಉಲಿವವು. ಸುತ್ತ ಹುಟ್ಟಿದ ಮರಗಿಡಗಳಲ್ಲಿ ಅನೇಕ ಹಕ್ಕಿಗಳು ಬಂದು ಚಿಲಿಪಿಲಿ ಎನ್ನುವವು. ತಿಂದು ಎಸೆದ ಬೀಜಗಳು ಸಸಿಯಾಗಿ ಹುಟ್ಟಿ ಮರವಾಗಿ ಬೆಳೆದು ನಿಂತು ಉಪಕರಿಸುವ ರೀತಿಗೆ ಅವನು ಸೋಲುತ್ತಾನೆ. ಎತ್ತರವಾಗಿ ಬೆಳೆದು ನಿಂತ ಮರದ ನೆರಳಿಗೆ ಕುಳಿತು ಗುಡ್ಡದ ಕೆಳಗೆ ಇರುವ ಕಡಲಲ್ಲಿ ರವಿ ಮುಳುಗುವ ವಿಹಂಗಮ ನೋಟವನ್ನು ಕಾಣುತ್ತಾನೆ. ಸೂರ್ಯ ಒಂದು ಪ್ರಶ್ನೆ ಅವನಿಗೆ. ಎಷ್ಟೆಲ್ಲಾ ಕಲಾಕೃತಿಗಳು ಅವನ ಬೆಳಕಿನ ಸೃಷ್ಟಿ ಎಂಬುದರಿತು ಹೆಮ್ಮೆ ಪಡುತ್ತಾನೆ. ಕೆಂಬಣ್ಣದ ಆಗಸದಲ್ಲಿ ಬೆಳ್ಳಕ್ಕಿಗಳ ಸಾಲೊಂದು ಓಡುವ ಸಂಭ್ರಮವ ನೋಡಿ ಅಂತರಂಗದಿ ಕರಗುತ್ತಾನೆ. ಪಯಣದ ದಿಕ್ಕುಗಳ ನೋಡಿ ಆನಂದಿಸಿ ಸುಮ್ಮನಾಗುತ್ತಾನೆ. ತನ್ನೊಳಗೆ ತಾನೇ ಪ್ರಶ್ನೆಯ ಎಳೆದುಕೊಂಡು ಎಲ್ಲೆಲ್ಲೂ ಸುತ್ತಿ ಬರುತ್ತಾನೆ. ಸಂಜೆಯ ಕತ್ತಲಿಗೆ ಗುಡ್ಡದ ಜೀರುಂಡೆಗಳ ಸದ್ದು ಕೇಳುತ್ತದೆ. ಮರಗಿಡಗಳಲ್ಲಿ ಹಕ್ಕಿ ಮಲಗಿರುವ ಮೌನ ಕತ್ತಲೆಗೆ ಒರಗಿ ನಿದ್ದಿಸುವ ಕೌತುಕಕ್ಕೆ ಬೆರಗಾಗುತ್ತಾನೆ. ಕತ್ತಲೆಯ ಮಧ್ಯೆ ಬೆಳಗುವ ಚಂದಿರನ ಕಂಡು ನಸು ನಗುತ್ತಾನೆ. ನನ್ನಂತೆ ನೀನು ಸುಖಿ ಎನ್ನುತ್ತಾನೆ. ಅಚ್ಚರಿಗಳ ಆಶಾ ಗೋಪುರ ಅವನದಾಗುತ್ತದೆ. ತಾನು ಒಬ್ಬನೇ ಎನ್ನುವ ಅವನಲ್ಲದ ಭಾವ ಅವನನ್ನು ತಾಕದೇ ಮರೆಯಾಗುತ್ತದೆ. ಹಸಿವೆ, ನಿದ್ದೆಯ ದಾಟಿ ಬೆಳಕು ಹರಿಯುತ್ತದೆ. ಹೊಸ ಬೆಳಕಿನ ಸೃಷ್ಟಿಗೆ ಕಾದು ಎದ್ದು ಹೊರಡುತ್ತಾನೆ. ಬಾಗಿಲಿಲ್ಲದ ಮನೆಯ ಬಿಟ್ಟು. ಸಾಕಿದ ಬೆಕ್ಕು ಬಂದು ಮ್ಯಾಂವ್ ಎಂದು ಕಳುಹಿಸಿ ಹೋಗುತ್ತದೆ. ಊರ ದಾರಿಗಳಲ್ಲಿ ಸಾಗುವಾಗ ಮಂದಹಾಸ ಬೀರುತ್ತ ನಡೆವ. ನಡೆವಾಗ ಎದುರಾದ ಯಾರೋ ಹೆಸರು ಹೇಳಿ ಕರೆಯುವರು. ಓ ಎಂದು ನಾಲ್ಕು ಮಾತು ಆಡಿ ಹೋಗಿಬಿಡುವ. ಕರೆದ ಮನೆಯ ಅಂಗಳದಲ್ಲಿ ಕುಳಿತು ಕೊಟ್ಟ ಕೆಲಸವ ಮಾಡಿ ಹೊರಡುವವ. ಅವನ ಕೆಲಸದ ಚಾಕ ಚಕ್ಯತೆ ಒಂದು ಕುಶಲತೆ ಎನಿಸುತ್ತಿತ್ತು. ಅವನು ನೆಟ್ಟ ಗಿಡ ತಾನೇ ತಾನಾಗಿ ಚಿಗುರು ಬಿಡುತ್ತಿತ್ತು. ಹಸಿರು ಅವನ ಕೈಯಾರೆ ಬೆಳೆದು ಇಳೆಯ ಹಸಿರಿಗೊಂದು ಹೆಸರಾಗುತ್ತಿತ್ತು. ಆತ್ಮ ಅಭಿಮಾನ ಗೌರವಕ್ಕೆ ಋಣಿ ಎಂದುಕೊಳ್ಳುತ್ತಿದ್ದ. ಅವನೇ ಬೆಳೆಸಿ ಉಪಕರಿಸಿದ ಮರಗಳು ಬೆಳೆದು ಊರ ತುಂಬಾ ಹರಡಿದ್ದವು.              ಕಾಲದ ಕನ್ನಡಿಗೆ ಹಲವು ಗುರುತು. ಅವನು ಆಗಾಗ ಅಂದುಕೊಳ್ಳುವ. ಅದಾರೋ ಕೊಟ್ಟ ತಿಂಡಿ ತಿಂದು ಅಲ್ಲಿ ಇಲ್ಲಿ ಬೆಳೆದು ದೊಡ್ಡವನಾದ ಮೇಲೆ ಈ ಊರಿಗೆ ಬಂದು ನಿಂತವ. ತನ್ನವರಲ್ಲದ ಜನರ ನಡುವೆ ಜಾತ್ರೆಗೆಂದು ಬಣ್ಣ ತುಂಬಲೆಂದು ಬಂದವ. ಅದೇನೋ ಖುಷಿ ಅನಿಸಿ ಈ ರೀತಿ ದಿನ ಒಂದೊಂದು ಊರು ಅಲೆಯುವುದು ಸಾಕಾಗಿ ಇಲ್ಲೇ ಉಳಿದರೆ ಸಾಕು ಎಂದು ಉಳಿದವ. ದೂರದ ಗುಡ್ಡದಂಚಿನ ಮರದ ಕೆಳಗೆ ಮಲಗಿ ಹಲವು ದಿನ ಕಳೆದವ. ಒಂಟಿತನ ಕಾಡಲಿಲ್ಲ ಅವನಿಗೆ. ಏಕೆಂದರೆ ಒಂಟಿಯಾಗಿ ಬೆಳೆದವನಿಗೆ ಅದು ಕರಗತ. ಈಗೀಗ ನಗುವುದು ಕಲಿತಿದ್ದ. ತನ್ನಂತೆ ಇದ್ದ ಇತರರ ನೆನಪಿಸಿಕೊಂಡ. ಅವರೆಲ್ಲಾ ಎಲ್ಲಿ ತಲುಪಿರಬಹುದು ಎಂದು ಯೋಚಿಸಿದ. ತಾನೇ ಸುಖಿ ಎಂದುಕೊಂಡ. ಹಸಿವೆಯಾದಾಗ ಗುಡ್ಡದಿಂದ ಇಳಿದು ಬಂದು ಊರ ದಾರಿ ಹಿಡಿದ. ಯಾರೋ ಊಟ ಕೊಟ್ಟರು. ಕೆಲಸ ಕೊಟ್ಟರು. ಒಂಟಿಯಾದರೂ ಜೀವನ ಸಾಗಿತು. ಅದೊಂದು ದಿನ ವಯಸ್ಸಾದ ಅಜ್ಜಿಯೊಬ್ಬಳ ಮನೆಗೆ ಹೋಗಿದ್ದ. ಇದ್ದ ಒಬ್ಬ ಮಗ ಬಾರದ ನೋವು ಅಜ್ಜಿಗೆ ಕಾಡಿತ್ತು. ತುಂಬಾ ಮಾತನಾಡಿದ ಅಜ್ಜಿ ಜೊತೆಗೆ. ಅಜ್ಜಿಗೆ ಮಗ ಸಿಕ್ಕಂತಾಯಿತು. ಅವನೂ ಖುಷಿ ಪಟ್ಟ. ಈ ಲೋಕದ ಮಾಯೆಗೆ ಬೆರಗಾದ. ಕಾಲದ ಕರೆಗಂಟೆಯಲ್ಲಿ ಕರಗಿಹೋದ ನೋವುಗಳ ಎಣಿಸಿದ. ಅವನ ಮನೆಗೆ ಕಿಟಕಿ ಬಾಗಿಲು ಯಾವುದು ಇರಲಿಲ್ಲ. ಚಪ್ಪರದೊಳಗಿನ ಬದುಕಿನ ಜೀವಂತಿಕೆಗೆ ಸಾಕ್ಷಿಯಾಗಿದ್ದ. ಹತ್ತಾರು ವರ್ಷಗಳ ಕಾಲ ಉಳಿದ. ಈಗ ಅವನಿಗೆ ಊರಿನ ಜನರ ನಂಟು ಹೆಚ್ಚಾಗಿತ್ತು ‌. ಕರೆವವರು ಬಹಳ ಅವನಿಗೆ. ಅದೊಂದು ದಿನ ಆ ಊರಿನ ಜಾತ್ರೆ ನಡೆಯುತ್ತಿತ್ತು. ಅವನು ಜಾತ್ರೆಗೆ ಹೋದ‌. ಕಂಡ ಮುಖಗಳಲ್ಲಿ ಬದುಕಿನ ಭಾವಗಳ ಹುಡುಕಿದ. ಅರೇ ಹೌದಲ್ಲ ಇದೇ ನನ್ನ ಬದುಕಾಗಿತ್ತು. ಜಾತ್ರೆಗೆ ಬಂದ ಎಲ್ಲರೂ ಸೇರಿ ಸಂಭ್ರಮದಿಂದ ನಡೆವಾಗ ಹೆಮ್ಮೆ ಎನಿಸುತ್ತಿತ್ತು. ಅದೆಷ್ಟು ಜಾತ್ರೆಗಳ ಸುತ್ತಿದ್ದ ಅವನು. ಮತ್ತೆ ಅದೇ ಬದುಕು ಅವನ ಸುತ್ತಿ ಕೊಂಡಿತು. ಜಾತ್ರೆ ಇದ್ದಷ್ಟು ದಿನ ಅಲ್ಲೇ ಉಳಿದ. ಜಾತ್ರೆ ಮುಗಿಯಿತು. ಬಂದವರು ಹೊರಟರು ಒಂಟಿಯಾಗಿ. ಅವನೆಂದುಕೊಂಡ ಇವರೊಡನೆ ಹೊರಟರೆ ಹೇಗೆ ಅಂದುಕೊಂಡ. ಆ ಗುಡ್ಡದ ಗುಡಿಸಲೇ ವಾಸಿ ಎನಿಸಿ ಮರಳಿದ…….. ಇರುವವರೆಗೆ ಒಬ್ಬನಾಗಿಯೇ ಉಳಿದ. ಊರಿಗೆ ಮರಳಿದ ಅವನ ಕಂಡವರಿಗೆ ಖುಷಿ ಎನಿಸಿತು. ತಾನೇ ಕಟ್ಟಿದ ಗುಡಿಸಲಿಗೆ ಬಂದು ಕುಳಿತು ಹೊರಗೆ ನೋಡಿದ. ಅಸ್ತದ ವಿಶಾಲ ನೋಟ ಅಚ್ಚರಿಯೊಳಗಿನ ಬಂಧುತ್ವ ಎನಿಸಿತು. ಜಗದ ನಿಯಮಕೆ ಎಲ್ಲವೂ ವಾಸ್ತವದ ಪ್ರತಿಬಿಂಬಗಳು. ನನ್ನ ಉಸಿರು ಕೂಡಾ ಹಾಗೆ ಅಂದುಕೊಂಡ. ಬದುಕಿದ. ಎಲ್ಲರೊಳಗೆ ನಾನು ಒಬ್ಬ ಎಂದು ಅಂದುಕೊಂಡ. ಸಾಗುವ ಬದುಕಿನ ಚಿತ್ರದಲ್ಲಿ ಸಾಗಿ ಹೋದ ಒಬ್ಬನಾಗಿ. ನಾಗರಾಜ ಬಿ. ನಾಯ್ಕ.

“ಒಬ್ಬ” ಸಣ್ಣ ಕಥೆ ನಾಗರಾಜ ಬಿ. ನಾಯ್ಕ ಅವರಿಂದ Read Post »

You cannot copy content of this page

Scroll to Top