ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಮಂಜಿನಲಿ ಮಿಂದೆದ್ದ ಹಸಿರಿನ ಸಿರಿ,
ಸಿರಿಯ ಸವಿಗೆ ಮನಸು ಹಾಡಿದ ಪರಿ.
ಪರಿಯಲಿ ಚೆಲ್ಲಿ ಮುಂಜಾನೆಯ ರಂಗು,
ರಂಗಿನ  ಪ್ರಕೃತಿಗೆ ಮನವಾಯ್ತು ದಂಗು.
ದಂಗಾದ ಮನದಿ ಮೂಡಿತು ನವ ಭಾವ,
ಭಾವದ ಹೊನಲಲಿ ತೇಲಿತು ನನ್ನ ಜೀವ.
ಜೀವದಿ ಹರಿಯಿತು ಸಂತಸದ ಹೊನಲು,
ಹೊನಲಿನ ಬೆಳಕಲಿ ಸೊಗಸಿನ ಮಹಲು.
ಮಹಲಲಿ ಮೂಡಿತು ಅರುಣೋದಯ,
ಅರುಣನ ಕಿರಣದಿ ಬಾಳಿಗೆ ನವೋದಯ.
ನವೋದಯದ ಕಿರಣಕೆ ಅರಳಿತು ಹೂವು,
ಹೂವಿನ ಕಂಪಿಗೆ ಮನದೊಳು ಹರ್ಷವು.
ಹರ್ಷದ ಸೊಂಪಿಗೆ ಹೊಮ್ಮಿ ನವಿರಾದ ನಗೆ,
ನಗುವಲಿ ಕರಗಿತು ಬದುಕಿನ ಎಲ್ಲ ಬೇಗೆ.
ಬೇಗೆಯ ಕಳೆಯುವ ನಿಸರ್ಗದ ಮೆರುಗು,
ಮೆರುಗಿನ ಸೊಬಗೇ ನನ್ನ ಕಾವ್ಯದ ಬೆರಗು.
 ಶಾಲಿನಿ ಕೆಮ್ಮಣ್ಣು

About The Author

Leave a Reply

You cannot copy content of this page

Scroll to Top