ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ, ಜೀವನ

“ಹಿರಿಯ ಮಗುವಿಗೆ….ಹೊರೆಯಾಗದಿರಲಿ ಭ್ರಾತೃತ್ವ”ವೀಣಾ ಹೇಮಂತ್ ಗೌಡ ಪಾಟೀಲ್

ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್ “ಹಿರಿಯ ಮಗುವಿಗೆ…. ಹೊರೆಯಾಗದಿರಲಿ ಭ್ರಾತೃತ್ವ” ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬದ ಹಿರಿಯ ಮಗನನ್ನು ತಂದೆ ಸಮಾನ ಮತ್ತು ಅತ್ತಿಗೆ ತಾಯಿ ಎಂಬಂತೆ ಭಾವಿಸುತ್ತಾರೆ. ತಂದೆ ತಾಯಿಯ ನಂತರದ ಸ್ಥಾನವನ್ನು ಪಡೆದ ಹಿರಿಯ  ಮಕ್ಕಳು ಕೌಟುಂಬಿಕ ದೃಷ್ಟಿಯಿಂದ ಎಲ್ಲರನ್ನು ಸಮಾನವಾಗಿ ಕಾಣುವುದು ಅನಿವಾರ್ಯವಾಗುತ್ತದೆ. ಮತ್ತೆ ಎಷ್ಟೋ ಬಾರಿ ಹಿರಿಯ ಮಕ್ಕಳು ತಮ್ಮ ತಂದೆಯ ಮರಣ ನಂತರ ಕುಟುಂಬದ ಪರಿಪಾಲನೆಗೆ ತಮ್ಮ ವೈಯುಕ್ತಿಕ ಸುಖ ಭೋಗಗಳನ್ನು ಮರೆತು ಕರ್ತವ್ಯ ಬದ್ಧರಾಗಿ ಕೌಟುಂಬಿಕ ನಿರ್ವಹಣೆಯನ್ನು ಮಾಡುತ್ತಾರೆ ಕೂಡ.ಪಾಲಕರಿಗೆ ತಮ್ಮ ಕಿರಿಯ ಮಕ್ಕಳ ಮೇಲೆ ಸಹಜವಾಗಿಯೇ ತುಸು ಕಾಳಜಿ ಹೆಚ್ಚು ಮತ್ತು ತಮ್ಮ ಹಿರಿಯ ಮಕ್ಕಳನ್ನು ತಮ್ಮ ಮುಂದಿನ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಬೆಳೆಸುತ್ತಾರೆ. ಹೀಗಾಗಿ ಸಹಜವಾಗಿಯೇ ಹಿರಿಯ ಮಕ್ಕಳು ತುಸು ಸೂಕ್ಷ್ಮಪ್ರಜ್ಞೆಯವರಾಗಿರುತ್ತಾರೆ. ಆದರೆ ಕಾಲಘಟ್ಟ ಯಾವುದೇ ಇರಲಿ  ಹಿಂದಿನ ಒಡಹುಟ್ಟಿದವರಾಗಲೀ ಇಂದಿನ ಪೀಳಿಗೆಯೇ ಇರಲಿ ಸಾಮಾನ್ಯವಾಗಿ ನಾವು ನೋಡುವ ಕೆಲ ವಿಪರ್ಯಾಸಗಳು ಹೀಗಿರುತ್ತವೆ. ತಮ್ಮ ಮಕ್ಕಳನ್ನು ಬೇರೆಯವರಿಗೆ ಪರಿಚಯಿಸುವ ಪಾಲಕರು ತಮ್ಮ ದೊಡ್ಡ ಮಗುವನ್ನು ನಿಧಾನ ಎಂದು ಚಿಕ್ಕ ಮಗುವನ್ನು ದೊಡ್ಡವರಿಗೆ ಹೋಲಿಸಿ ತುಂಬಾ ಜಾಣ ಎಲ್ಲವನ್ನು ಬೇಗನೆ ತಿಳಿದುಕೊಳ್ಳುತ್ತಾನೆ ದೊಡ್ಡವನಂತೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಲ್ಲದರಲ್ಲೂ ಆಸಕ್ತಿ ಮತ್ತು ಎಲ್ಲದರಲ್ಲೂ ಮುಂದೆ ಇದ್ದಾನೆ ಎಂದು ಹೊಗಳುತ್ತಾರೆ. ಇದಕ್ಕೆ ಕಾರಣ ಹತ್ತು ಹಲವು…. ಎರಡನೇ ಮಗು ಹೊಟ್ಟೆಯಲ್ಲಿರುವಾಗಲೇ ದೊಡ್ಡ ಮಗುವಿಗೆ ತಮ್ಮ ಇಲ್ಲವೇ ತಂಗಿ ತಾಯಿಯ ಹೊಟ್ಟೆಯಲ್ಲಿದ್ದು ಇನ್ನೂ ಕೆಲವೇ ದಿನಗಳಲ್ಲಿ ಅದು ತನ್ನೊಂದಿಗೆ ಆಟವಾಡಲು ದೊರೆಯುತ್ತದೆ ಮತ್ತು ಅದರೊಂದಿಗೆ ತಾನು ಅತ್ಯಂತ ಪ್ರೀತಿಪೂರ್ವಕವಾಗಿ ನಡೆದುಕೊಳ್ಳಬೇಕು ಎಂದು ಕಲಿಸಲಾಗುತ್ತದೆ. ಸಮಾಧಾನ ತಾಳ್ಮೆಯಿಂದ ವರ್ತಿಸಬೇಕು ಎಂದು ಪದೇಪದೇ ಹೇಳಿಕೊಡಲಾಗುತ್ತದೆ.ಖಂಡಿತವಾಗಿಯೂ ಇದು ತಪ್ಪಲ್ಲ. ಆದರೆ ಹಾಗೆ ಹೇಳುವ ಭರದಲ್ಲಿ, ಮಗು ಹುಟ್ಟಿದ ನಂತರ ಎಲ್ಲಾ ವಿಷಯಗಳಲ್ಲಿಯೂ ದೊಡ್ಡ ಮಗುವೆ ಸಮಾಧಾನದಿಂದ ಇರಲು ಸೂಚಿಸಲಾಗುತ್ತದೆ. ಸಹಜವಾಗಿಯೇ ಪಾಲಕರ ಮಾತನ್ನು ಒಪ್ಪಿಕೊಳ್ಳುವ ಮಗು ತನಗಿಂತ ಕಿರಿಯ ಮಗುವಿನ ಕಾಳಜಿ ವಹಿಸುತ್ತಾ ತಾನು ಹಿಂದೆ ಉಳಿಯುತ್ತದೆ. ಚಿಕ್ಕವರಿದ್ದಾಗ ತನಗಿಂತ ಚಿಕ್ಕವರಾದ ಒಡಹುಟ್ಟಿದವರೊಂದಿಗೆ ಪ್ರೀತಿ ಮತ್ತು ಸೌಹಾರ್ದತೆಯಿಂದ ಇರುವ ಮಗು ಮುಂದೆ ಪಾಲಕರ ಹೋಲಿಕೆಯಿಂದ ನಿರಾಶನಾಗಿ ಬೇಸರಗೊಳ್ಳಬಹುದು, ಮಾನಸಿಕವಾಗಿ ಮುದುಡಬಹುದು,  ಸಿಡಿದೇಳಬಹುದು.ಓದಿನಲ್ಲಿ ಹಿಂದೆ ಬೀಳಬಹುದು, ಆಸಕ್ತಿ ಕಡಿಮೆಯಾಗಬಹುದು.ಇದುವರೆಗೂ ಮನೆಯವರೆಲ್ಲರ ಅಚ್ಚುಮೆಚ್ಚಿದ ಮಗು ಒಮ್ಮಿಂದೊಮ್ಮೆಲೆ ತನ್ನ ಮೇಲಿದ್ದ ಗಮನಿಸುವಿಕೆಯ ಸ್ಪಾಟ್ ಲೈಟ್ ತನ್ನ ಸಹೋದರ ಅಥವಾ ಸಹೋದರಿಯ ಮೇಲೆ ಬಿದ್ದಾಗ ಪುಟ್ಟ ಮಗುವಿನ ಮನದಲ್ಲಿ ಆತಂಕದ ಸುಳಿಗಳು ಎದ್ದು ಮಗು ಆ ಸುಳಿಯಲ್ಲಿ ಸಿಲುಕುತ್ತದೆ.ಇಂತಹ ಸಮಯದಲ್ಲಿ ದೊಡ್ಡ ಮಗುವಿನಿಂದ ಪುಟ್ಟ  ಮಗುವಿಗೆ ದೈಹಿಕವಾಗಿ ಏನಾದರೂ ಹಾನಿಯಾಗಬಹುದು ಎಂಬ ಕಾರಣದಿಂದ ಪಾಲಕರು ತಮಗರಿವಿಲ್ಲದೆ ಪುಟ್ಟ ಮಗುವನ್ನು ಮುಚ್ಚಟೆಯಿಂದ ಸಾಕಿ ಬೆಳೆಸಿ ದೊಡ್ಡ ಮಗುವಿನೊಂದಿಗೆ ತುಸು ಅಂತರವನ್ನು ಕಾಯುತ್ತಾರೆ… ಇದು ಅಗೋತರವಾಗಿ ಅವರಿಬ್ಬರ ನಡುವೆ ಒಂದು ಪುಟ್ಟ ಕಂದರವನ್ನು ಸೃಷ್ಟಿಮಾಡುತ್ತದೆ ಮತ್ತು ಬೆಳೆಯುತ್ತಾ ಹೋದಂತೆ ಈ ಕಂದರ ಹೆಚ್ಚು ಅಗಲವಾಗುತ್ತಾ ಹೋಗುತ್ತದೆ…ಆದ್ದರಿಂದ ಎರಡನೆಯ ಮಗುವನ್ನು ಹೊಂದಿರುವ ಪಾಲಕರು ತಮ್ಮ ಎರಡು ಮಕ್ಕಳ ನಡುವೆ ಜೈವಿಕ ಸಂಬಂಧಕ್ಕೆ ಮಿಗಿಲಾದ ಆತ್ಮೀಯತೆ ಪ್ರೀತಿ ವಿಶ್ವಾಸ ಮತ್ತು ಸ್ನೇಹ ಭಾವಗಳನ್ನು ತುಂಬಲು ಈ ರೀತಿ ಪ್ರಯತ್ನಿಸಬಹುದು.ನಿಮ್ಮ ಮಕ್ಕಳು ನಿಮಗೆ ಎರಡು ಕಣ್ಣುಗಳಿದ್ದಂತೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣವನ್ನು ಹಚ್ಚುವ ರೀತಿಯಲ್ಲಿ ನಿಮ್ಮ ವರ್ತನೆ ಇರಬಾರದು. ನಿಮ್ಮ ಮಾತನ್ನು ಕೇಳುವ ಮಗುವನ್ನು ಪ್ರೀತಿಸುವ ಮತ್ತು ಕೇಳದೆ ಹೋಗುವ ಮಗುವಿನ ಮೇಲೆ ತುಸು ಸಿಟ್ಟು ಸಹಜವಾಗಿ ನಿಮಗೆ ಬರಬಹುದು. ಆದರೆ ಮಗು ನಿಮ್ಮ ಮಾತನ್ನು ಏಕೆ ಕೇಳುತ್ತಿಲ್ಲ ಎಂಬುದರ ಹಿಂದಿನ ಮರ್ಮವನ್ನು ಮಗುವನ್ನು ಅನುನಯಿಸಿ ಒಲಿಸಿಕೊಳ್ಳುವ ಮೂಲಕ ಆ ಮಗುವಿನ ಮನಸ್ಸಿಗೆ ಸಮಾಧಾನವಾಗುವ ರೀತಿಯಲ್ಲಿ ವರ್ತಿಸುವ ಮೂಲಕ ಮಗುವನ್ನು ತಿದ್ದಬಹುದೇ ಹೊರತು ವಿನಾಕಾರಣ ಮಗುವನ್ನು ಶಿಕ್ಷೆಗೆ ಗುರಿಪಡಿಸಿ ಇಲ್ಲವೇ ಬಿರುಸು ಮಾತುಗಳಿಂದ ದಂಡಿಸಿ ಅಲ್ಲ.ಮಕ್ಕಳು ಪರಸ್ಪರ ಎದುರಾಳಿಗಳಲ್ಲ ಒಬ್ಬರ ಮೇಲೆ ಮತ್ತೊಬ್ಬರ ಕುರಿತು ದೂರು ಹೇಳುವ, ಹಂಗಿಸುವ ರೀತಿಯಲ್ಲಿ ಪಾಲಕರು ಮಕ್ಕಳನ್ನು ಕುರಿತು ಎಂದೂ ಮಾತನಾಡಬಾರದು. ಮಕ್ಕಳ ನಡುವಿನ ಜಗಳಗಳಲ್ಲಿ ಯಾರು ಸರಿ ಮತ್ತು ಯಾರೂ ತಪ್ಪು ಎಂಬುದನ್ನು ಎಣಿಸದೆ, ಎಲ್ಲಿ ಮತ್ತು ಏಕೆ ತಪ್ಪಾಗಿದೆ ಮತ್ತು ಅದನ್ನು ಹೇಗೆ ತಿದ್ದಿಕೊಳ್ಳಬೇಕು ಎಂಬುದನ್ನು ಸೂಕ್ಷ್ಮವಾಗಿ ಮಕ್ಕಳಿಗೆ ಮನದಟ್ಟು ಮಾಡಿಸಬೇಕು.ಒಂದು ಮಗುವಿನ ಕುರಿತು ಮತ್ತೊಂದು ಮಗುವಿನ ಮುಂದೆ ಅಥವಾ ಹಿಂದೆ ಅವಹೇಳನಕಾರಿಯಾಗಿ ಮಾತನಾಡಬಾರದು.ಇದು ಮಕ್ಕಳಲ್ಲಿ ಮಾನಸಿಕ ಅಭದ್ರತೆ ಮತ್ತು ನೋವಿಗೆ ಕಾರಣವಾಗುತ್ತದೆ.ಪಾಲಕರು ತಮ್ಮ ಒಂದು ಮಗುವನ್ನು ಚಿನ್ನ ರನ್ನ ಎಂದು ಮತ್ತೊಂದು ಮಗುವನ್ನು ಹರಕೆಯ ಕುರಿ ಎಂಬಂತೆ  ಭಾವಿಸಬಾರದು.ಎರಡನೇ ಮಗುವನ್ನು ಪಾಲಿಸಲಿ ಎಂದು ಆಶಿಸುವ ಪಾಲಕರು ಮಗುವಿನ ಮೇಲೆ ಎಲ್ಲ ರೀತಿಯ ಭಾವನಾತ್ಮಕ ಹೊರೆಯನ್ನು ಹೊರಿಸುತ್ತಾರೆ… ಇದು ಖಂಡಿತವಾಗಿಯೂ ತಪ್ಪು. ಮಗುವಿನ ಎಳೆಯ ಹೆಗಲಿಗೆ ಅದಕ್ಕೂ ಮುಖ್ಯವಾಗಿ ಮನಸ್ಸಿಗೆ ಇದು ಖಂಡಿತವಾಗಿಯೂ ಬೆಟ್ಟವನ್ನು ಹೊತ್ತಂತಹ ಭಾವವನ್ನು ಸೃಷ್ಟಿಸಿ ಮೊದಮೊದಲು ಮಾನಸಿಕವಾಗಿ ನಲುಗುವ ಮಗು ಮುಂದೆ ಹೋಲಿಕೆಗಳಿಂದ ಬೇಸತ್ತು ಹೋಗುತ್ತದೆ. ಅದರ ಸುಪ್ತ ಮನಸ್ಸು ಮೊದಮೊದಲು ಹಿಂಜರಿದರೂ ನಂತರ ಪ್ರತಿಯೊಂದಕ್ಕೂ ವಿಪರೀತವಾಗಿ ಪ್ರತಿಕ್ರಿಯೆಸುತ್ತದೆ. ನಾನೇ ಮಾಡಬೇಕು ಎಂಬುದರಿಂದ ನೊಂದು ನಾನೇಕೆ ಮಾಡಬೇಕು ಎಂದು ಸಿಡಿದು ನಿಲ್ಲುವ ಮಟ್ಟಿಗೆ ಅದರ ಪಯಣ ಸಾಗುತ್ತದೆ. ಇದು ಖಂಡಿತವಾಗಿಯೂ ಪಾಲಕರು ಎಚ್ಚರಗೊಳ್ಳಬೇಕಾದ ವಿಷಯವೇ ಸರಿ.ಸಹೋದರರು ದಾಯಾದಿಗಳಾಗಿ ಬದಲಾಗುವುದರಲ್ಲಿ ಪಾಲಕರ ಪಾತ್ರ ಬಹುಮುಖ್ಯವಾಗಿರುತ್ತದೆ ಅರಿತೋ ಅರಿಯದೆಯೋ ಪಾಲಕರು ಮಾತನಾಡುವ ಪ್ರತಿಯೊಂದು ಮಾತು ಕ್ರಿಯೆಗಳು ಮಕ್ಕಳ ಮೇಲೆ ಅಪಾರ ಪರಿಣಾಮವನ್ನು ಬೀರುತ್ತವೆ.. ಒಡಹುಟ್ಟಿದವರಲ್ಲಿ ಉಂಟಾಗುವ ಗೊಂದಲ ಆತಂಕ, ಅಸಹನೆ ಮತ್ತು  ಅಶಂಕೆಗಳಿಗೆ ಮೂಲ ಬೇರು ಪಾಲಕರೇ ಆಗಿರುತ್ತಾರೆ. ಮಕ್ಕಳನ್ನು ಬೆಳೆಸುವಾಗ ಪಾಲಕರ ಮತ್ತು ಕುಟುಂಬದ ಇತರ ಸದಸ್ಯರ ವರ್ತನೆ, ಮನೆಯಲ್ಲಿನ ವಾತಾವರಣ ಮಕ್ಕಳಲ್ಲಿ ಈ ಭಾವನೆಗಳು ಬೇರೂರಲು ಕಾರಣವಾಗಿರುತ್ತವೆ.ಎಲ್ಲ ಮನೆಗಳಲ್ಲಿಯೂ ಹೀಗೆಯೇ ಆಗಬೇಕು ಎಂದಿಲ್ಲ ಮತ್ತು ಆಗುತ್ತದೆ ಎಂದು ಭಾವಿಸುವಂತಿಲ್ಲ. ಆಗಬಹುದು ಎಂಬ ಕಾರಣಗಳನ್ನು ಹೀಗೆ ಪಟ್ಟಿ ಮಾಡಲಾಗಿದ್ದು ಈ ಕುರಿತು ಪಾಲಕರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ,ಆದರೆ ಖಂಡಿತವಾಗಿಯೂ ಮಕ್ಕಳ ನಡುವೆ ಭಿನ್ನಾಭಿಪ್ರಾಯಗಳು ಬಾರದಂತೆ ಅವರನ್ನು ಪಾಲಿಸುವ ಬೆಳೆಸುವ ಜವಾಬ್ದಾರಿ ಮಾತ್ರ ಪಾಲಕರದ್ದೇ. ಸಂತ ಸೂಕ್ಷ್ಮ ಮನಸ್ಥಿತಿಯ ಮಕ್ಕಳು ಪ್ರತಿಯೊಂದಕ್ಕೂ ವಿಪರೀತವಾಗಿ ಪ್ರತಿಕ್ರಿಯಿಸಿದರೆ ಕೆಲ ಗಟ್ಟಿ ವ್ಯಕ್ತಿತ್ವದ ಮಕ್ಕಳು ಇಲ್ಲದ ಅಹಂಭಾವವನ್ನು ತೋರುತ್ತ ಎದೆ ಸೆಟೆಸಿ ತಾವು ಮಾಡಿದ್ದೇ ಸರಿ ಎಂಬಂತೆ ವರ್ತಿಸುತ್ತಾರೆ.ಒಡಹುಟ್ಟಿದವರಲ್ಲಿ ಇದು ಸಾಮಾನ್ಯ ಎಂದು ತೋರಿದರೂ ವಿಪರೀತಕ್ಕೆ ಇಟ್ಟುಕೊಳ್ಳದಂತೆ ಇದನ್ನು ನಿರ್ವಹಿಸುವ ಜವಾಬ್ದಾರಿ ಖಂಡಿತವಾಗಿಯೂ ಪಾಲಕರದ್ದು.ಈ ಹಿಂದೆ ಮಕ್ಕಳಾಗಿ ಒಡಹುಟ್ಟಿದವರಾಗಿ ತಮ್ಮ ಸಹೋದರರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಹಿರಿಯರಾದ ಹೊತ್ತಿನಲ್ಲಿ ನೆನೆದು ನಗುವ ಜನರಿರುವಂತೆಯೇ, ತಮ್ಮ ಬದುಕಿನ ಎಲ್ಲಾ ಅವಘಡಗಳಿಗೂ ತಮ್ಮ ಪಾಲಕರು ಮತ್ತು ಒಡಹುಟ್ಟಿದವರೇ ಕಾರಣ ಎಂದೂ, ಬಾಲ್ಯದಲ್ಲಿ ತಮ್ಮನ್ನು ಪರಿಗಣಿಸದೆ ಹೋದ ಕಾರಣ ತಾವು ಹೀಗಿರುವುದು ಎಂದು ಮತ್ತೆ ಕೆಲವರು ಹೇಳಬಹುದು. ಯಾವ ರೀತಿ ಎಲ್ಲಾ ಬೆರಳುಗಳು ಒಂದೇ ಸಮನೆ ಇರುವುದಿಲ್ಲವೋ ಅದೇ ರೀತಿ ಎಲ್ಲರ ಮನಸ್ಥಿತಿಯೂ ಒಂದೇ ಸಮನಾಗಿ ಇರುವುದಿಲ್ಲ… ಅವರವರ ಬುದ್ಧಿಗೆ, ಗ್ರಹಿಕೆಗೆ ಮತ್ತು ಭಾವಕ್ಕೆ ತಕ್ಕಂತೆ ಮನುಷ್ಯನ ವರ್ತನೆ ಇರುತ್ತದೆ.ಪಾಲಕರಾಗಿ ಇದನ್ನು ನಾವು ಖಂಡಿತವಾಗಿಯೂ ತಿಳಿದುಕೊಳ್ಳಬೇಕು.ಮತ್ತೆ ಕೆಲವರು ವಾಸ್ತವ ಪರಿಸ್ಥಿತಿಯನ್ನು ಕುರಿತು ಪ್ರಬುದ್ಧವಾಗಿ ಯೋಚಿಸಿ ತಾವು ಅನುಭವಿಸಿದ ತೊಂದರೆಗಳು ತಮ್ಮ ಮಕ್ಕಳ ಬಾಳಿನಲ್ಲಿ ಬರದೇ ಇರಲಿ ಎಂದು ಆಶಿಸುತ್ತಾರೆ ಮತ್ತು ಆ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಯೋಚಿಸಿ ಅಂತೆಯೇ ನಡೆದುಕೊಳ್ಳುತ್ತಾರೆ. ಸಾಮಾಜಿಕವಾಗಿ ನಡೆದು ಬಂದ ಕೆಲ ತಪ್ಪು ತಿಳುವಳಿಕೆಗಳ ಸರಪಳಿಯನ್ನು ತುಂಡರಿಸಿ ಹೊಸ ಬೆಸುಗೆಯನ್ನು ಹಾಕುತ್ತಾರೆ. ತಮ್ಮದೇ ಮಕ್ಕಳಲ್ಲಿ ಅತ್ಯುತ್ತಮ ಸ್ನೇಹ,, ಬಾಂಧವ್ಯ ಪ್ರೀತಿ ವಿಶ್ವಾಸಗಳ ಅನುಬಂಧವನ್ನು  ಉಳಿಸುವ ನಿಟ್ಟಿನಲ್ಲಿ ತಮ್ಮ ಪಾಲಿನ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ.ಎಲ್ಲ ಮಕ್ಕಳನ್ನು ಸಮಾನಸ್ಥಾಯಿ ಭಾವದಲ್ಲಿ ನೋಡುವ, ಸುರಕ್ಷತಾ ಭಾವವನ್ನು ಕೊಡುವ ಮತ್ತು ಯಾವುದೇ ರೀತಿಯ ಶರತ್ತು ಬದ್ಧತೆಗಳನ್ನು ಹೊಂದಿರದ ಏಕರೂಪದ ಪ್ರೀತಿಯನ್ನು ಕೊಡ ಮಾಡುತ್ತಾರೆ. ಅದುವೇ ಪಾಲಕತ್ವದ ನಿಜವಾದ ಗುರಿ. ವೀಣಾ ಹೇಮಂತ್ ಗೌಡ ಪಾಟೀಲ್

“ಹಿರಿಯ ಮಗುವಿಗೆ….ಹೊರೆಯಾಗದಿರಲಿ ಭ್ರಾತೃತ್ವ”ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಕಾವ್ಯಯಾನ

ಜಯಂತಿ ಕೆ ವೈ ಅವರ ಕವಿತೆ “ಸಾವಿನ ಮನೆ ಸೇರುವ ಸತ್ಯ”

ಕಾವ್ಯ ಸಂಗಾತಿ ಜಯಂತಿ ಕೆ ವೈ “ಸಾವಿನ ಮನೆ ಸೇರುವ ಸತ್ಯ” ಯಾರೂ ಬರೆಯದ ಕತೆಯ ಲೇಖಕಿಯಾಗುವ ಉಮೇದಿನಲಿಅಕ್ಷರಗಳ ಹೆಕ್ಕುವಾಗ ಆಸೆಯೇ ಇಲ್ಲವೆಂದ ಪದಗಳಿಗೆ ಪ್ರಶಸ್ತಿಗಳ ಆಮಿಷವೊಡ್ಡಿದೆ! ಕಾರಣವೇ ಇಲ್ಲದೆ ಕತೆಯಾಗುವಸುಳ್ಳಿನ ಬಲೆಯೊಳಗೆ ಸಿಲುಕುವಬೇಡವೆಂದರೂ ಬೇಕೆನಿಸುವಬಯಕೆ ಬಿಸಿಯ ಕಾವಿಗೆಪದಗಳು ಕರಗಿದವು. ಅದೆಲ್ಲೋ ಕುಳಿತ ಪುಟ್ಟ ಹಕ್ಕಿಯ ಶಿಳ್ಳೆಕೂಗುಎದೆಹಾಡಿಗೆ ಸ್ವರ ಕೂಡಿಸುವ ವೇಳೆಗೆಅಲ್ಲೊಂದು ಕಥಾನಕದ ಅನಾವರಣ ಸುಳ್ಳು ಸತ್ಯವಾಗಿಸತ್ಯ ಸುಳ್ಳಾಗಿ ಹೇಳುವವರ ಬಾಯಲ್ಲಿಹೊರಳಾಡುತ್ತಾ ಹೊರಬಿದ್ದವು ಮಾತಾಗಿದಾಖಲಾದವು ಮಸಿಯಾಗಿ. ಹೇಳಲೇನಿದೆ ಕೇಳಿದವರಿಗೆಲ್ಲಒಂದೇ ಪ್ರಶ್ನೆಉತ್ತರವೇ ಇಲ್ಲದಮಾರುತ್ತರ ಬಯಸದ ಹಾಗೆದಿಕ್ಕೆಡಿಸುವಂತೆ ಪದಗಳ ನದಿ ಹರಿದಂತೆಕತೆಗಾರಳಾಗುವ ಕನಸಿನ ಹಕ್ಕಿ ರೆಕ್ಕೆ ಬಿಚ್ಚಿತ್ತು! ಅಲ್ಲೊಂದು ದಿವ್ಯಮೌನರೆಕ್ಕೆಬಿಚ್ಚಿದ ಕನಸಿನ ಹಕ್ಕಿಗಾಗೇ ಕಾಯುತ್ತಿತ್ತುಮೌನ ಮಾತನಾಡಿತು‘ನ ಬ್ರೂಯಾತ್ ಸತ್ಯಮಪ್ರಿಯಮ್’ಸತ್ಯ ಸಾವಿನಮನೆ ಸೇರಿತುಪದಗಳಾಗುವ ಆಸೆಯೇಇಲ್ಲದ ವರ್ಣಮಾಲೆಯ ಅಕ್ಷರಗಳಲ್ಲಿಮೂಡಿತ್ತು ಮಂದಹಾಸ!! ಜಯಂತಿ ಕೆ ವೈ

ಜಯಂತಿ ಕೆ ವೈ ಅವರ ಕವಿತೆ “ಸಾವಿನ ಮನೆ ಸೇರುವ ಸತ್ಯ” Read Post »

ಕಾವ್ಯಯಾನ

ಡಾ.ಗೀತಾ ದಾನಶೆಟ್ಟಿ  ಬಾಗಲಕೋಟೆ ಅವರ ಕವಿತೆ “ಒಲುಮೆಯ ಸಾಂಗತ್ಯ”

ಕಾವ್ಯ ಸಂಗಾತಿ ಡಾ.ಗೀತಾ ದಾನಶೆಟ್ಟಿ  ಬಾಗಲಕೋಟೆ “ಒಲುಮೆಯ ಸಾಂಗತ್ಯ” ಇರಬೇಕು ಒಲುಮೆಯ ಸಾಂಗತ್ಯಮಧುರ ಭಾವಗಳು ಬೆಸೆದುಒಲವಿನ ಹೊನಲು ಹರಿಸಲು ಇರಬೇಕು ಒಲುಮೆಯ ಸಾಂಗತ್ಯಮಾತುಗಳು ನೂರಿದ್ದರೂಮೌನದ ಭಾಷೆ ಅರಿಯಲು ಇರಬೇಕು ಒಲುಮೆಯ ಸಾಂಗತ್ಯಬಯಕೆಯ ಬಳ್ಳಿಗೆಆಸರೆಯಾಗಿ ನಿಲ್ಲಲು ಇರಬೇಕು ಒಲುಮೆಯ ಸಾಂಗತ್ಯತಪ್ಪು ಒಪ್ಪುಗಳ ನಡುವೆತಿದ್ದಿ ಸರಿದಾರಿ ತೋರಲು ಇರಬೇಕು ಒಲುಮೆಯ ಸಾಂಗತ್ಯಪ್ರೀತಿ ಸ್ನೇಹಗಳ ಸಮ್ಮಿಲನಮನದಂಗಳದಿ ಅರಳಲು ಇರಬೇಕು ಒಲುಮೆಯ ಸಾಂಗತ್ಯಮನದ ಮಧುರ ಮಿಲನಕೆಅಮೃತಧಾರೆ ಹರಿಸಲು ಇರಬೇಕು ಒಲುಮೆಯ ಸಾಂಗತ್ಯಸಮಸ್ಯೆ ಸವಾಲುಗಳಿಗೆಭರವಸೆ ಬಾಳು ಬೆಳಗಲು ಇರಬೇಕು ಒಲುಮೆಯ ಸಾಂಗತ್ಯದೂರ ದಾರಿಯ ಪಯಣಕೆಸದಾಕಾಲ ಸಿಹಿ ಸ್ಪರ್ಶ ನೀಡಲು ಡಾ.ಗೀತಾ ದಾನಶೆಟ್ಟಿ  ಬಾಗಲಕೋಟೆ

ಡಾ.ಗೀತಾ ದಾನಶೆಟ್ಟಿ  ಬಾಗಲಕೋಟೆ ಅವರ ಕವಿತೆ “ಒಲುಮೆಯ ಸಾಂಗತ್ಯ” Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಅಕ್ಕ ತಂಗಿಯರ ಪರಸ್ಪರ ಸಾಂತ್ವಾನದ ಕ್ಷಣಗಳು ಸುಮತಿಯ ಅನುಪಸ್ಥಿತಿಯಲ್ಲಿ ಮೂರನೇ ಮಗಳು ತಾಯಿಯ ಬದಲು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಶಾಲೆ ಹೋಗುತ್ತಿದ್ದಳು. ತೋಟದ ಶಾಲೆಯ ಮಕ್ಕಳಿಗೆ ಯಾರಾದರೂ ಹೋಗಿ ಅಕ್ಷರಾಭ್ಯಾಸ ಮಾಡಿಸಲೇ ಬೇಕಾದ ಅನಿವಾರ್ಯತೆ ಇತ್ತು. ಒಂದು ದಿನ ಶಾಲೆಗೆ ರಜೆಯಾದರೂ ಕೂಡಾ ಮರುದಿನ ಮಕ್ಕಳು ಶಾಲೆಗೆ ಬರಲು ಹಿಂಜರಿಯುತ್ತಿದ್ದರು. ಮಕ್ಕಳು ಶಾಲೆಗೆ ಬರದೇ ಹೋದರೆ ತಿಂಗಳ ಸಂಬಳ ಎಲ್ಲಿ ತಪ್ಪಿ ಹೋಗುವುದೋ ಎನ್ನುವ ಭಯ. ಸಂಬಳದಿಂದ ಬರುವ ಹಣದಲ್ಲಿ ತಿಂಗಳು ಪೂರ್ತಿ ಸುಮತಿಯ ಕುಟುಂಬ ಕಳೆಯಬೇಕಿತ್ತು. ಎರಡನೇ ಮಗಳು ಕೆಲಸ ಮಾಡುತ್ತಿದ್ದರೂ ಅವಳಿಗೆ ಬರುವ ಸಂಬಳವೂ ಕಡಿಮೆ ಇತ್ತು. ಈಗ ಸುಮತಿ ಆಸ್ಪತ್ರೆಯಲ್ಲಿ ಇರುವುದರಿಂದ ಖರ್ಚುಗಳು ಸ್ವಲ್ಪ ಹೆಚ್ಚಿತ್ತು. ಸರಕಾರಿ ಆಸ್ಪತ್ರೆ ಆದ್ದರಿಂದ ಅಲ್ಲಿ ವಾರ್ಡ್ ಗೆ ಹಣ ಕಟ್ಟುವ ಅಗತ್ಯ ಇರಲಿಲ್ಲ. ಮಾತ್ರೆ ಔಷಧಿಗಳು ಅಲ್ಲಿಯೇ ಸಿಗುತ್ತಿದ್ದವು. ಹೊರಗಿನಿಂದ ತರಬೇಕೆಂದಿದ್ದರೆ ಎಷ್ಟೇಟಿನ ಲೆಕ್ಕದಲ್ಲಿ ಮೆಡಿಕಲ್ ಸ್ಟೋರ್ ನಿಂದ ಖರೀದಿಸಬಹುದಿತ್ತು. ಆದರೆ ಇನ್ನುಳಿದ ಖರ್ಚನ್ನು ನಿಭಾಯಿಸುವುದು ಕಷ್ಟವಾಗುತ್ತಿತ್ತು. ಗುರುವಾರ ಶಾಲೆಗೆ ರಜೆ ಇದ್ದ ಕಾರಣ ಮೂರನೇ ಮಗಳು ಸುಮತಿಯನ್ನು ನೋಡಲು ಆಸ್ಪತ್ರೆಗೆ ಬಂದಳು. ಇನ್ನೂ ಹದಿನಾರರ ಹರೆಯದ ಹುಡುಗಿ ತೋಟದ ನಿರ್ಜನವಾದ ದಾರಿಯಲ್ಲಿ ಒಬ್ಬಳೇ ಶಾಲೆಗೆ ಹೋಗಿ ಬರಬೇಕಿತ್ತು. ಸುಮತಿ ಆಸ್ಪತ್ರೆಯಲ್ಲಿ ದಾಖಲಾದ್ದರಿಂದ ಮನೆಯಲ್ಲಿಯೂ ಕೂಡ ಅವಳೊಬ್ಬಳೇ ಇರಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಸುಮತಿಯ ಮಕ್ಕಳು ಧೈರ್ಯವಂತರು. ಅನಿವಾರ್ಯತೆಗಳಲ್ಲಿ ತಮ್ಮನ್ನು ತಾವೇ ಸಂಭಾಳಿಸಿಕೊಳ್ಳಲು ಶಕ್ತರಾಗಿದ್ದರು. ಜೀವನದಲ್ಲಿ ಅವರು ಅನುಭವಿಸಿದ ಕಷ್ಟಗಳು ಆವರಿಗೆ ವಿಧಿ ಒಡ್ಡಿರುವ ಸವಾಲುಗಳನ್ನು ಎದುರಿಸಿ ಬದುಕುವ ಪಾಠ ಕಲಿಸಿತ್ತು. ಆದರೂ ಭಯ, ಆತಂಕ, ಒಂಟಿತನ ಇವೆಲ್ಲವೂ ಕಾಡುತ್ತಿದ್ದರೂ ಆ ಹುಡುಗಿ ಧೈರ್ಯವಾಗಿ ಶಾಲೆಗೆ ಹೋಗಿ ಬಂದು ತಾಯಿಯ ಕೆಲಸವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಳು. ಇದೀಗ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿರುವ ತಾಯಿಯನ್ನು ಕಂಡು ಅವಳ ಮನಸ್ಸು ವಿಹ್ವಲಗೊಂಡಿತು. ಕಾಲೇಜಿನಿಂದ ಆಸ್ಪತ್ರೆಗೆ ಬಂದಾಗ, ತನ್ನ ತಂಗಿ ತಾಯಿಯನ್ನು ನೋಡಲು ಬಂದಿರುವುದು ಅಕ್ಕನಿಗೆ ತಿಳಿದು ಸಂತೋಷದ ಜೊತೆಗೆ ದುಃಖವೂ ಆಯಿತು. ವೈದ್ಯರು ತಾಯಿಯ ಬಗ್ಗೆ ತಿಳಿಸಿರುವ ಸಂಗತಿಯನ್ನು ತಂಗಿಗೆ ಹೇಳಲೇ ಬೇಕಿತ್ತು. ಇವಳಿಗೆ ಅವಳು, ಅವಳಿಗೆ ಇವಳು ಸದಾ ಸಾಂತ್ವನ ನೀಡಿ, ಪರಸ್ಪರರನ್ನು ಕಾಳಜಿವಹಿಸುತ್ತಿದ್ದರು. ಇಬ್ಬರೂ ಅಕ್ಕತಂಗಿಯರಂತಿರದೇ ಆತ್ಮೀಯ ಗೆಳತಿಯರಂತೆ ಅನ್ಯೋನ್ಯವಾಗಿದ್ದರು. ಹಾಗಾಗಿ ಏನೇ ಇದ್ದರೂ ಮುಚ್ಚು ಮರೆ ಇಲ್ಲದೇ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಆದರೂ ಇಂತಹಾ ಖೇದಕರ ಸಂಗತಿಯನ್ನು ತಿಳಿಸಲು ಅಕ್ಕನಿಗೆ ಕಷ್ಟವಾಯಿತು…… ಇನ್ನು ನಮ್ಮ ತಾಯಿ ಬದುಕಿರುವುದು ಕೇವಲ ಆರು ತಿಂಗಳ ಮಾತ್ರ…. ಅಮ್ಮ ತುಂಬಾ ಗಂಭೀರ ಸ್ಥಿತಿಯಲ್ಲಿರುವಳು…. ಒಂದೊಂದು ದಿನ ಕಳೆಯುತ್ತಿದ್ದಂತೆ ಅವಳು ನಮ್ಮಿಂದ ದೂರವಾಗುತ್ತಿದ್ದಾಳೆ… ಎನ್ನುವ ಸತ್ಯವನ್ನು ನಾನು ಹೇಗೆ ತಂಗಿಗೆ ಹೇಳಲಿ? ಎಂಬ ಆಲೋಚನೆಯಲ್ಲಿ ಇದ್ದಳು. ಸುಮತಿಯ ಮೂರನೇ ಮಗಳು ತನ್ನ ತಾಯಿ ಮತ್ತು ಅಕ್ಕನ ಮುಖವನ್ನು ಸೂಕ್ಷ್ಮವಾಗಿ ಗಮನಿಸಿದಳು. ತಾಯಿಯ ಮುಖದಲ್ಲಿ ಭರವಸೆಯ ಛಾಯೆ ಇದ್ದರೆ, ಅಕ್ಕನ ಮುಖದಲ್ಲಿ ನಿರಾಶೆಯ ಛಾಯೆ ಮನೆ ಮಾಡಿತ್ತು. ಸದಾ ಹಸನ್ಮುಖಿಯಾದ ಅಕ್ಕ ಗಂಭೀರವಾದ ವಿಚಾರವಿಲ್ಲದೆ ಹೀಗೆ ಚಿಂತಾಕ್ರಾಂತಳಾಗಿ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ತಂಗಿಗೆ ತಿಳಿದಿತ್ತು. ಆದರೂ ತಾಯಿಯ ಎದುರು ಏನನ್ನೂ ಕೇಳುವುದು ಸೂಕ್ತವಲ್ಲ ಎಂದುಕೊಂಡು…. “ಅಮ್ಮಾ ….ಈಗ ಹೇಗಿದ್ದೀಯಾ?….ಮೊನ್ನೆ ನೀನು ಮನೆಯಿಂದ ಹೊರಟಾಗ ತುಂಬಾ ದಣಿದಿದ್ದೆ…. ಈಗ ನಿನ್ನ ಆಯಾಸ ಕಡಿಮೆಯಾಯಿತೇ? ಮನೆಯಲ್ಲಿ ನೀನು ಆಗಾಗ ವಾಂತಿ ಮಾಡಿಕೊಳ್ಳುತ್ತಿದ್ದೆ…. ಈಗ ಹೇಗಿದೆ?…. ಊಟ ಸೇರುತಿದೆಯೇ?…. ಎಂದು ತಾಯಿಯನ್ನು ಕೇಳಿದಳು. ಅದಕ್ಕೆ ಸುಮತಿ ಈಗ ಸ್ವಲ್ಪ ಪರವಾಗಿಲ್ಲ ಮಗಳೇ….. ವೈದ್ಯರ ಮೇಲ್ನೋಟದಲ್ಲಿ, ದಾದಿಯರ ಶುಶ್ರೂಷೆಯಲ್ಲಿ ಈಗ ಸ್ವಲ್ಪ ಚೇತರಿಸಿಕೊಂಡಿದ್ದೇನೆ…. ಜೊತೆಗೆ ನಿಮ್ಮಿಬ್ಬರ ಪ್ರೀತಿ ಮತ್ತು ಕಾಳಜಿ ನನಗೆ ಔಷಧವಲ್ಲವೇ? ….. ಅದಿರಲಿ ನೀನು ಹೇಗಿದ್ದೀಯಾ?….. ನಿನ್ನನ್ನು ಒಬ್ಬಳನ್ನೇ ಮನೆಯಲ್ಲಿ ಬಿಟ್ಟು ನಾನು ಇಲ್ಲಿ ಆಸ್ಪತ್ರೆಯಲ್ಲಿ ದಾಖಲಾಗುವ ಅನಿವಾರ್ಯ ಪರಿಸ್ಥಿತಿ ಬಂತು…. ನನಗೆ ತಿಳಿದಿರಲಿಲ್ಲ ಹೀಗೆ ಕೂಡಲೇ ನನ್ನನ್ನು ಆಸ್ಪತ್ರೆಯಲ್ಲಿ ದಾಖಲು ಮಾಡುತ್ತಾರೆ ಎಂಬುದು…. ವೈದ್ಯರು ಪರಿಶೀಲನೆ ನಡೆಸಿ ಮನೆಗೆ ಕಳುಹಿಸುತ್ತಾರೆ ಎಂದು ತಿಳಿದಿದ್ದೆ…. ಇಲ್ಲಿಗೆ ಬಂದ ಕೂಡಲೇ ನನ್ನನ್ನು ವೈದ್ಯರು ಹಲವಾರು ಪರೀಕ್ಷೆಗಳಿಗೆ ಒಳಪಡಿಸಿ, ಇಲ್ಲಿ ದಾಖಲಾಗುವಂತೆ ತಿಳಿಸಿದರು…. ನಿನ್ನ ಅಕ್ಕ ಕೂಡ ಕೂಡಲೇ ನನ್ನನ್ನು ಇಲ್ಲಿಗೆ ದಾಖಲಿಸಿದಳು”….. ಎಂದಾಗ,…. “….ಅಮ್ಮಾ ….ಅಕ್ಕ ಆ ದಿನವೇ ನನಗೆ ಈ ಎಲ್ಲಾ ವಿಷಯವನ್ನು ತಿಳಿಸಿದ್ದಾಳೆ…. ನೀನು ಹೆಚ್ಚು ಯೋಚಿಸಿ ಆಯಾಸ ಪಡಬೇಡ…. ನಾನು ಅಲ್ಲಿ ಚೆನ್ನಾಗಿದ್ದೇನೆ…. ಅಲ್ಲಿ ಸುತ್ತಲೂ ನಮಗೆ ಪರಿಚಿತರಲ್ಲವೇ ಇರುವುದು? ಹಾಗಾಗಿ ಯಾವುದೇ ತೊಂದರೆ ಇಲ್ಲ…. ದಿನವೂ ನಾನು ಶಾಲೆಗೆ ಹೋಗಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಬರುತ್ತಿದ್ದೇನೆ…. ನೀನು ಯಾವುದರ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳಬೇಡ…. ನಿನ್ನ ಜೊತೆ ಸದಾ ನಾನು ಮತ್ತು ಅಕ್ಕ ಇದ್ದೇವೆ…. ಎಂದಳು. ಮಗಳ ಮಾತನ್ನು ಕೇಳಿದ ಸುಮತಿ ಎದ್ದು ಕುಳಿತು, ಇಬ್ಬರನ್ನೂ ತನ್ನ ಅಕ್ಕಪಕ್ಕದಲ್ಲಿ ಬಂದು ಕುಳಿತುಕೊಳ್ಳುವಂತೆ ಸೂಚಿಸಿದಳು.ತಾಯಿಯ ಅಣತಿಯಂತೆ ಇಬ್ಬರೂ ಅಕ್ಕಪಕ್ಕ ಬಂದು ಕುಳಿತರು. ಸುಮತಿ ಮಕ್ಕಳಿರಿಬ್ಬರನ್ನೂ ತೋಳಿಂದ ಬಳಸಿ …. ಮಕ್ಕಳೇ ಈ ಅಮ್ಮನನ್ನು ಕ್ಷಮಿಸಿ…. ಈ ವಯಸ್ಸಿಗೇ ನಿಮ್ಮನ್ನು ಹಲವಾರು ಕಷ್ಟಗಳಿಗೆ ದೂಡಿದೆ.‌ ನನ್ನಿಂದ ನಿನ್ನ ವಿಧ್ಯಾಭ್ಯಾಸ ಕೂಡಾ ಮೊಟಕುಗೊಂಡಿತು…..ಎನ್ನುತ್ತಾ ಮೂರನೇ ಮಗಳ ಭುಜವನ್ನು ಹಿಡಿದು ತನ್ನಡೆಗೆ ಆನಿಸಿಕೊಂಡು ಸುಮತಿ ಹೇಳಿದಳು….. “ಅಮ್ಮಾ …..ಅದಕ್ಕಾಗಿ ನೀನೇನೂ ಬೇಸರಗೊಳ್ಳಬೇಡ…. ಎಸ್ ಎಸ್ ಎಲ್ ಸಿ ವರೆಗೂ ಓದಿದ್ದೇನೆ…. ಅಕ್ಕ ಈಗ ಪದವಿ ತರಗತಿಯಲ್ಲಿ ಓದುತ್ತಿದ್ದಾಳೆ…. ತಂಗಿ ನವೋದಯ ಶಾಲೆಯಲ್ಲಿ ಓದುತ್ತಿದ್ದಾಳೆ…. ನಾವು ವಿದ್ಯೆಯನ್ನು ಕರೆಯಲಿ ಎಂದು ನೀನು ಮಾಡಿದ ತ್ಯಾಗ ಅಷ್ಟಿಷ್ಟಲ್ಲ”…. ಎಂದು ಹೇಳುತ್ತಾ, ನೀನೇಕೆ ಹೀಗೆ ಮಂಕಾಗಿರುವೆ ಎಂಬಂತೆ ಪ್ರಶ್ನಾರ್ಥಕವಾಗಿಅಕ್ಕನನ್ನು ನೋಡಿದಳು. ಅವಳ ಮುಖವು ಮ್ಲಾನವಾಗಿತ್ತು. ಕಣ್ಣುಗಳಲ್ಲಿ ಕಂಡೂ ಕಾಣದಂತೆ ಕಣ್ಣೀರಿನ ಪಸೆಯಿತ್ತು. ರುಕ್ಮಿಣಿ ನಾಯರ್

Read Post »

ಕಾವ್ಯಯಾನ

ಎನ್. ಜಯಚಂದ್ರನ್ ಅವರ ಕವಿತೆ “ನೆರಳು ದಾಟಿದ ಹೆಜ್ಜೆ.”

ಕಾವ್ಯ ಸಂಗಾತಿ ಎನ್. ಜಯಚಂದ್ರನ್  “ನೆರಳು ದಾಟಿದ ಹೆಜ್ಜೆ.”             ಬಾಳ ಹಾದಿಯಲಿ ನಡೆದು ಬಂದಹಾದಿಯ ಗುರುತುಗಳೆಲ್ಲಾ ಕಥೆಗಳಾದವು,ನಗುವಿನ ಹನಿಗಳು  ಮುತ್ತಾಗಿ ಮೂಡಿನೆನಪಿನ ಮಡಿಲಲ್ಲಿ ಶಾಶ್ವತವಾದವು. ಕಳೆದ ದಿನಗಳ ಸುವರ್ಣ ಕ್ಷಣಗಳುಕನಸಿನಂತೆ ಮನದೊಳಗೆ ಉಳಿದವು,ಸ್ನೇಹದ ಸ್ಪರ್ಶದ ಸಿಹಿ ಮಾತುಗಳುಹೃದಯದ ತಂತಿಗಳಲಿ ಹಾಡಾದವು. ಬಿರುಗಾಳಿಗಳ ನಡುವೆ ನಿಂತ ಧೈರ್ಯಜೀವನದ ಪಾಠವಾಗಿ ಬೆಳೆದಿತು,ಸೋಲಿನ ನೆರಳನ್ನು ದಾಟಿದ ಹೆಜ್ಜೆಗೆಲುವಿನ ಬೆಳಕಾಗಿ ಅರಳಿತು. ತಾಯಿಯ ಮಮತೆ, ತಂದೆಯ ಆಶೀರ್ವಾದಬಾಳ ದಾರಿಯ ದೀಪಗಳಾದವು,ಗುರುವಿನ ಜ್ಞಾನ, ಗೆಳೆಯರ ಪ್ರೀತಿಮನದ ಸಂಪತ್ತಾಗಿ ನೆಲೆಗೊಂಡವು. ಕಾಲದ ಚಕ್ರವು ಮುಂದೆ ಸಾಗಿದರೂಆ ಕ್ಷಣಗಳು ಹಿಂದೆ ಮರೆಯಾಗಲಿಲ್ಲ,ಸಾರ್ಥಕ ಬದುಕಿನ ಸುಂದರ ನೆನಪುಗಳುಮನದ ತೋಟದಲ್ಲಿ ಎಂದೂ ಒಣಗಲಿಲ್ಲ. ಕೊನೆಗೆ ಉಳಿಯುವುದು ಸಂಪತ್ತು ಅಲ್ಲ,ಹೆಸರಿನ ವೈಭವವೂ ಅಲ್ಲ,ಪ್ರೀತಿಯಿಂದ ಬದುಕಿದ ಕ್ಷಣಗಳೇಜೀವನದ ನಿಜವಾದ ಹಬ್ಬವಾಗುವವು. ಸಾರ್ಥಕ ಬದುಕಿನ ನೆನಪುಗಳುಸಂಜೆಯ ಸೂರ್ಯನ ಕಿರಣಗಳಂತೆ,ಅಸ್ತವಾಗುವ ಹೊತ್ತಿನಲ್ಲಿಯೂ ಸಹಮನದ ಆಕಾಶವನ್ನು ಬೆಳಗಿಸುವವು.ನೆರಳು ದಾಟಿದ ಹೆಜ್ಜೆ.            ಎನ್. ಜಯಚಂದ್ರನ್ 

ಎನ್. ಜಯಚಂದ್ರನ್ ಅವರ ಕವಿತೆ “ನೆರಳು ದಾಟಿದ ಹೆಜ್ಜೆ.” Read Post »

ಕಾವ್ಯಯಾನ

ಮಧು ‌ವಸ್ತ್ರದ ಮುಂಬಯಿ “ವಸಂತನ ಅಳಲು”

ಕಾವ್ಯ ಸಂಗಾತಿ ಮಧು ‌ವಸ್ತ್ರದ ಮುಂಬಯಿ “ವಸಂತನ ಅಳಲು” ಮಾಮರದ ಚಿಗುರೆಲೆ ಅದೇಕೋ ಅತ್ತಿತ್ತಅಲ್ಲಾಡದಾಗಿಹುದುಮಧು ಹೀರಿ ಹಾರುವ ದುಂಬಿ ಝೇಂಕಾರಮಾಡದಾಗಿಹುದುಕೋಗಿಲೆ ಹಾಡುವುದ ಮರೆತು ಮೌನದಲಿಕುಳಿತಿಹುದುನವಿಲು ನರ್ತಿಸದೆ ಮುಗಿಲೆಡೆ ದೈನ್ಯದಿಂದನೋಡುತಿಹುದು ತೆಂಗು ಬಾಳೆ ಅಡಿಕೆ ಶುಭಕಾರ್ಯಗಳಿಲ್ಲದೆಮಂಕಾಗಿಹವುಮಲ್ಲಿಗೆ ಸಂಪಿಗೆ ಹೂಗಳು ಒಣಗಿ ಮೊಗವಬಾಡಿಸಿಹವುಪ್ರಾಣಿಸಂಕುಲ ಮನುಜನಾಟಕೆ ಸಿಕ್ಕಿ ತತ್ತರಿಸಿಹೋಗಿಹುದುಪಶುಗಳೆಲ್ಲವೂ ನಿನ್ನ ಕ್ರೂರ ಆರ್ಭಟಕೆ ಬೆದರಿಕಂಗಾಲಾಗಿಹವು ಬೀಸುಗಾಳಿಯಲಿ ಕಲುಷಿತ ವಿಷದ ದುರ್ಗಂಧಬರುತಿಹುದುಹರಿವ ನದಿಗಳಲಿ ಮನುಜ ಬಿಸುಟಿದ ಕೊಚ್ಚೆಕಸ ಬೆರೆತಿಹುದುಮಲಿನ ಕೆಸರು ನೀರಿನಲ್ಲಿ  ಜಲಚರಗಳ ಜೀವಬರಡಾಗಿಹುದುಹಕ್ಕಿ ಪಕ್ಷಿಗಳ ಚಿಲಿಪಿಲಿ ಕಲರವವಿಲ್ಲದೆ ಕಾಡುಬರಿದಾಗಿಹುದು. ಪ್ಲಾಸ್ಟಿಕ್, ಕಸ, ಕಾಗದ ಉರಿದು ಹೊಗೆ ಏರಿಬಾನು ಕಪ್ಪಾಗಿಹುದುನಿನ್ನ ಸ್ವಾರ್ಥದಾಟಕೆ ಸಿಲುಕಿ ಹಸಿರು ಕಾನನ ಬೋಳಾಗಿಹುದುನಿನ್ನಹಂಕಾರ ನೋಡಿ ಸಹಿಸದೆ ಸಮುದ್ರರಾಜ ಕೋಪದಿ ಗರ್ಜಿಸಿಹನುತನ್ನಲೆಗಳ ಬೀಸಿ ಭೂತಾಯಿಯ ಬಾಚಿ ತಬ್ಬುತ ಸಾಂತ್ವನ ನೀಡಿಹನು ಇಳೆಯ ಸಿಂಗರಿಸಿ ನಲಿಯಲು ಬಂದ ಋತುವಸಂತ ಬೆಚ್ಚಿಹನುಪೃಥ್ವಿಯ ಮೇಲಿನ ದಾರುಣ ಸ್ಥಿತಿಯ ಕಂಡುಮರುಗಿ ಹೋಗಿಹನುಸ್ವಚ್ಛತೆ ನಿರ್ಮಲತೆ ಕಾಪಾಡುತ ಎಚ್ಚರದಿಂದಇರಿ ಎಂದಿಹನುನಿಸರ್ಗದ ಕಾಳಜಿ ವಹಿಸುತ ಸುಖದಿ ಬಾಳಿರಿಎಂದು ಹರಸಿಹನು.. ಮಧು ‌ವಸ್ತ್ರದ ಮುಂಬಯಿ

ಮಧು ‌ವಸ್ತ್ರದ ಮುಂಬಯಿ “ವಸಂತನ ಅಳಲು” Read Post »

ಇತರೆ, ರಂಗಭೂಮಿ

ರಂಗ ಪ್ರಯೋಗ”ಭಾರತದ ಪಾಡು ಮುತ್ತುಪಾಡಿಯ ಹಾಡು ಮನಸೆಳೆದ ಸ್ವಾತಂತ್ರ್ಯದ ಓಟ ನಾಟಕ”-ಗೊರೂರು ಅನಂತರಾಜು, ಹಾಸನ.

ರಂಗ ಸಂಗಾತಿ ಗೊರೂರು ಅನಂತರಾಜು, ಹಾಸನ. ರಂಗ ಪ್ರಯೋಗ “ಭಾರತದ ಪಾಡು ಮುತ್ತುಪಾಡಿಯ ಹಾಡು ಮನಸೆಳೆದ ಸ್ವಾತಂತ್ರ್ಯದ ಓಟ ನಾಟಕ” ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶಿವಮೊಗ್ಗದ ರಂಗಾಯಣ ಕಲಾವಿದರು ಬೋಳುವಾರು ಮಹಮದ್ ಕುಂಞ ಅವರ ಕಾದಂಬರಿ ಆಧಾರಿತ ಸ್ವಾತಂತ್ರö್ಯದ ಓಟ ನಾಟಕವನ್ನು ಕಳೆದ ಭಾನುವಾರ ಪ್ರದರ್ಶಿಸಿ ಪ್ರೇಕ್ಷಕರ ಮನ ಸೆಳೆದರು.  ಪ್ರಸಿದ್ಧ ಕಥೆಗಾರರು, ಕಾದಂಬರಿಕಾರರು,  ನಾಟಕಕಾರರು ಆದ ಬೋಳುವಾರು ಮಹಮದ್ ಕುಂಞಯವರು ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂಸ್ಕೃತಿ ಮತ್ತು ಬದುಕನ್ನು ಸೃಜನಶೀಲ ಗದ್ಯಕ್ಕೆ ಪರಿಚಯಿಸಿದವರು.  ತಮ್ಮ ಕಥೆಗಳ ಮೂಲಕ ಮುಸ್ಲಿಂ ಸಮುದಾಯದ ನಂಬಿಕೆ, ಆಚರಣೆ ಮತ್ತು ಸಾಮಾಜಿಕ ವಾಸ್ತವತೆಗಳನ್ನು ಚಿತ್ರಿಸಿದ್ದಾರೆ. ಇವರ ಸ್ವಾತಂತ್ರö್ಯದ ಓಟ ಒಂದು ಮೈಲುಗಲ್ಲು ಕಾದಂಬರಿ, ಇದಕ್ಕೆ ೨೦೧೬ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ೧೯೪೭ರಲ್ಲಿ ದೇಶ  ವಿಭಜನೆಯಿಂದ ಪ್ರಾರಂಭವಾಗುವ ಕಥಾವಸ್ತು ೬೦ ವರ್ಷ ಕಾಲ ಚಾಂದ್ ಅಲಿ ಎಂಬ ವ್ಯಕ್ತಿಕೇಂದ್ರಿತ ಕಥೆಯಾಗಿ ಆ ಕಾಲಘಟ್ಟದ ನೈಜ ಬದುಕನ್ನು ಚಿತ್ರಿಸುತ್ತದೆ. ಭಾರತ ಪಾಕಿಸ್ತಾನ ಗಡಿಯ ವಾಘಾದಲ್ಲಿ ಆರಂಭವಾಗುವ ಕಥೆ ಕೊನೆಗೆ ಅಲ್ಲಿಯೇ ಮುಕ್ತಾಯಗೊಳ್ಳುವ  ಜಾತ್ಯಾತೀತ ಪರಿಕಲ್ಪನೆಯಲ್ಲಿ ರೂಪು ತೆಳೆದಿದೆ.   ಗೋಮಾರದಹಳ್ಳಿ ಮಂಜುನಾಥ್  ನಾಟಕಕ್ಕೆ ರೂಪಾಂತರಿಸಿದ್ದು, ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನ  ನಟರಾಜ್ ಹೊನ್ನವಳ್ಳಿಯವರದು.  ಸಹ ನಿರ್ದೇಶನ ಸಲ್ಮಾ ದಂಡಿನ್.  ಈ ಹಿಂದೆ ನಟರಾಜ್ ಹೊನ್ನವಳ್ಳಿಯವರು ಇದೇ ಕಲಾಭವನದಲ್ಲಿ ಪ್ರದರ್ಶಿಸಿದ್ಧ  ಪಿ.ಲಂಕೇಶರ ಗುಣಮುಖ ನಾಟಕವನ್ನು ಅದ್ಭುತವಾಗಿ ಪ್ರದರ್ಶಿಸಿದ್ದರು. ಆಗ ನೋಡಿ ಬರೆದಿದ್ದು ನನ್ನ ರಂಗಪ್ರಯೋಗ (೨೦೧೧) ಕೃತಿಯಲ್ಲಿ ದಾಖಲಾಗಿದೆ.ಒಂದು ಸಾವಿರದ ಒಂದು ನೂರಾ ಹನ್ನೊಂದು ಪುಟಗಳ ಸುಧೀರ್ಘ ಕಾದಂಬರಿಯನ್ನು ಮೂರೂವರೆ ಗಂಟೆಯಲ್ಲಿ  ಪ್ರೇಕ್ಷಕರಿಗೆ ಇಷ್ಟವಾಗುವ ನಾಟಕವಾಗಿ ರೂಪಿಸುವಲ್ಲಿ   ನಿರ್ದೇಶಕರ ಜಾಣ್ಮೆ, ಕಲಾವಿದರ ತಲ್ಲೀನ ನಟನೆ, ರಂಗ ಸಂಗೀತ, ವಸ್ತç ವಿನ್ಯಾಸ, ರಂಗ ಪರಿಕರ,  ಬೆಳಕು ಈ ಎಲ್ಲವೂ ಒಗ್ಗೂಡಿದೆ.  ನಾಟಕದ ಪೂರ್ವಾರ್ಧ ದೇಶ ವಿಭಜನೆ, ಅದರ ಪರಿಣಾಮಗಳನ್ನು ಹೇಳಿದರೆ ಉತ್ತರಾರ್ಧ ಭಾಗವು ಮುತ್ತುಪಾಡಿಯ ಗ್ರಾಮ್ಯ ಕತೆಯನ್ನು ಮನಮುಟ್ಟವಂತೆ ಹೇಳುತ್ತದೆ. ದೇಶ ವಿಭಜನೆ ಪೂರ್ವ ಪಾಕಿಸ್ತಾನದ ಲಾಹೋರ್ ನಲ್ಲಿ ಸಿಖ್ ಮಾಲಿಕತ್ವದ ಕಬ್ಬಿಣದ ಕುಲುಮೆಯಲ್ಲಿ ಕೆಲಸ ಮಾಡುವ ಅನಾಥ ಹುಡುಗ  ಚಾಂದ್ ಆಲಿ ನಾಟಕದ ಕೇಂದ್ರ ಪಾತ್ರ. ದೇಶ ವಿಭಜನೆಗೆ ದುರಂತ ಸಾಕ್ಷಿಯಾಗಿ ಕಂಡುಬರುವ ಈ ಪಾತ್ರ  ನಾಟಕದುದ್ದಕ್ಕೂ ಪ್ರಧಾನ ಭೂಮಿಕೆಯಲ್ಲಿ  ಮೂರು ಹಂತಗಳಲ್ಲಿ  ಹದಿನೈದರ ವಯೋಮಾನದ ಹುಡುಗ, ಮದುವೆ ವಯಸ್ಸಿನ ಪ್ರಾಯಕ್ಕೆ ಬಂದ ಯುವಕ, ಇಳಿವಯಸ್ಸಿನ  ವೃದ್ಧ ಹೀಗೆ ಬರುವ ಪಾತ್ರಗಳನ್ನು ಮೂರು ಕಲಾವಿದರ ಪ್ರಸ್ತುತಿಯಲ್ಲಿ ತನ್ನ ಸುತ್ತಲಿನ ಸನ್ನಿವೇಶ ಸಮಯಕ್ಕೆ ತಕ್ಷಣಕ್ಕೆ ಉದ್ಭವಿಸುವ ವಿದ್ಯಮಾನಗಳಿಗೆ ಬಾಗಿಯಾಗುತ್ತಾ  ಕಥೆಯ ಪಾತ್ರ ಸಾಗುತ್ತದೆ. ಇಲ್ಲಿ  ಭಾವನಾತ್ಮಕ ಸಂಬAಧಗಳು  ಭಾವ್ಯಕ್ಯ ಭಾರತವನ್ನು ಎತ್ತಿ ಹಿಡಿಯುತ್ತವೆ. ನಾಟಕದ ಪೂರ್ವಾರ್ಧದ ದೇಶ ವಿಭಜನೆ ಕಾಲದ ಘಟನೆಗಳು ಭಾವಾವೇಶಗಳ ರೋಚÀಕತೆ ಇಲ್ಲದೆ ತಣ್ಣಗೆ ನಿರೂಪಿಸುತ್ತಾ ಸಾಗುತ್ತದೆ. ತನ್ನ ಕುಟುಂಬದವರಿAದ ಬೇರ್ಪಟ್ಟು ಜೀವ ಉಳಿಸಿಕೊಳ್ಳುವ ಭರದಲ್ಲಿ ಭಾರತ ಪ್ರವೇಶಿಸುವ ಸಿಖ್ ಕುಟುಂಬದ ತನ್ವೀರ್, ಮೊಹಿಂದರ್ ಬಾಭಿ ಜೊತೆಗೆ   ಚಾಂದ್ ಅಲಿ ಕೂಡ ಭಾರತ ಪ್ರವೇಶಿಸುತ್ತಾನೆ. ತಾನು ಲಾಹೋರ್‌ಗೆ ವಾಪಸ್ಸು ಹೋಗಬೇಕೆನ್ನುವ ಚಾಂದ್ ಅಲಿಯ ಆಸೆಗೆ ಅನೇಕ ಸಿಕ್ಕುಗಳು ಎದುರಾಗಿ ನಲುಗುತ್ತಾನೆ. ಬದುಕಿನ ತಿರುವಿನಲ್ಲಿ ಉತ್ತರ ಭಾರತದಿಂದ ದಕ್ಷಿಣದ ಮುತ್ತುಪ್ಪಾಡಿಗೆ ಬರುವ   ಅನೇಕ ಅನಿರೀಕ್ಷಿತ ಘಟನೆಗಳು ಜರುಗುತ್ತವೆ. ಅಚಾನಕ್ ಹೊನ್ನು, ಹೆಣ್ಣು, ಆಸ್ತಿಯ ಅದೃಷ್ಟವು ಒಲಿದು ಬರುತ್ತದೆ. ನಾಟಕದ ಅಂತ್ಯದಲ್ಲಿ ಅದೇ ವಾಘಾ ಗಡಿಯಲ್ಲಿ ವಿಭಜನೆ ಕಾಲದಲ್ಲಿ ಕಳೆದು ಹೋದವರ ಪುನರ್ ಮಿಲನದೊಂದಿಗೆ ನಾಟಕ ಸುಖಾಂತ್ಯಗೊಳ್ಳುತ್ತದೆ. ಉತ್ತರಾರ್ಧ ಮಹಾತ್ಮ ಗಾಂಧೀಜಿಯ ಕನಸಿನ ಗ್ರಾಮ ಸ್ವರಾಜ್ಯ ಗ್ರಾಮವಾಗಿ ಮುತ್ತುಪಾಡಿ ಕಾಣಿಸಿಕೊಳ್ಳುತ್ತದೆ. ಈ ನಡುವೆ ನಾಟಕದ ಮಧ್ಯೆ ನಡೆಯುವ ಗಾಂಧಿಹತ್ಯೆಗೆ ಚಾಂದ್ ಆಲಿ ಮೂಕಸಾಕ್ಷಿಯಾಗುತ್ತಾನೆ.   ನನ್ನ ದೇವರು ಸತ್ತು ಹೋದ ಎಂದು ಹೇಳುವುದು ಮಾರ್ಮಿಕವಾಗಿದೆ. ಇಲ್ಲಿ  ಗಾಂಧಿ ಪಾತ್ರವನ್ನು ರಂಗಕ್ಕೆ ತರದೆ ನಿರ್ದೇಶಕರು ಜಾಣ್ಮೆ ತೋರಿದ್ದಾರೆ. ಚರಕವನ್ನು ಬಿಳಿಯ ಬಟ್ಟೆಯಲ್ಲಿ ಸುತ್ತಿ ಹೊರಡುವ ಚಂದನ್ ಹೆಸರಿನಲ್ಲಿ ದಾಖಲಾಗಿ ಭಾರತಕ್ಕೆ ಬಂದ ಚಾಂದ್ ಅಲಿ ಗಾಂಧೀಜಿಯ ಗ್ರಾಮಸ್ವರಾಜ್ಯದ ಕನಸಿನ ಕೂಸಾಗಿ ಪ್ರತಿಬಿಂಬಿಸುತ್ತಾನೆ.   ನಾಟಕದ ಉತ್ತರಾರ್ಧ  ಮುತ್ತುಪ್ಪಾಡಿ ಎಂಬ ಗ್ರಾಮದ  ಸಾಮರಸ್ಯದ ಬದುಕಿನ ಸೊಗಸಾದ ಕತೆ ಸ್ವತಂತ್ರ ಆಯಾಮದಲ್ಲಿ  ತೆರೆದುಕೊಳ್ಳುತ್ತದೆ. ಇಲ್ಲಿ ನಿರ್ದೇಶಕರು ಚಾಂದ್ ಅಲಿಯನ್ನೇ ಪ್ರಧಾನ ಎಳೆಯಾಗಿಸಿ ದೃಶ್ಯರೂಪಕದಲ್ಲಿ ಸರಾಗವಾಗಿ ನಾಟಕ ಸಾಗಿಸುವ ದಿಶೆಯಲ್ಲಿ ಬೇಕಾದ ಉಪಕಥೆಗಳನ್ನು ಆರಿಸಿಕೊಂಡಿದ್ದಾರೆ. ಹೀಗೆ ಸೇರಿದ  ಉಪಕಥೆಯಲ್ಲಿ ಬ್ಯಾರಿ ಮೂಸಜ್ಜ, ಆತನ ಹೆಂಡತಿ ಕೈಜುನ್ನಿಸಾ ಮತ್ತು ಮನೆ ಬಿಟ್ಟು ಹೋಗಿ  ಸೂಫಿ ಫಕೀರನಾಗಿರುವ  ಇವರ ಮಗ ಬದ್ರುದ್ಧೀನ್ ಪ್ರಮುಖರು. ಚಾಂದ್ ಅಲಿಯನ್ನು ಫಕೀರ ಬದ್ರುದ್ಧೀನ್ ತನ್ನದೇ ಮನೆಗೆ ಬಿಟ್ಟು ಹೋಗುವುದು ನಾಟಕೀಯ ತಿರುವು.  ಮುಂದೆ  ಮೂಸಜ್ಜ ಸತ್ತು ನಂತರದಲ್ಲಿ ಉದ್ಭವವಾಗುವ ಇಸ್ಲಾಂ ಧರ್ಮದ ನಂಬಿಕೆಗಳು. ಆಸ್ತಿಗಾಗಿ ಕಣ್ಣಾಕುವ ಊರಿನ ಪಾತ್ರಗಳು. ಸಭೆ, ತೀರ್ಮಾನ, ಮದುವೆ ಸಂಪ್ರದಾಯ ಎಲ್ಲವೂ ರಂಗದ ಮೇಲೆ ಬಂದು ಹೋಗುತ್ತವೆ. ಮಗನಿಲ್ಲದ ಮನೆಯಲ್ಲಿ ಉಳಿದುಕೊಂಡವನೇ ಆಸ್ತಿ ಒಡೆಯನಾಗಿ ಮತ್ತು ಈ ಕಾರಣಕ್ಕಾಗಿಯೇ ಮಾತೃಭೂಮಿಗೆ ವಾಪಸ್ಸು ಹೋಗಲಾಗದೆ ಅಲ್ಲಿಯೇ ಉಳಿಯಬೇಕಾಗಿ ಬರುವ ಅಲಿಯ  ಉಭಯ ಸಂಕಟಗಳು ಒಂದು ಕಡೆಯಾದರೇ, ಮಗನಂತೆ ಕಂಡ ಬದ್ರುದ್ಧೀನ್ ತಾಯಿ ಖೈಜುನ್ನಿಸಾಳ ಸಾವು, ಸಾವಿನ ಹೊತ್ತಲ್ಲೇ ಮತ್ತೆ ಮನೆಗೆ ಬಂದ ಫಕೀರ ಬದ್ರುದ್ದೀನ್ ಆಸ್ತಿಯನ್ನು ಅಲಿಗೆ ತ್ಯಾಗ ಮಾಡಿ ಉಪದೇಶ ಹೇಳಿ ಹೋಗುವುದು ಹೀಗೂ ಉಂಟೆ..! ಎನಿಸುತ್ತದೆ.  ಖೈಜುನ್ನಿಸಾ, ರಾಘಣ್ಣ, ಪಂಡಿತ, ಸುಮತಿ, ಅನಂತು, ಲತೀಫ್, ಪೋಡಿಯಪ್ಪ   ಹೀಗೆ ಬರುವ ಪಾತ್ರಗಳೆಲ್ಲಾ ಮುತ್ತುಪ್ಪಾಡಿ ಎಂಬ ಹಳ್ಳಿಯ ಸಾಮರಸ್ಯದ ಬದುಕನ್ನು ಸಾಕ್ಷೀಕರಿಸುತ್ತವೆ.  ನಾಟಕದ ಅಂತ್ಯದಲ್ಲಿ ಚಾಂದ್ ಅಲಿ ಕಡೆಗೂ  ತನ್ನಲ್ಲಿದ್ದ ಸಿಖ್ ಕುಟುಂಬದ ಒಡವೆ ಗಂಟನ್ನು ಅವರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆಯುತ್ತದೆ.  ಇಡೀ ನಾಟಕದ ಶಕ್ತಿ ಕೇಂದ್ರ ಅದರ ಸಂಗೀತ ಮತ್ತು ವಸ್ತç ವಿನ್ಯಾಸ. ಭಜನ್, ಕವ್ವಾಲಿ, ಕಬೀರ ದೋಹೆಗಳು ರಂಗಸಂಗೀತವಾಗಿ ಹಾಡುಗಳು ಮತ್ತು ರಂಗದಲ್ಲಿ ನೃತ್ಯಗಳು ಹಿಡಿದಿಡುತ್ತವೆ. ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯.ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧. 

ರಂಗ ಪ್ರಯೋಗ”ಭಾರತದ ಪಾಡು ಮುತ್ತುಪಾಡಿಯ ಹಾಡು ಮನಸೆಳೆದ ಸ್ವಾತಂತ್ರ್ಯದ ಓಟ ನಾಟಕ”-ಗೊರೂರು ಅನಂತರಾಜು, ಹಾಸನ. Read Post »

ಇತರೆ, ಲಹರಿ

ಜಯಶ್ರೀ.ಜೆ. ಅಬ್ಬಿಗೇರಿ ಅವರ ಲಹರಿ “ದೊಡ್ಡ ಸಿರಿ – ಹೃದಯ ಸಿರಿ”

ಕಾವ್ಯ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ “ದೊಡ್ಡ ಸಿರಿ – ಹೃದಯ ಸಿರಿ” ಒಬ್ಬ ವ್ಯಕ್ತಿ ಅವನ ಗೆಳೆಯನ ಮನೆಗೆ ಬಂದಿದ್ದ. ‘ಈ ಮನೆ ಯಾರದು?’ ಎಂದು ಗೆಳೆಯನಿಗೆ ಕೇಳಿದ. ವ್ಯಕ್ತಿ ಹೇಳಿದ ‘ಇದು ನನ್ನದೇ ಮನೆ ಎಂದು. ಅದನ್ನು ಕೇಳಿದ ಅಡುಗೆ ಮನೆಯಲ್ಲಿದ್ದ ಆ ವ್ಯಕ್ತಿಯ ಪತ್ನಿ ಮುಗುಳುನಗೆಯನ್ನು ಬೀರಿ ಸುಮ್ಮನಾದಳು. ಏಕೆಂದರೆ ಆ ಮನೆಯನ್ನು ಆಕೆಯ ತಂದೆ ಅಂದರೆ ಮಾವ ಕಾಣಿಕೆಯಾಗಿ ನೀಡಿದ್ದ. ಆದ್ದರಿಂದ ಆತನ ಪತ್ನಿ ಮುಗುಳ್ನಗೆ ಬೀರಿ ತನ್ನದೆಂದು ಹೇಳುತ್ತಾನೆ ಹೇಳಲಿ ಎಂದು ಮೌನವಾದಳು. ಹಾಗೆಯೇ ಎಲ್ಲವನ್ನೂ ನಾವು ನಿಸರ್ಗದಿಂದ ಪಡೆದು, ಈ ಮನೆ ನನ್ನದು ಈ ಹೊಲ ನನ್ನದು ಕಣ್ಣಿಗೆ ಕಂಡಿದ್ದೆಲ್ಲ ನನ್ನದು ಎಂದು ಹೇಳುತ್ತೇವೆ. ‘ನಾನು ಆಗರ್ಭ ಶ್ರೀಮಂತ.’ ಎಂದು ಜಂಭದಿoದ ಹೇಳಲು ಮುಂದಾಗುತ್ತೇವೆ. ಇದನ್ನು ಕೇಳಿದ ನಿಸರ್ಗದೇವತೆ ಮರಳು ಮಾನವ ಏನೂ ತಿಳಿಯದೇ ಹೇಳುತ್ತಾನೆಂದು ಮೌನ ವಹಿಸುತ್ತಾಳೆ. ಕೂಡಿಡುವ ಸ್ವಭಾವ ಬರುವಾಗ ಏನೂ ತಂದಿಲ್ಲ ಹೋಗುವಾಗ ಏನೂ ಒಯ್ಯುವುದಿಲ್ಲ ಅಂತ ಗೊತ್ತಿದ್ದರೂ  ಭೂಮಾತೆಯ ಗರ್ಭವನ್ನು ಬಗೆದು ಕಾಡುಗಳನ್ನು ಕಡಿದು ಪ್ರಾಣಿಗಳನ್ನು ತನ್ನ ಲಾಭಕ್ಕೆ ಉಪಯೋಗಿಸಿಕೊಂಡು ಸ್ವಾರ್ಥ ಜೀವನ ನಡೆಸುವ ಪ್ರಕೃತಿ ಮಾತೆ ಮುನಿಸಿಕೊಂಡಾಗ ಮನುಷ್ಯನದ್ದು ಏನೂ ನಡೆಯುವುದಿಲ್ಲ. ಸೃಷ್ಟಿಯಲ್ಲಿರುವ ಯಾವ ಪ್ರಾಣಿಗಳು ತನಗೆ ಹೊಟ್ಟೆ ತುಂಬಿದ ಮೇಲೆ ಯಾವ ಪ್ರಾಣಿಗಳನ್ನು ಭೇಟಿ ಆಡಲು ಹೋಗುವುದಿಲ್ಲ. ತನ್ನ ಗಾತ್ರಕ್ಕಿಂತ ೧೫೦ ಪಟ್ಟು ಜಾಸ್ತಿ ಭಾರವನ್ನು ಹೊರುವ ಇರುವೆ ಸಕ್ಕರೆ ಡಬ್ಬದ ಸುತ್ತ ಸುತ್ತುತ್ತಿದ್ದರೂ ಸಕ್ಕರೆ ಡಬ್ಬಿಯನ್ನು ಹೊತ್ತಯ್ಯುವ ಯೋಜನೆ ಹಾಕುವುದಿಲ್ಲ. ಮಳೆಗಾಲದಲ್ಲಿ ಆಹಾರ ಅಭಾವ ಕಾಡುವುದೆಂದು ಮುಂದಾಲೋಚನೆಯಿoದ ಸಂಗ್ರಹ ಮಾಡುತ್ತದೆ. ಆದರೆ ಮುಂದಿನ ಪೀಳಿಗೆಗೆ ಆಗುವಷ್ಟು  ಬೇಕೆಂದು ದುರಾಸೆಯಿಂದ ಹೆಚ್ಚೆಚ್ಚು ಕೂಡಿಡುವುದಿಲ್ಲ. ಆದರೆ ಮನುಷ್ಯ ಮಾತ್ರ ಬೇಡವಾದಾಗಲೂ ತಿನ್ನುವ, ಅವಶ್ಯಕತೆ ಇಲ್ಲದಿರುವಾಗಲೂ ಕೊಳ್ಳುವ, ತನಗೆ ಎಲ್ಲವೂ ಸಿಗಬೇಕೆನ್ನುವ, ತನ್ನ ಹತ್ತಿರ ಎಲ್ಲವೂ ಅತ್ಯಧಿಕ ಪ್ರಮಾಣದಲ್ಲಿರಬೇಕೆಂದು ಕೂಡಿಡುವ ಸ್ವಭಾವ ಹೊಂದಿದ್ದಾನೆ.   ಹಣವಿದ್ದರೆ? ಅರೆ! ಇದೇನು ಶ್ರೀಮಂತಿಕೆ ಯಾರಿಗೆ ಬೇಡ ಹೇಳಿ ಅಂತಿರೇನು? ಪ್ರತಿಯೊಬ್ಬರೂ ಅದನ್ನು ತಮ್ಮದಾಗಿಸಿಕೊಳ್ಳಬೇಕೆಂದೇ ಹಗಲು ರಾತ್ರಿ ಹಂಬಲಿಸುತ್ತಾರೆ. ಬಹುಶಃ ಅದರ ಹಿಂದೆ ಬೀಳದವರು ಬಹುತೇಕ ಇಲ್ಲವೆಂದರೂ ಅತಿಶಯೋಕ್ತಿ ಏನಲ್ಲ. ಸಿರಿತನ ಒಂದಿದ್ದರೆ ಸಾಕು ಮನದಲ್ಲಿಯ ಬಯಕೆಗಳನ್ನೆಲ್ಲ ಈಡೇರಿಸಬಹುದು. ನಮ್ಮವರಿಗೆ ಏನೇನು ಬೇಕೋ ಅದನ್ನು ಅವರು ಬಾಯಿ ತೆಗೆಯುವ ಮುನ್ನವೇ ಕಣ್ಮುಂದೆ ಹಿಡಿಯಬಹುದು. ನಮ್ಮಲ್ಲಿ ಹಣವಿದ್ದರೆ ಎಲ್ಲ. ಇಲ್ಲದಿದ್ದರೇನೂ ಇಲ್ಲ ಎನ್ನುವ ಮನೋಭಾವ ಬೇರೂರಿ ಬಿಟ್ಟಿದೆ. ಲಕ್ಷ್ಮೀದೇವಿಯ ಮಹಿಮೆಗೆ ಮರಳಾಗದವರು ಯಾರಿದ್ದಾರೆ?  ಹಣವಂತನ ಜೀವನದಲ್ಲಿ ಯಾವ ಸಮಸ್ಯೆಗಳೂ ಇರುವುದಿಲ್ಲ ಎಂಬ ಸುಳ್ಳು ಸಂಗತಿ ಬೇರೆ ತಲೆಯಲ್ಲಿ ಅಚ್ಚಳಿಯದಂತೆ ಅಚ್ಚೊತ್ತಿದೆ. ಶ್ರೀಮಂತಿಕೆ ಶ್ರೀಮoತಿಕೆ ಅನ್ನುವುದು ಗೆಲುವಿನಂತೆ ವ್ಯಾಖ್ಯಾನಿಸುವುದು ಸುಲಭವಲ್ಲ. ಏಕೆಂದರೆ ಒಬ್ಬೊಬ್ಬರು ಒಂದೊoದು ಅರ್ಥ ಕೊಡುತ್ತಾರೆ. ಸಾಮಾನ್ಯವಾಗಿ ಬಹುತೇಕರು ಹೇಳುವುದು ಕೈ ತುಂಬ ಹಣ ಕೈಗೊಂದು ಆಳು ಕಾಲಿಗೊಂದು ಆಳು ಇದ್ದರೆ ಅವರು ಶ್ರೀಮಂತರು. ಮನೆಯಲ್ಲಿ ಲಕ್ಷ್ಮೀ ನೆಲೆಸಿರಬೇಕು. ಸಿರಿ-ಸಂಪತ್ತು ಆಸ್ತಿ ಐಶ್ವರ್ಯ ಹಣಕಾಸಿನ ಸಮೃದ್ಧತೆ ಯಾವುದಕ್ಕೂ ಕೊರತೆ ಇರಬಾರದು. ಲೆಕ್ಕ ಹಾಕದೇ ಖರ್ಚು ಮಾಡುವಷ್ಟು ಹಣವಿರಬೇಕು. ಐಷಾರಾಮಿ ಬದುಕು ಸಾಗಿಸಲು ಯಾವುದೇ ಅಡೆತಡೆ ಇರಬಾರದು. ಏನೇ ಬೇಕಾದರೂ ಕೊಂಡುಕೊಳ್ಳುವ ಶಕ್ತಿ ಇರಬೇಕು. ಬಯಸಿದ್ದನ್ನೆಲ್ಲ ಚಿಟಿಕೆ ಹೊಡೆಯುವಷ್ಟರಲ್ಲಿ ಪಡೆಯವುದು. ಬಂಧು ಬಾಂಧವರ ಮುಂದೆ ನಾವು ಹೆಂಗಿದಿವಿ ನೋಡಿ ಅಂತ ಗರ್ವದಿಂದ ಮೆರೆಯಬೇಕು. ಮಾನದಂಡ ಹೀಗೆ ಶ್ರೀಮಂತಿಕೆಯ ಬಗೆಗೆ ವಿವಿಧ ರೀತಿಯ ಅಭಿಪ್ರಾಯಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದನ್ನೆಲ್ಲ ನೋಡಿದಾಗ ಶ್ರೀಮಂತಿಕೆ ಎಂಬುದು ಕೇವಲ ಹಣಕಾಸಿನ ಶ್ರೀಮಂತಿಕೆಯೇ? ಎಂಬ ಪ್ರಶ್ನೆ ಹುಟ್ಟುತ್ತದೆ. ಶ್ರೀಮಂತಿಕೆಯನ್ನು ಅಳೆಯಲು ಹಣಕಾಸಿನ ಒಂದೇ ಒಂದು ಮಾನದಂಡ ಸಾಕೇ? ಎಂಬ ಪ್ರಶ್ನೆಯೂ ಅದರ ಬೆನ್ನ ಹಿಂದೆಯೇ ಹುಟ್ಟಿಕೊಳ್ಳುತ್ತದೆ. ದೈಹಿಕ, ಮಾನಸಿಕ  ಸ್ಥಿತಿಗತಿ ಇವು ಯಾವವೂ ಲೆಕ್ಕಕ್ಕೆ ಬರುವುದಿಲ್ಲವೇ ಎಂಬ ಸಂದೇಹವೂ ಬರುತ್ತದೆ.ಆರೋಗ್ಯ ಸಂಪತ್ತುಮೇಲ್ನೋಟಕ್ಕೆ ಹಣಕಾಸಿನ ಸ್ಥಿತಿಗತಿ ಸಿರಿವಂತಿಕೆಯನ್ನು ನಿರ್ಧರಿಸುತ್ತದೆ ಹೌದಾದರೂ ವಾಸ್ತವವಾಗಿ ಹೇರಳ ಹಣವೊಂದೇ ಶ್ರೀಮಂತಿಕೆಯಲ್ಲ. ಕುಬೇರನ ವಂಶಸ್ತನೇ ಇರಬೇಕು ಎನ್ನುವಷ್ಟು ಶ್ರೀಮಂತಿಕೆ ಇದ್ದರೂ ದೇಹ ರೋಗದ ಗೂಡಾಗಿದ್ದರೆ ಬಯಸಿದ್ದನ್ನು ಬಾಯಿಗೆ ಹಾಕದೇ ಕೊರಗಬೇಕಾಗುತ್ತದೆ. ಕಣ್ಮುಂದೆ ಏನೆಲ್ಲ ಇದ್ದರೂ ತಿನ್ನುವ ಭಾಗ್ಯ ಅವನಿಗಿರುವುದಿಲ್ಲ. ಅವನ ಪಾಲಿಗೆ ಔಷಧಿಯೇ ಆಹಾರ ಇಲ್ಲಿ ನಾನು ಹೇಳ ಹೊರಟಿದ್ದು ಇಷ್ಟೆ  ಹಣದಿಂದ ಔಷಧಿಯನ್ನು ಕೊಳ್ಳಬಹುದು ಆದರೆ ಆರೋಗ್ಯವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಹಿರಿಯರು ಹೇಳಿದ್ದು ಆರೋಗ್ಯ ಸಂಪತ್ತಿಗಿoತ ದೊಡ್ಡ ಸಂಪತ್ತಿಲ್ಲವೆoದು.  ಹಣವಿದ್ದೂ , , , , ಹಣಕಾಸಿನ ಅನುಕೂಲತೆ ಇದ್ದು, ಆರೋಗ್ಯ ಚೆನ್ನಾಗಿದ್ದು ಮನಸ್ಸಿಗೆ ನೆಮ್ಮದಿ ಇಲ್ಲದಿದ್ದರೆ ಬದುಕು ಸಾಕ್ಷಾತ್ ನರಕ ದರ್ಶನ. ಹಣದಿಂದ ಒಂದೊಳ್ಳೆ ಹಾಸಿಗೆಯನ್ನು ಕೊಳ್ಳಬಹುದು. ಆದರೆ ನಿದ್ದೆಯನ್ನಲ್ಲ. ಒಳ್ಳೆಯ ಮನೆ ಕೊಂಡುಕೊಳ್ಳಬಹುದು. ಆತ್ಮೀಯರ ಪ್ರೀತಿ ವಿಶ್ವಾಸ ಕೊಂಡುಕೊಳ್ಳಲು ಸಾಧ್ಯವಿಲ್ಲ. ಹಣವಿದ್ದು ಅದನ್ನು ಉಳಿಸುವ ಬೆಳೆಸುವ ಜ್ಞಾನವಿರದಿದ್ದರೆ  ಸಿರಿವಂತಿಕೆ ಅಧೋಗತಿ ಕಾಣುವುದು ಖಂಡಿತ. ಹಣದಿಂದ ಪುಸ್ತಕವನ್ನು ಕೊಳ್ಳಬಹುದೇ ಹೊರತು ಜ್ಞಾನವನ್ನಲ್ಲ. ಇವೆಲ್ಲ ಉದಾಹರಣೆಗಳಿಂದ ತಿಳಿದು ಬರುವುದೇನೆಂದರೆ ಹಣವೊಂದೇ ಸಿರಿವಂತಿಕೆಯಲ್ಲ. ಯಾರಿಗೆ ಯಾವುದು ಇಲ್ಲವೋ ಅದನ್ನು ಪಡೆದುಕೊಳ್ಳಲು ಹೋರಾಡಿ ಪಡೆಯುವುದು ಶ್ರೀಮಂತಿಕೆ. ಕೃಷಿ ಮನುಷ್ಯರಿಗೆ ಹೋಲಿಸಿದರೆ ಲಕ್ಷಾಂತರ ಪಟ್ಟು ಚಿಕ್ಕದಿರುವ ಇರುವೆಯ ಬದುಕಿನಿಂದ ನಾವು ಕಲಿಯಬೇಕಾದ್ದು ಬಹಳ ಇದೆ. ಯಶಸ್ವಿ ಸಹಬಾಳ್ವೆ, ವ್ಯವಸ್ಥಿತ, ಅತ್ಯಂತ ಸಮರ್ಥ ಜೀವನ ಕೌಶಲವನ್ನು ಅಳವಡಿಸಿಕೊಳ್ಳಬೇಕಿದೆ. ಇತ್ತೀಚಿನ ಶೋಧಗಳ ಪ್ರಕಾರ ಪ್ರಸ್ತುತ ಧರೆಯಲ್ಲಿ ಸುಮಾರು ೧೨೦೦೦ ಇರುವೆ ಪ್ರಭೇದಗಳಿವೆ. ೮೦೧ ಕೋಟಿ ಜನರ  ಪ್ರತಿಯೊಬ್ಬರಿಗೂ ಸರಾಸರಿ  ಹನ್ನೆರಡುವರೆ ಲಕ್ಷ ಇರುವೆಗಳು. ಇಷ್ಟು ದೊಡ್ಡ ಸಂಖ್ಯೆಯಲ್ಲಿವೆ. ಈ ಅಲ್ಪಗಾತ್ರದ ಜೀವಿ ಬೆರಗು ಹುಟ್ಟಿಸುವ ಕೌತುಕಗಳಿಂದ ಕೂಡಿದೆ. ಪ್ರಕೃತಿಗೆ ಇರುವೆಗಳಿಂದ ಮಹತ್ತರ ಕೊಡುಗೆಯೂ ಇದೆ. ಇಡೀ ಜೀವಲೋಕದಲ್ಲಿ ಕೃಷಿ ಕೆಲಸ ಕೈಗೊಳ್ಳುವ ಏಕೈಕ ಮನುಷ್ಯೇತರ ಪ್ರಭೇದ ಇರುವೆ ಲೋಕದಲ್ಲಿದೆ. ರೈತ ಇರುವೆ ಎಂದೇ ಹೆಸರಾಗಿರುವ ಈ ಇರುವೆಗಳು ನಿಧಿಷ್ಟ ಸಸ್ಯಗಳ ಎಲೆಗಳನ್ನು ಕತ್ತರಿಸಿ ಸಾಗಿಸಿ ಗೂಡಿನಲ್ಲಿ ರಾಶಿ ಹಾಕುತ್ತವೆ. ಆ ಎಲೆ ರಾಶಿಯ ಮೇಲೆ ವಿಶಿಷ್ಟ ಶಿಲೀಂದ್ರಗಳನ್ನು ಬಿಟ್ಟು ಆಹಾರ ತಯಾರಿಸಿಕೊಳ್ಳುತ್ತವೆ. ಆಧುನಿಕ ಮನುಷ್ಯ ಪ್ರಕೃತಿ ಪ್ರೇಮಿಯಾಗಿ ಬಾಳಬೇಕಿದೆ. ಕಾರಣ ಪರಿಸರ ಸ್ನೇಹಿ ಬದುಕನ್ನು ಬದುಕುವ ಇರುವೆಗಳಂತೆ ನಾವು ಆಪತ್ಕಾಲಕ್ಕೆ ಮಾತ್ರ ಕೂಡಿಡುವ ಸ್ವಭಾವವನ್ನು ಬೆಳೆಸಿಕೊಳ್ಳಬೇಕು. ನಮ್ಮ ಬಳಿ ಎಷ್ಟು ಹಣವಿದೆ ಎಂದು ನಮಗೆ ತಿಳಿರುತ್ತದೆ. ಆದರೆ ನಮ್ಮ ಬಳಿ ಎಷ್ಟು ಸಮಯವಿದೆ ಎಂದು ನಮಗೆ ತಿಳಿದಿಲ್ಲ. ಸಮಯ ಬರುವ ಮುನ್ನ ಶ್ರೀಮಂತಿಕೆಯ ಭ್ರಮೆಯಲ್ಲಿ ಬದುಕುವುದನ್ನು ಬಿಡಬೇಕು. ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಎಲ್ಲವೂ ನನಗೆ ಬೇಕು ಎಂಬ ಭಾನೆಯೇ ಕಾರಣವಾಗಿದೆ. ಈ ಭಾವ ನಾಶವಾದಾಗ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಮನಸ್ಸು ಸುಮಧುರ ಸ್ಥಿತಿಯಲ್ಲಿದ್ದಾಗ ಆರೋಗ್ಯಕರ ಭಾವನೆಗಳು ಹೊರಹೊಮ್ಮುತ್ತವೆ. ದೊಡ್ಡ ಸಿರಿ ಶ್ರೀಮಂತರೆoದು ಅಟ್ಟಹಾಸ ಮೆರೆದವರು ಯಾರೂ ಜನಮಾನಸದ ನೆನಪಿನಲ್ಲಿ ಉಳಿದಿಲ್ಲ. ಹೃದಯ ಸಿರಿವಂತರು ಮಾತ್ರ ಜನರ ಹೃದಯಗಳನ್ನು ಗೆದ್ದಿದ್ದಾರೆ. ಭಾವ ಮಾಧುರ್ಯದ ಶ್ರೀಮಂತಿಕೆಯಿoದ ಕೂಡಿರುವ ಜೀವನ  ಜನಪ್ರಿಯವಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ. ಸಿರಿವಂತಿಕೆ ಕೇವಲ ಪಡೆಯುವುದರಲ್ಲಿಲ್ಲ. ಅವಶ್ಯವಿರುವವರಿಗೆ ದಾನ ಮಾಡುವುದರಲ್ಲಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿದೆ. ದ ಮನಗಳನ್ನು ಪೋಣಿಸೋಣ. ಇನ್ನಾದರೂ ಎಚ್ಚೆತ್ತುಕೊಂಡು ಹೃದಯಸಿರಿಯೇ ದೊಡ್ಡ ಸಿರಿಯೆಂದು ಸರಿಯಾಗಿ ತಿಳಿದುಚೂರಾಕೊಂಡು  ಒಬ್ಬರಿಗೊಬ್ಬರು ಅಕ್ಕರೆಯ ಸಕ್ಕರೆಯ ತಿನಿಸುತ್ತ ಮಾನವೀಯತೆಯ ಸಿರಿವಂತಿಕೆಯನ್ನು ಮೆರೆಯೋಣವಲ್ಲವೇ? ಜಯಶ್ರೀ.ಜೆ. ಅಬ್ಬಿಗೇರಿ

ಜಯಶ್ರೀ.ಜೆ. ಅಬ್ಬಿಗೇರಿ ಅವರ ಲಹರಿ “ದೊಡ್ಡ ಸಿರಿ – ಹೃದಯ ಸಿರಿ” Read Post »

ನಿಮ್ಮೊಂದಿಗೆ

ಅನಿತಾ ಕೃಷ್ಣಮೂರ್ತಿ ಕವಿತೆ “ನನ್ನ ಅಮ್ಮ”

ಕಾವ್ಯ ಸಂಗಾತಿ ಅನಿತಾ ಕೃಷ್ಣಮೂರ್ತಿ “ನನ್ನ ಅಮ್ಮ” ನನ್ನೆಲ್ಲಾ ಕನಸುಗಳಿಗೆ ರೆಕ್ಕೆ ಕಟ್ಟಿ,ರಾಶಿ ರಾಶಿ ಪ್ರಯತ್ನಗಳು ಫಲಿಸಲೆಂದು ದೇವರಲ್ಲಿ ಹರಕೆ ಹೊತ್ತು,ಉಪವಾಸ–ವ್ರತ ಮಾಡಿ ನನ್ನ ಬದುಕನ್ನು ಸಾರ್ಥಕತೆಯ ದಾರಿಯತ್ತ ದೂಡಿದಳು…ಅವಳು ನನ್ನ ಅಮ್ಮ  ಅವಳ ಪ್ರಾರ್ಥನೆಗಳಲ್ಲಿ ನನ್ನ ಭವಿಷ್ಯ ಇತ್ತು,ಅವಳ ತ್ಯಾಗಗಳಲ್ಲಿ ನನ್ನ ಯಶಸ್ಸು ಇತ್ತು,ಅವಳ ನಂಬಿಕೆಯಲ್ಲಿ ನನ್ನ ಜೀವನದ ಬೆಳಕು ಇತ್ತು… ಸೋತಾಗ ಸೋಲಿಗೆ ಹೆದರಿ,ಖಿನ್ನತೆಯತ್ತ ಮುಖ ಮಾಡಿ ನರಳಲುಬಾನೆತ್ತರ ಭರವಸೆ ತುಂಬಿ,ತೂಗಾಡುವ ಮಂಚದಲ್ಲಿರಿಸಿ,ತೊಡೆಯ ಮೇಲೆ ಮಲಗಿಸಿ,ಮಮತೆಯ ಸ್ಪರ್ಶದಿಂದ ಹುರಿದುಂಬಿಸಿದಳು…ಅಮ್ಮ.  ಹೇಗೆ ತೀರಿಸಲಿ ಋಣವ,ಮತ್ತೊಮ್ಮೆ ಮಗುವಾಗಿ ಜನ್ಮವೆತ್ತಲೇ…ಅವಳಿಗೇ ತಾಯಿಯಾಗಿ ಮಡಿಲಾಗಲೇ,ಅಕ್ಕನಾಗಿ ಅಪ್ಪುಗೆಯ ಕೊಡಲೇ,ತಂಗಿಯಾಗಿ ತುಂಟಾಟವಾಡಲೇ,ಯಾವ ಬಂಧವಾಗಿ ಬಂದರೂ ಸರಿ,ಅವಳ ಪ್ರೀತಿಯ ನೆರಳಲ್ಲಿ ಮತ್ತೆ ಬದುಕಲೇ…  ಸರಿ ಸಾಟಿ ಯಾರಿಹರು ಆ ಕರುಣೆಗೆ,ದೇವರಿಗಿಂತ ಹೆಚ್ಚಾದ ಜೀವಕೆ…ನೋವನ್ನೆಲ್ಲ ನಗುವಿನಲ್ಲಿ ಮರೆಮಾಚಿ,ತನ್ನ ಕನಸುಗಳನ್ನೇ ತ್ಯಾಗಮಾಡಿ,ನಮ್ಮ ಬದುಕಿಗೆ ಬೆಳಕಾದ ಮಹಾತಾಯಿಗೆ…ಈ ಜನ್ಮ ಸಾಲದು ಕೃತಜ್ಞತೆ ಸಲ್ಲಿಸಲು…  ಅನಿತಾ ಕೃಷ್ಣಮೂರ್ತಿ      

ಅನಿತಾ ಕೃಷ್ಣಮೂರ್ತಿ ಕವಿತೆ “ನನ್ನ ಅಮ್ಮ” Read Post »

ligade
ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-22 ಸವಿತಾ ದೇಶಮುಖ ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ ಜನ ಸೇವೆಯೇ ಜೀವನದ ಧ್ಯೇಯವಾಗಿದ್ದ ಜಯದೇವಿ ತಾಯವರ ಜೀವನವು ತ್ಯಾಗ, ಸೇವೆ ಮತ್ತು ಮಾತೃತ್ವದ ಅದ್ಭುತ ಸಂಗಮ.ಅವರು ತಮ್ಮ ವೈಯಕ್ತಿಕ ಸುಖದುಃಖಗಳನ್ನು ಮರೆತು ಸಮಾಜದ ಒಳಿತಿಗಾಗಿ ಸದಾ ಶ್ರಮಿಸುತ್ತಿದ್ದರು. ಕುಟುಂಬದ ಜವಾಬ್ದಾರಿ ಹೊತ್ತು ಮಕ್ಕಳನ್ನು ಪ್ರೀತಿಯಿಂದ ಸಾಕಿ ಸಲಹುತ್ತಾ….. ಬಡವರು, ನಿರ್ಗತಿಕರು ಹಾಗೂ ಸಹಾಯದ ನಿರೀಕ್ಷೆಯಲ್ಲಿದ್ದ ಜನರಿಗೆ ಆಶಾಕಿರಣವಾಗಿದ್ದರು. ಪತಿಯ ವಿಯೋಗದ ನಂತರ ಜೀವನದ ಭಾರ ಇನ್ನಷ್ಟು ಹೆಚ್ಚಾದರೂ ಅವರು ಎಂದಿಗೂ ಕುಗ್ಗಲಿಲ್ಲ…ಐದು ಮಕ್ಕಳನ್ನು ಬೆಳೆಸಿ ಅವರಿಗೆ ಉತ್ತಮ ಸಂಸ್ಕಾರ, ಶಿಕ್ಷಣ ಮತ್ತು ಜೀವನ ಮೌಲ್ಯಗಳನ್ನು ಕಲಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದರು. ಮಕ್ಕಳ  ಮನಸ್ಸುಗಳಲಿ ಪ್ರೀತಿ, ಕರುಣೆ ಮತ್ತು ಮಾನವೀಯತೆಯತೆ ತುಂಬಿಸಿದರು. ತಾಯಿಯವರ ಮನೆ ಎಂದರೆ…. ನೆರವು ಕೇಳಿ ಬರುವವರಿಗೆ ಸದಾ ತೆರೆದ ಬಾಗಿಲಾಗಿತ್ತು. ಹಸಿದವರಿಗೆ ಅನ್ನ, ಸಂಕಷ್ಟದಲ್ಲಿರುವವರಿಗೆ ಧೈರ್ಯ, ನಿರಾಶೆಯಲ್ಲಿರುವವರಿಗೆ ಆಶ್ವಾಸನೆ ನೀಡುವುದು ಅವರ ಸಹಜ ಗುಣವಾಗಿತ್ತು. ಊರಿನಲ್ಲಿ ಯಾರಿಗಾದರೂ ಕಷ್ಟ ಬಂದರೆ ಮೊದಲು ನೆನಪಾಗುತ್ತಿದ್ದ ಹೆಸರು ಜಯದೇವಿ ತಾಯಿಯವರದ್ದೇ.ತಮ್ಮ ಮಕ್ಕಳಿಗೆ  ತಮ್ಮ ಜೀವನದ ಮೂಲಕವೇ ಪಾಠ ಕಲಿಸಿದರು. “ಮನುಷ್ಯನ ಬದುಕಿನ ನಿಜವಾದ ಅರ್ಥ ಇನ್ನೊಬ್ಬರ ಕಣ್ಣೀರು ಒರೆಸುವುದರಲ್ಲಿ ಇದೆ” ಎಂಬ ಸಂದೇಶವನ್ನು ತಮ್ಮ ನಡೆನುಡಿಗಳ ಮೂಲಕ ತೋರಿಸಿದರು. ಮಕ್ಕಳಲ್ಲು ಕೂಡ ಸೇವಾಭಾವವನ್ನು ಜೀವನದ ಮೌಲ್ಯವಾಗಿ ಅಳವಡಿಸಿದರು. ಅವರ ಜೀವನ  ಶಕ್ತಿಯ, ಸಹನೆಯ ಮತ್ತು ನಿಸ್ವಾರ್ಥ ಪ್ರೀತಿಯ ಮಹಾಕಾವ್ಯ. ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಕುಟುಂಬ ಮತ್ತು ಸಮಾಜದ ಒಳಿತಿಗಾಗಿ ಅರ್ಪಿಸಿದ ಅವರು ನಿಜಕ್ಕೂ “ತಾಯಿ” ಎಂಬ ಪದಕ್ಕೆ ಅರ್ಥ ತುಂಬಿದ ಮಹನೀಯರು. *ಬೇಡಿಲ್ಲ ಫಲ ಪದವಿ |ಬೇಡಿಲ್ಲ ಸ್ಥಾನಮಾನಬೇಡಿಲ್ಲ ಮಂತ್ರಿ ತಂತ್ರಿಯಾಗಲು -ಜಯದೇವಿತಾಯಿ ಆದಳು ಕನ್ನಡದ* || ಎನ್ನುವಂತೆ ಕನ್ನಡದ ತಾಯಿಯಾಗಿ ನಿಸ್ಸಹಾಯಕರ ಬಂಧುವಾಗಿ,ತಮ್ಮ ಮಕ್ಕಳಿಗೆ ನೆರಳಾಗಿ ನಿಂತ ತಾಯಿ, ಸಮಾಜದ ನೋವಿಗೆ ಮದ್ದಾಗಿ ಬದುಕಿದ ತಾಯಿ!!!!,  ಇನ್ನೂ ಜಯದೇವಿ ತಾಯಿಯವರ ಮೂರನೇ ಮಗ *ಬಸವರಾಜ* ಚಿಕ್ಕಂದಿನಿಂದಲೇ ಎಲ್ಲರಲ್ಲೂ ವಿಭಿನ್ನವಾಗಿದ್ದರು. ಮನೆಯಲ್ಲಿದ್ದ ಇತರ ಮಕ್ಕಳಂತಲ್ಲ…..ಮಗುವಾಗಿದ್ದಾಗ ಶಾಂತವಾಗಿ ಮಲಗಿರುತ್ತಿದ್ದರು ಹಸಿವೆ ಆದಾಗ ಮಾತ್ರ ಅಳುತ್ತಿದ್ದರು ಹೀಗಾಗಿ ತಾಯಿಯವರಿಗೆ ಹೆಚ್ಚಾಗಿ ಮಗನ ಕಾಳಜಿ ಮಾಡದು ಬೇಕಾಗಿ ಬರಲಿಲ್ಲ ಅಂತ ಹೇಳುತಿದ್ದರು. ಡಾ. ಬಸವರಾಜ್ ಲಿಗಾಡಿ ಮಧ್ಯದಲ್ಲಿ ಲಲ್ಲೇಶ್ವರಿ ತಾಯಿ, ಬಸವರಾಜರ ಧರ್ಮಪತ್ನಿ ಡಾ. ಮಧುಮಾಲ ಇತರರಂತೆ ಗಲಾಟೆ, ಹಠ, ಆಟ-ಪಾಟಗಳಲ್ಲಿ ಮುಳುಗದೆ ಶಾಂತವಾಗಿದ್ದರು. ಅವರ ಕಣ್ಣುಗಳಲ್ಲಿ ಒಂದು ವಿಚಿತ್ರ ಶಾಂತಿ ಇತ್ತು. ಮುಖದಲ್ಲಿ ಸದಾ ಮೃದುವಾದ ನಗು. ತಾಯಿಯವರು ಎಷ್ಟೇ ದುಃಖದಲ್ಲಿದ್ದರೂ ಬಸವರಾಜನ ಆ ಶಾಂತ ವದನವನ್ನು ನೋಡಿದ ಕ್ಷಣ ಮನಸ್ಸಿಗೆ ಒಂದು ನೆಮ್ಮದಿಗೆ ಇಳಿಯುತ್ತಿದ್ದರು. ಮನೆಯಲ್ಲಿ ಯಾರಿಗಾದರೂ ನೋವಾದರೆ ಮೊದಲಿಗೆ ಓಡಿ ಹೋಗಿ “ಏನಾಯ್ತು?” ಎಂದು ಕೇಳುವ ಕರುಣೆ ಅವರೋಳಗೆ ಬೆಳೆದಿತ್ತು.  ಚಿಕ್ಕವರಿದ್ದಾಗಲೇ “ನಾನು ದೊಡ್ಡವನಾದ ಮೇಲೆ ಡಾಕ್ಟರ್ ಆಗಬೇಕು… ನೋವಿನಲ್ಲಿರುವ ಮಕ್ಕಳನ್ನು ಉಳಿಸಬೇಕು…” ಎಂದು ತಾಯಿಯವರ ಬಳಿ ಹೇಳುತ್ತಿದ್ದ. ಅವರ ಆಟಿಕೆಯ ಸಾಮಾನುಗಳೆಂದರೆ ಇಂಜೆಕ್ಷನ್ ತೆತಸ್ಕೋಪ್ಗಳೇ ಆಗಿದ್ದವು ಅಂತ ತಾಯಿಯವರು ಹೇಳುತ್ತಿದ್ದರು.ನಾವು ಬಯಸಿದ್ದನ್ನೇ ಮುಂದೆ ಆಗುತ್ತೇವೆ ಅನ್ನುವದು‌ ಬಲು ಸತ್ಯ ಎನ್ನುವರು!!…..ಸಕಾರಾತ್ಮಕವಾಗಿ ಅಥವಾ ನಕಾರಾತ್ಮಕತೆಯಿಂದಾಗಲಿ ನಾವು ಏನನ್ನು ಬಯಸುತ್ತೇವೋ ಜೀವನದಲ್ಲಿ ಅದೇ ಆಗುವದು ಅನ್ನುವ ಸ್ಥಿತಿ ಗತಿಗಳ ‌ಬಗ್ಗೆ ಹೇಳುಲು.. ಈ ಉದಾಹರಣೆಯನ್ನು ಹೇಳುತ್ತಿದ್ದರು. ಬಸವರಾಜರು ಬೆಳೆದಂತೆ , ವೈದ್ಯಕೀಯ ಶಿಕ್ಷಣಕ್ಕೆ ಸೇರಿದರು..ಆ ದಿನ ತಾಯಿಯವರು ಸಂತೋಷದಿಂದ  “ನನ್ನ ಮಗ ಇನ್ನು ಜೀವ ಉಳಿಸುವ ದೇವರ ಕೈ ಆಗ್ತಾನೆ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಡಾ. ಬಸವರಾಜರ ಇನ್ನೋರ್ವ ಪತ್ನಿ ಮಧ್ಯದಲ್ಲಿ ಶೈಲಜಾ  ಮುಂದೆ ಬಸವರಾಜ ಮಕ್ಕಳು ಆಗದವರಿಗೆ ಉಪಚಾರವನ್ನು ಮಾಡಲಾರಂಭಿಸಿದರು. ಬಂಜೆತನ ನಿವಾರಣೆ ತಜ್ಞರಾದರು. *ನುಡಿಗಳ ಸ್ಮರಿಸುವೆ| ನಡೆಯಲಿ ಅಳವಡಿಸಿ ಎಡವಿದರೆ ಕೈಹಿಡಿದೆತ್ತು – ಹಡೆದವ್ವದಡೆಗೆ ಕರೆದೊಯ್ಯೇ ಮಗುವಿಗೆ*||ಎನ್ನುವ  ಮನೋಭಾವವನ್ನು ಬಸವರಾಜರು ಹೊಂದಿದ್ದರುಅಂತೇಯೇ ಜಯದೇವಿ ತಾಯಿಯವರ ವೃದ್ಧಾಪ್ಯದಲ್ಲಿ ಬಸವರಾಜರು ನೆರಳಾಗಿ ನಿಂತರು. ತಾಯಿಯವರಿಗೆ ನೋವಾಗದಂತೆ ಪ್ರತಿಯೊಂದು ಹೆಜ್ಜೆಯಲ್ಲೂ ಕಾಳಜಿ ವಹಿಸಿದರು. ರಾತ್ರಿ ಎಷ್ಟೇ ಕೆಲಸ ಇದ್ದರೂ ತಾಯಿಯ ಕೋಣೆಗೆ ಹೋಗಿ “ಅಮ್ಮ ಆರೋಗ್ಯ ಹೇಗಿದೆ?” ಎಂದು ಕೇಳದೇ ನಿದ್ರೆ ಮಾಡುತ್ತಿರಲಿಲ್ಲ. *ಹೊತ್ತು ಇಳಿಯುತಿದ್ದಂತೆ |ಗೊತ್ತು ಗುರಿಕಾಣು ಮತ್ತೆ ಹುಟ್ಟಿ ಬರದು- ಜನುಮಹೆತ್ತವ್ವನ ಬಿಡದೆ ಜಪಿಸು* ||ಎನ್ನುವಂತೆ ತಾಯಿಯವರ ಕೊನೆಯ ದಿನಗಳಲ್ಲಿಯೂ ಬಸವರಾಜ ಅವರ ಕೈ ಹಿಡಿದುಕೊಂಡೇ ಇದ್ದರು. ಮಗನ ಆ ಮಮತೆಯ ಸ್ಪರ್ಶದಲ್ಲಿ ಜಯದೇವಿ ತಾಯಿಯವರು ತಮ್ಮ ಜೀವನದ ಎಲ್ಲಾ ಹೋರಾಟಗಳಿಗೂ ಅರ್ಥ ಸಿಕ್ಕಂತಾಗಿತ್ತು. *ತಾಯಿಯೇ ದೇವರು| ತಾಯಿಯೇ ಗುರಿತಾಯಿ ಕಲಸಿದರು ನಡೆ ನುಡಿ -ಚೆನ್ನಆಯಿತು ಅದು ಮುಕ್ತಿಯ ಧಾಮ *|| ಎನ್ನುವಂತೆ ಬದುಕಿದವರು ಲಲ್ಲೇಶ್ವರಿ ತಾಯಿಯವರು (ನನ್ನ ತಾಯಿ) ತಾಯಿಯವರ ನೆರಳಲಿ ಬದುಕಿದ ಬಾಳಿದ ಮಗಳ ಮಹಾ ಸೇವೆಯ ಬಗ್ಗೆ ಜಯದೇವಿ ತಾಯಿಯವರು ಎಲ್ಲರೆದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಅವರ ಉಸಿರಾಗಿ, ಅವರ ಹೆಜ್ಜೆಯ ಮೇಲೆ ಹೆಜ್ಜೆ ಹಾಕುತ್ತ ಬದುಕಿದವರು ಕೊನೆಯ ಮಗಳು ಲಲ್ಲೇಶ್ವರಿ ತಾಯಿ. ತಾಯಿಯಲ್ಲಿಯೇ ತಮ್ಮ ಲೋಕವನ್ನು ಕಂಡವರು. *ಅಂದಾಜು ಮೃದ ನುಡಿ |ಚಂದಾದ ಮುಖಮಂದಿರ ಮಂದಮತಿಗೆ -ಲಭಿಸಿ ಸೇವೆಮಾತಾಯಿ ಎಂದೆಂದೂ ಬಿಡೇನು ಪಾದ*|| ಎನ್ನುತ ಲಲ್ಲೇಶ್ವರಿಯವರಿಗೆ ತಾಯಿಯ ಒಂದು ಕಣ್ಣೋಟ ಸಾಕು, ಅವರ ಮನದ ಮಾತನ್ನು ಅರಿಯುತ್ತಿದ್ದರು.  ಏನನ್ನೂ ಕೇಳುವ ಮುನ್ನವೇ ಅವರ ಅವಶ್ಯಕತೆಗಳನ್ನು ಪೂರೈಸುತ್ತಿದ್ದರು. ತಾಯಿಯವರ ನಗು ಅವರ ಸಂತೋಷವಾಗಿತ್ತು; ಅವರ ನೋವು ಅವರ ಹೃದಯದ ನೋವಾಗಿತ್ತು. ಹಗಲು ರಾತ್ರಿ ಎನ್ನದೆ, ಸುಖ ದುಃಖ ಎನ್ನದೆ, ತಮ್ಮ ಬದುಕನ್ನೇ ತಾಯಿಯ ಸೇವೆಗೆ ಅರ್ಪಿಸಿಕೊಂಡಿದ್ದರು. *ತನು ಮನದ ಸೇವೆ| ಉಸಿರಿರುವ ತನಕಬೇಸರವಿಲ್ಲ ಕಿಂಚಿತ್ತ -ಹಡೆದವ್ವಉಸಿರು ಹಾಕಲಾರೆ ಕಡೆ ತನಕ* || ಎನ್ನುತ್ತಿದ್ದರು ನನ್ನ  ತಾಯಿ ಲಲ್ಲೇಶ್ವರಿಯವರುತಾಯಿಯವರು. ಪ್ರತಿ ಘಳಿಗೆಯಲ್ಲೂ ಅವರ ಕೈ ಹಿಡಿದು ನಡೆಸುತ್ತಿದ್ದರು. ತಾಯಿಯವರು ಆಯಾಸಗೊಂಡಾಗ ತಮ್ಮ ಮಡಿಲನ್ನೇ ಆಸರೆಯನ್ನಾಗಿ ಮಾಡುತ್ತಿದ್ದರು. ತಾಯಿಯವರ ಆರೋಗ್ಯದಲ್ಲಿ ಏರಿಳಿತಗಳು ಬಂದಾಗ, ಅವರ ಕಣ್ಣಲ್ಲಿ ನಿದ್ರೆ ಇರುತ್ತಿರಲಿಲ್ಲ… ಒಂದೇ ಸಮನೆ ದೇವರಲ್ಲಿ ತಾಯಿಗೆ ನೋವು ಕೊಡಬೇಡವೆಂದು  ಬೇಡಿಕೊಳ್ಳುತ್ತಿದ್ದರು. *ಅರೆ ನಿಮಿಷ ಬಿಟ್ಟಿಲ್ಲ |ನೆರಳಾಗಿ ಬೆಳೆದೆವುಬೇರೆ ಸ್ವತಂತ್ರ ಪಡೆದಿಲ್ಲ -ತಾಯಿಯಹರಣ ಒಂದು ದೇಹವೆರಡು*|| ಎನ್ನುವಂತೆ ಲಲ್ಲೇಶ್ವರಿಯವರು ತಾಯಿ ಇಲ್ಲದೆ ಒಂದು ಕ್ಷಣವೂ ಬದುಕಿರಲಾರಿ ಅನ್ನುವ ಸ್ಥಿತಿಯಲ್ಲಿ ಅವರು ಬದುಕುತ್ತಿದ್ದರು.ತಾಯಿಯವರ ಕೊನೆಯ ದಿನಗಳಲ್ಲಿ ಲಲ್ಲೇಶ್ವರಿ ತಾಯಿಯವರ ಸೇವೆ ಇನ್ನಷ್ಟು ಅಪೂರ್ವವಾಯಿತು. ಅವರು ಮಗಳಾಗಿ , ತಾಯಿಗೆ ತಾಯಿಯಾಗಿ ಮಗುವನ್ನು ನೋಡಿಕೊಳ್ಳುವಂತೆ ಮಮತೆಯಿಂದ ಜಯದೇವಿ ತಾಯಿಯವರನ್ನು ನೋಡಿಕೊಂಡರು. ಔಷಧಿ ನೀಡುವುದರಿಂದ ಹಿಡಿದು, ಊಟ ಮಾಡಿಸುವವರೆಗೂ, ರಾತ್ರಿ ನಿದ್ರೆಯಲ್ಲೂ ಎಚ್ಚರವಿದ್ದು ಅವರ ಆರೋಗ್ಯವನ್ನು ಗಮನಿಸುತ್ತಿದ್ದರು. *ಅಹೋರಾತ್ರಿ ನೆನೆದೆ| ಮಹಾತಾಯಿ ಸೇವೆಇಹಪರವ ಗೆಲಿದೆ ಕಟಾಕ್ಷ -ಸೇವೆಯಲಿಗೆಲಿದೆ ಜನನ ಮರಣವನು* ||ಎನ್ನುತ್ತಿದ್ದರು ಲಲ್ಲೇಶ್ವರಿಯವರು. ಇಲ್ಲಿ ಜಯದೇವಿ ತಾಯಿಯವರು ಒಂದು ಘಟನೆಯನ್ನು ಯಾವಾಗಲೂ ನೆನಪಿಸುತ್ತಿದ್ದರು . ಆಗ ಲಲ್ಲೇಶ್ವರಿ ಅವರಿಗೆ ಕೇವಲ ಮೂರು ಅಥವಾ ನಾಲ್ಕು ವರ್ಷಗಳಿರಬಹುದು…..ಜಯದೇವಿ ತಾಯಿಯವರ ಆರೋಗ್ಯ ಹುಷಾರಿಲ್ಲದೆ ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಆದ  ದಿನಗಳಲ್ಲಿ ನಡೆದ ಈ ಘಟನೆ ಕೇಳಿದರೆ ಹೃದಯವೂ ಕರಗುತ್ತದೆ.ಆಸ್ಪತ್ರೆಯ ಹಾಸಿಗೆಯ ಮೇಲೆ ಜಯದೇವಿ ತಾಯಿಯವರು ಅಸಹನೀಯ ನೋವಿನಿಂದ ನರಳುತ್ತಿದ್ದರು. ದೇಹದ ಯಾತನೆ ಹೆಚ್ಚಾದಾಗ  ಆ ಕ್ಷಣದಲ್ಲಿ  ತಮ್ಮನ್ನು ತಾವು ಮರೆತು, ಪುಟ್ಟ ಮಗುವಿನಂತೆ,“ಅವ್ವಾ… ಅವ್ವಾ…”ಎಂದು ತಮ್ಮ ಜನ್ಮದಾತೆಯನ್ನು ಕರೆಯುತ್ತಿದ್ದರು. ಆ ಕರೆಯಲ್ಲಿ ನೋವಿತ್ತು, ಹಂಬಲವಿತ್ತು, ತಾಯಿಯ ಮಡಿಲಿಗಾಗಿ ಹಾತೊರೆಯುವ ಮಗುವಿನ ಹೃದಯವಿತ್ತು. ಆ ದೃಶ್ಯವನ್ನು ಕಂಡ ಲಲ್ಲೇಶ್ವರಿಯವರ ಹೃದಯ ಕರಗಿತು. ಆ ಕ್ಷಣದಲ್ಲಿ  ತಾಯಿಯಾಗಿ ನಿಂತರು..ತನ್ನ ತಾಯಿಯ ಕಣ್ಣೀರನ್ನು ಒರೆಸುತ್ತಾ, ತಲೆಯನ್ನು ಮೃದುವಾಗಿ ಸವರುತ್ತಾ, ಮೂರು ವರ್ಷದ ಮಗುವೊಂದು ತನ್ನ ತಾಯಿಯನ್ನು ಸಮಾಧಾನಪಡಿಸಲು ಮುಗ್ಧತೆಯಿಂದ,“ಅವ್ವಾ, ಅಳಬೇಡ. ನಿನ್ನ ತಾಯಿ ಬರುವವರೆಗೂ ನಾನೇ ನಿನ್ನ ತಾಯಿಯಾಗಿರುತ್ತೇನೆ. ಏನು ಬೇಕಾದರೂ ನನಗೆ ಹೇಳು…”ಎಂದು ಹೇಳಿದರು.ಆ ಮಾತು ಕೇಳಿದಾಗ ಅಲ್ಲಿ ಇದ್ದವರ ಕಣ್ಣುಗಳಲ್ಲೂ ನೀರು ತುಂಬಿತು…. ಸಂಬಂಧಗಳೆಲ್ಲ ತಲೆಕೆಳಗಾಗಿದ್ದವು. ತಾಯಿ ಮಗುವಾಗಿದ್ದರು,ಮಗಳು ತಾಯಿಯಾಗಿದ್ದರು.ಲಲ್ಲೇಶ್ವರಿ ತಾಯಿಯವರು ತಮ್ಮ ಕೈಯಿಂದ ನೀರು ಕುಡಿಸಿದರು. ನೋವಿನಿಂದ ನಲುಗಿದ್ದ ತಾಯಿಯ ಬೆವರನ್ನು ಒರೆಸಿದ್ದರು. ಅಂದಿನ‌ದಿನದಿಂದ ಕೊನೆಯ ದಿನ ವರೆಗೂ ತಾಯಿಯಾಗಿಯೇ ಅವರು ಜಯದೇವಿ ತಾಯಿಯವರಿಗೆ ಆಸರೆಯಾದರು.ಅವರ ಪ್ರತಿಯೊಂದು ಸ್ಪರ್ಶದಲ್ಲೂ ಮಮತೆಯಿರುತಿತ್ತು.ಪ್ರತಿಯೊಂದು ಮಾತಿನಲ್ಲೂ ಧೈರ್ಯವಿತ್ತು,  ಸೇವೆಯಲ್ಲೂ ಭಕ್ತಿಯಿತ್ತು.ಒಂದು ಸಮಯದಲಿ ಜಯದೇವಿ ತಾಯಿಯವರು ಲಲ್ಲೇಶ್ವರಿಯನ್ನು ಮಡಿಲಲ್ಲಿ ಹೊತ್ತು ಬೆಳೆಸಿದ್ದರು. ಈಗ ಕಾಲಚಕ್ರ ತಿರುಗಿ, ಲಲ್ಲೇಶ್ವರಿಯವರೇ ಜಯದೇವಿ ತಾಯಿಯವರನ್ನು ಮಮತೆಯ ಮಡಿಲಲ್ಲಿ ಹೊತ್ತುಕೊಂಡಿದ್ದರು. *ತನು ಸವಿಸಿ ಸೇವೆಯಲ್ಲಿ| ಮನನಿಲಿಸಿ ಧ್ಯಾನದಿ ತನುಮನ ಒಂದಾಗಿ ದುಡಿಸಿದೆ -ನನ್ನವ್ವನಾನೆಂಬುದು ಅಳಿದು ನೀನಾದೆ*|| ತಾಯಿಯ ನೋವನ್ನು ತಮ್ಮ ನೋವನ್ನಾಗಿ, ತಾಯಿಯ ಕಣ್ಣೀರನ್ನು ತಮ್ಮ ಕಣ್ಣೀರನ್ನಾಗಿ, ಪ್ರತಿ ಉಸಿರಿನ  ಪ್ರಾರ್ಥನೆಯಾದರು. *ಕಡೆತನ ಭಂಗ |ಬರದೇ ಅಡಿಗಡಿಗೆ ಎಚ್ಚರಬಿಡದಂತೆ ತವ ಸೇವೆ -ನನ್ನವ್ವಮೂಡಿಗೆ ಧರಿಸಿರಿ ತವ ಪಾದ*|| ಜನ್ಮ ನೀಡಿದ ತಾಯಿಗೆ ಮರಳಿ ತಾಯಿಯಾಗುವ ಭಾಗ್ಯ ಕೆಲವೇ ಆತ್ಮಗಳಿಗೆ ಸಿಗುತ್ತದೆ.  ಅಪರೂಪದ ಭಾಗ್ಯವನ್ನು ಲಲ್ಲೇಶ್ವರಿ ತಾಯಿಯವರು ತಮ್ಮ ಪ್ರೀತಿ, ಸೇವೆ ಮತ್ತು ತ್ಯಾಗದ ಮೂಲಕ ಸಾರ್ಥಕಗೊಳಿಸಿದರು. ಜಯದೇವಿ ತಾಯಿಯವರ ಕೊನೆಯ ದಿನಗಳಲ್ಲಿ ಮಮತೆಯ ಮೂರ್ತಿ, ಸೇವೆಯ ಮಗಳಾಗಿ,  ತಾಯಿಯ ಬದುಕಿನ  ಆಶ್ರಯವಾಗಿದ್ದರು. ಅವರ ಜೀವನವನ್ನು ನೋಡಿದಾಗ, “ಮಗಳು ಎಂದರೆ ಕೇವಲ ಜನ್ಮ ನೀಡಿದ ಸಂತಾನವಲ್ಲ….ತಾಯಿಯ ಹೃದಯದ ತುಂಡು” ಎಂಬ ಮಾತು ನೆನಪಾಗುತ್ತದೆ.ತಾಯಿಯವರ ಜೀವನದ ಕೊನೆಯ ಕ್ಷಣಗಳಲ್ಲೂ ಲಲ್ಲೇಶ್ವರಿ ತಾಯಿಯವರ ಕಾಳಜಿ ಮತ್ತು ಸೇವೆ ಗಂಗೆಯಂತೆ ನಿರಂತರವಾಗಿ ಹರಿಯುತ್ತಿತ್ತು… ಅಪಾರ ಪ್ರೀತಿ, ಭಕ್ತಿ ಮತ್ತು ಕೃತಜ್ಞತೆಯಿಂದ ಮೂಡಿದ ಅಮೃತಧಾರೆ.*ನೀನಿಲ್ಲದ ತಾಣ |ಇಲ್ಲ ಇನ್ನೆಲ್ಲಿನೀನೆ ತುಳುಕಿರುವೆ ಒಳ ಹೊರಗೆ -ತಾಯವ್ವನಾನು ನೀನು ಬೆರೆತು ಒಂದಾಗಿ*|| ಎನ್ನುವಂತೆ ಜಯದೇವಿ ತಾಯಿಯವರು  ಮತ್ತು ಲಲ್ಲೇಶ್ವರಿ ತಾಯಿಯವರ ನಡುವಿನ ಬಾಂಧವ್ಯ ಸಾಮಾನ್ಯ ತಾಯಿಮಗಳ ಸಂಬಂಧವಾಗಿರಲಿಲ್ಲ. ಅದು ಎರಡು ದೇಹಗಳಲ್ಲಿ ನೆಲೆಸಿದ್ದ ಒಂದೇ ಆತ್ಮದ ಪ್ರೀತಿಯಾಗಿತ್ತು. ಕೊನೆಯ ದಿನಗಳಲ್ಲಿ ಜಯದೇವಿ ತಾಯಿಯವರ ಆರೋಗ್ಯ ಹದಗೆಟ್ಟ ದಿನಗಳಲ್ಲಿ ವೈದ್ಯರು, ಸಿಬ್ಬಂದಿ ಮತ್ತು ಅವರ ಹತ್ತಿರದವರು ಒಂದು ವಿಷಯವನ್ನು ಗಮನಿಸಿದ್ದರು. ಲಲ್ಲೇಶ್ವರಿ ತಾಯಿಯವರ ಜೀವನವೇ ಜಯದೇವಿ ತಾಯಿಯವರ ಸುತ್ತ ಸುತ್ತುತ್ತಿತ್ತು. .ಆ ಕಾರಣದಿಂದಲೇ ತಾಯಿಯವರ ಸ್ಥಿತಿಯನ್ನು ಕಂಡ ವೈದ್ಯರು ಕೂಡ ಒಂದು ತುರ್ತು ಸಭೆ ಕರೆದು“ತಾಯಿಯವರ ಬಗ್ಗೆ ನಮ್ಮ ಕಾಳಜಿ ಎಷ್ಟಿದೆಯೋ, ಅಷ್ಟೇ ಕಾಳಜಿ ಲಲ್ಲೇಶ್ವರಿ ತಾಯಿಯವರ ಬಗ್ಗೆಯೂ ಇದೆ. ಇವರಿಬ್ಬರ ಪ್ರೀತಿ ಎಷ್ಟು ಆಳವಾಗಿದೆ ಎಂದರೆ, ತಾಯಿಯವರ ಅಗಲಿಕೆಯ ಆಘಾತವನ್ನು ಅವರು ಹೇಗೆ ತಡೆದುಕೊಳ್ಳುತ್ತಾರೆ ಎಂಬ ಚಿಂತೆ ನಮಗಿದೆ. ಅವರನ್ನು ಸ್ವಲ್ಪವಾದರೂ ಮಾನಸಿಕವಾಗಿ ಸಿದ್ಧಗೊಳಿಸಬೇಕು…”ಎಂದು ಮಾತನಾಡಿದ್ದರೆಂದು ಕೇಳಿದಾಗ ಅನೇಕರಿಗೆ ಆಶ್ಚರ್ಯವಾಗುತ್ತಿತ್ತು.ಅದು ಸಾಮಾನ್ಯ ಪ್ರೀತಿಯಲ್ಲ…ಅದು ಉಸಿರಿಗೂ ಉಸಿರಿನ ಸಂಬಂಧವಾಗಿತ್ತು.ಜಯದೇವಿ ತಾಯಿಯವರು ಕೂಡ ಈ ವಿಷಯವನ್ನು ಅರಿತಿದ್ದರು. ಆದ್ದರಿಂದ ಅವರು ಆಗಾಗ ಲಲ್ಲೇಶ್ವರಿ ತಾಯಿಯವರನ್ನು ಕರೆದು ಪ್ರೀತಿಯಿಂದ,“ಮಗಳೇ, ನಾನು ಯಾವಾಗಲೂ ದೇಹದಲ್ಲಿ ಇರಲಾರೆ. ನಾನು ಹೋದ ಮೇಲೂ ನೀನು ಕುಗ್ಗಬಾರದು. ಗಟ್ಟಿಯಾಗಿ ನಿಲ್ಲಬೇಕು. ನಮ್ಮ ಪರಂಪರೆಯನ್ನು, ನಮ್ಮ ಮೌಲ್ಯಗಳನ್ನು, ನಮ್ಮ ಸೇವೆಯ ಮಾರ್ಗವನ್ನು ಮುಂದುವರಿಸಬೇಕು…”ಎಂದು ಹೇಳುತ್ತಿದ್ದರು.ಆದರೆ ಆ ಮಾತು ಕೇಳಿದ ಕೂಡಲೇ ಲಲ್ಲೇಶ್ವರಿ ತಾಯಿಯವರ ಮನಸ್ಸು ತಲ್ಲಣಗೊಳ್ಳುತ್ತಿತ್ತು.“ಅವ್ವಾ, ಆ ಮಾತು ಹೇಳಬೇಡ! ನೀನು ಇಲ್ಲದಿರುವುದನ್ನು ನಾನು

Read Post »

You cannot copy content of this page

Scroll to Top