ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ, ಮಕ್ಕಳ ವಿಭಾಗ

ಅರುಣಾ ರಾವ್ ವಿರಚಿತ ಮಕ್ಕಳನಾಟಕ “ಆದಿಕವಿ ಪಂಪ”

ಮಕ್ಕಳ ಸಂಗಾತಿ ಅರುಣಾ ರಾವ್ ಆದಿ ಕವಿಪಂಪ ತರಗತಿಯ ಸನ್ನಿವೇಶ. ವಿದ್ಯಾರ್ಥಿಗಳೆಲ್ಲರೂ ತಮ್ಮ ತಮ್ಮ ಸ್ಥಳಗಳಲ್ಲಿ ಕುಳಿತು ಗಟ್ಟಿಯಾಗಿ ಮಾತನಾಡುತ್ತಿದ್ದಾರೆ. ಕನ್ನಡ ಗುರುಗಳು ತರಗತಿಯ ಒಳಗೆ ಬರುತ್ತಲೇ ಸದ್ದು ನಿಂತು ಹೋಗುತ್ತದೆ. ವಿದ್ಯಾರ್ಥಿಗಳು ಎದ್ದು ನಿಂತು ‘ ನಮಸ್ಕಾರ ಗುರುಗಳೇ’ಎಂದು ವಂದಿಸಿದಾಗ, ಗುರುಗಳು ಕುಳಿತುಕೊಳ್ಳುವಂತೆ ಸನ್ನೆ ಮಾಡುತ್ತಾರೆ.) ಮೇಷ್ಟ್ರು : ( ತರಗತಿಯೊಳಗೆ ಒಮ್ಮೆ ಕಣ್ಣಾಡಿಸಿ) ಮೋಹನ ಸದ್ಯ, ಇವತ್ತಾದರೂ ಶಾಲೆಗೆ ಬಂದೆಯಲ್ಲ, ಐದು ದಿನಗಳಿಂದ ಎಲ್ಲಿಗೆ ಹೋಗಿದ್ದೆ? ಮೋಹನ:( ಎದ್ದು ನಿಂತು) ಸರ್, ನಮ್ಮ ಅಜ್ಜಿ ಊರಿಗೆ ಹೋಗಿದ್ದೆ ಸರ್ ಬನವಾಸಿಗೆ. ಅಲ್ಲಿಗೆ ಹೋದರೆ ಸಮಯ ಹೋಗೋದೇ ಗೊತ್ತಾಗಲ್ಲ ಸರ್.( ಹಲ್ಲು ಕಿರಿಯುವನು) ಗಿರಿಜ: ಸರ್ , ‘ಬನವಾಸಿ’ ಪಂಪ ಕವಿ ಜನಿಸಿದ ಊರು ಅಲ್ವಾ? ಮೇಷ್ಟ್ರು: ಹೌದು ಗಿರಿಜಾ, ಪಂಪ ಬರಿ ಕವಿಯಷ್ಠೇ ಅಲ್ಲ, ನಮ್ಮ ಕನ್ನಡದ ಆದಿಕವಿ.( ಎಂದು ಹೇಳುತ್ತಾ ಕಪ್ಪ ಹಲಗೆಯ ಮೇಲೆ ‘ಆದಿಕವಿ ಪಂಪ’ ಎಂದು ಬರೆಯುವರು). ಮೋಹನ ನಿಮ್ಮ ಊರು ಬನವಾಸಿನೇ ಅಲ್ವವೇ! ಪಂಪನ ಬಗ್ಗೆ ನಿನಗೆ ಏನು ತಿಳಿದಿದೆ ಹೇಳು ನೋಡೋಣ. ಮೋಹನ : ಸರ್ ಪಂಪ ೧೦ನೇ ಶತಮಾನದಲ್ಲಿ ಜೀವಿಸಿದ್ದರು. ಅವರ ಕೃತಿಯ ಒಂದು ಸಾಲನ್ನು ನಮ್ಮ ಅಜ್ಜ ಯಾವಾಗಲೂ ಹೇಳುತ್ತಿರ್ತಾರೆ. ನನಗೂ ಅದು ಕಂಠ ಪಾಠ ಆಗಿಹೋಗಿದೆ ಸರ್. ಮೇಷ್ಟ್ರು: ಯಾವುದಪ್ಪಾ ಆ ಸಾಲು? ಮೋಹನ: ( ಆವೇಶಭರಿತವಾದ ಧ್ವನಿಯಿಂದ)ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ” ಮೇಷ್ಟ್ರು : ಭೇಷ್ ಭೇಷ್ ಚೆನ್ನಾಗಿ ಹೇಳಿದೆ. ಅನನ್ಯ: ಸರ್, ನನಗೆ ಪಂಪ ಕವಿಯ ಬಗ್ಗೆ ಜಾಸ್ತಿ ತಿಳಿದುಕೊಳ್ಳಬೇಕೆಂಬ ಆಸೆ ಆಗ್ತಿದೆ. ಅವರ ಬಗ್ಗೆ ಹೇಳಿ ಸರ್. ಮೇಷ್ಟ್ರು: ಪಂಪನ ಬಗ್ಗೆ ಹೇಳಲು ಇಡೀ ದಿನನೇ ಸಾಲದು. ಪಂಪ ಮಹಾ ಕವಿಯು ‘ಅರಿಕೇಸರಿ’ ಎಂಬ ರಾಜನ ಆಸ್ಥಾನ ಕವಿಯಾಗಿದ್ದನು. ಇವನು ಬರೆದಿರುವ ಎರಡು ಮಹಾನ್ ಕೃತಿಗಳು ‘ಅದಿಪುರಾಣ’ ಮತ್ತು ‘ವಿಕ್ರಮಾರ್ಜುನ ವಿಜಯ’ಆದಿಪುರಾಣ’ ಇವನ‌ಮೊದಲ ಕಾವ್ಯ. ಇದು ಜೈನ ತೀರ್ಥಂಕರರ ಚರಿತ್ತೆಯನ್ನು ಒಳಗೊಂಡಿದೆ. ಕಾವ್ಯ: ಹಾಗಾದರೆ ವಿಕ್ರಮಾರ್ಜುನ ವಿಜಯ ಅಂದ್ರೆ ಏನು ಸರ್? ವಿಕ್ರಮ್-ಬೇತಾಳ ಕತೆಯಲ್ಲಿ ಬರುವ ವಿಕ್ರಮಾನ ಕತೇನಾ? ಮೇಷ್ಟ್ರು : ಅಲ್ಲ ಕಾವ್ಯ, ಇದೊಂದು ಮಹಾಭಾರತದ ಕಥೆ. ವಿಕ್ರಮಾರ್ಜುನ ವಿಜಯ ಅಂದರೆ ಪಾಂಡವರಲ್ಲಿ ಒಬ್ಬನಾದ ಅರ್ಜುನನ ವಿಜಯ. ಪಂಪ ಅರ್ಜುನನನ್ನು ತನ್ನ ಕಾವ್ಯದ ನಾಯಕನನ್ನಾಗಿ ಮಾಡಿಕೊಂಡನು. ಅದಕ್ಕಾಗಿ ತನ್ನ ಕಾವ್ಯವನ್ಬು ವಿಕ್ರಮಾರ್ಜುನ ವಿಜಯ ಎಂದು ಕರೆದನು. ಈ ಕೃತಿಗೆ ಇನ್ನೊಂದು ಹೆಸರೂ ಇದೆ ‘ಪಂಪ ಭಾರತಾ’ ಅಂತ. ಶಂಕರ: ಅಲ್ಲಾ ಗುರುಗಳೇ, ಅರ್ಜುನ ಹೇಗೆ ನಾಯಕ ಆಗ್ತಾನೆ? ಯುಧಿಷ್ಠಿರ ತಾನೆ ಹಿರಿಯವನು? ಮೇಷ್ಟ್ರು : ಹೌದು. ನೀನು ಹೇಳಿದ್ದು ಸರಿಯಾಗಿದೆ. ಆದರೆ ಇಲ್ಲಿ ಪಂಪ ಅರ್ಜುನನನ್ನು ತನ್ನ ಆಶ್ರಯದಾತನಾದ ಅರಿಕೇಸರಿ ರಾಜನ ಜೊತೆಗೆ ಹೋಲಿಕೆ ಮಾಡಿದ್ದಾನೆ. ಆದ್ದರಿಂದ ಕಾವ್ಯದ ಉದ್ದಕ್ಕೂ ಅರ್ಜುನನನ್ನು ಹೊಗಳುವ ರೀತಿ ತನ್ನ ಆಶ್ರಯದಾತನನ್ನು ಹಾಡಿ ಹೊಗಳಿದ್ದಾನೆ. ಅವನನ್ನೇ ಕೃತಿಯ ನಾಯಕನನ್ನಾಗಿ ಮಾಡಿಕೊಂಡಿದ್ದಾನೆ. “ಉಪ್ಪಿಟ್ಟವರನ್ನು ಮುಪ್ಪಿನ ತನಕ ನೆನೆ ಅಂತ ಗಾದೆ ಕೇಳಿಲ್ಲವೇ?” ಆಶ್ರಯದಾತ ಅರಿಕೇಸರಿ ಅಂದ್ರೂ ಇನ್ನಿಲ್ಲದ ಪ್ರೀತಿ ಜೊತೆಗೆ ತನ್ನ ಹುಟ್ಟೂರಾದ ಬನವಾಸಿನ ಕಂಡರೂ ಪಂಚಪ್ರಾಣಆಗಲೇ ಮೋಹನ ಹೇಳಿದನಲ್ಲಾ ಆ ಸಾಲನ್ನು ಕೇಳಿದಾಗ ಇದು ಚೆನ್ನಾಗಿ ಅರ್ಥವಾಗುತ್ತದೆ.. ಮೋಹನ: ( ತಲೆ ಕೆರೆದುಕೊಳ್ಳುತ್ತಾ). ಪಂಪ ಹೇಳಿದ ಮಾತಿನ ಅರ್ಥ ಏನು ಸರ್?(ಇಡೀ ತರಗತಿ ಗಟ್ಟಿಯಾಗಿ ನಗುವುದು) ಮೇಷ್ಟ್ರು: ಅರ್ಥ ತಿಳಿಯದೆಯೇ ಕಂಠ ಪಾಠ ಮಾಡಿದೆಯೋ? ಅದಕ್ಕೆ ಹಿರಿಯರು ಹೇಳೋದು “ಅರ್ಥ ಇಲ್ಲದ ಓದು ವ್ಯರ್ಥ” ಅಂತ. ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ”ಎಂದರೆ ಯಾರಾದರೂ ನನ್ನನ್ನು ಅಂಕುಶದಿಂದ ತಿವಿದಾಗಲೂ ನನಗೆ ಬನವಾಸಿಯ ನೆನಪಾಗುತ್ತದೆ ಎಂದು.ಅಲ್ಲದೆ” ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್” ಎಂದು ಬನವಾಸಿಯನ್ನು ತನ್ನ ಕೃತಿಯಲ್ಲಿ ಅಲ್ಲಲ್ಲಿ ನೆನೆಯುತ್ತಾನೆ. ಮರಿದುಂಬಿಯಾಗಿ, ಕೋಗಿಲೆಯಾಗಿ ಆದರೂ ನನ್ನ ಊರಿನಲ್ಲೇ ಬನವಾಸಿಯಲ್ಲೇ ಹುಟ್ಟಬೇಕು ಎಂಬುದು ಅವನ ಮಾತಿನ ಅರ್ಥ. ಶಂಕರ: ಇದೇನು ಪದ್ಯನೋ ಗದ್ಯಾನೋ ? ಮೇಷ್ಟು: ಇದು ಹಳೆಗನ್ಬಡ ಮಕ್ಕಳೇ. ಚಂಪೂ ಶೈಲಿ.ಇದರಲ್ಲಿ ಪದ್ಯನೂ ಇರುತ್ತೆ, ಗದ್ಯಾನೂ ಇರುತ್ತೆ. ಎರಡೂ ಮಿಶ್ರಿತವಾದ ಶೈಲಿಯನ್ನು ಚಂಪೂ ಶೈಲಿ ಅಂತ ಕರೀತೀವಿ. ಮಾಧುರಿ: ಇದು ತುಂಬಾ ಕಷ್ಟ ಅಲ್ಲವೇ ಸರ್? ಮೇಷ್ಟು: ಹಾಗೇನೂ ಇಲ್ಲ ಮಾಧುರಿ. ಓದಿ ಕಲಿತರೆ ಎಲ್ಲವೂ ಸುಲಭಾನೇ. ಪಂಪ ಹಾಕಿಕೊಟ್ಟ ದಾರಿಯಲ್ಲೇ ಅವನ ಸಮಕಾಲೀನರಾದ ರನ್ನ ಮತ್ತು ಪೊನ್ನ ಕೂಡ ತಮ್ಮ ಕೃತಿಗಳನ್ನು ರಚಿಸಿದ್ದಾರೆ. ಪಂಪ, ರನ್ನ ಮತ್ತು ಪೊನ್ನರನ್ನು ‘ರತ್ನತ್ರಯರು’ ಅಂತ ಕರೆಯುತ್ತಾರೆ. ಶಂಕರ: ಗುರುಗಳೇ ನನಗೂ ಒಮ್ಮೆ ಬನವಾಸಿಯನ್ನು ನೋಡಬೇಕೆನಿಸುತ್ತಿದೆ. ಮೋಹನ: ಅದಕ್ಕೇನಂತೆ, ಬರುವ ಬೇಸಿಗೆ ರಜೆಯಲ್ಲಿ ನೀವೆಲ್ಲರೂ ನನ್ನ ಜೊತೆ ನಮ್ಮ ಊರಿಗೆ ಬನ್ನಿ. ನಮ್ಮ ಅಜ್ಜಿ ತಾತನಿಗೂ ಬಹಳ ಸಂತೋಷವಾಗುತ್ತದೆ. ಮಧುಕೇಶ್ವರ ದೇವಾಲಯ, ಗುಡ್ನಾಪುರ ಸರೋವರ, ರಾಣಿ ಮಹಲ್ ಮುಂತಾದ ನೋಡಬೇಕಾದ ಪ್ರೇಕ್ಷಣೀಯ ಸ್ಥಳಗಳೂ ಇವೆ. ಮೇಷ್ಟ್ರು: ಹಾಗೇ ಆಗಲಿ ಮೋಹನ, ನಾನು ಪ್ರಾಂಶುಪಾಲರ ಜೊತೆ ಮಾತನಾಡಿ ಈ ವರ್ಷದ ಶೈಕ್ಷಣಿಕ‌ ಪ್ರವಾಸವನ್ನು ಬನವಾಸಿಗೇ ಏಪರ್ಡಿಸುವಂತೆ ವಿನಂತಿಸಿಕೊಳ್ಳುತ್ತೇನೆ. ಆ ಮಹಾನ್ ಕವಿಯ ಊರನ್ನು ಎಲ್ಲರೂ ದರ್ಶಿಸಿದಂತಾಗುತ್ತದೆ. (ಅಷ್ಟರಲ್ಲಿ ಅವಧಿ ಮುಗಿದ ಗಂಟೆ ಬಾರಿಸುತ್ತದೆ. ಗುರುಗಳು ತರಗತಿಯಿಂದ ಹೊರಗೆ ನಡೆಯುತ್ತಾರೆ. ವಿದ್ಯಾರ್ಥಿಗಳೆಲ್ಲರೂ ಎದ್ದು ನಿಂತು “ಧನ್ಯವಾದಗಳು ಗುರುಗಳೇ” ಎಂದು ವಂದಿಸುತ್ತಾರೆ ಅರುಣಾ ರಾವ್

ಅರುಣಾ ರಾವ್ ವಿರಚಿತ ಮಕ್ಕಳನಾಟಕ “ಆದಿಕವಿ ಪಂಪ” Read Post »

ಮಕ್ಕಳ ವಿಭಾಗ

ವನಜ ಮಹಾಲಿಂಗಯ್ಯ “ಮಕ್ಕಳಿಗೊಂದಷ್ಟು ಮಾತುಗಳು”

ಮಕ್ಕಳ ಸಂಗಾತಿ ವನಜ ಮಹಾಲಿಂಗಯ್ಯ “ಮಕ್ಕಳಿಗೊಂದಷ್ಟು ಮಾತುಗಳು” ಅಪ್ಪ ಅಮ್ಮ ಸೇವಕರಲ್ಲ, ಅವರೆoದಿಗೂ  ದೇವರ ಪ್ರತಿರೂಪ, ಅವರೆಂದಿಗೂ ಕೇಳುವುದಿಲ್ಲ ದೇವರೇನಮಗೆ ಒಳ್ಳೆಯದು ಮಾಡೆoದು, ಅವರು ಬೇಡುವುದು ಮಕ್ಕಳಿಗಾಗಿ ಮಾತ್ರ. ಅವರು ದೇವರಲ್ಲಿ ತಮಗಾಗಿ ಕೇಳುವುದು ಒಂದು ಮಾತ್ರ ಅದೇನು ಗೊತ್ತಾ?   ನಮ್ಮ ಮಕ್ಕಳು ಅವರ ಕಾಲ ಮೇಲೆ ಅವರು ನಿಲ್ಲುವವರೆಗೆ ನಮಗೆ ಆರೋಗ್ಯ ಕೊಟ್ಟು ಕಾಪಾಡು ಎಂದು ಮಾತ್ರಾವೆ……….ಅಪ್ಪ ಅಮ್ಮ ಸ್ವಾರ್ಥಿಗಳಲ್ಲ,ಅವರೆoದಿಗೂ  ನಿಸ್ವಾರ್ಥಿಗಳು,ಅವರಿಗಾಗಿ ಅವರು ಬದುಕುವುದಿಲ್ಲ.ಅವರೆಂದಿಗೂ ಕೇಳುವರು ದೇವರೇ ನಮ್ಮಮಕ್ಕಳಿಗೆ ಒಳ್ಳೆಯದು ಮಾಡೆಂದು. ಅಪ್ಪ ಅಮ್ಮ  ಹೊಟ್ಟೆ ಕಟ್ಟಿ ಬಟ್ಟೆ ಕಟ್ಟಿ, ಕೂಡಿಟ್ಟು ಆಸ್ತಿಯ ಮಾಡುವರು, ತಮಗಾಗಿ ಬೇಕೆಂದು ಅಲ್ಲವೇ ಅಲ್ಲ. ಅವರು ಅಂದುಕೊಳ್ಳುವರು ಮಕ್ಕಳು ಬೇರೆಯವರ  ಮುಂದೆ ಬೇಡಬಾರದೆಂದು. ನಮ್ಮ ಮಕ್ಕಳು ಎಲ್ಲರ ಮುಂದೆ ತಲೆ ಎತ್ತಿ, ಬಾಳಬೇಕು,ದುಡಿದು ತಿನ್ನಬೇಕು, ಯಾರ ಕೈಕೆಳಗೂ ಇರಬಾರದು, ಸಂಭಂಧಿಕರು ನಿಮ್ಮನ್ನು ಬೆರಳಿಟ್ಟು ತೋರಿಸಬಾರದು, ಎಂದು ಹಗಲು ರಾತ್ರಿ ಶ್ರಮಿಸುವ, ಚಿoತಿಸುವ ಜೀವಗಳು ಅಂದ್ರೆ ಅಪ್ಪ ಅಮ್ಮ ಮಾತ್ರ……….ಅಪ್ಪ ಅಮ್ಮ ಇದ್ದಾಗ ನಿಮಗೆ ಮೇಲೆ ಹೇಳಿದ ಯಾವ ಪದಗಳು, ವಾಕ್ಯಗಳು ಅರ್ಥವಾಗುವುದಿಲ್ಲ,ಅದು ನನಗೆ ಚನ್ನಾಗಿ ಗೊತ್ತು. ಆದ್ರೆ ಅವರಿಬ್ಬರೂ ಕಣ್ಮರೆ ಯಾದ ಮೇಲೆ  ಅರ್ಥ ವಾಗುತ್ತದೆ. ಆಗ ಏನೂ ಮಾಡಲು ಸಾಧ್ಯವಿಲ್ಲ.ಆಗ ನಿನಗೆ ಯಾರೂ ಬರುವುದಿಲ್ಲ. ಸ್ನೇಹಿತರು ಸಂಭಂದಿಕರು ಯಾರೂ……… ಇಲ್ಲ.ಅಪ್ಪ ಅಮ್ಮನೀವು ಚನ್ನಾಗಿ ದ್ರೆ ಖುಶಿಪಡುತ್ತಾರೆ, ಆದ್ರೆ ಬೇರೆಯವರು ನೋಟಕ್ಕೆ ಅಷ್ಟೇ. ಯಾರೂ ಎಷ್ಟೇ ಕಷ್ಟ ಬಂದ್ರು, ಎಷ್ಟೇ ಶ್ರೀಮoತಿಕೆ ಬಂದ್ರು ವೃದ್ಧಾಶ್ರಮಕ್ಕೆ ಸೇರಿಸಬೇಡಿ.   ಮಕ್ಕಳೇ ನನ್ನ ಕಳಕಳಿಯ ಮನವಿ. ವನಜ ಮಹಾಲಿಂಗಯ್ಯ

ವನಜ ಮಹಾಲಿಂಗಯ್ಯ “ಮಕ್ಕಳಿಗೊಂದಷ್ಟು ಮಾತುಗಳು” Read Post »

ಇತರೆ, ಮಕ್ಕಳ ವಿಭಾಗ

ತುಂ ತುಂ ಚಬೂರ್(ಮಕ್ಕಳ ಕಥೆ ) ಕಂಚುಗಾರನಹಳ್ಳಿ ಸತೀಶ್

ಮಕ್ಕಳ ಸಂಗಾತಿ ಕಂಚುಗಾರನಹಳ್ಳಿ ಸತೀಶ್ ತುಂ ತುಂ ಚಬೂರ್(ಮಕ್ಕಳ ಕಥೆ ) ಭೀಮನಹಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ ರಾಮಪ್ಪ ಎಂಬ ರೈತ ವಾಸವಾಗಿದ್ದನು. ಅವನಿಗೆ ಧನಪಾಲ ಮತ್ತು ಲೋಕಪಾಲನೆಂಬ ಇಬ್ಬರು ಗಂಡು ಮಕ್ಕಳಿದ್ದರು. ಧನಪಾಲ ವಿದ್ಯಾವಂತ ಹಾಗೂ ಬುದ್ಧಿವಂತನಾಗಿದ್ದ. ಆದರೆ ಲೋಕಪಾಲ ವಿದ್ಯೆ ತಲೆಗೆ ಹತ್ತದೆ, ಇತ್ತ ವಿದ್ಯಾವಂತನೂ ಆಗದೆ ಅತ್ತ ಬುದ್ಧಿವಂತನೂ ಆಗದೆ ಸೋಮಾರಿತನ ಮೈಗೂಡಿಸಿಕೊಂಡಿದ್ದ. ಆದರ್ಶ ರೈತನಾಗಿದ್ದ ರಾಮಪ್ಪ ತನ್ನ ಇಳಿವಯಸ್ಸಿನಲ್ಲಿ ವ್ಯವಸಾಯ ಮಾಡಲಾಗದೆ, ತನ್ನ ಇಬ್ಬರು ಮಕ್ಕಳಿಗೆ ಅಂದದ ಹೆಣ್ಣನ್ನು ಹುಡುಕಿ ಮದುವೆ ಮಾಡಿದ, ಇದ್ದ ಹತ್ತು ಎಕರೆ ಜಮೀನನ್ನು ಮಕ್ಕಳಿಗೆ ಸಮನಾಗಿ ಹಂಚಿ, ಶ್ರಮವಹಿಸಿ ದುಡಿದು ಬದುಕಿ ಎಂದು ಹೇಳಿ ಕೆಲವೇ ದಿನಗಳಲ್ಲಿ ಮರಣವನ್ನು ಹೊಂದಿದ.ವಿದ್ಯಾವಂತ, ಬುದ್ಧಿವಂತನಾದ ಧನಪಾಲ ತಂದೆ ನೀಡಿದ ಐದು ಎಕರೆ ಜಮೀನಿನಲ್ಲಿ ತಾನು ಕಲಿತ ಅಲ್ಪ ಸ್ವಲ್ಪ ವಿದ್ಯೆಯಿಂದ ಹೊಸ ಹೊಸ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡ. ಆಧುನಿಕ ಕೃಷಿ ಉಪಕರಣಗಳನ್ನು ಬಳಸಿ, ಹೊಸ ಬಗೆಯ ಬೀಜ, ಗೊಬ್ಬರಗಳನ್ನು ಬಳಸಿ, ಬೆಳೆ ಬೆಳೆಯಲು ಪ್ರಾರಂಭಿಸಿದ. ಇದರ ಪರಿಣಾಮ ಸಹಜವಾಗಿ ಹೆಚ್ಚು ಇಳುವರಿ ಪಡೆದು ಉತ್ತಮ ಲಾಭ ಗಳಿಸಿದ. ಬಂದ ಲಾಭವನ್ನು ದುಂದು ವೆಚ್ಚ ಮಾಡದೆ ಕೂಡಿಡುತ್ತಾ ಹೋದ. ಕೂಡಿಟ್ಟ ಹಣದಲ್ಲಿ ಪ್ರತಿವರ್ಷ ಒಂದೊಂದು ಎಕರೆ ಜಮೀನು ಖರೀದಿಸುತ್ತಾ 5 ರಿಂದ 10 ಎಕರೆ, 10 ರಿಂದ 20 ಎಕರೆ ಹೀಗೆ ಖರೀದಿಸುತ್ತಾ ಧನಪಾಲ ಭಾರೀ ಶ್ರೀಮಂತನಾದ. ಆದರೆ ಹುಟ್ಟಿನಿಂದಲೇ ಸೋಮಾರಿಯಾಗಿದ್ದ ಲೋಕಪಾಲ, ತಂದೆ ಕೊಟ್ಟಿದ್ದ 5 ಎಕರೆ ಜಮೀನಿನಲ್ಲಿ ಶ್ರಮಪಟ್ಟು ದುಡಿಯದೇ ದುಂದು ವೆಚ್ಚ ಮಾಡುತ್ತಾ ಪ್ರತಿವರ್ಷ ಒಂದೊಂದೇ ಎಕರೆ ಜಮೀನು ಮಾರಿ ಜೀವನ ಸಾಗಿಸುತ್ತಾ ಬಂದ. ಇದರ ಪರಿಣಾಮ ಕೆಲವೇ ವರ್ಷಗಳಲ್ಲಿ ಇದ್ದ 5 ಎಕರೆ ಜಮೀನನ್ನು ಕಳೆದುಕೊಂಡು ತುತ್ತು ಕೂಳಿಗೂ ಸಂಚಕಾರ ತಂದುಕೊಂಡ. ಅಣ್ಣ ಧನಪಾಲನ ಶ್ರೀಮಂತಿಕೆ, ವೈಭವದ ಜೀವನ ನೋಡಿ ಲೋಕಪಾಲ ಮತ್ತು ಅವನ ಹೆಂಡತಿಗೆ ಸಹಿಸಲಾಗದಷ್ಟು ಅಸೂಯೆ ಮೂಡತೊಡಗಿತು. ಆದರೆ ಅಣ್ಣ ಧನಪಾಲ ಶ್ರಮಪಟ್ಟು ಬೆವರು ಸುರಿಸಿ ದುಡಿಯುತ್ತಾ ಹೊಸ ಮನೆ, ಕಾರು, ಬೇಕಾದ ಎಲ್ಲಾ ಸೌಲಭ್ಯಗಳನ್ನು ಮಾಡಿಕೊಂಡ. ಬುದ್ಧಿವಂತನಾಗಿದ್ದ ಧನಪಾಲ ಬಂದ ಲಾಭವನ್ನೆಲ್ಲ ಕೂಡಿಡಲು ಆಧುನಿಕ ಶೈಲಿಯ ತಿಜೋರಿ ತರಲು ನಿರ್ಧರಿಸಿದ. ಕಳ್ಳ ಕಾಕರ ಭಯದಿಂದ ವಿಶೇಷ ರೀತಿಯ ಸೀಕ್ರೆಟ್ ಸೌಂಡ್ ಲಾಕರ್ ಇರುವ ತಿಜೋರಿ ತಂದು ತುಂ ತುಂ ಚಬೂರ್ ಎನ್ನುವ ಸೌಂಡ್ ಅನ್ನು ಸೀಕ್ರೆಟ್ ಲಾಕ್ ಗೆ ಅಳವಡಿಸಿದ. ಬಾಗಿಲು ತೆರೆಯುವ ಮುನ್ನ ತುಂ ತುಂ ಚಬೂರ್ ಎಂದರೆ ಬಾಗಿಲು ತೆರೆಯುತ್ತಿತ್ತು. ಬಾಗಿಲು ಮುಚ್ಚಲು ಪುನಃ ತುಂ ತುಂ ಚಬೂರ್ ಎಂದರೆ ಬಾಗಿಲು ಮುಚ್ಚುತ್ತಿತ್ತು.ತಿಜೋರಿ ತಂದ ಧನಪಾಲ ಸಂಪಾದಿಸಿದ ಹಣವನ್ನೆಲ್ಲ ಇಟ್ಟು ತುಂ ತುಂ ಚಬೂರ್ ಎಂದು ಪರೀಕ್ಷಿಸಿದ. ಆಗ ತಿಜೋರಿಯ ಬಾಗಿಲುಗಳು ಮುಚ್ಚಿದವು. ಪುನಃ ತುಂ ತುಂ ಚಬೂರ್ ಎಂದಾಗ ಬಾಗಿಲುಗಳು ತೆರೆದವು. ಮತ್ತೊಮ್ಮೆ ತುಂ ತುಂ ಚಬೂರ್ ಎಂದ ಬಾಗಿಲು ಮುಚ್ಚಿದವು ಆಗ ನೆಮ್ಮದಿಯ ನಿದ್ರೆಗೆ ಜಾರಿದನು.ಕೆಲವೇ ದಿನಗಳಲ್ಲಿ ತಿಜೋರಿಯ ವಿಷಯ ಲೋಕಪಾಲನ ಹೆಂಡತಿಗೆ ತಲುಪಿತು. ಅಸೂಯೆಯಿಂದ ಹೊಂಚು ಹಾಕುತ್ತಿದ್ದ ಅವಳು ಗಂಡನ ತಲೆಯಲ್ಲಿ ವಿಷ ಬೀಜ ಬಿತ್ತಿ, ಹೇಗಾದರೂ ಮಾಡಿ ತಿಜೋರಿಯಲ್ಲಿರುವ ಹಣವನ್ನು ಕಳ್ಳತನ ಮಾಡುವಂತೆ ದಿನೇ ದಿನೇ ಗಂಡನನ್ನು ಪೀಡಿಸುತ್ತಿದ್ದಳು. ಹೆಂಡತಿಯ ಮಾತು ಕೇಳಿ ಅಣ್ಣನ ಮನೆಯಲ್ಲಿ ಕಳ್ಳತನ ಮಾಡಲು ನಿರ್ಧರಿಸಿದನು. ಎಳ್ಳಷ್ಟು ಕೆಟ್ಟದ್ದನ್ನು ಬಯಸದ ಧನಪಾಲನ ಮನೆಗೆ ಕುಂಟು ನೆಪವೊಡ್ಡಿ ಮನೆಯ ಕಷ್ಟವನ್ನೆಲ್ಲ ಹೇಳಿ ಸಾಲ ಕೇಳಿದ. ಏನು ಅರಿಯದ ಧನಪಾಲ ತಮ್ಮನ ಹೀನಾಯ ಸ್ಥಿತಿಗೆ ಮರುಗಿ ರಕ್ತ ಹಂಚಿಕೊಂಡು ಹುಟ್ಟಿದ ಒಡಹುಟ್ಟಿದ ತಮ್ಮನನ್ನು ಮಂಚದ ಮೇಲೆ ಕೂರಿಸಿದ. ತಿಜೋರಿ ಬಳಿ ಹೋಗಿ ತುಂ ತುಂ ಚಬೂರ್ ಎಂದು ಹೇಳಿದ. ತುಂ ತುಂ ಚಬೂರ್ ಎಂದ ತಕ್ಷಣ ತಿಜೋರಿಯ ಬಾಗಿಲುಗಳು ತೆರೆದವು. ದೂರದಿಂದಲೇ ಇಣುಕಿ ನೋಡಿದ ಲೋಕಪಾಲನಿಗೆ ತಿಜೋರಿಯಲ್ಲಿನ ಹಣ, ಬೆಳ್ಳಿ, ಬಂಗಾರ ನೋಡಿ ಮತ್ತಷ್ಟು ಆಸೆ ಹೆಚ್ಚಾಯಿತು. ಬಿಟ್ಟ ಕಣ್ಣು ಬಿಟ್ಟಂತೆ ನೋಡತೊಡಗಿದ. ಅಣ್ಣ ಹತ್ತು ಸಾವಿರದ ಒಂದು ಕಂತೆಯನ್ನು ತೆಗೆದುಕೊಂಡು ತುಂ ತುಂ ಚಬೂರ್ ಎಂದ, ಪುನಃ ಬಾಗಿಲು ಮುಚ್ಚಿದವು. ಇದನ್ನು ಗಮನಿಸುತ್ತಿದ್ದ ಲೋಕಪಾಲ ಮನಸ್ಸಿನಲ್ಲಿಯೇ ಎರಡು ಮೂರು ಸಲ ತುಂ ತುಂ ಚಬೂರ್ ಎಂದು ಹೇಳಿಕೊಂಡು ಅಣ್ಣ ಕೊಟ್ಟ ಹತ್ತು ಸಾವಿರ ರೂಪಾಯಿ ಕಂತೆಯನ್ನು ತೆಗೆದುಕೊಂಡು ಮನೆಗೆ ಬಂದ. ಬಕಪಕ್ಷಿಯಂತೆ ಕಾಯುತ್ತಿದ್ದ ಹೆಂಡತಿಗೆ ಹಣದ ಕಂತೆಯನ್ನು ಕೊಟ್ಟು ನಡೆದ ಘಟನೆಯನ್ನು ವಿವರಿಸಿದ. ನಾಳೆ ಮಧ್ಯಾಹ್ನ ಅಣ್ಣ-ಅತ್ತಿಗೆ ಹೊಲಕ್ಕೆ ಹೋದಾಗ ತಿಜೋರಿ ಕಳ್ಳತನ ಮಾಡುವುದಾಗಿ ತಿಳಿಸಿದ. ಅದೇ ಗುಂಗಿನಲ್ಲಿ ಗಂಡ-ಹೆಂಡತಿ ಪಿಸುಗುಡುತ್ತಾ ನಿದ್ರೆಗೆ ಜಾರಿದರು. ಬೆಳಗಾಗುತ್ತಲೇ ಅಣ್ಣ-ಅತ್ತಿಗೆ ಎಂದಿನಂತೆ ಕೃಷಿ ಕೆಲಸದಲ್ಲಿ ತೊಡಗಲು ಹೊರಟರು. ಹೊಲಕ್ಕೆ ಹೋಗುವುದನ್ನೇ ಕಾಯುತ್ತಿದ್ದ ಲೋಕಪಾಲ, ಅಕ್ಕಪಕ್ಕದ ಮನೆಯವರು ಯಾರು ಇಲ್ಲದ ಸಮಯ ನೋಡಿ ಮನೆಯ ಬೀಗ ಮುರಿದು ಕಳ್ಳ ಬೆಕ್ಕಿನಂತೆ ನಿಧಾನವಾಗಿ ಒಳಗೆ ಹೋಗಿ ತಿಜೋರಿ ಮುಂದೆ ನಿಂತು ತುಂ ತುಂ ಢಮಾರ್ ಎನ್ನುವನು. ಬಾಗಿಲು ತೆರೆಯಲೇ ಇಲ್ಲ ಮತ್ತೆ ತುಂ ತುಂ ಡಿಮೀರ್ ಎನ್ನುವನು. ಆಗಲು ತಿಜೋರಿಯ ಬಾಗಿಲು ತೆರೆಯಲೇ ಇಲ್ಲ. ಗಲಿಬಿಲಿಗೊಂಡ ಲೋಕಪಾಲ ಮತ್ತೊಮ್ಮೆ ತುಂ ತುಂ ಘಮಾರ್ ಎಂದ ಬಾಗಿಲು ತೆಗೆಯಲೇ ಇಲ್ಲ. ಅಯ್ಯೋ! ಅಣ್ಣ ಹೇಳಿದ ಸೀಕ್ರೆಟ್ ಕೋಡ್ ಮರೆತೇ ಹೋಗಿದೆ ಎಂದು ನಿರಾಸೆಯಾಗಿ ಮನೆಗೆ ಹೋದನು. ಹಣ ತರುತ್ತಾನೆ ಎಂದು ಕಾಯುತ್ತಿದ್ದ ಹೆಂಡತಿಗೆ ಪಿತ್ತ ನೆತ್ತಿಗೇರಿ ಒಂದು ಹೆಸರು ನೆನಪಿಡೋಕೆ ಆಗಲ್ವಾ? ಎಂದು ಕೆನ್ನೆಗೆ ತಿವಿಯುತ್ತಾಳೆ. ಆಗ ಅಯ್ಯೋ! ನಾನೇನು ಮಾಡಲಿ? ಅದೇನೋ ತುಂ ತುಂ ಢಮಾರ್ ಎಂದು ಅಣ್ಣ ಹೇಳಿದ್ದ. ನಾನು ಅದನ್ನೇ ಹೇಳಿದೆ ಆದರೆ ತೆರೆಯಲಿಲ್ಲ ಅಣ್ಣ ಹೇಳಿದ ಮಂತ್ರ ಮರತೇ ಹೋಯಿತು ಎಂದನು. ಕೋಪಗೊಂಡ ಹೆಂಡತಿ ಅದೆಲ್ಲ ನಂಗೆ ಗೊತ್ತಿಲ್ಲ. ನಿಮ್ಮ ಅಣ್ಣನಿಗಿಂತ ನಾವು ಶ್ರೀಮಂತರಾಗಬೇಕು ಎಂದು ಹಠ ಮಾಡುತ್ತಾಳೆ. ಹೆಂಡತಿಯ ಹಠಕ್ಕೆ ಕಟ್ಟುಬಿದ್ದು ತಮ್ಮ ಊರಲ್ಲೇ ಇದ್ದ ದೊಡ್ಡ ಚಿನ್ನದ ಅಂಗಡಿಯಲ್ಲಿ ಕಳ್ಳತನ ಮಾಡಲು ನಿರ್ಧರಿಸಿದ. ಅವತ್ತು ರಾತ್ರಿ ಒಂದು ದೊಡ್ಡ ಚೀಲದೊಂದಿಗೆ ಚಿನ್ನದ ಅಂಗಡಿಗೆ ಹೋಗಿ ಬೀಗ ಮುರಿದು ಚಿನ್ನದ ಆಭರಣಗಳನ್ನು ಚೀಲದಲ್ಲಿ ತುಂಬಿಕೊಳ್ಳುತ್ತಿರುವಾಗ ಗಡಿಬಿಡಿಯಲ್ಲಿ ಆಭರಣದ ಪೆಟ್ಟಿಗೆ ಜಾರಿ ನೆಲಕ್ಕೆ ಬಿದ್ದುಬಿಡುತ್ತದೆ. ನಿಶ್ಯಬ್ದವಾದ ರಾತ್ರಿಯಲ್ಲಿ ಆಭರಣದ ಸದ್ದಿಗೆ ಬೀದಿ ನಾಯಿಯೊಂದು ಒಂದೇ ಸಮನೆ ಬೊಗಳುತ್ತದೆ. ನಾಯಿ ಬೊಗಳುವ ಶಬ್ದಕ್ಕೆ ಅಕ್ಕಪಕ್ಕದ ಮನೆಯವರೆಲ್ಲ ಓಡಿ ಬಂದು ಆಭರಣ ಕದಿಯುತ್ತಿದ್ದ ಲೋಕಪಾಲನನ್ನು ಹಿಡಿದು ಪೋಲೀಸರಿಗೆ ಒಪ್ಪಿಸುತ್ತಾರೆ. ಬೆಳಗಾಗುತ್ತಿದ್ದಂತೆ ವಿಷಯ ತಿಳಿದ ಲೋಕಪಾಲನ ಹೆಂಡತಿ ಧನಪಾಲನ ಬಳಿ ಹೋಗಿ ಅಂಗಲಾಚಿ ಗಂಡನನ್ನು ಬಿಡಿಸುವಂತೆ ಕೇಳಿಕೊಳ್ಳುತ್ತಾಳೆ. ಮೃದು ಹೃದಯಿ ಧನಪಾಲ ತಮ್ಮನ ತಪ್ಪನ್ನು ಮನ್ನಿಸಿ ಜಾಮೀನು ಕೊಟ್ಟು ಬಿಡಿಸುತ್ತಾನೆ. ಹೆಂಡತಿ ಮಾತು ಕೇಳಿ ನಿನಗಿಂತ ಶ್ರೀಮಂತನಾಗಲು ನಿನ್ನ ಮನೆಗೂ ಕಳ್ಳತನ ಮಾಡಲು ಬಂದಿದ್ದೆ. ಆದರೆ ತಿಜೋರಿಯ ಸೀಕ್ರೆಟ್ ಕೋಡ್ ಮರೆತು ಹೋಗಿ ಬಾಗಿಲು ತೆರೆಯಲಿಲ್ಲ. ನನ್ನ ಹೆಂಡತಿ ನಾವು ನಿಮ್ಮ ಅಣ್ಣನಿಗಿಂತ ಹೆಚ್ಚು ಶ್ರೀಮಂತರಾಗಬೇಕು ಎಂದು ದುಂಬಾಲು ಬಿದ್ದಿದ್ದಳು. ಅವಳ ಒತ್ತಾಯಕ್ಕೆ ಮಣಿದು ಕೆಟ್ಟದಾರಿ ಹಿಡಿದು ಅವತ್ತೇ ರಾತ್ರಿ ನಮ್ಮೂರಿನ ಚಿನ್ನದ ಅಂಗಡಿಗೆ ಕಳ್ಳತನ ಮಾಡಲು ಬಂದೆ. ನಮ್ಮ ಅತಿಯಾಸೆಯಿಂದಾಗಿ ಜೈಲು ಸೇರುವಂತಾಯಿತು. ಪರರ ಸ್ವತ್ತು ಎಂದೂ ದಕ್ಕದು. ನನ್ನದು ತಪ್ಪಾಯಿತು ಅಣ್ಣ ಎಂದು ಅಣ್ಣ ಧನಪಾಲನ ಕಾಲಿಗೆ ಬೀಳುವನು. ಪಶ್ಚಾತ್ತಾಪಕ್ಕಿಂತ ದೊಡ್ಡ ಶಿಕ್ಷೆ ಬೇರೊಂದಿಲ್ಲ. ಬಾ ಇಬ್ಬರೂ ಸೇರಿ ಒಟ್ಟಿಗೆ ದುಡಿಯೋಣ ಎಂದ ಅಣ್ಣ ತನ್ನ ತಮ್ಮ ಲೋಕಪಾಲನನ್ನು ಕರೆದುಕೊಂಡು ಹೋಗುವನು. ಹಳೆಯ ಕಹಿ ನೆನಪುಗಳನ್ನು ಮರೆತು ಅಂದಿನಿಂದ ಇಬ್ಬರೂ ಒಟ್ಟಾಗಿ ಶ್ರಮವಹಿಸಿ ದುಡಿಯುವರು. ಸುತ್ತಮುತ್ತಲಿನ ಹಳ್ಳಿಗಳಿಗೆಲ್ಲ ಮಾದರಿ ರೈತರಾಗುವರು. ಕಂಸ( ಕಂಚುಗಾರನಹಳ್ಳಿ ಸತೀಶ್ )

ತುಂ ತುಂ ಚಬೂರ್(ಮಕ್ಕಳ ಕಥೆ ) ಕಂಚುಗಾರನಹಳ್ಳಿ ಸತೀಶ್ Read Post »

ಇತರೆ, ಮಕ್ಕಳ ವಿಭಾಗ

ಮಕ್ಕಳೇ ಎಲ್ಲಿದ್ದೀರಿ…? ಪೃಥ್ವಿರಾಜ್ ಟಿ ಬಿ ಅವರದೊಂದು ಅದ್ಭುತ ಬರಹ

ಎಲ್ಲಶಿಕ್ಷಕರು ಮತ್ತು ಪೋಷಕರುಓದಲೇ ಬೇಕಾದಂತಹ ಅದ್ಣುತ ಬರಹ ಮಕ್ಕಳೇ ಎಲ್ಲಿದ್ದೀರಿ…? ಪೃಥ್ವಿರಾಜ್ ಟಿ ಬಿ ಅವರಿಂದ

ಹೀಗೆ ಮಾಡಿದ್ದರೆ ಮಾತ್ರ ಮತ್ತೆ ಒಮ್ಮೆ ಕೇಳಬಹುದು—
“ಮಕ್ಕಳಿರಲ್ಲವ ಮನೆಯ ತುಂಬ!”
ಅದಾಗಲೆ, ಈ ಪ್ರಶ್ನೆ —
“ಮಕ್ಕಳೇ ಎಲ್ಲಿದ್ದೀರಿ?” —

ಮಕ್ಕಳೇ ಎಲ್ಲಿದ್ದೀರಿ…? ಪೃಥ್ವಿರಾಜ್ ಟಿ ಬಿ ಅವರದೊಂದು ಅದ್ಭುತ ಬರಹ Read Post »

ಇತರೆ, ಮಕ್ಕಳ ವಿಭಾಗ

“ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ – ಏಕೆ? ಏನು? ಹೇಗೆ?”ವಿಶೇಷಲೇಖನ, ಮೇಘ ರಾಮದಾಸ್‌ ಜಿ.

ಮೇಘ ರಾಮದಾಸ್ ಜಿ
ಮಕ್ಕಳು ಮತ್ತು ಯುವಜನ ಕಾರ್ಯಕರ್ತರು
ಗುಳಿಗೇನಹಳ್ಳಿ ಸಿರಾ ತುಮಕೂರು

ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ – ಏಕೆ? ಏನು? ಹೇಗೆ?
ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ – ಏಕೆ? ಏನು? ಹೇಗೆ?

“ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ – ಏಕೆ? ಏನು? ಹೇಗೆ?”ವಿಶೇಷಲೇಖನ, ಮೇಘ ರಾಮದಾಸ್‌ ಜಿ. Read Post »

ಇತರೆ, ಮಕ್ಕಳ ವಿಭಾಗ

“ಮಕ್ಕಳ ಮನಸ್ಸು” ಮಕ್ಕಳ ಕುರಿತಾದ ಲೇಖನ ಡಾ.ಸುಮತಿ ಪಿ. ಅವರಿಂದ

ಮಕ್ಕಳ ಸಂಗಾತಿ

ಡಾ .ಸುಮತಿ ಪಿ.

ಮಕ್ಕಳ ಮನಸ್ಸು
ಹಾಗಾಗಿ ಸಣ್ಣ ಮಕ್ಕಳ ಮನಸ್ಸಿಗೆ ಸುಂದರ ರೂಪವನ್ನು ಕೊಡಬೇಕಾದರೆ ಮಕ್ಕಳು ಬೆಳೆಯುವ ಪರಿಸರ,ಕಣ್ಣಿಗೆ ಕಾಣುವ ದೃಶ್ಯ,ಕಿವಿಗೆ ಕೇಳುವ ವಿಷಯ,ಮನಸ್ಸು ಅರಿಯುವ ಭಾವನೆ ಇದೆಲ್ಲವೂ ಉತ್ತಮವಾಗಿರಬೇಕು.

“ಮಕ್ಕಳ ಮನಸ್ಸು” ಮಕ್ಕಳ ಕುರಿತಾದ ಲೇಖನ ಡಾ.ಸುಮತಿ ಪಿ. ಅವರಿಂದ Read Post »

ಇತರೆ, ಮಕ್ಕಳ ವಿಭಾಗ

ʼರೆಕ್ಕೆ ಕತ್ತರಿಸಿದಾಗʼ ವಿಶೇಷ ಲೇಖನ, ಡಾ.ಸುಮತಿ.ಪಿ

ಮಕ್ಕಳ ಸಂಗಾತಿ

ಡಾ.ಸುಮತಿ ಪಿ

ರೆಕ್ಕೆ ಕತ್ತರಿಸಿದಾಗ
ಅತಿಯಾದ ನಿಯಂತ್ರಣ ಮಗುವಿನ ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುವುದಲ್ಲದೆ, ಕಲಿಕೆಯಲ್ಲಿಯೂ ಮಕ್ಕಳು ಹಿಂದೆ ಬೀಳಬಹುದು ತಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಸಾಧ್ಯವಾಗದೇ ಇರಬಹುದು.

ʼರೆಕ್ಕೆ ಕತ್ತರಿಸಿದಾಗʼ ವಿಶೇಷ ಲೇಖನ, ಡಾ.ಸುಮತಿ.ಪಿ Read Post »

ಕಾವ್ಯಯಾನ, ಮಕ್ಕಳ ವಿಭಾಗ

ಡಾ.ಸಿದ್ಧರಾಮ ಹೊನ್ಕಲ್ ಅವರು ಬರೆದ ಮಕ್ಕಳು ಓದಲೇಬೇಕಾದ ಕವಿತೆ “ಗೆಳೆಯ ಮತ್ತವನಮ್ಮ”

ಮಕ್ಕಳ ಸಂಗಾತಿ

ಡಾ.ಸಿದ್ಧರಾಮ ಹೊನ್ಕಲ್ ಅವರಿಂದ

ಮಕ್ಕಳು ಓದಲೇಬೇಕಾದ ಕವಿತೆ

“ಗೆಳೆಯ ಮತ್ತವನಮ್ಮ”
ಎಲ್ಲ ಪರೀಕ್ಷೆಗಳ ಮುಗಿಸಿ
ಹೈರಾಣಾಗಿ ಹೊರಬಂದಾಗಲೆಲ್ಲ
ಅವನಮ್ಮ ಕೇಳುತ್ತಾಳೆ
ಏನೆಂದರು ವೈದ್ಯರು..

ಡಾ.ಸಿದ್ಧರಾಮ ಹೊನ್ಕಲ್ ಅವರು ಬರೆದ ಮಕ್ಕಳು ಓದಲೇಬೇಕಾದ ಕವಿತೆ “ಗೆಳೆಯ ಮತ್ತವನಮ್ಮ” Read Post »

ಇತರೆ, ಮಕ್ಕಳ ವಿಭಾಗ

“ಇರುವುದೊಂದೇ ಭೂಮಿ” ನಾಮದೇವ ಕಾಗದಗಾರ ಅವರ ಮಕ್ಕಳ ಕವಿತೆ

ತಿನ್ನುವ ಆಹಾರ ಪ್ಯಾಕೆಟ್‌ನಲ್ಲಿ ಬಂತು
ಸಾಂಪ್ರದಾಯಿಕ ಅಡುಗೆ ಇಲ್ಲದಾಯಿತು

“ಇರುವುದೊಂದೇ ಭೂಮಿ” ನಾಮದೇವ ಕಾಗದಗಾರ ಅವರ ಮಕ್ಕಳ ಕವಿತೆ Read Post »

ಇತರೆ, ಮಕ್ಕಳ ವಿಭಾಗ

“ಅವರವರ ಇಷ್ಟ”ಮಕ್ಕಳ ಕವಿತೆ-ಸಿದ್ದಲಿಂಗಪ್ಪ ಬೀಳಗಿ.ಹುನಗುಂದ

ಮಕ್ಕಳ ಸಂಗಾತಿ

“ಅವರವರ ಇಷ್ಟ”ಮಕ್ಕಳ ಕವಿತೆ-

ಸಿದ್ದಲಿಂಗಪ್ಪ ಬೀಳಗಿ.
ಅಪ್ಪಂಗೆ ಪ್ಯಾಂಟು ಶರ್ಟು
ಅವ್ವಗೆ ತರತರ ಡ್ರೆಸ್ಸು
ಅಣ್ಣಂಗೆ ಜೀನ್ಸು ಪ್ಯಾರ್ಲಲ್ಲುಮಕ್ಕಳ ಸಂಗಾತಿ

“ಅವರವರ ಇಷ್ಟ”ಮಕ್ಕಳ ಕವಿತೆ-ಸಿದ್ದಲಿಂಗಪ್ಪ ಬೀಳಗಿ.ಹುನಗುಂದ Read Post »

You cannot copy content of this page

Scroll to Top