ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-32 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಕನ್ನಡನಾಡಿನ ಸೇವೆ ನಡುನಾಡಿನ ಅಣ್ಣಂದಿರೆ| ಗಡಿಭಾಗದವರಿಗ ಕಡಿಗಣ್ಣಲ್ಲಿ ನೋಡಬ್ಯಾಡಿರಿ- ನಾವೆಲ್ಲಒಡ ಹುಟ್ಟಿದ ಕನ್ನಡ ಮಕ್ಕಳು||-ಡಾ.ಜಯದೇವಿತಾಯಿ ಭಾರತ ಸ್ವಾತಂತ್ರ್ಯ ಪಡೆಯುವ ಹೊತ್ತಿಗೆ ದೇಶದ ರಾಜಕೀಯ ನಕ್ಷೆ ಇಂದಿನಂತಿರಲಿಲ್ಲ. ಬ್ರಿಟಿಷರ ಆಡಳಿತ ಪ್ರದೇಶಗಳ ಜೊತೆಗೆ ಅನೇಕ ಸಂಸ್ಥಾನಗಳು ಅಸ್ತಿತ್ವದಲ್ಲಿದ್ದವು. ಭಾಷಾವಾರು ಪ್ರಾಂತಗಳ ರಚನೆ, ಕನ್ನಡ ಮಾತನಾಡುವ ಜನರನ್ನು ಒಂದೇ ಆಡಳಿತದ ಅಡಿಯಲ್ಲಿ ತರುವ ಆಶಯ ಮತ್ತು ಕನ್ನಡ ನಾಡಿನ ಸಮಗ್ರತೆಯ ಕನಸು ಆ ಕಾಲದಲ್ಲಿ ಪ್ರಬಲವಾಗುತ್ತಿತ್ತು. ಇದೇ ಹಿನ್ನೆಲೆಯಲ್ಲಿಯೇ ಕರ್ನಾಟಕ ಏಕೀಕರಣ ಚಳವಳಿ ಬಲ ಪಡೆದುಕೊಂಡಿತು.. ೨೭-೪-೧೯೪೮ರಂದು ಮುಂಬೈನ ಜಹಂಗೀರ್ ಹಾಲ್‌ನಲ್ಲಿ ಕೆ.ಆರ್. ಕಾರಂತರ ಅಧ್ಯಕ್ಷತೆಯಲ್ಲಿ,ನಡೆದ ಕನ್ನಡ ಹೋರಾಟದಲ್ಲಿ ಜೊತೆಯಾಗಿದ್ದ ಡಾ.ಜಯದೇವಿ ತಾಯಿ ಅವರು೧೯೫೬ರವರೆಗೆ ಏಕೀಕರಣದ ಹೋರಾಟದಲ್ಲಿ ಸಕ್ರಿಯರಾಗಿದ್ದರು. ೧೯೫೩ರಲ್ಲಿ ಅಧ್ಯಕ್ಷರಾದ ಕೆ.ಆರ್. ಕಾರಂತರು,ಸದಸ್ಯರಾದ ಹೊಸಮನಿ ಸಿದ್ದಪ್ಪ, ಬಿಎಂ ಕಕ್ಕೆಬಾಯಿ ,ಎನ್ ಎ ಉಪಾಧ್ಯಾಯ, ಸರದಾರ ಶರಣಗೌಡ್ರು, ನಾಗಪ್ಪ ಆಳ್ವಾ, ಭಾಸ್ಕರ್ ರೈ, ಶ್ರೀಕಂಠಪ್ಪ ಶಿವಾನಂದ ಸ್ವಾಮಿ, ಗೋಪಾಲ ಗೌಡ್ರ, ನಾರಾಯಣಸ್ವಾಮಿ ರೆಡ್ಡಿವರನ್ನು ಒಳಗೊಂಡು ಸಮಯದಲ್ಲಿ ಸಂಘದ 12 ಜನರನ್ನು ಬಂಧಿಸಿದ್ದರು. ಅದನ್ನು ಪ್ರತಿಪಟಿಸಿ ಪ್ರತಿಬಂಧಕಾಜ್ಞೆಯನ್ನು ಹಿಂತೆಗೆದುಕೊಳ್ಳಬೇಕು ಇಲ್ಲವೇ ಸತ್ಯಾಗ್ರಹ ಮಾಡುವೆವು ಎಂದು ನಿರ್ಮಿಸಿದ್ದರು. ಅವರು ತಮ್ಮ ಸದಸ್ಯರಿಗೆ ಕರೆ ಕೊಟ್ಟಿದ್ದರು. ಇದರ ಹಿನ್ನೆಲೆಯಲ್ಲಿ ಆಗಸ್ಟ್ ೧೫ರಂದು ಕಪ್ಪು ಧ್ವಜ ಹಾರಿಸಲು…  ಅದಕ್ಕೆ ಜಯದೇವಿ ತಾಯಿಯವರನ್ನು ಕರೆಸಿದ್ದರು ಅವರು ಪರಿಷತ್ತಿನ ಗೊತ್ತುವಳಿ ನನಗೆ ಹಿಡಿಸಲಿಲ್ಲ ಅದನ್ನು ಪುನಃ ವಿಮರ್ಷಿಸಬೇಕು ಎಂದು ತಂತಿ ಕಳಿಸಿದ್ದರು( ೯-೮-೧೯೫೩ರ ಸಂಯುಕ್ತ ಕರ್ನಾಟಕದ ವರದಿ) ಆ ಸಮಯದಲಿ ನಡೆದ ಏಕೀಕರಣ ಪರಿಷತ್ತು  ಹೋರಾಟದ ಮಹತ್ವದ ಘಟ್ಟಗಳಲ್ಲಿ ಒಂದಾಗಿತ್ತು. ಸ್ವಾತಂತ್ರ್ಯಪೂರ್ವ ಕಾಲದಲ್ಲಿಯೇ ಕನ್ನಡಿಗರ ಭೌಗೋಳಿಕ ಮತ್ತು ಸಾಂಸ್ಕೃತಿಕ ಏಕತೆಯ ಅಗತ್ಯವನ್ನು ಚರ್ಚಿಸಿದ ಈ ರೀತಿಯ ಪರಿಷತ್ತುಗಳು ಮುಂದೆ ಏಕೀಕರಣ ಚಳವಳಿಗೆ ಹೊಸ ಉತ್ಸಾಹ ನೀಡಿದವು. ಏಕೀಕರಣದ ಮಹಾ ಚಳವಳಿಯಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ದುಡಿದವರು ಡಾ. ಜಯದೇವಿತಾಯಿ. ೧೯೪೮ರಿಂದ ೧೯೫೬ರವರೆಗೆ ನಡೆದ ಈ ಹೋರಾಟದ ಅವಧಿಯಲಿ ಕನ್ನಡಿಗರ ನೋವು, ಆತಂಕ, ಹಕ್ಕು ಮತ್ತು ಭವಿಷ್ಯವನ್ನು ತಮ್ಮದೇ ಹೋರಾಟವೆಂದು ಸ್ವೀಕರಿಸಿ, ಜನರನ್ನು ಸಂಘಟಿಸಿ, ಏಕೀಕರಣದ ಪರವಾಗಿ ಜನಾಭಿಪ್ರಾಯ ರೂಪಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.ಆ ಕಾಲದಲ್ಲಿ ಕನ್ನಡ ಭಾಷಿಕ ಪ್ರದೇಶಗಳು ಒಂದೇ ಆಡಳಿತದ ಅಡಿಯಲ್ಲಿ ಇರಲಿಲ್ಲ. ಮೈಸೂರು ಸಂಸ್ಥಾನ, ಹೈದರಾಬಾದ್ ಸಂಸ್ಥಾನ, ಮುಂಬೈ ಪ್ರಾಂತ ಮತ್ತು ಇತರ ಆಡಳಿತ ಪ್ರದೇಶಗಳಲ್ಲಿ ಕನ್ನಡಿಗರು ಹರಡಿಕೊಂಡಿದ್ದರು. ಆಡಳಿತ ಬೇರೆಬೇರೆ ಆಗಿದ್ದರೂ ಭಾಷೆ ಒಂದೇ, ಸಂಸ್ಕೃತಿ ಒಂದೇ, ಸಾಹಿತ್ಯ ಪರಂಪರೆ ಒಂದೇ, ನೆಲದೊಂದಿಗೆ ಇರುವ ಭಾವನಾತ್ಮಕ ಸಂಬಂಧ ಒಂದೇ. ಹೀಗಾಗಿ ಕನ್ನಡ ಮಾತನಾಡುವ ಎಲ್ಲ ಪ್ರದೇಶಗಳು ಒಂದಾಗಿ, ಸಮಗ್ರ ಕರ್ನಾಟಕ ನಿರ್ಮಾಣವಾಗಬೇಕು ಎಂಬುದು ಏಕೀಕರಣವಾದಿಗಳ ಆಶಯವಾಗಿತ್ತು.ಆದರೆ ಈ ಕನಸಿನ ಮುಂದೆ ಹಲವಾರು ಸವಾಲುಗಳಿದ್ದವು. ವಿಶೇಷವಾಗಿ ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ಮಿರಜ್, ಜಮಖಂಡಿ, ಗಡಿಂಗ್ಲಸ್ ಮತ್ತು ಗಡಿ ಪ್ರದೇಶಗಳಲ್ಲಿದ್ದ ಕನ್ನಡಿಗರಲ್ಲಿ ಭವಿಷ್ಯದ ಬಗ್ಗೆ ಆತಂಕವಿತ್ತು. ಆಡಳಿತಾತ್ಮಕ ಗಡಿಗಳ ಪುನರ್‌ವ್ಯವಸ್ಥೆಯಲ್ಲಿ ತಮ್ಮ ಪ್ರದೇಶಗಳು ಯಾವ ರಾಜ್ಯಕ್ಕೆ ಸೇರುತ್ತವೆ? ತಮ್ಮ ಭಾಷೆ ಮತ್ತು ಸಂಸ್ಕೃತಿಗೆ ಯಾವ ಸ್ಥಾನ ದೊರೆಯುತ್ತದೆ? ಕನ್ನಡ ಶಾಲೆಗಳು ಉಳಿಯುತ್ತವೆಯೇ? ಕನ್ನಡಿಗರ ಹಕ್ಕುಗಳು ರಕ್ಷಿಸಲ್ಪಡುತ್ತವೆಯೇ? ಎಂಬ ಪ್ರಶ್ನೆಗಳು ಅವರ ಮನಸ್ಸಿನಲ್ಲಿ ಮೂಡಿದ್ದವು. ಆತಂಕದ ಸಂದರ್ಭದಲ್ಲಿ ಜನರಲ್ಲಿ ಧೈರ್ಯ ತುಂಬುವುದು, ಕನ್ನಡಿಗರನ್ನು ಸಂಘಟಿಸುವುದು ಮತ್ತು ಏಕೀಕರಣದ ಆಶಯವನ್ನು ಜನಮನದಲ್ಲಿ ಗಟ್ಟಿಗೊಳಿಸುವುದು ಅತ್ಯಂತ ಅಗತ್ಯವಾಗಿತ್ತು. ಸೊಲ್ಲಾಪುರವು ಇಂಥ ಜಟಿಲ ಹೋರಾಟದಲ್ಲಿ ವಿಶೇಷ ಮಹತ್ವ ಪಡೆದ ಪ್ರದೇಶ. ಅಲ್ಲಿನ ಕನ್ನಡಿಗರ ಭಾವನೆಗಳನ್ನು ಒಗ್ಗೂಡಿಸಿ, ಕರ್ನಾಟಕ ಏಕೀಕರಣದ ಪರವಾದ ಚಳವಳಿಗೆ ಬಲ ತುಂಬುವಲ್ಲಿ ಜಯದೇವಿತಾಯಿಯವರ ಪಾತ್ರ ಗಮನಾರ್ಹವಾಗಿತ್ತು.  ಏಕೀಕರಣವು  ಕನ್ನಡಿಗರ ಅಸ್ಮಿತೆ, ಭಾಷೆ, ಸಂಸ್ಕೃತಿ, ಸ್ವಾಭಿಮಾನ ಮತ್ತು ಭವಿಷ್ಯದ ಪ್ರಶ್ನೆ ಎಂದು ಎಲ್ಲ ಭಾಷಣಗಳನ್ನು ಹೇಳುತ್ತಿದ್ದರು ಹಾಗೆ ಅವರು ಅರ್ಥಮಾಡಿಕೊಂಡಿದ್ದರು.ಅವರ ಹೋರಾಟದ ವಿಶೇಷತೆ ಎಂದರೆ, ಏಕೀಕರಣದ ವಿಚಾರವನ್ನು  ಮುಖಂಡರನ್ನು ಒಳಗೊಂಡು ಸಾಮಾನ್ಯ ಕನ್ನಡಿಗರ ಮನಸ್ಸಿನ ವಿಚಾರವನ್ನಾಗಿ ಮಾಡುವ ಪ್ರಯತ್ನ. ಜನರಲ್ಲಿ ಜಾಗೃತಿ ಮೂಡಿಸುವುದು, ಕನ್ನಡಿಗರ ಒಗ್ಗಟ್ಟನ್ನು ಬಲಪಡಿಸುವುದು, ಏಕೀಕರಣದ ಅಗತ್ಯವನ್ನು ಮನವರಿಕೆ ಮಾಡುವುದು ಮತ್ತು ಗಡಿ ಪ್ರದೇಶಗಳ ಕನ್ನಡಿಗರ ಧ್ವನಿಯನ್ನು ಪ್ರಬಲಗೊಳಿಸುವುದು ಅವರ ಕಾರ್ಯದ ಪ್ರಮುಖ ಭಾಗವಾಗಿತ್ತು. ಅಂದು ಸಂವಹನದ ವ್ಯವಸ್ಥೆಯು ಇಂದಿನಂತಹ ಸುಲಭ ವ್ಯವಸ್ಥೆಗಳಿರಲಿಲ್ಲ. ಇಂದಿನಂತೆ ಸಾಮಾಜಿಕ ಮಾಧ್ಯಮ, ದೂರದರ್ಶನ, ಮೊಬೈಲ್ ಫೋನ್ ಅಥವಾ ಕ್ಷಣಾರ್ಧದಲ್ಲಿ ಮಾಹಿತಿಯನ್ನು ತಲುಪಿಸುವ ವ್ಯವಸ್ಥೆ ಇರಲಿಲ್ಲ. ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವುದು, ಜನರನ್ನು ಭೇಟಿ ಮಾಡುವುದು, ಸಭೆಗಳನ್ನು ನಡೆಸುವುದು, ವಿಚಾರವನ್ನು ವಿವರಿಸುವುದು ಮತ್ತು ಜನರನ್ನು ಸಂಘಟಿಸುವುದು ದೊಡ್ಡ ಪರಿಶ್ರಮದ ಕೆಲಸವಾಗಿತ್ತು.ಆದರೂ ಇಂತಹ ಕಷ್ಟಗಳಿಗೆ ಜಯದೇವಿತಾಯಿ ಹಿಂದೆ ಸರಿಯಲಿಲ್ಲ.ಅವರ ಪಾಲಿಗೆ ಏಕೀಕರಣ ಒಂದು ದಿನದ ರಾಜಕೀಯ ಕಾರ್ಯಕ್ರಮವಲ್ಲ ಅದು ಜೀವನದ ಧ್ಯೇಯವಾಗಿತ್ತು. ಗಡಿ ಪ್ರದೇಶಗಳಲ್ಲಿದ್ದ ಕನ್ನಡಿಗರು ತಮ್ಮ ಭಾಷೆ ಮತ್ತು ಸಂಸ್ಕೃತಿಯ ಕುರಿತು ಹೊಂದಿದ್ದ ಆತಂಕವನ್ನು ಅವರು ಅರ್ಥಮಾಡಿಕೊಂಡರು. ಕನ್ನಡಿಗರು ಎಲ್ಲಿದ್ದರೂ ಅವರ ಭಾಷಾ ಹಕ್ಕುಗಳು ಮತ್ತು ಸಾಂಸ್ಕೃತಿಕ ಅಸ್ತಿತ್ವ ಉಳಿಯಬೇಕು ಎಂಬ ಭಾವನೆಯೊಂದಿಗೆ ಹೋರಾಟ ನಡೆಸಿದರು. ಕನ್ನಡಿಗರ ನಡುವೆ ಒಗ್ಗಟ್ಟಿನ ಭಾವನೆ ಮೂಡಿಸುವುದಕ್ಕೆ ಅವರು ಶ್ರಮಿಸಿದರು.೧೯೪೮ರಿಂದ ೧೯೫೬ರವರೆಗಿನ ಅವಧಿ ಅವರ ಜೀವನದ ಮಹತ್ವದ ಹೋರಾಟದ ಕಾಲಘಟ್ಟವಾಗಿತ್ತು. ದೇಶ ಸ್ವತಂತ್ರವಾದ ನಂತರವೂ ಕರ್ನಾಟಕ ಏಕೀಕರಣದ ಕನಸು ತಕ್ಷಣ ನನಸಾಗಲಿಲ್ಲ. ಭಾಷಾವಾರು ರಾಜ್ಯಗಳ ರಚನೆಯ ಕುರಿತು ದೇಶದಾದ್ಯಂತ ಚರ್ಚೆ ನಡೆಯುತ್ತಿತ್ತು. ಸಮಿತಿಗಳು, ಆಯೋಗಗಳು, ರಾಜಕೀಯ ಚರ್ಚೆಗಳು, ಜನಾಭಿಪ್ರಾಯ ಮತ್ತು ಚಳವಳಿಗಳು ಇವೆಲ್ಲದರ ನಡುವೆ ಕನ್ನಡಿಗರ ಬೇಡಿಕೆಯನ್ನು ನಿರಂತರವಾಗಿ ಜೀವಂತವಾಗಿಡಬೇಕಾಗಿತ್ತು. ಜಯದೇವಿತಾಯಿಯವರಂತಹ ಕಾರ್ಯಕರ್ತರ ಶ್ರಮ ಬಹಳ ಮುಖ್ಯವಾಗಿತ್ತು.ಅವರು ಏಕೀಕರಣವನ್ನು ಅಂದರೆ “ಗಡಿ ಸೇರ್ಪಡೆ” ಜೊತೆಗೆ ಕನ್ನಡ ನಾಡಿನ ಸಾಂಸ್ಕೃತಿಕ ಪುನರ್‌ಸಂಘಟನೆಯಾಗಿ ಕಂಡರು. ಕನ್ನಡ ಭಾಷೆ, ಕನ್ನಡ ಸಾಹಿತ್ಯ, ಕನ್ನಡ ಸಂಸ್ಕೃತಿ ಮತ್ತು ಕನ್ನಡಿಗರ ಸ್ವಾಭಿಮಾನ ಒಂದೇ ಭೌಗೋಳಿಕ ಅಸ್ತಿತ್ವದಲ್ಲಿ ಅರಳಬೇಕು ಎಂಬುದು ಅವರ ಆಶಯವಾಗಿತ್ತು.ಅದರಲ್ಲಿಯೂ ಸೊಲ್ಲಾಪುರದ ಕನ್ನಡಿಗರಿಗಾಗಿ ಅವರು ವಹಿಸಿದ ನಾಯಕತ್ವ ವಿಶೇಷವಾಗಿ ಉಲ್ಲೇಖನೀಯ. ಗಡಿ ಪ್ರದೇಶದ ಜನರಲ್ಲಿ ಉಂಟಾಗಿದ್ದ ಗೊಂದಲ ಮತ್ತು ಆತಂಕದ ನಡುವೆ, ಅವರಲ್ಲಿ ಕನ್ನಡದ ಬಗ್ಗೆ ಆತ್ಮವಿಶ್ವಾಸ ಮೂಡಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ಜಯದೇವಿತಾಯಿ ತಮ್ಮ ಮಾತು, ಸಂಘಟನೆ ಮತ್ತು ನಿರಂತರ ಪ್ರಯತ್ನಗಳ ಮೂಲಕ ಜನರನ್ನು ಏಕೀಕರಣದ ಆಶಯದ ಸುತ್ತ ಒಗ್ಗೂಡಿಸಲು ಶ್ರಮಿಸಿದರು.ಏಕೀಕರಣ ಚಳವಳಿಯ ಹೋರಾಟದಲ್ಲಿ ಮಹಿಳೆಯರ ಪಾತ್ರವೂ ಮಹತ್ವದ್ದಾಗಿತ್ತು. ಆ ಕಾಲದಲ್ಲಿ ಮಹಿಳೆಯೊಬ್ಬರು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿ, ಜನರನ್ನು ಸಂಘಟಿಸಿ, ರಾಜಕೀಯ-ಸಾಮಾಜಿಕ ವಿಚಾರಗಳಲ್ಲಿ ಮುಂಚೂಣಿಯಲ್ಲಿನಿಂತರು.ಅವರ ಹೋರಾಟದಲ್ಲಿ ವೈಯಕ್ತಿಕ ಲಾಭದ ಆಸೆಗಿಂತ ನಾಡಿನ ಹಿತ ಮತ್ತು ಕನ್ನಡಿಗರ ಭವಿಷ್ಯ ಮುಖ್ಯವಾಗಿತ್ತು.ಕರ್ನಾಟಕ ಏಕೀಕರಣಕ್ಕಾಗಿ ದುಡಿಯುವುದು ಎಂದರೆ  ಸಭೆ-ಸಮಾರಂಭಗಳನ್ನು ಆಯೋಜಿಸುವ ಜೊತೆ ಜೊತೆಗೆ…. ಪ್ರವಾಸ, ಜನಸಂಪರ್ಕ, ಸಂಘಟನೆ, ಮನವೊಲಿಕೆ ಮತ್ತು ತ್ಯಾಗ ಇತ್ತು. ಈ ಎಲ್ಲವನ್ನೂ ಅವರು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡರು.ಅನೇಕ ವರ್ಷಗಳ ನಿರಂತರ ಪರಿಶ್ರಮವಾಗಿತ್ತು. ಅಂತಿಮವಾಗಿ ೧೯೫೬ರಲ್ಲಿ ಭಾಷಾವಾರು ರಾಜ್ಯಗಳ ಪುನರ್‌ರಚನೆಯ ಮೂಲಕ ಕರ್ನಾಟಕದ ವಿವಿಧ ಕನ್ನಡ ಭಾಷಿಕ ಪ್ರದೇಶಗಳು ಒಂದೇ ರಾಜ್ಯದ ಅಡಿಯಲ್ಲಿ ಬರುವ ಐತಿಹಾಸಿಕ ಘಟ್ಟ ನಿರ್ಮಾಣವಾಯಿತು. ಕನ್ನಡಿಗರ ಬಹುಕಾಲದ ಕನಸಿಗೆ ಒಂದು ಮಹತ್ವದ ರೂಪ ದೊರೆಯಿತು.ಆದರೆ ಈ ವಿಜಯವು ಹಳ್ಳಿ-ಹಳ್ಳಿಗಳಲ್ಲಿ, ಗಡಿ ಪ್ರದೇಶಗಳಲ್ಲಿ, ನಗರಗಳಲ್ಲಿ, ಸಂಘಟನೆಗಳಲ್ಲಿ, ಸಭೆಗಳಲ್ಲಿ ಮತ್ತು ಜನರ ನಡುವೆ ನಿರಂತರವಾಗಿ ದುಡಿದ ಅನೇಕ ಹೋರಾಟಗಾರರ ಬೆವರು ಮತ್ತು ತ್ಯಾಗವಿತ್ತು. ಅಂತಹ ಹೋರಾಟಗಾರ್ತಿಯರಲ್ಲಿ ಡಾ. ಜಯದೇವಿತಾಯಿಯವರ ಹೆಸರು ಗೌರವದಿಂದ ಸ್ಮರಿಸಬೇಕಾಗಿದೆ. ಅವರ ಏಕೀಕರಣ ಹೋರಾಟವನ್ನು ನೆನಪಿಸಿಕೊಳ್ಳುವಾಗ ನಮಗೆ ಒಂದು ಮಹತ್ವದ ಸತ್ಯ ಅರಿವಾಗುತ್ತದೆ ನಾಡು ನಿರ್ಮಾಣವಾಗುವುದು  ಗಡಿಗಳ ಹಂಚಿಕೆ ಜೊತೆ ಜನರ ಮನಸ್ಸುಗಳನ್ನು ಒಂದುಗೂಡಿಸುವದಾಗಿತ್ತು. ಕನ್ನಡಿಗರ ಮನಸ್ಸುಗಳನ್ನು ಒಂದುಗೂಡಿಸುವ ಕಾರ್ಯ ಮಾಡಿದರು. ಅವರ ಬದುಕನ್ನು ನೋಡಿದಾಗ “ಏಕೀಕರಣಕ್ಕಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟವರು” ಎಂಬ ಮಾತು ಕೇಳಿ ಬರುವದು….ಅವರ ಕಾರ್ಯ, ಹೋರಾಟ ಮತ್ತು ನಿರಂತರ ಸಾಮಾಜಿಕ ಬದ್ಧತೆಯನ್ನು ಗಮನಿಸಿದಾಗ ಅದು ಅವರ ಜೀವನದ ಧ್ಯೇಯದ ಪ್ರತಿಬಿಂಬವಾಗಿ ಕಾಣುತ್ತದೆ. ಕರ್ನಾಟಕ ಏಕೀಕರಣದ ಇತಿಹಾಸವು  ೧೯೫೬ರಲ್ಲಿ ಮುಕ್ತಾಯವಾದ ಒಂದು ಅಧ್ಯಾಯ ಎಂದೆನಿಸಿದರು. ಅದು ಕನ್ನಡಿಗರ ಭಾಷಾ ಸ್ವಾಭಿಮಾನ, ಸಾಂಸ್ಕೃತಿಕ ಏಕತೆ ಮತ್ತು ನಾಡಿನ ಅಸ್ಮಿತೆಯ ನಿರಂತರ ಪಯಣ. ಆ ಪಯಣದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ ಡಾ. ಜಯದೇವಿತಾಯಿಯವರ ಕೊಡುಗೆ ಸ್ಮರಣೀಯ. ಬಿಚ್ಚಿ ಎನ್ನದೆಯಲಿ |ಬಚ್ಚಿಟ್ಟುಕೊಳ್ಳಲೇನುಬಚ್ಚ ಬರಿಯ ನಿತ್ಯ- ನುಡಿಗನ್ನಡಅಚ್ಚೊತ್ತಿಕೊಳ್ಳಲೇನ ಅಖಂಡ||ಎಂದು ಕನ್ನಡ ನುಡಿಗಾಗಿ ಹಾಡಿ ಹರಿಸಿದರು.ನಾಡಪ್ರೇಮ, ಕನ್ನಡಾಭಿಮಾನ ಮತ್ತು ತ್ಯಾಗದ ಪ್ರತೀಕವಾಗಿ ಡಾ. ಜಯದೇವಿತಾಯಿಯವರ ಏಕೀಕರಣ ಹೋರಾಟವು ಮುಂದಿನ ಪೀಳಿಗೆಗಳಿಗೂ ಸ್ಫೂರ್ತಿಯಾಗಲಿ.

Read Post »

ಇತರೆ, ಜೀವನ

ಕಾಲ’ಮಾನ ಬದಲಾದರೂ ಭವಿತವ್ಯದ ಚಿಂತೆ ಬೆಂಬಿಡದು – ಡಾ. ಕೆ ಯಲ್ಲಮ್ಮ

ಕಾಲ’ಮಾನ ಬದಲಾದರೂ ಭವಿತವ್ಯದ ಚಿಂತೆ ಬೆಂಬಿಡದು – ಡಾ. ಕೆ ಯಲ್ಲಮ್ಮ

ಕಾಲ’ಮಾನ ಬದಲಾದರೂ ಭವಿತವ್ಯದ ಚಿಂತೆ ಬೆಂಬಿಡದು – ಡಾ. ಕೆ ಯಲ್ಲಮ್ಮ Read Post »

ಇತರೆ, ನಿಮ್ಮೊಂದಿಗೆ

“ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆ” ಕೇಂದ್ರ ಸಾಹಿತ್ಯ ಅಕಾಡೆಮಿ,ದೆಹಲಿ ಅವರ ವಿಚಾರ ಸಂಕಿರಣದಲ್ಲಿ ಡಾ.ಸಿದ್ದರಾಮ ಹೊನ್ಕಲ್‌ ಮಂಡಿಸಿದ ಪ್ರಬಂಧ.( ಪ್ರತಿಯೊಬ್ಬ ಕನ್ನಡ ಕವಿಯೂ ಓದಲೇಬೇಕಾದ ಬರಹ.)

ವಿಶೇಷ ಸಂಗಾತಿ ಡಾ.ಸಿದ್ದರಾಮ ಹೊನ್ಕಲ್ “ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆ” ಕೇಂದ್ರ ಸಾಹಿತ್ಯ ಅಕಾಡೆಮಿ,ದೆಹಲಿ ಅವರ ವಿಚಾರ ಸಂಕಿರಣದಲ್ಲಿ ಡಾ.ಸಿದ್ದರಾಮ ಹೊನ್ಕಲ್‌ ಮಂಡಿಸಿದ ಪ್ರಬಂಧ.( ಪ್ರತಿಯೊಬ್ಬ ಕನ್ನಡ ಕವಿಯೂ ಓದಲೇಬೇಕಾದ ಬರಹ.) *ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆ..*(ಕೇಂದ್ರ ಸಾಹಿತ್ಯ ಅಕಾಡೆಮಿ ದೆಹಲಿ ಅವರ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧ. ಪ್ರತಿಯೊಬ್ಬ ಕನ್ನಡದ ಕವಿಗಳು ಓದಬೇಕು.)ಲೇಖಕ – *ಡಾ.ಸಿದ್ಧರಾಮ ಹೊನ್ಕಲ್* ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ಮುಗಿದು ಈಗಾಗಲೇ 79 ವರ್ಷಗಳ ಸಂಭ್ರಮದಲ್ಲಿ ಈ ಅಗಸ್ಟ ೧೫ ರಂದು ನಾವು ಭಾರತದ ಸ್ವಾತಂತ್ರ್ಯ ದಿನ ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸ್ವಾತಂತ್ರ್ಯ ಹೋರಾಟದ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆಯನ್ನು ಕುರಿತು ಮಾತಾಡಲು ನನಗೆ ಅವಕಾಶ ಒದಗಿಸಿದ್ದಕ್ಕೆ ಮೊಟ್ಟ ಮೊದಲನೆಯದಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯವರಿಗೆ ಅದರ ಎಲ್ಲ ಸದಸ್ಯರಿಗೆ ಮತ್ತು ಅಧ್ಯಕ್ಷರಿಗೆ ಗೌರವಯುತ ವಂದನೆಗಳನ್ನು ಅರ್ಪಿಸಿ ನನ್ನ ಮಾತುಗಳನ್ನು ಆರಂಭಿಸುತ್ತಿದ್ದೇನೆ.ಆ ಸ್ವಾತಂತ್ರ್ಯ ಪೂರ್ವದ ಸಂಗ್ರಾಮಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಸಾಕಷ್ಟು ಇದೆ. ನನಗೆ ಕಾವ್ಯ ಕ್ಷೇತ್ರದಿಂದ ಆದಂತಹ ಕೊಡುಗೆಯನ್ನು ಕುರಿತು ವಿಷಯ ಕೊಟ್ಟಿರುವದರಿಂದ ಹಾಗೂ ಹದಿನೈದು ನಿಮಿಷಗಳ ಸಮಯದ ಮಿತಿಯಲ್ಲಿ ಪ್ರಬಂಧ ಮಂಡಿಸಲು ಹೇಳಿರುವದರಿಂದ ಆ ನಿಗದಿತ ಅವಧಿಗೆ ಸಾಧ್ಯವಾಗುವಷ್ಟು ಇಲ್ಲಿ ನಾನು ನನಗೆ ದೊರೆತ ಆಕರಗಳ, ಕವಿತೆಗಳ ಹಿನ್ನೆಲೆಯಲ್ಲಿ ಪ್ರಾಮಾಣಿಕವಾಗಿ ನನ್ನ ಅನಿಸಿಕೆ ಹಂಚಿಕೊಳ್ಳಲು ಪ್ರಯತ್ನಿಸುವೆ ಎಂದು ಈ ಮೂಲಕ ಭರವಸೆ ನೀಡುತ್ತೇನೆ.ನಮ್ಮ ಈ ಭಾರತದ ಬಹುತೇಕ ಜನತೆಗೆ ಒಂದು ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತ್ರ ಗೊತ್ತು.ಅದು 1947 ಅಗಸ್ಟ್ ಹದಿನೈದರಂದು ದೊರೆತ  ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತ್ರ.ಆದರೆ ನಾನು ಬಂದಿರುವ‌ ಹೈದರಾಬಾದ್ ಕರ್ನಾಟಕದ ಅಂದರೆ ಈಗಿನ ಕಲ್ಯಾಣ ಕರ್ನಾಟಕ ಪ್ರದೇಶದವರಾದ ನಮಗೆ ಈ ಸ್ವಾತಂತ್ರ್ಯ ಒಂದು ವರ್ಷ ಒಂದು ತಿಂಗಳು ತಡವಾಗಿ ದೊರೆಯಿತು.ಇಡೀ ದೇಶ‌ ಸ್ವಾತಂತ್ರ್ಯ ದ ಸಂಭ್ರಮದಲ್ಲಿ ಪುಳಕಗೊಂಡು ಜೈ ಭಾರತಮಾತೆ..ಎಂದು ಹರ್ಷದಿಂದ ಉದ್ಗಾರ ಮಾಡುವಾಗ ನಾವು ನಮ್ಮ ಪ್ರದೇಶದ ಜನ‌ ಅಖಂಡ ಭಾರತದ ಒಕ್ಕೂಟದಲ್ಲಿ ಸೇರದೇ ಹೊರಗೆ ಉಳಿದ ಹೈದರಾಬಾದ್ ನ ನಿಜಾಂನ ಹಾಗೂ ಆತನ ಸೇನಾಧಿಪತಿ ಕಾಸಿಂ ರಜ್ವಿ ಕಟ್ಟಿದ‌ ಖಾಸಗಿ ಸೈನ್ಯ ರಜಾಕಾರರ ಬೂಟು ಗಾಲಿನಿಂದ ಒದೆ ತಿನ್ನುತ್ತಾ,ಅವರ ದೌರ್ಜನ್ಯ,ಹಿಂಸೆ ಅತ್ಯಾಚಾರಕ್ಕೆ ಒಳಗಾಗಿ ದೆಹಲಿಯ ಕೆಂಪು ಕೋಟೆಯ ಮೇಲೆ ಹಾರಿದ ತಿರಂಗಿ ಧ್ವಜ ದ ಸಂಭ್ರಮ ನೋಡಲಾಗದೇ; ಅದನ್ನು ಕಲ್ಪಿಸಿಕೊಳ್ಳಲು‌ ಸಹ ಭಯ ಭೀತರಾದಂತಹ ಪರಸ್ಥಿತಿಯಲ್ಲಿ ನಲುಗಿ ಹೋಗಿದ್ದರು. ಆ ಹಿನ್ನೆಲೆಯಲ್ಲಿ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕರೆ, ನಿಜಾಂ ಸರ್ಕಾರದ ಅಡಿಯಲ್ಲಿದ್ದ ಹೈದರಾಬಾದ್ ಕರ್ನಾಟಕದ ನಮಗೆ ಮತ್ತೋಂದು ಬಹು ಭೀಕರ ಹೋರಾಟ ಮಾಡಿದ ನಂತರ ಒಂದು ವರ್ಷ ಒಂದು ತಿಂಗಳು ತಡವಾಗಿ ಸ್ವಾತಂತ್ರ್ಯ ಸಿಕ್ಕಿತು.ಆ ಹಿನ್ನೆಲೆಯಲ್ಲಿ ನಾನು ಈ ಸಂದರ್ಭದಲ್ಲಿ ಎರಡು ಹೋರಾಟಗಳ ಕುರಿತು ನಮ್ಮ ಕನ್ನಡ ಕಾವ್ಯವನ್ನು ಗಮನಿಸಿ ಕಟ್ಟಿಕೊಡಲು ಯತ್ನಿಸುತ್ತೇನೆ.ಯಾವುದೇ ಕಾಲಮಾನದಲ್ಲಿ ಲೇಖಕ,ಕವಿ,ಕಲಾವಿದ ನಾದವನು ಆ ಒಂದು ಕಾಲಮಾನದ ಸಾಕ್ಷಿ ಪ್ರಜ್ಞೆ ಯಾಗಿರುತ್ತಾನೆ. ತನ್ನ ಕಾಲಮಾನದಲ್ಲಿ ನಡೆದ ಯಾವುದೇ ವಿದ್ಯಮಾನಗಳಿಗೆ ಸ್ಪಂದಿಸುತ್ತಾನೆ.ಕವಿ ಲೇಖಕ ಬರಹಗಾರ ಒಟ್ಟಾರೆ ಅಕ್ಷರಬಲ್ಲ ಸೃಜನಜನಶೀಲ ವ್ಯಕ್ತಿ ಕಲಾವಿದ ಹೋರಾಟಗಾರ ಇವರೆಲ್ಲರೂ ಆ ಸಂದರ್ಭದಲ್ಲಿ ಸ್ಪಂದಿಸದೇ ಹೋದರೆ ಆತ ಸಮಾಜಿಮುಖಿ‌, ಜನಮುಖಿ ಕವಿಯಾಗಲಾರ.ಹೋರಾಟಗಾರನಾಗಲಾರ.ಕಲಾವಿದ ಆಗಲಾರ. ಸಾಮಾನ್ಯ ಜನತೆ ಒಬ್ಬ ಅಥವಾ ಒಂದು ಸಮೂಹ ನಾಯಕತ್ವದಲ್ಲಿ ಯಾವುದೇ ಒಂದು ಹೋರಾಟವನ್ನು ರೂಪಿಸಿದವರ ಜೊತೆ ಆ ಹೋರಾಟಕ್ಕೆ ಕೈ‌ ಜೋಡಿಸುತ್ತಾರೆ. ಆಗ ಯಾವುದೇ ಒಂದು ಹೋರಾಟಕ್ಕೆ ಬೇಕಾದ ಹೋರಾಟದ‌ ಹಾಡುಗಳು,ಕವಿತೆಗಳು,ಮಾತುಗಳು,ಭಿತ್ತಿ ಚಿತ್ರಗಳು,ಒಟ್ಟಾರೆ ಆಗ ಸೃಷ್ಠಿಯಾದ ಸಾಹಿತ್ಯ ಬಹುಮುಖ್ಯ ವಾಗಿ ಜನಮನ ಸೆಳೆದು ಹೋರಾಟದ ಕಡೆಗೆ ಜನರನ್ನು ಆಕರ್ಷಿಸುವ ಹಾಗೂ ತಮ್ಮ ಆ ಹೋರಾಟದ ಹಿಂದಿನ‌ ಕೈ‌ಗೆ ಹಾಕಿದ ಬೇಡಿಯನ್ನು, ಬಂಧನವನ್ನು ಕಳಚಿಕೊಳ್ಳುವ‌ ಆ ಸಂದರ್ಭದಲ್ಲಿ ಆಗಬೇಕಾದ ದೈಹಿಕ ಮಾನಸಿಕ ಶಿದ್ಧತೆಗೆ ಒಂದು ಪ್ರೇರಣೆಯನ್ನು ಖಂಡಿತಾ ಸಾಹಿತ್ಯ ಕ್ಷೇತ್ರ ಒದಗಿಸುತ್ತದೆ.ಆ ಎಲ್ಲಾ ಹಿನ್ನೆಲೆಯಲ್ಲಿ ಈಗ ಮೊದಲನೆದಾಗಿ ನಾನು ಅಗಷ್ಟ ೧೫-೧೯೪೭ ರಲ್ಲಿ ದೊರೆತ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನಮ್ಮ ಕನ್ನಡದ ಕವಿಗಳ ಕಾವ್ಯದ ಕೊಡುಗೆ ಹಿನ್ನೆಲೆಯಲ್ಲಿ ಚರ್ಚಿಸುತ್ತೇನೆ.*ನಮ್ಮದಿ ನಮ್ಮದಿ ಭರತಭೂಮಿ ಹೆರವರ ನಂಬದಲೇ**ಜಗದೀಶ್ವರಂ ತಾನೇ ಧರಸಿ ನಾನಾವತಾರಗಳನು**ಕರೆವ ಸರ್ವಸ್ವಮಂ ಧರೆಯ ಸಂರಕ್ಷಿಸುವ ತೆರೆವ**ಕಲಿಸಿದ ಪೂರ್ವ ಪಾಠಶಾಲೆ…*ಜೈ ಭಾರತ ರಾಷ್ಟ್ರಗೀತೆಯ ಕೃತಿಯಲ್ಲಿರುವ ಈ ಕವಿತೆಯ,ಹಾಡಿನ ಮೂಲಕ ೧೯ ನೇ ಶತಮಾನದ ಸ್ವಾತಂತ್ರ್ಯ ಪೂರ್ವದ ರಾಷ್ಟ್ರಾಭಿಮಾನಿ ಕವಿ ಎಂದೇ ಖ್ಯಾತರಾಗಿರುವ *ಶಾಂತಕವಿ* ಎಂಬ ಕಾವ್ಯನಾಮದ ಬಾಳಾಚಾರ್ಯ ಸಕ್ರಿಯವರ ಈ ಕವಿತೆಯ ಮೂಲಕ  ಹರಿದು ಬಂದ ಸ್ವಾತಂತ್ರ್ಯ ಸಂಗ್ರಾಮದ ಕಾವ್ಯವನ್ನು ಗಮನಿಸಬಹುದಾಗಿದೆ.ಸ್ವಾತಂತ್ರ ಪೂರ್ವದ ಬ್ರಿಟಿಷರ ಆಳ್ವಿಕೆಯಲ್ಲಿ ನಲುಗಿದ ಭಾರತಾಂಬೆಯನ್ನು , ಈ ಭರತ ಭೂಮಿಯನ್ನು ಸ್ವತಂತ್ರಗೊಳಿಸಬೇಕೆಂಬ ಕಲ್ಪನೆ ಅದಾಗಲೇ ಕವಿ, ಲೇಖಕ, ಹೋರಾಟಗಾರರು, ಕಲಾವಿದರಲ್ಲಿ ಸೂಪ್ತವಾಗಿ ಮೊಳಕೆ ಒಡೆಯುತ್ತಿದ್ದ ಕಾಲವದು.ನವೋದಯ ಸಾಹಿತ್ಯದ ಹರಿಕಾರರಾದ ಬಿ ಎಂ ಶ್ರೀ ಅವರಿಂದ ಆರಂಭಗೊಂಡು ಆ ಕಾಲಮಾನದ ಎಲ್ಲ ಕವಿಗಳು ಸ್ವಾತಂತ್ರದ ಹೋರಾಟಕ್ಕೆ ತಮ್ಮ ಕಾವ್ಯದ ಮೂಲಕ ಸ್ಪಂದಿಸಿದ್ದು ಸ್ವಾತಂತ್ರ್ಯ ಹೋರಾಟದ ಇತಿಹಾಸ ಬಲ್ಲ ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ.*ತಂತ್ರ ವಾದ್ಯವು ಲೇಸು**ಮಂತ್ರಿಯ ಕಳೆ ಲೇಸು**ಯಂತ್ರ ವಾಹಕನ ದಯೆ ಲೇಸು**ಜಗದೀ ಸ್ವಾತಂತ್ರ್ಯವೇ ಲೇಸು*ಎಂದು ನಮ್ಮ ಲೋಕ ಸಂಚಾರಿ, ಲೋಕಾನುಭವಿ ಕವಿ ಸರ್ವಜ್ಞನು. ಈ ಜಗಕ್ಕೆ ಸ್ವಾತಂತ್ರ್ಯವೇ ಲೇಸು ಎಂದು ತಮ್ಮ ಬದುಕಿನ ಕಾಲ ಘಟ್ಟದಲ್ಲಿ ಹೇಳಿರುವುದು ಇಲ್ಲಿ ಉಲ್ಲೇಖನೀಯ.12ನೇ ಶತಮಾನದ ಬಸವಾದಿ ಶರಣರ ಕಾಲದಿಂದಲೇ ಸ್ವತಂತ್ರ ವಿಚಾರಧಾರೆ ಜನಮನಕ್ಕೆ ತಲುಪಿ ಪ್ರತಿಯೊಬ್ಬರಲ್ಲಿ ವ್ಯಕ್ತಿ ಗೌರವ, ಆತ್ಮವಿಶ್ವಾಸ, ಸಮಾನತೆ, ಸ್ವಾತಂತ್ರ್ಯದ ಪರಿಕಲ್ಪನೆ ಈ ನೆಲದಲ್ಲಿ ಬಿಜಾಂಕುರವಾಗಿತ್ತು. ಇದು ಸ್ವಾತಂತ್ರ್ಯದ ಹೋರಾಟದ ಸಂದರ್ಭದಲ್ಲಿ ಹೆಮ್ಮರವಾಗಿ ಬೆಳೆದು ಇಡೀ ನಾಡು ನುಡಿ ಗಡಿದಾಟಿ ಇಡೀ ದೇಶವನ್ನೇ ವ್ಯಾಪಿಸಿದ್ದು ಸುಳ್ಳಲ್ಲ.ಮುಖ್ಯವಾಗಿ ಯಾವುದೇ ದೇಶದ ಜನ ಸಮೂಹ ಹೆರವರ ಕಟ್ಟುಪಾಡುಗಳಲ್ಲಿ, ಉಸಿರುಗಟ್ಟಿಸುವ ವಾತಾವರಣದಲ್ಲಿ ತೆಲೆ ತಗ್ಗಿಸಿ ಬಹುದಿನ ಬದುಕಲಾಗುವುದಿಲ್ಲ.ಆ ಕಾಲಮಾನದ ಸಾಕ್ಷಿ ಪ್ರಜ್ಞೆಯುತ್ತಿರುವ ಕವಿ, ಲೇಖಕ, ಬರಹಗಾರ, ಪತ್ರಕರ್ತ ಸುಮ್ಮನೆ ಮೌನ ಪ್ರೇಕ್ಷಕರಾಗಿ ಉಳಿಯಲಾರರು.ಅದೇ ರೀತಿ ಈ ಸ್ವಾತಂತ್ರ್ಯದ ಸಂದರ್ಭದಲ್ಲಿ ಸಹ ತಮ್ಮ ಕಾವ್ಯದ ಮೂಲಕ ಸ್ವಾತಂತ್ಯ್ರದ ರೊಚ್ಚು ಕೆಚ್ಚು ಜನಮನಕ್ಕೆ ತಲುಪಿಸಿ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂಬಂತೆ ತಮ್ಮ ಕಾವ್ಯವನ್ನು ನೂರಾರು ಕವಿಗಳು ಹರಿಸಿದ್ದಾರೆ.ಅಕ್ಷರ ಬಾರದವರು ಜನಪದ ಹಾಡು,ಹಲಾಹಿ ಹಾಡು, ಲಾವಣಿ,ಭುಲಾಯಿ, ಗೀಗಿಪದಗಳ ಮೂಲಕ ತಮ್ಮ ರಾಷ್ಟ್ರಾಭಿಮಾನವನ್ನು ಪ್ರದರ್ಶಿಸಿ ಒಟ್ಟಾರೆ ಸ್ವಾತಂತ್ರ್ಯ ದ ಹೋರಾಟದಲ್ಲಿ ತೊಡಗಿದ ಮಹಾತ್ಮನನ್ನು ಒಳಗೊಂಡ ಎಲ್ಲಾ ಸಮರ ಸೇನಾನಿಗಳಿಗೆ ,ಮುಂದಾಳುಗಳಿಗೆ ಪೂರಕವಾಗಿ ಕೆಲಸ ಮಾಡಿದ್ದು ಗಮನೀಯವಾಗಿದೆ.*ಭಾರತಾಂಬೆಯ ಹೀನ ಸ್ಥಿತಿಯನ್ನು ಕಣ್ಣು ತೆರೆಯುತ ನೋಡಿರಿ**ಪಾರತಂತ್ರ್ಯದಿ ಸಿಲುಕಿ ಬಳಲುವ ತಾಯಿಯನು ನೀವು ಬಿಡಿಸಿರಿ*@*ನಮ್ಮ ನಾಡಿನ ಹೆಣ್ಣು ಮಕ್ಕಳು ವೀರಶ್ರೀಯನು  ಬೀರುತ**ಒಮ್ಮನಸಿನೊಳೇ ರಾಷ್ಟ್ರ ಕಾರ್ಯಕ್ಕೆ ಪ್ರಾಣ ಕೊಡುತಿಹರಲ್ಲವೇ**ನಮ್ಮ ದೇಶದ ಸಿರಿಯು ಎಲ್ಲವೂ ಅನ್ಯ ದೇಶವ ಸೇರಿತು* *ಒಮ್ಮೆಯಾದರೂ ಹೊಟ್ಟೆ ತುಂಬಾ ಅನ್ನ ಸಿಗದಂತಾಯಿತು**ದೇಶ ಸೇವೆಯ ಸಮರ ಕಾಲದಿ ಪ್ರಾಣ ಹೋದರು ನೋಡದೆ**ದೇವ ಕೃಪೆಯನು ಪಡೆದು ದೇಶವನುಳಿಸಿಕೊಳ್ಳಲು ನಡೆಯಿರಿ*(ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಸಮರ ಕೃತಿಯ ಅನಾಮಿಕ ಕವಿಯೊಬ್ಬರ ಕವಿತೆ)  ಹೀಗೆ ಅಜ್ಞಾತ ಕವಿ ಒಬ್ಬ ರಾಷ್ಟ್ರ ಪ್ರೇಮವನ್ನು ಮೆರೆದು,ಹಿಂದಿನ ಸಿರಿ ಸಂಪತ್ತಿನ ನಮ್ಮ ಭಾರತ ಹೇಗಾಗಿದೆ ನೋಡಿ. ತುತ್ತು ಅನ್ನವು ಸಿಗದಂತಾಗಿದೆ ಬಡ ಬಗ್ಗರಿಗೆ ಎಂದು ಎಚ್ಚರಿಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಬನ್ನಿ. ಇದಕ್ಕಾಗಿ ಪ್ರಾಣ ಹೋದರು ಪರವಾಗಿಲ್ಲ. ದೇವಕೃಪೆಯಿಂದ ಹೋರಾಡಿ ಗೆಲ್ಲೋಣವೆಂದು ಹೇಳಿದ ಈ ಮೇಲಿನ ಕವಿತೆಯ ಆಶಯ ಇಡೀ ಕನ್ನಡ ಕಾವ್ಯದ ಒಳ ಹರಿವಾಗಿತ್ತು ಅನಿಸದಿರದು.*ಸತ್ತಂತಿಹರನ್ನು ಬಡಿದೆಚ್ಚರಿಸು …ಎಂಬ ಕವಿ ಕುವೆಂಪುರವರು**ಸಾರಿ ಬಾ ಸರ್ವರ್ಗೆ  ಸ್ವಾತಂತ್ರ್ಯಮಂ**ಸಾರಿ ಬಾ ಸರ್ವರ್ಗೇ ಸಾಮ್ಯತ್ವಮಂ *ಸರ್ವಂಗೆ ಸಾರಿ ಬಾ ಸೌಹಾರ್ದಮಂ**ಸರ್ವ ಲೋಕದ ಸರ್ವ ಸಂತೋಷ ಮಂ *ಸರ್ವರಿಂ  ಸರ್ವರಾ ಉದ್ಧಾರಮಮಂ* ( ಭಾರತ ಸ್ವಾತಂತ್ರ ಗಾಯತ್ರಿ ಕೃತಿಯ ಕವಿತೆ) ಕವಿತೆಯಲ್ಲಿ  ಉದಾತ್ತವಾಗಿ ಸರ್ವರಿಗೂ ಸ್ವಾತಂತ್ಯ ದ ಜೊತೆ ಜೊತೆಗೆ ಸೌಹಾರ್ದತೆ,ಸಂತೋಷ,ಸ್ವಾಮ್ಯತ್ವ ಹಾಗೂ ಏಳಿಗೆಯನ್ನು ಬಯಸುವ ಮೂಲಕ ಸ್ವಾತಂತ್ರ್ಯದ ಮೂಲಕ ದೊರೆಯಬಹುದಾದ ಸರ್ವ ಕನಸುಗಳನ್ನು ಕಟ್ಟಿಕೊಟ್ಟಿದ್ದಾರೆ. ಮುಂದುವರಿದು,ಮಹಾ ಕವಿ ಕುವೆಂಪು ಅವರು ಹೀಗೆ ಹೇಳಿದ್ದಾರೆ.ಒಂದು ರಾಜ್ಯವ ಗೆದ್ದು ಸಿರಿಯನೆಲ್ಲವ ಕದ್ದುಬಲವಂತರಾದವರು ಬಲವಿಲ್ಲದವರುಗಳತುಳಿಯುತ್ತಿರಲು ಜನರ ಮೊರೆ ಬಾನೆಡೆಗೆಮುಟ್ಟುತ್ತಿರಲು ಉರುಳುರುಳು ಹಗಲಿರಲುಎಲೆ ಧರಣಿ! ನೀ ನಿಷ್ಕರುಣಿಹೀಗೆ ಜನಮನದ ತವಕ ತಲ್ಲಣಗಳನ್ನು ಪಾರತಂತ್ರದ ಹಿನ್ನೆಲೆಯಲ್ಲಿ ಕವಿ ಕುವೆಂಪು ಅವರು ಅತ್ಯಂತ ಸಾತ್ವಿಕವಾಗಿಯೇ ಕಟ್ಟಿಕೊಟ್ಟು ರಾಜ್ಯದ ಸಿರಿಯನು ಕದ್ದವನು ಒಳಗಿನವನಾದರೂ ಅಷ್ಟೇ,ಅವನು ಹೊರಗಿನವನಾದರೂ ಅಷ್ಟೇ ಎಂದು ಬ್ರಿಟಿಷ್ ಸಾಮ್ರಾಜ್ಯ ಶಾಹಿಯ ದೂರ್ತತನವನ್ನು ತೆರೆದಿಟ್ಟಿದ್ದಾರೆ.@*ಗೇಣು ಭೂಮಿಗಾಗಿ ಎನ್ನ ಪ್ರಾಣ ಹೋಗಲಿ ಎಂದೆನ್ನುವಿ ಕಾಣದೇನೋ ನಾಡೇ ಪರಾಧೀನವಾಗಿರುವುದು ಮನುಜಾ ಮಾತೃಭೂಮಿಯ..*ಕವಿ ಮುದವೀಡು ಕೃಷ್ಣರಾಯರು..ಹೀಗೆ ಕಾವ್ಯದ ಮೂಲಕ ಕರೆನೀಡಿ ಒಡ ಹುಟ್ಟಿದವರ ಜೊತೆ ಒಡೆದಾಡುವ ನೀ ಪರಕೀಯರು ನಾಡೇ ಕಬಳಸಿದಾರೆ ಹೋರಾಡು ಎಂದು ಹೇಳುವುದು ಮನನೀಯವಾಗಿದೆ.@*ಹಿಂದು ಮಾತೆ ಬಂಧು ಭಾವದಿಂದ ನಿನ್ನ ಕಂದರು**ಒಂದು ಗೂಡಿ ಪಾರತಂತ್ರ್ಯ ಬಂಧವ ಹರಿದೊಗೆವೆವು*ಎಂದು ಕವಿಭೂಷಣ ಬೆಟಗೇರಿ ಕೃಷ್ಣಶರ್ಮ ಅವಳನ್ನು ತಾಯಿಗೆ ಹೋಲಿಸಿ ಅವಳ ಬಿಡುಗಡೆಗಾಗಿ ನಾವೆಲ್ಲ ಒಂದಾಗಬೇಕೆಂಬ ಸಂದೇಶ‌ ನೀಡಿದ್ದಾರೆ.@*ಭಾರತಾಂಭೆಯ ಹೀನ ಸ್ಥಿತಿಯನ್ನು ಕಣ್ಣು ತೆರೆಯುತ ನೋಡಿರಿ**ಪಾರತಂತ್ರ್ಯದಿ ಸಿಲುಕಿ ಬಳಲುವ ತಾಯಿಯನು ನೀವು ಬಿಡಿಸಿರಿ*ಎಂದು ಅನಾಮಿಕ ಕವಿಯೊಬ್ಬರ ಕವಿತೆಯ ಸಾಲುಗಳು ಇವು.ಇಂತಹ ನೂರಾರು ಅನಾಮಿಕ ಕವಿಗಳ ಕವಿತೆ ನಮಗೆ ಕಾಣಬರುತ್ತವೆ.ಕವಿ ಡಾ.ಸೂರ್ಯನಾಥ ಕಾಮತ ಅವರು ಸುಮಾರು ನೂರಾರು ಜನರ ನಾಲ್ಕು ನೂರಕ್ಕಿಂತ ಹೆಚ್ಚು ಕವಿತೆಗಳನ್ನು ಕವಿ ಜೆ ಎಸ್ ಎಸ್ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಇದ್ದಾಗ ಅವರ ಸಲಹೆ ಮೇರೆಗೆ ಸಂಪಾದಿಸಿಕೊಟ್ಟದ್ದನ್ನು ಬಿಡುಗಡೆಯ ಹಾಡುಗಳು ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ.ಆ ಸಂದರ್ಭದಲ್ಲಿ ದೇಶಿಯ ದುಮದುಮೆ ಬರೆದ ದಿ.ಶ್ರೀಧರ  ಖಾನೋಲ್ಕರ್ ಅವರ ಕಾವ್ಯನಾಮ ಸೀತಾತನಯ ಎಂಬವರದು ಪ್ರಕಟಿಸಿದ್ದ ಕಾರಣಕ್ಕೆ ದಿ.ರಂ.ರಾ.ದಿವಾಕರ ಅವರಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗಿತ್ತು. ಅವರ ತಾಯಿಯ ಹೆಸರು ಸೀತಾ ಇರುವ ಕಾರಣಕ್ಕೆ .ಹೀಗಾಗಿ ಅನೇಕ ಕವಿಗಳು ತಮ್ಮ ಹೆಸರು ಮರೆ ಮಾಚಿಕೊಂಡು ಭೂಗತವಾಗಿದ್ದುಕೊಂಡೆ ಜನತೆಯಲ್ಲಿ ಸ್ವಾತಂತ್ರ್ಯ ದ ಕಿಚ್ಚು ಹಚ್ಚಿದ್ದು ಕಾಣಬಹುದಾಗಿದೆ. *ವೀರರನ್ನು ನೆನೆದು ನೆನೆದು ವೀರರಾಗಿ ಉಳಿಯುವಾ* ಎಂಬ ಬೇಂದ್ರೆಯವರ ಕಾವ್ಯ ಎಂತಹವರನ್ನೂ ಕಾಡುವಂತಹದು. 1918ರ ಮುಂಚೆಯೇ ಬೇಂದ್ರೆಯವರು ತುತ್ತೂರಿ ಮತ್ತು ಆಹಾ ಸ್ವಾತಂತ್ರದೇವಿ.. ಎಂಬ ಕವಿತೆ ಬರೆದು ಜೈಲಿಗೂ ಹೋಗಿ ಬಂದಿದ್ದರು. ಹಕ್ಕಿಹಾರುತಿದೆ ನೋಡಿದಿರಾ, ಸ್ವಾತಂತ್ರ್ಯದ ರೆಕ್ಕೆ ಬಿಚ್ಚಿ ನೋಡಿದಿರಾ ಎಂದು ಕೇಳುವ ಬೆಂದ್ರೆಯವರು  ಕನ್ನಡವೂ, ಭಾರತವೂ ಜಗವೆಲ್ಲ ಒಂದೇ ಎಂಬ ಬಹು ವಿಶಾಲ ನೆಲೆಯಲ್ಲಿ ಈ ಸ್ವಾತಂತ್ರ್ಯದ ಹೋರಾಟದ ಕವಿತೆಗಳನ್ನು ನವೋದಯದ ಸಂಪ್ರದಾಯದ ನಂತರ ಇಡೀ ಕನ್ನಡ ಕಾವ್ಯ ಪ್ರಪಂಚಕ್ಕೆ ಹರಡಿದ್ದು ಅದು ಕಾವ್ಯದ ಅಂತ ಸತ್ವವೇ ಆಗಿದೆ. ಆರಂಭದಲ್ಲಿ ಮೈಸೂರು, ಕರಾವಳಿ ಪ್ರದೇಶದಲ್ಲಿಯ ಈ ನವೋದಯ ಕಾವ್ಯದ ಹರಿವು ನಂತರ ಉತ್ತರ ಕರ್ನಾಟಕ ಮುಂಬೈ ಕರ್ನಾಟಕದ ಕಡೆಗೆ ಸ್ವಲ್ಪ ವ್ಯಾಪಿಸಿತ್ತು.ಆದರೆ ದೇಶಿ ಕಾವ್ಯ ಪರಂಪರೆಯಲ್ಲಿ ಮುಳುಗಿದ್ದ ಹೈದರಾಬಾದ್ ಕರ್ನಾಟಕಕ್ಕೆ ನವೋದಯ ಸಾಹಿತ್ಯವಾಗಲಿ,ನವ್ಯ ಸಾಹಿತ್ಯವಾಗಲಿ ಗಾಢವಾಗಿ ಪರಿಚಯವೇ ಆಗಲಿಲ್ಲ.ಆ ಕಾರಣದಿಂದ ಈ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಆ ಭಾಗದ ಕವಿಗಳಿಗೆ ಈ ಕಾವ್ಯ ಪ್ರೇರಣೆ

“ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡ ಕಾವ್ಯದ ಕೊಡುಗೆ” ಕೇಂದ್ರ ಸಾಹಿತ್ಯ ಅಕಾಡೆಮಿ,ದೆಹಲಿ ಅವರ ವಿಚಾರ ಸಂಕಿರಣದಲ್ಲಿ ಡಾ.ಸಿದ್ದರಾಮ ಹೊನ್ಕಲ್‌ ಮಂಡಿಸಿದ ಪ್ರಬಂಧ.( ಪ್ರತಿಯೊಬ್ಬ ಕನ್ನಡ ಕವಿಯೂ ಓದಲೇಬೇಕಾದ ಬರಹ.) Read Post »

ಅನುವಾದ, ಇತರೆ, ಜೀವನ

“ಸಾವನ್ನು ಸ್ವೀಕರಿಸುವ ವಿವಿಧ ಹಂತಗಳು.” ವೀಣಾ ಹೇಮಂತ್ ಗೌಡ ಪಾಟೀಲ್ 

ವಿಶೇಷ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್  “ಸಾವನ್ನು ಸ್ವೀಕರಿಸುವ ವಿವಿಧ ಹಂತಗಳು.” ಘಟನೆ ಒಂದು…ಅಪಘಾತದಲ್ಲಿ ತನ್ನ ಒಬ್ಬನೇ ಮಗ ನನ್ನು ಕಳೆದುಕೊಂಡ ಆ ಹೆಣ್ಣುಮಗಳು ಮಗನ ಸಾವಿನ ಸುದ್ದಿಯನ್ನು ನಂಬಲು ಸಾಧ್ಯವಾಗದೆ ಮಾನಸಿಕ ಆಘಾತಕ್ಕೆ ಒಳಗಾದಳು.ಘಟನೆ ಎರಡು.. ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿದ್ದ ಆ ವ್ಯಕ್ತಿ ಬಹಳ ದಿನಗಳ ಕಾಲ ಹಾಸಿಗೆ ಹಿಡಿದು ಮಲಗಿದ್ದ… ಆತನ ಸಾವಿನ ಸಮಯದಲ್ಲಿ ಆತನ ಹೆಂಡತಿ ಮಕ್ಕಳು ಅತ್ಯಂತ ಸಂಯಮದಿಂದ ವರ್ತಿಸಿದರು.ಕಾರಣ ಇದು ಹೀಗೆ ಆಗುತ್ತದೆ ಎಂಬ ವಾಸ್ತವದ ಅರಿವು ಅವರಿಗೆ ಇತ್ತು.ಘಟನೆ ಮೂರು… ದೂರದ ಶಹರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಮ್ಮ ಮಗ/ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ಅದನ್ನು ನಂಬಲಾಗದೆ ಒದ್ದಾಡುವ, ಅತ್ತು ಕರೆಯುವ ಜನರನ್ನು ನಾವು ನೋಡುತ್ತೇವೆ.ಘಟನೆ ನಾಲ್ಕು…ತುಂಬು ಬದುಕನ್ನು ನಡೆಸಿದ ವ್ಯಕ್ತಿಯ ಸಾವಿನ ಸಮಯದಲ್ಲಿ ಅದನ್ನು ಒಂದು ಸರಳ ಘಟನೆ ಎಂಬಂತೆ ಅವರನ್ನು ಗೌರವ ಪೂರ್ವಕವಾಗಿ ಬೀಳ್ಕೊಡುವ, ಅವರ ಬದುಕನ್ನು ಸಂಭ್ರಮಿಸುವ ಮೂಲಕ ಅವರ ಸಾವನ್ನು ಸಹಜವಾಗಿ ಸ್ವೀಕರಿಸುವುದನ್ನು ಕೂಡ ನಾವು ಕಾಣುತ್ತೇವೆ.ಮತ್ತೊಂದು ಘಟನೆಯಲ್ಲಿ ಖ್ಯಾತ ಚಲನಚಿತ್ರ ನಟರೊಬ್ಬರು ತೀರಿಕೊಂಡಾಗ ಅವರ ಪತ್ನಿ ಅತ್ಯಂತ ಸ್ಥಿತಪ್ರಜ್ಞತೆಯಿಂದ ಪತಿಯ ಪಾರ್ಥಿವ ಶರೀರದ ಹಣೆಗೆ ಮುತ್ತಿಕ್ಕಿದರು. ಮನೆಗೆ ಬಂದ ಸ್ನೇಹಿತ ವಲಯದವರೊಂದಿಗೆ ಸಹಜವಾಗಿ ಇದ್ದ ಅವರ ನಡೆ-ನುಡಿಯನ್ನು ಮಾಧ್ಯಮಗಳಲ್ಲಿ ನೋಡಿದ ಜನರು ಆಕೆಯ ಕುರಿತು ಇಲ್ಲ ಸಲ್ಲದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು… ಅಂತೆಯೇ ಆಕೆಯ ಹಿನ್ನೆಲೆಯನ್ನು ಕೆಟ್ಟದಾಗಿ ಬಿಂಬಿಸಿದರು…. ಕೆಲವೊಮ್ಮೆ ನಿರ್ಲಿಪ್ತತೆಗೆ ತೆರಬೇಕಾದ ಬೆಲೆ ಇಷ್ಟು ದುಬಾರಿಯಾಗಿರುತ್ತದೆಯೇ? ಎಂದು ಕೂಡ ಅನ್ನಿಸಬಹುದು ಅಲ್ವೇ ?ಹೌದಲ್ವೇ ಸ್ನೇಹಿತರೇ, ಮೇಲಿನ ಎಲ್ಲ ಘಟನೆಗಳಲ್ಲಿ ಸಾವು ಎಂಬ ಸಹಜ ಪ್ರಕ್ರಿಯೆಯು ಅದೆಷ್ಟು ವಿಭಿನ್ನವಾಗಿ ಎದುರಿಸಲ್ಪಡುತ್ತದೆ ಎಂಬುದನ್ನು ನೋಡಿದಾಗ ವಿಚಿತ್ರ ಎನಿಸಿದರೂ ಶಾಶ್ವತ ಸತ್ಯದ ಅರಿವು ನಮಗೆ ಮೂಡುತ್ತದೆ. ಸಾವು ಎಂಬುದು ಒಬ್ಬ ವ್ಯಕ್ತಿಯನ್ನು ಭೌತಿಕವಾಗಿ ನಮ್ಮಿಂದ ಶಾಶ್ವತವಾಗಿ ದೂರ ಮಾಡುವ ಪ್ರಕ್ರಿಯೆ… ಉಳಿಯುವುದು ಕೇವಲ ಅವರೊಂದಿಗಿನ ಒಡನಾಟ, ಸ್ನೇಹ, ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯಗಳ ನೆನಪುಗಳು ಮಾತ್ರ.ಯಾವುದೇ ವ್ಯಕ್ತಿಯಾದರೂ ತನ್ನ ಬದುಕಿನಲ್ಲಿ ಶಾಶ್ವತವಾಗಿ ಒಬ್ಬರನ್ನು ಕಳೆದುಕೊಂಡಾಗ ನೋವು, ಸಂಕಟ ಹಾಗೂ ಅಭದ್ರತೆಯಿಂದ ಬಳಲುತ್ತಾನೆಕಳೆದುಕೊಂಡ ತಕ್ಷಣ ಉಂಟಾಗುವ ದಿಗ್ಭ್ರಮೆ ಕೆಲವರಲ್ಲಿ ಇನ್ನಿಲ್ಲದ ದುಃಖವನ್ನು ಸೃಷ್ಟಿಸಿದರೆ, ಮತ್ತೆ ಕೆಲವರು ಹಲವಾರು ದಿನಗಳ ಕಾಲ ಮೌನಕ್ಕೆ ಜಾರುತ್ತಾರೆ. ಇನ್ನು ಕೆಲವರು ಒಬ್ಬಂಟಿಯಾಗಿ ಕುಳಿತು ಅವರನ್ನು ನೆನೆಯುತ್ತಾರೆ. ಮತ್ತೆ ಕೆಲವರು ತಮ್ಮ ಮಾತುಗಳಲ್ಲಿ ಅವರ ಕುರಿತು ನೆನೆಯುತ್ತಾ ಇತರರ ಮುಂದೆ ಹೇಳುತ್ತಾ ಹಗುರವಾಗುತ್ತಾರೆ.ಆದರೆ ನಿಜವಾಗಿಯೂ ಒಬ್ಬರನ್ನು ಕಳೆದುಕೊಂಡಾಗ ಆಗುವ ದುಃಖ, ನೋವು ಐದು ಹಂತಗಳಲ್ಲಿ ನಮ್ಮನ್ನು ಕಾಡುತ್ತದೆ ಎಂದರೆ ನೀವು ನಂಬಲೇಬೇಕು.ಮೊದಲ ಹಂತ ಬದುಕು ಅತ್ಯಂತ ಸರಳವಾಗಿ ನಡೆಯುತ್ತಿರುವ ಅಥವಾ ಹಾಗೆ ಭಾವಿಸಿರುವಾಗ ಕುಟುಂಬದ ಓರ್ವ ಸದಸ್ಯ ಒಮ್ಮಿಂದೊಮ್ಮೆಲೆ ತೀರಿ ಹೋದಾಗ ವ್ಯಕ್ತಿ ಆ ಸತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾನೆ. ಇದು ಮೊದಲನೆಯ ಹಂತ. ಈ ಸಮಯದಲ್ಲಿ ಆತ ನಡೆದ ಘಟನೆಯನ್ನು ನಂಬಲು ಸಿದ್ದನಾಗುವುದಿಲ್ಲ…. ಸಂಪೂರ್ಣವಾಗಿ ನಿಶ್ಚಲನಾಗುವ ವ್ಯಕ್ತಿ ಕೆಲ ಗಳಿಗೆಗಳ ಮಟ್ಟಿಗಾದರೂ ತನ್ನ ಮಾನಸಿಕ ಅರಿವನ್ನು ಕಳೆದುಕೊಳ್ಳುತ್ತಾನೆ..ವೈಜ್ಞಾನಿಕವಾಗಿ ಆ ರೀತಿ ಆಗಲು ಕಾರಣ ಅವರು ಇನುಳ ನಮ್ಮ ಜೊತೆಗೆ ಇರುವುದಿಲ್ಲ, ಅವರ ಪಾತ್ರ ನಮ್ಮ ಬದುಕಿನಲ್ಲಿ ಮುಗಿಯಿತು ಎಂಬ ಬಹುದೊಡ್ಡ ಭಾರದ ಒತ್ತಡವನ್ನು ತಡೆದುಕೊಳ್ಳಲು ಅವರ ಮೆದುಳು ಸಿದ್ಧವಿರುವುದಿಲ್ಲ, ಕಾರಣ ಅದು ವ್ಯಕ್ತಿಯ ಮಾನಸಿಕ ಭಾರವನ್ನು ಕಡಿಮೆ ಮಾಡಲು ನಿರಾಕರಣೆ ಮಾಡುವ ಮೂಲಕ ಮೆದುಳನ್ನು ರಕ್ಷಿಸುವ ರಕ್ಷಣಾತ್ಮಕ ತಂತ್ರಕ್ಕೆ ಕೈ ಹಾಕುತ್ತದೆ.ಎಷ್ಟೋ ಬಾರಿ ಉಳಿದೆಲ್ಲ ವಿಷಯಗಳಲ್ಲಿ ಸರಿಯಾಗಿ ವರ್ತಿಸುವ ಜನರು ತಮಗೆ ಅತ್ಯಂತ ಆಪ್ತರಾದವರ ಸಾವಿನ ಕುರಿತು ಮಾತನಾಡುವಾಗ ಆ ವಿಷಯ ತಮಗೆ ಸಂಬಂಧಿಸಿಯೇ ಇಲ್ಲವೇನೋ ಎಂಬಂತೆ ಬೇರೆಡೆ ನಮ್ಮ ಚಿತ್ತವನ್ನು ಸೆಳೆಯುತ್ತಾರೆ.ಪ್ರೀತಿ ಪಾತ್ರರನ್ನು ಕಳೆದುಕೊಂಡಾಗ ಅದು ಕೆಲವೊಮ್ಮೆ ಸಿಟ್ಟು, ಕೋಪದ ರೂಪದಲ್ಲಿ ಅನಾವರಣವಾಗುತ್ತದೆ. ಹೀಗೆ ಕಳೆದುಕೊಳ್ಳಲು ಕಾರಣವಾದ ದೇವರನ್ನು ಹಳಿಯುವ ಅವರು ಆತ ಇದ್ದಿದ್ದರೆ ಹೀಗಾಗಲು ಬಿಡುತ್ತಿರಲಿಲ್ಲವಾದ್ದರಿಂದ ದೇವರೇ ಇಲ್ಲ ಎಂದೂ,ಇದ್ದರೂ ಆತನಿಗೆ ಕಣ್ಣಿಲ್ಲ ಎಂದು ದೈವವನ್ನು ಹಳಿಯುತ್ತಾರೆ. ಮತ್ತೆ ಕೆಲವರು ತೀರಿ ಹೋದವರು ಅಪಘಾತ ಮತ್ತು ಅವಘಡ ಗಳಿಗೆ ಉಂಟಾಗಿ ತೀರಿಹೋಗಿದ್ದರೆ ಅದಕ್ಕೆ ಸಂಬಂಧಪಟ್ಟವರನ್ನು ಸಾಪಳಿಸುತ್ತಾರೆ. ಇಲ್ಲವೇ ತೀರಿ ಹೋದವರು ನೋವು ಸಂಕಟಗಳಿಗೆ ಈಡಾಗಿದ್ದರೆ ಅದಕ್ಕೆ ಕಾರಣರಾದವರನ್ನು ದೂಷಿಸುತ್ತಾರೆ. ಇಲ್ಲವೇ ತಮ್ಮ ಹಣೆಬರಹವನ್ನು ಅಳೆಯುತ್ತಾರೆ ಮತ್ತು ಕೆಲವರು ಸತ್ತುಹೋದವರನ್ನೇ ಉದ್ದೇಶಿಸಿ ನೀವು ಹೀಗೆ ಕೈ ಬಿಟ್ಟು ಹೋದರೆ ನಮ್ಮ ಗತಿ ಏನು ಎಂದು ಅತ್ತು ಕರೆದು ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ. ಅವರ ಕೋಪಕ್ಕೆ ಸತ್ತ ವ್ಯಕ್ತಿ ಆತನಿಗೆ ಸಂಬಂಧಿಸಿದವರು, ಘಟನೆ, ಸನ್ನಿವೇಶಗಳು ತುತ್ತಾಗುತ್ತವೆ.ಮೂರನೆಯ ಹಂತದಲ್ಲಿ ವ್ಯಕ್ತಿಯು ಚೌಕಾಶಿ ಮಾಡಲು ಆರಂಭಿಸುತ್ತಾರೆ… ಇಲ್ಲಿ ಯಾವುದೇ ವ್ಯಾಪಾರ ವ್ಯವಹಾರದ ಚೌಕಾಶಿ ಯನ್ನು ನಾವು ಯೋಚಿಸುವುದು ಬೇಡ…. ಅಯ್ಯೋ ಇನ್ನೂ ಒಳ್ಳೆಯ ಆಸ್ಪತ್ರೆಗೆ ಕರೆದೊಯ್ದಿದ್ದರೆ ಬದುಕುತ್ತಿದ್ದರೋ ಏನೋ ಎಂಬಲ್ಲಿಂದ ಹಿಡಿದು ಹೇಗಾದರೂ ಮಾಡಿ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಗಳು ಇದ್ದವು, ಆ ಸಾಧ್ಯತೆಗಳನ್ನು ನಾವು ತಳ್ಳಿ ಹಾಕಿದೆವು ಎಂದು ತಮ್ಮನ್ನು ತಾವು ಹಳಿದುಕೊಳ್ಳುತ್ತಾರೆ. ಆತ್ಮಹತ್ಯೆಯಂತಹ ಸಾವುಗಳಲ್ಲಿ ಅವರು ಹಿಂದಿನ ದಿನ ತಮಗೆ ಕರೆ ಮಾಡಿದಾಗ ತಾವು ಸ್ವೀಕರಿಸದೆ ಇದ್ದ ಕಾರಣವನ್ನು ಮುಂದೊಡ್ಡಿ ತಮಗೆ ತಾವೇ ದೂಷಿಸಿಕೊಳ್ಳುತ್ತಾರೆ. ಒಂದೊಮ್ಮೆ ಹೀಗೆ ಮಾಡಿದ್ದರೆ !ಎಂಬ ಹಲವಾರು ರೇ ಗಳ ಭಾವ ಅವರನ್ನು ಕಾಡುತ್ತದೆ.ಮತ್ತೆ ಕೆಲವರು ನಾಲ್ಕನೆಯ ಹಂತವಾದ ಖಿನ್ನತೆಗೆ ಜಾರುತ್ತಾರೆ. ಖಿನ್ನತೆಯು ಅತ್ಯಂತ ಆಳವಾದ ನೋವಿನಿಂದ ಕೂಡಿದ್ದು ವಾಸ್ತವತೆಯ ಅರಿವು ಮೂಡಿಸುತ್ತದೆ ಎಂಬುದು ನಿಜವಾದರೂ ತಮ್ಮ ನೋವನ್ನು ಇತರರಿಗೆ ಹೇಳಿಕೊಳ್ಳಲು ಸಾಧ್ಯವಾಗದೆ ಮಾನಸಿಕವಾಗಿ ತೊಳಲಾಡುತ್ತಾರೆ. ನಂತರ ಸಮಯ ಸರಿದಂತೆ ನಿಧಾನವಾಗಿ ಅವರಿಲ್ಲದ ಬದುಕನ್ನು ಎದುರಿಸುವ ನಿಟ್ಟಿನಲ್ಲಿ ಹೊಸ ಬದುಕಿಗೆ ಒಗ್ಗಿಕೊಳ್ಳುತ್ತಾರೆ.ಕೊನೆಯ ಹಂತದಲ್ಲಿ ಪರಿಸ್ಥಿತಿಯನ್ನು ಅದು ಇರುವಂತೆಯೇ ಒಪ್ಪಿಕೊಳ್ಳುವುದು…. ಸಾಮಾನ್ಯವಾಗಿ ವಾಸ್ತವ ವಾದಿಗಳು, ಬದುಕಿನ ಆಳವನ್ನು ಅರಿತವರು, ಬುದ್ಧಿಜೀವಿಗಳು ತಮ್ಮವರ ಸಾವನ್ನು ಅತ್ಯಂತ ಸಹಜವಾಗಿ ಒಪ್ಪಿಕೊಳ್ಳುತ್ತಾರೆ. ನಿರ್ಲಿಪ್ತತೆಯನ್ನು ಹೊಂದಿರುತ್ತಾರೆ. ಮತ್ತೆ ಕೆಲಬಾರಿ ಅವರ ಸ್ಥಿತಪ್ರಜ್ಞತೆಯನ್ನು ಕಂಡು ಲೌಕಿಕ ಜಗತ್ತಿನ ಜನರು ಅಯ್ಯೋ ಅವರಿಗೇನು! ಹಡೆದ ತಂದೆ ತಾಯಿ ಸತ್ತರೂ ಸಂಗಾತಿಯನ್ನು ಕಳೆದುಕೊಂಡರೂ ಹನಿ ಕಣ್ಣೀರು ಹಾಕಲಿಲ್ಲ ಎಂದು ದೂಷಿಸುತ್ತಾರೆ.ಮತ್ತೆ ಕೆಲ ಬಾರಿ ಹೀಗೆ ತೀರಿಕೊಂಡವರು ದೀರ್ಘಾಯುಷ್ಯವನ್ನು ಹೊಂದಿ ಬದುಕಿನ ಎಲ್ಲಾ ಮೊದಲುಗಳನ್ನು ಕಂಡಿದ್ದರೆ ಇನ್ನೂ ಕೆಲವರು ದೀರ್ಘಕಾಲದ ಅನಾರೋಗ್ಯ, ತೊಂದರೆಗಳಿಂದ ಹಾಸಿಗೆ ಹಿಡಿದು ಮಲಗಿರುತ್ತಾರೆ ಅಲ್ಲವೇ? ಅಲ್ಲಿಯೂ ಕೂಡ ಈ ರೀತಿಯ ನಿರ್ಲಿಪ್ತತೆ ಕಾಣುತ್ತದೆ. ಏಕೆಂದರೆ ಅವರಿಗೆ ಮುಂದೆ ಏನಾಗಬಹುದು ಎಂಬ ಪರಿಕಲ್ಪನೆಯನ್ನು ಸತ್ತ ವ್ಯಕ್ತಿಯ ಜೀವಿತದ ಕೊನೆಯ ದಿನಗಳು ತೋರಿಸಿರುತ್ತವೆ.ಮಾನಸಿಕವಾಗಿ ಅತ್ಯಂತ ಪಕ್ವವಾಗಿರುವವರು ಲೌಕಿಕ ಜಂಜಡಗಳಿಂದ ದೂರವಾಗಿರುವವರು ಕೂಡ ಸಾವುಗಳನ್ನು ಅತ್ಯಂತ ಸಹಜವಾಗಿ ಸ್ವೀಕರಿಸಿ ಬದುಕಿನಲ್ಲಿ ಮುಂದೆ ಸಾಗುತ್ತಾರೆ.ನಾವೆಲ್ಲರೂ ನಮ್ಮ ಬದುಕಿನ ಹಂತದಲ್ಲಿ ಒಂದಲ್ಲ ಒಂದು ಆತ್ಮೀಯರ, ಪರಿಚಿತರ ಸಾವುಗಳನ್ನು ಎದುರಿಸಿಯೇ ಇರುತ್ತೇವೆ. ಸತ್ತವರ ಮನೆಯಿಂದ ಸ್ಮಶಾನದವರೆಗೆ ಭೌತಿಕ ಶರೀರದ ಅಂತಿಮ ಯಾತ್ರೆಗೆ ಹೋಗುವ ನಮ್ಮ ಬಾಯಲ್ಲಿ ಬರುವುದು ವೇದಾಂತದ ಮಾತುಗಳು. ಅಯ್ಯೋ ಬದುಕೇ ಇಷ್ಟು ? ಅವರವರು ಪಡೆದುಕೊಂಡು ಬಂದದ್ದು, ಹುಟ್ಟಿನ ಜೊತೆಗೆ ಸಾವನ್ನು ಕಟ್ಟಿಕೊಂಡೇ ಬಂದಿರುತ್ತೇವೆ, ಇಂದು ಅವರು ನಾಳೆ ಇನ್ನಾರೋ? ನಮ್ಮದು ಒಂದು ದಿನ ಆಪಾಳಿ ಬಂದೇ ಬರುತ್ತದೆ ಎಂದೆಲ್ಲ ಮಾತನಾಡುವ ಜನರು ಅಂತಿಮ ನಮನ ಸಲ್ಲಿಸಿ ಮನೆಗೆ ಬಂದು ತಲೆಯ ಮೇಲೆ ನೀರು ಹಾಕಿಕೊಂಡು ಹೊರಗೆ ಬರುವಷ್ಟರಲ್ಲಿ ಹೊಟ್ಟೆ ತನ್ನ ಇರವನ್ನು ತೋರಿಸುತ್ತದೆ.. ಇದೇ ಬದುಕು ಅಲ್ವೇ ಸ್ನೇಹಿತರೆ ?ಆದರೆ ನಮಗೆ ಸಾಧ್ಯವಾಗದ ಯಾವುದೋ ಒಂದು ನಿರ್ಲಿಪ್ತತೆಯನ್ನು, ಸ್ಥಿತಪ್ರಜ್ಞತೆಯನ್ನು ಇತರರು ಸಾಧಿಸಿದ್ದು ಸಾವಿನಲ್ಲೂ ಹಾಗೆ ಮುಂದುವರೆದಿದ್ದರೆ ಅವರನ್ನು ದೂಷಿಸಬೇಡಿ. ಅದು ಅವರು ಸಾವನ್ನು ಕಂಡುಕೊಂಡ ರೀತಿ.ಸಾವನ್ನು ಎದುರಿಸುವ ಈ ಹಂತಗಳನ್ನು ನೀವು ಅರಿತುಕೊಂಡಿದ್ದರೆ ಮತ್ತೊಬ್ಬರ ಭಾವನೆಗಳನ್ನು ಗುರುತಿಸಿ, ಗೌರವಿಸಿ ಸುಮ್ಮನಿರಲು ಸಹಕಾರಿಯಾಗುತ್ತದೆ.ಏನಂತೀರಾ ಸ್ನೇಹಿತರೆ ? ವೀಣಾ ಹೇಮಂತ್ ಗೌಡ ಪಾಟೀಲ್

“ಸಾವನ್ನು ಸ್ವೀಕರಿಸುವ ವಿವಿಧ ಹಂತಗಳು.” ವೀಣಾ ಹೇಮಂತ್ ಗೌಡ ಪಾಟೀಲ್  Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಸ್ವಾತಂತ್ರ್ಯ ಸಿಂಹ ನರಗುಂದ ಶ್ರೀ ಬಾಬಾಸಾಹೇಬ ಸಂಸ್ಥಾನ ಸಿಂಹ ಕ್ರಾಂತಿಕಾರಿ ಹೋರಾಟಗಾರ ಶ್ರೀ  ಬಾಬಾಸಾಹೇಬ ಭಾವೆ ನರಗುಂದ ಸಂಸ್ಥಾನದ ಪ್ರಭು (1842-58) ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ ಒಬ್ಬ ಅಪ್ರತಿಮ  ವೀರ. ಬಾಬಾ ಸಾಹೇಬ ಇವನ ಜನಪ್ರಿಯ ನಾಮ. ಹುಟ್ಟು ಹೆಸರು ಭಾಸ್ಕರರಾವ್ ಭಾವೆ. ನರಗುಂದ ಬಾಬಾಸಾಹೇಬ (ಭಾಸ್ಕರರಾವ್ ಭಾವೆ) ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ ಅಪ್ರತಿಮ ವೀರ ಮತ್ತು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ನಾಯಕ. ಇವರು ಬ್ರಿಟಿಷರ “ದತ್ತು ಮಕ್ಕಳಿಗೆ ಹಕ್ಕಿಲ್ಲ” ನೀತಿಯನ್ನು ತೀವ್ರವಾಗಿ ವಿರೋಧಿಸಿ, ದೇಶಪ್ರೇಮದ ಕಹಳೆ ಮೊಳಗಿಸಿದರು ಅಧಿಕಾರಕ್ಕೆ ಇವರ ತಂದೆ ದಾದಾಜಿ ತಾಯಿ ಯಮುನಾಬಾಯಿ. ತಂದೆ ದಾದಾಜಿಯ ಆಡಳಿತ ಕಾಲದಲ್ಲಿ ಸಂಸ್ಥಾನ ಸಾಲದಲ್ಲಿ ಮುಳುಗಿಹೋಗಿತ್ತು. ಬಾಬಾ ಸಾಹೇಬ ಪಟ್ಟವೇರಿದ ತರುಣದಲ್ಲೇ ಆಡಳಿತವನ್ನು ಪುನರವ್ಯವಸ್ಥೆಗೊಳಿಸಿ ದಕ್ಷತೆಯಿಂದ ಆಳತೊಡಗಿದ.  ಸಂಸ್ಥಾನದ ಸಾಲದ ಹೊರೆ ಕಡಿಮೆಮಾಡಿ ಪ್ರಜೆಗಳ ಪ್ರೀತ್ಯಾದರ ಗಳಿಸಿದ. ದತ್ತು ಸ್ವೀಕಾರಕ್ಕೆ ಅನುಮತಿ ನೀಡದ ಬ್ರಿಟಿಷರು ದುರದೃಷ್ಟವಶಾತ್ ಬಾಬಾಸಾಹೇಬನಿಗಿದ್ದ ಒಬ್ಬನೇ ಮಗ ತೀರಿಕೊಂಡು ಸಂಸ್ಥಾನ ಉತ್ತರಾಧಿಕಾರಿಯಿಲ್ಲದೆ ಹೋಗುವಂಥ ಪರಿಸ್ಥಿತಿಯೊದಗಿತು. ಆಗ ಬಾಬಾ ಸಾಹೇಬ ಕಂಪನಿ ಸರ್ಕಾರಕ್ಕೆ ಪತ್ರ ಬರೆದು (1846) ದತ್ತು ಸ್ವೀಕಾರಕ್ಕೆ ಅನುಮತಿ ಕೋರಿದ. ಈ ಪ್ರಶ್ನೆ ಇನಾಮ್ ಕಮಿಷನರ್ ಮ್ಯಾನ್ಸನ್ ಎಂಬುವನ ಪರಿಶೀಲನೆಗೆ ಬಂತು. ಮ್ಯಾನ್ಸನ್ ಸಂಸ್ಥಾನದ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿಯಲ್ಲಿದೆ ಎಂಬ ನೆಪ ಒಡ್ಡಿ ದತ್ತಕ ಸ್ವೀಕಾರಕ್ಕೆ ಅನುಮತಿ ನಿರಾಕರಿಸಿದ. ಇದರಿಂದ ರೋಷಗೊಂಡ ಬಾಬಾಸಾಹೇಬ ಮ್ಯಾನ್‍ಸನ್ನನ ಮೇಲೂ ಬ್ರಿಟಿಷರ ಮೇಲೂ ಸೇಡು ತೀರಿಸಿಕೊಳ್ಳಬಯಸಿದ. ಬಂಡಾಯ ಆ ಕಾಲದಲ್ಲಿ ಲಾರ್ಡ್ ಡಾಲ್‍ಹೌಸಿಯ ನಿರಾಕರಣಸೂತ್ರ ಮತ್ತು ಅದರ ಹಿಂದೆಯೇ ಬಂದ ಇನಾಮ್ ಕಮಿಷನ್ನಿನ ಕಾರ್ಯ ಚಟುವಟಿಕೆಗಳೇ ಮೂಲ ಕಾರಣವಾಗಿ ಉತ್ತರ ಭಾರತಾದ್ಯಂತ ಮಹಾಕ್ರಾಂತಿ ಹತ್ತಿ ಉರಿಯುತ್ತಿತ್ತು (1857).  ಯಾವುದೇ ಹಕ್ಕು ಪತ್ರಗಳಿಲ್ಲದೆ ಹೋದರೆ ಅಥವಾ ಸಂಬಂಧಪಟ್ಟ ದಾಖಲೆಗಳು ಸ್ಪಷ್ಟವಾಗಿಲ್ಲವೆಂದು ಕಂಡುಬಂದರೆ ಅಂಥವರ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಇನಾಮ್ ಕಮಿಷನ್ನಿಗೆ ಕೊಡಲಾಗಿತ್ತು. ದಕ್ಷಿಣ ಮರಾಠಾ ದೇಶವೊಂದರಲ್ಲೇ ಇನಾಮ್ ಕಮಿಷನ್ ಸುಮಾರು 35,000 ಜಮೀನ್ದಾರರ ಒಡೆತನ ಹಕ್ಕುಗಳನ್ನು ಪರಿಶೀಲಿಸಿ, 21,000 ಜಮೀನ್ದಾರರ ಸ್ವತ್ತನ್ನು ಸರ್ಕಾರಕ್ಕೆ ಸೇರಿಸಿಕೊಂಡಿತ್ತು. ಇದರಿಂದಾಗಿ ನಿಪ್ಪಾಣಿ, ಜಂಬೋಟಿ ಮುಂತಾದ ಕಡೆಯ ಜಮೀನ್ದಾರರು ಒಟ್ಟುಗೂಡಿ ಬಂಡಾಯವೆದ್ದರೂ ಬ್ರಿಟಿಷರ ವಿರುದ್ಧ ಎದ್ದು ನಿಂತರೆ ಇವರೆಲ್ಲರ ಸಹಾನುಭೂತಿ ಸಹಾಯ ತನಗೆ ದೊರಕುವುದೆಂದು ಬಾಬಾಸಾಹೇಬ ಭಾವಿಸಿದ. ಸಿಪಾಯಿ ದಂಗೆಯಲ್ಲಿ ಮುಖ್ಯಪಾತ್ರ ವಹಿಸಿದ್ದ ಪೇಶ್ವೆ ನಾನಾಸಾಹೇಬನೊಡನೆ ಇವನು ಪತ್ರವ್ಯವಹಾರ ನಡೆಸಿದ. ಅನಂತರ ಡಂಬಳದ ಮತ್ತು ಹಮ್ಮಿಗೆಯ ದೇಸಾಯಿಗಳೊಡನೆ ಮತ್ತು ಮುಂಡರಗಿ ಭೀಮರಾವ್ ಇವರೊಂದಿಗೆ ರಹಸ್ಯ-ಸಮಾಲೋಚನೆ ನಡೆಸಿದ. ಕೊನೆಗೆ ಉತ್ತರ ಕರ್ನಾಟಕಾದ್ಯಂತ ಒಮ್ಮೆಲೆ ಬಂಡಾಯವೆದ್ದು ನರಗುಂದದವರು ಧಾರವಾಡ ಮತ್ತು ಅದರ ಪಶ್ಚಿಮ ಭಾಗವನ್ನೂ ಮುಂಡರಗಿ ಭೀಮರಾಯ ಕೊಪ್ಪಳವನ್ನೂ ವಶಪಡಿಸಿಕೊಳ್ಳಬೇಕೆಂಬ ನಿರ್ಣಯಕ್ಕೆ ಬರಲಾಯಿತು. ಈ ಮಧ್ಯೆ ಬ್ರಿಟಿಷರು ಶಸ್ತ್ರಾಸ್ತ್ರ ಕಾಯಿದೆಗೆ ಅನುಗುಣವಾಗಿ ಬಾಬಾಸಾಹೇಬ ತನ್ನ ಕೋಟೆಯಲ್ಲಿಟ್ಟಿದ್ದ ದೊಡ್ಡ ತೋಪುಗಳು ಮದ್ದುಗುಂಡು ಇತ್ಯಾದಿಗಳನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಆಜ್ಞೆ ಮಾಡಿದರು. ಆಗ ದಕ್ಷಿಣ ಮರಾಠಾ ದೇಶದ ರಾಜಕೀಯ ಪ್ರತಿನಿಧಿಯಾಗಿದ್ದವ ಮ್ಯಾನ್‍ಸನ್. ಅಂದಿನ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಈ ಶಸ್ತ್ರಾಸ್ತ್ರಗಳು ಆಂಗ್ಲರ ವಿರೋಧಿಗಳಿಗೆ ದಕ್ಕುವಂತಾಗಬಾರದೆಂಬುದೇ ಬ್ರಿಟಿಷ್ ಸರ್ಕಾರದ ಆಶಯವೆಂದು ಹೇಳಿ, ನಂಬಿಸಿ ಬಾಬಾ ಸಾಹೇಬನಿಂದ ಶಸ್ತ್ರಾಸ್ತ್ರ ಒಪ್ಪಿಸುವ ಆಶ್ವಾಸನೆ ಪಡೆದ. ಬಾಬಾಸಾಹೇಬ ಅತಿಯಾದ ಮಳೆ ಸುರಿಯುತ್ತಿದೆಯೆಂಬ ನೆಪವೊಡ್ಡಿ ಮೂರು ತೋಪುಗಳನ್ನು ದುರ್ಗದಲ್ಲೇ ಉಳಿಸಿಕೊಂಡು ಉಳಿದೆಲ್ಲ ಸಾಮಗ್ರಿಗಳನ್ನೂ ಧಾರವಾಡದತ್ತ ಕಳುಹಿಸಿದ. ಜೊತೆಗೆ ಮಧ್ಯದಾರಿಯಲ್ಲಿ ಇವನೇ ಕಳುಹಿಸಿದ ಜನ ಸಾಗಣೆ ಸಿಬ್ಬಂದಿಯವರ ಮೇಲೆ ಬಿದ್ದು ಎಲ್ಲ ಶಸ್ತ್ರಾಸ್ತ್ರಗಳನ್ನು ದೋಚಿಕೊಂಡು ಬಂದರು. ಕಾರಣಾಂತರದಿಂದ ಮುಂಡರಗಿ ಭೀಮರಾವ್ ರಹಸ್ಯವಾಗಿ ನಿಗದಿಮಾಡಿದ್ದ ದಿನಕ್ಕೆ ಮೊದಲೇ ಬಂಡಾಯವೆದ್ದ. ಡಂಬಳದ ಖಜಾನೆಯನ್ನು ಲೂಟಿಮಾಡಿ ಕೊಪ್ಪಳ ದುರ್ಗವನ್ನಾಕ್ರಮಿಸಲು ಹೊರಟ. ಈ ವಿಷಯ ತಿಳಿದಾಕ್ಷಣ ಬಾಬಾ ಸಾಹೇಬ ತನ್ನ ಬಳಿಯಿದ್ದ ಜಿದೊಡ್ಡ ತೋಪುಗಳನ್ನು ದುರ್ಗದ ಮೇಲೆ ಸರಿಯಾದ ಸ್ಥಳಗಳಲ್ಲಿರಿಸಿ ಯುದ್ಧ ಸನ್ನದ್ಧನಾದ. ಕೂಟ ರಚನೆ:  ಬಾಬಾಸಾಹೇಬರು ಬ್ರಿಟಿಷರನ್ನು ಮಟ್ಟಹಾಕಲು ಮುಂಡರಗಿ ಭೀಮರಾವ್, ಸುರ್ಪುರ ವೆಂಕಟಪ್ಪ ನಾಯಕ, ರಾಮದುರ್ಗ, ಕೊಪ್ಪಳ ಮತ್ತು ನಿಪ್ಪಾಣಿಯ ಪ್ರಮುಖ ನಾಯಕರನ್ನು ಒಗ್ಗೂಡಿಸಿ ಬೃಹತ್ ಒಕ್ಕೂಟ ರಚಿಸಿಕೊಂಡರು. ಆರಂಭಿಕ ಗೆಲುವು ನರಗುಂದದೊಡೆಯನ ಈ ಅಪಾಯಕಾರಿ ಕ್ರಮಗಳ ವಿಷಯ ಮ್ಯಾನ್ಸ್‍ನ್ ಕುರುಂದವಾಡದಲ್ಲಿ ತಿಳಿಯಿತು. ಏನಾದರೂ ಮಾಡಿ ಇವನು ದಂಗೆ ಏಳದಂತೆ, ಅದು ಸಾಧ್ಯವಾಗದಿದ್ದರೆ ರಾಮದುರ್ಗದ ಸಂಸ್ಥಾನದ ಒಡೆಯನಾಗಿದ್ದ ಇವನ ಮಲತಮ್ಮ ದಂಗೆಕೋರರಿಗೆ ಸಹಾಯ ನೀಡದಂತೆ ಮಾಡಬೇಕೆಂಬ ಉದ್ದೇಶದಿಂದ ಮ್ಯಾನ್ಸನ್ ಮೇ 25 ರಂದು ಒಳದಾರಿ ಹಿಡಿದು ನರಗುಂದದ ಕಡೆಗೆ ಸಾಗಿದ. ಜೊತೆಯಲ್ಲಿ ದಕ್ಷಿಣ ಮರಾಠಾ ಅಶ್ವದಳದ 12 ಮಂದಿಯನ್ನು ಮಾತ್ರ ತನ್ನ ರಕ್ಷಣೆಗಾಗಿ ಕರೆದೊಯ್ದ. ಆದರೆ, ಕರ್ನಲ್ ಮಾಲ್ಕಮ್ ರಾಮದುರ್ಗದಲ್ಲಿ ದಕ್ಷಿಣ ಮರಾಠಾ ಆಶ್ವದಳದೊಡನೆ ತನ್ನನ್ನು ಸಂಧಿಸಬೇಕೆಂದು ಆಜ್ಞಾಪಿಸಿದ.  ದುರದೃಷ್ಟವಶಾತ್, ಈ ಆಜ್ಞೆ ತಲುಪುವಷ್ಟರಲ್ಲಿ, ಕರ್ನಲ್ ಮಾಲ್ಕಮ್ 250 ಕುದುರೆ ಸವಾರರೊಡನೆ ಡಂಬಳದ ಖಜಾನೆ ಲೂಟಿಮಾಡಿದ ಬಂಡುಕೋರರೊಡನೆ ಹೋರಾಟಕ್ಕೆ ಸಿದ್ಧನಾಗಿ ನಿಂತಿದ್ದ. ಇದರಿಂದ ಮ್ಯಾನ್ಸನ್ ರಾಮದುರ್ಗವನ್ನು ತಲುಪಿದಾಗ ಅವನ ರಕ್ಷಣೆಗಾಗಿ ಮಾಲ್ಕಮ್ ಅಲ್ಲಿರಲಾಗಲಿಲ್ಲ. ರಾಮದುರ್ಗದ ಒಡೆಯನೇನೋ ಸ್ನೇಹಭಾವವನ್ನೇ ತೋರಿದ. ಬಾಬಾಸಾಹೇಬ ಬರೆದಿದ್ದ ಪತ್ರ ತೋರಿಸಿ ಅಲ್ಲಿಗೆ ಹೋಗಕೂಡದೆಂದು ಎಚ್ಚರಿಸಿದ.  ಈ ಪತ್ರದಲ್ಲಿ ನರಗುಂದದೊಡೆಯ ಅಪಮಾನಕ್ಕಿಂತ ಮರಣವೇ ಲೇಸೆಂದು ರಾಮದುರ್ಗ ಸಹ ದಂಗೆಯಲ್ಲಿ ಪಾಲ್ಗೊಳ್ಳಬೇಕೆಂದೂ ಒತ್ತಿ ಹೇಳಿದ್ದ. ಧಾರವಾಡಕ್ಕೆ ಹೋಗಿ ಅಲ್ಲಿ ಮಾಲ್ಕಮನ ಪಡೆಯನ್ನು ಕೂಡಿಕೊಳ್ಳುವ ಉದ್ದೇಶದಿಂದ, ಎಷ್ಟು ಹೇಳಿದರೂ ಲಕ್ಷಿಸದೆ ಮ್ಯಾನ್ಸನ್ ಮೇ 29ರ ಮಧ್ಯಾಹ್ನ ರಾಮದುರ್ಗದಿಂದ ಹೊರಟ. ಹನ್ನೆರಡು ಮಂದಿ ಆಶ್ವೀಕರಲ್ಲದೆ ಅವನ ಜೊತೆ ಕೆಲವೇ ಪರಿಚಾರಕರಿದ್ದರು. ರಾಮದುರ್ಗದಿಂದ ಧಾರವಾಡದತ್ತ ಹೋಗುವ ದಾರಿ ನರಗುಂದದ ಸಮೀಪದಲ್ಲೇ ಹಾಯುತ್ತಿತ್ತು. ಹೀಗಾಗಿ ಮ್ಯಾನ್ಸನ್ನನ ಸಾಹಸ ಅಪಾಯದಿಂದ ಕೂಡಿತ್ತು. ರಾತ್ರಿಯಾಗುತ್ತಲೇ ಸುರೆಬಾನ ಎಂಬ ಹಳ್ಳಿಯಲ್ಲಿ ಇವನು ತಂಗಿದ. ಇಷ್ಟರಲ್ಲಿ ಮ್ಯಾನ್ಸನ್ ರಾಮದುರ್ಗದಿಂದ ಕಳುಹಿಸಿದ್ದ ಪತ್ರ ಓದಿ ಕೋಪೋದ್ರಿಕ್ತನಾಗಿದ್ದ ಬಾಬಾಸಾಹೇಬ ಸುಮಾರು 700-800 ಕುದುರೆ ಮತ್ತು ಕಾಲ್ದಳದೊಂದಿಗೆ ರಾಮದುರ್ಗದತ್ತ ಬಂದು ಮ್ಯಾನ್ಸನ್ ಸುರೆಬಾನದಲ್ಲಿ ತಂಗಿರುವ ವಿಷಯ ತಿಳಿದು ಅತ್ತ ಧಾವಿಸಿದ.ಹತ್ತಿರದ ಮಲ್ಲಿಕಾರ್ಜುನ ಗುಡ್ಡದ ಬಳಿ ವಿಶ್ರಾಂತಿ ಪಡೆಯುತ್ತಿದ್ದ ಮ್ಯಾನ್ಸನ್ ಮೇಲೆ ಬಾಬಾಸಾಹೇಬರ ಸೈನಿಕರು ಅನಿರೀಕ್ಷಿತ ದಾಳಿ ಮಾಡಿದರು.  ಬಾಬಾಸಾಹೇಬನ ಸೈನಿಕರು ಮ್ಯಾನ್ಸನ್ನನ ತಲೆ ಕಡಿದು ಹಾಕಿದರು. ಕತ್ತಲಲ್ಲಿ ಕೇವಲ ಆರು ಮಂದಿ ಸೈನಿಕರು ತಪ್ಪಿಸಿಕೊಂಡರು. ದಕ್ಷಿಣ ಮಹಾರಾಷ್ಟ್ರರ ಅಶ್ವದಳದ ಅಧಿಕಾರಿಗಳಲ್ಲಿ ಶ್ರೇಷ್ಠ ಎನಿಸಿದ್ದ ಪೂರ್ಣಸಿಂಗನೂ ಕೊಲ್ಲಲ್ಪಟ್ಟ. ಮ್ಯಾನ್ಸನ್ನನ ರುಂಡವನ್ನು ನರಗುಂದ ಪಟ್ಟಣದ ಅಗಸಿ ದ್ವಾರವೊಂದಕ್ಕೆ ನೇತುಹಾಕಲಾಯಿತು. ಮ್ಯಾನ್ಸನನ ಬಳಿಯಿದ್ದ ಕಾಗದಪತ್ರಗಳ ಪರಿಶೀಲನೆ ನಡೆಸಿದಾಗ ತನ್ನ ಅನುಚರರೇ ಆದ ಕೃಷ್ಣಾಜಿಪಂತ ಜೋಶಿ ಮತ್ತು ಮಾನ್ಯಾ ಬಾಪು ಮೊದಲಾದ ಬಾಬಾಸಾಹೇಬರ ಆಪ್ತರು ತಮ್ಮ ಕುಟಿಲುತನದಿಂದ  ದ್ರೋಹ ಎಸಗಿ  ತನ್ನ ಗುಪ್ತ ಕಾರ್ಯಾಗಾರಗಳೆಲ್ಲ ಬ್ರಿಟಿಷರಿಗೆ  ತಿಳಿಸಿರುವ  ವಿಷಯ ಗಮನಕ್ಕೆ ಬಂದು ಬಾಬಾ ಸಾಹೇಬನಿಗೆ ಗಾಬರಿಯಾಯಿತು. ಈ ದ್ರೋಹಿಗಳು ಮದ್ದಿನ ಮನೆಗೆ ಸಗಣಿ ತುಂಬಿದ್ದರು. ಎಷ್ಟಾದರೂ ಇವನು ಹೋರಾಟಕ್ಕೆ ಸಿದ್ಧನಾದ. ಸೋಲು ಮ್ಯಾನ್ಸನ್ ಮತ್ತು ಇತರರಿಗೊದಗಿದ ಘೋರ ಮರಣ ವೃತ್ತಾಂತ ಧಾರವಾಡಕ್ಕೆ ಮಾರನೇ ದಿನ ತಲುಪಿತು.  ಕೂಡಲೇ ಧಾರವಾಡದಿಂದ ಅಮರಗೋಳಕ್ಕೆ ಸಣ್ಣ ಪಡೆಯೊಂದನ್ನು ರವಾನಿಸಲಾಯಿತು.  ಜೂನ್ 1ರಂದು ಕರ್ನಲ್ ಮಾಲ್ಕಮ್ ದಕ್ಷಿಣ ಮರಾಠಾ ಅಶ್ವದಳದ 150 ಮಂದಿ ದೇಶೀಯ ಪದಾತಿದಳದ 28ನೆಯ ರೆಜಿಮೆಂಟ್ ಮತ್ತು 74ನೆಯ ಪರ್ವತ ಪಡೆಯ ಎರಡು ತುಕಡಿಗಳೊಡನೆ ನರಗುಂದ ತಲುಪಿದ. ನಡೆದ ಹೋರಾಟದಲ್ಲಿ ಪಟ್ಟಣ ಬ್ರಿಟಿಷರ ವಶವಾಯಿತು. ಮಾರನೆಯ ದಿನ ಬ್ರಿಟಿಷರು ಕೋಟೆ ವಶಪಡಿಸಿಕೊಳ್ಳಲು ಹೊರಟರು. ಬಾಬಾಸಾಹೇಬನಿಗೆ ಹೋರಾಟ ಮುಂದುವರಿಸುವುದರಿಂದ ಪ್ರಯೋಜನವಿಲ್ಲವೆಂಬ ಅರಿವಾಯಿತು. ಅಂದು ರಾತ್ರಿಯೇ ಆರು ಮಂದಿ ಆಪ್ತರೊಡನೆ ರಾಮದುರ್ಗ ತೊರೆದು ಹೋದ. ಬೆಳಗಾಂವಿಯ ಪೊಲೀಸ್ ಸೂಪರಿಂಟೆಂಡೆಂಟ್ ಆಗಿದ್ದ ಫ್ರಾಂಕ್ ಸೌಟರ್ ಮಾರನೆಯ ದಿನ ಪಂಢರಾಪುರಕ್ಕೆ ತೆರಳುವ ಯಾತ್ರಾರ್ಥಿಗಳಂತೆ ವೇಷ ಧರಿಸಿದ್ದ ಬಾಬಾಸಾಹೇಬ ಮತ್ತು ಅವನ ಅನುಚರರನ್ನು ತೊರಗಲ್ ಕಾಡಿನಲ್ಲಿ ಸೆರೆಹಿಡಿದು ಬೆಳಗಾಂವಿಗೆ ತಂದು ವಿಚಾರಣೆ ನಡೆಸಿ ಬಾಬಾಸಾಹೇಬನಿಗೆ ಮರಣದಂಡನೆ ವಿಧಿಸಲಾಯಿತು. 1858 ಜೂನ್ 12ರಂದು ಸಾವಿರಾರು ಮಂದಿಯ ಸಮ್ಮುಖದಲ್ಲಿ ಬೆಳಗಾಂವಿಯಲ್ಲಿ ಈ ವೀರ ಬಾಬಾಸಾಹೇಬನನ್ನು ನೇಣುಹಾಕಲಾಯಿತು.  ಶೋಕತಪ್ತರಾದ ಇವನ ತಾಯಿ ಯಮುನಾಬಾಯಿ ಮತ್ತು ಹೆಂಡತಿ ಸಾವಿತ್ರಿಬಾಯಿ ಮಲಪ್ರಭಾ ನದಿಗೆ ಹಾರಿಕೊಂಡು ಸತ್ತರು.  ಬಾಬಾಸಾಹೇಬ ಸ್ಥಾಪಿಸಿದ್ದ ಸುಮಾರು 3-4 ಸಹಸ್ರ ಗ್ರಂಥಗಳನ್ನೊಳಗೊಂಡಿದ್ದ ಪುಸ್ತಕ ಭಂಡಾರವನ್ನು ಬ್ರಿಟಿಷರು ಸುಟ್ಟರು.  1858 ಜೂನ್ 3ರಂದು ನರಗುಂದ ಸಂಸ್ಥಾನವನ್ನು ಬ್ರಿಟಿಷ್ ಅಧಿಪತ್ಯಕ್ಕೆ ಒಳಪಡಿಸಿಕೊಂಡರು. ಹೀಗೊಂದು ಕ್ರಾಂತಿ ತನ್ನ ಜನರಿಂದಲೇ ನೆಲೆ ಕಚ್ಚಿತು.

Read Post »

ಕಾವ್ಯಯಾನ

  ರಮೇಶ್ ಅಂಬಳಿ ಅವರ ಕವಿತೆ “ನಾನು”

ಕಾವ್ಯ ಸಂಗಾತಿ   ರಮೇಶ್ ಅಂಬಳಿ ನಾನು ನಾನು, ಯಾರು ಈ ನಾನು?..ಪ್ರಪಂಚದ ಮೂಲೆ ಮೂಲೆಯಲ್ಲಿಯೂ ಅಡಗಿಕುಳಿತಿರುವನು ಈ ನಾನು,ಇವನಿಂದ ಎಲ್ಲಿಯೂ ಶಾಂತಿ ಇಲ್ಲ, ಎಲ್ಲಿಯೂ ಸಮಾಧಾನವಿಲ್ಲ,ಶಾಂತಿಗೆ ಭಂಗ ತರುವುದೇ ಈ ನಾನು ಕೆಲಸ,ಯಾರು ಈ ನಾನು?.. ಇವನಿದ್ದ ಕಡೆಯಲ್ಲಾ ಬರೀ ಹೊಡೆದಾಟ ಬಡಿದಾಟ,ಇವನಿದ್ದ ಕಡೆಯಲ್ಲಾ ನಾನು ಹೆಚ್ಚು, ನೀನು ಕೀಳು,ಇವನಿದ್ದಕಡೆಯಲ್ಲಾ ಬೇಧಾ ಬಾವ,ಇವನಿದ್ದಕಡೆಯಲ್ಲಾ ಜಾತಿ ಮತಗಳ ಗಲಭೆಇವನಿದ್ದಕಡೆಯಲ್ಲಾ ಹಿಂಸೆ, ಶಾಂತಿಗೆ ಇವನ ಬಳಿ ಸ್ಥಳವೇ ಇಲ್ಲ, ಯಾರು ಈ ನಾನು ?.. ಪ್ರೀತಿ ಎಂದರೆ ಇವನಿಗೆ ವಾಕರಿಕೆ, ಸ್ನೇಹಕ್ಕೆ ಇವನಲ್ಲಿ ಬೆಲೆಯೇ ಇಲ್ಲಾ, ಇವನದು ಯಾವಾಗಲೂ ತರ್ಲೆ,ಇವನು ವಾಸಿಸುವ ಕುಟುಂಬದಲ್ಲಿ ಕಲಹಾ,ಇವನಿರುವ ಸಂಘ ಸಂಸ್ಥೆಗಳಲ್ಲಿ ಕಲಹಾ,ಇವನು ನಡೆದಾಡುವ ಸ್ಥಳದಲ್ಲೆಲ್ಲಾ ಕಲಹಾ,ಇವನೇ ಯಾಕೆ ಹೀಗೆ ?.. ಯಾರು ಈ ನಾನು?.. ಈ ನಾನು, ಲೋಕವನ್ನು ಬಿಟ್ಟು ತೊಲಗಲಿ,ಈ ನಾನು ಕುಟುಂಬವನ್ನು ಬಿಟ್ಟು ತೊಲಗಲಿ,ಈ ನಾನು ಸಮಾಜವನ್ನು ಬಿಟ್ಟು ತೊಲಗಲಿ,ಈ ನಾನು ನನ್ನನ್ನು ಬಿಟ್ಟು ತೊಲಗಲಿ,ಈ ನಾನು ನಿನ್ನನ್ನು ಬಿಟ್ಟು ತೊಲಗಲಿ,ಆಗ ಸಮಾಜದಲ್ಲಿ ಶಾಂತಿ, ಕುಟುಂಬದಲ್ಲಿ ಶಾಂತಿ,ನಿನ್ನಲ್ಲಿ ಶಾಂತಿ, ನನ್ನಲ್ಲಿ ಶಾಂತಿ, ಲೋಕವೆಲ್ಲಾ ಶಾಂತಿ ಯಿಂದ ತುಂಬುವುದು ನೋಡಾ ಮನುಜಾ..!! ರಮೇಶ್ ಅಂಬಳಿ

  ರಮೇಶ್ ಅಂಬಳಿ ಅವರ ಕವಿತೆ “ನಾನು” Read Post »

ಕಾವ್ಯಯಾನ

ರಾಜೇಶ್ವರಿ ಪ್ರಕಾಶ‌ ಅವರ “ನಿಜ ದೈವ”

ಕಾವ್ಯ ಸಂಗಾತಿ ರಾಜೇಶ್ವರಿ ಪ್ರಕಾಶ‌ “ನಿಜ ದೈವ” ನಾನು ಹುಟ್ಟಿದ್ದು ದೇವಸ್ಥಾನ ದಪಕ್ಕದಲ್ಲಿಯೇ ಆದ್ದರಿಂದ ಗಂಟೆಗಳ ಶಬ್ದವೇಜೋಗುಳವಾದವುಅಜಾನಗಳೇ ಸುಪ್ರಭಾತ ಗಳಾದವು ಜೀವನದ ಭಾಗವಾಗಿ  ಜೀವಕ್ಕೆ ತಣು ವಾಗಿಯಾರು ಹಾಡಿದರು ಯಾರು ಬರೆದವರುಎಂಬೆಲ್ಲ ಪ್ರಶೆಗಳಿಗೆ ಉತ್ತರವೇ ಬೇಕಿರಲಿಲ್ಲ ನೆಮ್ಮದಿಯಾಗಿದ್ದ ನೆಮ್ಮದಿ ಹಾಳಾಯಿತೇಕಿಂದುಗಂಟೆ  ಪ್ರಾರ್ಥನೆ ಗಳೇ ಕತ್ತು ಹಿಸುಕುತಿವೆಯಿಂದುಜನಮನದ ಭಾವನೆಯ ಕೊಲ್ಲುತಿವೆ ಇಂದು ಗೊಂದಲದ ಗೂಡಾಗಿಡೆ  ನನ್ನೀ ಮನವುಆ ಬಹುರೂಪಿ ಪರಮಾತ್ಮನ  ಕಂಡುಅಯ್ಯೋ ಏನಿತು ರೂಪ ಏನು ವೇಷ ಸುಂದರವಾಗಿಹೆ ವೇಷಭೂಷದಲಿಇಂಪಾಗಿರುವೆ ವೇದ ಪದಗಳಲಿನೋಡಲು ಕೇಳಲು ಚಂದವೋ ಚಂದ ಹೇ ದೇವನೇ ನಂಗೊತ್ತು ನೀನಲ್ಲಿಲ್ಲಪದ ರೂಪವ ಮೀರಿಹೆ ನೀನುಅಯ್ಯೋ ಎಂದು ಕಾಣಬಲ್ಲೆ ನಿಜ ದೈವವನು. ರಾಜೇಶ್ವರಿ ಪ್ರಕಾಶ

ರಾಜೇಶ್ವರಿ ಪ್ರಕಾಶ‌ ಅವರ “ನಿಜ ದೈವ” Read Post »

ಅನುವಾದ, ಕಥಾಗುಚ್ಛ, ನಿಮ್ಮೊಂದಿಗೆ

“ಡಾಟಾ ಕೇಂದ್ರದಲ್ಲಿ ದೆವ್ವ” ತೆಲುಗು ಕಥೆಯ ಅನುವಾದ,ರಂಗನಾಥ ರಾಮಚಂದ್ರರಾವು.ತೆಲುಗು ಮೂಲ : ಜಿ. ಉಮಾಮಹೇಶ್ವರ್

ಅನುವಾದ ಸಂಗಾತಿ ಡೇಟಾ ಕೇಂದ್ರದಲ್ಲಿ ದೆವ್ವ ತೆಲುಗು ಮೂಲ : ಜಿ. ಉಮಾಮಹೇಶ್ವರ್ಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು ಡೇಟಾ ಕೇಂದ್ರದಲ್ಲಿ  ದೆವ್ವತೆಲುಗು ಮೂಲ : ಜಿ. ಉಮಾಮಹೇಶ್ವರ್ಕನ್ನಡಕ್ಕೆ : ರಂಗನಾಥ  ರಾಮಚಂದ್ರರಾವು  “ಈ ಘಟನೆ ನಡೆದು ಸುಮಾರು ಆರು ವರ್ಷಗಳೇ ಕಳೆದಿವೆ,’’ ಎಂದು ಕುಲಕರ್ಣಿ ಉಪೋದ್ಘಾತದಂತೆ ಹೇಳಿದರು. “ಈ ಪರಿಸ್ಥಿತಿಯಲ್ಲಿ, ಈ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು ಸೂಕ್ತವೆಂದು ತೋರುತ್ತದೆ. ಈ ಘಟನೆಗೆ ನೇರವಾಗಿ ಸಂಬAಧಿಸಿದ ಮೂರ್ತಿ ಅವರು ಕೂಡ ಇಲ್ಲಿಯೇ ಇದ್ದಾರೆ. ಅವರು ಸಹ ನಮಗೆ ಕೆಲವು ವಿಷಯಗಳನ್ನು ಹೇಳುತ್ತಾರೆ. ಎಲ್ಲರೂ ಆಸಕ್ತಿಯಿಂದ ನೋಡುತ್ತಿದ್ದಾರೆ. ಹೈದರಾಬಾದ್‌ನಲ್ಲಿರುವ ಕೇಂದ್ರ ಸರ್ಕಾರದ ಸಂಶೋಧನಾ ಸಂಸ್ಥೆಯಿAದ ನಡೆಸಲಾದ ಅಲ್ಪಾವಧಿ ತರಬೇತಿ ಸಮಾರೋಪ ಸಭೆಗೆ ಕುಲಕರ್ಣಿ ಅವರನ್ನು ಮುಖ್ಯ ಅತಿಥಿಗಳಾಗಿ ಸಂಘಟಕರು ಕರೆದಿದ್ದರು. ಕುಲಕರ್ಣಿ ಅವರು ಇಂಟೆಲಿಜೆನ್ಸ್ ಕಛೇರಿಯಲ್ಲಿ ಐಟಿ ವಿಭಾಗದ ನಿರ್ದೇಶಕರಾಗಿ ಕೆಲಸ ಮಾಡಿ ಇತ್ತೀಚೆಗೆ ನಿವೃತ್ತರಾಗಿದ್ದರು. ಅವರ ಸರ್ವೀಸ್‌ನಲ್ಲಿ ಪರಿಹರಿಸಲಾಗದ ಮುಖ್ಯವಾದ ಕೇಸುಗಳನ್ನು, ಛೇದಿಸಿದ ಕೆಲವು ಆಸಕ್ತಿಕರವಾದ ಸವಾಲುಗಳನ್ನು ಕುರಿತು ಒಂದು ಪುಸ್ತಕವಾಗಿ ಹೊರ ತರಲಿದ್ದಾರೆ. ವಿಷಯ ಯಾವುದಾದರೂ ಒಳ್ಳೆಯ ಕಥೆಯಂತೆ, ಜನರಂಜಕವಾಗಿ ಅವರು ಹೇಳುತ್ತಾರೆಂದು ಅವರನ್ನು ಅನೇಕ ಸಭೆಗಳಿಗೆ ಕರೆಯುತ್ತಾರೆ. ಅವರು ವೃತ್ತಿಪರವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರೂ ಹೈದರಾಬಾದ್‌ನೊಂದಿಗೂ ಅವರ ಅನುಬಂಧವನ್ನು ಮರೆಯಲು ಸಾಧ್ಯವಿಲ್ಲವೆಂದು ಅವರೇ ಹೇಳಿಕೊಳ್ಳುತ್ತಾರೆ. “ಈ ಒಂದು ವಾರದ ತರಬೇತಿಯು ನಿಮಗೆ ಹೊಸ ವಿಷಯಗಳನ್ನು ಪರಿಚಯಿಸಿದೆ ಎಂದು, ನೀವು ಇಲ್ಲಿ ಕಲಿತ ವಿಷಯಗಳನ್ನು ನಿಮ್ಮ ವೃತ್ತಿ ಜೀವನದಲ್ಲಿ ಅನುಸರಿಸಿ, ಅದರಿಂದ ಪ್ರಯೋಜನ ಪಡೆಯುತ್ತಿರುವಿರೆಂದು ಆಶಿಸುತ್ತೇನೆ” ಎಂದು ಒಂದು ನಿಮಿಷ ತಡೆದು ಸಭಾಂಗಣದಲ್ಲಿರುವ ಎಲ್ಲಾ ಅತಿಥಿಗಳನ್ನು ಗಮನಿಸಿ ನೋಡಿದರು. ಐವತ್ತು ಜನ ಇಂಟಲಿಜೆನ್ಸ್ ಇನ್ಸ್ಪೆಕ್ಟರ್‌ಗಳು ತಮ್ಮ ರಿಫ್ರೆಷರ್ ತರಬೇತಿಯನ್ನು ಮುಗಿಸಿಕೊಂಡು ಮತ್ತೆ ತಮ್ಮ ತಮ್ಮ ಕರ್ತವ್ಯಗಳಿಗೆ ಹೋಗುವ ಮೊದಲು ಆಯೋಜಿಸಿದ್ದ ವಿದಾಯ ಸಮಾವೇಶವಿದು. ಬಹಳಷ್ಟು ಜನ ಅವರವರ ಮನೆಗಳನ್ನು, ಕುಟುಂಬಗಳನ್ನು ಬಿಟ್ಟು ಬಂದು ಒಂದು ವಾರವಾಗಿರುವುದರಿಂದ, ತರಬೇತಿ ಮುಗಿಯುವುದನ್ನೇ ಕಾಯುತ್ತ, ಯಾವಾಗ ರೈಲು ಹತ್ತುತ್ತೇವೆ ಎಂಬAತೆ ಇದ್ದರು. ಕುಲಕರ್ಣಿ ಅವರು ಸಣ್ಣಗೆ ನಕ್ಕರು – ನಿಮ್ಮ ತರಬೇತಿ ಕಾರ್ಯಕ್ರಮಕ್ಕೆ ಮೂರ್ತಿ ಅವರು ಕೋ ಆರ್ಡಿನೇಟರ್ ಆಗಿ ಇದ್ದರೆಂದರೆ – ಅವರು ಈ ವಾರದ ದಿನಗಳಲ್ಲಿ ನಿಮಗೆ ನಿಮ್ಮ ಅತ್ತೆಯವರ ಮನೆಯನ್ನು ಖಂಡಿತವಾಗಿ ನೆನಪಿಸಿರುತ್ತಾರೆ. ಅವರ ಆತಿಥ್ಯವನ್ನು ಅನುಭವಿಸಿದ್ದರಿಂದ ಆ ವಿಷಯವನ್ನು ನಾನು ಖಚಿತವಾಗಿ ಹೇಳಬಲ್ಲೆ. ಮೂರ್ತಿ ಅವರು ತುಂಬಾ ತಮಾಷೆ ಮನುಷ್ಯ. ಬಹುಶಃ ನೀವು ಈ ವಾರದಲ್ಲಿ ಅದನ್ನು ಗಮನಿಸಿಯೇ ಇರಬಹುದು. ಅದು ಮನೆಯಾದರೂ, ಕಛೇರಿಯಾದರೂ ಸುತ್ತಲಿನ ಪರಿಸರವನ್ನು ಹಿತಕರವಾಗಿ ಪರಿವರ್ತಿಸಬಲ್ಲ ಜಾಣ್ಮೆ, ಕೌಶಲ ಕೆಲವೇ ಜನರಿಗೆ ಇರುತ್ತದೆ. ಅದರಲ್ಲಿ ಮೂರ್ತಿಯವರು ಮೊದಲ ಸಾಲಿನಲ್ಲಿ ಇರುತ್ತಾರೆ.” ಎಂದು ಸ್ವಲ್ಪ ನಿಲ್ಲಿಸಿ, ಎಲ್ಲರೂ ಹೌದೆನ್ನುವಂತೆ ತಲೆದೂಗುತ್ತಿದ್ದರೆ, ತಾವೂ ಅದಕ್ಕೆ ಒಪ್ಪುವವರಂತೆ ತಲೆಯಾಡಿಸಿ, “ಅಂತಹ ಮೂರ್ತಿಯವರಿಗೆ ಒಂದು ರಾತ್ರಿ ನಿದ್ರೆಯನ್ನು ದೂರ ಮಾಡಿದ ಕಥೆ ಇದು” ಅಂದರು. ಎಲ್ಲರ ಮುಖದಲ್ಲೂ ನಗುಗಳು ಚಿಗುರಿವೆ. ಕುಲಕರ್ಣಿ ತನ್ನ ಲ್ಯಾಪ್‌ಟಾಪ್‌ನ ಬಟನ್ ಒತ್ತಿ ತನ್ನ ಎದುರಿಗಿದ್ದ ಸ್ಕಿçÃನ್ ಮೇಲೆ ಆ ಗೊಂಬೆ ಕಾಣಿಸುತ್ತಿದೆ ಎಂದು ನಿರ್ಧರಿಸಿಕೊಂಡು – “ಇದೇ ನಮ್ಮ ಕಥೆಯ ಸ್ಥಳ” ಎಂದು ಪ್ರೊಜೆಕ್ಟರ್ ಸ್ಕಿçÃನ್ ಮೇಲೆ ಗೊಂಬೆ ತೋರಿಸುತ್ತಾ ಹೇಳಿದರು, ಆ ನಂತರ ಸ್ಲೆöÊಡ್‌ನಲ್ಲಿ ಆ ಗೊಂಬೆಗೆ ಸಂಬAಧಿಸಿದ ವಿವರಗಳು ಹೀಗೆ ಇದ್ದವು. “2010 ವರ್ಷದಲ್ಲಿ ಪ್ರಾರಂಭಿಸಿ 2012ನಲ್ಲಿ ಮುಗಿಸಿದ ಕೇಂದ್ರ ಡೇಟಾ ಸೆಂಟರ್ ಆವರಣ. ಅದರ ವಿಸ್ತೀರ್ಣ 50 ಎಕರೆ. ನಗರಕ್ಕೆ 30 ಕಿಲೋಮೀಟರ್ ದೂರ. ಹೆದ್ದಾರಿಯಿಂದ 3 ಕಿಲೋಮೀಟರ್ ಒಳಗೆ, ರಂಗನಪಲ್ಲಿ ಗ್ರಾಮ ಪಂಚಾಯತಿ ಹತ್ರ. ಡೇಟಾ ಸೆಂಟರ್ ಸಾಮರ್ಥ್ಯ 500 ರಾಕ್ ಸ್ಪೇಸ್. ಹತ್ತು ಸಾವಿರ ಸರ್ವರ್‌ಗಳು, 10 ಜೇಟಾ ಬೈಟ್‌ಗಳ ಸ್ಟೋರೇಜ್. ಒಟ್ಟು ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಎಲ್ಲಾ ಇಲಾಖೆಗಳು, ಸಂಸ್ಥೆಗಳು ತಮ್ಮ ತಮ್ಮ ವಿಭಾಗಗಳ ಒಟ್ಟು ಮಾಹಿತಿಯನ್ನು ಇಲ್ಲೆ ಭದ್ರವಾಗಿ ಸಂಗ್ರಹಿಸುತ್ತಾರೆ. ವಿದ್ಯುತ್ ಸರಬರಾಜಿಗೆ ಅಡಚಣೆಯಾದರೆ 24 ಗಂಟೆಗಳವರೆಗೆ ಪರ್ಯಾಯ ವಿದ್ಯುತನ್ನು ಒದಗಿಸುವ ಜನರೇಟರ್‌ಗಳು, ಸಿಸಿಟಿವಿಗಳು, ಹಗಲು ರಾತ್ರಿ ಸುಶಿಕ್ಷಿತರಾದ ಕಾವಲುಗಾರರು… ದೇಶಕ್ಕೆ ಮಿದುಳಿನಂತಿದೆ ಈ ಸೆಂಟರ್.” ಪ್ರೊಜೆಕ್ಟರ್ ಆಫ್ ಮಾಡಿ ಮತ್ತು ಮೈಕ್‌ಅನ್ನು ಕೈಯಲ್ಲಿ ತೆಗೆದುಕೊಂಡು – “ಅಂತಹ ಸೆಂಟರ್‌ಗೆ ಮೂರ್ತಿ ಅವರು ಆಡಳಿತ ಮತ್ತು ನಿರ್ವಹಣಾಧಿಕಾರಿಯಾಗಿದ್ದರು. ಒಳ್ಳೆಯ ಕಲಾಭಿರುಚಿಯ ಮೂರ್ತಿ ಅವರು ಆ ಆವರಣವನ್ನು ಸುಂದರವಾಗಿ ರೂಪಿಸಿದರು. ಐವತ್ತು ಜನ ಟೆಕ್ನಿಕಲ್ ಸ್ಟಾಫ್, ಇನ್ನೂ ಐವತ್ತು ಜನ ಸಪೋರ್ಟ್ ಸ್ಟಾಫ್ ಇರಬಹುದೆಂದು ಭಾವಿಸುತ್ತೇನೆ. ಅಲ್ಲಿ ಎಲ್ಲರಿಗೂ ಕ್ವಾರ್ಟರ್ಸ್ ಇತ್ತು. ಆದರೆ ಕೆಲವರು ಸಿಟಿಯಿಂದ ಅಪ್ ಅಂಡ್ ಡೌನ್ ಮಾಡುತ್ತಿದ್ದರು. ಸೆಕ್ಯೂರಿಟಿ ಸ್ಟಾಫ್‌ಗೂ ಉತ್ತಮ ವಸತಿ ವ್ಯವಸ್ಥೆ ಇತ್ತು. ಸಿಟಿಯಿಂದ ದೂರ ಎಂಬ ಭಾವನೆ ಹೊರತು ಎಲ್ಲವೂ ಇತ್ತು. ಹೌದಲ್ಲವೇ ಮೂರ್ತಿ?” ಎಂದು ಮೂರ್ತಿಯವರ ಒಪ್ಪಿಗೆಗೆ ಒಂದು ಕ್ಷಣ ಬಿಟ್ಟು, ಮತ್ತೆ – “ಎಲ್ಲವೂ ಚೆನ್ನಾಗಿದೆ ಎಂದುಕೊಳ್ಳುತ್ತಿರುವ ದಿನಗಳಲ್ಲಿ, ಡೇಟಾ ಮಾತ್ರವೇ ಇರಬೇಕಾದ ಆ ಸೆಂಟರ್‌ನಲ್ಲಿ ಒಂದು ದೆವ್ವ ಬಂದಿದೆ.” ಎಲ್ಲರೂ ಮುಗುಳ್ನಗೆ ನಗುತ್ತಿದ್ದದ್ದು ನೋಡಿ, “ಅರೆ, ನೀವು ಸರಿಯಾಗಿ ಕೇಳಿದ್ದೀರಿ. ಆದರೆ, ಆ ದೆವ್ವ ಹೇಗೆ ಬಂತು ಎಂದು ಅದರ ಸಂಪೂರ್ಣ ವಿಷಯವೇನು ಅಂತ ಆಗಿನ ಆ ಸೆಂಟರ್ ನಿರ್ವಹಣಾಧಿಕಾರಿಯಾಗಿದ್ದ ಮೂರ್ತಿ ಅವರಿಂದಲೇ ಕೇಳೋಣ. ನಂತರ ನಾನು ಮುಂದುವರಿಯುತ್ತೇನೆ”ಎAದು ಹೆಳಿ ಮೈಕನ್ನು ಮೂರ್ತಿ ಕೈಗೆ ಕೊಟ್ಟ, ಮೂರ್ತಿ – ಈ ಅನಿರೀಕ್ಷಿತ ವಿನಂತಿಯನ್ನು ನಿರಾಕರಿಸಲು ಸಾಧ್ಯವಾಗದೆ ನಗುತ್ತಾ – “ಖಂಡಿತ” ಎಂದು ಹತ್ತು ಸೆಕೆಂಡುಗಳ ನಂತರ” ಎಲ್ಲಿಂದ ಪ್ರಾರಂಭಿಸ ಬೇಕೋ ನನಗೆ ತಿಳಿಯುತ್ತಿಲ್ಲ” ಎಂದ. ಮತ್ತೆ – “ಡೇಟಾ ಸೆಂಟರ್ ಕಾರ್ಯಕ್ರಮಗಳು ಪ್ರಾರಂಭವಾಗಿ ಎರಡು ವರ್ಷಗಳವರೆಗೂ ನಮಗೆ ವಿಪರೀತವಾದ ಕೆಲಸ ಇರುತ್ತಿತ್ತು. ಹೊಸಬರಿಗೆ ವಸತಿ ವ್ಯವಸ್ಥೆ, ಮಾರಾಟಗಾರರ ರಶ್, ಸರ್ಕಾರದ ಆದೇಶಗಳ ಪ್ರಕಾರ ನಮ್ಮೊಂದಿಗೆ ಡೇಟಾವನ್ನು ಭದ್ರಪಡಿಸಲು ಅಗತ್ಯವಾದ ವ್ಯವಸ್ಥೆಗಳು, ಅದಕ್ಕೆ ಸೂಕ್ತವಾದ ತರಬೇತಿಗಳು, ಹೀಗೆ ಎರಡು ವರ್ಷಗಳು ಬಿಡುವಿಲ್ಲದೇ ಕಳೆದು ಹೋದೆವು. ಅದರ ನಂತರ ಎಲ್ಲವೂ ಶಾಂತವಾದಾಗ ಒಂದು ಬೇಸಿಗೆಯ ಮಧ್ಯಾಹ್ನ ಸಾಹು ಎಂಬ ಇಂಜನಿಯರ್ ನನ್ನ ಕೋಣೆಯೊಳಗೆ ಬಂದ. ಸಾಮಾನ್ಯವಾಗಿ ಎಂಜಿನಿಯರ್‌ಗಳಿಗೆ ನನ್ನೊಂದಿಗೆ ಹೆಚ್ಚು ಕೆಲಸಗಳೇನು ಇರುವುದಿಲ್ಲ. ಅವರ ನಿವಾಸಗಳಲ್ಲಿ ಏನಾದರೂ ರಿಪೇರಿಗಳು ಇದ್ದರೆ, ಅಥವಾ ನಗರಕ್ಕೆ ಹೋಗಿ ಬರಲು ವಾಹನದ ವ್ಯವಸ್ಥೆಕ್ಕಾಗಿ ಈ ರೀತಿಯ ಸಣ್ಣಪುಟ್ಟ ಅಗತ್ಯಗಳಿರುತ್ತವೆ. ಆದರೇ ನಾನೇ ಅವರೊಂದಿಗೆ ಬೇಕೆಂದೇ ಮಾತನಾಡುತ್ತಾ ಸಂಜೆಗಳನ್ನು ಉತ್ಸಾಹ ಭರಿತವಾಗಿ ಕಳೆಯಲು ಟೆನ್ನಿಸ್ ಕೋರ್ಟ್ ಹಾಕಿಸಿ, ಇಂಡೋರ್ ಗೇಮ್ಸ್ ಆಟಗಳನ್ನು ಏರ್ಪಡಿಸಿ, ದೇಶದೆಲ್ಲೆಡೆಯಿಂದ ಬಂದವರಿಗೆ ಬೇಸರವಾಗದಂತೆ ನೋಡಿಕೊಳ್ಳುತ್ತಿದ್ದೆ. ಹೀಗಾಗಿಯೇ ಎಲ್ಲರೂ ಅದನ್ನು ನೆನಪಿಸಿಕೊಳ್ಳುವ ಸಲುಗೆ ಇರುತ್ತಿತ್ತು. ಬಂದವನು ಏನೂ ಮಾತಿಲ್ಲದೆ ಹಾಗೆ ನಿಂತಿದ್ದಾನೆ. ಯಾವುದಾದರೂ ದೊಡ್ಡ ವಿಷಯವೇನೋ ಎಂದು ಕುಳಿತುಕೊಳ್ಳಲು ಕುರ್ಚಿ ತೋರಿಸಿದೆ. ಆ ಹುಡುಗ ಸ್ವಲ್ಪ ಮುಜುಗರ, ಸಂಕೋಚದಿAದ … ಯಾವುದೋ ವಿಷಯವನ್ನು ಹೇಳಬೇಕೋ, ಇಲ್ಲವೋ ಎಂಬ ಅನುಮಾನದಿಂದ ಇದ್ದಂತೆ ನೆಲವನ್ನು ನೋಡುತ್ತಾ, ಮಾತಾಡಲು ತೊದಲುತ್ತಿದ್ದ. ನಾನೇ ಸಲುಗೆಯಿಂದ “ಹೇಳಿ, ಡೊಂಟ್ ವರಿ… ನನ್ನೊಂದಿಗೆ ನೀವು ಯಾವ ವಿಷಯವಾದರೂ ನಿರಭ್ಯಂತರವಾಗಿ, ನಿಸ್ಸಂದೇಹವಾಗಿ ಮಾತಾಡಬಹುದು” ಎಂದು ಭರವಸೆ ನೀಡಿದ ನಂತರ, “ಸರ್, ನೀವು ಬೇರೆ ರೀತಿಯಲ್ಲಿ ಅಂದುಕೊಳ್ಳುವುದಿಲ್ಲ ಎಂದರೆ ನಾನೊಂದು ವಿಷಯ ಹೇಳ್ತೇನೆ” ಎಂದು ಗುಟ್ಟನ್ನು ಹೇಳುವ ಹಾಗೆ ಮೇಜಿನ ಮೇಲೆ ಬಾಗಿ ಒರಗುತ್ತಾ, ನನ್ನ ಮುಖ ನೋಡುತ್ತಾ – “ಸರ್, ನಮ್ಮ ಡೇಟಾ ಸೆಂಟರ್ ಸುತ್ತಾ ರಾತ್ರಿಯಲ್ಲಿ ದೆವ್ವ ಸುತ್ತಾಡುತ್ತಿದೆ ಸಾರ್!” ನಾನು ಲಘುವಾಗಿ ಮುಗುಳ್ನಕ್ಕೆ. ತಕ್ಷಣ ಮುಖವೆಲ್ಲಾ ಗಂಭೀರವಾಗಿ ಇಟ್ಟುಕೊಂಡು – “ಅದನ್ನು ನೋಡಿದ್ದೀರಾ?” ಎಂದು ನಾನು ಮುಗಿಸುವುದರೊಳಗೆ, “ನೀವು ಖಂಡಿಸಲು ಸಿದ್ಧವಾಗುತ್ತಿದ್ದೀರಿ… ದಯವಿಟ್ಟು ನನ್ನ ಮಾತು ಕೇಳಿ. ಪ್ರತಿ ಅಮಾವಾಸ್ಯೆ, ಹುಣ್ಣಿಮೆಗಳಿಗೆ ಒಂದು ಐದು ದಿನಗಳಿಂದ, ಒಂದು ದೆವ್ವ ನಮ್ಮ ಸರ್ವರ್ ರೂಮ್ ಬಳಿ ಸುತ್ತಾಡುತ್ತಿದೆ. ನಮ್ಮ ನೆಟ್‌ವರ್ಕ್ ಇಂಜನೀಯರ್ ಕೂಡಾ ರಾತ್ರಿ ಯಲ್ಲಿ ಒಬ್ಬನೇ ಡ್ಯೂಟಿಯಲ್ಲಿ ಇದ್ದಾಗ ಆ ಚಪ್ಪಾಳೆಗಳನ್ನು ಕೇಳಿದ್ದಾನೆ. ಒಂದು ನೆರಳು ಚಲಿಸುತ್ತಾ ಹೋಗುವುದು, ನಡುನಡುವೆ ವಿಚಿತ್ರ ಶಬ್ದಗಳು ಮಾಡುವುದು, ಇವನ್ನೆಲ್ಲಾ ನೋಡಿದರೆ ನಮ್ಮ ಹಳೆಯ ಸೆಕ್ಯುರಿಟಿ ನರ್ಸಿಂಗ್ ಹೇಳಿದ ವಿಷಯ ನಿಜವೆನಿಸುತ್ತಿದೆ’’ ಎಂದು ವಿರಾಮವಿಲ್ಲದೆ ಮಾತಾಡಿದ. ಸಿದ್ಧವಾಗುತ್ತಿದ್ದೀರಿ ಅರ್ಥವಾಗಲಿಲ್ಲ. “ಅವನಿಗೆ ಹಲವು ರೀತಿಯಲ್ಲಿ ತಿಳಿಸಿ ಹೇಳಲು ಪ್ರಯತ್ನಿಸಿದೆ. ಆದರೆ ಅವರ ಅಭಿಪ್ರಾಯ ಬದಲಾಗಲಿಲ್ಲ.” ಮೂರ್ತಿಯವರ ಮಾತಿಗೆ ಅಡಚಣೆ ಮಾಡುತ್ತಾ ಕೇಳುಗರಲ್ಲಿ ಒಬ್ಬನು- “ಅದಕ್ಕೂ ಮುಂಚೆ ಸೆಕ್ಯುರಿಟಿ ಗಾರ್ಡ್ ಏನು ಹೇಳಿದನೋ ನೀವು ಹೇಳ್ಳಿಲ್ಲ.” ಮೂರ್ತಿ ಮುಗುಳ್ನಕ್ಕೂ, “ಸಿ.ಐ.ಎಸ್.ಎಫ್. ಅವರ ಆಗಮನದ ಮೊದಲು, ನರ್ಸಿಂಗ್ ಎಂಬ ಸ್ಥಳೀಯ ಏಜೆನ್ಸಿಯ ಸೆಕ್ಯುರಿಟಿ ಗಾರ್ಡ್ ಇದ್ದನು.. ಅವನೊಬ್ಬ ವಾಚಾಳಿ. ಅಲ್ಲಿನ ಕೆಲಸಗಾರರಿಗೆ, ಈ ಸ್ಥಳವು ಒಂದು ಕಾಲದಲ್ಲಿ ಸ್ಮಶಾನವೆಂದು, ಅಲ್ಲಿ ದೆವ್ವಗಳು ಓಡಾಡುತ್ತಿರುತ್ತವೆ ಎಂದು ಕಥೆಗಳನ್ನು ಹೇಳುತ್ತಿದ್ದನು. ಸೆಂಟರ್ ಚಟುವಟಿಕೆಗಳು ಸಿ.ಐ.ಎಸ್.ಎಫ್. ಅವರು ಪೂರ್ತಿ ಜಾಗವನ್ನು ತಮ್ಮ ಹತೋಟಿ ಒಳಗೆ ತೆಗೆದುಕೊಂಡಾಗ, ಅಲ್ಲೇ ತೋಟಗಾರನಾಗಿ ಮುಂದುವರೆದರು. ಆ ಸಮಯದಲ್ಲಿ, ತನ್ನ ಭಯವನ್ನು ಹೋಗಲಾಡಿಸಲು, ಒಂದು ಹನುಮಂತನ ಚಿತ್ರವನ್ನು ಇಟ್ಟು ಅದರ ಸುತ್ತಲೂ ನಾಲ್ಕು ಕಲ್ಲುಗಳನ್ನು ಹೂತಿಟ್ಟಿದನು., ಈ ಆಂಜನೇಯಸ್ವಾಮಿ ಇರುವವರೆಗೂ ಆ ದೆವ್ವಗಳು ಅಲ್ಲಿಗೆ ಬರುವುದಿಲ್ಲವೆಂದು ಎಲ್ಲರಿಗೂ ಹೇಳುವವವನು. ಕೆಲವು ದಿನಗಳ ನಂತರ, ಡ್ಯೂಟಿಯಲ್ಲಿ ಕುಡಿದು ಬಂದಿದ್ದಕ್ಕೆ ಕೆಲಸಕ್ಕೆ ಬರಬೇಡವೆಂದು ಹೇಳಿದರೆ ಸಿಟಿಯಲ್ಲಿರುವ ಅವರ ಮಗನ ಕಡೆ ಹೋಗಿಬಿಟ್ಟಿದ್ದಾನೆ. ಆದರೆ ಅಲ್ಲಿರುವ ದಿನಗಳು ದೆವ್ವದ ಬಗ್ಗೆ ಸುಮ್ಮನೆ ಗಡಿಬಿಡಿ ಮಾಡುವವನು. ಆ ವಿಷಯವನ್ನೇ ಸಾಹು ನೆನಪಿಸಿದ. ಮತ್ತೆ ನಮ್ಮ ಸಾಹು ಕಡೆಗೆ ಬಂದರೆ, ಆ ಹುಡುಗ ನನ್ನ ಮಾತುಗಳಿಂದ ಕನ್ವಿನ್ಸ್ ಆಗಲಿಲ್ಲ ಎಂದು ನಂತರದ ಅನೇಕ ಘಟನೆಗಳಿಂದ ನನಗೆ ಅರ್ಥವಾದವು. ಪ್ರತಿಯೊಂದು ಸಣ್ಣ ವಿಷಯವನ್ನು ಭೂತಗನ್ನಡಿಯಿಂದ ನೋಡುವುದು, ಪ್ರತಿ ವೈಫಲ್ಯವನ್ನು ದೆವ್ವಕ್ಕೆ ಆರೋಪಿಸುವುದು, ಅವನ ಮಾತಿನ ನಡುವೆ, ದೇವರಿದ್ದಾನೆಂದು ನಂಬಿದರೆ ದೆವ್ವಗಳೂ ಇವೆ ಎಂದು ನಂಬಬೇಕು ಅಲ್ಲವೇ, ಅವರ ಹಳ್ಳಿಯಲ್ಲಿ ಅವರ ಸಂಬAಧಿಕರಿಗೆ ಸಂಭವಿಸಿದ ಕೆಲವು ಅನುಭವಗಳು, ಹಾರರ್ಚಲನ ಚಿತ್ರಗಳ ಚರ್ಚೆ, ಈ ರೀತಿಯ ಇನ್ನೂ ಕೆಲವು. ಆದರೆ ಅವನ ಸ್ನೇಹಿತರು ಕೂಡಾ ಅವನನ್ನು ಚುಡಾಯಿಸುತ್ತಿದ್ದರು. ಯಾವುದಾದರೂ ವಸ್ತುವನ್ನು ಬಚ್ಚಿಟ್ಟುವುದು, ಅದನ್ನು ದೆವ್ವಕ್ಕೆ ಆರೋಪಿಸಿ ಸತಾಯಿಸುವುದು, ಹುಡುಗರು, ಒಬ್ಬಂಟಿಗರು, ಆ ವಯಸ್ಸಿನಲ್ಲಿ ಏನೇನು ಮಾಡಬೇಕೋ ಅವೆಲ್ಲಾ ಮಾಡಿ ತಮಾಷೆ ನೋಡುತ್ತಿದ್ದರು. ಒಮ್ಮೆ ಒಂದು ಅಪ್ಲಿಕೇಷನ್ ಸರ್ವರ್ ಕೆಲಸ ಮಾಡಲಿಲ್ಲ. ಸಾಹೂ ಸರ್ವರ್ ಅಡ್ಮಿನಿಸ್ಟೆçÃಟರ್. ಎಲ್ಲಾ ಸರ್ವರ್‌ಗಳು ಉತ್ತಮವಾಗಿವೆ, ಆದರೆ ಇದು ಮಾತ್ರ ಪ್ರತಿಕ್ರಿಯಿಸುತ್ತಿಲ್ಲ. ಆಗ ಅವನು ಎಷ್ಟು ಅವಸರ ಮಾಡಿದ್ದನೆಂದರೆ, ಯಾರೋ ತನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆಂದು, ತನ್ನ ಮೇಲೆ ಮಾಟ-ಮಂತ್ರ ಪ್ರಯೋಗಗಳು ಜರುಗುತ್ತಿದ್ದವೆಂದು, ಅದರ ಫಲವಾಗಿ ಆ ಸರ್ವರ್ ಕೆಲಸ ಮಾಡುತ್ತಿಲ್ಲವೆಂದು ಗೋಳಿಡುತ್ತಿದ್ದ. ಅವನನ್ನು ಹೊರಗೆ ಕಳಿಸಿ, ಕುಲಕರ್ಣಿ ಅವರಿಗೆ ಫೋನ್ ಮಾಡಿದೆವು. ಒಂದು -ಎರಡು ಗಂಟೆಗಳ ತನಿಖೆಯ ನಂತರ ನಮಗೆ ಗೊತ್ತಾದ ವಿಷಯವೇನೆಂದರೆ, ಅದೇನೋ ಡಿಡಾಸ್ ಎಟಾಕ್ ಎಂದು ಕರೆಯಲಾಗುತ್ತದೆ, ಅದರಿಂದ ಈ ಅನರ್ಥ ನಡೆದಿದೆ ಎಂದು ಕುಲಕರ್ಣಿ ತಂಡ ತೀರ್ಮಾನಿಸಿತು. ಯಾವುದೇ ಸಂದರ್ಭದಲ್ಲಿ ಡೇಟಾ ಸೆಂಟರ್‌ಗೆ ಇಂಟರ್ನೆಟ್ ಅನ್ನು ಕನೆಕ್ಟ್ ಮಾಡಬಾರದೆಂದು ಸೂಚಿಸಿದರು. ಅಲ್ಲಿಗೆ ವಿವಾದ ಇತ್ಯರ್ಥವಾಯಿತು. ಮೂರ್ತಿಯವರು ನಿರ್ವಾಹಕರನ್ನು ನೀರಿಗಾಗಿ ಕೇಳಿ ಎರಡು ಗುಟುಕುಗಳು ಕುಡಿದರು. “ನಿಮ್ಮ ಸಮಯವನ್ನು ಹೆಚ್ಚು ತೆಗೆದುಕೊಳ್ಳದೆಯೇ ವಿಷಯಕ್ಕೆ ಬರುತ್ತೀನಿ! ಈ ಡಿಡಾಸ್ ಘಟನೆ ನಂತರ

“ಡಾಟಾ ಕೇಂದ್ರದಲ್ಲಿ ದೆವ್ವ” ತೆಲುಗು ಕಥೆಯ ಅನುವಾದ,ರಂಗನಾಥ ರಾಮಚಂದ್ರರಾವು.ತೆಲುಗು ಮೂಲ : ಜಿ. ಉಮಾಮಹೇಶ್ವರ್ Read Post »

ಕಾವ್ಯಯಾನ

ಇಮಾಮ್ ಮದ್ಗಾರ ಅವರ “ಆಸೆ ( ಅತಿಯಾಸೆ)”

ಕಾವ್ಯ ಸಂಗಾತಿ ಇಮಾಮ್ ಮದ್ಗಾರ “ಆಸೆ ( ಅತಿಯಾಸೆ)” ಕಣ್ಣು ಮುಚ್ಚಿವೆಮಣ್ಣು ಮುಚ್ಚುವ ಮುನ್ನನಿನ್ನ ಮುಖವನ್ನೋಮ್ಮೆನನ್ನ ಮುಚ್ಚಿದ ಕಣ್ಣುಗಳೊಳಗಿಂದ ನೋಡುವಾಸೆ ಉಸಿರಾಡುವದ ಮರೆತ ನನ್ನಉಸಿರ ತಿತ್ತಿಗಳಪ್ರತಿ ಪದರಲಿನಿನ್ನ ಹೆಸರಿರುವದ ನಿನಗೆ ತೋರಿಸುವಾಸೆ ನಿನ್ನವಳು ನಾನೆಂದುಡಂಗುರಸಾರಿದ ಸಮಕರಿಗೇನೀನು ನನ್ನವನೆಂದು ತೋರಿಸುವಾಸೆ ಮರಳಿ ಬಾರದೂರಿಗೆ ಹೊರಟಿರುವೆಹೂವಿನಾ ತೇರನೇರಿ.ಮುಡಿಗೆ ಮೊಳ ಮಲ್ಲಿಗೆ ಇಲ್ಲೆಂಬಸುದ್ದಿ ಹಬ್ಬಬಾರದೆಂಬಾಸೆ. ನಿನ್ನ ಆರುಮೆ ಅಮೂರ್ತ !ಅರಿವಿದೆ ನನಗೆ.ಅರ್ಥಕಪಾರ್ಥ ಕಲ್ಪಿಸುವಕಮಂಗಿ ತಿಮಿಂಗಿಲಗಳಹಸಿವಿಗಹಾರ ನೀನಾಗ ಬಾರದೆಂಬಾಸೆ ಒಂದೇ ವಾಕ್ಯದಲ್ಲೊಮ್ಮೆಮರಣಕ್ಕೆ ಮದ್ದಿಲ್ಲನನ್ನೊಲುಮೆಗೆ ಸಾವಿಲ್ಲ ಎಂದುನೀ ಉಸುರ ಬೇಕೆಂಬಾಸೆ ಬಿಂದುಗಳಿಂದಲೇ ಬಿಗಿದ ನಿನ್ನ ಕಣ್ಣುಗಳಿಂದನನ್ನ ನೋಡುತ್ತಾ..ನನ್ನ ಹಣೆಬರಹ ದಲ್ಲಿಲ್ಲದ ನೀನು ನನ್ನಹಣೆಗೊಮ್ಮೆ ಮುತ್ತಿಕ್ಕಿ ಮಣ್ಣಿನಾ ದೇಹತಣ್ಣಗೆ ಮಣ್ಣಿಗೆ ಕಳಿಸುವೆ ಎಂಬಾಸೆ ಇಮಾಮ್ ಮದ್ಗಾರ

ಇಮಾಮ್ ಮದ್ಗಾರ ಅವರ “ಆಸೆ ( ಅತಿಯಾಸೆ)” Read Post »

ಅಂಕಣ ಸಂಗಾತಿ, ಗಾದೆಗಳ ಗಣಿ

ಅಂಕಣ ಸಂಗಾತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಗಾದೆಗಳ ಗಣಿ *ಪಂಜರದಲ್ಲಿ ಕಾಗೆ ಇಟ್ಟರೆ ಪಂಚಮ ಸ್ವರ ಕೊಟ್ಟೀತೆ? “ಹುಟ್ಟಿನಿಂದ ಬಂದ ಗುಣ ಅಥವಾ ನೈಜ ಸ್ವಭಾವವನ್ನು ಎಂತಹ ಭವ್ಯ ಪರಿಸರದಲ್ಲೇ ಇಟ್ಟರೂ ಬದಲಾಯಿಸಲು ಸಾಧ್ಯವಿಲ್ಲ.” ಈ ಅನುಭವದ ಸಾರವನ್ನು ಹಿಡಿದಿಟ್ಟ ಗಾದೆಗಳು ನಮಗೆ ನೀಡಿದ ಅಮೂಲ್ಯ ಜ್ಞಾನದ ಮುತ್ತುಗಳು. ಹನಿ ಹನಿ ಸೇರಿದರೆ ಹಳ್ಳವಾಗುವಂತೆ, ಸಣ್ಣ ಸಾಲುಗಳಲ್ಲಿ ಇಡೀ ಜಗತ್ತಿನ ಸತ್ಯವನ್ನು ದರ್ಶಿಸುವ ಶಕ್ತಿ ಗಾದೆ ಮಾತಿನಲ್ಲಿವೆ. ಅಂತಹ ಅದ್ಭುತ ಗಾದೆಗಳಲ್ಲಿ “ಪಂಜರದಲ್ಲಿ ಕಾಗೆ ಇಟ್ಟರೆ ಪಂಚಮ ಸ್ವರ ಕೊಟ್ಟೀತೆ?” ಎನ್ನುವುದು ಪ್ರಮುಖವಾದದ್ದು. ಇದು ಕೇವಲ ಪಕ್ಷಿ ಪ್ರಪಂಚಕ್ಕೆ ಸೀಮಿತವಾಗದೆ, ಮನುಷ್ಯನ ಸಹಜ ಗುಣ, ಯೋಗ್ಯತೆ ಮತ್ತು ಅಹಂಕಾರದ ಮುಖವಾಡಗಳನ್ನು ಕಳಚಿಡುವ ಒಂದು ತತ್ವವಾಗಿದೆ.​​ಕಾಗೆಯ ಸ್ವರ ಬಹು ಕರ್ಕಶ ಧ್ವನಿ, ಸಾಮಾನ್ಯತೆ ಅಥವಾ ಕೀಳು ಗುಣದ ಸಂಕೇತ ಇಲ್ಲಿ ಕಾಗೆಯನ್ನು ಕೀಳಾಗಿ ಕಾಣುವುದಕ್ಕಿಂತ ಅದರ ಸಹಜ ಗುಣವನ್ನು ಗುರುತಿಸುವುದು ಮುಖ್ಯ.​ಪಂಜರ (ಚಿನ್ನದ ಪಂಜರ): ಇದು ವೈಭೋಗ, ಕೃತಕವಾಗಿ ಸೃಷ್ಟಿಸಿದ ಉನ್ನತ ಪರಿಸರ ಅಥವಾ ಯೋಗ್ಯತೆಗೂ ಮೀರಿದ ಸ್ಥಾನದ ಸಂಕೇತ.​ಪಂಚಮ ಸ್ವರದ ವಿಶೇಷತೆ ಎಂದರೆ ಸಂಗೀತದ ಅತ್ಯಂತ ಮಧುರವಾದ, ಕೋಗಿಲೆಯು ಹೊರಡಿಸುವ ಶ್ರೇಷ್ಠ ಧ್ವನಿಯ ಸಂಕೇತ.​ಕೋಗಿಲೆಯನ್ನು ಚಿನ್ನದ ಪಂಜರದಲ್ಲಿಟ್ಟರೆ ಅದು ತನ್ನ ಮಧುರವಾದ ಪಂಚಮ ಸ್ವರದಿಂದ ಹಾಡುತ್ತದೆ. ಆದರೆ, ಕಾಗೆಯನ್ನು ತಂದು ಎಷ್ಟೇ ದುಬಾರಿ, ರತ್ನಖಚಿತ ಪಂಜರದಲ್ಲಿ ಕೂರಿಸಿದರೂ ಅದು ತನ್ನ ಸಹಜ ಗುಣವಾದ ‘ಕಾವ್ ಕಾವ್’ ಎಂಬ ಕರ್ಕಶ ಧ್ವನಿಯನ್ನೇ ಹೊರಡಿಸುತ್ತದೆಯೇ ಹೊರತು ಕೋಗಿಲೆಯಂತೆ ಹಾಡಲು ಸಾಧ್ಯವಿಲ್ಲ.​ನೈಜ ಸ್ವಭಾವ ಮತ್ತು ಪರಿಸರದ ಮಿತಿ​ಮಾನವನ ವ್ಯಕ್ತಿತ್ವ ವಿಕಸನದಲ್ಲಿ ಪರಿಸರ ಮತ್ತು ವಂಶವಾಹಿ (ಹುಟ್ಟುಗುಣ) ಎರಡೂ ಪಾತ್ರ ವಹಿಸುತ್ತವೆ. ಆದರೆ ಕೆಲವು ಮೂಲಭೂತ ಗುಣಗಳು ಹುಟ್ಟಿನಿಂದಲೇ ರಕ್ತಗತವಾಗಿ ಬಂದಿರುತ್ತವೆ. ಹೊರಗಿನ ಆಡಂಬರ, ಸಂಪತ್ತು ಅಥವಾ ಉನ್ನತ ಹುದ್ದೆಗಳು ಮನುಷ್ಯನ ಬಾಹ್ಯ ರೂಪವನ್ನು ಬದಲಾಯಿಸಬಹುದೇ ಹೊರತು ಆತನ ಆಂತರಿಕ ಯೋಗ್ಯತೆ ಅಥವಾ ದುರ್ಗುಣವನ್ನು ಬದಲಾಯಿಸಲಾರವು.​ಒಬ್ಬ ಅಯೋಗ್ಯನಿಗೆ ರಾಜಸಿಂಹಾಸನವನ್ನು ನೀಡಿದರೂ ಆತ ಯೋಚಿಸುವ ರೀತಿ ಮತ್ತು ನಡೆದುಕೊಳ್ಳುವ ರೀತಿ ಆತನ ಅಲ್ಪತನವನ್ನೇ ಪ್ರದರ್ಶಿಸುತ್ತದೆ. ಕೆಸರಿನಲ್ಲಿ ಹುಟ್ಟಿದ ಕಮಲ ಪವಿತ್ರವಾಗುತ್ತದೆ, ಆದರೆ ಹಾವಿಗೆ ಹಾಲನ್ನು ಕುಡಿಸಿದರೂ ವಿಷವೇ ಹೊರಬರುತ್ತದೆ ವಿನಃ ಅಮೃತವಲ್ಲ. ಹಾಗೆಯೇ, ಆಂತರಿಕವಾಗಿ ಸಂಸ್ಕಾರವಿಲ್ಲದ ವ್ಯಕ್ತಿಯನ್ನು ಅತ್ಯುನ್ನತ ಸಮಾಜದಲ್ಲಿ ಕೂರಿಸಿದರೂ ಆತನ ನೈಜ ಗುಣ ಒಂದಲ್ಲಾ ಒಂದು ದಿನ ಹೊರಬಂದೇ ತೀರುತ್ತದೆ.​ಸಾಮಾಜಿಕ ಮತ್ತು ರಾಜಕೀಯ ಪ್ರಸ್ತುತತೆಯಲ್ಲಿನ​ಇಂದಿನ ಆಧುನಿಕ ಸಮಾಜಕ್ಕೆ ಈ ಗಾದೆ ಮಾತು ಅತ್ಯಂತ ಪ್ರಸ್ತುತವಾಗಿದೆ. ಇಂದು ಹಣ, ಅಧಿಕಾರ ಅಥವಾ ವಂಶಪಾರಂಪರ್ಯದ ಪ್ರಭಾವದಿಂದ ಅನೇಕರು ಉನ್ನತ ಸ್ಥಾನಗಳನ್ನು ಸುಲಭವಾಗಿ ಪಡೆದುಕೊಳ್ಳುತ್ತಾರೆ. ಆದರೆ ಆ ಸ್ಥಾನಕ್ಕೆ ಬೇಕಾದ ಅರ್ಹತೆ, ಕರುಣೆ, ವಿವೇಕ ಅವರಲ್ಲಿ ಇರುವುದಿಲ್ಲ.​ರಾಜಕೀಯದಲ್ಲಿ ಅರ್ಹತೆಯಿಲ್ಲದ ನಾಯಕನಿಗೆ ಎಷ್ಟೇ ದೊಡ್ಡ ಅಧಿಕಾರ ನೀಡಿದರೂ ಆತ ಜನಕಲ್ಯಾಣ ಮಾಡಲಾರ. ಆತನ ಭ್ರಷ್ಟ ಮತ್ತು ದುರಹಂಕಾರದ ಗುಣಗಳು ಹೊರಬೀಳುತ್ತವೆ. ಇದು ಕಾಗೆಯನ್ನು ಪಂಜರದಲ್ಲಿಟ್ಟಂತೆ.​ಶಿಕ್ಷಣ ಮತ್ತು ಉದ್ಯೋಗದಲ್ಲಿಯೂ ಅಷ್ಟೆ .ಕೇವಲ ಶಿಫಾರಸಿನಿಂದ ದೊಡ್ಡ ಹುದ್ದೆ ಪಡೆದ ವ್ಯಕ್ತಿ ಆ ಕೆಲಸದಲ್ಲಿ ಸೃಜನಶೀಲತೆ ತೋರಿಸಲು ಸಾಧ್ಯವಿಲ್ಲ. ಸಾಮರ್ಥ್ಯವಿಲ್ಲದವನಿಗೆ ಐಷಾರಾಮಿ ಕಚೇರಿ (ಪಂಜರ) ಕೊಟ್ಟರೂ ಆತನಿಂದ ಗುಣಮಟ್ಟದ ಕೆಲಸ (ಪಂಚಮ ಸ್ವರ) ನಿರೀಕ್ಷಿಸಲು ಸಾಧ್ಯವಿಲ್ಲ.​​ಈ ಗಾದೆಯು ನಮಗೆ ಕೃತಕತೆ ಮತ್ತು ನೈಸರ್ಗಿಕತೆಯ ನಡುವಿನ ವ್ಯತ್ಯಾಸವನ್ನು ತಿಳಿಸಿಕೊಡುತ್ತದೆ. ಕಾಗೆಗೆ ತನ್ನದೇ ಆದ ಮಹತ್ವವಿದೆ—ಅದು ಪರಿಸರವನ್ನು ಸ್ವಚ್ಛಗೊಳಿಸುತ್ತದೆ, ಪಿತೃಕಾರ್ಯಗಳಲ್ಲಿ ಅದಕ್ಕೆ ಪ್ರಾಧಾನ್ಯತೆಯಿದೆ. ಆದರೆ, ಅದರ ಮಿತಿ ಅದಕ್ಕಿದೆ. ಕಾಗೆ ಕೋಗಿಲೆಯಾಗಲು ಯತ್ನಿಸುವುದು ಕೃತಕತೆ.​ಅದೇ ರೀತಿ, ಮನುಷ್ಯ ತಾನು ಅಲ್ಲದೇ ಇರುವುದನ್ನು ತೋರಿಸಿಕೊಳ್ಳಲು ‘ಮುಖವಾಡ’ ಧರಿಸಿದಾಗ ಈ ಗಾದೆ ಅನ್ವಯಿಸುತ್ತದೆ. ಎಷ್ಟೇ ಶ್ರೀಮಂತಿಕೆಯ ಪ್ರದರ್ಶನ ಮಾಡಿದರೂ, ಆಚಾರ-ವಿಚಾರಗಳಲ್ಲಿ ಸಂಸ್ಕಾರವಿಲ್ಲದಿದ್ದರೆ ಆ ಶ್ರೀಮಂತಿಕೆ ವ್ಯರ್ಥ. ಬೂದಿಗೆ ತುಪ್ಪ ಸುರಿದರೆ ಹೋಮವಾಗುವುದಿಲ್ಲ, ಹಾಗೆಯೇ ಸಂಸ್ಕಾರಹೀನನಿಗೆ ಸಕಲ ಸೌಲಭ್ಯ ನೀಡಿದರೂ ಆತ ಸತ್ಪ್ರಜೆಯಾಗಲಾರ.​ಸಾಹಿತ್ಯಿಕ ಮತ್ತು ಆಧ್ಯಾತ್ಮಿಕ ದೃಷ್ಟಿಕೋನ​ಕನ್ನಡದ ಅನೇಕ ಶರಣರು ಮತ್ತು ದಾಸರು ಈ ಕಲ್ಪನೆಯನ್ನು ತಮ್ಮ ವಚನ ಹಾಗೂ ಕೀರ್ತನೆಗಳಲ್ಲಿ ಬಳಸಿದ್ದಾರೆ.​”ಕಾಗೆಯ ತಂದು ಪಂಜರದೊಳಗಿಟ್ಟರೆ ಕೋಗಿಲೆಯಾಗಬಲ್ಲದೇ?”​ಎಂದು ಜಗತ್ತಿನ ಕೃತಕತೆಯನ್ನು ವಚನಕಾರರು ಪ್ರಶ್ನಿಸಿದ್ದಾರೆ. ಆಧ್ಯಾತ್ಮಿಕವಾಗಿ, ಮನಸ್ಸಿನಲ್ಲಿ ಕಾಮ, ಕ್ರೋಧ, ಲೋಭಗಳೆಂಬ ಮಲಿನತೆ ತುಂಬಿರುವಾಗ, ದೇಹಕ್ಕೆ ಕಾವಿ ಬಟ್ಟೆ ಧರಿಸಿದ ತಕ್ಷಣ ಅಥವಾ ದೇವಸ್ಥಾನದೊಳಗೆ ಕುಳಿತ ತಕ್ಷಣ ಒಬ್ಬ ವ್ಯಕ್ತಿ ಮಹಾತ್ಮನಾಗಲು ಸಾಧ್ಯವಿಲ್ಲ. ಅಂತರಂಗ ಶುದ್ಧಿಯಾಗದ ಹೊರತು ಬಹಿರಂಗದ ಆಡಂಬರವೆಲ್ಲವೂ ಶೂನ್ಯ. ಕಾಗೆಯ ಕಪ್ಪು ಬಣ್ಣವನ್ನು ತೊಳೆದರೆ ಬಿಳಿಯಾಗುವುದಿಲ್ಲ, ಹಾಗೆಯೇ ದುರ್ಬುದ್ಧಿಯುಳ್ಳವನಿಗೆ ತೀರ್ಥಸ್ನಾನ ಮಾಡಿಸಿದರೂ ಆತನ ಪಾಪ ಅಥವಾ ಕುಟಿಲತೆ ದೂರವಾಗುವುದಿಲ್ಲ.ಪಂಜರದಲ್ಲಿ ಕಾಗೆ ಇಟ್ಟರೆ ಪಂಚಮ ಸ್ವರ ಕೊಟ್ಟೀತೆ? ಎಂಬ ಮಾತು ನಮಗೆ ಬದುಕಿನ ದೊಡ್ಡ ಸತ್ಯವನ್ನು ಬೋಧಿಸುತ್ತದೆ.​ಸ್ವಯಂ ಅರಿವು ಉಂಟಾಗುತ್ತದೆ.ನಾವು ಯಾರೋ ಆಗಲು ಪ್ರಯತ್ನಿಸದೇ, ನಮ್ಮ ನೈಜ ಸಾಮರ್ಥ್ಯವನ್ನು ಗುರುತಿಸಿ ಬೆಳೆಯಬೇಕು.​ ಬಾಹ್ಯ ವೈಭವವನ್ನು ನೋಡಿ ವ್ಯಕ್ತಿಯನ್ನು ಅಳೆಯಬಾರದು, ಆತನ ಆಂತರಿಕ ಯೋಗ್ಯತೆ ಮತ್ತು ನಡತೆಗೆ ಬೆಲೆ ಕೊಡಬೇಕು.​ಕೇವಲ ಪರಿಸರ ಬದಲಾದರೆ ಸಾಲದು, ವ್ಯಕ್ತಿಯ ಆಂತರಿಕ ಗುಣ ಮತ್ತು ಯೋಚನಾ ಲಹರಿ ಬದಲಾಗಬೇಕು.ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮಿತಿಯನ್ನು ಅರಿತು, ಕೃತಕ ಮುಖವಾಡಗಳನ್ನು ಕಳಚಿ ಹಾಕಿ, ಸತ್ಸಂಗ ಮತ್ತು ಸದ್ವಿಚಾರಗಳ ಮೂಲಕ ತನ್ನ ಆಂತರಿಕ ಗುಣವನ್ನು ಕೋಗಿಲೆಯಂತೆ ಮಧುರವಾಗಿಸಿಕೊಳ್ಳಲು ಪ್ರಯತ್ನಿಸಬೇಕು. ​ಈ ಮಾತು ಮನುಷ್ಯನ ಆಂತರಿಕ ಪ್ರಕೃತಿ ಮತ್ತು ಬಾಹ್ಯ ಪ್ರಭಾವಗಳ ನಡುವಿನ ಸಂಘರ್ಷವನ್ನು ಪ್ರತಿಬಿಂಬಿಸುತ್ತದೆ. ಆಧುನಿಕ ಮನಃಶಾಸ್ತ್ರದಲ್ಲಿ ಇದನ್ನು ಹುಟ್ಟುಗುಣ ಅಥವಾ ಬೆಳೆಸಿದ ವಾತಾವರಣ ಎನ್ನಲಾಗುತ್ತದೆ. ​ ಇಂದು ಜಗತ್ತು ಕೇವಲ ‘ಪಂಜರ’ಗಳನ್ನು ಅಂದರೆ ಬ್ಯಾಂಕ್ ಬ್ಯಾಲೆನ್ಸ್, ಐಷಾರಾಮಿ ಕಾರುಗಳು, ಬ್ರ್ಯಾಂಡೆಡ್ ಬಟ್ಟೆಗಳನ್ನು ನೋಡಿ ವ್ಯಕ್ತಿಯ ಯೋಗ್ಯತೆಯನ್ನು ಅಳೆಯುತ್ತದೆ. ಆದರೆ, ಮಾನಸಿಕವಾಗಿ ವಿಕಾಸಗೊಳ್ಳದ, ಸಣ್ಣತನದ ಯೋಚನೆ ಇರುವ ವ್ಯಕ್ತಿಯನ್ನು ಎಷ್ಟೇ ದೊಡ್ಡ ಶ್ರೀಮಂತಿಕೆಯಲ್ಲಿ ಇಟ್ಟರೂ ಆತನ ಮಾತುಗಳು ಮತ್ತು ವರ್ತನೆಗಳು ಕಾಗೆಯ ಕರ್ಕಶ ಧ್ವನಿಯಂತೆಯೇ ಇರುತ್ತವೆ.ಕಾಗೆಯು, ಕೋಗಿಲೆಯನ್ನು ನೋಡಿ ನಕಲು ಮಾಡಲು ಸಾಧ್ಯವಿಲ್ಲ. ಇಂದಿನ ಯುವ ಪೀಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಇತರರ ಜೀವನವನ್ನು ನೋಡಿ ತಾವೂ ಹಾಗೆಯೇ ಬದುಕಲು ಕೃತಕವಾಗಿ ಪ್ರಯತ್ನಿಸುತ್ತಿದೆ. ತನ್ನ ಮೂಲ ಅಸ್ತಿತ್ವವನ್ನು ಮರೆತು, ಬೇರೊಬ್ಬರ ಮುಖವಾಡ ಧರಿಸಿದಾಗ ಮನುಷ್ಯ ತನ್ನ ನೈಜ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಕಾಗೆಗೆ ತನ್ನದೇ ಆದ ಸ್ವಾತಂತ್ರ್ಯವಿದೆ, ಆದರೆ ಅದು ಕೋಗಿಲೆಯಾಗಲು ಹೋದಾಗ ಮಾತ್ರ ಹಾಸ್ಯಾಸ್ಪದವಾಗುತ್ತದೆ.​​ಕುಟುಂಬ ಮತ್ತು ಸಂಸ್ಕಾರದ ಹಿನ್ನೆಲೆಯಲ್ಲಿ ಈ ಗಾದೆಗೆ ಭಿನ್ನವಾದ ಅರ್ಥವಿದೆ. ಕೇವಲ ಶ್ರೀಮಂತ ಅಥವಾ ಪ್ರಭಾವಿ ಕುಟುಂಬದಲ್ಲಿ ಹುಟ್ಟಿದ ತಕ್ಷಣ ಒಬ್ಬ ವ್ಯಕ್ತಿಗೆ ಯೋಗ್ಯತೆ ಬಂದುಬಿಡುವುದಿಲ್ಲ. ಸಮಾಜದಲ್ಲಿ ದೊಡ್ಡ ಮನೆತನದಲ್ಲಿ ಹುಟ್ಟಿ, ಸಕಲ ಸೌಕರ್ಯಗಳ ಮಧ್ಯೆ ಬೆಳೆದ ಎಷ್ಟೋ ಮಕ್ಕಳು ದುಶ್ಚಟಗಳಿಗೆ ದಾಸರಾಗಿ, ಸಮಾಜಕ್ಕೆ ಕಂಟಕರಾಗುವುದನ್ನು ನಾವು ನೋಡುತ್ತೇವೆ. ಇಲ್ಲಿ ‘ದೊಡ್ಡ ಮನೆತನ’ ಎನ್ನುವುದು ಚಿನ್ನದ ಪಂಜರ ಇದ್ದಂತೆ. ಆದರೆ ಆ ಮಗುವಿನಲ್ಲಿ ಮೂಲತಃ ಒಳ್ಳೆಯ ಗುಣ, ವಿನಯ ಮತ್ತು ಸಂಸ್ಕಾರ ಇಲ್ಲದಿದ್ದರೆ, ಆತ ಸಮಾಜದಲ್ಲಿ ‘ಪಂಚಮ ಸ್ವರ’ದಂತಹ ಕೀರ್ತಿಯನ್ನು ತರಲಾರ.​ ರಾಜನ ಮಗ ರಾಜನಾಗಬಹುದು, ಆದರೆ ಆತ ಪ್ರಜಾವತ್ಸಲನಾದ ನಾಯಕನಾಗಲು ಸಾಧ್ಯವಿಲ್ಲ. ಸಾಮರ್ಥ್ಯವಿಲ್ಲದ ಉತ್ತರಾಧಿಕಾರಿಗೆ ಎಷ್ಟೇ ದೊಡ್ಡ ಸಾಮ್ರಾಜ್ಯವನ್ನು ಹಸ್ತಾಂತರಿಸಿದರೂ ಆತ ಅದನ್ನು ನಾಶ ಮಾಡುತ್ತಾನೆಯೇ ಹೊರತು ರಕ್ಷಿಸುವುದಿಲ್ಲ. ಯೋಗ್ಯತೆಯನ್ನು ತರಬೇತಿಯಿಂದ ಕೊಡಬಹುದೇ ಹೊರತು, ಜನ್ಮಸಿದ್ಧ ಹಕ್ಕಾಗಿ ಅಥವಾ ಆಸ್ತಿಯ ರೂಪದಲ್ಲಿ ವರ್ಗಾಯಿಸಲು ಸಾಧ್ಯವಿಲ್ಲ.​​ಕಲೆ ಮತ್ತು ಸಾಹಿತ್ಯದ ಲೋಕದಲ್ಲಿ ಈ ಗಾದೆಯು ‘ಪ್ರತಿಭೆ’ ಮತ್ತು ‘ಅವಕಾಶ’ಗಳ ನಡುವಿನ ಸಂಬಂಧವನ್ನು ವಿವರಿಸುತ್ತದೆ. ​ಕಲೆ ಎನ್ನುವುದು ದೈವದತ್ತವಾದದ್ದು ಮತ್ತು ಕಠಿಣ ಪರಿಶ್ರಮದಿಂದ ಒಲಿಯುವಂತದ್ದು. ಇಂದು ಕಲಾ ಜಗತ್ತಿನಲ್ಲಿ ಅಥವಾ ಸಿನಿಮಾ ರಂಗದಲ್ಲಿ ಯಾವುದೇ ಪ್ರತಿಭೆಯಿಲ್ಲದ ವ್ಯಕ್ತಿಗೆ ಹಣದ ಬಲದಿಂದ ದೊಡ್ಡ ಅವಕಾಶಗಳನ್ನು ಸೃಷ್ಟಿಸಿಕೊಡಬಹುದು. ಆದರೆ, ಜನಮನ ಗೆಲ್ಲುವಂತಹ ‘ಪಂಚಮ ಸ್ವರ’ವನ್ನು ಸೃಷ್ಟಿಸಲು ಆತನಿಗೆ ಸಾಧ್ಯವಾಗುವುದಿಲ್ಲ. ನೈಜ ಪ್ರತಿಭೆಯಿಲ್ಲದ ನಟನೆ ಅಥವಾ ಸಂಗೀತ ಕೃತಕವಾಗಿ ಕಾಣುತ್ತದೆ.ಕಾಗೆ ಕಪ್ಪಗಿದ್ದರೂ ಸಮಾಜಕ್ಕೆ ಅದರದೇ ಆದ ಕೊಡುಗೆಯಿದೆ. ಆದರೆ ಅದನ್ನು ಕೋಗಿಲೆಯ ಸ್ಥಾನದಲ್ಲಿ ಕೂರಿಸುವುದು ಕಲೆಯ ಅಪಚಾರವಾಗುತ್ತದೆ. ಅದೇ ರೀತಿ, ಅನರ್ಹರಿಗೆ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಉನ್ನತ ಪೀಠದಲ್ಲಿ ಕೂರಿಸಿದಾಗ ಇಡೀ ಸಾಂಸ್ಕೃತಿಕ ವ್ಯವಸ್ಥೆಯೇ ಹದಗೆಡುತ್ತದೆ ಎಂಬುದನ್ನು ಈ ಗಾದೆ ಎಚ್ಚರಿಸುತ್ತದೆ.​​ನಮ್ಮ ಭಾರತೀಯ ದರ್ಶನಗಳಲ್ಲಿ ಅಥವಾ ವೇದಾಂತದಲ್ಲಿ ಈ ಗಾದೆಗೆ ಅತ್ಯಂತ ಆಳವಾದ ತಾತ್ವಿಕ ಹಿನ್ನೆಲೆಯಿದೆ. ಇಲ್ಲಿ ಪಂಜರ ಎನ್ನುವುದು ‘ಐಹಿಕ ಜಗತ್ತು’ ಅಥವಾ ‘ದೇಹ’, ಕಾಗೆ ಎನ್ನುವುದು ‘ಅಹಂಕಾರ’ ಅಥವಾ ‘ಅಜ್ಞಾನ’.​ಅಂತರಂಗದ ಶುದ್ಧಿಯೆನ್ನಬಹುದು. ಮನುಷ್ಯನು, ಕಾಶಿ, ರಾಮೇಶ್ವರ ಅಥವಾ ಮಕ್ಕಾಗೆ ಹೋಗಿ ಪವಿತ್ರ ತೀರ್ಥಗಳಲ್ಲಿ ಸ್ನಾನ ಮಾಡಿದರೂ ಆತನ ಮನಸ್ಸಿನಲ್ಲಿರುವ ಕ್ರೌರ್ಯ, ಅಸೂಯೆ ಮತ್ತು ಕಾಮನೆಗಳು ದೂರವಾಗುವುದಿಲ್ಲ. ದೇಹಕ್ಕೆ ಚಂದನ ಸವರಿದರೂ ಒಳಗಿರುವ ಕೊಳಕು ನಾಶವಾಗುವುದಿಲ್ಲ. ಧಾರ್ಮಿಕ ಆಚರಣೆಗಳು ಕೇವಲ ಬಾಹ್ಯ ಪಂಜರದಂತೆ. ಮನಸ್ಸು ಶುದ್ಧವಾಗದ ಹೊರತು ಭಗವಂತನ ಸಾಕ್ಷಾತ್ಕಾರವೆಂಬ ಪಂಚಮ ಸ್ವರ ಹೊರಹೊಮ್ಮಲು ಸಾಧ್ಯವಿಲ್ಲ. ​ ಹಿಂದೂ ತತ್ತ್ವಶಾಸ್ತ್ರದ ಪ್ರಕಾರ, ಮನುಷ್ಯ ತನ್ನ ಹಿಂದಿನ ಜನ್ಮಗಳ ‘ವಾಸನೆ’ (ಗುಣಗಳು) ಮತ್ತು ಕರ್ಮಗಳನ್ನು ಹೊತ್ತು ತರುತ್ತಾನೆ. ಆ ಹುಟ್ಟುಗುಣವನ್ನು ಕೇವಲ ಬಾಹ್ಯ ಪರಿಸರದಿಂದ ಬದಲಾಯಿಸುವುದು ಕಷ್ಟ. ಕಟುಕನ ಕೈಯಲ್ಲಿರುವ ಕತ್ತಿಗೆ ಚಿನ್ನದ ಹಿಡಿ ಹಾಕಿದರೂ ಅದು ರಕ್ತವನ್ನೇ ಹರಿಸುತ್ತದೆಯೆ ಹೊರತು ಕಬ್ಬಿನ ಹಾಲನ್ನು ಹರಿಸಲಾರದು .ಹಾಗೆಯೇ, ತಾಮಸ ಗುಣವುಳ್ಳ ವ್ಯಕ್ತಿಗೆ ಸಾತ್ವಿಕ ವಾತಾವರಣ ಕಲ್ಪಿಸಿದರೂ ಆತನ ಆಲೋಚನೆಗಳು ತಾಮಸಿಕವಾಗಿಯೇ ಇರುತ್ತವೆ.​ಜಾಗತಿಕ ಮಟ್ಟದಲ್ಲಿ ಅಥವಾ ಇಂದಿನ ಸಾಂಸ್ಥಿಕ ವ್ಯವಸ್ಥೆಯಲ್ಲಿ ಈ ಗಾದೆ ಅತ್ಯಂತ ಮಾರ್ಮಿಕವಾದ ವಿಡಂಬನೆಯನ್ನು ಮಾಡುತ್ತದೆ.​ಪದವಿಗಳು ಮತ್ತು ಪ್ರಬುದ್ಧತೆಗಳಿಗೂ ಬೇರೆ ಮಾತು ಹೇಳಬೇಕಾಗಿಲ್ಲ. ಇಂದು ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಿಂದ ಲಕ್ಷಾಂತರ ರೂಪಾಯಿ ಕೊಟ್ಟು ಪದವಿ (Degrees) ಪಡೆದವರು ದೇಶದಲ್ಲಿದ್ದಾರೆ. ಈ ಪದವಿಗಳು ಕೇವಲ ಒಂದು ಪಂಜರವಿದ್ದಂತೆ. ಆದರೆ, ಸಮಾಜಕ್ಕೆ ಬೇಕಾದ ಕರುಣೆ, ನೈತಿಕತೆ, ಮತ್ತು ದೇಶಪ್ರೇಮ ಅವರಲ್ಲಿ ಇಲ್ಲದಿದ್ದರೆ ಆ ಶಿಕ್ಷಣಕ್ಕೆ ಯಾವುದೇ ಬೆಲೆಯಿರುವುದಿಲ್ಲ. ಜ್ಞಾನವಿದ್ದಲ್ಲಿ ವಿನಯವಿರಬೇಕು, ಆದರೆ ಕೇವಲ ಅಹಂಕಾರದ ‘ಕಾವ್ ಕಾವ್’ ಧ್ವನಿ ಕೇಳಿಬಂದರೆ ಆ ಶಿಕ್ಷಣ ಸಂಪೂರ್ಣ ವಿಫಲ ಎಂದರ್ಥ.​ವ್ಯವಸ್ಥೆಯ ವೈಫಲ್ಯವು ಎಷ್ಟು ಕೆಟ್ಟು ಹೋಗಿದೆ ಎಂದರೆ, ಯಾವುದೇ ಒಂದು ಸಂಸ್ಥೆಯಲ್ಲಿ ಪ್ರಾಮಾಣಿಕ ಹಾಗೂ ದಕ್ಷ ನೌಕರನನ್ನು ಮೂಲೆಗುಂಪು ಮಾಡಿ, ಕೇವಲ ಹಿತೈಷಿ ಅಥವಾ ಚಮಚಾಗಿರಿ ಮಾಡುವ ವ್ಯಕ್ತಿಗೆ ಉನ್ನತ ಮ್ಯಾನೇಜರ್ ಹುದ್ದೆ ನೀಡಿದರೆ ಆ ಸಂಸ್ಥೆ ದಿವಾಳಿಯಾಗುತ್ತದೆ. ಕಾಗೆಯನ್ನು ಸಿಂಹಾಸನದ ಮೇಲೆ ಕೂರಿಸಿದಾಗ ಇಡೀ ಸಾಮ್ರಾಜ್ಯವೇ ಪತನದ ಹಾದಿ ಹಿಡಿಯುತ್ತದೆ ಎಂಬ ರಾಜನೀತಿಯ ಸತ್ಯವನ್ನು ಇದು ಜ್ಞಾಪಿಸುತ್ತದೆ.​​ಈ ಗಾದೆ ಮಾತು ಕೇವಲ ನಕಾರಾತ್ಮಕವಾಗಿ ಕಾಗೆಯನ್ನು ನಿಂದಿಸುವ ಮಾತಲ್ಲ; ಬದಲಿಗೆ ಇದು ಪ್ರಕೃತಿಯ ನಿಯಮವನ್ನು ಎತ್ತಿಹಿಡಿಯುವ ಸತ್ಯ. “ಯಾರಿಗೆ ಎಲ್ಲಿ ಗೌರವ ಸಿಗಬೇಕೋ ಅಲ್ಲಿ ಸಿಗಬೇಕು ಮತ್ತು ಯಾರು ತಮ್ಮ ನೈಜ ಗುಣಕ್ಕೆ ತಕ್ಕಂತೆ ಬದುಕಬೇಕೋ ಹಾಗೆ ಬದುಕಬೇಕು.”​ಕಾಗೆ ಮುಕ್ತವಾಗಿ ಆಕಾಶದಲ್ಲಿ ಹಾರಾಡುತ್ತಾ ಪ್ರಕೃತಿಯನ್ನು ಸ್ವಚ್ಛಗೊಳಿಸುವಾಗ ಸುಂದರವಾಗಿರುತ್ತದೆ. ಅದನ್ನು ತಂದು ಪಂಜರದಲ್ಲಿಟ್ಟು ಕೋಗಿಲೆಯಾಗಲು ಒತ್ತಾಯಿಸುವುದು ಕಾಗೆಗೂ ಮಾಡುವ ಅನ್ಯಾಯ, ಪಂಜರಕ್ಕೂ ಮಾಡುವ ಅಪಚಾರ. ಆದ್ದರಿಂದ, ಪ್ರತಿಯೊಬ್ಬ ಮನುಷ್ಯನೂ ತನ್ನ ನೈಜ ಸಾಮರ್ಥ್ಯವನ್ನು ಅರಿತು, ಕೃತಕ ಆಡಂಬರಗಳಿಗೆ ಮಾರುಹೋಗದೆ, ತನ್ನ ಅಂತರಂಗವನ್ನು ಶುದ್ಧೀಕರಿಸಿಕೊಂಡು ಸಮಾಜಕ್ಕೆ ಉಪಕಾರಿಯಾಗುವ ‘ಪಂಚಮ

Read Post »

You cannot copy content of this page

Scroll to Top