ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಎನ್.ಜಯಚಂದ್ರನ್ ಅವರ ಕವಿತೆ “ಅಂತರ”

ಕಾವ್ಯ ಸಂಗಾತಿ -ಎನ್.ಜಯಚಂದ್ರನ್ “ಅಂತರ” ಒಂದೇ ಊರು, ಒಂದೇ ಗಾಳಿ,ಆದರೂ ಮನಸುಗಳು ದೂರದ ದ್ವೀಪಗಳು. ಮುಖದಲ್ಲಿ ನಗುಗಳ ಹೂವಿದ್ದರೂ,ಒಳಗೆ ನೋವಿನ ಮಳೆ ಸುರಿಯುತ್ತದೆ. ಕೈಗಳು ಕೈ ಹಿಡಿಯುವ ಕಾಲದಲ್ಲಿ,ಹೃದಯಗಳು ಏಕೆ ದೂರವಾಗಿವೆ? ಮಾತುಗಳು ಸಾವಿರ ಹರಿದರೂ,ಅರ್ಥಗಳು ಮಧ್ಯೆ ಕಣ್ಮರೆಯಾಗಿವೆ. ಗೋಡೆಗಳು ಮನೆಗಳಲ್ಲಿ ಮಾತ್ರವಲ್ಲ,ಮನಸ್ಸಿನೊಳಗೂ ಎತ್ತರವಾಗಿವೆ. ಸ್ವಾರ್ಥದ ನೆರಳು ಬೆಳೆದಂತೆ,ಸಂಬಂಧಗಳ ಬೆಳಕು ಮಂಕಾಗಿದೆ. ಒಬ್ಬರ ನೋವು ಮತ್ತೊಬ್ಬರಿಗೆ,ಕೇವಲ ಸುದ್ದಿಯ ಸಾಲಾಗುತ್ತಿದೆ. ಪ್ರೀತಿಯ ನದಿ ಒಣಗಿದ ಜಾಗದಲ್ಲಿ,ಅಹಂಕಾರದ ಮರಳು ಬೀಸುತ್ತಿದೆ. ಆದರೂ ಎಲ್ಲೋ ಒಂದು ಮೂಲೆದಲ್ಲಿ,ಮಾನವೀಯತೆ ಇನ್ನೂ ಉಸಿರಾಡುತ್ತಿದೆ. ಮನಸು ಮನಸಿಗೆ ಸೇರುವ ದಿನದಲ್ಲಿ,ಈ ಭೀಕರ ಅಂತರ ಕರಗಿಹೋಗುತ್ತದೆ.  ಎನ್.ಜಯಚಂದ್ರನ್ 

ಎನ್.ಜಯಚಂದ್ರನ್ ಅವರ ಕವಿತೆ “ಅಂತರ” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರ ಕವಿತೆ”ಕಂಗಳ ಕಾಟ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು. ಕಂಗಳ ಕಾಟ ಗೆಳತಿ……ಕಥೆಯ ನೂರುಬಯಕೆಗಳ ಬೇಡಲು ಸಾವಿರಅದೇನೊ ಕಾಡಿತು ಸವಿಯ ಸಾರಹೊಳೆವ ನಿನ್ನಯ ಕಂಗಳ ಕಾಟದಲಿಸೋತು ಬೆರಗಿದೆನು, ನಿನ್ನ ದರ್ಶನಕ್ಕೆ,! ಗೆಳತಿ…ವ್ಯಥೆಯು ನೂರುಕಥೆಯ ಕವನ ಬರೆಯಲುಪ್ರಣಯದಾಟ ಪ್ರೀತಿ ಬೆಸೆದುಕಪ್ಪು ಪರದೆಯೊಳಗೆ ಮಿಟುಕಿದಕಂಗಳ ನೋಟವು ನನ್ನ ಸೆಳೆಯಿತು.!! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಅವರ ಕವಿತೆ”ಕಂಗಳ ಕಾಟ” Read Post »

ಕಾವ್ಯಯಾನ

ಅಶ್ಫಾಕ್ ಪೀರಜಾದೆ ಅವರ ಗಜಲ್

ಕಾವ್ಯ ಸಂಗಾತಿ ಅಶ್ಫಾಕ್ ಪೀರಜಾದೆ ಗಜಲ್ ಕಲರವರದ ನಂತರ ಕಲಹ ಮತ್ತೆ ಕಾಡಿದೆಎದೆಯ ಒಳಗಿನ ಗಾಯ ಮತ್ತೆ ಚಿಗುರಿದೆ ನೋವ ತೆರೆತೆರೆಯಾಗಿ ಸಾಗರ ಸೇರುತಿರೆನೀರಿನಲಿ ಮೀನ ಹೆಜ್ಜೆ ಮತ್ತೆ ಮೂಡಿದೆ ತಾವರೆಗಳು ಅಪರಾತ್ರಿ ಬಿಕ್ಕಳಿಸುತಿವೆತಂಗಾಳಿ ನಿಂತು ಬೆಂಕಿ ಮತ್ತೆ ಸುರಿದಿದೆ ಬರೆದುಕೊಂಡ ಬಂದ ಹಣೆಬರ ಇದುತಪ್ಪಿಸಬೇಕೆಂದ್ರೂ ತಪ್ಪದೆ ಮತ್ತೆ ಬರುತಿದೆ ದೂರದಿ ಶಾಂತವಾಗಿ ಕಾಣುವ ಸಮುದ್ರಕುದಿಯುವ ಲಾವಾರಸ ಮತ್ತೆ ತುಂಬಿದೆ ಕಲ್ಲಿಗೆ ಹೃದಯವಲ್ಲ ಕಣ್ಣು ಬಂದರೆ ಸಾಕುಅಪೀಯ ಪಾಡು ಹಾಡಾಗಿ ಮತ್ತೆ ಬಂದಿದೆ ಅಶ್ಫಾಕ್ ಪೀರಜಾದೆ.

ಅಶ್ಫಾಕ್ ಪೀರಜಾದೆ ಅವರ ಗಜಲ್ Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-119 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಸುಮತಿಯ ಒಳತೋಟಿ ಹೇಗೋ ಸಾವರಿಸಿಕೊಂಡು ಕಾರಿನಲ್ಲಿ ಕುಳಿತಿದ್ದ ಮಹಾನುಭಾವರಿಗೆ ವಂದಿಸಿ ಕ್ಷಮೆ ಯಾಚಿಸಿದಳು. ನಂತರ ಹೇಗೋ ಯಾಂತ್ರಿಕವಾಗಿ ರಸ್ತೆಯನ್ನು ದಾಟಿ ಅಲ್ಲಿಂದ ನೇರವಾಗಿ ಅನಾಥಾಶ್ರಮಕ್ಕೆ ಬಂದಳು.  ಅನಾಥಾಶ್ರಮಕ್ಕೆ ಬಂದಾಗ ಮಕ್ಕಳೆಲ್ಲರೂ ಅದಾಗಲೇ ಶಾಲೆಯಿಂದ ಬಂದಿದ್ದರು. ಅವಳ ಜೊತೆಗೆ ಸಹಾಯಕ್ಕಾಗಿ ಹೊಸದಾಗಿ ಬಂದ ಅವಳದೇ ವಯಸ್ಸಿನ ಹುಡುಗಿಯು ಇವಳನ್ನು ಕಂಡೊಡನೆ ಹತ್ತಿರ ಬಂದು…. ಏನಾಯ್ತು?…. ನಿನ್ನ ಮುಖ ಪೂರ್ತಿ ಕಳೆಗುಂದಿದೆ…. ಮಧ್ಯಾಹ್ನದ ಊಟ ಮಾಡಿಲ್ಲವೇ? ಎಂದು ಕೇಳಿದಳು. ಇಲ್ಲವೆಂಬಂತೆ ತಲೆ ಆಡಿಸಿ ತನ್ನ ರೂಮಿನೊಳಗೆ ಹೋದಳು. ಆ ಹುಡುಗಿ ಆಕೆಯನ್ನು ಹಿಂಬಾಲಿಸಿ ಬಂದಳು. ಅವಳ ಹೆಗಲ ಮೇಲೆ ಕೈಯಿಟ್ಟು…. ಏನಾಯ್ತು ಹೇಳು…. ಬಂದಾಗಿನಿಂದ ನಿನ್ನನ್ನು ಗಮನಿಸುತ್ತಿದ್ದೇನೆ….. ಇಷ್ಟೊಂದು ಹತಾಶಳಾಗಿ ನಿನ್ನನ್ನು ಕಂಡಿದ್ದೇ ಇಲ್ಲ…. ಏನಾಯ್ತು…. ಎಂದು ಕೇಳಲು, ಅಲ್ಲಿಯವರೆಗೂ ಅವಳು ತಡೆಹಿಡಿದಿದ್ದ ಮನಸ್ಸಿನ ಭಾರ ಒಮ್ಮೆಲೆ ಹೊರಗೆ ಬರುತ್ತಿರುವಂತೆ ಅವಳಿಗನಿಸಿತು. ಇವಳು ಆ ಹುಡುಗಿಯ ಹೆಗಲ ಮೇಲೆ ತಲೆ ಇಟ್ಟಳು. ಅವಳನ್ನು ಬಿಗಿಯಾಗಿ ಅಪ್ಪಿಕೊಂಡಳು. ಆದರೆ ಕಣ್ಣಿನಿಂದ ಒಂದು ಹನಿ ನೀರೂ ಆಚೆ ಬರಲಿಲ್ಲ. ಅಳಬೇಕೆಂದು ಪ್ರಯತ್ನ ಪಟ್ಟರೂ ಅಳು ಗಂಟಲಲ್ಲಿ ಉಳಿದು ಹೋಯಿತು. ಅವಳ ಆ ಸ್ಥಿತಿಯನ್ನು ಗಮನಿಸಿದಾಗ ಪರಿಸ್ಥಿತಿಯು ಗಂಭೀರವಾಗಿದೆ ಎಂಬುದು ಅವಳ ಜೊತೆಗಿದ್ದ ಹುಡುಗಿಗೆ ಅರ್ಥವಾಯಿತು. ಒಂದು ಲೋಟ ನೀರು ತರುವಂತೆ ಮಕ್ಕಳಿಗೆ ಹೇಳಿ ಆ ಹುಡುಗಿಯು ಇವಳನ್ನು ಅಲ್ಲಿದ್ದ ಬೆಂಚಿನ ಮೇಲೆ ಕುಳ್ಳಿರಿಸಿದಳು.  “….ಏನಾಯ್ತು ಹೇಳು”…. ಎಂದಾಗ, ವೈದ್ಯರು ಹೇಳಿದ ಅಷ್ಟೂ ವಿಷಯಗಳನ್ನು ಆ ಹುಡುಗಿಗೆ ತಿಳಿಸಿದಳು. ಆ ಹುಡುಗಿಯು ಕೊಡಗಿನ ನಿವಾಸಿಯಾಗಿದ್ದಳು. ಹಾಸನದಲ್ಲಿ ದಾದಿಯರ ತರಬೇತಿಗೆಂದು ಬಂದವಳಾಗಿದ್ದಳು. ಆ ವರ್ಷದ ಅಡ್ಮಿಶನ್ ಅವಧಿ ಮುಗಿದಿದ್ದ ಕಾರಣ ಸ್ವಲ್ಪ ದಿನ ಅನಾಥಾಶ್ರಮದಲ್ಲಿ ಸಹಾಯಕಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದಳು.‌ ಮುಂದಿನ ವರ್ಷದ ನರ್ಸಿಂಗ್ ತರಬೇತಿಗೆ ಸೇರಲು ತೀರ್ಮಾನಿಸಿದ್ದಳು. ಈ ಹುಡುಗಿಯು ಬಂದಿದ್ದು ಸುಮತಿಯ ಮಗಳಿಗೆ ಬಹಳ ಸಹಾಯಕವಾಗಿತ್ತು. ಅಡುಗೆಯ ಕೆಲಸವನ್ನು ಚೆನ್ನಾಗಿ ಬಲ್ಲವಳಾಗಿದ್ದ ಅವಳು ರುಚಿಕರವಾದ ಅಡುಗೆಯನ್ನು ಮಾಡಿ ಸುಮತಿಯ ಮಗಳಿಗೂ ಅನಾಥಾಶ್ರಮದ ಮಕ್ಕಳಿಗೂ ಉಣ ಬಡಿಸುತ್ತಿದ್ದಳು. ಬಹಳ ಬೇಗ ಇಬ್ಬರೂ ಸ್ನೇಹಿತೆಯರಾಗಿ ಬಿಟ್ಟಿದ್ದರು. ಅಲ್ಲದೆ ಅನಾಥಾಶ್ರಮದ ಮೇಲೆ ಇರುವ ಕಟ್ಟಡದ ವನಿತಾ ಹಾಸ್ಟಲ್ ನಲ್ಲಿ ಬಾಡಿಗೆಗೆ ವಾಸವಾಗಿದ್ದ ಯುವತಿಯರು ಕೂಡಾ ಸುಮತಿಯ ಮಗಳಿಗೆ ಸ್ನೇಹಿತೆಯರಾಗಿದ್ದರು. ಕೆಲವೊಮ್ಮೆ ಅಪರೂಪಕ್ಕೆ ಹಾಸ್ಟೆಲ್ ಗೆ ಹೋಗಿ ಅವರೊಂದಿಗೆ ಸಮಯ ಕಳೆಯುತ್ತಿದ್ದಳು. ಸುಮತಿಯ ಮಗಳು ಮಧುರವಾಗಿ ಹಾಡುಗಳನ್ನು ಹಾಡುತ್ತಿದ್ದ ಕಾರಣ ಆ ಯುವತಿಯರೆಲ್ಲರಿಗೂ ಬಹಳ ಇಷ್ಟವಾಗಿದ್ದಳು. ಅವಳ ತಾಯಿಯ ಆರೋಗ್ಯ ಸರಿ ಇಲ್ಲದಿರುವುದು ಆ ಯುವತಿಯರಿಗೂ ತಿಳಿದಿತ್ತು. ಹಾಗಾಗಿ ಸುಮತಿಯ ಮಗಳನ್ನು ಕಂಡು ಮಾತನಾಡಿಸಿಕೊಂಡು ಹೋಗಲು ಆ ಯುವತಿಯರು ಅನಾಥಾಶ್ರಮದ ಒಳಗೆ ಬಂದರು.  ಸುಮತಿಯ ಮಗಳ ಸ್ಥಿತಿಯನ್ನು ಕಂಡು ಹಾಗೂ ಅವಳ ಮಾತುಗಳನ್ನು ಆಲಿಸಿ, ಅವಳ ತಾಯಿಗೆ ಗಂಭೀರವಾದ ಸಮಸ್ಯೆ ಇರುವುದನ್ನು ಮನಗಂಡರು. ಸಾಧ್ಯವಾದಷ್ಟು ಸಾಂತ್ವನ ಹೇಳಿ, ಮೇಲಿನ ಹಾಸ್ಟೆಲ್ ಗೆ ಕರೆದುಕೊಂಡು ಹೋದರು. ಅಲ್ಲಿ ಅವಳಿಗೆ ಹಣ್ಣಿನ ಪಾನಕವನ್ನು ಕೊಟ್ಟರು. ಎಲ್ಲರ ಸಾಂತ್ವನದ ಮಾತುಗಳು ಮತ್ತು ಕಾಳಜಿ ಅವಳಿಗೊಂದಿಷ್ಟು ಸಮಾಧಾನವನ್ನು ಕೊಟ್ಟಿತು.  ಅವಳ ಜೊತೆಗಿದ್ದ ಹುಡುಗಿಯಂತೂ ಅವಳ ಬಲಗೈಯಂತೆ ಅವಳಿಗೆ ಸಹಾಯ ಮಾಡುತ್ತಿದ್ದಳು. ಸುಮತಿಗೆ ರಾತ್ರಿ ಊಟಕ್ಕೆ ಬೇಕಾದ ಅಡುಗೆಯನ್ನು ಮಾಡಿ ಸ್ಟೀಲ್ ಡಬ್ಬಿಯಲ್ಲಿ ತುಂಬಿ, ತನ್ನ ಸ್ನೇಹಿತರಿಗೂ ಊಟ ಬಡಿಸಿ ಸ್ವಲ್ಪವಾದರೂ ತಿನ್ನುವಂತೆ ಬಲವಂತ ಮಾಡಿದರು. ಅವಳ ಕಾಳಜಿಯನ್ನು ನೋಡಿ ಊಟ ಸೇರದಿದ್ದರೂ ಒಂದೆರಡು ತುತ್ತು ತಿಂದು, ರಾತ್ರಿ ತಾಯಿಯ ಜೊತೆ ಆಸ್ಪತ್ರೆಯಲ್ಲಿ ಮಲಗಲು ಹೊರಟಳು. ತನಗೆ ಸಹಾಯಕಿ ಹಾಗೂ ಸ್ನೇಹಿತೆ ಅನಾಥಾಶ್ರಮದಲ್ಲಿ ಇರುವುದರಿಂದ ಅವಳಿಗೆ ಮಕ್ಕಳ ಬಗ್ಗೆ ಯಾವುದೇ ಚಿಂತೆ ಇರಲಿಲ್ಲ. ಹಾಗೂ ಅನಾಥಾಶ್ರಮದ ಮೇಲುಸ್ತುವಾರಿ ನೋಡಿಕೊಳ್ಳುವವರು ಅನುಮತಿಯನ್ನು ನೀಡಿದ್ದರಿಂದ ಸ್ವಲ್ಪ ನಿರಾಳವಾಗಿದ್ದಳು. ಅನಾಥಾಶ್ರಮದಿಂದ ಹೊರಟವಳು ಬೇಗ ಬೇಗನೆ ಆಸ್ಪತ್ರೆಯ ಕಡೆ ಹೆಜ್ಜೆ ಹಾಕಿದಳು. ಅಲ್ಲಿ ಬಂದಾಗ ತನ್ನ ದಾರಿಯನ್ನೇ ಕಾಯುತ್ತಿದ್ದ ಸುಮತಿಯನ್ನು ಕಂಡಳು. ಇನ್ನೂ ಹದಿನಾರರ ಹರೆಯದ ಮೂರನೇ ಮಗಳು ಒಬ್ಬಳೇ ಊರಲ್ಲಿರುವುದರಿಂದ ಸುಮತಿ ಚಿಂತಾಕ್ರಾಂತಳಾಗಿದ್ದಳು. ಮಂಗಳೊಂದಿಗೆ ತನ್ನ ಮನದ ದುಗುಡವನ್ನು ಹೇಳಿಕೊಂಡಳು.  ಅಕ್ಕ ಪಕ್ಕದಲ್ಲಿ ಮನೆಗಳಿದ್ದರೂ ಹೆಣ್ಣು ಮಗಳು ಒಬ್ಬಳೇ ಅಲ್ಲಿರುವಳಲ್ಲ ಎನ್ನುವ ಚಿಂತೆ ಸುಮತಿಯ ಮನಸ್ಸನ್ನು ಕೊರೆಯುತ್ತಿತ್ತು. ತಾಯಿಯ ಚಿಂತೆಯನ್ನು ಅರಿತು ಮಗಳು…. ಅಮ್ಮಾ …..ಹಾಗೆಲ್ಲ ಚಿಂತಿಸಬೇಡ…. ಅವಳು ಧೈರ್ಯವಂತಳು….ಅವಳು ಅಲ್ಲಿದ್ದು ಶಾಲೆಗೆ ಹೋದರೆ ತಾನೇ ನಿನ್ನ ತಿಂಗಳಿನ ಸಂಬಳ ನಮಗೆ ಸಿಗುವುದು…. ಆ ಸಂಬಳ ಇರದಿದ್ದರೆ ನಾವು ತುಂಬಾ ಕಷ್ಟ ಪಡಬೇಕಾಗುತ್ತದೆ ಅಲ್ಲವೇ?…. ಎಂದು ಕೇಳಿದಳು. ಮಗಳು ಹೇಳಿದ ಮಾತು ಅಕ್ಷರಶಃ ಸತ್ಯವೆಂದು ಸುಮತಿಗೆ ತಿಳಿದಿದೆ ಆದರೂ ಒಳ ಮನಸ್ಸಿಗೆ ಸಮಾಧಾನವೇ ಇರಲಿಲ್ಲ. ಆಸ್ಪತ್ರೆಯಲ್ಲಿ ಡಾಕ್ಟರ್ ಹಾಗೂ ನರ್ಸ್ ಸುಮತಿಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ತಾಯಿಗೆ ರಾತ್ರಿ ಊಟವನ್ನು ಕೊಟ್ಟು, ನರ್ಸ್ ಕೊಟ್ಟ ಗುಳಿಗೆಗಳನ್ನು ನುಂಗಿಸಿ, ಮಲಗಲು ಹೇಳಿ ಪ್ರೀತಿಯಿಂದ ತಲೆಯನ್ನು ಸವರಿ…. “ಅಮ್ಮಾ …..ನಾನು ಇಲ್ಲಿಯೇ ವಾರ್ಡಿನ ಹೊರಗೆ ಆಸ್ಪತ್ರೆಯ ಉದ್ಯಾನದ ಕಾರಂಜಿಯ ನಡುವೆ ಇರುವ ವಿದ್ಯುತ್ ದೀಪದ ಬೆಳಕಿನಲ್ಲಿ ನನ್ನ ಪಠ್ಯಪುಸ್ತಕಗಳನ್ನು ಓದುತ್ತಿರುತ್ತೇನೆ…. ಇನ್ನೇನು ವಾರ್ಷಿಕ ಪರೀಕ್ಷೆಯು ಹತ್ತಿರ ಬರುತ್ತಿದೆ…. ಎಂದಳು. ಸುಮತಿ ಮಗಳ ಮುಖವನ್ನು ಒಮ್ಮೆ ನೋಡಿದಳು. ನನ್ನ ಮಕ್ಕಳಿಗೆ ಈ ಚಿಕ್ಕ ವಯಸ್ಸಿಗೆ ಎಷ್ಟೊಂದು ಜವಾಬ್ದಾರಿಗಳು? ನನ್ನಂತಹಾ ನತದೃಷ್ಟಳ ಹೊಟ್ಟೆಯಲ್ಲಿ ಏಕೆ ಇಂತಹಾ ಒಳ್ಳೆಯ ಮಕ್ಕಳನ್ನು ಹುಟ್ಟಿಸಿದೆ ದೇವರೇ. ನನ್ನ ಮಕ್ಕಳು ಜೀವನದ ಪ್ರತಿಯೊಂದು ಹಂತದಲ್ಲೂ ಒಂದಲ್ಲ ಒಂದು ರೀತಿಯ ಕಷ್ಟಕರ ಸವಾಲುಗಳನ್ನು ಎದುರಿಸುತ್ತಾ ಬದುಕುತ್ತಿದ್ದಾರೆ. ಇದಕ್ಕೆಲ್ಲಾ ನಾನೇ ಕಾರಣ ಎಂದು ಸುಮತಿ ವ್ಯಥೆ ಪಟ್ಟಳು. 

Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಕವಿತೆ “ಒಮ್ಮೆಬರುವೆಯಾ?”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಒಮ್ಮೆಬರುವೆಯಾ?” ನನ್ನ ಪ್ರಾಣದ ಇನಿಯಎಲ್ಲಿರುವೆ  ಬರುವೆಯಾಬಿಳಿ ಗೋಡೆಯ ನಡುವೆ ನಾನುನೆರಳಾಗಿ ಕರಗುತ್ತಿರುವೆ ಒಮ್ಮೆ ನನ್ನ ಕಣ್ಣೊಳಗೆಚಂದ್ರ ಬೆಳಕು ಹುಡುಕಿದವನು ನೀನುಇಂದು ಒಣಗಿದ ಹೂವಿನಂತೆನನ್ನನ್ನು ದಾರಿಯಂಚೆ ಬಿಟ್ಟೆ ಕೂದಲು ಉದುರಿದ ರಾತ್ರಿಕನ್ನಡಿಯೊಳಗೆ ನಿಂತಿದ್ದು ನಾನು ಅಲ್ಲಬೆಂಕಿಗೆ ಬಿದ್ದ ಕನಸೊಂದುನಿಧಾನವಾಗಿ ಬೂದಿಯಾಗುತ್ತಿತ್ತು ಔಷಧದ ವಾಸನೆಯ ನಡುವೆನನ್ನ ಉಸಿರು ಮುಳ್ಳಿನ ಹಾಸಿಗೆಸಾವಿಗಿಂತ ಹೆಚ್ಚು ಕಾಡಿದ್ದುನೀ ಮೌನವಾಗಿ ದೂರಾದ ಹೆಜ್ಜೆ ನನ್ನ ಎದೆಯೊಳಗೆ ಈಗರಕ್ತವಲ್ಲ ವಿರಹ ಹರಿಯುತ್ತಿದೆಕಣ್ಣೀರಲ್ಲ ಇದುಒಡೆದ ಹೃದಯ ಕರಗಿದ ಶಬ್ದ ಒಮ್ಮೆ ಅಪ್ಸರೆ ಎಂದ ತುಟಿಗಳುಇಂದು ನನ್ನ ಹೆಸರನ್ನೇ ಮರೆತಿವೆನಾನು ಒಣ ಮರದ ನೆರಳುನೀ ಬೇಸತ್ತ ಹಕ್ಕಿಯ ಹಾರಾಟ ಕಿಟಕಿಯಾಚೆ ಚಂದ್ರ ಸುಡುತ್ತಾನೆಒಳಗೇ ನೆನಪುಗಳು ಹೊತ್ತಿ ಉರಿಯುತ್ತವೆನೀ ಬಾರದ ಪ್ರತಿರಾತ್ರಿನನ್ನ ಜೀವ ಸ್ವಲ್ಪ ಸ್ವಲ್ಪ ಸಾಯುತ್ತದೆ ನನ್ನ ಪ್ರಾಣದ ಇನಿಯಒಮ್ಮೆ ಬರುವೆಯಾಕೊನೆಯ ಉಸಿರ ತುದಿಯಲ್ಲಿನಿನ್ನ ಹೆಸರೇ ಇನ್ನೂ ತೂಗುತ್ತಿದೆ ಡಾ. ಹೆಚ್. ನಟರಾಜ್ ಆರ್ಯ.

ಡಾ. ಹೆಚ್. ನಟರಾಜ್ ಆರ್ಯ ಕವಿತೆ “ಒಮ್ಮೆಬರುವೆಯಾ?” Read Post »

ಇತರೆ, ರಂಗಭೂಮಿ

“ಪೌರಾಣಿಕ ನಾಟಕ ನಿರ್ದೇಶಕರು ನಟ ಕೇಶವ ಜಿ. ಜಿ. ಗರೀಘಟ್ಟ.”‌ ಗೊರೂರು ಅನಂತರಾಜು

ರಂಗ ಸಂಗಾತಿ ಗೊರೂರು ಅನಂತರಾಜು “ಪೌರಾಣಿಕ ನಾಟಕ ನಿರ್ದೇಶಕರು ನಟ ಕೇಶವ ಜಿ. ಜಿ. ಗರೀಘಟ್ಟ.”‌ ಮೊನ್ನೆ ಭಾನುವಾರ ಅರಕಲಗೂಡಿನಲ್ಲಿ ಶ್ರೀ ವೇಣುಗೋಪಾಲ ಕೃಪಾಪೋಷಿತ ನಾಟಕ ಮಂಡಳಿ ಕಲಾವಿದರು ಹಾರ್ಮೋನಿಯಂ ಮಾಸ್ಟರ್ ಜಿ..ಜಿ.. ಕೇಶವ ಗರಿಘಟ್ಟ ಇವರ ನಿರ್ದೇಶನದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶಿಸಿದರು.  ನಾಟಕ ವೀಕ್ಷಿಸಲು ಹೋಗಿದ್ದ ನನಗೆ ಸೂತ್ರಧಾರಿ ಪಾತ್ರಧಾರಿ ಹಾಡಿದ ರಂಗಗೀತೆ ಅದೇ ಪ್ರಥಮ ಬಾರಿ ಕೇಳಿ ಬಹಳ ಇಷ್ಟವಾಯಿತು. ಪ್ರೇಕ್ಷಕರು ಕೂಡ ಸೂತ್ರದಾರಿ ಹಾಡಿUÉ ಚಪ್ಪಾಳೆ ಬಾರಿಸಿ ಮೆಚ್ಚುಗೆ  ವ್ಯಕ್ತಪಡಿಸಿದರು. ಈ ಗೀತೆಯಲ್ಲಿ ಏನೆಲ್ಲಾ ಕನ್ನಡ ಕಲಾ ಸಾರಸ್ವತ ಲೋಕವನ್ನು ತೆರೆದಿಟ್ಟಿದ್ದಾರೆ  ಕವಿ ಎಂದರೆ..  ಕನ್ನಡ ನಾಡಿನ ಕಲೆ ಮಕ್ಕಳೇ ಅಳಿಯದೆ ಉಳಿಯಲಿ ನಮ್ಮೀ ಕಲೆಎ¯Éèಲ್ಲೂ ಬೆಳಗಲಿ ನಮ್ಮೀಕಲೆ ಪಂಪ ರನ್ನ ಜನ್ಮ ಪೊನ್ನರಾಮಾನುಜ ತೀರ್ಥಂಕರ ಬೇಲೂರುಹಳೇಬೀಡು ಕಲೆಗಳ ತವರೂರುಸುಬ್ಬಯ್ಯ  ನಾಯ್ಡುವಿನ ನಟನಾ ಕಲೆ ನಾಟಕ ರತ್ನ ಗುಬ್ಬಿ ವೀರಣ್ಣ ನಟಸಾರ್ವಭೌಮ ರಾಜಕುಮಾರ ಅಭಿನವ  ಭಾರ್ಗವ ಶಿರೋಮಣಿ ಮಲ್ಲಪ್ಪ  ನಟನಾ ಕಲೆ..   ಶ್ರೀ ಕೇಶವರವರು ಸಾಕ್ಷರತಾ ಆಂದೋಲನದಲ್ಲಿ ಕೆಲಸ ಮಾಡಿದ ವಿಚಾರ ಕೂಡ ಶಿಕ್ಷಕರು ಪಿ. ನಂದಕುಮಾರರಿಂದ ತಿಳಿಯಿತು. 1997ರ ಕಾಲಘಟ್ಟದಲ್ಲಿ ನಾನು (ಗೊರೂರು ಅನಂತರಾಜು) ಸಾಕ್ಷರತಾ ಆಂದೋಲನದಲ್ಲಿ ತೊಡಗಿಸಿಕೊಂಡು ಅಕ್ಷರ ಅಭಿಷೇಕ ನವ ಸಾಕ್ಷರರ ಪಠ್ಯ ಪುಸ್ತಕ ರಚನಾ ಸಮಿತಿಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೆ.. ಈ ಒಂದು ಆಸಕ್ತಿಯಲ್ಲಿ ಕೇಶವರವರಿಗೆ ತಮ್ಮ ಒಂದು ಕಲಾ ಪರಿಚಯವನ್ನು ಬರೆಯಲು ಬಯಸಿ ಸಂಪರ್ಕಿಸಿದೆ.. ಅವರು ಹೇಳಿದರು. ಅನಂತರಾಜ್ ಸಾರ್,, ನಾನು ನಿಮ್ಮನ್ನು ಬಲ್ಲೆನು. ಆದರೆ ನನ್ನ ಪರಿಚಯ ನಿಮಗಿಲ್ಲ ಅಷ್ಟೇ..ನಾನು ಕೇಶವ ಜಿ. ಜಿ.  ಹುಟ್ಟಿದ ಊರು ಗರೀಘಟ್ಟ.ಇದು ಅರಕಲಗೋಡು ತಾಲೂಕಿಗೆ  ಸೇರಿದೆ.  ಹಾಸನ ಜಿಲ್ಲೆಯಲ್ಲಿ ಬರುತ್ತದೆ. ನನ್ನ    ಜನ್ಮ ದಿನಾಂಕ 04.06.1979. ನಾನು    ಪ್ರಾಥಮಿಕ ಶಿಕ್ಷಣವನ್ನುಗರೀಘಟ್ಟದಲ್ಲಿ  ಹಾಗೂ ಹೊನ್ನವಳ್ಳಿಯ ಹೇಮಾವತಿ ಪ್ರೌಢಶಾಲೆಯಲ್ಲಿ ಹೈಸ್ಕೂಲು ವ್ಯಾಸಂಗ ªÀÄÄV¹ ಪಿ.ಯು.ಸಿ ಮತ್ತು  ಬಿ.ಎ. ಪದವಿ ಸರ್ಕಾರಿ ಕಲಾ ಕಾಲೇಜು ಹಾಸನ ಇಲ್ಲಿ ಮಾಡಿದೆ. ವಿದ್ಯಾಭ್ಯಾಸದ ಜೊತೆಯಲ್ಲಿಯೇ ಸಮಾಜ ಸೇವೆಯಲ್ಲಿ ಪಾಲ್ಗೊಳ್ಳುವಿಕೆ, ರಾಜ್ಯ ಸರ್ಕಾರದ ಸಾಕ್ಷರತಾ ಆಂದೋಲನದಲ್ಲಿ ಸ್ವಯಂಸೇವಕನಾಗಿ ಸೇವೆ.   2005-06ನೇ ಸಾಲಿನಲ್ಲಿ ಪ್ರಾರಂಭವಾದ ಸಾಕ್ಷರತಾ ಮುಂದುವರಿಕೆ ಶಿಕ್ಷಣ ಕಾರ್ಯಕ್ರಮದಲ್ಲಿ ಕ್ರಮವಾಗಿ ಪ್ರೇರಕ ಹಾಗೂ ನೋಡಲ್ ಪ್ರೇರಕ, ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ  ಸಾಕ್ಷರತಾ ಕಲಾವಿದನಾಗಿ ಸೇವೆ, ಅರಿವು ಕಾರ್ಯಕ್ರಮದಲ್ಲಿ ಬೀದಿ ನಾಟಕ ಹಾಗೂ ಕಲಾಜಾಥಾ ಕಾರ್ಯಕ್ರಮದ ನಿರ್ದೇಶಕನಾಗಿ ಸೇವೆ ಸಲ್ಲಿಕೆ, ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ತ್ರೀಶಕ್ತಿ ಗುಂಪುಗಳ ಸದಸ್ಯರಿಗೆ ತರಬೇತಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಕೆ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ವಿವಿದ ಕಾರ್ಯಕ್ರಮದಲ್ಲಿ ನಿರೂಪಕನಾಗಿ 2014ರಲ್ಲಿ ರಂಗಭೂಮಿ ಕ್ಷೇತ್ರಕ್ಕೆ ಪ್ರವೇಶ ಮಾಡಿದೆ.  ಅರಕಲಗೂಡು ಪಟ್ಟಣದಲ್ಲಿ ತಾಲ್ಲೂಕಿನ ವಿವಿಧ ವಿಕಲಚೇತನರನ್ನೊಳಗೊಂಡ ವಿಕಲಚೇತನರ ಸಂಘವನ್ನು ರಚಿಸಿ ವಿಕಲಚೇತನರಿಂದಲೇ ದಾನಶೂರಕರ್ಣ  ನಾಟಕ ಪ್ರದರ್ಶನದಲ್ಲಿ ಕರ್ಣನ ಪಾತ್ರದ ಮೂಲಕ ರಂಗಭೂಮಿಗೆ ಪ್ರವೇಶ ಮಾಡಿದೆ.  ಶ್ರೀಕೃಷ್ಣ, ಅರ್ಜುನ, ಧರ್ಮರಾಯ, ಸತ್ಯವ್ರತ, ಬೀಷ್ಮ, ದ್ರೋಣ, ದೃತಾರಾಷ್ಟ್ರ, ನಾರದ, ವಿಧುರ, ಭರತ, ವಿಭಿಷಣ, ವಸಿಷ್ಠ ಮುಂತಾದ ಪಾತ್ರಗಳಲ್ಲಿ ಅಭಿನಯಿಸಿದೆ. ಗುರುಗಳ ಕೈ ನೋಡಿಕೊಂಡು ಹಾರ್ಮೋನಿಯಂ ಕಲಿಕೆ ಪ್ರಾರಂಭಿಸಿದೆ. ಯಾವ ಗುರುಗಳ ಬಳಿಯೂ ಅಭ್ಯಾಸ ಮಾಡದೆ ತರಬೇತಿಯೂ ಇಲ್ಲದೇ ಸ್ವತಃ ಹಾರ್ಮೋನಿಯಂ ನುಡಿಸುವುದನ್ನು ಅಭ್ಯಾಸ ಮಾಡಿಕೊಂಡು ಮೊದಲಬಾರಿಗೆ 2023ರಲ್ಲಿ ರಾಜ ವಿಕ್ರಮ ನಾಟಕದ ನಿರ್ದೇಶನ ಮಾಡಿ  ಆ ದಿನದಿಂದ ಈವರೆಗೆ ರಾಜಾವಿಕ್ರಮ, ರಾಜ ಸತ್ಯವ್ರತ, ದಾನಶೂರಕರ್ಣ, ಕುರುಕ್ಷೇತ್ರ ಹೀಗೆ 12 ನಾಟಕಗಳ ನಿರ್ದೇಶನ ಮಾಡಿರುವೆ. ಹರಿಕಥೆ ಕಲಾವಿದನಾಗಿಯೂ ಸೇವೆ ಸಲ್ಲಿಸುತ್ತಿರುವೆ .  ನನ್ನ ಈ ಸೇವೆ ಗಮನಿಸಿ ಕೆಲವು ಸಂಘ ಸಂಸ್ಥೆಗಳು ರಂಗರತ್ನ, ಹೊಯ್ಸಳರತ್ನ, ಕಲಾಬೀಷ್ಮ, ರಂಗ ಕುಸುಮ, ರಂಗರತ್ನಾಕರ  ಹೀಗೆ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ. ಇದುವರೆಗೂ ಸರಿಸುಮಾರು 400ಕ್ಕೂ ಹೆಚ್ಚು ಸ್ವ ಸಹಾಯ ಸಂಘಗಳನ್ನು ರಚನೆ ಮಾಡಿ ಮಾಹಿತಿ ನೀಡಿ  ಮಾರ್ಗದರ್ಶನ ಮಾಡಿರುತ್ತೇನೆ, ಗ್ರಾಮೀಣ ಭಾಗದ ವಿಕಲಚೇತನರಿಗೆ ಗ್ರಾಮ ಮಟ್ಟದಲ್ಲಿ ಸರ್ಕಾರಿ ಸವಲತ್ತುಗಳ ಮಾಹಿತಿ ನೀಡುವ ಸಂಬಂಧ ಗ್ರಾಮ ಪಂಚಾಯಿತಿ ಮಟ್ಟದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿರುವೆ. ಕಲೆ ಮತ್ತು ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಕಲಾ ಮತ್ತು ಸಾಂಸ್ಕೃತಿಕ ಸಂಘ ಸ್ಥಾಪಿಸಿ ಅ ಮೂಲಕ  ರಂಗ ಕಲೆಯನ್ನು ಉಳಿಸುವ ಪೋಷಿಸುವ ಸಲುವಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಸಂಘಟಿಸಿರುವೆ.   ಇವರ ಸಂಪರ್ಕ ವಿಳಾಸ:ಕೇಶವ ಜಿ. ಜಿ. ರಂಗನಿರ್ದೇಶಕರು,  ಗರೀಘಟ್ಟ, ಕಸಬಾ ಹೋಬಳಿ, ಅರಕಲಗೂಡು ತಾ. ಹಾಸನ ಜಿಲ್ಲೆ. ಮೊ  ಸಂಖ್ಯೆ 9880183485 ಗೊರೂರು ಅನಂತರಾಜು

“ಪೌರಾಣಿಕ ನಾಟಕ ನಿರ್ದೇಶಕರು ನಟ ಕೇಶವ ಜಿ. ಜಿ. ಗರೀಘಟ್ಟ.”‌ ಗೊರೂರು ಅನಂತರಾಜು Read Post »

ಇತರೆ, ಪ್ರಬಂಧ

ಚಹಾಯಣ…ದ ರಾಮಾಯಣ(ಕಿರು ಪ್ರಬಂಧ) ಡಾ.ವೈ ಎಂ.ಯಾಕೊಳ್ಳಿ

ಪ್ರಬಂಧ ಸಂಗಾತಿ ಡಾ.ವೈ ಎಂ.ಯಾಕೊಳ್ಳಿ ಚಹಾಯಣ…ದ ರಾಮಾಯಣ ಇಂದು ೨೦/೦೫/೨೦೨೬ಚಹಾದ ದಿನವಂತೆ..ಚಹಾ ಇಲ್ಲದೆ ಸೂರ್ಯೋದಯವೇ ಆಗದ ನಮಗೆ ಅಂದರೆ ಉತ್ತರ ಕರ್ನಾಟಕದ ಮಂದಿಗೆ ಚಹಾಕ್ಕೊಂದು ದಿನವಿದೆಯಂದರೆ ನಗೆ ಬರುತ್ತದೆ.ಹಾಗೆ ನೋಡಿದರೆ ನಮ್ಮ ಜನಕ್ಕೆ ಯಾಕೊ ಕಾಫಿ ಕಂಡರೆ ಅಷ್ಟಕ್ಕಷ್ಟೇ. ನಮ್ಮಪ್ರಕಾರ ಎಲ್ಲದಕ್ಕೂ ದಿವ್ಯೌಷಧಿ ಚಹಾನೆ.ಅಂತೆಯೆ ಅದನ್ನು ದೇವಲೋಕದ ಅಮೃತ ಎಂದು‌ ಕರೆಯುವದೂ ಇದೆ.ಮನೆಗಳಿಗೆ ಬಂದಾಗ ಅತಿಥಿಗಳಿಗೆ ಕೊಡಮಾಡುವ ಕನಿಷ್ಟ ಪಕ್ಷದ ಆತಿಣಥ್ಯ ಎಂದರೆ ಚಹಾನೇ ಆಗಿದೆ.”ಬರ್ರಿ ಬರ್ರಿ ಅರ್ಧ ಕಪ್ ಚಹಾ ಕುಡದ ಹೋಗರಿ” ಎಂದು ನಾವು ಅತಿಥಿಗಳಿಗೆ ಒತ್ತಾಯ ಮಾಡುವದೂ ಇದೆ.ಬಂದ ಅತಿಥಿಗಳಿಗೆ ನಾವು ಏನು‌ಕೊಡದಿದ್ದರೂ ಪರ್ವಾ ಇಲ್ಲ ಒಂದು ಕಪ್ ಚಹಾನಾದರೂ ಕೊಡಲೇ ಬೇಕು.ಒಂದು ವೇಳೆ ಚಹಾನೂ ಆಫರ್ ಮಾಡದವರನ್ನು ಕಂಡು ” ಏನ್ ಜಿಪುಣರೆಪಾ,ಅವರ ಮುಖಕ್ಕ ಅರ್ಧ ಕಪ್  ಚಹಾ ಹುಟ್ಟಲಿಲ್ಲ” ಎಂದು ಬೈಯುವವರೂ ಇದ್ದಾರೆ. ಚಹಾ ಅಂಗಡಿಗಳೆಂದು ನಾವು ಹೋಟೆಲ್ ನ್ನು ಹೆಸರಿಸುತ್ತೇವೆ.ಅಲ್ಲಿ ಏನೆಲ್ಲ ಖಾದ್ಯಗಳನ್ನು‌ ಮಾಡಬಹುದಾದರೂ ಅವುಗಳ ಸೇವನೆಯ ನಂತರ ಅರ್ಧ ಕಪ್ ಚಹಾ ಸೇವನೆ ಇರಲೇಬೇಕು.ಇರದಿದ್ದರೆ ಏನೇ ತಿಂದರೂ ಅದು ಅಪೂರ್ಣ.ಅದು ಒಂದುರೀತಿಯಲ್ಲಿ ಕಾರ್ಯಕ್ರಮಗಳಲ್ಲಿ ವಂದನಾರ್ಪಣೆ ಇದ್ದಂತೆ.ಎಂಥ ದೆ ಭಾಷಣ ನಡೆದರೂ ಕಡೆಗೆ ಒಂದು ಸಾಲಿನದಾದರೂ ವಂದನಾರ್ಪಣೆ ಯಾಗದಿದ್ದರೆ ಅದೆಂತಹ ಕಾರ್ಯಕ್ರಮ ಎನ್ನುವ ಹಾಗೆ ಏನೆ ಲ್ಲ ತಿಂಡಿ ತಿಂದರೂ ಚಹಾ ಇರದಿದ್ದರೆ ಅರ್ಧ ಆದಂತೆಯೆ ಎಂದು ತಿಳಿವಳಿಕೆ ಸರ್ವೇ ಸಾಮಾನ್ಯ.ನಮ್ಮಲ್ಲಿ ಊರುಗಳ ಸಿರಿತನವೂ ಈ ಹೊಟೆಲ್ ಗಳ ಆಧಾರದ ಮೇಲೆಯೆ ನಿರ್ಣಯವಾಗುವದುಂಟು.ಒಂದು ಚಹಾದಂಗಡಿಯೂ ಇರದೆ‌ ಇದ್ದರೆ” ಅದೆಂಥ ಹಿಂದುಳಿದ ಊರು ” ಎಂದು ಅಸಹ್ಯ ಮಾಡುವವರೂ ಇದ್ದಾರೆ. ಎಂಥ ಹಿರಿತನಗಳೂ  ನ್ಯಾಯನಿರ್ಣಯಗಳೂ ಚಹಾ ಸೇವನೆ ಯಿಂದಲೇ  ಆರಂಭ ಮತ್ತು‌ ಮುಕ್ತಾಯ ಎಂಬುದು ಉತ್ತರಕರ್ನಾಟದ ಒಂದು ನಿಯಮವೇ ಆಗಿದೆ. ಎಲ್ಲ ಸಮಾರಂಭಗಳ ಆರಂಭಕ್ಕೆ ಚಹಾ ಕೊಟ್ಟೇ ಕಾರ್ಯಕ್ರಮ ಆರಂಭಿಸೋದು ನಮ್ಮ‌ ಪದ್ಧತಿ. ಪೂರ್ತಿ ಚಹಾ ಕುಡಿಯುವವರಿಗಿಂತ ಅರ್ಧ ಚಹಾ ಕುಡಿಯುವವರೆ ಜಾಸ್ತಿ.ಗೆಳೆಯರು ಸೇರಿಕೊಂಡು ಅರ್ಧ ತಾಸಿಗೊಂದು ಬೈಟೂ ಚಹಾ ಕುಡಿಯುತ್ತ ಇಡಿ ದಿನವನ್ನೆಲ್ಲ ಊರ ಚಹಾದಂಗಡಿಗಳ ಕಟ್ಟೆಯ ಲ್ಲಿಯೇ ಕಳೆಯುವ ಯಜಮಾನರನ್ನು ನಾವು ಕಾಣುತ್ತೇವೆ.ಇಂಥ ಜಿಗರಿ ದೋಸ್ತರನ್ನು ಬೈಟೂ ದೋಸ್ತರು ಎಂತಲೂ‌ ಕರೆಯಬಹುದು.  ನಮ್ಮ ಹಳ್ಳಿಗಳಲ್ಲಿ ಕೆಲವರಂತೂ ಎಷ್ಟು ಚಹಾದಂಗಡಿಯ ಚಹಾದ ಮೇಲೆ ಜೀವ ಇಟ್ಟಿರುತ್ತಾರೆಂದರೆ ಎದ್ದೊಡನೆ ಅವರ ಮುಂಜಾನೆಗಳಾಗುವದೆ ಹೊಟೆಕಿನ ಮುಂದೆ.ಅಲ್ಲಿ ಬಂದು‌ಮುಖಮಾರ್ಜನ ಕಾರ್ಯಕ್ರಮ ಮುಗಿಸಿ ಒಂದಾದ‌ ಮೇಲೊಂದರಂತೆ  ಚಹಾ ಕುಡಿದು ಅಂಗಡಿಯವನ ಖಾತೆಗೇರಿಸಿ ಮುಂದಿನ ಕಾರ್ಯಕ್ಕೆ ತೆರಳೂವ ಭೂಪರಿಗೇನೂ ಕಡಿಮೆಯಿಲ್ಲ. ಹಿರಿಯ ಪ್ರಭಂಧಕಾರರಾದ ವಿರೇಂದ್ರ ಶಿಂಪಿ ಯವರು ಬರೆದ ನಮ್ಮೂ ರ ಚಹಾ ಹೊಟೆಲು ಎಂಬ ಪ್ರಬಂಧದಲ್ಲಿ ಈ ಚಹಾ ಹೊಟೆಲುಗಳನ್ನು “ಹಳ್ಳಿಯ ಪಾರ್ಲಿಮೆಂಟ್ ” “ವಿಧಾನ ಸೌಧ”ಗಳೆಂದು ಕರೆಯುತ್ತಾರೆ.ಏಕೆಂದರೆ ಊರಿನ ಎಲ್ಲ ಸುದ್ದಿಗಳೂ ಅಲ್ಲಿ ಬಂದು ಹೋಗುವದರಿಂದ ಅವು ವಾರ್ತಾ ಇಲಾಖೆಗಳಂತೆಯೂ ಕೆಲಸ ಮಾಡುವದುಂಟು. ನಿಮಗೆ ಊರಿನ ಯಾವ ಮೂಲೆಯ ಎಂಥದೆ ತಾಜಾ ಸುದ್ದಿ ಬೇಕಾದರೂ ನೀವು ಚಹಾದಂಗಡಿಯ ಒಂದು‌ ಮೂಲೆ ಹಿಡಿದು ಮೌನ ಕುಳಿತರೆ ಸಾಕು ನಿಮಗೆ ಎಲ್ಲವೂ ತಿಳಿಯುತ್ತಾ ಹೋಗುತ್ತದೆ. ಈಚೆಗಂತೂ ಸಕ್ಕರೆ ಖಾಯಿಲೆ ಭಾರತದ ಬಹು ದೊಡ್ಡ ಖಾಯಿಲೆಯಾದ ಮೇಲೆ ಸಕ್ಜರೆ ಹಾಕಿದ ಚಹಾ  ಕುಡಿಯುವರ ಸಂಖ್ಯೆ ಕಡಿಮೆಯಾಗಿ ಊರಿಗೂರಿಗೆ ಗಲ್ಲಿ ಗಲ್ಲಿಗಳಲ್ಲಿ ಬೆಲ್ಲದ ಚಹಾ ಎಂಬ ಹೆಸರಿನ ಗುಲ್ಪಿ ಚಹಾದಂಗಡಿಗಳೂ,ಕೇಸರ ಚಹಾದಂಗಡಿಗಳೂ ತಲೆಯೆತ್ತಿರುವದನ್ನು ಕಾಣುತ್ತವೆ. ಇನ್ನು ಸಕ್ಕರೆ ಖಾಯಿಲೆ ಗೆ ತುತ್ತಾದವರು ಸುಗರ್ ಲೆಸ್ ಚಹಾ ಸೇವನೆ ಮಾಡಿಯಾದರೂ ಚಹಾದ ಚಟ ತೀರಿಸಿಕೊಳ್ಳುತ್ತಾರೆ. ಈಚಿಚೆಗೆ ಅವರದೆ ಸಂಖ್ಯೆ ಜಾಸ್ತಿಯಾದುದರಿಂದ ಸುಗರ್ ಲೆಸ್ಸಾ ಎಂದು ಅಂಗಡಿಯವರೆ ಕೇಳಿ ಖಂಡಿತ ಮಾಡಿಕೊಳ್ಳುವದುಂಟು. ಸರಕಾರಿ ಕಛೇರಿಗಳಲ್ಲಿ ಚಹಾದ ವಿರಾಮ ಎಂದು ಒಂದು ಬಗೆಯ ವಿರಾಮ ಕಾಲವೇ ನಿರ್ಣಯವಾಗಿರುತ್ತದೆ. ಬೆಂಗಳೂರಿನಂತಹ ದೊಡ್ಡ ನಗರಗಳಿರಲಿ, ಚಿಕ್ಕ ನಗರಗಳಿರಲಿ ಸರಕಾರಿ ಇಲಾಖೆಯ ಅಧಿಕಾರಿಗಳು ಖಾಯಂ ಮ್ಮಾಗಿ ಅಂತರ್ಧಾನ ಆಗಿರುವದು..ಕೇಳಿದರೆ ಚಹಾಕ್ಕೆ ಹೋಗಿದ್ದಾರೆ ಎಂದು ಹೇಳುವದು ಸಾನಾನ್ಯವಾಗಿದೆ.ಕಛೇರಿಯ ನಿರ್ಣಯವಾಗದ ಕೆಲವು ಕೇಸಗಳ ಪರೊಹಾರೋಪಾಯವನ್ನು ಚಹಾದಂಗಡಿಯ ಟೇಬಲ್ ಬಳಿಯೆ ಕೇಸ್ ವರ್ಕರ್ ಗಳು ಮುಗಿಸಿಕೊಳ್ಳು ವದೂ ಅನುಭವಸ್ತರ ಎಷ್ಟು ಬರೆದರೂ ಈ ಚಹಾಯಣ ಮುಗಿಯಲಾರದು.ಎಲ್ಲ ಚಹಾಪ್ರಿಯರ ಅನುಭವಗಳು ಒಬ್ಬರಿಗಿಂತ ಒಬ್ಬರವು ಭಿನ್ನ‌ಮತ್ತು ಶ್ರೀ ಮಂತ ಆಗಿರುವದು ಕಾಣಬರುತ್ತದೆ. ಚಹಾಯಣವಂತೂ ರಾಮಾಯಣ ಕ್ಕಿಂತ ದೀರ್ಘವಾಗುತ್ತದೆ. ಚಹಾ ಕುಡಿಯುವದನ್ನು ಒಂದು ಬಗೆಯ habit ಎನ್ನುವ ಇಂಗ್ಲಿಷರ ಅದು ತೀರಾ ಕನಿಷ್ಟತಮ ಚಟ ಎನ್ನುತ್ತಾರೆ. ಅಂದರೆ ಯಾವ ಚಟವಿ ರದಿದ್ದರೂ ಚಹಾ ಚಟವಾದರೂ ಇದ್ದೇ ಇರುತ್ತದೆ ಎನ್ನುದದಕ್ಕೆ ಚಮತ್ಕಾರಿಕವಾಗಿ ಹೇಳುವದಿದೆ .habit ಪದದಲ್ಲಿ h ಹೋದರೆ a bit (ಸ್ವಲ್ಪ) ಉಳಿಯುವದಂತೆ .a ಹೋದರೆ bit (ತೀರ ಸ್ವಲ್ಪ) ಉಳಿಯುವದಂತೆ.b ಹೋದರೆ  it (ಇದು) ಉಳಿಯುತ್ತದೆ.I ಹೋದ‌ಮೇಲೆ t ( ಚಹಾ) ಉಳಿದೆ ಉಳಿಯುತ್ತದೆ ಎನ್ನುತ್ತಾರೆ. ಕಡೆಗೆ t ಕುಡಿಯುವ ಚಟವಂತೂ ಕನಿಷ್ಟ ಇದ್ದೇ ಇರುತ್ತದೆ ಎಂಬ ಭಾವನೆ ಅಲ್ಲಿ ಹೊರಹೊಮ್ಮುತ್ತದೆ. ಚಹಾ ಬೇರೆ ದೇಶದಿಂದ ಬಂದ ಪೇಯ ಎಂದು ವಿಜ್ಞಾನಿಗಳು ಹೇಳುತ್ತಾರೆ.ಆದರೆ ಅದು ಭಾರತೀಯರ ಅತ್ಯಂತ ಪ್ರಿಯ ಪೇಯವಾಗಿರುವದಂತೂ ಸತ್ಯ.ತಲೆ ನೋಯುವವರಿಗೆ, ಜ್ವರ ಬಂದ ರೋಗಿಗಳಿಗೆ ಇದು ದಿವ್ಯೌಷಧಿ. ದಿನಕ್ಕೆ ಎಷ್ಟು ಸಲ ಚಹಾ ಕುಡಿಯಬೇಕು ವೈದ್ಯರು ಏನೆಲ್ಲ ನಿಯಮ ಹೇಳಿದರೂ ನಾಲ್ಕಾರು ಸಲ ಅರ್ಧ ಕಪ್ ಚಹಾ ಸೇವನೆ ನಮ್ಮ ರೂಢಿಯಾಗಿದೆ ಎನ್ನುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಅಂತೂ ಚಹಾ ಇಲ್ಲದೆ ಬದುಕುವ ಭಾರತಿಯರ ಸಂಖ್ಯೆ ತೀರಾ ಕಡಿಮೆ..ಚಹಾ ಕುಡಿಯುವ ಚಟ ಇಲ್ಲದವರು ಒಂದು ರೀತಿಯಲ್ಲಿ ನಮಗೆ ದೇವತೆಗಳ ಹಾಗೆ ಕಾಣಿಸುವದು ಸುಳ್ಳಲ್ಲ.ಎಲ್ಲರಿಗೂ ಚಹಾ ದಿನದ ಶುಭಾಶಯಗಳು ಇಂದು ೨೦/೦೫/೨೦೨೬ಚಹಾದ ದಿನವಂತೆ..ಚಹಾ ಇಲ್ಲದೆ ಸೂರ್ಯೋದಯವೇ ಆಗದ ನಮಗೆ ಅಂದರೆ ಉತ್ತರ ಕರ್ನಾಟಕದ ಮಂದಿಗೆ ಚಹಾಕ್ಕೊಂದು ದಿನವಿದೆಯಂದರೆ ನಗೆ ಬರುತ್ತದೆ.ಹಾಗೆ ನೋಡಿದರೆ ನಮ್ಮ ಜನಕ್ಕೆ ಯಾಕೊ ಕಾಫಿ ಕಂಡರೆ ಅಷ್ಟಕ್ಕಷ್ಟೇ. ನಮ್ಮಪ್ರಕಾರ ಎಲ್ಲದಕ್ಕೂ ದಿವ್ಯೌಷಧಿ ಚಹಾನೆ.ಅಂತೆಯೆ ಅದನ್ನು ದೇವಲೋಕದ ಅಮೃತ ಎಂದು‌ ಕರೆಯುವದೂ ಇದೆ.ಮನೆಗಳಿಗೆ ಬಂದಾಗ ಅತಿಥಿಗಳಿಗೆ ಕೊಡಮಾಡುವ ಕನಿಷ್ಟ ಪಕ್ಷದ ಆತಿಣಥ್ಯ ಎಂದರೆ ಚಹಾನೇ ಆಗಿದೆ.”ಬರ್ರಿ ಬರ್ರಿ ಅರ್ಧ ಕಪ್ ಚಹಾ ಕುಡದ ಹೋಗರಿ” ಎಂದು ನಾವು ಅತಿಥಿಗಳಿಗೆ ಒತ್ತಾಯ ಮಾಡುವದೂ ಇದೆ.ಬಂದ ಅತಿಥಿಗಳಿಗೆ ನಾವು ಏನು‌ಕೊಡದಿದ್ದರೂ ಪರ್ವಾ ಇಲ್ಲ ಒಂದು ಕಪ್ ಚಹಾನಾದರೂ ಕೊಡಲೇ ಬೇಕು.ಒಂದು ವೇಳೆ ಚಹಾನೂ ಆಫರ್ ಮಾಡದವರನ್ನು ಕಂಡು ” ಏನ್ ಜಿಪುಣರೆಪಾ,ಅವರ ಮುಖಕ್ಕ ಅರ್ಧ ಕಪ್  ಚಹಾ ಹುಟ್ಟಲಿಲ್ಲ” ಎಂದು ಬೈಯುವವರೂ ಇದ್ದಾರೆ. ಚಹಾ ಅಂಗಡಿಗಳೆಂದು ನಾವು ಹೋಟೆಲ್ ನ್ನು ಹೆಸರಿಸುತ್ತೇವೆ.ಅಲ್ಲಿ ಏನೆಲ್ಲ ಖಾದ್ಯಗಳನ್ನು‌ ಮಾಡಬಹುದಾದರೂ ಅವುಗಳ ಸೇವನೆಯ ನಂತರ ಅರ್ಧ ಕಪ್ ಚಹಾ ಸೇವನೆ ಇರಲೇಬೇಕು.ಇರದಿದ್ದರೆ ಏನೇ ತಿಂದರೂ ಅದು ಅಪೂರ್ಣ.ಅದು ಒಂದುರೀತಿಯಲ್ಲಿ ಕಾರ್ಯಕ್ರಮಗಳಲ್ಲಿ ವಂದನಾರ್ಪಣೆ ಇದ್ದಂತೆ.ಎಂಥ ದೆ ಭಾಷಣ ನಡೆದರೂ ಕಡೆಗೆ ಒಂದು ಸಾಲಿನದಾದರೂ ವಂದನಾರ್ಪಣೆ ಯಾಗದಿದ್ದರೆ ಅದೆಂತಹ ಕಾರ್ಯಕ್ರಮ ಎನ್ನುವ ಹಾಗೆ ಏನೆ ಲ್ಲ ತಿಂಡಿ ತಿಂದರೂ ಚಹಾ ಇರದಿದ್ದರೆ ಅರ್ಧ ಆದಂತೆಯೆ ಎಂದು ತಿಳಿವಳಿಕೆ ಸರ್ವೇ ಸಾಮಾನ್ಯ.ನಮ್ಮಲ್ಲಿ ಊರುಗಳ ಸಿರಿತನವೂ ಈ ಹೊಟೆಲ್ ಗಳ ಆಧಾರದ ಮೇಲೆಯೆ ನಿರ್ಣಯವಾಗುವದುಂಟು.ಒಂದು ಚಹಾದಂಗಡಿಯೂ ಇರದೆ‌ ಇದ್ದರೆ” ಅದೆಂಥ ಹಿಂದುಳಿದ ಊರು ” ಎಂದು ಅಸಹ್ಯ ಮಾಡುವವರೂ ಇದ್ದಾರೆ. ಎಂಥ ಹಿರಿತನಗಳೂ  ನ್ಯಾಯನಿರ್ಣಯಗಳೂ ಚಹಾ ಸೇವನೆ ಯಿಂದಲೇ  ಆರಂಭ ಮತ್ತು‌ ಮುಕ್ತಾಯ ಎಂಬುದು ಉತ್ತರಕರ್ನಾಟದ ಒಂದು ನಿಯಮವೇ ಆಗಿದೆ. ಎಲ್ಲ ಸಮಾರಂಭಗಳ ಆರಂಭಕ್ಕೆ ಚಹಾ ಕೊಟ್ಟೇ ಕಾರ್ಯಕ್ರಮ ಆರಂಭಿಸೋದು ನಮ್ಮ‌ ಪದ್ಧತಿ. ಪೂರ್ತಿ ಚಹಾ ಕುಡಿಯುವವರಿಗಿಂತ ಅರ್ಧ ಚಹಾ ಕುಡಿಯುವವರೆ ಜಾಸ್ತಿ.ಗೆಳೆಯರು ಸೇರಿಕೊಂಡು ಅರ್ಧ ತಾಸಿಗೊಂದು ಬೈಟೂ ಚಹಾ ಕುಡಿಯುತ್ತ ಇಡಿ ದಿನವನ್ನೆಲ್ಲ ಊರ ಚಹಾದಂಗಡಿಗಳ ಕಟ್ಟೆಯ ಲ್ಲಿಯೇ ಕಳೆಯುವ ಯಜಮಾನರನ್ನು ನಾವು ಕಾಣುತ್ತೇವೆ.ಇಂಥ ಜಿಗರಿ ದೋಸ್ತರನ್ನು ಬೈಟೂ ದೋಸ್ತರು ಎಂತಲೂ‌ ಕರೆಯಬಹುದು.  ನಮ್ಮ ಹಳ್ಳಿಗಳಲ್ಲಿ ಕೆಲವರಂತೂ ಎಷ್ಟು ಚಹಾದಂಗಡಿಯ ಚಹಾದ ಮೇಲೆ ಜೀವ ಇಟ್ಟಿರುತ್ತಾರೆಂದರೆ ಎದ್ದೊಡನೆ ಅವರ ಮುಂಜಾನೆಗಳಾಗುವದೆ ಹೊಟೆಕಿನ ಮುಂದೆ.ಅಲ್ಲಿ ಬಂದು‌ಮುಖಮಾರ್ಜನ ಕಾರ್ಯಕ್ರಮ ಮುಗಿಸಿ ಒಂದಾದ‌ ಮೇಲೊಂದರಂತೆ  ಚಹಾ ಕುಡಿದು ಅಂಗಡಿಯವನ ಖಾತೆಗೇರಿಸಿ ಮುಂದಿನ ಕಾರ್ಯಕ್ಕೆ ತೆರಳೂವ ಭೂಪರಿಗೇನೂ ಕಡಿಮೆಯಿಲ್ಲ. ಹಿರಿಯ ಪ್ರಭಂಧಕಾರರಾದ ವಿರೇಂದ್ರ ಶಿಂಪಿ ಯವರು ಬರೆದ ನಮ್ಮೂ ರ ಚಹಾ ಹೊಟೆಲು ಎಂಬ ಪ್ರಬಂಧದಲ್ಲಿ ಈ ಚಹಾ ಹೊಟೆಲುಗಳನ್ನು “ಹಳ್ಳಿಯ ಪಾರ್ಲಿಮೆಂಟ್ ” “ವಿಧಾನ ಸೌಧ”ಗಳೆಂದು ಕರೆಯುತ್ತಾರೆ.ಏಕೆಂದರೆ ಊರಿನ ಎಲ್ಲ ಸುದ್ದಿಗಳೂ ಅಲ್ಲಿ ಬಂದು ಹೋಗುವದರಿಂದ ಅವು ವಾರ್ತಾ ಇಲಾಖೆಗಳಂತೆಯೂ ಕೆಲಸ ಮಾಡುವದುಂಟು. ನಿಮಗೆ ಊರಿನ ಯಾವ ಮೂಲೆಯ ಎಂಥದೆ ತಾಜಾ ಸುದ್ದಿ ಬೇಕಾದರೂ ನೀವು ಚಹಾದಂಗಡಿಯ ಒಂದು‌ ಮೂಲೆ ಹಿಡಿದು ಮೌನ ಕುಳಿತರೆ ಸಾಕು ನಿಮಗೆ ಎಲ್ಲವೂ ತಿಳಿಯುತ್ತಾ ಹೋಗುತ್ತದೆ. ಈಚೆಗಂತೂ ಸಕ್ಕರೆ ಖಾಯಿಲೆ ಭಾರತದ ಬಹು ದೊಡ್ಡ ಖಾಯಿಲೆಯಾದ ಮೇಲೆ ಸಕ್ಜರೆ ಹಾಕಿದ ಚಹಾ  ಕುಡಿಯುವರ ಸಂಖ್ಯೆ ಕಡಿಮೆಯಾಗಿ ಊರಿಗೂರಿಗೆ ಗಲ್ಲಿ ಗಲ್ಲಿಗಳಲ್ಲಿ ಬೆಲ್ಲದ ಚಹಾ ಎಂಬ ಹೆಸರಿನ ಗುಲ್ಪಿ ಚಹಾದಂಗಡಿಗಳೂ,ಕೇಸರ ಚಹಾದಂಗಡಿಗಳೂ ತಲೆಯೆತ್ತಿರುವದನ್ನು ಕಾಣುತ್ತವೆ. ಇನ್ನು ಸಕ್ಕರೆ ಖಾಯಿಲೆ ಗೆ ತುತ್ತಾದವರು ಸುಗರ್ ಲೆಸ್ ಚಹಾ ಸೇವನೆ ಮಾಡಿಯಾದರೂ ಚಹಾದ ಚಟ ತೀರಿಸಿಕೊಳ್ಳುತ್ತಾರೆ. ಈಚಿಚೆಗೆ ಅವರದೆ ಸಂಖ್ಯೆ ಜಾಸ್ತಿಯಾದುದರಿಂದ ಸುಗರ್ ಲೆಸ್ಸಾ ಎಂದು ಅಂಗಡಿಯವರೆ ಕೇಳಿ ಖಂಡಿತ ಮಾಡಿಕೊಳ್ಳುವದುಂಟು. ಸರಕಾರಿ ಕಛೇರಿಗಳಲ್ಲಿ ಚಹಾದ ವಿರಾಮ ಎಂದು ಒಂದು ಬಗೆಯ ವಿರಾಮ ಕಾಲವೇ ನಿರ್ಣಯವಾಗಿರುತ್ತದೆ. ಬೆಂಗಳೂರಿನಂತಹ ದೊಡ್ಡ ನಗರಗಳಿರಲಿ, ಚಿಕ್ಕ ನಗರಗಳಿರಲಿ ಸರಕಾರಿ ಇಲಾಖೆಯ ಅಧಿಕಾರಿಗಳು ಖಾಯಂ ಮ್ಮಾಗಿ ಅಂತರ್ಧಾನ ಆಗಿರುವದು..ಕೇಳಿದರೆ ಚಹಾಕ್ಕೆ ಹೋಗಿದ್ದಾರೆ ಎಂದು ಹೇಳುವದು ಸಾನಾನ್ಯವಾಗಿದೆ.ಕಛೇರಿಯ ನಿರ್ಣಯವಾಗದ ಕೆಲವು ಕೇಸಗಳ ಪರೊಹಾರೋಪಾಯವನ್ನು ಚಹಾದಂಗಡಿಯ ಟೇಬಲ್ ಬಳಿಯೆ ಕೇಸ್ ವರ್ಕರ್ ಗಳು ಮುಗಿಸಿಕೊಳ್ಳು ವದೂ ಅನುಭವಸ್ತರ ಎಷ್ಟು ಬರೆದರೂ ಈ ಚಹಾಯಣ ಮುಗಿಯಲಾರದು.ಎಲ್ಲ ಚಹಾಪ್ರಿಯರ ಅನುಭವಗಳು ಒಬ್ಬರಿಗಿಂತ ಒಬ್ಬರವು ಭಿನ್ನ‌ಮತ್ತು ಶ್ರೀ ಮಂತ ಆಗಿರುವದು ಕಾಣಬರುತ್ತದೆ. ಚಹಾಯಣವಂತೂ ರಾಮಾಯಣ ಕ್ಕಿಂತ ದೀರ್ಘವಾಗುತ್ತದೆ. ಚಹಾ ಕುಡಿಯುವದನ್ನು ಒಂದು ಬಗೆಯ habit ಎನ್ನುವ ಇಂಗ್ಲಿಷರ ಅದು ತೀರಾ ಕನಿಷ್ಟತಮ ಚಟ ಎನ್ನುತ್ತಾರೆ. ಅಂದರೆ ಯಾವ ಚಟವಿ ರದಿದ್ದರೂ ಚಹಾ ಚಟವಾದರೂ ಇದ್ದೇ ಇರುತ್ತದೆ ಎನ್ನುದದಕ್ಕೆ ಚಮತ್ಕಾರಿಕವಾಗಿ ಹೇಳುವದಿದೆ .habit ಪದದಲ್ಲಿ h ಹೋದರೆ a bit (ಸ್ವಲ್ಪ) ಉಳಿಯುವದಂತೆ .a ಹೋದರೆ bit (ತೀರ ಸ್ವಲ್ಪ) ಉಳಿಯುವದಂತೆ.b ಹೋದರೆ  it (ಇದು) ಉಳಿಯುತ್ತದೆ.I ಹೋದ‌ಮೇಲೆ t ( ಚಹಾ) ಉಳಿದೆ ಉಳಿಯುತ್ತದೆ ಎನ್ನುತ್ತಾರೆ. ಕಡೆಗೆ t ಕುಡಿಯುವ ಚಟವಂತೂ ಕನಿಷ್ಟ ಇದ್ದೇ ಇರುತ್ತದೆ ಎಂಬ ಭಾವನೆ ಅಲ್ಲಿ ಹೊರಹೊಮ್ಮುತ್ತದೆ. ಚಹಾ ಬೇರೆ ದೇಶದಿಂದ ಬಂದ ಪೇಯ ಎಂದು ವಿಜ್ಞಾನಿಗಳು ಹೇಳುತ್ತಾರೆ.ಆದರೆ ಅದು ಭಾರತೀಯರ ಅತ್ಯಂತ ಪ್ರಿಯ ಪೇಯವಾಗಿರುವದಂತೂ ಸತ್ಯ.ತಲೆ ನೋಯುವವರಿಗೆ, ಜ್ವರ ಬಂದ ರೋಗಿಗಳಿಗೆ ಇದು ದಿವ್ಯೌಷಧಿ. ದಿನಕ್ಕೆ ಎಷ್ಟು ಸಲ ಚಹಾ ಕುಡಿಯಬೇಕು ವೈದ್ಯರು ಏನೆಲ್ಲ ನಿಯಮ ಹೇಳಿದರೂ ನಾಲ್ಕಾರು ಸಲ ಅರ್ಧ ಕಪ್ ಚಹಾ ಸೇವನೆ ನಮ್ಮ ರೂಢಿಯಾಗಿದೆ ಎನ್ನುವವರ ಸಂಖ್ಯೆಯೇನೂ ಕಡಿಮೆಯಿಲ್ಲ.

ಚಹಾಯಣ…ದ ರಾಮಾಯಣ(ಕಿರು ಪ್ರಬಂಧ) ಡಾ.ವೈ ಎಂ.ಯಾಕೊಳ್ಳಿ Read Post »

ಕಥಾಗುಚ್ಛ

“ಗೃಹ ತ್ಯಾಗ…. ಒಂದು ಹೊಸ ಮುನ್ನುಡಿ”ಸಣ್ಣ ಕಥೆ,ವೀಣಾ ಹೇಮಂತ್ರ ಗೌಡ ಪಾಟೀಲರಿಂದ

ಕಥಾ ಸಂಗಾತಿ ವೀಣಾ ಹೇಮಂತ್ರ ಗೌಡ ಪಾಟೀಲ “ಗೃಹ ತ್ಯಾಗ…. ಒಂದು ಹೊಸ ಮುನ್ನುಡಿ” ನಸುಕಿನ 5:ರ ಸಮಯ. ಮಾಡಿದ ಎಲ್ಲಾ ಅಡುಗೆಗಳನ್ನು ಒಂದೆಡೆ ಜೋಡಿಸಿದ ಸುಮಾಳ ಬೆನ್ನು ನೋವಿನಿಂದ ಮುಲುಗುಟ್ಟುತ್ತಿದ್ದರೆ ದೇಹ ಒಲೆಯ ಝಳದ ಜೊತೆಗೆ ಜ್ವರದ ತಾಪದಿಂದ ಕಾಯುತ್ತಿತ್ತು. ಅಡುಗೆ ಮನೆಯ ಬಾಗಿಲಲ್ಲಿ ಬಂದು ನಿಂತ ಅತ್ತೆ ರಮಾ ಬಾಯಿ ಎಲ್ಲ ಕೆಲಸ ಮುಗಿಯಿತೆ? ಎಂದು ಬಿಗುಮಾನದಿಂದ ಕೇಳಿದರು. ತಲೆಯೆತ್ತದೆ ಗೋಣಾಡಿಸಿದ ಸೊಸೆ ಸುಮಳನ್ನು ನೋಡಿ ಅವರ ಅತ್ತೆತನದ ಹಮ್ಮು ಸಂತೃಪ್ತಿಗೊಂಡಿತು.ತುಸು ದರ್ಪದ ಧ್ವನಿಯನ್ನು ಹೆಚ್ಚಿಸಿ ಬರಿ ಇಡ್ಲಿ ವಡೆ ಚಟ್ನಿ ಸಾಂಬಾರ್ ಸಾಲುವುದಿಲ್ಲ ಒಂದಷ್ಟು ಕೇಸರಿಬಾತ್ ಹಾಗೂ ಉಪ್ಪಿಟ್ಟು ಕೂಡ ಮಾಡಿಬಿಡು ಸುಮಾ ಎಂದು ಹೇಳಿದರು. ಈಗಾಗಲೇ ದೇಹವೆಲ್ಲಾ ಬಿಸಿಯಾಗಿ ಬೆನ್ನು ಹೊಡೆತದಿಂದ ಒದ್ದಾಡುತ್ತಿದ್ದ ಸುಮಾಳ ಮುಖದಲ್ಲಿ ವ್ಯಂಗ್ಯದ ನಗು ಮೂಡಿತು. ಮನದಲ್ಲಿ ನಿಶ್ಚಯ ಮಡುಗಟ್ಟಿತು. ಆಯ್ತು ಎಂದು ತಲೆ ಆಡಿಸಿದ ಆಕೆ ಡಬ್ಬದಿಂದ ರವೆಯನ್ನು ತೆಗೆದು ಹುರಿಯಲು ಆರಂಭಿಸಿದಳು. ರವೆಯ ಕಣಗಳು ನಿಧಾನವಾದ ಉರಿಗೆ ಹದವಾಗಿ ಹುರಿಯಲ್ಪಟ್ಟು ಘಮ್ಮನೆಯ ಸುವಾಸನೆಯನ್ನು ಹೊರಡಿಸಿದ್ದರೆ ಅಸಹನೆಯನ್ನು ಮೂಡಿಸುವ ಕಳೆದ ನಾಲ್ಕು ವರ್ಷಗಳ ಆಕೆಯ ವೈವಾಹಿಕ ಬದುಕಿನ ಪುಟಗಳು ಒಂದೊಂದಾಗಿ ಮೊದಲಿನಿಂದ ತೆರೆಯಲು ಆರಂಭಿಸಿದ್ದವು.ಜಿಲ್ಲಾ ಕೇಂದ್ರವೊಂದರ ತ್ರೀ ಸ್ಟಾರ್ ಹೋಟೆಲ್ ನಲ್ಲಿ ಮುಖ್ಯ ಅಡುಗೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುಮಳನ್ನು ನೋಡಲು ಬಂದ ಸುದೀಪ್ ಗೆ ಮೆಚ್ಚುಗೆಯಾದದ್ದು ಆಕೆಯ ಸ್ಳಿಗ್ಧ ಸೌಂದರ್ಯವಾದರೆ ಅತ್ಯಂತ ಸೌಮ್ಯ ಮುಖಭಾವವನ್ನು ಕಂಡ ಸುದೀಪನ ತಾಯಿ ತನ್ನ ತಾಳಕ್ಕೆ ತಕ್ಕಂತೆ ಯುವತಿಯನ್ನು ಕುಣಿಸಬಹುದು ಎಂಬ ಭಾವ ಒಪ್ಪಿಗೆ ಸೂಸಲು ಕಾರಣವಾಗಿತ್ತು. ತಾಯಿ ಮತ್ತು ಮಗನ ಮಾತಿಗೆ ಎದುರಾಡದ ತಂದೆ ತಮ್ಮ ಸಮ್ಮತಿಯನ್ನು ಸೂಚಿಸಿದರು.ಇರುವುದರಲ್ಲಿಯೇ ಚೆನ್ನಾಗಿ ಮದುವೆ ಮಾಡಿಕೊಟ್ಟ ಸುಮಳ ಪಾಲಕರು ತಮ್ಮ ತಲೆಯ ಮೇಲಿನ ಹೊರೆ ಇಳಿದ ಭಾವವನ್ನು ಅನುಭವಿಸಿದರು. ತಾಯಿಯ ತವರುಮನೆಯಿಂದ ಬಂದು ಒಂದು ತುಂಬಿಟ್ಟ ಸೇರನ್ನು ಒದ್ದು ಬಲಗಾಲಿಟ್ಟು ಮನೆಯನ್ನು ಪ್ರವೇಶಿಸಿದ ಸೊಸೆಯ ಕೈಯಿಂದ ಕುಟುಂಬಕ್ಕೆ ಸಂಬಂಧಿಸಿದ ತಿಜೋರಿಯಲ್ಲಿ ಸುಮಾಳ ಆಸ್ತಿ ಪತ್ರ ಹಾಗೂ ಒಡವೆಗಳನ್ನು ಇಸಿದುಕೊಂಡು ಆಕೆಯ ಅತ್ತೆ ಭದ್ರಪಡಿಸಿದರು. ಮಧುಚಂದ್ರದ ಅವಧಿ ಮುಗಿಯುವ ಮೊದಲೇ ಸುಮಾಳ ಹರಿವಿಗೆ ಬಂದದ್ದು ಆಕೆಯ ಪತಿ ತನ್ನ ತಾಯಿಯ ಮಾತನ್ನು ತೆಗೆದುಹಾಕುವುದಿಲ್ಲ ಎಂಬುದರ ಅರಿವಾಗಿತ್ತು. ಮಾವ ಕೂಡ ಕೋಲೆ ಬಸವನಂತೆ ತಲೆಯಾಡಿಸುವುದು ಆಕೆಯ ಅರಿವಿಗೆ ಬಂದಿತ್ತು. ಸ್ವಭಾವತಃ ಮೆದುವಾಗಿದ್ದ ಸುಮಾ ತನ್ನ ಮನೆಯ ಪರಿಸ್ಥಿತಿಗಿಂತ ಅಷ್ಟೇನೂ ಭಿನ್ನವಾಗಿಲ್ಲದ ಗಂಡನ ಮನೆಗೆ ಸಹಜವಾಗಿಯೇ ಒಗ್ಗಿಕೊಂಡಳು. ಆದರೆ ದಿನ ದಿನಕ್ಕೆ ಅತ್ತೆಯ ಕಠಿಣತೆ ಹೆಚ್ಚಾಗುತ್ತಾ ಹೋಯಿತು ಹಾಗೂ ಗಂಡ ತಾಯಿಯೊಂದಿಗೆ ಹೊಂದಿಕೊಂಡು ಹೋಗು, ತಾಯಿ ಹೇಳಿದಂತೆ ಕೇಳು,ಅಮ್ಮನ ಮನಸ್ಸಿಗೆ ಬೇಸರವಾಗದಂತೆ ನೋಡಿಕೋ ಎಂದು ಹೇಳುವುದನ್ನು ಕೇಳಿ ಆಕೆಗೆ ಬೇಸರವಾಗತೊಡಗಿತು. ಅದರಲ್ಲೂ ಅತ್ತೆ ತನ್ನನ್ನು ಮನೆಯಲ್ಲಿ ಎಲ್ಲರ ಸೇವೆ ಮಾಡುವ ಸೇವಕಿ ಎಂಬಂತೆ ಬಿಂಬಿಸತೊಡಗಿದಾಗ ಆಕೆಯ ಬೇಸರ ನೋವಿಗೆ ಎಡೆ ಮಾಡಿಕೊಟ್ಟಿತು. ದಿನಗಳೆದಂತೆ ಅತ್ತೆಯ ದರ್ಪ, ಮಾವನ ಕಾಠಿಣ್ಯ ಹಾಗೂ ಗಂಡನ ನಿಷ್ಕ್ರಿಯತೆ ಆಕೆಯಲ್ಲಿ ಒಂದು ಬಗೆಯ ಬೇಸರವನ್ನು ಉಂಟು ಮಾಡಿ, ಆಕೆ ಬದುಕಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡಳು. ಇದರ ಜೊತೆಗೆ ಮಕ್ಕಳಾಗದೇ ಇರುವುದು ಆಕೆಯ ಬೇಸರವನ್ನು ಮತ್ತಷ್ಟು ಹೆಚ್ಚಿಸಿತ್ತು.ಕೆಲ ತಿಂಗಳುಗಳ ಹಿಂದೆ ತವರಿಗೆ ಹೋದ ಆಕೆ ತನ್ನೊಂದಿಗೆ ಓದುತ್ತಿದ್ದ ತನ್ನ ಆತ್ಮೀಯ ಸ್ನೇಹಿತೆಯೊಂದಿಗೆ ಈ ಕುರಿತು ನೋವನ್ನು ತೋಡಿಕೊಂಡಾಗ ಸ್ನೇಹಿತೆ ಹೇಳಿದ ಮಾತುಗಳು ಆಕೆಯ ಕಣ್ಣಿಗೆ ಕಟ್ಟಿದ ಪರದೆಯನ್ನು ಕೊಂಚ ತೆರೆಯಿತು.ತನ್ನ ತಾಯಿಯ ತವರು ಮನೆಯಿಂದ ತನಗೆ ದೊರೆತ ಆಸ್ತಿಯ ಕಾಗದ ಪತ್ರಗಳು, ಒಡವೆ ವಸ್ತುಗಳು ಅತ್ತೆಯ ಅಲಮಾರಿಯಲ್ಲಿ ಇರುವುದು ಹಾಗೂ ಆಕೆ ಅದನ್ನು ತಮ್ಮ ಕುಟುಂಬಕ್ಕೆ ಕೊಡುಗೆಯಾಗಿ ಬಂದದ್ದು ಎಂದು ಹೇಳುವ ಮೂಲಕ ಅದನ್ನು ಕುಟುಂಬದ ಆಸ್ತಿಯಾಗಿ ಪರಿಗಣಿಸುತ್ತಿರುವುದು ತಪ್ಪು ಎಂಬುದು ಆಕೆಗೆ ಅರಿವಾಯಿತು.ಮರಳಿ ಬಂದ ನಂತರ ಅದೊಂದು ಬಾರಿ ಚಿನ್ನದ ಒಡವೆಗಳನ್ನು ಸಂಬಂಧಿಕರ ಮನೆಯ ಮದುವೆಗೆ ಹೋದಾಗ ಅತ್ತೆಯ ತಿಜೋರಿಯ ಸೇಫ್ ನಿಂದ ಹೊರ ತೆಗೆದು ಉಪಯೋಗಿಸಿ ಮರಳಿ ಎತ್ತಿಡುವಾಗ ತನ್ನೆಲ್ಲ ಶೈಕ್ಷಣಿಕ ಕಾಗದ ಪತ್ರಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಆಸ್ತಿಯ ಪತ್ರಗಳನ್ನು ಹಾಗೂ ಒಡವೆಗಳನ್ನು ಸುಮಾ ಎತ್ತಿಟ್ಟುಕೊಂಡಳು. ಇಂದು ಅತ್ತೆಯ ಕಾಠಿಣ್ಯದ ಆಜ್ಞೆಗಳು ಆಕೆಯ ಮನಸ್ಸಿನಲ್ಲಿ ಹರಳುಗಟ್ಟುತ್ತಿದ್ದ ಯೋಚನೆಗಳಿಗೆ ಅಂತಿಮ ಸ್ವರೂಪವನ್ನು ನೀಡಿದವು ಅಂತೆಯೇ ಕೇಸರಿಬಾತ್ ಮತ್ತು ಉಪ್ಪಿಟ್ಟನ್ನು ಮಾಡಿ ಪೂರೈಸಿ ಎಲ್ಲವನ್ನು ಒಂದೆಡೆ ಟೇಬಲ್ ಮೇಲೆ ಜೋಡಿಸಿ ಇಟ್ಟ ಆಕೆ ಅದರ ಬಳಿ ತಾನು ಮನೆ ಬಿಟ್ಟು ಹೋಗುತ್ತಿರುವುದಾಗಿ ಬರೆದ ಕಾಗದವೊಂದನ್ನು ಇಟ್ಟಳು.ತೀವ್ರ ಆಯಾಸದಿಂದ ತನ್ನ ಕೋಣೆಗೆ ಬಂದ ಆಕೆ ಸ್ನಾನ ಮಾಡಿ ಆರಾಮದಾಯಕ ಉಡುಪೊಂದನ್ನು ಧರಿಸಿ ಒಂದಷ್ಟು ಬಟ್ಟೆಗಳನ್ನು, ಹಾಗೂ ಒಳಉಡುಪುಗಳನ್ನು  ತನ್ನ ಬ್ಯಾಗಿನಲ್ಲಿ ಇಟ್ಟುಕೊಂಡು ಅವಶ್ಯಕ ಕಾಗದ ಪತ್ರಗಳನ್ನು ಜೋಡಿಸಿಟ್ಟುಕೊಂಡು ದೇವರ ಕೋಣೆಗೆ ಬಂದು ದೀಪವನ್ನು ಮುಡಿಸಿ ದೇವರಿಗೆ ನಮಸ್ಕರಿಸಿ ದೃಢ ನಿರ್ಧಾರದಿಂದ ತನ್ನ ಬ್ಯಾಗಿನೊಂದಿಗೆ ಮನೆಯ ಹೊರಗೆ ಕಾಲಿಟ್ಟಳು.ಮನೆಯ ಬಾಗಿಲನ್ನು ದಾಟಿ ರಸ್ತೆಗೆ ಬರುತ್ತಿದ್ದಂತೆಯೇ ಎದುರಿಗೆ ಕಂಡ ಆಟೋವೊಂದನ್ನು ಕೂಗಿ ಕರೆದ ಆಕೆ ಢವಗುಡುತ್ತಿದ್ದ ಎದೆಯ ಬಡಿತವನ್ನು ಸ್ಥಿಮಿತಕ್ಕೆ ತರಲು ಪ್ರಯತ್ನಿಸುತ್ತಾ ಅದರಲ್ಲಿ ಕುಳಿತು ರೈಲು ನಿಲ್ದಾಣಕ್ಕೆ ಹೋಗುವಂತೆ ನಿರ್ದೇಶಿಸಿ ಹಿಂದಕ್ಕೊರಗಿ ಕುಳಿತುಕೊಂಡಳು.ಇತ್ತ ಮನೆಯಲ್ಲಿ ಆಕೆಯ ಸುಳಿವಿರದೆ ಮನೆಯ ಎಲ್ಲೆಡೆ ಹುಡುಕಲು ಆರಂಭಿಸಿದರು. ಟೇಬಲ್ ನ ಮೇಲಿದ್ದ ಕಾಗದವನ್ನು ಓದಿದ ಮಾವ ನಖಶಿಖಾಂತ ಬೆವೆತರೆ ಅತ್ತೆ ಕ್ರೋಧದಿಂದ ತಪ್ತಳಾದಳು.ಗಂಡ ಆಕೆಗೆ ಕರೆ ಮಾಡಿದ. ಕರೆಯನ್ನು ಆಕೆ ಸ್ವೀಕರಿಸಿದ ಕೂಡಲೇ ‘ಎಲ್ಲಿರುವೆ ಸುಮಾ, ಮನೆಯಲ್ಲಿ ಎಲ್ಲರೂ ಗಾಬರಿಯಾಗಿದ್ದಾರೆ’ ಎಂದು ಕೇಳಿದ. ನಾನು ಮನೆ ಬಿಟ್ಟು ಹೊರಟಿದ್ದೇನೆ. ನಿಮಗೆ ಬೇಕಾದ ಅಡುಗೆಯನ್ನು ಮಾಡಿ ಟೇಬಲ್ ಮೇಲೆ ಇಟ್ಟಿದ್ದೇನೆ ಎಂದು ಅತ್ಯಂತ ಶಾಂತವಾಗಿ ಆಕೆ ಹೇಳಿದಳು.‘ಮನೆಗೆ ಅಷ್ಟೊಂದು ಜನ ಬರುತ್ತಿದ್ದಾರೆ ಅಂತಹದರಲ್ಲಿ ಮನೆಯ ಸೊಸೆಯಾಗಿ ನೀನೇ ಇಲ್ಲವೆಂದರೆ ಹೇಗೆ ?’ ಎಂದು ಸುದೀಪ್ ಕೇಳಿದ. ನಿಮಗೆ ಬೇಕಾಗಿರುವುದು ಮನೆಯ ಸೊಸೆಯಲ್ಲ ಕೇವಲ ಕೆಲಸದಾಕೆ. ಕಳೆದ ನಾಲ್ಕು ವರ್ಷಗಳಲ್ಲಿ ನಾನು ಆ ಮನೆಯ ಸೊಸೆಯಾಗಿ ಕಾರ್ಯನಿರ್ವಹಿಸುವುದಕ್ಕಿಂತ ಹೆಚ್ಚಾಗಿ ಕೆಲಸದವಳಾಗಿ ಬದುಕಿದ್ದೆ ಎಂಬುದು ನಿಮಗಿಂತ ಚೆನ್ನಾಗಿ ಬೇರೆ ಯಾರಿಗೆ ಗೊತ್ತು ? ಎಂದು ಆಕೆ ತುಸು ತೀಕ್ಷ್ಣವಾಗಿ ಹೇಳಿದಳು. ಆಕೆಯ ಧ್ವನಿಯಲ್ಲಿದ್ದ ತೀಕ್ಷ್ಣತೆ ಹಾಗೂ ಗಟ್ಟಿತನವನ್ನು ಗುರುತಿಸಿದ ಆಟೋ ಡ್ರೈವರ್ ಜೋರಾಗಿ ಕೇಳಿಸುತ್ತಿದ್ದ ಸ್ಪೀಕರ್ ನ ಕಿವಿಯನ್ನು ಮೆಲ್ಲನೆ ತಿರುವಿ ನಂತರ  ತನ್ನ ಆಟೋ ನಿಲ್ಲಿಸಿ ‘ಮೇಡಂ, ಎಲ್ಲಿಗೆ ಹೋಗಬೇಕು? ಎಂದು ತಗ್ಗಿದ ದನಿಯಲ್ಲಿ ಕೇಳಿದ.ಕೂಡಲೇ ಎಚ್ಚೆತ್ತು ಸುಮಾ ‘ರೈಲ್ವೇ ಸ್ಟೇಷನ್ ಗೆ ನಡೆಯಿರಿ ಅಣ್ಣ ‘ ಎಂದು ಹೇಳಿದಳು. ಸ್ಟೇಷನ್ ಗೆ ಬಂದ ಆಕೆ ಮೈಸೂರಿಗೆ ತೆರಳುವ ರೈಲನ್ನು ಏರಿ ಕುಳಿತಳು. ಅತ್ತೆಯ ಮನೆಯ ಯಾವೊಬ್ಬ ಸದಸ್ಯರ ಫೋನ್ ಕರೆಯನ್ನು ಆಕೆ ಸ್ವೀಕರಿಸಲಿಲ್ಲ…. ಗಂಡನದ್ದು ಕೂಡ.ರೈಲು ಮೈಸೂರನ್ನು ತಲುಪಿದಾಗ ಆಟೋ ಏರಿದ ಆಕೆತನ್ನ ಚಿಕ್ಕಮ್ಮನ ಮನೆಗೆ ಬಂದು ಬಾಗಿಲು ತಟ್ಟಿದಳು. ಬಾಗಿಲನ್ನು ತೆರೆದ ಚಿಕ್ಕಮ್ಮ ಈಕೆಯನ್ನು ನೋಡಿದ ಕೂಡಲೇ ಆಶ್ಚರ್ಯದಿಂದ ನಿಂತಳು. ನಾನು ಮತ್ತೆ ಮರಳಿ ಗಂಡನ ಮನೆಗೆ ಹೋಗಲು ಸಿದ್ದವಿಲ್ಲ ಚಿಕ್ಕಮ್ಮ ಎಂದು ಹೇಳಿದಾಗ ಅಕ್ಕನ ಮಗಳನ್ನು ಮೆದುವಾಗಿ ತಬ್ಬಿ ಒಳಗೆ ಕರೆದೊಯ್ದ ಚಿಕ್ಕಮ್ಮ ಆಕೆಗೆ ಸಾಂತ್ವನ ಹೇಳಿ ಮುಖ ತೊಳೆದು ಬರಲು ಹೇಳಿ ಬಿಸಿ ತಿಂಡಿಯನ್ನು ಹಾಕಿ ಕೊಟ್ಟರು. ತಿಂಡಿಯನ್ನು ತಿನ್ನುತ್ತಲೇ ನಡೆದ ವಿಷಯವನ್ನು ಆಕೆ ಹೇಳಿದಳು.ಅಂದು ಅವರ ಕುಟುಂಬದ ವಾಟ್ಸಪ್ ಗುಂಪಿನಲ್ಲಿಆ ದಿನ ಮುಂಜಾನೆ ಸುಮಳ ಅತ್ತೆಯ ಮನೆಯಲ್ಲಿ  ನಡೆದ ವಿಷಯದ ಚರ್ಚೆ ಆಗಲಾರಂಭಿಸಿತು. ಕುಟುಂಬದ ಹಿರಿಯರು ಮನೆಯ ವಿಷಯವನ್ನು ಹೀಗೆ ಹೊರಗೆ ತರುವ ಅವಶ್ಯಕತೆ ಇದೆ ಎಂಬಂತೆ ಗುಂಪಿನಲ್ಲಿ ಚರ್ಚಿಸಿದಾಗ ಸುಮಾಳ ಮುಖದಲ್ಲಿ ವಿಷಾದದ ಕಿರುನಗೆ ಮೂಡಿತು. ಮನೆಯ ನಾಲ್ಕು ಗೋಡೆಗಳ ಒಳಗೆ ಈ ಕುರಿತು ಚರ್ಚಿಸಲು ಮನೆಯವರು ತಯಾರಿರಲಿಲ್ಲವಾದ ಕಾರಣ  ಮನೆಯ ಸಮಸ್ಯೆ ನಾಲ್ಕು ಜನರಿಗೆ ತಿಳಿಯುವಂತೆ ಮಾಡಬೇಕಾಯಿತು ಎಂದು ಬರೆದ ಆಕೆ ಅದನ್ನು ಗುಂಪಿನಲ್ಲಿ ಹಂಚಿಕೊಂಡಳು.. ಎಲ್ಲರ ಬಾಯಿಗೆ ಬೀಗ ಬಿದ್ದಂತಾಯಿತು.ಮುಂದಿನ ಎರಡು ದಿನಕ್ಕೆ ಮೈಸೂರಿಗೆ ಬಂದಿಳಿದ ಸುದೀಪ್ ಆಕೆಯ ಮನವೊಲಿಸಲು ಪ್ರಯತ್ನಿಸಿದ. ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ ತನ್ನ ತಾಯಿಯ ಕುರಿತು ಮಾತ್ರ ಯೋಚಿಸಿದ್ದ ಪತಿಯನ್ನು ನಂಬಲು ಸುಮ ಸಿದ್ಧವಿರಲಿಲ್ಲ. ನಿರಾಶನಾಗಿ ಹಿಂದಿರುಗಿದ ಪತಿ. ಮತ್ತೆ ಒಂದು ವಾರದ ಬಳಿಕ ಮರಳಿ ಬಂದ. ಆತನ ಮುಖದಲ್ಲಿ ಗಾಂಭೀರ್ಯವಿತ್ತು. ಕೇವಲ ಒಂದೇ ವಾರದಲ್ಲಿ ಹತ್ತು ವರ್ಷ ಹೆಚ್ಚು ವಯಸ್ಸಾದಂತೆ ತೋರುತ್ತಿದ್ದ ಆತ ಈ ಬಾರಿ ಆಕೆಯನ್ನು ಮರಳಿ ಬಾ ಎಂದು ಅಂಗಲಾಚಲಿಲ್ಲ. ಬದಲಾಗಿ ತಾನು ತಮ್ಮಿಬ್ಬರ ಕುರಿತು ಮಾತನಾಡಿದ್ದು ಇನ್ನು ಮುಂದೆ ಆಕೆಯ ಎಲ್ಲ ಚಟುವಟಿಕೆಗಳಿಗೆ ಬೆಂಬಲವಾಗಿ ನಿಲ್ಲುವ, ಆಕೆಗೆ ಬೇಕಾದ ಎಲ್ಲಾ ಅಗತ್ಯ ಸಹಾಯಗಳನ್ನು ನೀಡುವುದಾಗಿ ಹೇಳಿದ. ಆಕೆಗೆ ತನ್ನೊಂದಿಗೆ ಬಾಳಲು ಇಷ್ಟವಿಲ್ಲ ಎಂದಾದರೆ ವಿಚ್ಛೇದನ ನೀಡಲು ಕೂಡ ಸಿದ್ದ ಎಂದು ಹೇಳಿದ.‘ ನನಗೆ ಯೋಚಿಸಲು ಕೊಂಚ ಸಮಯ ಬೇಕು’ ಎಂದಷ್ಟೇ ಹೇಳಿದ ಆಕೆಯ ಮಾತನ್ನು ಗೌರವಿಸಿ ಮರಳಿ ಊರಿಗೆ ಹೊರಟು ಹೋದ. ಒಂದೆರಡು ವಾರಗಳು ಕಳೆದ ಬಳಿಕ ತನ್ನ ಚಿಕ್ಕಮ್ಮನ ಸಹಾಯದಿಂದ ಆಕೆ ಉದ್ಯೋಗಸ್ಥ ಜನರಿಗೆ ಕ್ಯಾರಿಯರ್ ಊಟ ತಲುಪಿಸುವ ಕೆಲಸವನ್ನು ಆರಂಭಿಸಿದಳು. ಮೊದಲ ವಾರ ಕೇವಲ ಎಂಟು ಜನರಿಂದ ಆರಂಭವಾದ ಆಕೆಯ ಕ್ಯಾರಿಯರ್ ಊಟದ ಸರ್ವಿಸ್ ಕೆಲವೇ ವಾರಗಳಲ್ಲಿ 40 ರಿಂದ 50 ಜನರಿಗೆ ವಿಸ್ತಾರವಾಯಿತು. ಕೈಯಲ್ಲಿ ಎರಡರಿಂದ ಮೂರು ಆಳುಗಳನ್ನು ಕೆಲಸಕ್ಕೆ ಇಟ್ಟುಕೊಂಡ ಆಕೆ ಇದೀಗ ತುಸು ದೊಡ್ಡ ಪ್ರಮಾಣದಲ್ಲಿ ಮನೆಯ ಹಿಂಭಾಗದಲ್ಲಿ ಶೆಡ್ ಹಾಕಿಸಿ ಅಲ್ಲಿ ರುಚಿ ಹಾಗೂ ಶುಚಿಗೆ ಹೆಸರಾದ ಪುಟ್ಟ ಕ್ಯಾರಿಯರ್ ಸರ್ವಿಸನ್ನು ಆರಂಭಿಸಿದರು.ಪ್ರತಿ ಶನಿವಾರ ಸಾಯಂಕಾಲ ಬರುತ್ತಿದ್ದ ಸುದೀಪ ಸಲಹೆ ಸೂಚನೆಗಳನ್ನು ಹಾಗೂ ಸಹಾಯ ಸಹಕಾರಗಳನ್ನು ನೀಡುತ್ತಿದ್ದ. ತಾನೇ ಲಿಸ್ಟ್ ಮಾಡಿಕೊಂಡು ಆಕೆಯ ಕೇಟರಿಂಗ್ ಕೆಲಸಕ್ಕೆ ಬೇಕಾಗುವ ಪದಾರ್ಥಗಳನ್ನು ತಂದು ಕೊಡುತ್ತಿದ್ದ… ಆದರೆ ಅವರಿಬ್ಬರ ಮಧ್ಯದಲ್ಲಿ ಇದ್ದುದು ದಾಂಪತ್ಯವಲ್ಲ ಕೇವಲ ಸ್ನೇಹ ಭಾವ. ಇದೀಗ ಆತನಲ್ಲಿ ಪತಿಯ ಜವಾಬ್ದಾರಿಯ ಅರಿವು ಮೂಡಿದ್ದು ಜೀವನಪೂರ್ತಿ ಆಕೆಗಾಗಿ ಕಾಯಲು ಆತ ಸಿದ್ದನಿದ್ದ. ಸರಿಸುಮಾರು ಆರು ತಿಂಗಳ ನಂತರ ತನ್ನ ನೌಕರಿಗೆ ವರ್ಗಾವಣೆ ಮಾಡಿಸಿಕೊಂಡು ಆತ ಮೈಸೂರಿಗೆ ಬಂದು ನೆಲೆಸಿದ…. ಈಗಲೂ ಕೂಡ ಆತನಲ್ಲಿ ಈ ಹಿಂದೆ ತಾವು ನಡೆದುಕೊಂಡ ರೀತಿಯ ಕುರಿತು ಪಶ್ಚಾತ್ತಾಪದ ಭಾವವಿದ್ದು, ಇನ್ನು ಮುಂದೆ ಆಕೆಗೆ ನೋವಾಗದಂತೆ ಬದುಕಬೇಕು ಎಂಬ ನಿರ್ಧಾರ ಕೂಡ ಇತ್ತು.ಅದೊಂದು ದಿನ ಆಕೆಯ ಅತ್ತೆ ಮಾವ ಬಂದು ಇಳಿದರು. ಅವರಿಬ್ಬರ ಮುಖದಲ್ಲಿ ಸೋತು ಹೋದ ಭಾವವಿತ್ತು. ಕೊನೆಗೂ ನೀನು ನಿನ್ನ ಹಟ ಸಾಧಿಸಿದೆ ಎಂದು ಅತ್ತೆ ಹೇಳಿದಾಗ ನಸುನಕ್ಕ ಸುಮತಿ ಒಳ್ಳೆಯತನವನ್ನು ಕೈಲಾಗದತನ ಎಂದು ತಿಳಿದುಕೊಳ್ಳುವುದು ತಪ್ಪು ಅತ್ತೆ, ನಾವು ಹಿರಿಯರಿಗೆ ಕೊಡುವ ಗೌರವವನ್ನು ಅವರು ಭಯ, ಹೆದರಿಕೆ ಎಂದು ಭಾವಿಸಬಾರದು. ದಾಂಪತ್ಯದಲ್ಲಿ ಗಂಡ ಹೆಚ್ಚು ಹೆಂಡತಿ ಕಡಿಮೆ ಎಂಬ ಭಾವ ಎಂದಿಗೂ ಬೇಡ… ಅವರಿಬ್ಬರೂ ಪರಸ್ಪರರಿಗೆ ಪೂರಕವಾಗಿ ಬದುಕಬೇಕು. ಒಬ್ಬರು ಕೇವಲ ಪಡೆಯುವ ಹಾಗೂ ಮತ್ತೊಬ್ಬರು ಕೊಟ್ಟು ಬರಿದಾಗುವ ಪ್ರಕ್ರಿಯೆ ದಾಂಪತ್ಯದಲ್ಲಿ ಖಂಡಿತವಾಗಿಯೂ

“ಗೃಹ ತ್ಯಾಗ…. ಒಂದು ಹೊಸ ಮುನ್ನುಡಿ”ಸಣ್ಣ ಕಥೆ,ವೀಣಾ ಹೇಮಂತ್ರ ಗೌಡ ಪಾಟೀಲರಿಂದ Read Post »

ಕಾವ್ಯಯಾನ, ಗಝಲ್

ಕಲ್ಪನಾ ಎಸ್ ಪಾಟೀಲ ಅವರ ಗಜಲ್

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ ಗಜಲ್ ಮುತ್ತಿನಂತೆ ಮಿನುಗುವ ನಗು ನಿನ್ನದು ಗೆಳೆಯಮನದಾಳದಿ ಮೂಡಿದ ಸೌಂದರ್ಯ ನೀ ಗೆಳೆಯ ಸಾಗರದ ಗರ್ಭದಿ ಹುಟ್ಟಿದ ಅಮೂಲ್ಯ ರತ್ನ ನೀನುನನ್ನ ಹೃದಯದೊಳಗಿನ ಪ್ರೀತಿಯಂತೆ ಶುದ್ಧ ನೀನು ಕನಸಿನ ಕಿರಣದಲ್ಲಿ ಹೊಳೆಯುವ ಮುತ್ತಿನ ಹೊಳೆನಿನ್ನ ಕಂಗಳಲ್ಲಿ ಕಾಣುವ ಪ್ರೀತಿಯ ಮುತ್ತಿನ ಮಳೆ ನಿಶ್ಶಬ್ದದ ಮಾತುಗಳಲ್ಲಿ ಮೂಡುವ ಸೊಗಸಿದುಮುತ್ತಿನ ಲೆಕ್ಕ ಬಾಕಿ ಇಟ್ಟಿಹುದೇನು ನಿನ್ನ ಮನಸದು ಜೀವನ ಸಾಗರದಿ ನೀನೇ ನನ್ನ ಮೊದಲ ಮುತ್ತುನಿನ್ನ ಜೊತೆಗಿದ್ದರದೆ ಕಾವ್ಯಧರೆಗೆ ಸತ್ಯ ಸುಖದ ಹೊತ್ತು ಕಲ್ಪನಾ ಎಸ್ ಪಾಟೀಲಕಾವ್ಯಧರೆ

ಕಲ್ಪನಾ ಎಸ್ ಪಾಟೀಲ ಅವರ ಗಜಲ್ Read Post »

ಇತರೆ

“ಅಮ್ಮನ ಸೆರಗು” ಕವಿತಾ ಶ್ರೀನಿವಾಸ ನಾಯಕ್

ವಿಶೇಷ ಸಂಗಾತಿ ಅಮ್ಮನ ಸೆರಗು ಕವಿತಾ ಶ್ರೀನಿವಾಸ ನಾಯಕ್ ​ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣಾಡಿಸುವ ಸಂದರ್ಭದಲ್ಲಿ ಒಬ್ಬ ವಿದ್ಯಾರ್ಥಿ ಬರೆದ ಪ್ರಬಂಧವೊಂದು ನನ್ನ ಗಮನ ಸೆಳೆಯಿತು. ಶಿಕ್ಷಕರು ಕೊಟ್ಟ ವಿಷಯಕ್ಕೆ ಆ ಮಗು ತನ್ನ ತಾಯಿಯ ಸೆರಗಿನ ಮಹತ್ವವನ್ನು ತನ್ನದೇ ಆದ ಮುಗ್ಧ ತಿಳುವಳಿಕೆಯಲ್ಲಿ ಬರೆದಿತ್ತು. ಆ ಸಾಲುಗಳು ನನ್ನ ಹೃದಯಕ್ಕೆ ಎಷ್ಟು ಆಳವಾಗಿ ನಾಟಿದವೆಂದರೆ, ಇಂದು ನನ್ನ ಲೇಖನಿಗೆ ಅದೇ ಪ್ರೇರಣೆಯಾಯಿತು. ಹೌದು, ಅಮ್ಮನ ಸೆರಗನ್ನು ವರ್ಣಿಸಲು ಈ ಜಗದ ಪದಗಳೇ ಸಾಲದು; ಅದು ಕೇವಲ ಒಂದು ಬಟ್ಟೆಯ ತುಂಡಲ್ಲ, ಮಗುವಿನ ರಕ್ಷಣೆಯ ಮೊದಲ ಗೂಡು!​ವಿಶೇಷವಾಗಿ 70 ಮತ್ತು 80 ರ ದಶಕದ ಮಕ್ಕಳಿಗೆ ಅಮ್ಮನ ಸೆರಗಿನ ಸುಖ ಏನೆಂಬುದು ಚೆನ್ನಾಗಿ ಗೊತ್ತು. ಆದರೆ ಇಂದಿನ ಕಾಲಘಟ್ಟದಲ್ಲಿ ಕ್ರಮೇಣ ಆ ಸೀರೆಯ ಸೆರಗು ಮಾಯವಾಗಿ, ಎಲ್ಲೆಡೆ ನೈಟಿಗಳು ಆವರಿಸಿಬಿಟ್ಟಿವೆ. ಆ ಬದಲಾವಣೆಯೊಂದಿಗೆ ನಾವೇನೋ ಆಧುನಿಕತೆಯತ್ತ ಸಾಗಿದ್ದೇವೆ ನಿಜ, ಆದರೆ ಆ ಸೆರಗಿನಲ್ಲಿದ್ದ ಬೆಚ್ಚಗಿನ ಪ್ರೀತಿ, ಆಪ್ತತೆ ಎಲ್ಲೋ ಒಂದು ಕಡೆ ಕಳೆದುಹೋಗುತ್ತಿದೆ ಅನಿಸುವುದು ಸುಳ್ಳಲ್ಲ.​ಅಮ್ಮನ ಸೆರಗು ಆ ದಿನಗಳಲ್ಲಿ ಕೇವಲ ಮಗುವಿಗೆ ಮಾತ್ರವಲ್ಲ, ಇಡೀ ಮನೆಗೇ ಒಂದು ರಕ್ಷಣಾ ಕವಚವಾಗಿತ್ತು. ಮನೆಯ ಒಳಗೆ ಅಮ್ಮ ಅಡುಗೆಮನೆಯಿಂದ ಹಿಡಿದು ಹಿತ್ತಲವರೆಗೂ ಕೆಲಸ ಮಾಡುವಾಗ ಆಕೆಯ ಸೊಂಟಕ್ಕೆ ಸುತ್ತಿಕೊಂಡಿರುತ್ತಿದ್ದ ಸೀರೆಯ ಸೆರಗಿನಲ್ಲಿ ಇಡೀ ಸಂಸಾರದ ನೆಮ್ಮದಿ ಅಡಗಿರುತ್ತಿತ್ತು.​ಮಕ್ಕಳಿಗೆ ಅಮ್ಮನ ಸೆರಗೇ ಸರ್ವಸ್ವ:ಮಕ್ಕಳಿಗೆ ಅಮ್ಮನ ಸೆರಗು ಹಲವು ರೂಪಗಳಲ್ಲಿ ಆಸರೆಯಾಗುತ್ತಿತ್ತು. ಆಟ ಆಡಿ ಬಂದ ಮಗು ಮುಖ ಒರೆಸಿಕೊಳ್ಳಲು ಮೊದಲು ಹುಡುಕುತ್ತಿದ್ದುದೇ ಅಮ್ಮನ ಸೆರಗನ್ನು. ಬೇಸಿಗೆಯ ಸೆಕೆಗೆ ಬೀಸಣಿಕೆಯಾಗುತ್ತಿದ್ದದ್ದೂ ಅದೇ, ಚಳಿಗಾಲದ ನಡುಕಕ್ಕೆ ಬೆಚ್ಚಗಿನ ಹೊದಿಕೆಯಾಗುತ್ತಿದ್ದದ್ದೂ ಅದೇ. ಅಷ್ಟೇ ಏಕೆ, ಮನೆಗೆ ಯಾರಾದರೂ ನೆಂಟರು ಬಂದಾಗ ನಾಚಿಕೆಯಿಂದ ಓಡಿಹೋಗಿ ಅಮ್ಮನ ಸೆರಗಿನ ಮರೆಯಲ್ಲಿ ಅಡಗಿ ನಿಲ್ಲುತ್ತಿದ್ದ ಆ ಕ್ಷಣಗಳೇ ಒಂದು ಸುಂದರ ಕಾವ್ಯ. ತಾಯಿಯ ಸೆರಗನ್ನು ಗಟ್ಟಿಯಾಗಿ ಹಿಡಿದುಕೊಂಡರೆ ಸಾಕು, ಈ ಜಗತ್ತಿನ ಯಾವುದೇ ಶಕ್ತಿ ತನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬ ಅದಮ್ಯ ಧೈರ್ಯ ಮತ್ತು ಸುರಕ್ಷತೆಯ ಭಾವ ಆ ಪುಟಾಣಿ ಹೃದಯದಲ್ಲಿ ಮೂಡುತ್ತಿತ್ತು.​ಮನೆಯವರಿಗೂ ಅದೊಂದು ಭರವಸೆ:ಕೇವಲ ಮಕ್ಕಳಿಗಷ್ಟೇ ಅಲ್ಲ, ಮನೆಯ ಹಿರಿಯರಿಗೂ ಅಮ್ಮನ ಸೆರಗು ಭರವಸೆಯ ಸಂಕೇತವಾಗಿತ್ತು. ಅಡುಗೆಮನೆಯಲ್ಲಿ ಸದಾ ದುಡಿಯುವ ತಾಯಿಯ ಸೆರಗಿನ ಅಂಚಿಗೆ ಮನೆಯ ಬೀಗದ ಕೈಗಳು ಕಟ್ಟಲ್ಪಟ್ಟಿರುತ್ತಿದ್ದವು. ಅದು ಕೇವಲ ಬೀಗದ ಕೈಯಲ್ಲ, ಇಡೀ ಮನೆಯ ಜವಾಬ್ದಾರಿ, ಸಂಸ್ಕಾರ ಮತ್ತು ತಾಯಿ ಮುನ್ನಡೆಸುವ ಸಂಸಾರದ ದಾರಿದೀಪ. ತಂದೆ ಆಯಾಸದಿಂದ ಕೆಲಸ ಮುಗಿಸಿ ಬಂದಾಗ, ಕಷ್ಟದ ದಿನಗಳಲ್ಲಿ ಅಮ್ಮ ಅದೇ ಸೆರಗಿನಿಂದ ತನ್ನ ಕಣ್ಣೀರನ್ನು ಮರೆಮಾಚಿ, ಎಲ್ಲರಿಗೂ ಧೈರ್ಯ ತುಂಬುತ್ತಿದ್ದಳು.​ಕಾಲ ಬದಲಾಗಿದೆ. ಇಂದು ಉಡುಗೆ-ತೊಡುಗೆಗಳು ಬದಲಾಗಿರಬಹುದು, ಬದುಕಿನ ಶೈಲಿ ಆಧುನಿಕವಾಗಿರಬಹುದು. ಆದರೆ ಅಮ್ಮನ ಸೆರಗು ನೀಡುತ್ತಿದ್ದ ಆ ನಿಷ್ಕಲ್ಮಷ ಪ್ರೀತಿ, ಮಮತೆ ಮತ್ತು ಸುರಕ್ಷತೆಯ ಭಾವ ಇಂದಿಗೂ ಶಾಶ್ವತ. ಬಟ್ಟೆಗಳು ಬದಲಾಗಬಹುದು, ಆದರೆ ತಾಯಿಯ ಮಡಿಲ ಒಲವು ಎಂದಿಗೂ ಬದಲಾಗಲಾರದು. ನಮ್ಮ ಬಾಲ್ಯದ ಆ ಸುಂದರ ದಿನಗಳನ್ನು ನೆನಪಿಸಿಕೊಳ್ಳುತ್ತಾ, ತಾಯ್ತನದ ಆ ಪರಮ ಸುಖಕ್ಕೆ ಮನದಲ್ಲೇ ನಮಿಸೋಣ. ​ಕವಿತಾ ಶ್ರೀನಿವಾಸ್ ನಾಯಕ್​ಕಾರ್ಕಳ, ಉಡುಪಿ ಜಿಲ್ಲೆ.

“ಅಮ್ಮನ ಸೆರಗು” ಕವಿತಾ ಶ್ರೀನಿವಾಸ ನಾಯಕ್ Read Post »

You cannot copy content of this page

Scroll to Top