ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

“ನೀಲ ಗಗನ ತಿಳಿನೀರ ಸಾಗರಗಳ ಒಡೆತನ ಯಾರದ್ದು?” ಜಯಲಕ್ಷ್ಮಿ ಕೆ

ವಿಶೇಷ ಸಂಗಾತಿ ಜಯಲಕ್ಷ್ಮಿ ಕೆ “ನೀಲ ಗಗನ ತಿಳಿನೀರ ಸಾಗರಗಳ ಒಡೆತನ ಯಾರದ್ದು?” ತಮ್ಮ ತಮ್ಮ ಸಾಮ್ರಾಜ್ಯದ ಎಲ್ಲೆಯನ್ನು ವಿಸ್ತರಿಸುವ ಸಲುವಾಗಿ ಯುದ್ಧ ಸಾರುತ್ತ “ಗೆಲುವು ನನ್ನದು ಸೋಲು ಅವನದು ” ಎಂದು ಬೀಗುತ್ತಿದ್ದ ಮಾನವ ಇಂದು ಗಗನ ಸಾಗರಗಳ ಒಡೆತನಕ್ಕಾಗಿ ಸಮರಕ್ಕಿಳಿದಿದ್ದಾನೆ. ಪ್ರಕೃತಿ ಮೊಗೆ ಮೊಗೆದು ಕೊಡುತ್ತಿರುವ ಗಾಳಿ ನೀರು , ಬೆಳಕು,ಪಚ್ಚೆ-ಪೈರುಗಳನ್ನು ಬಳಸಿ, ಉಳಿಸಿ ಹೋಗಬೇಕು ಎನ್ನುವ ಪ್ರಜ್ಞೆ ಇಲ್ಲದೆ ಕಡಲು ಸಾಗರಗಳ ಒಡೆತನಕ್ಕಾಗಿ ರಾಕ್ಷಸೀಯ ಪ್ರವೃತ್ತಿ ಮೆರೆಯುತ್ತಿದ್ದಾನೆ. ಜಗವಷ್ಟೇ ಅಲ್ಲ, ದಿಗ್ದೇವತೆಗಳು ಕೂಡಾ ಬೆರಗಿನಿಂದ ನೋಡುವಂತಹ ಕಾರ್ಯಗಳು ಮನುಜರಿಂದ ನಡೆಯುತ್ತಲೇ ಇವೆ. ಮುದ್ದು ಮಕ್ಕಳ ಮಾರಣ ಹೋಮ, ಸೈನಿಕರ ಪ್ರಾಣ ಹರಣ, ಅನಾಥ ಜೀವಗಳ ಆಕ್ರಂದನ…. ಉಹುಂ…. ಗೆಲುವಿನ ಬೆನ್ನೇರುವ ಹಠದಲ್ಲಿ ಕುರುಡಾಗಿವೆ ಕಣ್ಣುಗಳು.. ಮರುಭೂಮಿಯಾಗಿದೆ ಮನಸುಗಳು…ಬಾಂಬ್ ಮಿಸ್ಯೈಲು ಗಳ ಹೊಗೆ ಬಾನಂಗಳ ತುಂಬುತ್ತಿದೆ. ಗಗನ ಮುನಿದರೆ ಭುವಿಗೆ ಉಳಿಗಾಲವುಂಟೇ? ಕಣ್ಣಿಗೆ ಕಾಣದ ಸ್ವಂತ ಅಸ್ತಿತ್ವವೇ ಇಲ್ಲದ ವೈರಸ್ ಕಳಿಸಿದ ಪಾಠವನ್ನು ನಾವು ಎಷ್ಟು ಬೇಗ ಮರೆತೆವು!! ಮೊಸಳೆಯಂತೆ ಬಾಯಿ ತೆರೆದು ಕಡಲ ದಡದಲ್ಲಿ ಆನಂದಿಸುತ್ತಿದ್ದ ಜನರನ್ನು ನುಂಗಿ ಮತ್ತೆ ಹೊರಗೆಸೆದ ಜಲ ಪ್ರಳಯಗಳ ಭೀಕರತೆ, ಬದುಕಿನ ನಶ್ವರತೆ ಎಲ್ಲವೂ ಈಗ   ಮತ್ತೆ ಅಸ್ಪಷ್ಟವಾಗುತ್ತಾ ಸಾಗಿದೆ. ಭೂಮಿಯ ಒಡಲು ಮುನಿದು ಮನುಷ್ಯನ ಅಸ್ತಿತ್ವವನ್ನೇ ನಡುಗಿಸಿದ , ನಂಬಿಕೆಯನ್ನೇ ಬುಡಮೇಲು ಮಾಡಿದ ಉದಾಹರಣೆಗಳೂ ಮನುಷ್ಯನಿಗೆ ತನ್ನಷ್ಟಕ್ಕೆ ತಾನು ಬದುಕಬೇಕು ಎನ್ನುವ ನೀತಿ ಕಲಿಸಿಲ್ಲ. ಕೇವಲ ದಾಹ!! ಭೂತಳವನ್ನು ಬಗೆದು ನಿಧಿ ಶೋಧ, ಗಣಿಗಾರಿಕೆ, ಅಭಿವೃದ್ಧಿ ಕಾರ್ಯಗಳು… ನೀರಿನ ಮೂಲಗಳನ್ನು ಬರಿದು ಮಾಡುವ, ಮಲಿನಗೊಳಿಸುವ ಕೆಲಸಗಳು,ಕಾರ್ಖಾನೆಗಳ ಮಿತಿ ಮೀರಿದ ಹೊಗೆ, ಸಿಡಿಮದ್ದು,ಬಾಂಬ್ ಇತ್ಯಾದಿಗಳಿಂದ ಆಗಸದೆತ್ತರಕ್ಕೆ ಹೊಗೆ ಚಿಮ್ಮಿಸಿ ಇಡೀ ವಾತಾವರಣ ಕೆಡಿಸುವ, ವಿಜಯ ಸಾಧಿಸುವ, ಇಂಧನ ಮೂಲಗಳಿಗೆಲ್ಲ ಬೆಂಕಿ ಹಾಕಿ ಆ ಹೊಗೆಯಲ್ಲಿಯೇ ಕೇಕೆ ಹಾಕಿ ಬೀಗುವ ಕಾರ್ಯಗಳು ನಡೆಯುತ್ತಲೇ ಇವೆ. ನೈಸರ್ಗಿಕ ಸಂಪನ್ಮೂಲಗಳು ಜಗತ್ತಿನ ಸಕಲ ನಾಗರಿಕ ಚಟುವಟಿಕೆಗಳಿಗೆ ಮೂಲ ಆಧಾರ. ಅವುಗಳನ್ನು ಕಾಪಿಟ್ಟುಕೊಂಡರೆ ಕೊಡು ಕೊಳ್ಳುವಿಕೆಯ ಮೂಲಕ ಜನರು ಬಳಸಿಕೊಳ್ಳಬಹುದು. ಸುಟ್ಟು ಸಾಧಿಸುವುದೇನು?? ಭಾರೀ ಪ್ರಮಾಣದ ಕಟ್ಟಡಗಳನ್ನು ನಿರ್ಮಿಸುವುದು ನಂತರ ಕೆಡಹು ವುದು   ಭೂತಾಯಿಯ ಸಹನೆಯನ್ನು ಪರೀಕ್ಷೆ ಮಾಡುವುದು. ಭೂಮಿ ಸಹನಾಮಯಿ, ಹೌದು. ಆದರೆ ಸಹನೆಗೂ ಮಿತಿ ಇದೆ. ಭೂಮಾತೆ ನಮ್ಮನ್ನೆಲ್ಲ ಕ್ಷಮಿಸುವಷ್ಟು ಕಾಲ ಭೂಮಿಯ ಮೇಲ್ಪದರ ಚೆನ್ನಾಗಿಯೇ ಕಾಣುತ್ತದೆ. “ನೆಲದ ಒಡಲಿನೊಳಗೇನು ನಡೆವುದೋ ಎಲ್ಲಿ ಕುಳಿತಿಹನೊ ಕಲಾವಿದ” ಎನ್ನುವ ಚೆನ್ನವೀರ ಕಣವಿಯವರ ಹಾಡಿನ ಸಾಲಿನಂತೆ ಭೂಮಿಯ ಅಂತರಾಳದಲ್ಲಿನ ಒತ್ತಡ ಯಾವ ಮಟ್ಟದಲ್ಲಿದೆ ಎನ್ನುವುದನ್ನು ನಾವು ಯಾರೂ ಅರಿಯೆವು. ಗಾಳಿಯಲ್ಲಿ ಹೆಚ್ಚುತ್ತಿರುವ ಹಾನಿಕಾರಕ ಪದಾರ್ಥಗಳಿಂದ ಈಗಾಗಲೇ ಮನುಷ್ಯ ಅನೇಕ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಅದಕ್ಕೆ ಮತ್ತಷ್ಟು ವಿಷ ಅನಿಲಗಳು ಸೇರಿಕೊಳ್ಳುತ್ತಲೇ ಇವೆ. ವಿಜ್ಞಾನಿಗಳು, ಪರಿಸರ ತಜ್ಞರು ಎಚ್ಚರಿಕೆ ಕೊಡುತ್ತಲೇ ಇದ್ದಾರೆ. ವಾಹನದ ಹೊಗೆ, ಕಾರ್ಖಾನೆ ವಿದ್ಯುತ್ ಸ್ಥಾವರಗಳ  ಹೊಗೆ, ಕಲ್ಲಿದ್ದಲು ಪೆಟ್ರೋಲಿಯಂ ಉತ್ಪನ್ನಗಳನ್ನು ಉರಿಸುವುದರಿಂದ ಬಿಡುಗಡೆಯಾಗುವ ಧೂಳು, ( ಏರೋಸಾಲ್ ) ಪ್ಲಾಸ್ಟಿಕ್, ಕಸ, ಕೃಷಿ ತ್ಯಾಜ್ಯಗಳನ್ನು ಸುಡುವ ಸಂದರ್ಭ ಉಂಟಾಗುವ ಹೊಗೆ, ಕಾಡ್ಗಿಚ್ಚಿನ ಹೊಗೆ, ರೆಫ್ರಿಜರೇಟರ್ ಮತ್ತು ಏರ್ ಕಂಡೀಷನರ್ ಗಳಿಂದ ಹೊರಹೊಮ್ಮುವ ಕ್ಲೋರೋಫ್ಲೋರೋ  ಕಾರ್ಬನ್ ಗಳು ಇವೆಲ್ಲವುಗಳಿಂದ ಮಲಿನಗೊಂಡ ಗಾಳಿ -ಗಗನಕ್ಕೆ ಯುದ್ಧ ಎನ್ನುವ ಸ್ವಯಂಕೃತ ಅಪರಾಧಗಳಿಂದ ಮನುಷ್ಯ ಮತ್ತಷ್ಟು  ವಿಷಾನಿಲಗಳನ್ನು ಸೇರ್ಪಡೆಗೊಳಿಸುತ್ತಿದ್ದಾನೆ. ಯುದ್ಧದಿಂದ ಮನುಷ್ಯರು ಎದುರಿಸುತ್ತಿರುವ ಸಮಸ್ಯೆಗಳು, ಇಂಧನ ಸಮಸ್ಯೆಯ ಗೋಳು ದಿನ ನಿತ್ಯದ ವರದಿಯೇ ಆಗಿದೆ. ಭೂಮಿಯ ಮೇಲಿನ ಮನುಷ್ಯನ ಎಲ್ಲ ಚಟುವಟಿಕೆಗಳೂ ಇಂಧನದ ಮೇಲೆ ಅವಲಂಬಿತವಾಗಿದೆ. ಇಂಧನವಿಲ್ಲದ ನಮ್ಮ ಬದುಕಿನ ಪಥ ಹೇಗಿರಬಹುದು ಎನ್ನುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಯುದ್ಧ ತಂದಿತ್ತ ಇಂಧನ ಸಮಸ್ಯೆ ಕಣ್ಮುಂದೆ ಕಾಣುತ್ತಿದೆ.. ನಾವು ಮನುಜರು ಇದರ ಬಗ್ಗೆ ದನಿ ಎತ್ತುತ್ತಿದ್ದೇವೆ. ಪ್ರಕೃತಿಯ ಮೇಲೆ ಎಂಥ ದುಷ್ಪರಿಣಾಮ ಬೀರುತ್ತಿದೆ ಈ ಯುದ್ಧ!! ಮೌನವಾಗಿದೆ ಗಗನ.. ಮೌನವಾಗಿದೆ ಕಡಲು!! ಮಾನವನ ಬದುಕಿಗೆ ಅನಿವಾರ್ಯವಾದ ಕೆಲಸ – ಕಾರ್ಯಗಳಿಂದ ಪರಿಸರ ಮಲಿನ ಗೊಳ್ಳುವುದನ್ನು ತಡೆಯಲು ಕಷ್ಟ ಸಾಧ್ಯ. ಪರ್ಯಾಯ ವ್ಯವಸ್ಥೆಗಳೂ ಇಲ್ಲ ಎನ್ನಬಹುದು. ಆದರೆ ಒಬ್ಬ ವ್ಯಕ್ತಿಯ ಅಥವಾ ಒಂದು ದೇಶದ ಪ್ರತಿಷ್ಠೆಗಾಗಿ ಇಡೀ ಮನುಕುಲ ನರಳುವ ಸ್ಥಿತಿಗೆ ಬರುವ ಪರಿಸ್ಥಿತಿಯನ್ನು ಇಂದಿನ ಯುದ್ಧ ಸನ್ನಿವೇಶಗಳು ನಿರ್ಮಾಣ ಮಾಡುತ್ತಿವೆ. ಧನದಾಹ, ಹೆಸರು, ಕೀರ್ತಿಯ ಹಂಬಲ, ಅಧಿಕಾರದ ಅಮಲು  ಇವೆಲ್ಲವುಗಳಿಂದ ಪ್ರಕೃತಿಯನ್ನು ಅಲ್ಲಗಳೆವ ಮನುಷ್ಯರನ್ನು ಪಂಚಭೂತಗಳೇ ತಮ್ಮ ತಮ್ಮ ಕ್ರಿಯೆಗಳ ಮೂಲಕ  ” ನಮ್ಮ ಒಡೆತನ ನಿಮ್ಮ ಮುಷ್ಟಿಯಲ್ಲಿಲ್ಲ  ” ಎಂದು ಹೇಳುವ ದಿನಗಳು ದೂರವಿಲ್ಲ. ಚರಾಚರಗಳಲ್ಲಿ ಜೀವ ಅರಳಿಸಿ ನಗುತ್ತಿರುವ ಭೂಮಿಯ ಸಹನಾ ಗುಣವನ್ನು, ತಂಗಾಳಿಯ ಮೂಲಕ ಮುದಗೊಳಿಸುವ ವಾತಾವರಣದ ಹೃದಯವಂತಿಕೆಯನ್ನು, ಸಕಾಲದಲ್ಲಿ ಮೋಡ ಕಟ್ಟಿ ಮಳೆ ಸುರಿಸಿ ಬೆಳೆಯನ್ನು ಹಸಿರಾಗಿಸುವ ಆಗಸದ ಹಿರಿತನವನ್ನು ನಿರ್ಲಕ್ಷಿಸುವ ನಮಗೆ ಮುಂದಿನ ಬವಣೆಯ ದಿನಗಳ ಅರಿವಿಲ್ಲ. ಪ್ರಕೃತಿಯ ಸವಾಲುಗಳನ್ನು ಎದುರಿಸಲು ಸಿದ್ಧರಾಗುವ ಅನಿವಾರ್ಯ ಸ್ಥಿತಿ ಬರುವ ಮುನ್ನ ಮನುಕುಲ ಜಾಗೃತಗೊಳ್ಳಬೇಕಿದೆ. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?? ಯುದ್ಧದಾಹಿಗಳಿಗೆ ತಿಳಿ ಹೇಳುವವರು ಯಾರು? ಜಯಲಕ್ಷ್ಮಿ ಕೆ,

“ನೀಲ ಗಗನ ತಿಳಿನೀರ ಸಾಗರಗಳ ಒಡೆತನ ಯಾರದ್ದು?” ಜಯಲಕ್ಷ್ಮಿ ಕೆ Read Post »

ಪುಸ್ತಕ ಸಂಗಾತಿ

ಬಡಿಗೇರ ಮೌನೇಶ್ ಅವರ ಕವನ ಸಂಕಲನ ‘ಬಿಸಿಲೇ ಬೆಳದಿಂಗಳು’ ಒಂದು ಅವಲೋಕನ ಡಾ. ಸಂಗಮೇಶ ಎಸ್. ಗಣಿ

ಪುಸ್ತಕ ಸಂಗಾತಿ ಡಾ. ಸಂಗಮೇಶ ಎಸ್. ಗಣಿ ಬಡಿಗೇರ ಮೌನೇಶ್ ಅವರ ಕವನ ಸಂಕಲನ ‘ಬಿಸಿಲೇ ಬೆಳದಿಂಗಳು’ ಒಂದು ಅವಲೋಕನ ಮೌನ ಧ್ಯಾನಗಳ ಫಲ ಮೌನೇಶ್ ರ ‘ಬಿಸಿಲೇ ಬೆಳದಿಂಗಳು’        ಬಯಲು ಸೀಮೆಯ ಬಿಸಿಲನ್ನು ಬೆಳದಿಂಗಳಾಗಿಸುವ ಆಶಯವನ್ನು ಹೊತ್ತುಕೊಂಡಿರುವ ಕವಿ ಬಡಿಗೇರ ಮೌನೇಶ್ ಅವರ ‘ಬಿಸಿಲೇ ಬೆಳದಿಂಗಳು’ ಕವನ ಸಂಕಲನವು ಮಾನವ ಕುಲದ ಬೇಗುದಿಗಳನ್ನು ಬಯಲು ಮಾಡುತ್ತಲೇ ಬಾಳಿನಲ್ಲಿ ಬೆಳದಿಂಗಳಾಗುವ ಹಂಬಲವನ್ನು ಪ್ರಕಟಿಸುತ್ತದೆ.       ಬಿಸಿಲೇ ಬೆಳದಿಂಗಳಲ್ಲಿ ಒಟ್ಟು 36 ಕವಿತೆಗಳಿವೆ. ಇಲ್ಲಿ ಪ್ರೀತಿ, ಪ್ರೇಮ, ವಿರಹ, ಸ್ನೇಹ, ಅಪ್ಪ-ಅಮ್ಮ ಮಗಳು,ಮನುಷ್ಯ ಸಂಬಂಧಗಳು, ಮನುಷ್ಯನ ಮುಖವಾಡ, ಮನಸ್ಸಿನ ಸಂಕಟ, ತಲ್ಲಣ, ತಳಮಳ, ಕನಸು ಕನವರಿಕೆ, ಪರಿಸರ,  ನಾಡು ನುಡಿ ಅಭಿಮಾನ, ಯುದ್ಧ, ಬುದ್ಧ,  ಅಂಬೇಡ್ಕರ್, ಸ್ತ್ರೀ ಸಂವೇದನೆ, ಮನಸ್ಸಿನ ವೇದನೆ, ಸಂಕಟ, ಸಂಭ್ರಮ, ಸಂಘರ್ಷ, ಬದುಕು, ಬೆಳಕು ಎಲ್ಲವೂ ಇವರ ಕಾವ್ಯಕ್ಕೆ ವಸ್ತುಗಳಾಗಿ ಒದಗಿ ಬಂದಿವೆ.         ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮುಖ್ಯ ಅವಸ್ಥೆಗಳಲ್ಲಿ ತಾರುಣ್ಯವೂ ಒಂದು ಹೊಸ ಹುರುಪು ಮತ್ತು ಕನಸು, ಕನವರಿಕೆ, ಉನ್ಮಾದ ಉದ್ವೇಗಗಳೆಲ್ಲವೂ ಇರುವ ಈ ಹಂತದಲ್ಲಿ ಜಾಗರೂಕತೆ ಅಗತ್ಯ ಎಂಬುದನ್ನು ಅರಿತ ಕವಿತಾರುಣ್ಯಸಪ್ತಸಾಗರಗಳ ದಾಟಿಮುಗಿಲ ನಕ್ಷತ್ರಗಳ ತರುವವ್ಯರ್ಥ ಕನಸಲ್ಲಅವಕಾಶ ಸಿಕ್ಕರೆಆಕಾಶಕ್ಕೆ ಏಣಿ ಹಾಕುವಸಾರ್ಥಕ ಹೊಂಗನಸು  (ತಾರುಣ್ಯ) ಎಂದು ಹೇಳುತ್ತಲೇ ‘ಅದು ದೇಹ ಸಂಬಂಧಿಯಲ್ಲ ಆತ್ಮ ಮನಸುಗಳ ಬಂಧಿ, ಅಸಾಧ್ಯವ ಸಾಧ್ಯವಾಗಿಸುವ ಭಾವಾಂಬುಧಿ’ ಎನ್ನುತ್ತಾನೆ. ಅವಳಿಲ್ಲದೆ ಅವನಿಲ್ಲ. ಅವನಿಗೆ ಅವಳೇ ಎಲ್ಲ. ಅವಳೆಂದರೆ ಅವನ ಪಾಲಿಗೆ ಕವಿತೆ. ಕವಿತೆ ವ್ಯಾಖ್ಯಾನಕ್ಕೆ ಒಗ್ಗದ್ದು, ಹಾಗೆಯೇ ಅವಳೂ ಸಹ ಅರಿತಷ್ಟು ಆಳ, ಅರಿವಿಗೆ ನಿಲುಕದ ಅವಳು ನಿಗೂಢ. ಮೊದಲಲ್ಲಿ;   ಅವಳೆಂದರೆಎಂದೋ ಬರೆದು ಮುಚ್ಚಿಟ್ಟ ಅನಂತ ನೆನಪುಗಳು ತುಂಬಿದ್ದ ಆತ್ಮಕಥೆಯಂತೆಸನಿಹವಿದ್ದರೂ ಕೈಗೆಟುಕದ ಕೊನೆಯಾಗದ ಖುಷಿಯಂತೆ (ಅವಳೆಂದರೆ)     ಎನ್ನುವ ಕವಿಗೆ ಸನಿಹವಿದ್ದದ್ದೆಲ್ಲ ಸವಿಯಾದುದು, ಸಹ್ಯವಾದುದು. ಆತ್ಮಕಥೆಯಲ್ಲಿ ಎಲ್ಲ ವಿವರಗಳು ಆಪ್ತ, ನಿಚ್ಚಳ. ಅದೇ ರೀತಿಯಲ್ಲಿ ಆರಂಭದಲ್ಲಿ ಅವಳ ಸಾಮೀಪ್ಯ, ಸಖ್ಯ ಹಿತವಾದುದು. ಕ್ರಮೇಣ ಅವಳೆಂದರೆ ಬದುಕಿನ ಮರುಭೂಮಿಯ ಮರೀಚಿಕೆ, ಹಿಂಬಾಲಿಸುವ ನೆರಳು ಎಂಬಂತಾಗುತ್ತದೆ. ಕೊನೆಗೆ; ಅವಳೆಂದರೆಎಷ್ಟು ಬಾರಿ ಓದಿದರೂಅರಿವಿಗೆ ನಿಲುಕದಅರ್ಥವಾಗದ ಕವಿತೆಯಂತೆ (ಅದೇ)   ಎಂಬುದಾಗಿ ಶರಾ ಬರೆಯುವನು. ಆತ್ಮಕಥೆ ಮತ್ತು ಕಾವ್ಯ  ಪರಿಭಾಷೆಗಳಲ್ಲಿ ಪ್ರೇಮದ ಸ್ವರೂಪವನ್ನು ನಿರೂಪಿಸುವುದು ಇಲ್ಲಿ ವಿಶೇಷ. ಬದುಕಿನಲ್ಲಿ ಅವಳ ಇರುವಿಕೆ ಶ್ರಾವಣ ಮಾಸದಂತೆ ಸಂತಸ ಸಂಭ್ರಮವನ್ನು ಹೊತ್ತು ತರುತ್ತದೆ.   ಧನ್ಯನಾದೆ ಮಾನ್ಯನಾದೆ   ಗೆಳತಿ ನಿನ್ನ ಸನಿಹಕೆ    ಇಷ್ಟು ದಿನದ ವಿರಹ ಬೇಗೆ    ಎಲ್ಲ ಮರೆತೆ ಇಂದಿಗೆ (ಮತ್ತೆ ಬಂತು ಶ್ರಾವಣ) ಎನ್ನುವ ಕವಿಗೆ ಅವಳ ಸಾಮೀಪ್ಯದ ಸುಖದೊಳಗೆ ವಿರಹದ ಬೇಗೆಯಲ್ಲ ಆರಿ ತಣ್ಣಗಾಗುತ್ತದೆ. ಅವಳಿಗಾಗಿ ಪಟ್ಟ ಪಾಡು, ವೇದನೆಗಳೆಲ್ಲ ಈಗ ಮಾಯವಾಗಿದೆ. ಹಿಂದಿನದನ್ನೆಲ್ಲ ಮತ್ತೆ ಮರು ನೆನಪಿಸಿಕೊಳ್ಳುವುದು ಬೇಡ ಎಂದು ತಿಳಿದು ;ಕಳೆದ ಕಾಲದ ಮಾತದೇಕೆ ಲೆಕ್ಕವಿಲ್ಲದ ವೇದನಎಲ್ಲ ಮರೆಸಿ ಚಿಗುರಿ ನಿಂತುಮತ್ತೆ ಬಂತು ಶ್ರಾವಣ (ಅದೇ) ಎಂಬುದಾಗಿ ಹೇಳುತ್ತಾ, ಕಳೆದ ಕಾಲದ ನೆನಪುಗಳ ಗೊಡವೆಗೆ ಹೋಗದೆ ನೋವು ನಲಿವುಗಳನ್ನು ಸಮವಾಗಿ ಸ್ವೀಕರಿಸುವ ಸಮತೋಲನ ಭಾವ ಮುಖ್ಯ ಎಂಬುದನ್ನು ಅರುಹುತ್ತಾನೆ.  ನೀನು ಒಲವಿನೂರಿನ ಸಿರಿಯ ತೋರಲುಕೈಹಿಡಿದು ಹೊರಟೆನಾನು ಹಿಂಬಾಲಿಸಿದೆ (ಒಲವಿನ ಹಾದಿ) ಎನ್ನುವ ಕವಿಗೆ ‘ನನ್ನ ಮೌನಕ್ಕೆ ಮಾತಾಗಿ, ಮಾತುಗಳಿಗೆ ದನಿಯಾಗಿ ಸುಂದರ ಹಾಡಾದ ಪರಿ’ ಅನನ್ಯ. ಪ್ರೇಮದ ದಾರಿಯಲ್ಲಿ ನಡೆಯುವುದೇ ಸಿಹಿಯಾದ ಅನುಭೂತಿ. ‘ಒಲವು ನಡೆಸಿದ ಈ ಹಾದಿ ಖಂಡಿತ ಕಹಿಯಲ್ಲ ಹಿತವಾಗಿ ಕಾಡುವ ಇಂಪಾದ ಹಾಡು’ ಎನಿಸುತ್ತದೆ. ಹೀಗೆ ಪ್ರೇಮದ ಪರಿಯನ್ನು ಪರಿಚಯಿಸುವ ಕವಿಗೆ ಅದೊಂದು ಸುಂದರ ಅನುಭೂತಿ. ಕಾವ್ಯದ ಸಾಮಾಜಿಕ ಪ್ರಜ್ಞೆ   ಸಾಮಾಜಿಕ ಸನ್ನಿವೇಶಗಳೊಂದಿಗೆ ಸಂವಹಿಸದ ಸಾಹಿತ್ಯ ಸಾಯುತ್ತದೆ. ಈ ಹಿನ್ನೆಲೆಯಲ್ಲಿ ಕವಿ ಸಾಮಾಜಿಕ ಪ್ರಜ್ಞೆ ಮೆರೆಯುತ್ತಾನೆ. ದೇಶಕ್ಕಾಗಿ ದುಡಿಯುವ ಪ್ರಾಮಾಣಿಕ ಸೈನಿಕರ ಅಗತ್ಯತೆಯನ್ನು  ಪ್ರತಿಪಾದಿಸುವುದರ ಜೊತೆಗೆ ‘ಕದನ ಬಯಸುವ ಕೇಡಿಗಳಲ್ಲ ನಾವು ದೇಶದ ಏಳ್ಗೆಗೆ ನಿಷ್ಠೆಯಿಂದ ದುಡಿವ ಶ್ರಮ ಜೀವಿಗಳು’ (ನಾವು) ಎನ್ನುವುದು ವಿಶೇಷ. ಶಾಂತಿ ಕದಡುವ ಕಿಡಿಗೇಡಿಗಳೆಲ್ಲ ನಾವುಬಂಜರೆದೆಗಳ ಮೇಲೆಶಾಂತಿಯ ಹೂ ಗಿಡಗಳ ಬೆಳೆಸುವ ಕುಶಾಗ್ರಮತಿಗಳುಜಗಕೆ ಶಾಂತಿ ಸಾರುವ ಭಾರತೀಯರು ನಾವು (ಅದೇ)     ದೇಶಭಕ್ತಿ,  ಅಭಿಮಾನ, ರಾಷ್ಟ್ರಪ್ರೇಮ ಎನ್ನುವುದು ಬರೀ ಮಾತು ಭಾಷಣಗಳಿಗೆ ಸೀಮಿತವಾಗದೆ ಅದು ಬದುಕಿನ ಭಾಗವಾಗಬೇಕೆಂಬ ಅದಮ್ಯ ಬಯಕೆ ಕವಿಯದು. ಸೈನಿಕರ ತ್ಯಾಗ, ಬಲಿದಾನಗಳು ಎಂದಿಗೂ ವ್ಯರ್ಥವಾಗುವುದಿಲ್ಲ. ಬದಲಾಗಿ ಸಾರ್ಥಕ ಭಾವವಾಗಿ ಜೀವ ಚೈತನ್ಯವಾಗಿ ಮನಸ್ಸಿನಾಳದಲ್ಲಿ ಜೀವಂತವಾಗಿರುತ್ತವೆ . ಹೀಗಾಗಿ ಕವಿವ್ಯರ್ಥವಾಗದು ಬಲಿದಾನ ಸಾರ್ಥಕವು ಪ್ರಾಣಾರ್ಪಣ (ಅಮರ ನಿಮ್ಮ ಜೀವನ)  ಎಂದು ಹೆಮ್ಮೆ,  ಅಭಿಮಾನದಿಂದ ಹೇಳುತ್ತಾನೆ. ಬಂಜರಾದ ಎದೆಗಳಲ್ಲಿ ಶಾಂತಿಯ ಹೂಗಳನ್ನು ಅರಳಿಸುವ ಮಹತ್ವಾಕಾಂಕ್ಷೆ ಪ್ರಕಟಿಸುವ ಕವಿತೆ ಹೃದಯದಲ್ಲಿ ವಿಕೃತಿ ವಿಕಾರ ವಿಲಕ್ಷಣಗಳಿಗೆ ಜಾಗವಿಲ್ಲ. ಯುದ್ಧದ ಭೀತಿಯಲ್ಲಿ ಕರಾಳ ಕತ್ತಲೆಯಲ್ಲಿ ಅಮಾಯಕರ ನೋವು, ನರಳಾಟಕ್ಕೆ ಕೊನೆ ಇರುವುದಿಲ್ಲ. ಇಂತಹ ವಿಷಮ ಗಳಿಗೆಯಲ್ಲಿಯೇ ಕವಿ ಮಾನವೀಯತೆಗಾಗಿ ಹಂಬಲಿಸುವುದು;  ಅಮಾನುಷ ಹಿಂಸೆಗೆ ಸಿಕ್ಕ ಅಮಾಯಕ ಗಾಯಾಳುಗಳ ಕಂಡು ಮರುಗಿದ ಮಮತಾಮಯಿ….ಜೀವ ಕಾರುಣ್ಯದ ಮಡುವು.. (ಆರದ ದೀಪ) ಫ್ಲಾರೆನ್ಸ್ ನೈಟಿಂಗೇಲ್ ಅವರನ್ನು ನೆನಪಿಸುವ ಕವಿ ಈ ಕರಾಳ ಕತ್ತಲಮಯ ಜಗತ್ತಿಗೆ ಆರದ ದೀಪವಾಗಿ ಒದಗಿ ಬರಬೇಕು ಎಂದು ಆಶಿಸುತ್ತಾನೆ.    ಜಾತಿ ಮತ ಪಂಗಡ ಇವೆಲ್ಲವೂ ಈ ಸಮಾಜಕ್ಕೆ ಅಂಟಿದ ರೋಗಗಳು. ಇವು ಎಂದಿಗೂ ಮನುಷ್ಯ ಬದುಕನ್ನು ನುಂಗಿ ನೀರು ಕುಡಿಯುತ್ತಿವೆ.   ಆಪೋಷಣೆ ಮಾಡುತ್ತಿವೆ. ಇಡೀ ವಿಶ್ವವೇಒಂದು ಗೂಡಾದರೆ ಎಷ್ಟು ಚೆಂದ! ಕೂಡಿ ಬದುಕಿದರೆ ಅದರೊಳಗೆ ಜಗದ ಜನರಲ್ಲ ಭೇದ ವಿರದ ಹಕ್ಕಿಗಳ ಹಾಗೆ ಎಷ್ಟು ಚಂದ! (ಎಷ್ಟು ಚಂದ!) ಎಂಬುದಾಗಿ ಸೌಹಾರ್ದ, ಸಹಬಾಳ್ವೆಗೆ ಹಂಬಲಿಸುವ ಕವಿ ಸಮಾಜ, ದೇಶ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರವನ್ನೂ ಸೂಚಿಸುವುದು ಹೀಗೆ;  ಶೋಷಣೆ ವರ್ಣದ್ವೇಷಗಳ ಪೊರೆ ಕಳಚಿಯುದ್ಧ, ಭಯೋತ್ಪಾದನೆಗಳ ಭಯ ಬಿಡಿಸಿಧರ್ಮಾoಧತೆ, ಕೋಮುದಳ್ಳುರಿಯ ದಹಿಸಿ ಅಸಮಾನತೆಯ ತೆರೆಸರಿಸಿ ಸಮಾನತೆಯ ರೆಕ್ಕೆಗಳ ಚಾಚಿ ಸ್ವೇಚ್ಛೆಯಲಿ ಹಾರಿದರೆ ಸ್ವಚ್ಛoದ ಮುಗಿಲೆತ್ತರ ನಾವೆಲ್ಲ (ಅದೇ)   ಎನ್ನುವುದು ವಿವೇಚನಾರ್ಹ. ಸಮಾಜದ ಅನೇಕ ಸಮಸ್ಯೆಗಳಿಗೆ ಬುದ್ಧ, ಬಸವ, ಪಂಪ, ಗಾಂಧೀಜಿ, ಅಂಬೇಡ್ಕರ್, ಮದ್ದಾಗಿ ಒದಗುತ್ತಾರೆ. ಈ ಬಗ್ಗೆ ಕವಿ ದಮನಿತರಿಗೆ, ದಲಿತರಿಗೆ ದನಿಯ ನೀಡಿದ ದ್ರಷ್ಟಾರಜಾತಿ ಗೋಡೆಯ ಕುಟ್ಟಿ ಕೆಡವಲು ಕರೆಯಕೊಟ್ಟ ದಿಟ್ಟ ಧೀರ  ‘ತುಳಿಯುವವರ ನೆತ್ತಿಯ ಮೇಲೆ ಕಾಲಿಟ್ಟು ಬೆಳೆದೆ ಬಲು ಎತ್ತರ’ (ದಮನಿತರ ನೇಸರ) ಎಂಬುದಾಗಿ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳುವನು. ಅಲ್ಲದೆ ಅವರನ್ನು ‘ನೊಂದು ಬೆಂದವರೆದೆಗೆ ಭರವಸೆಯ ಬಿತ್ತಿದ ಮಾನವತೆಯ ಆಗರ..’ ಎಂಬುದಾಗಿ ಬಣ್ಣಿಸುವನು. ದೇವರನ್ನೇ ದೂರುವ ಧೈರ್ಯದಿಂದ ಪ್ರಶ್ನೆ ಮಾಡುವ ಕವಿ ಅವತರಿಸಿ ಬರುವುದಾದರೆ, ಚಳಿಗಾಳಿಗೆ ಮೈಯೊಡ್ಡಿ ದುಡಿಯುವ ಬಡವರ ಗೋಳು ನೋಡಲು ಬಾ ಎಂದು (ಅವತರಿಸಿ ಬಾ) ಕರೆಯುವುದು ಕವಿಯ ಸಾಮಾಜಿಕ ಕಳಕಳಿಯ ದ್ಯೋತಕವಾಗಿದೆ. ಗಾಂಧೀಜಿ ಅಪಮೌಲ್ಯಕ್ಕೆ ಒಳಗಾಗುತ್ತಿರುವ ಈ ಹೊತ್ತಿನಲ್ಲಿ ಕವಿ ಪ್ರಿಯ ಗಾಂಧಿ!ನೀನು ಹುಟ್ಟಿದ ದಿನ ಮಾತ್ರ ನೆನೆಯುತ್ತೇವೆ ನಿನ್ನ, ತತ್ವಸಾರವನನುಪತ್ರಿಕೆಯ ಲೇಖನಗಳಲಿ ವೇದಿಕೆಯ ಭಾಷಣಗಳಲಿ.. (ಪ್ರಿಯ ಗಾಂಧಿ) ತತ್ವಾನುಷ್ಠಾನದ ಅಗತ್ಯತೆಯನ್ನು ಮನಗಾಣಿಸುತ್ತಾರೆ. ಧರ್ಮ ಒಂದು ಬಗೆಯ ಅಫೀಮು. ಅದು ಎಲ್ಲರನ್ನೂ ಮಂಪರು ಮಾಡುತ್ತಿದೆ. ಧರ್ಮ ಮಾನವ ಒಳಿತಿಗಿರಬೇಕೆ ಹೊರತು ಕೇಡಿಗಲ್ಲ. ನಮಗೆ ಎಂಥ ಮನುಷ್ಯರ ಅಗತ್ಯವಿದೆ ಎಂಬುದನ್ನುಧರ್ಮದ ಅಫೀಮನ್ನು ತಲೆಗೇರಿಸಿಕೊಡುದ್ವೇಷದ ಕಿಡಿ ಉಗುಳುವವ್ಯಗ್ರ ಮನುಷ್ಯರಲ್ಲ ನಮಗೆ ಬೇಕಿರುವುದು…. (ನಮಗೆ ಬೇಕಿರುವುದು) ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಪಂಪನುಕ್ತಿಯನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಬುದ್ಧನಂಥ ಕರುಣಾಮಯಿಗಳ ಅವಶ್ಯಕತೆ ಇದೆ. ಎಂಬುದನ್ನು ಸಾರಿದ್ದಾನೆ. ಸಾಮರಸ್ಯದ ಬಾಳಿಗೆ ಸಹನೆ, ಸೌಹಾರ್ದತೆ ಅತ್ಯಗತ್ಯ.  ಸಹನೆ, ಸೌಹಾರ್ದತೆಗಳಿಲ್ಲದ ಬರಡು ಹೃದಯದೊಳಗೆ ಹರಿದಾಡಿಹಸಿರು ಚಿಗುರಿ ಜೀವ ತುಂಬಿ ಸಮೃದ್ಧವಾಗಿ ತೊನೆಯಲು ಮನಸ್ಸು ನದಿಯಾಗಬೇಕು (ಮನಸ್ಸು ನದಿಯಾಗಬೇಕು) ತನ್ನೆಲ್ಲಾ ಮಿತಿಗಳನ್ನು ಮೀರಿಕೊಳ್ಳಲು ಮನುಷ್ಯ ನದಿಯಾಗಬೇಕು ಎಂದು ಆಶಿಸುವುದು ಬಹಳ ದೊಡ್ಡ ಮೌಲ್ಯ.  ಕಾವ್ಯದಲ್ಲಿ ಜೀವನ ಜಿಜ್ಞಾಸೆ      ಈ ಜೀವನವೇ ಸೋಜಿಗ ಅರ್ಥಮಾಡಿಕೊಳ್ಳಲು ಹೋದಷ್ಟು ನಿಗೂಢ. ಆದ್ದರಿಂದ ಕವಿಗೂ ಈ ಜಿಜ್ಞಾಸೆ ತೀವ್ರವಾಗಿ ಕಾಡಿದೆ.ಓ ಬದುಕೇ!ಎಷ್ಟೊಂದು ವಿಸ್ಮಯ ನಿನ್ನೊಡಲು ಆಳ ವಿಸ್ತಾರಗಳರಿಯದ ಕಡಲು! (ಓ ಬದುಕೇ! ) ಅನೇಕ ದಾರ್ಶನಿಕರು, ಸಾಧು ಸಂತರು, ಶರಣರು ಎಲ್ಲರೂ ಈ ಬದುಕಿನ ಬಗೆಯನ್ನು ಬೆದಕಿದವರೇ. ಆದರೆ ಅರ್ಥ ಮಾತ್ರ ಸಿಕ್ಕಿಲ್ಲ. ಈ ಬದುಕೇ ಅಚ್ಚರಿಯ ಆಗರ. ಮನುಷ್ಯ ಮುಖವಾಡಗಳನ್ನೇ ಹಾಕಿಕೊಂಡಿರುವುದರ  ಕುರಿತು ಕಳವಳಿಸುವ ಕವಿ, ಅದನ್ನು ಕಾಳಜಿ, ಪ್ರಾಮಾಣಿಕ, ಪರಿಶುದ್ಧ ಹೃದಯದಿಂದ,  ಮಾನವೀಯ ಅಂತಃಕರಣದಿಂದ ಬಾಳಬೇಕೆಂಬ ನಿಲುವನ್ನು ತಾಳುತ್ತಾನೆ. ಕರುಣೆಗಳೆಲ್ಲ ಕಕ್ಕುಲತೆಗಳೆಲ್ಲ ಮುಖವಾಡಗಳ ಗೋಸಂಬಿ ತನಕೆ ಮೋಸ ಹೋಗಿವೆನಿಷ್ಠೆ, ಪ್ರಾಮಾಣಿಕತೆಗಳು ದೆಸೆಗಟ್ಟು ಓಡುತಿವೆ ನಿಜ ಬದುಕಿಗೆಲ್ಲಿ ಬೆಲೆ (ಮುಖವಾಡದ ಬದುಕು) , ನ್ಯಾಯ, ನಿಷ್ಠೆ,  ಪ್ರಾಮಾಣಿಕತೆಗಳಿಂದಲೇ ಈ ಬದುಕಿಗೆ ಬೆಲೆ ಇಲ್ಲದಿದ್ದರೆ ಅದು ನಿರರ್ಥಕವಾಗುತ್ತದೆ ಎಂಬುದನ್ನು ಕವಿ ಸ್ಪಷ್ಟಪಡಿಸಿದ್ದಾನೆ. ಈ ಜೀವನ ಅನಿಶ್ಚಿತತೆ,  ಅಸ್ಥಿರತೆಗಳಿಂದ ಕೂಡಿದ್ದು, ಮನುಷ್ಯನನ್ನು ಕಂಗೆಡಿಸುತ್ತದೆ. ಆದರೆ ಧೃತಿಗೆಡದಂತೆ ಬಾಳಲು ಎಚ್ಚರಿಸುವ ಕವಿ ‘ಸೋತಷ್ಟು ಸತಾಯಿಸುವ ಬದುಕಿದು ಅತ್ತಷ್ಟು ಅಳಿಸುವ ಜಗವಿದು ಬೆದರದೆ ಬೆಚ್ಚಗೆ ಕಲ್ಲಾಗಿಸು ಎದೆಯ ತಿಳಿ ಈ ಸಮಯ ಸ್ಥಿರವಲ್ಲವೆಂಬ ನೀತಿಯ’ (ನೀರ ಮೇಲಣ ಗುಳ್ಳೆ) ಸಾರ್ವಕಾಲಿಕ ಸತ್ಯವನ್ನು ನುಡಿಯುತ್ತಾನೆ. ಬದುಕುವ ಛಲ ತುಂಬುತ್ತಾನೆ. ಅಲ್ಲದೆ ಈ ಜಗತ್ತಿನಲ್ಲಿ ವಿಚಿತ್ರ ಜನರು ಇರುವುದರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾನೆ.  ಕಾವ್ಯದಲ್ಲಿ ಸ್ತ್ರೀ ಚೇತನ      ಈ ಸಮಾಜದಲ್ಲಿ ವೇಶ್ಯೆಯರನ್ನು ಕಾಣುವ ದೃಷ್ಟಿಯೇ ಕೀಳಾದುದು. ಮೈಮಾರಿಕೊಂಡು ಬದುಕುವ ಹೆಣ್ಣಿನ ಬಗ್ಗೆ ಮರುಕ ಪಡುವ ಕವಿ ‘ಅವಳು ಬೀದಿಯಲ್ಲರಳಿ ಮಸಣಕೆ ಶೃಂಗಾರವಾದ ಮಸಣದ ಹೂ’ ಎಂಬುದಾಗಿ ಅವಳ ದಯನೀಯ ಸ್ಥಿತಿಯನ್ನು ಅನಾವರಣ ಮಾಡಿದ್ದಾನೆ.     ತಾಯಿಯು ತನ್ನ ಮಗುವನ್ನೇ ಬೆಳದಿಂಗಳು ಎಂದು ಭಾವಿಸುವ ಸಂಕಲನದ ಶೀರ್ಷಿಕೆಯುಳ್ಳ ಕವನ ‘ಬಿಸಿಲೇ ಬೆಳದಿಂಗಳು’ ಕವಿಯ ಸಂವೇದನಾಶೀಲತೆಗೆ ಸಾಕ್ಷಿ. ದುಡಿಮೆ ಮಾಡಿ ಮಗುವನ್ನು ಸಾಕುವ ಸಮಸ್ತ ತಾಯಂದಿರ ಕಷ್ಟ ಪರಂಪರೆಯನ್ನು ಕಣ್ಮುಂದೆ ತಂದು ನಿಲ್ಲಿಸುವ ಕವಿ ;ಸಿಕ್ಕತಂಗಳೆ ಮೃಷ್ಟಾನ್ನಬೀಸೋ ಗಾಳಿಯೇ ಸುವ್ವಾಲಿ ಹಕ್ಕಿಗಳುಲಿಯೇ ಗಿಲಗಿಂಚಿನಾದಬಿಸಿಲೇ ಬೆಳದಿಂಗಳವಗೆ… ( ಬಿಸಿಲೇ ಬೆಳದಿಂಗಳು ) ಪ್ರಕೃತಿಯ ಎಲ್ಲ ವ್ಯವಹಾರಗಳೂ  ಮನುಷ್ಯ ಬದುಕಿನ ಭರವಸೆಯಾಗಿ ಹಾಗೂ ಪ್ರಕೃತಿ ಮಾತೆಯೇ ಪುರುಷನ ಪೋಷಣೆಗೆ ನಿಂತಿರುವುದನ್ನು ತಿಳಿಸುವ ಕವಿ ಪುರುಷ ಮತ್ತು ಪ್ರಕೃತಿ ನಡುವಿನ ನಂಟನ್ನು ತಾಯಿ ಮಗುವಿನ ಸಂಬಂಧದೊಂದಿಗೆ ಸಮೀಕರಿಸಿ ಒಂದು ರೂಪಕದ ಮೂಲಕ ಕಟ್ಟಿಕೊಟ್ಟಿರುವುದು ಗಮನಾರ್ಹ.     ಮೌನ ಮತ್ತು ಧ್ಯಾನಗಳ ಮೂಲಕ ಕವಿತ್ವವನ್ನು ದಕ್ಕಿಸಿಕೊಳ್ಳುತ್ತಿರುವ ಮೌನೇಶ್ ಅವರು ಬಾಳಿನಲ್ಲಿರುವ ಬಿಸಿಲನ್ನೇ ಬೆಳದಿಂಗಳಾಗಿ ಭಾವಿಸುವ ಧನಾತ್ಮಕ ನಿಲುವು ಮತ್ತು ಆಶಯವನ್ನು ಪ್ರಕಟಿಸಿರುವುದು ವಿಶೇಷ. ಅವರಿಗೆ ಶುಭವಾಗಲಿ. ಡಾ. ಸಂಗಮೇಶ ಎಸ್. ಗಣಿಕನ್ನಡ ಪ್ರಾಧ್ಯಾಪಕರು, ಬೆಂಗಳೂರು.ಮೊಬೈಲ್ :9743171324

ಬಡಿಗೇರ ಮೌನೇಶ್ ಅವರ ಕವನ ಸಂಕಲನ ‘ಬಿಸಿಲೇ ಬೆಳದಿಂಗಳು’ ಒಂದು ಅವಲೋಕನ ಡಾ. ಸಂಗಮೇಶ ಎಸ್. ಗಣಿ Read Post »

ಕಾವ್ಯಯಾನ, ಗಝಲ್

ಡಾ.ರೇಖಾ ಉದಯ್‌ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾ ಉದಯ್‌ ಗಜಲ್ ಕೂಡಿಟ್ಟ ದುಃಖವ ಹೊರ ಹಾಕಿದ್ದೇನೆ ನೀ ಕಂಡ ಕ್ಷಣದಲ್ಲಿಹಿಡಿದಿಟ್ಟ ನೋವಿನಿಂದ ಅತ್ತಿದ್ದೇನೆ ನೀ ಕಂಡ ಕ್ಷಣದಲ್ಲಿ ಬದುಕು ಶೂನ್ಯತೆಯ ಭಾವ ಮರೆಸಿ ಹೊಸತನ ಮೂಡಿಸಿದೆ ಈಗನೀ ಬಿಟ್ಟ ಸವಿ ನೆನಪುಗಳಿಂದ ನಕ್ಕಿದ್ದೇನೆ ನೀ ಕಂಡ ಕ್ಷಣದಲ್ಲಿ ಎಷ್ಟೋ ಮಾತುಗಳು ಹೇಳದೆ ಮೌನದಲ್ಲಿ ಮರೆಯಾಗಿವೆನೋಡಬಾರದೆಂದಾಗಲೇ ಸಿಕ್ಕಿದ್ದೇನೆ ನೀ ಕಂಡ ಕ್ಷಣದಲ್ಲಿ ಆಗಸದ ನಕ್ಷತ್ರಕ್ಕೂ ಒಮ್ಮೊಮ್ಮೆ ಕರಿಛಾಯೆ ಬಿಳಬಹುದು ಉಸಿರು ಬಿಗಿ ಹಿಡಿದು ಬದುಕಿ ಸತ್ತಿದ್ದೇನೆ ನೀ ಕಂಡ ಕ್ಷಣದಲ್ಲಿ ಬದುಕಿನ ರಂಗಮಂದಿರದಲ್ಲಿ ಅವನೇ ಖಳನಾಯಕನಂತಾಗಿಹರೇಖೂ ಬಾಳ ನೌಕೆಯಲಿ ಗೆದ್ದು ಸೋತಿದ್ದೇನೆ ನೀ ಕಂಡ ಕ್ಷಣದಲ್ಲಿ ಡಾ.ರೇಖಾಉದಯ್

ಡಾ.ರೇಖಾ ಉದಯ್‌ ಅವರ ಗಜಲ್ Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-23 ಅರ್ಜುನ ಉವಾಚ ವಿಶ್ವನಾಥ ಎನ್‌ ನೇರಳೆಕಟ್ಟೆ ನನ್ನ ಆತ್ಮಬಂಧು ಕೃಷ್ಣ ಬಂದನಂದು ನಾನೀಗ ಸುಧನ್ವನ ಎದುರು ನಿಂತಿದ್ದೆ. ಅವನ ಹೋರಾಟದ ಪರಿಯನ್ನು ಇದುವರೆಗೂ ಕಂಡಿದ್ದ ನಾನು ಈಗ ಅವನನ್ನು ತೀರಾ ಸನಿಹದಿಂದ ಕಂಡೆ. ನನಗೆ ಎಷ್ಟರವನಿವನು ಎನಿಸಿತು. ನನ್ನ ಯುದ್ಧಾನುಭವವೇನು! ಇವನ ವಯಸ್ಸೇನು! ಹೋರಾಡಬೇಕೇ ನಾನಿವನಲ್ಲಿ! ನಾನು ಗೆಲುವನ್ನು ಪಡೆಯುವುದಂತೂ ದಿಟ. ಗೆದ್ದರೂ ಸಣ್ಣವನೆದುರು ಗೆದ್ದಂತಾಗುತ್ತದಷ್ಟೇ. ಒಂದು ವೇಳೆ ಅಪ್ಪಿತಪ್ಪಿ ಸೋತೆನೆಂದಾದರೆ ಯುದ್ಧಾನುಯುದ್ಧಗಳನ್ನು ಗೆದ್ದ ಆ ಕಲಿ ಪಾರ್ಥ ಕದನದಭನುವವೇ ಇಲ್ಲದವನ ಎದುರು ಸೋತನಂತೆ ಎಂಬ ಸುದ್ದಿ ಹಬ್ಬುತ್ತದೆ. ಈ ಯುದ್ಧ ನನ್ನ ಯೋಗ್ಯತೆಗೆ ಸಲ್ಲುವಂಥದ್ದಲ್ಲ. ಇವನನ್ನು ಬೆದರಿಸಿಯೇ ಇಲ್ಲಿಂದ ತೊಲಗಿಸುವುದೊಳಿತು ಎನಿಸಿತು. ಅದು ನನ್ನೊಳಗಿನ ಅಹಂಕಾರದಿಂದ ಉದ್ಭವಿಸಿದ ಯೋಚನೆಯೋ, ನನಗದರ ಅರಿವಿಲ್ಲ.ದೊಡ್ಡ ಧ್ವನಿಯಲ್ಲಿ ಆರ್ಭಟಿಸಿದೆ ಸುಧನ್ವನಲ್ಲಿ. “ನನ್ನೊಡನೆ ಯುದ್ಧವನ್ನೇಕೆ ಬಯಸಿರುವೆ! ನೀನು ನಿಜಕ್ಕೂ ಅಪ್ರಬುದ್ಧ. ನನ್ನಂಥ ಪ್ರಸಿದ್ಧನೆದುರು ನಿನ್ನ ಹೋರಾಟವೇತಕ್ಕೆ! ನಿಮ್ಮ ಪಾಳಯದಲ್ಲಿ ಯಾರಾದರೂ ರಣ ಪರಾಕ್ರಮಿಗಳಿದ್ದರೆ ಅವರನ್ನು ಕಳುಹಿಸು ನನ್ನೆದುರು. ದ್ರೋಣ, ಭೀಷ್ಮ, ಕರ್ಣ ಮೊದಲಾದ ಘಟಾನುಘಟಿಗಳೇ ನನ್ನೆದುರು ಸೋತುಹೋಗಿದ್ದಾರೆ. ಈಗಲಾದರೂ ಇಲ್ಲಿಂದ ಹೊರಟುಹೋಗು. ಪ್ರಾಣ ಉಳಿಸಿಕೋ” ಎಂದು ಹೀಯಾಳಿಸಿದೆ.ಅದು ಆ ಕ್ಷಣಕ್ಕೆ ನಾನು ಪ್ರಯೋಗಿಸಿದ ಯುದ್ಧತಂತ್ರವೂ ಹೌದು. ಹಿಂದಣ ಸಾಧನೆಯನ್ನು ಮುಂದಿಟ್ಟುಕೊAಡು ಶತ್ರು ಸುಧನ್ವನ ಎದೆಬಲವನ್ನು ಕುಂದಿಸುವ ಯತ್ನ ಮಾಡಿದೆ. ನನ್ನ ಮಾತುಗಳಷ್ಟೂ ನಿಷ್ಪçಯೋಜಕವೆನಿಸಿದವು ಅವನ ಎದುರಲ್ಲಿ. ಶೌರ್ಯವದು ಅವನದು ಕಿರಿದಾಗಲಿಲ್ಲ. ಇಮ್ಮಡಿಸಿತು.ಪ್ರತಿಮಾತಿನಿಂದ ನನ್ನನ್ನು ಚುಚ್ಚಿದ. “ಕೌರವ ಸೇನೆಯ ವೀರರನ್ನು ನೀನು ಗೆದ್ದದ್ದು ನಿನ್ನ ಶಕ್ತಿಯಿಂದಲ್ಲ; ನಿನ್ನ ಸಾರಥಿಯಾಗಿದ್ದ ಆ ಶ್ರೀಕೃಷ್ಣನ ಬಲದಿಂದ. ಅವನಿಲ್ಲದೆ ನಿನಗಾವ ಗೌರವವಿದೆ ಈ ಧರೆಯಲ್ಲಿ! ಮೊದಲು ಕೃಷ್ಣನನ್ನು ಕರೆಸಿಕೋ. ನನ್ನನ್ನು ಜಯಿಸುವುದು ನಿನ್ನಿಂದ ಆಗುವಂಥದ್ದಲ್ಲ. ಗೆಲ್ಲುವ ಆಸೆಯನ್ನು ತೊರೆದುಬಿಡು” ಎಂದ.ಅಬ್ಬಾ! ಎಂತಹ ದಿಟ್ಟತನವಿತ್ತು ಆ ಮಾತಿನಲ್ಲಿ. ನನ್ನ ಅಸ್ತಿತ್ವದ ಮೂಲಬೇರಿಗೇ ಕೈಹಾಕಿ ಕೆದಕಿದ್ದ ಆ ಸುಧನ್ವ ಆ ಕ್ಷಣದಲ್ಲಿ. ಹೌದು! ನಾನು ಕೃಷ್ಣಸಖ. ಅವನಿಂದಲೇ ಬೆಳೆದವನು ಈ ಬದುಕಿನಲ್ಲಿ. ಶತ್ರುಗಳಾಗಿ ಮುಂದೆ ನಿಂತ ಬಂಧುಗಳನ್ನೂ, ಗುರು ಹಿರಿಯರನ್ನೂ ಎದುರಿಸಲಾರೆ ಎಂಬ ಖಿನ್ನತೆ ನನ್ನನ್ನು ಆವರಿಸಿದ ಆ ಕುರುಕ್ಷೇತ್ರ ರಣಕಣದಲ್ಲಿ ಜೀವನತತ್ವವನ್ನು ಬೋಧಿಸಿದವನು ಶ್ರೀಕೃಷ್ಣ. ನನ್ನ ಸಾಹಸ ಪ್ರದರ್ಶನಕ್ಕೆ ಪ್ರೇರಣೆಯಾದವನು ಶ್ರೀಕೃಷ್ಣ. ಅವನಿಂದಲೇ ನನ್ನ ಅಸ್ತಿತ್ವ. ಅವನ ನೆರವಿಲ್ಲದೆ ನಾನಿಷ್ಟು ಸಾಧಿಸುತ್ತಿರಲಿಲ್ಲ. ಅದು ಸರ್ವವೇದ್ಯ.ಸಾಧನೆಯ ಏಣಿಯನ್ನು ಹತ್ತುತ್ತಾ ಹತ್ತುತ್ತಾ ಹತ್ತನೆಯ ಮೆಟ್ಟಿಲಲ್ಲಿ ನಿಂತವನು ನಾನು. ಹತ್ತನೆಯ ಸಂಖ್ಯೆಯೇ ಆದವನು ನಾನು. ಕೃಷ್ಣನೆಂಬ ಒಂದು ಜೊತೆಗಿರಲು ನಾನು ಸಿಂಧು. ಇಲ್ಲವಾದರೆ ನಾನು ಬರಿಯ ಶೂನ್ಯ, ಬಿಂದು. ಸುಧನ್ವ ಕೋಪದಲ್ಲಾಡಿದ ಮಾತಿನಲ್ಲಿ ನನ್ನ ಬದುಕಿನ ನಿಜಸತ್ವವಿದೆ ಎನಿಸಿತು.ಅವನ ಮಾತನ್ನು ನಾನು ಈ ಬಗೆಯಲ್ಲಿ ಅರಗಿಸಿಕೊಳ್ಳುತ್ತಿದ್ದಾಗಲೇ ಅವನು ಪ್ರಯೋಗಿಸಿದ ಬಾಣವೊಂದು ಬಂದಪ್ಪಳಿಸಿತು ನನ್ನ ರಥಕ್ಕೆ. ತರ‍್ರನೆ ತಿರುಗಿತು ರಥ, ಬುಗುರಿಯನ್ನೂ ನಾಚಿಸುವಂತೆ. ನಿಜಕ್ಕೂ ಅವನ ಆ ಕೌಶಲ್ಯ ವಿಶಿಷ್ಟವಾದದ್ದೆನಿಸಿತು. ಎದುರಾಳಿಗಳ ರಥವನ್ನು ತಿರುಗುವಂತೆ ಮಾಡುವ ಸಾಮರ್ಥ್ಯ ಇದ್ದವರನ್ನು ನಾನು ಮೂರು ಲೋಕಗಳಲ್ಲಿಯೂ ಕಂಡಿರಲಿಲ್ಲ. ಅದ್ಭುತ ಭಾವ ನನ್ನೊಳಗೆ ಮೂಡಿತು. ಆದರೂ ಅದನ್ನು ತೋರಗೊಡದೆ “ನೀನಿನ್ನೂ ಹುಡುಗ. ಏಕೆ ಅಳಿವೆ ನನ್ನಿಂದ. ನಿನ್ನ ತಂದೆಯನ್ನು ಬರಹೇಳು. ಕುದುರೆಯನ್ನು ಬಿಟ್ಟುಬಿಡು” ಎಂದೆ.ಅವನು ಒಪ್ಪಿಕೊಳ್ಳಲಿಲ್ಲ. ಅದೆಷ್ಟೋ ಸಮಯ ನಮ್ಮ ನಡುವೆ ಕದನ ನಡೆಯಿತು. ನನ್ನ ಸಾರಥಿಯನ್ನೇ ಕೊಂದುಹಾಕಿದ ಸುಧನ್ವ. ಆ ಕ್ಷಣದಲ್ಲಿ ರಥವನ್ನೂ ನಾನೇ ನಡೆಸಬೇಕಾಯಿತು. ‘ಇವನನ್ನು ಎದುರಿಸಲಾರದ ತನ್ನದೂ ಒಂದು ಜನ್ಮವೇ!’ ಎಂಬ ವೈರಾಗ್ಯ ಭಾವ ನನ್ನನ್ನು ಆವರಿಸಿತು. ಅಶ್ವಮೇಧ ಯಾಗಕ್ಕೆ ಬಂದ ಬಹುದೊಡ್ಡ ತೊಡಕಿದು ಎನಿಸಿತು. ಆಪದ್ಬಾಂಧವ ಕೃಷ್ಣನನ್ನು ಕರೆಯದೆ ಬೇರೇನೂ ದಾರಿಯಿಲ್ಲ ಎನ್ನುವುದು ಖಚಿತವಾಯಿತು.ನೆನೆದೆ ಕೃಷ್ಣನನ್ನು. ಸ್ಮರಿಸಿದೆ ಹರಿಯನ್ನು. ಕಡುಗಾಲದಲ್ಲಿ ಬಿಡದೆ ಕಾಪಾಡುವ ಪೊಡವಿಗೊಡೆಯ ನಾನಿದ್ದೆಡೆಯಲ್ಲಿ ತಕ್ಷಣವೇ ಪ್ರತ್ಯಕ್ಷನಾದ. ಅದೇನೋ ನೂತನ ಶಕ್ತಿ ನನ್ನೊಳಗೆ ಪಸರಿಸಿದಂತಾಯಿತು. ಕೃಷ್ಣನ ದಿವ್ಯ ಚರಣಗಳಿಗೆ ಮಣಿದೆ. ಆಶೀರ್ವದಿಸಿದ. ಬಿಗಿದಪ್ಪಿಕೊಂಡ.ಕೃಷ್ಣನನ್ನು ದರ್ಶಿಸುತ್ತಿದ್ದ ಸುಧನ್ವನೊಳಗೂ ಭಕ್ತಿಭಾವ ಮೂಡಿತು. ಅವನು ಪುಳಕಿತನಾಗಿದ್ದ. ಅವನಿದ್ದ ಸ್ಥಳದಿಂದಲೇ ಸಾಷ್ಟಾಂಗ ಪ್ರಣಾಮ ಮಾಡಿದ. ತನ್ನ ಶೌರ್ಯಕ್ಕೆ ಸಾಕಿದು ಕೃಷ್ಣದರ್ಶನ! ಏನು ನೆನೆಸಿದ್ದೆನೋ ಅದು ಕೈಗೂಡಿದೆ ಎಂದು ಹಿರಿಹಿರಿ ಹಿಗ್ಗಿದ ಹಂಸಧ್ವಜಸುತ.ಕೃಷ್ಣನೀಗ ನನ್ನ ಜೊತೆಗಿದ್ದಾನೆ ಎಂಬ ಅಸೀಮ ಧೈರ್ಯ ಮೂಡಿತು ನನ್ನಲ್ಲಿ. ಅದೇ ಹುಮ್ಮಸ್ಸಿನಿಂದ ಸುಧನ್ವನ ಶಿರವನ್ನು ಇನ್ನು ಮೂರು ಬಾಣಗಳನ್ನಷ್ಟೇ ಪ್ರಯೋಗಿಸಿ ಕತ್ತರಿಸಿಹಾಕುವ ಪ್ರತಿಜ್ಞೆ ಮಾಡಿದೆ. ನನ್ನನ್ನೂ ಮೀರುವ ಹುಮ್ಮಸ್ಸಿನಲ್ಲಿ ಸುಧನ್ವ “ನೀನು ಬಿಡುವ ಸರ್ವಶಕ್ತ ಮೂರು ಬಾಣಗಳನ್ನು ನಡುವೆಯೇ ಕತ್ತರಿಸಿಹಾಕದಿದ್ದರೆ ಕಡುಪಾತಕಿಗೊದುವ ಗತಿ ನನಗೆ ಒದಗಲಿ” ಎಂದು ಪ್ರತಿಜ್ಞೆ ಮಾಡಿದ.ಹೀಗೆ ಮಾತನ್ನು ಮುಗಿಸಿದ ಅವನು ಬಿಟ್ಟ ಬಾಣದಿಂದ ಕೃಷ್ಣನಿದ್ದ ನನ್ನ ರಥ ನಾಲ್ಕುನೂರು ಮೊಳಗಳಷ್ಟು ದೂರ ಹಾರಿಹೋಯಿತು. ತಕ್ಷಣವೇ ಕೃಷ್ಣನಿಗೆ ಸುಧನ್ವನ ಅಂತಃಶ್ಶಕ್ತಿಯ ಅರಿವಾಯಿತು ಎನಿಸುತ್ತದೆ. ನನ್ನಲ್ಲಿ “ಯಾರೆದುರೂ ಸೋಲುವವನಲ್ಲ ಈತ. ಇವನೊಡನೆ ಯುದ್ಧ ಮಾಡುವವರಿಲ್ಲ. ನೀನು ನನ್ನಲ್ಲಿ ಸಮಾಲೋಚಿಸದೆ ಪ್ರತಿಜ್ಞೆ ಮಾಡಬಾರದಿತ್ತು” ಎಂದ. ಕೃಷ್ಣನೇ ಈ ಮಾತನ್ನು ಆಡಿದ ಮೇಲೆ!… ನನ್ನಲ್ಲೀಗ ಅಳುಕು ಮೂಡತೊಡಗಿತು… ಡಾ. ವಿಶ್ವನಾಥ ಎನ್ ನೇರಳಕಟ್ಟೆ

Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ ಅವರ ಕವಿತೆ “ಪ್ರೀತಿಯ ಸಾಲು”

ಕಾವ್ಯ ಸಂಗಾತಿ ಮನ್ಸೂರ್ ಮುಲ್ಕಿ “ಪ್ರೀತಿಯ ಸಾಲು” ಪ್ರತಿ ಸಾಲು ನಿನ್ನಲ್ಲಿ ಪ್ರೀತಿಯನೆ ಬೇಡುತಾಹಾಡುವೆ ಕೇಳು ನನ್ನದೇ ಹಾಡುಮನದಲ್ಲಿ ಇರಿಸಿದ ನೋವಿನ ಸಾಲುಹೇಳದೆ ನಿನಗೆ ಹಾಡಿದೆ ಕೇಳು ಅಂದೊಮ್ಮೆ ಬರೆದಿಹ ಪ್ರೇಮದ ಪತ್ರಓದದ ನೀನು ಆ ಪ್ರೀತಿಯ ಸಾಲುಬರೆದಂತ ಬರಹವು ನಗುತಲಿದೆ ಇಂದಿಗೂಹೇಳುವುದು ಹೇಗೆ ಓದದೆ ನೀನು ನೀ ಬಿರೋ ನಗುವಿನಲ್ಲಿ ಅದೇನಿಹುದೊ ಮಾಯೆಯೋಮಾತೆಂದೂ ಆಡದ ಆ ನಿನ್ನ ಛಾಯೆಯೋಆಸೆಗಳು ಮುಗಿಲೇರಿ ಸೇರಿದೆ ಮೋಡದಲ್ಲಿಆ ನಿನ್ನ ಛಾಯೆಯೂ ಮೂಡಿದೆ ಬಾನಿನಲ್ಲಿ ಕೊಡಲೇನು ನನಗೆ ಏನಿಹುದು ನಿನ್ನಲ್ಲಿಪ್ರೀತಿಯೊಂದೆ ಸಾಕು ಬದುಕಿನಲ್ಲಿಇರಲೇನು ನಾನು ನಿನ್ನವನಾಗಿಆ ನಿನ್ನ ಬಾಳಿನ ಜೀವವಾಗಿ ಮನ್ಸೂರ್ ಮುಲ್ಕಿ

ಮನ್ಸೂರ್ ಮುಲ್ಕಿ ಅವರ ಕವಿತೆ “ಪ್ರೀತಿಯ ಸಾಲು” Read Post »

ನಿಮ್ಮೊಂದಿಗೆ

“ಡಕೊಟಾ ಎಕ್ಸಪ್ರೆಸ್” (ನೆನಪುಗಳ ಜರ್ನಿ)ಶ್ರೀದೇವಿ. ಮ.ಗುಮ್ಮಗೋಳ.

ನೆನಪುಗಳ ಸಂಗಾತಿ ಶ್ರೀದೇವಿ. ಮ.ಗುಮ್ಮಗೋಳ. “ಡಕೊಟಾ ಎಕ್ಸಪ್ರೆಸ್” (ನೆನಪುಗಳ ಜರ್ನಿ)      ಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯ ಮತ್ತು ಯೌವನ ಅಲ್ಬಂಗಳಿದ್ದಂತೆ. ಅವುಗಳನ್ನು ಮತ್ತೆ ಮತ್ತೆ ತೆರೆದು ನೋಡಿ ನೆನಪುಗಳು ಮರುಕಳಿಸುವಂತೆ ಮಾಡುತ್ತವೆ.  ಮಾತು ಬೆಳ್ಳಿ ಮೌನ ಬಂಗಾರವೆನ್ನುವ ಹಾಗೆ ಯೌವನ ಬೆಳ್ಳಿಯಾದರೆ ಬಾಲ್ಯ ಬಂಗಾರದಂತೆ.   ನಾನು ಹೈಸ್ಕೂಲಿನಿಂದ ಪೊಸ್ಟ ಗ್ರಾಜ್ಯೂಯೇಶನ ವರೆಗೆ ಓದಿದ್ದು ಧಾರವಾಡದಲ್ಲಿ. ನಾನು ಹಳ್ಳಿಯಿಂದ ಧಾರವಾಡಕ್ಕೆ ಕಲಿಯಲು ದಿನವೂ ಬಸ್ ನಲ್ಲೆ ಹೋಗುವಾಗ ಬರುವಾಗ ಅರ್ದಗಂಟೆ ಪ್ರಯಾಣ. ಈ ಬಸ್ ಪ್ರಯಾಣದ ಅನೇಕ ನೆನಪುಗಳು, ಹಾಸ್ಯ ಪ್ರಸಂಗಗಳು, ವಿಚಿತ್ರ ಘಟನೆಗಳು ನನ್ನ ಜೀವನದ ಕಪಾಟಿನೊಳಗೆ  ಭದ್ರವಾಗಿ ಕುಳಿತಿವೆ. ಅವೆಲ್ಲಾ ನನ್ನ ನೆನಪಿನ ಬುತ್ತಿಯಲ್ಲಿ ಮರೆಯಲಾರದ ಕ್ಷಣಗಳು. ಶಾಲೆಯಲ್ಲಿಯ ನೆನಪುಗಳು ಒಂದು ತೆರನಾದರೆ ಕಾಲೇಜಿನ ನೆನಪುಗಳು ಮತ್ತೊಂದು ರೀತಿಯವು. ಶಾಲೆಗೆ ಹೋಗುವಾಗ ಬೆನ್ನಿಗೆ ಹಾಕುತಿದ್ದ ಪಾಟಿಚೀಲಗಳನ್ನು ನೋಡಿ ಬಸ್ಸ ನಲ್ಲಿ ಪಕ್ಕದಲ್ಲಿ ಕುಳಿತ ಅಂಕಲ ಅಂಟಿಗಳು  “ನಿಮಗಿಂತ ನಿಮ್ಮ ಪಾಟಿಚೀಲಗಳೆ ದೊಡ್ಡುವಿವೆಯಲ್ಲಾ ತಂಗಿ ಕೊಡು ಇಲ್ಲಿ ಹಿಡಕೊತೇನಿ” ಎಂದು ಕೆಲವರು ಇಸಿದು ಕೊಳ್ಳುತ್ತಿದ್ದರು.  ಇನ್ನು ಕೆಲವರು ಅದರಲ್ಲೂ ಹಳ್ಳಿಯ ಮುದಕಿಯರು ನಮ್ಮ ಬ್ಯಾಗು ಅವರ ಬೆನ್ನಿಗೆ ತಾಗಿದ ಕೂಡಲೇ ತಮಗೇನೊ ಒಂದು ದೊಡ್ಡ ಗದಾ ಪ್ರಹಾರವೇ ಆಯಿತೊ ಅನ್ನುವಂತೆ ಬಾಯಿಗೆ ಬಂದಂತೆ “ಇವೇನು ಎಷ್ಟ ಸಾಲಿ ಕಾಲಿತಾವೋ ಏನೊ?…  ಇವಿರುದೊ ಒಂದ ಮಣಾ ಇವಕರದು ಚೀಲಾ ನೋಡ…. ಗೋಣಿ ಚೀಲಾಗೆತಿ… ಎಲ್ಲಿಂದ ಬಂದಿ ಅತಾಕ… ಮದಲ ಪಾಟಿ ಚೀಲಾ ತಗದು… ಮ್ಯಾಲ ಇಡು” ಎಂದು ಬಯ್ಯುವರು. ಬಸ್ಸಿನಲ್ಲಿ ಸಾಮಾನುಗಳನ್ನು ಇಡಲು ಮೇಲಗಡೆ ಉದ್ದಕ್ಕೆ ಒಂದು ಪಟ್ಟಿ (loner/rack) ಇರತಿತ್ತು. ನಾವು ಆಜು ಬಾಜುವರ ಕಡಿಂದ ಬಯ್ಯಸಿಕೋತ ಗುದ್ಯಾಡಕೋತ ಬ್ಯಾಗ ತಗೆದು ಮೇಲೆ ಇಡುತ್ತಿದ್ದೇವು.      ಒಂದ ಸಾರಿ  ಬಸ್ ಕಂಡಕ್ಟರ ಬಸ್ ಪಾಸ ಕೇಳಿದಾಗ ಬ್ಯಾಗನಲ್ಲಿ ಇರಲಿಲ್ಲ. ಬಸ್ ಪಾಸು ಮನೆಯಲ್ಲೆ ಉಳಿದು ಬಿಟ್ಟಿತ್ತು. ಸ್ಕೂಲಿಗೆ ಹೋಗುವಾಗ ಮನೆಯಲ್ಲಿ ಇನ್ನೂ ಸಣ್ಣವರೆಂದು ಒಂದು ಪೈಸೆಯು ಕೊಡುತ್ತಿರಲಿಲ್ಲ. ಕಂಡಕ್ಟರ್ ಟಿಕೇಟ ತೆಗೆಸಬೇಕೆಂದಾಗ ನನ್ನ ಕಡೆ ಒಂದು ಪೈಸೆಯೂ ಇರಲಿಲ್ಲ. ಪಾಪ ಪಕ್ಕದಲ್ಲಿದ್ದ ಪುಣ್ಯಾತ್ಮರೊಬ್ಬರು ಟಿಕೇಟ ತೆಗೆಸಿದರು. “ಅಂಕಲ್ ನಿಮ್ಮ ಅಡ್ರೆಸ್ ಕೊಡಿ ನಿಮಗೆ ದುಡ್ಡು ಕಳಿಸುತ್ತೇನೆ” ಎಂದು ಎಷ್ಟು ಕೇಳಿಕೊಂಡರು ಬೇಡಮ್ಮಾ ನೀನು ನನ್ನ ಮಗಳಿದ್ದಂತೆ ಎಂದರು. ಕಾಲೇಜಿಗೆ ಹೊಗುವಾಗ ನನ್ನಪ್ಪ ತಿಂಗಳಿಗೊಮ್ಮೆ ಹತ್ತೊ ಇಪ್ಪತ್ತೊ ರೂಪಾಯಿ ದುಡ್ಡು ಕೊಡುತ್ತಿದ್ದ.  ಪಿ.ಯು.ಸಿ ಓದುವಾಗ ಕ್ಲಾಸಿನಲ್ಲಿ ಲೆಕ್ಚರೊಬ್ಬರು “ನೋಡ್ರಿ ನಿಮ್ಮನ್ಯಾಗ ನಿಮ್ಮ ಖರ್ಚಿಗಂತ ಏನೊ ದುಡ್ಡ ಕೊಟ್ಟರ ಹುಡಗರ ನೀವು ಸಿಗರೇಟೊ ಮತ್ತೊಂದೊ ಕೆಟ್ಟ ಚಟಕ್ಕ ಉಪಯೋಗಿಸಬ್ಯಾಡ್ರಿ…… ಹೆಣ್ಣ ಮಕ್ಕಳ ನೀವು.. ಖಾಲಿಪೀಲಿ ಆಯ್ಸಕ್ರೀಮ್ ತಿಂದೆ.. ಕೇಕ ತಿಂದೆ….ಅಂತ ಖರ್ಚ ಮಾಡಬ್ಯಾಡ್ರಿ  ಪಕ್ಕದಲ್ಲೆ ಇಲ್ಲೆ ಬ್ಯಾಂಕ ಅದ ಅದರಳೊಗ ಅಕೌಂಟ ಓಪನ್ ಮಾಡಿ ಕೂಡಿ ಇಡುದನ್ನ ಈಗಿಂದ ಕಲಿರಿ… ಅಲ್ಲದ ಬ್ಯಾಂಕಿನ ವ್ಯವಹಾರ ಏನು ಅನ್ನುದು ನೀವು ತಿಳಕೊಂಡಂಗ ಆಗ್ತದ” ಅಂತ ಹೇಳತಿದ್ದರು.  ಅವರ ಪ್ರಭಾವದಿಂದಾಗಿ ನಾನು ಬ್ಯಾಂಕನಲ್ಲಿ ಆಗಲೇ ಒಂದು saving account ಓಪನ್ ಮಾಡ್ದೆ.  ಕೂಡಿಟ್ಟ ಹತ್ತೊ ಇಪ್ಪತ್ತೊ ವರ್ಷಕ್ಕೆ ಸಾವಿರ ರೂಪಾಯಿವರೆಗೂ ಆಗ್ತತ್ತು.  ಆಗ ಅದೇ ದೊಡ್ಡ ಅಮೌಂಟು. ಸರ್ ಹೇಳದಂಗ ಬ್ಯಾಂಕಿನ ವ್ಯವಹಾರದ ಜ್ಞಾನನು ಬಂತು.       ನಾನು ಕಾಲೇಜಿಗೆ ಬೆಳಿಗ್ಗೆ ೬.೩೦ ಕ್ಕೆ ನಮ್ಮೂರಿನ ಒಳಗಡೆ ಬೆರೆಯ ಮತ್ತೊಂದು ಹಳ್ಳಿಯಿಂದ ಬರುತ್ತಿದ್ದ ಬಸ್ಸ ನ್ನು ಹತ್ತಿ ಕಾಲೇಜಿಗೆ ಹೋದರೆ ಮದ್ಯಾಹ್ನ ೧ ಗಂಟಗೆ ಕ್ಲಾಸ್ ಬಿಡುತ್ತಿತ್ತು. ನಮ್ಮೂರು ಹೈವೆ ಮೇಲಿದ್ದರೂ ನಮ್ಮೂರಿಗೆ ಕಡಿಮೆ ಬಸ್ಸಗಳು ನಿಲ್ಲುತ್ತಿದ್ದವು. ಹೆಚ್ಚಾಗಿ ಎಕ್ಸಪರೆಸ್ ಬಸ್ ಗಳೆ ಅವು ನಿಲ್ಲುತ್ತಿರಲಿಲ್ಲ. ನಾನೇನಾದರೂ ಒಳಗಡೆ ಹಳ್ಳಿಯಿಂದ ಬರುತ್ತಿದ್ದ ಬಸ್ ನ್ನು ತಪ್ಪಿಸಿದರೆ ಮೊದಲನೆ ಕ್ಲಾಸ ಬಂಕ ಆಗುತ್ತಿತ್ತು. ಮದ್ಯಾಹ್ನ ಕೂಡಾ ಸರಿಯಾಗಿ ಲಾಂಗರೂಟ್ ಬಸ್ ಗಳಿಲ್ಲದೇ ಅದೇ ನಮ್ಮೂರಿನಿಂದ ಒಳ ಹೋಗುವ ಹಳ್ಳಿ ಬಸ್ಸೆ ಗತಿ. ಅದೋ ಹಳೆ ಕಾಲದ ಟ್ರಂಕ್ ತರಹ. ಡಕೊಟಾ ಬಸ್ ಎಂದೆ ಫೇಮಸ್ಸು. ಡಕೊಟಾ ಎಕ್ಸಪ್ರೆಸ ಪಿಕ್ಚರ್ ನೋಡಿದವರು ಊಹಿಸಿಕೊಳ್ಳಿ ಅದರಲ್ಲಿರುವಂತೆಯೇ ನಮ್ಮ ಬಸ್ ಡಕೊಟಾ ಆಗಿತ್ತು. ಊರನ್ನು ದಾಟಿ ಅರ್ದ ದಾರಿ ಕ್ರಮಿಸಿದ ಮೇಲೆ ಎಷ್ಟೊ ಸಾರಿ ಬಂದ್ ಬಿದ್ದು ಮತ್ತೆ ಬೇರೆ ಬಸ್ಸಿಗೆ ದಾರಿ ಕಾದ ಕಾದು ಸುಸ್ತಾಗಿ ಕಂಡಕ್ಟರ ಜೊತೆ ಜಗಳಕ್ಕೆ ನಿಲ್ಲುವದು, ಮುಖ್ಯವಾದ ಕೆಲಸ ಕಾರ್ಯಗಳಿದ್ದವರು ಪರದಾಡುವದು ಮಾಮೂಲಾಗಿತ್ತು. ಬೇಸಿಗೆಯಲ್ಲಿ ನಿಂತಂತ ಬಸ್ಸನಲ್ಲಿ ಸೆಕೆ ತಾಳಲಾರದೆ ಗಂಡಸರು ಹೊರಗಡೆ ಹೋಗಿ ನಿಂತರೆ ನಾವು ವಿಧಿಯಿಲ್ಲದೇ ಅದರಲ್ಲಿಯೇ ಬೆವರಿಳಿದು ಮೈಗೆ ಬೆವರಿನ ಸ್ನಾನ. ಕಂಡಕ್ಟರ್ ಬೇರೆ ಬಸ್ ಗೆ ಪ್ರಯಾಣಿಕರನ್ನು ಹೊಂದಿಸಲು ಹೆಣಗಾಡುತ್ತಿದ್ದ.       ನಮ್ಮೂರು ನನ್ನ ಅಕ್ಕ ಪಕ್ಕದ ಊರುಗಳಿಂದ ಕಾಲೇಜ ಕಲಿಯಲು ಎಳೆಂಟು ಹುಡಗೀಯರು ಮತ್ತು ಒಂದಿಷ್ಟು ಹುಡಗರ ದಂಡು ಇರುತ್ತಿತ್ತು. ಡಕೋಟಾ ಎಕ್ಸಪ್ರೆಸ್ ಬಸ್ಸನ್ನು ಡ್ರೈವರ ಒಂದ ತಾಸು ಮುಂಚೆ ಬಸ್ ಸ್ಟ್ಯಾಂಡಿನಲ್ಲಿ ತಂದು ಒಂದು ಬೇರೆ ಕಡೆ ನಿಲ್ಲಿಸುತ್ತಿದ್ದ. ಕಾಯಂ ಅದೇ ಸ್ಥಳದಲ್ಲಿ ನಿಲ್ಲಿಸುತ್ತಿದ್ದ. ನಮ್ಮೂರಿಗೆ ಹೋಗುವ ಹುಡಗ ಹುಡಗೀಯರಿಗೆ ಅದೇ ಬಸ್ಸೆಂದು ಗೊತ್ತಿರುತ್ತಿತ್ತು. ಆ ಬಸ್ ಬಂದ ಕೂಡಲೇ ಹುಡಗರು “ಬಂತು…. ಬಂತು…. ಡಕೊಟಾ ಎಕ್ಸಪ್ರೆಸ್….” ಎಂದು ಹಾಡು ಸುರು ಹಚ್ಚುತ್ತಿದ್ದರು. ನನಗಿನ್ನೂ ನೆನಪಿದೆ ನಾನು ಡಿಗ್ರಿ ಕಲಿಯುತ್ತಿದ್ದಾಗ ರೀಗಲ್ ಟಾಕೀಜಗೆ ಡಕೊಟಾ ಎಕ್ಸಪ್ರೆಸ ಪಿಕ್ಚರ್ ಬಂದಿತು. ಆ ಪಿಕ್ಚರ್ ನಂತರ ಅದೇ ಸ್ಥಿತಿ ಇರುವ ನಮ್ಮ ಬಸ್ಸು ಡಕೊಟಾ ಎಕ್ಸಪ್ರೆಸ್ ಎಂದೇ ಫೇಮಸ್ ಆಗಿತ್ತು. ನಾವು ಕಾಲೇಜಿನಲ್ಲಿ ಡಬ್ಬಿ ತಿನ್ನದೇ ಹಾಗೆ ಉಳಿಸಿಕೊಂಡು ಬಂದಿದ್ದರೆ ನಿಲ್ಲಿಸಿದ ಆ ಬಸ್ ನಲ್ಲಿ ಹೋಗಿ ಕುಳಿತು ನಾನು ಮತ್ತು ಇಬ್ಬರೂ ಸ್ನೇಹಿತೆಯರು ಕೂಡಿ ಹಾಸ್ಯ ಚಟಾಕಿ ಮತ್ತು ಮಾತುಗಳ ಬತ್ತಿಗಳೊಂದಿಗೆ ನಮ್ಮ ಬುತ್ತಿ ತೆಗೆದು ತಿನ್ನುತ್ತಿದ್ದೇವು.         ಆ ಬಸ್ ಒಂದ ತರಹ ಆಲ್ ಇಂಡಿಯಾ ರೇಡಿಯೊ, ಮಿರ್ಚ ಮಸಾಲಾ ಕಡೆಗೆ ನಮೆಗೆಲ್ಲಾ ಒಂದು ಮಿನಿ ಪ್ರಪಂಚವೇ ಆಗಿರುತ್ತಿತ್ತು‌. ಇದರೋಳಗೆ ಅಜ್ಜ -ಅಜ್ಜಿ, ಅಂಟಿ ಅಂಕಲಗಳು ಮಾತುಗಿಳಿದಾಗ ಅವರ ಮನೆ ಮನೆ ರಾಮಾಯಣ, ಹರಿಕಥೆಗಳು ನಮ್ಮ ಕಿವಿಗಳಿಗೂ ಬಿಳುತ್ತಿದ್ದವು. ಹಿಂದೆ ಕುಳಿತು ಚೇಡಿಸುವ ಹುಡಗರದು ಇನ್ನೊಂದು ತರಹ. ಸುಸ್ತಾಗಿ ಬೇಸತ್ತು ಸ್ವಲ್ಪ ನಿದ್ರೆಗೆ ಜಾರಿದರೆ. ಚೇಡಿಸುತ ಹಾಡುವವರು“ರಾಮಚಾರಿ ಹಾಡುವಾ ಲಾಲಿ ಹಾಡ ಕೇಳವಾನೀಲಿಬಾನಿನೂರಿಗೆ ಬೆಳ್ಳಿ ದೀಪ ನೀನವಾ…..”        ಈಗೀನ ಹಾಗೆ ಆಗ ಪೇಸ್ ಬುಕ್, ಟ್ವಿಟರ, ವ್ಯಾಟ್ಸಪ್ ಯಾವುದೂ ಇಲ್ಲದ ಪ್ರಪಂಚ. ಒಬ್ಬರಿಗೊಬ್ಬರು ಹರಟೆ, ಜೊಕ್ಸು ಇವೆ ಆಗ ಬಸ್ಸಿನಲ್ಲಿ ಬೇಸರ ಕಳೆಯುವ ಟೈಮ್ ಪಾಸ್.ಬಸ್ ನಲ್ಲಿ ಹುಟ್ಟಿಕೊಂಡ ಪ್ರೇಮಗಳೆಷ್ಟೊ, ಪರಿಚಯವಾಗಿ ಮಾತಿಗಿಳಿದ ಸ್ನೇಹದಲ್ಲಿ ರೆಕ್ಕಪುಕ್ಕ ಹಚ್ಚಿ ಹರಡಿದ ಗಾಸಿಪ್ ಗಳೆಷ್ಟೊ ಲೆಕ್ಕವಿಲ್ಲ. ಚಂದವಾಗಿರುವ ಹುಡಗೀರಗೆ ಹುಡಗರಿಂದ ಹಿಡಿದು ಹೊಟ್ಟೆ ಉಬ್ಬಿಸಿಕೊಂಡ ಅಂಕಲಗಳು ಹಲ್ಲು ಗೀರಿಯುತ್ತ  ತಮ್ಮ ಪಕ್ಕದಲ್ಲಿರುವ ಸೀಟಿನಲ್ಲಿ ಕೂತುಕೊಳ್ಳಲು ಹೇಳುವರು. ಕೆಲವೊಬ್ಬರು ತಾವೇ ಕುಳಿತ ಸೀಟನ್ನು ಬಿಟ್ಟು ಕೊಡುತ್ತಿದ್ದರು. ಎಷ್ಟೊ ಸಾರಿ ನಾನು ಕುಳಿತಂತೆ ಮಾಡಿ ಪಕ್ಕದಲ್ಲಿ ನಿಂತಿರುವ ಅಂಟಿಯರಿಗೆ, ಅಜ್ಜಿಯರಿಗೆ ನನ್ನ ಸೀಟು ಬಿಟ್ಟು ಕೊಟ್ಟಿದ್ದಿದೆ. ಈಗ ಬಿಡಿ ನಾನೂ ಅಂಟಿಯಾಗಿ ಆ ಅಂಟಿಗಳ ಸಾಲಿನಲ್ಲಿ ನಾನು ನಿಂತಿದ್ದೇನೆ.        ಒಂದು ಸಾರಿ  ಹೆರಗಿಗೆಂದು ಧಾರವಾಡಕ್ಕೆ ಬರಲು ಬಸ್ ಹತ್ತಿದವಳು ಇನ್ನೇನೂ ಧಾರವಾಡದ ಸಮೀಪ ಇತ್ತು ಆಗಲೇ ಅವಳಿಗೆ ಜೋರಾಗಿ ಹೆರಗೆ ನೋವು ಪ್ರಾರಂಭವಾಯಿತು ಕಂಡಕ್ಟರ ಪ್ರಯಾಣಿಕರನ್ನೆಲ್ಲ ಅಲ್ಲೆ ಇಳಿಸಿದ.  ಅವಳಿಗೆ ಬಸ್ ನಲ್ಲಿಯೇ ಹೆರಿಗೆಯಾಯಿತು.  ಬಸ್ ನಲ್ಲೆ ಮಗುವಾಗಿದ್ದರಿಂದ ಗಂಡಾಗಿದ್ದರೆ ಬಸಪ್ಪ ಎಂದೋ ಹೆಣ್ಣಾಗಿದ್ದರೆ ಬಸವ್ವ ಎಂದೋ ಇಟ್ಟಿರಬಹುದೇನೊ ಎಂಬುದು ನನ್ನ ಅನುಮಾನ. ಸುಮ್ನೆ ಹಾಸಕ್ಕೆ ಹೇಳಿದೆ.  ಅವಳಿಷ್ಟದ ಹೆಸರು ಅವಳಿಟ್ಟರಬಹುದು.        ಕುಂಟುತ್ತಾ ಸಾಗುವ ಬಸ್ಸು ಅದರಲ್ಲೂ ಮಳೆಯಾಯಿತೆಂದರೆ ರೊಡಲ್ಲಿ ಅಲ್ಲಲ್ಲಿ ತಗ್ಗು ಗುಂಡಿಗಳು, ಯೌವನಕ್ಕೆ ಕಾಲಿಟ್ಟ ಹೆಣ್ಣಿನಂತೆ ಉಬ್ಬುತಗ್ಗುಗಳು. ಅಂತುವಗಳನ್ನು ದಾಟುವಾಗ ಬಸ್ಸು ಪುಟಿದೇಳುತ್ತಿತ್ತು. ಹಾಗೆ ಪುಟಿದೆದ್ದಾಗ ಯಾರದೋ ಚೀಲದಲ್ಲಿದ್ದ ಅಕ್ಕಿಕಾಳು ನಮ್ಮೂರಿನಿಂದ ಕಾಲೇಜಿಗೆ ಬರುವ ಒಬ್ಬ ಹುಡಗಿಯ ಮೇಲೆ ಬಿದ್ದು ಬಿಟ್ಟವು.  ಅವಳು ನನಗೆ ಅಕ್ಕಳ ಸಮಾನಳಾಗಿದ್ದಳು.   ಎಲ್ಲರೂ ಗೋಳೊ ಎಂದು ನಗತೊಡಗಿದರು. ಒಬ್ಬ ಅಜ್ಜಿ “ಆತು ತುಗೊ ತಂಗಿ ನಿನ್ನ ಮದುವಿ ಲಗೂ ಆಗ್ತೈತಿ” ಅಂದಾಗ ಹಿಂದೆ ಕುಳಿತಿದ್ದ ಕಿಡಗೇಡಿ ಹುಡಗರು “ಮದುವೆ ಆತು ಡುಮ್ …ಡುಮ್ …”ಎಂದು ಚೇಡಿಸತೊಡಗಿದರು. ಮತ್ತೆ ಕೆಲ ಹುಡಗರು ಸಣ್ಣಗೆ ತಮ್ಮ ತಮ್ಮೊಳಗೆ “ನಮ್ಮೂರ ಯುವ ರಾಣಿ ಕಲ್ಯಾಣ ವಂತೆ ವರನಾರೆಂದು ನೀ ಹೇಳು ಓ….ಕೋಗಿಲೆ..” ಎಂದು ಹಾಡಿದ್ದು ಇದೆ. ಆದರೆ ಪಾಪ ಆಗಿದ್ದೆ ಬೇರೆ ನನಗಿಂತ ನಾಲ್ಕೈದು ವರ್ಷ ದೊಡ್ಡವಳಾದ ಅವಳ ಮದುವೆ ನನ್ನ ಮದುವೆಯಾದ ನಾಲ್ಕೈದು ವರಷಕೆ  ಮದುವೆಯಾಯಿತು.  ಹೀಗೆ ಮೆಲಿಟ್ಟಂತ ಲಗೇಜುಗಳಿಂದ ಕೆಳಗೆ ಕುಳಿತವರ ತಲೆ ಮೇಲೆ ಬಿದ್ದ ಅರಿವೆ, ಉಂಡೆ, ಚಕ್ಕುಲಿ, ಬಾಳೆಹಣ್ಣು, ದ್ರಾಕ್ಷಿ ಹಣ್ಣುಗಳೆಷ್ಟೊ  ಸ್ವಲ್ಪ ಮೇಲ್ಮುಖ ಮಾಡಿದರೆ ಸೀದಾ ಅವರ ಬಾಯಿಗೆ. “ಸೀದಾ ಲಡ್ಡು ಮೂ ಪೆ….” ಯಾವುದೊ ಚಾಕ್ಲೇಟಿನ ಅಡ್ವರಟೈಸ ಒಂದು ಗಕ್ಕನೆ ಬಂದು ಕಣ್ಣು ಮುಂದೆ ಹೋದಂತೆ.       ಒಂದ ಬಾರಿ ಡ್ರೈವರಂತೂ ಬಸ್ ಹತ್ತಿ ಕೂತವನೆ ಬಸ್ ಹೊಡೆಯತೊಡಗಿದ.  ಬಸ್ ನಲ್ಲಿ “ಒಹೊ.. ಒಹೊ….ಬಸ್ ನಿಲ್ಲಸರಿ…” ಎಂದು ಚೀರತೊಡಗಿದರು. ಬಸ್ ಡ್ರೈವರ್ ನ ಕಿವಿ ಮಂದಿದ್ದವೋ ಏನೊ ಗೊತ್ತಿಲ್ಲ ಅವನು ಹಾಗೆ… ಗಾಡಿ ಹೊಡೆಯತೊಡಗಿದ.  ಎಲ್ಲರೂ ಅದರಲ್ಲೂ ಕಿಡಗೆಡಿ ಹುಡಗರು ಕೈಯಿಂದ ಬಸ್ ನ್ನು ಕುಳಿತಲ್ಲಿಂದ ನಿಂತಲ್ಲಿಂದ ಬಡಿಯತೊಡಗಿದರು. ಆಗ ಡ್ರೈವರ್ ಎಚ್ಚತ್ತು ಏತಕೆ ಬಸ್ಸ ಬಡಿಯುತ್ತಿರುವರು ಎಂದು ಬಸ್ ನಿಲ್ಲಿಸಿದ. ಆಗಲೇ ಅವನಿಗೆ ಗೊತ್ತಾಗಿದ್ದು ತಾನು ಕಂಡಕ್ಟರನನ್ನೆ ಬಿಟ್ಟು ಬಂದಿದ್ದೇನೆ ಎಂದು.  ಅದಾಗಲೇ ಬಸ್ ಬಸ್ ಸ್ಟ್ಯಾಂಡಿಂದ ಎರಡು ಕಿಲೊಮಿಟರ್ ಬಂದಿತ್ತು. ಡ್ರೈವರ್ ಮತ್ತೆ ಬಸ್ ನ್ನು ಹೊರಳಿಸಿ ಬಸ್ ಸ್ಟ್ಯಾಂಡ ಕಡೆಗೆ ಹೊಡೆದ. ಬಸ್ ನಲ್ಲಿದ್ದ  ಕೆಲವರು  “ಹಂಗ…. ಇದ್ದರ.. ಡ್ರೈವರ ನಮ್ಮ ಊರ ಮಟಾ… ಗಾಡಿ ಹೊಡಿತಿದ್ದ. ಇವತ್ತು ಪ್ರೀ ಯೊಳಗ… ಮನಿಗೆ ಹೋಗ್ತಿದ್ವಿ. ನಮ್ಮ ರೊಕ್ಕ ಲುಕ್ಸಾನ ಆತು ನೋಡ…” ಎಂದು ಪರದಾಡತೊಡಗಿದರು.  ಬಸ್ಸಿನಲ್ಲಿದ್ದ ನನ್ನ ಸ್ನೇಹಿತೆಯರು ಆಮೇಲೆ ಬೇರೆಯವರಿಗೆ ಆ ಸಂಗತಿ ಹೇಳಿ ನಕ್ಕಿದ್ದೆ ನಕ್ಕಿದ್ದು.     ಮೊದಲೇ ಡಕೊಟಾ ಬಸ್ ಕೆಲವೊಂದ ಸಾರಿ ಪ್ರಯಾಣಿಕರನೆಲ್ಲಾ ಹತ್ತಿಸಕೊಂಡು ಡಿಪೊಕೆ ತಂದು ರಿಪೇರಿ ಮಾಡಿಸಲು ನಿಲ್ಲಿಸುತ್ತಿದ್ದ. ಮೊದಲೆ ತಾಸ ಗಟ್ಟಲೆ ಬಸ್ ಸ್ಟ್ಯಂಡಲ್ಲಿ ಕಾದು ಕುಳಿತವರಿಗೆ ಇದನ್ನ ಕಾಯುವದೆಂದರೆ ಹೆಣಾ ಕಾದಷ್ಟು ಸಂಕಟಾ ಆಗುತ್ತಿತ್ತು. ಬೆಳಿಗ್ಗೆ ಹೋಗುವಾಗಲೂ ಅಷ್ಟೆ ಧಾರವಾಡ ಮುಟ್ಟಿದಾಗ ಎಲ್ಲಿ ಕ್ಲಾಸ ತಪ್ಪುತ್ತದೊ ಎಂದು ಗಡಿಬಿಡಿಯಲ್ಲಿ ಸಾಮಾನುಗಳಿಡುವ ಪಟ್ಟಿಯಿಂದ (longer,/rack) ನೊಟುಬುಕ್ ಗಳು ನಮ್ಮುವ ಹೌದೊ ಅಲ್ಲೊ ಎಂದು ನೋಡದೆ ಎತ್ತಿಕೊಂಡು ಹೋಗುತ್ತಿದ್ದೇವು.

“ಡಕೊಟಾ ಎಕ್ಸಪ್ರೆಸ್” (ನೆನಪುಗಳ ಜರ್ನಿ)ಶ್ರೀದೇವಿ. ಮ.ಗುಮ್ಮಗೋಳ. Read Post »

ಇತರೆ

“ಎಲ್ಲಿಗೆ ಹೊರಟ್ಯೋ ವಿಕಟಕವಿ ಬಾ ಟೀ ಕುಡಿಸು..”ಹಾಸ್ಯಲೇಖನ,ಗೊರೂರು ಅನಂತರಾಜು

ಹಾಸ್ಯ ಸಂಗಾತಿ ಗೊರೂರು ಅನಂತರಾಜು “ಎಲ್ಲಿಗೆ ಹೊರಟ್ಯೋ ವಿಕಟಕವಿ ಬಾ ಟೀ ಕುಡಿಸು..” ಬೆಳಿಗ್ಗೆ ಎಂಟು ಗಂಟೆ. ಸೋಮುವಾರ ವಾರದ ಪೂಜೆಗೆ ಹೂ ಹಣ್ಣು, ತಿಂಡಿಗೆ ತರಕಾರಿ ತರಲು ನಗರದ ಕಟ್ಟಿನಕೆರೆ ಮಾರ್ಕೇಟಿಗೆ ಬಂದಿದ್ದೆ. ಪಿಕ್ಚರ್ ಪ್ಯಾಲೇಸ್ ಥಿಯೇಟರ್‌ನಲ್ಲಿ ಹಳೇ ಚಿತ್ರದ ಪೋಸ್ಟರ್ ಕಣ್ಣಿಗೆ ಬಿತ್ತು. ಅದು ಅಂದಿನ ಕಾಲದ ಬಾಂಡ್ ಸಿನಿಮಾ ಜೇಡರ ಬಲೆ. ವಿದ್ಯಾರ್ಥಿ ದಿನಗಳಲ್ಲಿ ನಮ್ಮೂರ ಶ್ರೀ ಯೋಗನರಸಿಂಹಸ್ವಾಮಿ ಜಾತ್ರೆಗೆ ನೋಡಿದ್ದೆ. ಅದೇನು ಭಯಂಕರ ಹೊಡೆದಾಟ, ನಮ್ಮೂರ ಜಯಣ್ಣ, ಎತ್ತಿನಗಾಡಿಗೆ ಪೋಸ್ಟರ್ ಅಳವಡಿಸಿ ‘ ನೋಡಲು ಮರೆಯದಿರಿ. ಮರೆತು ಮರುಗದಿರಿ. ಭಯಂಕರ ಹೊಡೆದಾಟಗಳಿಂದ ಕೂಡಿದ ಚಿತ್ರ. ಜೇಡರಬಲೆ..ಎಂ.ಪಿ.ಶಂಕರ್ ಕೊಲೆ.. ಜಯಣ್ಣನ ರೋಚಕ ಪ್ರಚಾರಕ್ಕೆ ಆಕರ್ಷಿತನಾಗಿ ಟೆಂಟ್ ಸಿನಿಮಾದಲ್ಲಿ ಫ್ರಂಟ್ (ನೆಲ) ನಲ್ಲಿ ಕುಳಿತು ಸಿನಿಮಾ ನೋಡಿದ್ದೆ. ದಡ್.! ನನ್ನ ಕುತ್ತಿಗೆ ಮೇಲೆ ಬಲವಾದ ಪೆಟ್ಟು ಬಿದ್ದು ತಿರುಗಿ ನೋಡಿದೆ. ಕಟ್ಟುಮಸ್ತಾದ ಆಳು! ಕನ್ನಡದ ಕಟ್ಟಾಳು! ಮೀಸೆ ಗೋಪಾಲ. ಬಿದ್ದ ಏಟಿನ ನೋವಿಗೆ ದವಡೆಗೆ ಹೊಡೆಯುವ ಸಿಟ್ಟು ಬಂದರೂ ಹೊಡೆಯಲಾದೀತೆ ಈ ಬಡಕಲು ಶರೀರದ ಕವಿಗೆ.! ಶಕುನಿಯ ಮಾಯ ನೋಟದಂತೆ ಪೋಸ್ ಕೊಟ್ಟು  ವಕ್ರನೋಟದಿ  ನಕ್ಕೆ.“ಎಲ್ಲಿಗೆ ಹೊರಟ್ಯೋ ವಿಕಟಕವಿ. ಬಾ ಟೀ ಕುಡಿಸು..” ತರಕಾರಿ ತರಲು ಹೋಗಬೇಕು ಗುರು.. “ ಹೋಗುವೆ ಬಾ. ಅಪರೂಪಕ್ಕೆ ಸಿಕ್ಕಿದ್ದೀಯ.  ಗುರು ಭವನದಲ್ಲಿ ಟೀ ಕುಡಿಸು ಬಾ.. ಎಂದು ಹೊರಟ ಕಟ್ಟಾಳುವನ್ನು ಹಿಂಬಾಲಿಸಿದೆ.  ಗುರು ಭವನದಲ್ಲಿ ನಮ್ಮ  ಗುರುಗೋಪಾಲರು ಒಂದು ಮಸಾಲೆ ದೋಸೆಗೆ ಆರ್ಡರ್ ಮಾಡಿದರು.“ ನಿನಗೆ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಸಿಕ್ಕಿಲ್ಲವೇನೋ ಕವಿ.. ದೋಸೆಯನ್ನು ಬಾಯಿಗೆ ತುರುಕುತ್ತಾ ಕೇಳಿದರು ಗುರುಗಳು.“ ಇಲ್ಲಾ ಗುರುವೇ. ಪ್ರಶಸ್ತಿಗೆ ಅರ್ಜಿ ಹಾಕಿ ಪ್ರಶಸ್ತಿ ಪಡೆಯಬೇಕೆ? ಗುರುತಿಸಿಕೊಡುವುದು  ಧರ್ಮ ಅಲ್ಲವೇ..?“ಅಯ್ಯೋ ನಿನ್ನ ಕರ್ಮವೇ.! ಎಷ್ಟು ಪುಸ್ತಕ ಬರೆದಿದ್ದಿಯ..?“ ಅರವತ್ತು ದಾಟಿದೆ.. ವಯಸ್ಸು ಅರವತ್ನಾಲ್ಕು ದಾಟಿದೆ.“ ಜಿಲ್ಲೆದು ಆಗಿದೆ ಅಲ್ವೆ.? ಹೌದು ಬಹಳ ಹಿಂದೆಯೇ ಆಗಿದೆ.. ಸರಿ, ಏನಾದ್ರೂ ಮಾಡುವ.. ಈಗ ಒಂದು ಟೀಗೆ ಆರ್ಡರ್ ಮಾಡು..ಬೈಟು ಹೇಳಬೇಡ.“ಸರಿ ಅಣ್ಣ.. ಎಂದು ಬಾಯಿಬಿಟ್ಟು ಹೇಳಿ ವಯಸ್ಸಿನಲ್ಲಿ ನನಗಿಂತ ಸಣ್ಣ..ಎಂದು ಗೊಣಗಿಕೊಂಡೆ.  ‘ಡರ್..! ಎಂದು ತೇಗಿ ‘ಹುಳಿ ತೇಗೆಂದು ಗೊಣಗಿದರು ಗುರು ದ್ರೋಣಚಾರ್ಯರು ಬಿಲ್ಲು ಬಿಡಲಿಲ್ಲ. ನಾನು ಕೊಟ್ಟೆ. ಹೋಟೆಲ್ ನಿಂದ  ಹೊರಗೆ ಬಂದೆವು. ಅಣ್ಣ ನೀವೀಗ ಫಿಲಂ ಸೆನ್ಸಾರ್ ಮಂಡಳಿಯ ಸದಸ್ಯರಲ್ಲವೇ..“ ಕಟ್.! ಹೇ ವಿಕಟಕವಿ  ಆ ಸೆನ್ಸಾರ್ ವಿಷಯವೆಲ್ಲಾ ಹಾದಿ ಬೀದಿಯಲ್ಲಿ ಮಾತನಾಡಬಾರದು.. ಎಂದು ನನ್ನ ಮಾತಿಗೆ ಕತ್ತರಿ ಹಾಕಿ “ಈಗ ಹೇಳು ನಿನ್ನ ಬರವಣಿಗೆ ಹೇಗೆ ಸಾಗಿದೆ. ಬರೇ ಚುಟುಕ ಬರೆದುಕೊಂಡು ಸಮಾಜವನ್ನು ಕುಟುಕುತ್ತಿರುವೆಯಾ  ಹೇಗೆ ಕಟುಕ..?“ಅಣ್ಣಾವರ ಮಾತು ಯಾವಾಗಲೂ ಕಟುವೇ.! ಏನೂ ಮಾಡುವುದು ಮಾತು ಎಷ್ಟೇ ಕಹಿಯಾದರೂ ಅರಗಿಸಿಕೊಳ್ಳಲೇಬೇಕು.‘ಹಾಂ ಗೋಪಾಲ್ ಜೀ..  ದಿನಾ ಬೆಳಿಗ್ಗೆ ನಮ್ಮ ಹಾಸನ್  ಚುಟುಕು ಕವಿ ಕುಮಾರ್ ಅವರು ಹೊಸ ಹೊಸ ಹಸನಾದ ಕವಿತೆ ಹೊಸೆದು ವ್ಯಾಟ್ಸಪ್‌ನಲ್ಲಿ  ನಿಮ್ಮ ನಂಬರನ್ನು ನಮ್ಮ ರೈರ‍್ಸ್  ಗ್ರೂ:ಪ್‌ಗೆ  ಸೇರಿಸಲೇ..“ ಯಾವುದೇ ಕಾರಣಕ್ಕೂ ಬೇಡ. ನಾನು ಈಗಾಗಾಲೇ ಸಾಕಷ್ಟು ರೈರ‍್ಸ್ ಗ್ರೂಪ್ ನಿಂದ ಲೆಫ್ಟ್ ಆಗಿದ್ದೇನೆ. ಇರಲಿ, ನೀನು ಆಗೆಲ್ಲಾ ಲೋಕಲ್ ಪೇಪರ್ ನಲ್ಲಿ  ಚುಟುಕು ಬರೀತ್ತಿದ್ದೆಯೆಲ್ಲಾ.. ಇನ್ನೂ ಜಿಲ್ಲೆಯಲ್ಲೇ ಉಳಿದಿದ್ದಿಯೋ.. ಸ್ಟೇಟ್‌ಗೆ ಪ್ರಮೋಟ್ ಆಗಿದ್ದೀಯೊ..? ಮೊನ್ನೆ ಯಾವುದೋ ನ್ಯೂಸ್ ಪೇಪರ್‌ನಲ್ಲಿ ನಿನ್ನ ನಾನ್ಸೆನ್ಸ್ ಪೊಯೆಂ ನೋಡಿದೆ. ಸರಿ, ಹೇಗಾದ್ರೂ ರ‍್ಕೊಂಡು ಸಾಯಿ.  ಈಗ ನನ್ನ ತಲೆ ಬಿಸಿ ಆಗಿದೆ. ಒಂದು ಬರಕ್ಲೇ ಸಿಗರೇಟು ಕೊಡಿಸು ಬಾ ಎಂದು ಬೀಡಾ ಅಂಗಡಿಗೆ ಕರೆದೊಯ್ದರು. ಅಣ್ಣನನ್ನು ಬೇಗ ಬೀಳ್ಕೊಡಬೇಕು. ಇಲ್ಲವಾದರೇ ಬೀಳುತ್ತೆ ಬರೆ.!“ಇತ್ತೀಚಿಗೆ ನವ್ಯ ಕವಿಗಳು ಜಡೆ ಕವಿತೆ ಬರೆಯುತ್ತಿದ್ದಾರಲ್ಲಾ. ನೀನ್ಯಾವ ಜಡೆಗೆ ಕೈ ಹಾಕಿಲ್ಲವೇನೋ ವಿಕಟಕವಿ. ಸಿಗರೇಟ್ ಹೊಗೆ ಉಗುಳಿ ಅಣ್ಣ ನಿರಾಳ ಮನಸ್ಥಿತಿಗೆ ಬಂದರು.  ‘ಗೋಪಾಲು, ನಾನಿನ್ನು  ಜಡೆ ಕವಿತೆ ಬರೆಯಲು ಪ್ರಯತ್ನಿಸಿಲ್ಲ. ಆದರೆ ಹಿಂದೊಮ್ಮೆ ಟೂ ಲೈನ್ ಚುಟುಕ ಬರೆದಿದ್ದೆ. ಅದನ್ನು ಇಲ್ಲೇ ಈಗಲೇ ವಾಚಿಸುವೇ ಕೇಳಿ ಪ್ಲೀಸ್..ದ್ರೌಪದಿ ತೊಟ್ಟಿದ್ದರೆ ಚೂಡಿದಾರದುಶ್ಯಾಸನ ಎಳೆಯುತ್ತಿದ್ದನೆ ದಾರ..“ಲೇ ಪ್ರಾಸ ಕವಿ, ನೀನು ಹೀಗೆ ಹಾದಿ ಬೀದಿಯಲ್ಲೆಲ್ಲಾ ಚುಟುಕು ವಾಚಿಸಿದರೆ ಅಟ್ಟಿಬಿಡುವೆ ರುದ್ರಪಟ್ಟಣಕ್ಕೆ.! ಲೇ ಕವಿ, ಯಾಕೋ ಹೊಟ್ಟೆನೋವು ಶುರು ಆಗ್ತಾ ಇದೆ. ಈಗ ಗ್ಯಾಸ್‌ಗೆ ಟ್ರಬಲ್ ಟ್ಯಮ್.  ಅವನ್ಯಾರೋ, ಹಳೇ ದೋಸೆ ಮಗಚಿ ಹಾಕಿ ನನ್ನ ಹೊಟ್ಟೆಗೆ ಗ್ಯಾಸ್ ತಂದಿಟ್ಟದ್ದಾನೆ. ಸರಿ ನೀನು ಮನೆಗೆ ಹೊರಡು.  ನಾನು ಹೊರಡುತ್ತೇನೆ. ಇದೇ ಇವತ್ತಿನ ಮೊದಲನೇ ಪಾಠ. ಅಂದ್ಹಾಗೆ ನಿನ್ನ ಚುಟುಕು ಕೇಳಿ  ನನಗೆ ನೆನಪಾಯಿತು. ಇವತ್ತು ಹಾಸನಾಂಬ ಕಲಾಕ್ಷೇತ್ರದಲ್ಲಿ ಕುರುಕ್ಷೇತ್ರ ನಾಟಕದಲ್ಲಿ ದ್ರೌಪದಿ ವಸ್ತಾçಪಹರಣ ದೃಶ್ಯ ವೀಕ್ಷಿಸಿ ಸೆನ್ಸಾರ್ ಮಂಡಳಿಗೆ ವರದಿ ಕಳಿಸಬೇಕು.. ಎಂದು ಸಿಗರೇಟ್ ತುಂಡನ್ನು ಕಾಲಿನಿಂದ ಹೊಸಕಿ ದುಶ್ಯಾಸನನಂತೆ ನಕ್ಕನು.ಅಯ್ಯೋ, ಗೋಪಾಲ  ಕುರುಕ್ಷೇತ್ರ ನಾಟಕದಲ್ಲಿ ಆ ದೃಶ್ಯ ಇಲ್ಲ..! ಗೊರೂರು ಅನಂತರಾಜು, ಹಾಸನ. ಮೊ: ೯೪೪೯೪೬೨೮೭೯.ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್,ಹಾಸನ-೫೭೩೨೦೧.

“ಎಲ್ಲಿಗೆ ಹೊರಟ್ಯೋ ವಿಕಟಕವಿ ಬಾ ಟೀ ಕುಡಿಸು..”ಹಾಸ್ಯಲೇಖನ,ಗೊರೂರು ಅನಂತರಾಜು Read Post »

ಕಾವ್ಯಯಾನ

ಪುಸ್ತಕದಿನದ ಅಂಗವಾಗಿ ಕವಿತೆ “ಅತ್ಮೀಯ ಸ್ನೇಹಿತೆ” ಅನ್ನಪೂರ್ಣ ಸಕ್ರೋಜಿ ಪುಣೆ

ಕಾವ್ಯ ಸಂಗಾತಿ ಅನ್ನಪೂರ್ಣ ಸಕ್ರೋಜಿ ಪುಣೆ “ಅತ್ಮೀಯ ಸ್ನೇಹಿತೆ” ಹೊತ್ತು ಹೊತ್ತಿಗೆ ಸಲಹೆ ಕೊಡುವನನ್ನ ಆತ್ಮ ಸ್ನೇಹಿತೆ ನೀನುನಿನ್ನ ಅಂತರಂಗವರಿತಾಗ ಕೊಡುವನನ್ನ ಮುತ್ತಿಗೆ ಕಾಯುವೆ ನೀ// ಒಂಟಿತನದ ಜಾತ್ರೆಯಲಿ ಕೂಡಸಂಭ್ರಮಿಸುವಂತೆ ಮಾಡುವೆದಿನನಿತ್ಯ ನಿನ್ನ ಜೊತೆ ಮಾತಾಡಿಮಾತಿನಮಲ್ಲಿ ಮಾಡಿರುವೆ// ರಣ ಬಿಸಿಲಿನಲ್ಲಿ ನಾ ಬೆಂದಾಗಹೃದಯಕ್ಕೆ ತಂಪನೀಯುವೆಮಲ್ಲಿಗೆಯ ಪರಿಮಳ ಬೀರುತಕವಿಯ ಎದೆ ಅರಳಿಸುವೆ// ಶರಣರ ಸಂತರ ಜ್ಞಾನಿಗಳೆಲ್ಲರಸಾಹಿತ್ಯ ಪರಿಚಯಿಸುವೆತಂತ್ರಜ್ಞಾನ ವಿಜ್ಞಾನ ಸುಜ್ಞಾನಗಳಅರಿವು ಮೂಡಿಸುವೆ// ಭಗವದ್ಗೀತೆ ಭಾಗವತ ಇತಿಹಾಸವೇದಾಂತ ಉಪನಿಷತ್ತುಅಡುಗೆಅರಮನೆ ಸಂಗೀತ ಶಾಸ್ತ್ರಓದುವಾಗಿನ ಗಮ್ಮತ್ತು// ನಿನ್ನಲ್ಲಿಯ ಸಮಭಾವ ನನಗೆತುಂಬಾ ಇಷ್ಟ ಗೆಳತಿವರ್ಣ ವರ್ಗ ಲಿಂಗ ಜಾತಿ ಭೇದಇಲ್ಲದ ಎಲ್ಲರ ಗೆಳತಿ // ಕಥೆಯಾಗಿ ಕಾದಂಬರಿಯಾಗಿಮನವನಾಳುತಿರುವೆಅತೀ ಸಾಮಾನ್ಯ ಅನೂಳನ್ನುಕವಯಿತ್ರಿ ಮಾಡಿರುವೆ// ಬದುಕಿನ ಪಾಠ ನಿತ್ಯ ಕಲಿಸುವಪುಟ್ಟ ಜ್ಞಾನ ಹೊತ್ತಿಗೆ ನೀಸಾಧಕರಿಗೆ ಸಾಧನೆಯಾಗುತಲಿಪ್ರಖರ ಜ್ಞಾನ ದೀವಿಗೆ ನೀ// ಅನ್ನಪೂರ್ಣ ಸಕ್ರೋಜಿ ಪುಣೆ

ಪುಸ್ತಕದಿನದ ಅಂಗವಾಗಿ ಕವಿತೆ “ಅತ್ಮೀಯ ಸ್ನೇಹಿತೆ” ಅನ್ನಪೂರ್ಣ ಸಕ್ರೋಜಿ ಪುಣೆ Read Post »

ಅಂಕಣ ಸಂಗಾತಿ, ವೀಣಾ-ವಾಣಿ

ಅಂಕಣ ಸಂಗಾತಿ ವೀಣಾವಾಣಿ ವೀಣಾ ಹೇಮಂತ್‌ ಗೌಡಪಾಟೀಲ್ “ಜಗವೇ ಒಂದು ನಾಟಕ ರಂಗ…. ಷೇಕ್ಸಪಿಯರ್ ( ಹುಟ್ಟು ಹಬ್ಬದ ನಿಮಿತ್ತ )”  ಶೇಕ್ಸ ಪಿಯರ್ ನ ನಾಟಕವೊಂದರಲ್ಲಿ ಬರುವ‘ ಈ ಜಗವೇ ಒಂದು ನಾಟಕ ರಂಗ,ನಾವೆಲ್ಲರೂ ಇಲ್ಲಿ ನಟಿಸುವವರು’ ಎಂಬುದು ಇಂಗ್ಲಿಷ್ ಸಾಹಿತ್ಯದಲ್ಲಿ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ವಾಕ್ಯವಾಗಿದೆ. ಯಾವ ರೀತಿ ಬಳಸಿದರೂ ಕೂಡ ಇದು ಎಲ್ಲರಿಗೂ ಅನ್ವಯವಾಗುವ ರೀತಿಯಲ್ಲಿ ಇರುವ ಕಾರಣವೇ ಇದರ ಬಳಕೆ ಹೆಚ್ಚಾಗಿರುವುದು. ಶೇಕ್ಸ್ ಪಿಯರ್ ನ ನಾಟಕದ ಒಂದು ಪಾತ್ರವಾದ ಜಾಕ್ ಮಾನವ ಜೀವನದ ಕುರಿತಾದ ತನ್ನ ಒಂದು ಸಂವಾದದಲ್ಲಿ ಹೇಳಿದ್ದಾನೆ. ಆಸ್ ಯು ಲೈಕ್ ಇಟ್ ಎಂಬ ನಾಟಕದಲ್ಲಿ ಜಾಕ್ ಎಂಬ ಪಾತ್ರಧಾರಿ ಮನುಷ್ಯನ ಬದುಕಿನ ಕುರಿತಾದ ಈ ಅತ್ಯಂತ ಸರಳವಾದ ಆದರೆ ಅಷ್ಟೇ ಶಕ್ತಿಶಾಲಿಯಾದ ಈ ಹೋಲಿಕೆಯ ಮಾತು ಸಾರ್ವತ್ರಿಕವಾಗಿ ಮೆಚ್ಚುಗೆಯನ್ನು ಬೆಳೆಸಿತು ಮಾತ್ರವಲ್ಲ ಎಲ್ಲೆಡೆ ತನ್ನದೇ ಆದ ರೀತಿಯಲ್ಲಿ ರೂಪಾಂತರಗೊಂಡು ಹರಡಿತು. ಇಲ್ಲಿ ನಾಟಕಕಾರರಾದ ಶೇಕ್ಸ ಪಿಯರ್ ಬದುಕನ್ನೇ ಒಂದು ರಂಗಭೂಮಿಯನ್ನಾಗಿಸಿದ್ದು ಮತ್ತಷ್ಟು ವಿಶೇಷ.  ಈ ಹೋಲಿಕೆಯು ಈ ಜಗತ್ತು ಒಂದು ನಾಟಕ ರಂಗ. ಈ ಭೂಮಿಗೆ ಬಂದಿರುವ ನಾವೆಲ್ಲರೂ ವಿವಿಧ ಪಾತ್ರಗಳನ್ನು ವಹಿಸಿರುವ ಪಾತ್ರಧಾರಿಗಳು. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ವಿಭಿನ್ನ ಪಾತ್ರವನ್ನು ತನಗೆ ಕೊಟ್ಟ ಸಮಯದಲ್ಲಿ ಮಾಡಲೇಬೇಕು. ಇಲ್ಲಿ ವ್ಯಕ್ತಿಯ ಅಸ್ಮಿತೆಯು ಅನಿಶ್ಚಿತವಾಗಿದ್ದು ಬದುಕಿನ ,ಹತ್ತು ಹಲವು ವಿಭಿನ್ನ ಹಂತಗಳಲ್ಲಿ ಹಾದು ಹೋಗುವ ನಾವುಗಳು ವೈವಿಧ್ಯಮಯವಾದ ಭಾವ,ಭಂಗಿ, ಯೋಚನೆ, ಯೋಜನೆ  ಹಾಗೂ ಗ್ರಹಿಕೆಗಳನ್ನು ಹೊಂದಿರುತ್ತೇವೆ. ಇಲ್ಲಿ ಪ್ರತಿಯೊಬ್ಬರ ನಡವಳಿಕೆಯು ವಿಭಿನ್ನ ಅವರ ಆಸೆ ಆಕಾಂಕ್ಷೆಗಳು ಭಾವನೆಗಳು ಬದುಕಿನ ಕುರಿತಾದ ಅವರ ಕಲ್ಪನೆಗಳು ಬೇರೆಯೇ ಆಗಿರುತ್ತವೆ. ತೆರೆಯ ಮೇಲೆ ಪಾತ್ರಗಳು ಬಂದು ಹೋಗುವಂತೆ ನಾವು ಕೂಡ ಬದುಕು ಎಂಬ ಈ ರಂಗಭೂಮಿಯಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸಿ ಹೊರಟು ಹೋಗುತ್ತೇವೆ. ಈ ಸಂವಾದವು ಮುಂದುವರೆದಂತೆ ಶೇಕ್ಸ ಪಿಯರ್ ಶೈಶವಾವಸ್ತೆಯಿಂದ ವೃದ್ಧಾಪ್ಯದವರೆಗಿನ ಮನುಷ್ಯನ ಬದುಕಿನ ಏಳು ಹಂತಗಳನ್ನು ಪಾತ್ರಧಾರಿಯ ಮೂಲಕ  ವಿವರಿಸುತ್ತಾರೆ. ಪ್ರತಿಯೊಂದು ಪಾತ್ರವು ತನ್ನದೇ ಆದ ಸಮಯದ ಮಿತಿಯಲ್ಲಿ ಸುತ್ತಮುತ್ತಣ ಸಾಮಾಜಿಕ ಬದುಕಿನೊಂದಿಗೆ ಮಿಳಿತಗೊಂಡು ರೂಪುಗೊಳ್ಳುವ ವಿಧವನ್ನು ತೋರ್ಪಡಿಸುತ್ತಾರೆ. ಈ ಹಂತಗಳು ಮನುಷ್ಯನ ಬದುಕಿನಲ್ಲಿ ಉಂಟಾಗುವ ನಿರಂತರ ಬದಲಾವಣೆಗಳ ಕಾರಣದಿಂದಾಗಿ ಆತನ ಅಸ್ತಿತ್ವದಲ್ಲಿನ ಬದಲಾವಣೆಯನ್ನು ಕೂಡ ತೋರ್ಪಡಿಸುತ್ತದೆ. ಮತ್ತೇ ಕೆಲವೊಮ್ಮೆ ವ್ಯಕ್ತಿಯು ತನ್ನ ವೈಯುಕ್ತಿಕ ಆಯ್ಕೆಗಳ ಪರಿಣಾಮವಾಗಿ ಹಾಗೂ ಬಾಹ್ಯವಾಗಿ ತಾನು ಎದುರಿಸುವ ಸವಾಲುಗಳ ಪರಿಣಾಮವಾಗಿ ಬದಲಾಗುತ್ತಾನೆ ಎಂಬುದನ್ನು ಆತ ತನ್ನ ಪಾತ್ರಗಳ ಮೂಲಕ ಸೂಚಿಸುತ್ತಾರೆ. ಇದು ವ್ಯಕ್ತಿಯ ಬದುಕಿನ ವಿಶ್ವಾಸಾರ್ಹತೆಯ ಪ್ರತಿಫಲನವಾಗಿದ್ದು ಬದುಕನ್ನು ಆತ ರೂಢಿಸಿಕೊಂಡಂತೆ ಬದುಕು ಆತನಿಗೆ ದೊರೆಯುತ್ತದೆ. ಮನುಷ್ಯ ಮುಖವಾಡ ಧರಿಸಿಕೊಂಡು ಬದುಕುತ್ತಾನೆಯೋ ಇಲ್ಲವೋ ಎಂಬುದನ್ನು ಆತನ ನಡತೆಯಿಂದ ಎಷ್ಟೋ ಬಾರಿ ಗೊತ್ತು ಮಾಡಿಕೊಳ್ಳಬಹುದು…. ಷೇಕ್ಸ್ ಪಿಯರ್ ಇಲ್ಲಿ ಹೇಳುವುದು ಮನುಷ್ಯ ಸಂಘ ಜೀವಿ. ಸಾಮಾಜಿಕ ರೀತಿ ನೀತಿಗಳು ಬಹಳಷ್ಟು ಬಾರಿ ಮನುಷ್ಯನ ಮೇಲೆ ಪ್ರಭಾವ ಬೀರುತ್ತವೆ. ಅಂತಯೇ ಬದುಕಿನ ಆತನ ಪಾತ್ರವನ್ನು ಆತ ತನಗೆ ಸರಿ ಕಂಡಂತೆ ಬದುಕುತ್ತಾನೆ.  ಕೆಲಬಾರಿ ಮನುಷ್ಯ ಆತನ ಅಸಲಿಯತ್ತೇ ಗೊತ್ತಿರದಂತಹ ಮುಖವಾಡದ ಬದುಕನ್ನೇ ಬದುಕುತ್ತಾನೆ, ಬಹಳಷ್ಟು ಬಾರಿ ಮುಖವಾಡಗಳು ಕಳಚಿ ಬೀಳುತ್ತವೆ. ಆದಾಗ್ಯೂ, ಹೋಲಿಕೆ ಸಂಪೂರ್ಣವಾಗಿ ನಿರ್ಣಾಯಕವಲ್ಲ. ನಟರು ನಾಟಕಕ್ಕೆ ಜೀವ ತುಂಬುವಂತೆಯೇ, ವ್ಯಕ್ತಿಗಳು ತಮ್ಮ ಕ್ರಿಯೆಗಳ ಮೂಲಕ ಅಸ್ತಿತ್ವಕ್ಕೆ ಅರ್ಥವನ್ನು ನೀಡುತ್ತಾರೆ. ಪ್ರತಿಯೊಂದು ಪಾತ್ರವು ತಾತ್ಕಾಲಿಕವಾಗಿದ್ದರೂ ಸಹ, ಜೀವನದ ವಿಶಾಲ ಕಥೆಗೆ ಕೊಡುಗೆ ನೀಡುತ್ತದೆ. ಅರ್ಥವು ಶಾಶ್ವತತೆಯಿಂದಲ್ಲ, ಆದರೆ ಈ ಬದಲಾಗುತ್ತಿರುವ ಪಾತ್ರಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉದ್ಭವಿಸುತ್ತದೆ.ತಾತ್ವಿಕ ದೃಷ್ಟಿಕೋನದಿಂದ, ಈ ಸಾಲು ಬದಲಾವಣೆಯ ಅನಿವಾರ್ಯತೆ ಮತ್ತು ಸಮಯದ ಅಂಗೀಕಾರವನ್ನು ಎತ್ತಿ ತೋರಿಸುತ್ತದೆ. ಜೀವನದ ಯಾವುದೇ ಹಂತವು ಶಾಶ್ವತವಲ್ಲ; ಪ್ರತಿಯೊಂದೂ ಅಂತಿಮವಾಗಿ ಇನ್ನೊಂದಕ್ಕೆ ದಾರಿ ಮಾಡಿಕೊಡುತ್ತದೆ. ಇದು ಶ್ರೀಮಂತಿಕೆ ಮತ್ತು ಅಸ್ಥಿರತೆಯ ಭಾವನೆಯನ್ನು ಸೃಷ್ಟಿಸುತ್ತದೆ – ಜೀವನವು ಅನುಭವದಿಂದ ತುಂಬಿದೆ, ಆದರೆ ಅಂತಿಮವಾಗಿ ಕ್ಷಣಿಕವಾಗಿದೆ.ಆಧುನಿಕ ಜಗತ್ತಿನಲ್ಲಿ ಈ ಕಲ್ಪನೆಯು ಪ್ರತಿಧ್ವನಿಸುತ್ತಲೇ ಇದೆ, ಅಲ್ಲಿ ಜನರು ನಿಯಮಿತವಾಗಿ ವಿದ್ಯಾರ್ಥಿ, ವೃತ್ತಿಪರ, ಪೋಷಕರು ಅಥವಾ ಸ್ನೇಹಿತರಂತಹ ಪಾತ್ರಗಳ ನಡುವೆ ಬದಲಾಗುತ್ತಾರೆ. ನಡವಳಿಕೆಯು ಹೆಚ್ಚಾಗಿ ಸಂದರ್ಭಕ್ಕೆ ಹೊಂದಿಕೊಳ್ಳುತ್ತದೆ, ಶೇಕ್ಸ್‌ಪಿಯರ್ ವಿವರಿಸಿದ ಅದೇ ಪ್ರದರ್ಶನದ ಅಂಶವನ್ನು ಪ್ರತಿಬಿಂಬಿಸುತ್ತದೆ. ಅವರ ಒಳನೋಟವು ಸಾರ್ವತ್ರಿಕ ಮಾನವ ಅನುಭವವನ್ನು ಸೆರೆಹಿಡಿಯುವುದರಿಂದ ಅದು ಪ್ರಸ್ತುತವಾಗಿದೆ.ಈ ಸಾಲಿನ ಬಲವು ಅದರ ಸ್ಪಷ್ಟತೆ ಮತ್ತು ಆಳದಲ್ಲಿದೆ. ಜೀವನವನ್ನು ಒಂದು ಹಂತಕ್ಕೆ ಹೋಲಿಸುವ ಮೂಲಕ, ಶೇಕ್ಸ್‌ಪಿಯರ್ ಗುರುತು, ನಡವಳಿಕೆ ಮತ್ತು ಸಮಯವನ್ನು ಅರ್ಥಮಾಡಿಕೊಳ್ಳಲು ಸರಳವಾದ ಆದರೆ ಆಳವಾದ ಮಾರ್ಗವನ್ನು ನೀಡುತ್ತಾರೆ. ರೂಪಕವು ಗ್ರಹಿಸಲು ಸುಲಭ, ಆದರೆ ವ್ಯಾಖ್ಯಾನದಲ್ಲಿ ಸಮೃದ್ಧವಾಗಿದೆ.ಕೊನೆಯಲ್ಲಿ, “ಇಡೀ ಜಗತ್ತು ಒಂದು ವೇದಿಕೆ” ಎಂಬುದು ಕಾವ್ಯಾತ್ಮಕ ಅಭಿವ್ಯಕ್ತಿಗಿಂತ ಹೆಚ್ಚಿನದಾಗಿದೆ – ಇದು ಮಾನವ ಅಸ್ತಿತ್ವದ ಆಳವಾದ ಪ್ರತಿಬಿಂಬವಾಗಿದೆ. ಜೀವನವು ಒಂದೇ, ಸ್ಥಿರ ಗುರುತಿನಿಂದ ವ್ಯಾಖ್ಯಾನಿಸಲ್ಪಟ್ಟಿಲ್ಲ, ಆದರೆ ಸಮಯ, ಸಮಾಜ ಮತ್ತು ಅನುಭವದಿಂದ ರೂಪುಗೊಂಡ ಪಾತ್ರಗಳ ಸರಣಿಯಿಂದ ವ್ಯಾಖ್ಯಾನಿಸಲ್ಪಟ್ಟಿದೆ ಎಂದು ಇದು ನಮಗೆ ನೆನಪಿಸುತ್ತದೆ. ಈ ಕಲ್ಪನೆಯ ಮೂಲಕ, ಶೇಕ್ಸ್‌ಪಿಯರ್ ನಾವು ಹೇಗೆ ಬದುಕುತ್ತೇವೆ, ನಾವು ವಹಿಸಿಕೊಳ್ಳುವ ಪಾತ್ರಗಳು ಮತ್ತು ನಮ್ಮ ದಿನಚರಿಯ ಉದ್ದಕ್ಕೂ ನಾವು ಸೃಷ್ಟಿಸುವ ಅರ್ಥದ ಬಗ್ಗೆ ಯೋಚಿಸಲು ಪ್ರೋತ್ಸಾಹಿಸುತ್ತಾನೆ. ವೀಣಾ ಹೇಮಂತ್ ಗೌಡ ಪಾಟೀಲ್

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ “ಸಮಾಜ ಸುಧಾರಕ ಜಂಗಮ ಪ್ರೇಮಿ ಬಸವಣ್ಣ” ಡಾ.ಶಶಿಕಾಂತಪಟ್ಟಣ ರಾಮದುರ್ಗ

ಶರಣರ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ ಡಾ.ಶಶಿಕಾಂತಪಟ್ಟಣ ರಾಮದುರ್ಗ “ಸಮಾಜ ಸುಧಾರಕ ಜಂಗಮ ಪ್ರೇಮಿ ಬಸವಣ್ಣ” ಗುರುವಾದರೂ ಲಿಂಗವ ಪೂಜಿಸಬೇಕು, ಲಿಂಗವಾದರೂ ದೇವತ್ವವಿರಬೇಕು, ಜಂಗಮವಾದರೂ ಲಿಂಗವ ಪೂಜಿಸಬೇಕು, ಜಂಗಮಕ್ಕೆ ಲಿಂಗವಿಲ್ಲದೆ ಪ್ರಮಾಣವಿಲ್ಲ, ಅದಿಯಾಧಾರವಿಲ್ಲದೆ ಜಗವೇನೂ ಇಲ್ಲ, ಆರಿದಹನೆಂದರೆ ಅಂಗದಲ್ಲಿ ಲಿಂಗವಿರಬೇಕು, ಕಲಿದೇವಯ್ಯನರಿಯುವುದಕ್ಕೆ, ಇದೇ ಮಾರ್ಗ ಚಂದಯ್ಯ. ಮಡಿವಾಳ ಮಾಚಿದೇವ ಶತಮಾನದದಿಂದಲೂ ನಮ್ಮ ಸಮಾಜವು ಶೋಷಣೆ ದಬ್ಬಾಳಿಕೆ ಸುಲಿಗೆ ಕಂದಾಚಾರದಿಂದ ಭಾರತದ ಸಾಮಾಜಿಕ ವ್ಯವಸ್ಥೆ ಜಿಡ್ಡು ಗಟ್ಟಿ ಮೃತ ಪ್ರಾಯವಾಗಿತ್ತು .ವೈದಿಕರ ಮನುವಾದಿಗಳ ಅಸ್ಪ್ರಶ್ಯತೆ ಆಚರಣೆ , ಜಾತಿ ಪದ್ಧತಿ ತಾಂಡವವಾಡುತಿತ್ತು .ಯಜ್ಞ ಹವನ ಹೋಮ ಪ್ರಾಣಿ ಬಲಿ ಸ್ತ್ರೀ ಶಿಶು ಹತ್ತ್ಯೆ ಸತಿ ಪದ್ಧತಿ ಹೀಗೆ ದಲಿತರು ಪಂಚಮ ಸ್ತ್ರೀ ಕುಲವು ನಲುಗಿ ಹೋಗಿತ್ತು. ಹನ್ನೆರಡನೆಯ ಶತಮಾನವು ಈ ಜಗವು ಕಂಡ ಸುವರ್ಣ ಯುಗ . ಬಸವನ್ನನೆಂಬ ವೈಚಾರಿಕ ಪುರುಷ ಕರ್ನಾಟಕದ ಇಂದಿನ ಬಿಜಾಪುರದ ಬಾಗೇವಾಡಿಯಲ್ಲಿ ಮಧುವರಸ ಮಾದಲಾ೦ಬಿಕೆಯರ ಹೊಟ್ಟೆಯಲ್ಲಿ 1131 ರಲ್ಲಿ ಹುಟ್ಟಿದನು . ಬಸವಣ್ಣ ಜಗವು ಕಂಡ ಶ್ರೇಷ್ಟ ದಾರ್ಶನಿಕ ಚಿಂತಕ ಮುಕ್ತ ಸಮಾಜದ ಕಾರಣಕರ್ತ. ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆ ಶಾಂತಿ ಸಹ ಬಾಳ್ವೆ ,ದುಡಿಮೆ ಕಾಯಕ ದಾಸೋಹ , ಬದುಕಿನಲ್ಲಿ ಧರ್ಮದ ಸರಳ ಆಚರಣೆ ,ನೀತಿ,ತತ್ವ ವೈಚಾರಿಕತೆ ಅಭಿವ್ಯಕ್ತಿ ಸ್ವಾತಂತ್ರ ಧಾರ್ಮಿಕ ಸಾಮಾಜಿಕ ಚಿಂತನೆ ಹೀಗೆ ಪ್ರತಿ ಹಂತದಲ್ಲೂ ಬಸವಣ್ಣ ಗಟ್ಟಿ ಮುಟ್ಟಾದ ಆಯಾಮವನ್ನು ಸ್ರಷ್ಟಿಸಿದನು. ಲಿಂಗಾಯತ ಧರ್ಮವು ಹಿಂದುಯೇತರ ಅವೈದಿಕ ಸ್ವತಂತ್ರ ಧರ್ಮ,ಬುದ್ಧನಿಂದ ಆಗದ ಅಂತರ ಜಾತಿ ವಿವಾಹ ಬಸವಣ್ಣನವರು ನೆರವೇರಿಸಿದರು . ಶತಮಾನದ ಜಾತಿ ಶೋಷಣೆ ದಬ್ಬಾಳಿಕೆ ಮೋಸ ಸುಲಿಗೆಗೆ ಬಸವಣ್ಣನವರು  ಕೊನೆ ಹಾಡಿದರು . ದೇವರು ಮತ್ತು ಭಕ್ತನ ಮಧ್ಯೆ ಇರುವ ಪುರೋಹಿತರ ದಲ್ಲಾಳಿತನಕ್ಕೆ ಏಟು ಬಿತ್ತು. ಬಸವ ಪೂರ್ವದಲ್ಲಿ ದಲಿತರು ಮಹಿಳೆಯರು ಪಂಚಮರು ಪ್ರಾಣಿಗಳಿಗಿಂತ ಕೀಳಾಗಿ ಬದುಕಿದ್ದರು.ಅವರಿಗೆ ಧಾರ್ಮಿಕ ಸಾಮಾಜಿಕ,ಆರ್ಥಿಕ ರಾಜಕೀಯ ಹಕ್ಕು ಸಿಕ್ಕಿರಲಿಲ್ಲ .ಬಸವಣ್ಣ ಆಗಮನದಿಂದ ಎಲ್ಲರೂ ಎಲ್ಲಾ ಬಂದನದಿಂದ ಮುಕ್ತವಾದರು . ಕರ್ಮಲತೆಯ ಜನಿವಾರ ಕಿತ್ತು ಸನಾತನಿಗಳಿಗೆ ಸವಾಲು ನೀಡಿದ ಬಸವಣ್ಣ ಮನುವಾದಿಗಳಿಗೆ ನಡುಕ ಹುಟ್ಟಿಸಿದನು . ಬಸವಣ್ಣ ವರ್ಗ ವರ್ಣ ಲಿಂಗ ಆಶ್ರಮ ಬೇಧಗಳನ್ನು ಕಿತ್ತು ಸರ್ವಕಾಲಿಕ ಸಮಾನತೆಯ ಸಮಾಜವನ್ನು ಸುಂದರಗೊಳಿಸಿದರು. ಶರಣರ ಕ್ರಾಂತಿ ರಸಿಯಾ ,ಫ್ರೆಂಚ್ ಕ್ರಾಂತಿಗೆ ಬಿನ್ನವಾದ ಕ್ರಾಂತಿ. ಇಲ್ಲಿ ರಾಜ್ಯ ಭೂಮಿ ಹೆಣ್ಣು ಹೊನ್ನು ಮಣ್ಣಿಗಾಗಿ ಯುದ್ಧ ನಡೆದಿಲ್ಲ .ಅರಸೊತ್ತಿಗೆ ಖಜಾನೆ ಅಧಿಕಾರದ ಕ್ಷಿಪ್ರ ಕ್ರಾಂತಿಯಲ್ಲ . ಒಬ್ಬ ಸಮಾಜವಾದಿ ಚಿಂತಕ ಹೇಳಿದಂತೆ  Karl Marx has taught us the dignity of labour but Basavanna has taught us dignity and divinity of labour ,ಎಂದು ಬಸವಣ್ಣನವರ ಕಾರ್ಯ ಮುಕ್ತ ಕಂಠದಿಂದ ಹೊಗಳಿದ್ದಾನೆ. ಅಂದಿನ ಜಿಡ್ಡು ಗಟ್ಟಿದ ಸಮಾಜಕ್ಕೆ ಬಸವಣ್ಣನವರು  ಹೊಸ ಚೇತನ ನೀಡಿದರು  . ಬತ್ತಿ ಹೋಗಿದ್ದ ಬದುಕಿಗೆ ಭರವಸೆ ಆದನು ಬಸವಣ್ಣ . ಬಸವ ಪೂರ್ವ ಯುಗದಲ್ಲಿ ದಲಿತರಿಗೆ ಪಂಚಮರಿಗೆ ಹೊಲೆಯರಿಗೆ ಮಂದಿರ ದೇವಾಲಯಗಳಲ್ಲಿ ಪ್ರವೇಶವಿರಲಿಲ್ಲಾ.ಬ್ರಾಹ್ಮಣರ ಹೊರತು ಪಡಿಸಿ ಇನ್ನೊಬ್ಬರಿಗೆ ಪೂಜಿಸುವ ಅಧಿಕಾರವಿರಲಿಲ್ಲ . ಅವರನ್ನು ಪಶುಗಳಂತೆ ಕಾಣುವ ಕಾಲವದು.ನಾಯಿ ಬೆಕ್ಕು ಆಕಳು ಕುರಿಗಳನ್ನೂ ಮುಟ್ಟುವ ಬ್ರಾಹ್ಮಣರು ಮನುಷ್ಯರನ್ನು ಮುಟ್ಟುತ್ತಿರಲಿಲ್ಲ .ಇಂತಹ ಅಸಮಾನತೆ ಕೊನೆಗಾಣಿಸಲು ಬಸವಣ್ಣನವರು  ಇಷ್ಟ ಲಿಂಗವನ್ನು ಕಂಡು ಹಿಡಿದರು . ನಿರಾಕರ ನಿರ್ಗುಣ ನಿರಹಂಕಾರ  ಕುರುಹನ್ನು ತಮ್ಮ ಕರಸ್ಥಲಕ್ಕೆ ಕೊಟ್ಟರು ಬಸವಣ್ಣನವರು. ಶರಣರ ಅರಿವೇ ಗುರು ಆಚಾರವೇ ಲಿಂಗ ಶರಣರ ಅನುಭಾವವೇ ಜಂಗಮ ,ಇಂತಹ ಒಂದು ಸರಳ ಸುಂದರ ಸಿದ್ಧಾಂತವೇ ಶರಣ ಸಾಹಿತ್ಯ . ಎತ್ತೆತ್ತ ನೋಡಿದಡತ್ತತ್ತ ನೀನೇ ದೇವ! ಸಕಲ ವಿಸ್ತಾರದ ರೂಹು ನೀನೇ ದೇವ. ವಿಶ್ವತಶ್ಚಕ್ಷು ನೀನೇ ದೇವ, ವಿಶ್ವತೋಮುಖ ನೀನೇ ದೇವ. ವಿಶ್ವತೋಬಾಹು ನೀನೇ ದೇವ. ವಿಶ್ವತೋಪಾದ ನೀನೇ ದೇವ. ಕೂಡಲಸಂಗಮದೇವ. ವಿಶ್ವಾತ್ಮನನ್ನು ನಿರಾಕರಗೊಳಿಸಿ ಅವನ ಬಾಹು ಅವನ ಕಣ್ಣು ಅವನ ಮುಖ ಅವನ ರೂಪ ಆತನ ಜ್ಞಾನ ಸಮಾಜವೇ ಆಗಿರುತ್ತದೆ .ಒಂದು ಕಡೆಗೆ ಸ್ಥಾವರವನ್ನು ವಿರೋದಿಸಿದ ಬಸವಣ್ಣ ಮತ್ತು ಶರಣರು ಇಷ್ಟಲಿಂಗವನ್ನು ಪ್ರತಿಪಾದಿಸಿದರು. ಬಸವಣ್ಣ ಮೂರ್ತಿ ಭಂಜಕ  , ಸ್ಥಾವರವನ್ನು ವಿರೋಧಿಸಿದವನು . ತನ್ನ ನಂಬಿದವರಿಗೆ ಒಂದು ಪರ್ಯಾಯ ಮತ್ತು ನಿಶ್ಚಿತ ಉಪಾಸನ ಆಯಾಮ ನೀಡಲು ಇಷ್ಟಲಿಂಗವನ್ನು ಕಂಡು ಹಿಡಿದರು. ಇದು ಮನ್ಸುಹ್ಯನ ಚಿತ್ಕಳೆ ಪ್ರತಿಬಿಂಬಿಸುತ್ತದೆ , ಬಸವ ಕಾಲದ ಎಲ್ಲ ಶರಣರಿಗೆ ಸ್ತ್ರೀ ಮತ್ತು ಪುರುಷರಿಗೆ ಇಷ್ಟಲಿಂಗ ಕಡ್ಡಾಯ ,ಕಾಯಕ ಅನಿವಾರ್ಯ, ದಾಸೋಹ ಅಗತ್ಯತೆ . ಜಗತ್ತಿನಲ್ಲಿ ದುಡಿದು ತಿನ್ನುವ ಧರ್ಮ ಬಂದ ಮತ್ತು  ಆದಾಯದಲ್ಲಿ ಹಂಚಿ ತಿನ್ನುವ ಧರ್ಮವಿದ್ದರೆ ಅದು ಬಸವ ಧರ್ಮ ,ಲಿಂಗಾಯತ ಧರ್ಮ . ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯ ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಸವಯ್ಯ ಕೂಡಲ ಸಂಗಮ ದೇವ ನೀ ಕೇಳಯ್ಯ ,ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಗುಡಿ ಗುಂಡಾರ ಮಠಗಳ ಸಂಸ್ಕೃತಿ ಗಟ್ಟಿಯಾಗಿ ವಿರೋಧಿಸಿದ ಬಸವಣ್ಣ ಮನುಷ್ಯನ ಚೈತನ್ಯವೇ ದೇವರು ಆ ಪರಮಾತ್ಮನ ಕುರುಹು ಇಷ್ಟಲಿಂಗ . ತನ್ನ ತಾ ಅರಿವ ಅನನ್ಯ ಪ್ರಯೋಗವೇ ಇಷ್ಟಲಿಂಗ ಸಾಧನೆ .ಆದರೆ ಇದನ್ನೇ ಆದರಿಸಿ ಕುಳಿತು ಕೊಳ್ಳುವ ಸಾಧಕರಿಗೆ ಬಸವಣ್ಣ ಕಿವಿ ಮಾತು ಹೇಳುತ್ತಾನೆ . ಕಾಯಕದಲ್ಲಿ ನಿರತನಾದರೆ ಗುರುಲಿಂಗ ಜಂಗಮದ ಹಂಗು ತೊರೆಯಬೇಕು . ಕಾಯಕವೇ ಕೈಲಾಸ , ದುಡಿಯದೆ  ಇನ್ನೊಬ್ಬರ ಹಂಗಿನಲ್ಲಿ ಉಣ್ಣುವ ಹಾಗಿಲ್ಲ  ಮಾಡುವಂತಿರಬೇಕು ಮಾಡದಂತಿರಬೇಕು ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು ಕೂಡಲ ಸಂಗಮ ದೇವನ ನೆನೆಯುತ್ತ ನೆನೆಯುತ್ತ ನೆನೆಯದಂತಿರಬೇಕು. ಆಧ್ಯಾತ್ಮವೇ ಸರ್ವಸ್ವವಲ್ಲ ಕಾಯಕ ದಾಸೋಹದಿಂದ ಮಾಡುವ ಅನುಭಾವವೇ ಆಧ್ಯಾತ್ಮದ ಮೂಲ ಮಂತ್ರವಾಗಿತ್ತು .ರಾಜನಾಗಲಿ ರಂಕನಾಗಲಿ,ಮಂತ್ರಿಯಗಲಿ ಸೇವಕನಾಗಲಿ ಎಲ್ಲರಿಗೂ ಕಾಯಕ ಮತ್ತು ದಾಸೋಹ ಕಡ್ಡಾಯ ಮತ್ತು ಅನಿವಾರ್ಯವಾಗಿತ್ತು . ಭಕ್ತನ ಶರೀರವೇ ಲಿಂಗಮಯವಾಗಬೇಕು .,ಆತನ ಚಿಂತನವು ಸಮಾಜ ಮುಖಿಯಾಗಿರಬೇಕು . ಮರದ ಬಾಯಿ ಬೇರು ಮತ್ತು ಲಿಂಗದ ಬಾಯಿ ಜಂಗಮವಾಗಿರಬೇಕು ಇದು ಬಸವ ವಚನದ ಆಶಯವಾಗಿದೆ . ಇಲ್ಲಿ ಜಂಗಮ ಜಾತಿ ಅಲ್ಲ ಅದು ಸಮಾಜ ವ್ಯವಸ್ಥೆ ,ಸಮುದಾಯಮಾತ್ರ .ಲಿಂಗವು ನಮ್ಮ ಅರಿವಿನ ಕುರುಹು ಇತ್ತೀಚಿಗೆ ನಮ್ಮ ಶರೀರದ ಪ್ರಮುಖ ಕೇಂದ್ರ ಮೆದುಳು ಅಲ್ಲಿ ಆಜ್ಞಾ ಚಕ್ರವನ್ನು ವಿಜ್ಞಾನಿಗಳು ಉಪಕರಣಗಳ ಮುಖಾಂತರ ಅರಿವಿನ ಆಜ್ಞಾ ಚಕ್ರ ಕೇಂದ್ರವನ್ನು Pineal Gland ನೋಡಿದಾಗ ಅದು ಲಿಂಗದ ಆಕಾರದ್ದಾಗಿದೆ . ಶರಣರು ವಿಜ್ಞಾನವನ್ನು ಬಲ್ಲವರು . ಇದನ್ನು ಅಲ್ಲಮರು ಅರಿವನರಿಯಲೆಂದು ಗುರು ಕೊಟ್ಟ ಕುರುಹ ಕುರುಹ ಹಿಡಿದು ಅರಿವ ಮರೆತ ಕುರುಬನ ನೋಡ ಗುಹೇಶ್ವರ ಇಂದು ಲಿಂಗಾಯತರಾದ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಕೇವಲ ಲಿಂಗವ ಕಟ್ಟಿದರೆ ಲಿಂಗಾಯತರೇ ಅಥವಾ ಲಿಂಗಾಯತರ ಮನೆಯಲ್ಲಿ ಹುಟ್ಟಿದರೆ ಲಿಂಗಾಯತರೇ ,ಇವು ಎರಡೂ ಅಲ್ಲ ,ಲಿಂಗ ಜಂಗಮದ ಸಮಷ್ಟಿಯ ಪ್ರಜ್ಞೆ ಹೊಂದಿ ಕಾಗೆ ಕೋಳಿ ಪಶು ಪಕ್ಷಿಗಳನೋಳಗೊಂಡ ಸಕಲ ಜೀವಾತ್ಮರ    ಲೇಸ ಬಯಸುವವನೆ ಲಿಂಗಾಯತ .   ಲಿಂಗಾಯತ   ಎನ್ನುವುದು ಧರ್ಮವೆನ್ನುವದಕ್ಕಿ೦ತಲೂ  ಶೋಷಣೆ ಮುಕ್ತ ಸಮಾಜ ನಿರ್ಮಾಣದ ಗುರಿಯ ಚಳುವಳಿ ಎನ್ನಬಹುದು. ಅತ್ಯಂತ ಸಾಮಾನ್ಯರಿಂದ ರೂಪಗೊಂಡ ಈ ಚಳುವಳಿಯ   ನೇತಾರ ಬಸವಣ್ಣನವರು  .    ಬಸವಣ್ಣ ಬರುವಾಗ ಬಿಸಿಲು ಬೆಳದಿಂಗಳು ಅಂತ ಜನಪದಿಗರು ಬಸವನ ಆಗಮನವನ್ನು ಹೊಗಳಿದ್ದಾರೆ ಅದೇ ರೀತಿ ಕಾಯಕವ ಕಲಿಸುದಕೆ ನಾಯಕನು ಬಸವಯ್ಯ ತಂದು ಚೆಲ್ಲಿದನು ಹೊಸಬೆಳಕ ,ಹೊಸಮತದ ಸೂರ್ಯ ಉದಯಿಸಿದ .ಬಸವಣ್ಣ ಲಿಂಗಾಯತ ಧರ್ಮದ ಚಳುವಳಿಯ ನೇತಾರ ಎಂದು ನಮ್ಮ ಮೂಲನಿವಾಸಿಗಳು ಹಾಡಿ ಹೊಗಳಿದ್ದಾರೆ . *Istalinga  is  not  an  object , it  is  subject   to    realize  consciousness  .*  ಇಷ್ಟಲಿಂಗವೂ ಒಂದು ಸ್ಥಾವರವೇ? ಎಂದು ವಾದಿಸುವರೂ ಉಂಟು ಅಹುದು ಸಮುದಾಯದ ಪ್ರಜ್ಞೆ ಮರೆತು ,ಕೇವಲ ಆಸ್ತಿ ಹಣ ಸುಖಕ್ಕಾಗಿ ಹಪಹಪಿಸುವ ಜನರಿಗೆ ಬಸವಣ್ಣ ಚಾಟಿ ಏಟು ಕೊಡುತ್ತಾರೆ . ಕಲ್ಲ ನಾಗರ ಕಂಡರೆ ಹಾಲ ನೆರೆವರಯ್ಯ ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯ ಉಂಬುವ  ಜಂಗಮನಿಗೆ ಎಡೆಯಿಲ್ಲ ನಡೆಯೇ೦ಬರು ಉ೦ಬದಾ ಲಿಂಗಕ್ಕೆ ಬೋಣವ ಹಿಡಿವರು ಕೂಡಲ ಸಂಗನ ಶರಣರ ಉದಾಸೀನವ ಮಾಡಿದರೆ  ಕಲ್ಲು ತಾಗಿದ ಮಿಟ್ಟೆ  ಎಂತಿರ್ಪರಯ್ಯಾ  ಅದೇ ರೀತಿ ಬಸವಣ್ಣನವರು ವೃಥಾ ಆಚರಣೆಗೆ ಮಹತ್ವ ಕೊಡದೆ  ಕಾಯಕ ದಾಸೋಹಕ್ಕೆ ಮಹತ್ವ ನೀಡಿ ಸಂಮಜವನ್ನು ಉನ್ನತಿಗೆ ತರಲು ಪ್ರಯತ್ನಿಸಿದರು..  ಎರೆದರೆ ನೆನೆಯದು ಮರೆದರೆ ಬಾಡದು ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ ಕೂಡಲ ಸಂಗಮ ದೇವಾ ಜಂಗಮಕ್ಕೆ ಎರೆದರೆ ಸ್ಥಾವರವು ನೆನೆದಿತ್ತು.  ಇಲ್ಲಿಯೂ ಕೂಡ ಬಸವಣ್ಣ ಲಿಂಗವನ್ನು ಪೂಜಿಸಿ ಅದರ ಹಿಂದಿನ ಕರ್ತವ್ಯ ಮತ್ತು ಸಮಾಜ ನಿರ್ವಹನೆಯ ಆದ್ಯತೆಯ ಬಗ್ಗೆ ಬಸವಣ್ಣ ಎಚ್ಚರಿಸುತ್ತಾನೆ .  ಅಮಾಜಕ್ಕೆ ನೀಡಿದರೆ ಲಿಂಗವು ಸಂತೋಷದಿಂದ ಉಬ್ಬಿ ಉಬ್ಬಿ ನೆನೆಯುವುದು ಅಂತಾ ಅರ್ಥ . ಬಸವಣ್ಣನವರಿಗೆ ಇಂತಹ ಭಕ್ತಿಯ ಮಾಡುವವರನ್ನು ಕಂಡರೆ ಎಲ್ಲಿಲ್ಲದ ಸಂತೋಷ . ಅಡವಿಯಲ್ಲೊಬ್ಬ ಕಡು ನೀರಡಿಸಿ, ಎಡೆಯಲ್ಲಿ ನೀರ ಕಂಡಂತಾಯಿತ್ತಯ್ಯ! ಕುರುಡ ಕಣ್ಣ ಹಡೆದಂತೆ, ಬಡವ ನಿಧಾನವ ಕಂಡಂತಾಯಿತ್ತಯ್ಯ! ನಮ್ಮ ಕೂಡಲಸಂಗನ ಶರಣರ ಬರವೆನ್ನ ಪ್ರಾಣ ಕಂಡಯ್ಯಾ. ನೀರಡಿಕೆಯದವ ಕಾಡಿನಲ್ಲಿ  ಅಲೆದು ಸುಸ್ತಾದಾಗ ಕಾಲಿನ ಬಳಿಯೇ ನೀರು ಕಂಡಂತೆ ,ಮತ್ತು ಹುಟ್ಟು ಕುರುಡುನಿಗೆ ಕಣ್ಣು ಬಂದಂತೆ ಮತ್ತು ಬಡವನಿಗೆ ನಿಧಿ ಸಿಕ್ಕಂತೆ ಶರಣರ ಬರವು ಅಂತ ಹೇಳುತ್ತಾ ವಿಷಯ ನಿಷ್ಟತೆಗೆ ಆದ್ಯತೆನೀಡಿದ್ದಾನೆ .     ಶರಣರು ಹಿಂದುಗಳಂತೆ ಬಹುದೆವೊಪಾಸನೆ ಆಚರಿಸಲಿಲ್ಲ, ಅವರಿಗೆ ತಮ್ಮ ಆತ್ಮದ ಚಿತ್ಕಳೆಯನ್ನು ಪೂಜಿಸುವ ಸರಳ ವಿಧಾನ ಸಿಕ್ಕಿತು . ಭಾರತಿಯ ಸಂಸ್ಕೃತಿಯಲ್ಲಿ ಧಾರ್ಮಿಕ ಆಚರಣೆಯಲ್ಲಿ ಕಲ್ಲು ಮಣ್ಣು ಮರ ಪೂಜಿಸುತ್ತಾರೆ ,ಇದನ್ನು ವ್ಯಂಗವಾಗಿ ಹೇಳಿದ ಬಸವಣ್ಣನವರು .ಕಲ್ಲು ದೈವ ಮರ ದೈವ ಮಡಿಕೆ ದೈವ ಕೊಳಗ ದೈವ ಬಿಲ್ಲು ನಾರಿ ದೈವ ದೈವ ದೈವ ಕಾಲಿಡಲಿ೦ಬಿಲ್ಲಾ ಎಂದಿದ್ದಾರೆ. ನೀರ ಕಂಡಲ್ಲಿ ಮೂಳಗುವರಯ್ಯ ಮರವ ಕಂಡಲ್ಲಿ ಸುತ್ತುವರಯ್ಯ   ಬತ್ತುವ ಜಲವ ಒಣಗುವ ಮರವ ನೆಚ್ಚಿದವರ  ನಿಮ್ಮನೆತ್ತ ಬಲ್ಲ ನಮ್ಮ ಕೂಡಲ ಸಂಗಮದೇವ  ನೀರು ನದಿ ಭಾವಿ ಕೆರೆಯಲ್ಲಿ ಬತ್ತಿಹೊಗುವದು ,ಮರವು ನೀರಿಲ್ಲದೆ ಒಣಗುವದು ಇಂತಹ ಭೌತಿಕ ವಸ್ತುಗಳನ್ನು ದೇವರು ಅಂತ ನಂಬಿದ ನಿಮ್ಮನ್ನು ಯಾರು ನಂಬುವರು . ಇದು ಅಪ್ಪ ಬಸವನ ವಚನ . ದೇವಲೋಕ ಮರ್ತ್ಯಲೋಕದ ಬೇರೆ ಬೇರೆ ಕಲ್ಪನೆಗಳನ್ನು ಶರಣರು ಒಪ್ಪುವದಿಲ್ಲ ,  ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ ?  ಇಹಲೋಕದೊಳಗೇ ಮತ್ತನಂತಲೋಕ! ಶಿವಲೋಕ ಶಿವಾಚಾರವಯ್ಯ,  ಶಿವಭಕ್ತನಿದ್ದ ಠಾವೇ ದೇವಲೋಕ, ಭಕ್ತನಂಗಳವೇ ವಾರಣಾಸಿ,  ಶಿವಭಕ್ತನ ಕಾಯವೇ ಕೈಲಾಸ, ಇದು ಸತ್ಯ ಕೂಡಲಸಂಗಮದೇವ. ಇದು ಭಕ್ತ ಪ್ರಧಾನವಾದ ಚಿಂತನೆ ಕಾರಣ ಭಕ್ತನ ಕಾಯಕ ಪರಿಶುದ್ಧವಾಗಿದ್ದು ಆತನ ದಾಸೋಹವು ಶ್ರೇಷ್ಟತೆಯನ್ನು ಪಡೆದು ಸಮಾಜ ಮುಖಿಯಾದ ಜೀವನಕ್ಕೆ ನಾಂದಿ ಹಾಡುತ್ತದೆ . ಇಹಕೊಬ್ಬ ಗಂಡನೆ? ಪರಕೊಬ್ಬ ಗಂಡನೆ?  ಲೌಕಿಕಕ್ಕೊಬ್ಬ ಗಂಡನೆ? ಪಾರಮಾರ್ಥಕ್ಕೊಬ್ಬ ಗಂಡನೆ?  ನನ್ನ ಗಂಡ ಚೆನ್ನಮಲ್ಲಿಕಾರ್ಜುನದೇವರಲ್ಲದೆ  ಮಿಕ್ಕಿದ ಗಂಡರೆಲ್ಲ ಮುಗಿಲ ಮರೆಯ ಬಣ್ಣದ ಬೊಂಬೆಯಂತೆ ಬಸವಣ್ಣನವರ

ಸಾವಿಲ್ಲದ ಶರಣರು ಮಾಲಿಕೆ “ಸಮಾಜ ಸುಧಾರಕ ಜಂಗಮ ಪ್ರೇಮಿ ಬಸವಣ್ಣ” ಡಾ.ಶಶಿಕಾಂತಪಟ್ಟಣ ರಾಮದುರ್ಗ Read Post »

You cannot copy content of this page

Scroll to Top