ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ವಿಮಲಾರುಣ ಪಡ್ಡಂಬೈಲು “ಬಣ್ಣದ ಧಿರಿಸು”

ಕಾವ್ಯ ಸಂಗಾತಿ ವಿಮಲಾರುಣ ಪಡ್ಡಂಬೈಲು “ಬಣ್ಣದ ಧಿರಿಸು” ಬಚ್ಚಿಟ್ಟ ಬಣ್ಣದ ಧಿರಿಸಿಗೆಹಚ್ಚಿಟ್ಟ ಹಣತೆಯ ಕಣ್ಣವನುಸಾಲು ದೀಪಗಳಹೊನ್ನ ಕಿರಣದ ತಾರೆ ತಂದವನುತನ್ನ ಮನದಲ್ಲಿ ಭಿತ್ತಿದ ಭಾವಗಳ ಹಸೆಗೆಸಾವಿರ ಚುಕ್ಕೆಗಳ ಇಟ್ಟವನು. ಹಸಿರುಸಿರ ಸೀರೆಯೊಳುನೂತ ನೂಲುಗಳೇ ಸಾಕುಚಿತ್ತಾರ ತಂದಭಾವಭಿತ್ತಿಯ ಬಣ್ಣಗಳ ಹೇಳಲು. ಬಿದ್ದ ಮಳೆಗೆ ಮೊಳೆತ‌ ನೆಲದಹಸಿ ಪ್ರೀತಿಯಂಥವನಮೋಹಕ್ಕೋ ಮೋದಕ್ಕೋಒಲುಮೆಗೋ ನಲುಮೆಗೋಪ್ರೀತಿ ಪ್ರೇಮದ ಅರ್ಥವ ಹೇಳಲುಯಾವ ಹೆಸರಿಡಲಿ? ಸುಳಿ ಮಿಂಚ ಮಿಣುಕು ಕಂಗಳಮಾಯಕಾರನಮೊಗದಲ್ಲಡಗಿದ ಕೋಲ್ಮಿಂಚಮುಗುಳು ನಗೆಯನೇನೆಂದು ಬಣ್ಣಿಸಲಿ? ಉಜ್ವಲ ಬದುಕಿನಅನಂತ ಕ್ಷಣಗಳ ಸಾಕ್ಷೀಕರಿಸಲುಸಂತಸ ಹಂಚಿಸಮೀಪ ಬರಲು ತವಕಿಸುವಜೀವದುಜ್ಜೀವದಲಿನಾನಿರುವೆನೆಂದುಹೇಗೆ ಹೇಳಲಿ? ಉಟ್ಟ ಸೀರೆಯ‌ ಅಂಚಿನಲಿಸೆರಗ‌ ಸಿಕ್ಕಿಸಿಕೊಂಡಂತಿರುವಮುಚ್ಚಿಟ್ಟ ಮನ ನನ್ನದುಎಲ್ಲವು ಬಚ್ಚಿಟ್ಟ ಭಾವದೊಳಡಗಿವೆಎಂದು ಹೇಳದಿದ್ದರೂಜೊತೆಗಿರುವ ಭಾವ ಕೊಡುವ ಭರದಲಿಸೋತು ಹೋದವಳು…. ವಿಮಲಾರುಣ ಪಡ್ಡoಬೈಲು

ವಿಮಲಾರುಣ ಪಡ್ಡಂಬೈಲು “ಬಣ್ಣದ ಧಿರಿಸು” Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ- “ಕಾಯಕಯೋಗಿನಿ -ಕದಿರ ರೆಮ್ಮವ್ವೆ”, ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಶರಣ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ- ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ “ಕಾಯಕಯೋಗಿನಿ -ಕದಿರ ರೆಮ್ಮವ್ವೆ”, ಕದಿರ ರೆಮ್ಮವ್ವೆ  -ಅವಿರಳ ವಚನಕಾರ್ತೆ. ಅವಳು ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರ ವಚನ ಕ್ರಾಂತಿಯಲ್ಲಿ   ಪಾಲ್ಗೊಂಡು ರಾಟಿಯಿಂದ ಕದಿರು ತೆಗೆದು ನೂಲುವ ಕಾಯಕದವಳಾಗಿದ್ದವಳು.ತೆಗೆದ ನೂಲನ್ನು ಮಾರಿ ಬಂದ ಹಣದಲ್ಲಿ ಗುರು ಲಿಂಗ ಜಂಗಮ ದಾಸೋಹ ಮಾಡಿ ಬದುಕಿದಳು..ಬಹುತೇಕರು ಈಕೆಯ ಕಾಲವನ್ನು ಬಸವಾದಿ ಪ್ರಮಥರ ಕಾಲವೆಂದು ನಿರ್ಣಯಿಸುತ್ತಾರೆ . ಡಾ ಎಲ್ ಬಸವರಾಜು ಅವರು ಇವಳ ವಚನದಲ್ಲಿ ಬರುವ “ಪರದಳ  ವಿಭಾಡ”  “ಗಜವೇಂಟೆಕಾರ ” ಎಂಬ ಪದಗಳನ್ನು ಗಮನಿಸಿ ಇವಳು ವಿಜಯನಗರದ 1430  ಕಾಲದ ವಚನಕಾರ್ತೆ ಎಂದು ತೀರ್ಮಾನಿಸುತ್ತಾರೆ. ಆದರೆ ಹರಿಹರ ತನ್ನ ರಗಳೆಯಲ್ಲಿ ಕದಿರ ರೆಮ್ಮವ್ವೆಯನ್ನು ಸ್ಮರಿಸಿದ್ದಾನೆ. ಪಾಲ್ಗುರಿಕೆ ಸೋಮನಾಥನು ತನ್ನ ಪಂಡಿತಾರಾಧ್ಯ ಚರಿತ್ರೆಯಲ್ಲಿ ಕದಿರ ರೆಮ್ಮವ್ವೆ ಶರಣೆಯ  ಉಲ್ಲೇಖವಿದೆ. ಅಲ್ಲದೆ ಕದಿರು ಕಾಯಕದ ಕದಿರ ರೆಮ್ಮವ್ವೆಯ ಒಂದು ವಚನದಲ್ಲಿ ಬಸವಣ್ಣ ,ಚೆನ್ನ ಬಸವಣ್ಣ ಪ್ರಭುದೇವರನ್ನು ಸ್ಮರಿಸಿದ್ದಾಳೆ.ಶರಣರ ವಚನಗಳ ಜೊತೆ ಈಕೆಯ ವಚನಗಳು ಮತ್ತು ಸಕಲ ಪುರಾತನರ ವಚನಗಳು ಹಾಗು ಇತರ ಸ್ಥಲ ಕಟ್ಟಿನ ವಚನಗಳಲ್ಲಿ ಸಮಾವೇಶಗೊಂಡಿರುವುದು ಕದಿರು ರೆಮವ್ವೆ  ಬಸವ ಕಾಲಿನ ಶರಣೆ ಎನ್ನಲು ಹೆಚ್ಚು ಪುಷ್ಟಿ ಸಿಗುತ್ತವೆ. 1620  ರ ಶಂಕರ ದೇವನ “ಇಷ್ಟಲಿಂಗ ಚಾರಿತ್ರ್ಯ ” ಅಜ್ಞಾತ ಕವಿಯ   “ನೂರೆಂಟು ಶರಣೆಯರ ಅಷ್ಟಕ “ದಲ್ಲಿ ಕದಿರ ರೆಮ್ಮವ್ವೆ ಯ ಉಲ್ಲೇಖ ಕಂಡು ಬಂದಿದೆ. ಹೀಗಾಗಿ  ಕದಿರ ರೆಮ್ಮವ್ವೆ ಹನ್ನೆರಡನೆಯ ಶತಮಾನದ ಬಸವಾದಿ ಪ್ರಮಥರ ಸಂಕುಲಕೆ ಸೇರಿದ ಶರಣೆ ಎಂದು ಗಟ್ಟಿಯಾಗಿ ನಿರ್ಧರಿಸಬಹುದು.. ಕದಿರ ರೆಮ್ಮವ್ವೆ  ಒಬ್ಬ ನಿಷ್ಠಾವಂತ ನೇಕಾರ ಕುಟುಂಬದ ಕಾಯಕಜೀವಿ. ರಾಟಿಯಿಂದ ನೂಲು ತೆಗೆಯುವುದು ,ನೂಲನ್ನು ಮಾರಿ ಬಂದ ಆದಾಯದಿಂದ ಜಂಗಮ ಸೇವೆ ಕೈಗೊಳ್ಳುವ ಸತ್ಯ ಶುದ್ಧ ಶರಣೆ.ಇವಳ ಗಂಡನ ಬಗ್ಗೆ ಯಾವುದೇ ದಾಖಲೆಗಳಿಲ್ಲ . ಅವಳು ತನ್ನ ಕಾಯಕದ ಜೊತೆಗೆ ನಿತ್ಯ ಅನುಭಾವದ ಗೋಷ್ಠಿಯಲ್ಲಿ ಪಾಲ್ಗೊಂಡು ಲೌಕಿಕ ಪಾರಮಾರ್ಥಿಕ ಚಿಂತನೆಗಳಲ್ಲಿ ಭಾಗವಹಿಸುತ್ತಿದ್ದಳು.ಅವಳ ಎರಡು ವಚನದಲ್ಲಿ ನಿರಾಕಾರದ ಗಂಡನ ಬಗ್ಗೆ ಒಲವು ತೋರಿಸಿದನ್ನು ನೋಡಿದರೆ ಅವಳು ಅವಿವಾಹಿತೆಯಾಗಿರಬಹುದು ಎಂದು ನನ್ನ ಗ್ರಹಿಕೆಯಾಗಿದೆ. ಕದಿರ ರೆಮ್ಮವ್ವೆ  ನಾಲ್ಕು ವಚನಗಳು ಮಾತ್ರ ದೊರೆತಿವೆ.” ಕದಿರ ರೆಮ್ಮಿವೊಡೆಯ  ಗುಮ್ಮೆಶ್ವರ ” ನಾಲ್ಕು ವಚನಗಳಲ್ಲಿ ಎರಡುವಚನಗಳು  ಸತಿ ಪತಿ ದಾಂಪತ್ಯ ಧರ್ಮಕ್ಕೆ ಸಂಬಂಧ ಪಟ್ಟ ಅಲೌಕಿಕ ವಿಚಾರಗಳು ,ಒಂದು ವಚನದಲ್ಲಿ ಶರಣರ ಸ್ತುತಿ ಕಂಡು ಬಂದಿದೆ. ಇನ್ನೊಂದರಲ್ಲಿ ಕಾಯಕದ ಮಹತ್ವ ಅಡಕವಾಗಿದೆ. ಎನ್ನ ಸ್ಥೂಲ ತನುವೆ ಬಸವಣ್ಣನಯ್ಯಾ  ಎನ್ನ ಸೂಕ್ಷ್ಮ ತನುವೆ ಚೆನ್ನ ಬಸವಣ್ಣನಯ್ಯ  ಎನ್ನ ಕಾರಣ ತನುವೆ ಪ್ರಭುದೇವರಯ್ಯಾ  ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ  ಕದಿರ ರೆಮ್ಮಿಯೊಡೆಯ   ಗುಮ್ಮೆಶ್ವರಾ-  ಎನ್ನುವಲ್ಲಿ   ಕದಿರ ರೆಮ್ಮವ್ವೆ  -ತನ್ನ ವಚನದಲ್ಲಿ ಬಸವಣ್ಣ ತನ್ನ ಸ್ಥೂಲ ಶರೀರದ ಗುರುತು. ತನ್ನ ಆಕಾರ ಅನುಭಾವದ ತನುವು. ತನಗೆ ಶರಣೆಯ ಮುದ್ರೆಯನ್ನೊತ್ತಿದ ಬಸವಣ್ಣನು ತನ್ನ ಸ್ಥೂಲ ಶರೀರಕ್ಕೆ ತನುವಾಗುತ್ತಾನೆ ಎಂದು ಹೇಳುತ್ತಾ ಬಸವಣ್ಣನವರ ಕಲ್ಯಾಣ ಸಮತೆಯ ಕ್ರಾಂತಿಯಲ್ಲಿ ಕದಿರ ರೆಮ್ಮವ್ವೆಗೆ ಸ್ಥಾನ ದೊರಕಿಸಿ  ತನ್ನ ಕಾಯ ಶರೀರದ ಸ್ಥೂಲ ತನುವಾದವರು ಬಸವಣ್ಣ ಎಂದು ಅಭಿಮಾನದಿಂದ ಹೇಳುತ್ತಾಳೆ. ಇನ್ನು ತನ್ನ ಸೂಕ್ಶ್ಮ ಶರೀರದ ಕಣ್ಣಿಗೆ ಕಾಣದ ಭಾವ ಸೂಕ್ಷ್ಮತೆಯ ತನುವು ಚೆನ್ನ ಬಸವಣ್ಣ, ಚೆನ್ನಬಸವಣ್ಣನವರ ಷಟಸ್ಥಲ ಅರಿವಿನ ಜ್ಞಾನ ಸ್ಥೂಲ ಶರೀರದ ಮನೋ  ವಿಕಸನಕೆ ಕಾರಣವು. ಇಂತಹ ಸೂಕ್ಷ್ಮ ಶರೀರದ ತನುವು ಚೆನ್ನ ಬಸವಣ್ಣ . ಅದೇ ರೀತಿ ಶರೀರ ಪ್ರಾಣ ಆತ್ಮವು ಕ್ರಮವಾಗಿ  ಸ್ಥೂಲ ,ಸೂಕ್ಷ್ಮ ಕಾರಣವಾಗಿ ತನ್ನ ಆತ್ಮದ ಕಾರಣ ತನುವಿಗೆ ಅಲ್ಲಮರು ಕಾರಣ ಎಂದು ಹೇಳುತ್ತಾ ತನ್ನನ್ನು ಅಲ್ಲಮರ ಆಪ್ತವಲಯದಲ್ಲಿ ಗುರುತಿಸಿಕೊಳ್ಳುತ್ತಾಳೆ. ಕದಿರ ರೆಮ್ಮವ್ವೆ ತನ್ನ ಕಾಯಕದ ಬಗ್ಗೆ ಹೆಮ್ಮೆಯಿಂದ ಹೇಳುತ್ತಾಳೆ. ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ : ಅಡಿಯ ಹಲಗೆ ಬ್ರಹ್ಮ ,ತೋರಣ ವಿಷ್ಣು  ನಿಂದ ಬೋಂಬೆ ಮಹಾರುದ್ರ  ರುದ್ರನ ಬೆಂಬಳಿಯವೆರಡು ಸೂತ್ರ ಕರ್ಣ . ಅರಿವೆಂಬ ಕದಿರು ,ಭಕ್ತಿಯೇನೆಂಬ ಕೈಯಲ್ಲಿ ತಿರುಹಲಾಗಿ ಸುತ್ತಿತ್ತು ನೂಲು ಕದಿರು ತುಂಬಿತ್ತು. ರಾಟೆಯ ತಿರುಹಲಾರೆ -ಎನ್ನ ಗಂಡ ಕುಟ್ಟಿಹ ಇನ್ನೇವೆ  ” ಕದಿರ ರೆಮ್ಮಿಯೊಡೆಯ  ಗುಮ್ಮೆಶ್ವರಾ  “? ಇದು ತನ್ನ ಬದುಕಿಗೆ ಸಂಬಂಧ ಪಟ್ಟ ಕಾಯಕದ ವಚನವಾಗಿದೆ. ಮೇಲ್ನೋಟಕ್ಕೆ ಇದು ಕಾಯಕದ ವಚನವಾದರೂ ಈ ವಚನದಲ್ಲಿ ಅತ್ಯಂತ ಪಾರಮಾರ್ಥಿಕ ಅರ್ಥವನ್ನು ಕದಿರು ರೆಮ್ಮವ್ವೆ ವ್ಯಕ್ತ ಪಡಿಸಿದ್ದಾಳೆ .ಕದಿರ  ರೆಮ್ಮವ್ವೆ ತನ್ನ ಕುಲ ಕಸುಬು ಹಾಗು ಕೀಳು ಜಾತಿಯ ಉಲ್ಲೇಖ ಮಾಡಿದ್ದಾಳೆ. ಜೊತೆಗೆ ತಿರುಹುವ ರಾಟಿಗೆ ಅದರ ಅಡಿಯ ಹಲಗೆ ಬ್ರಹ್ಮ ಅದಕ್ಕೆ ಕಟ್ಟಿದ ತೋರಣವೇ ವಿಷ್ಣು ,ರಾಟೆಗೆ ಕಟ್ಟಿದ ಬೋಂಬೆ ಮಹಾರುದ್ರ ರುದ್ರನ ಬೆಂಬಲಕೆ ಎರಡು ಸೂತ್ರ ಕರ್ಣಗಳು .ಇಂತಹ ರಾಟೆಯಿಂದ ನೂತಾಗ ಹೊರಡುವ ಅರಿವೇ ಕದಿರು..ಭಕ್ತಿಯಿಂದ ತಿರುಹಲಾಗಿ ನೂಲು ಸುತ್ತಿಕೊಂಡಿತ್ತು,ಮತ್ತು ಕದಿರು ತುಂಬಿತ್ತು . ಕದಿರ ತುಂಬಿದ ಮೇಲೆ ಮತ್ತೆ ರಾಟೆಯ ತಿರುಹಲಾರೆ.ಇಲ್ಲಿ ಬ್ರಹ್ಮ ವಿಷ್ಣು ರುದ್ರ ಮಹಾರುದ್ರ ಎಂಬ ದೈವೀ ಕಲ್ಪನೆಯನ್ನೇ ತಾನು ನೂಲುವ ಕದಿರಿನ  ಹಲಗೆಯನ್ನು ಬ್ರಹ್ಮವೆಂತಲೂ ,ಕಾರಣ ಹಲಗೆ ಗಟ್ಟಿಯಾಗಿದ್ದರೆ ತಾನಷ್ಟೇ ಕದಿರು ತೆಗೆಯುವವರು ಅದರ ಮೇಲೆ ಕುಳಿತು ನೂಲಬಹುದು ಅದು ಕದಿರಿನ    ಉತ್ಪತ್ತಿಯ ಆರಂಭ  (ಸೃಷ್ಟಿ ).ಅದೇ ರೀತಿ ಕದಿರಿಗೆ ಕಟ್ಟುವ ತೋರಣವು ವಿಷ್ಣು -ಇದು ಸ್ಥಿತಿ ಪ್ರಜ್ಞೆಯಾಗಿದೆ. ಲಯದ ಸಂಕೇತವಾದ ರುದ್ರನು ಕದಿರಿನ ಹೆಮ್ಮೊಳೆ-ಲೋಹದ ತುಂಡು ಕದಿರು ತೆಗೆಯುವ ಸಾಧನ. (spikes ) .ಇಲ್ಲಿಂದ ಉತ್ಪತ್ತಿಯಾಗುವ ಅರಿವೇ ಕದಿರು .ಭಕ್ತಿಯ ಕೈಯಲ್ಲಿ ರಾಟಿ ತಿರುಹಲಾಗಿ  ನೂಲು ಸುತ್ತಿಕೊಳ್ಳಹತ್ತಿತು ಮತ್ತು ಕದಿರು ತುಂಬಿ ಬಿಟ್ಟಿತು. ಪ್ರಾಪಂಚಿಕ ಪಾರಮಾರ್ಥಿಕ ನಿಲುವುಗಳನ್ನು ಸಮನ್ವಯಿಸುವ  ಪ್ರಯತ್ನ ಇದಾಗಿದೆ..ಅಗತ್ಯಕ್ಕಿಂತ ಹೆಚ್ಚಿನ ಆದಾಯ ತಿರಸ್ಕರಿಸಿದ ಶರಣೆ ರೆಮ್ಮವ್ವೆ ಹಾಗೇನಾದರೂ ಹೆಚ್ಚಿಗೆ ಕದಿರ ತೆಗೆದು ಆದಾಯಮಾಡಿಕೊಂಡರೆ ತನ್ನ ಲಿಂಗವೆಂಬ ಗಂಡ ತನ್ನನ್ನು ಕುಟ್ಟಿಹ ಶಿಕ್ಷಿಸುವ ಎಂದು ತನ್ನನ್ನು ತಾನೇ ಎಚ್ಚರಿಸಿಕೊಳ್ಳುತ್ತಾಳೆ.ತನ್ನ ಸಾಂಸಾರಿಕ ಬದುಕಿನಲ್ಲಿ ಪಾರಮಾರ್ಥಿಕ ಚಿಂತನೆ ಮಾಡುತ್ತಾ ಜೀವನ ಸಾಗಿಸಿದ ದಿಟ್ಟ ಶರಣೆ ಕದಿರ ರೆಮ್ಮವ್ವೆ. “  ಕದಿರು ರೆಮ್ಮವ್ವೆ – ಎರಡು ವಚನಗಳು ತನ್ನ ಪ್ರಾಪಂಚಿಕ ಬದುಕಿನ ಕುರಿತಾಗಿ ಎಂದು ಮೇಲು ನೋಟಕ್ಕೆ ಕಂಡರೂ ಅದರ ಹಿಂದಿನ ಆಧ್ಯಾತ್ಮಿಕ ಬೆಡಗನ್ನು ರೆಮ್ಮವ್ವೆ ಸೊಗಸಾಗಿ ವರ್ಣಿಸಿದ್ದಾಳೆ. ನಿರಾಕಾರ ಚೈತನ್ಯವೇ ತನ್ನ ಗಂಡವೆಂದು ಅಕ್ಕ ಮಹಾದೇವಿಯ ಹಾಗೆ ನಿರೂಪಿಸಿದ ವಚನಗಳ ಕಾಣಬಹುದು. ಎಲ್ಲರ ಹೆಂಡಿರು ತೊಳಸಿಕ್ಕುವರು;   ಎನ್ನ ಗಂಡಂಗೆ ತೊಳಸುವುದಿಲ್ಲ.   ಎಲ್ಲರ ಗಂಡಂದಿರಿಗೆ ಬಸಿವರು;   ಎನ್ನ ಗಂಡಂಗೆ ಬಸಿವುದಿಲ್ಲ. ಎಲ್ಲರ ಗಂಡಂದಿರಿಗೆ ಬೀಜವುಂಟು;   ಎನ್ನ ಗಂಡಂಗೆ ಅಂಡದ ಬೀಜವಿಲ್ಲ.   ಎಲ್ಲರ ಗಂಡಂದಿರು ಮೇಲೆ;   ಎನ್ನ ಗಂಡ ಕೆಳಗೆ, ನಾ ಮೇಲೆ.   ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.  ಪ್ರತಿಯೊಬ್ಬ ಹೆಂಡತಿ ತಾನು ಪತಿಯ ದಾಸಿಯಾಗುವಳು .ಆದರೆ ಕದಿರ ರೆಮ್ಮವ್ವೆ ತಾನು ದಾಸಿಯಾಗುವದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾಳೆ.ಎಲ್ಲ ಗಂಡಂದಿರರಿಂದ ಹೆಂಡತಿ ಬಸಿರಾಗುವಳು.ಆದರೆ ತಾನು ತನ್ನ ಗಂಡನಿಗೆ ಕೇವಲ ಬಸಿರಾಗುವುದಕ್ಕೆ ಬದುಕಿಲ್ಲ ಎಂದಿದ್ದಾಳೆ. ತನ್ನ ಗಂಡ ಕೇವಲ ವಿಷಯಾದಿಗಳ ಹುಟ್ಟು ಸಾವಿಗೆ ಕಾರಣವಾಗುವ ವ್ಯಕ್ತಿಯಲ್ಲ ಎಂದು ನಿರೂಪಿಸಿದ್ದಾಳೆ.ಎಲ್ಲ ಗಂಡರಿಗೆ  ಉತ್ಪತ್ತಿಯ ಬೀಜವಿದೆ ಆದರೆ ತನ್ನ ಗಂಡನಿಗೆ ಅಂಡದ ಅಂದರೆ ಕೇವಲ ಉತ್ಪತಿಗೆ ಬೇಕಾದ ಬೀಜ (fertile )  ಇಲ್ಲವೆನ್ನುತ್ತಾಳೆ.ಎಲ್ಲರ ಗಂಡ ಮೇಲೆ ಎಂದು ಸಾರುವ ಭಾರತೀಯ ಮಹಿಳೆಯರಿಗೆ ಕದಿರ ರೆಮ್ಮವ್ವೆ  ಸವಾಲಾಗುತ್ತಾಳೆ.ತನ್ನ ಗಂಡ ಕೆಳಗೆ ತಾನು ಮೇಲೆ ಎಂದು ಹೆಮ್ಮೆಯಿಂದ ಹೇಳುವ ಕದಿರ ರೆಮ್ಮವ್ವೆ ತಾನು ಲಿಂಗ ಭೇದ ನಿರಾಕರಿಸಿ ನಿರಾಕಾರ ಸ್ವರೂಪದ ಸಾಕಾರದ ಲಿಂಗವೇ ತನ್ನ ಗಂಡ ಎಂದು ಹೇಳಿಕೊಳ್ಳುತ್ತಾಳೆ. ಎಲ್ಲರ ಗಂಡಂದಿರು ಪರದಳವಿಭಾಡರು;   ಎನ್ನ ಗಂಡ ಮನದಳವಿಭಾಡ.  ಎಲ್ಲರ ಗಂಡಂದಿರು ಗಜವೇಂಟೆಕಾರರು;   ಎನ್ನ ಗಂಡ ಮನವೇಂಟೆಕಾರ.   ಎಲ್ಲರ ಗಂಡಂದಿರು ತಂದಿಕ್ಕಿಸಿಕೊಂಬರು;   ಎನ್ನ ಗಂಡ ತಾರದೆ ಇಕ್ಕಿಸಿಕೊಂಬ.   ಎಲ್ಲರ ಗಂಡಂದಿರಿಗೆ ಮೂರು,   ಎನ್ನ ಗಂಡಂಗೆ ಅದೊಂದೆ;   ಅದೊಂದೂ ಸಂದೇಹ,ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.  ಕದಿರ ರೆಮ್ಮವ್ವೆ ತನ್ನ ಮತ್ತು ಇತರ ಭವಿಗಳ ಗಂಡಂದಿರ ಗುಣ ಸ್ವಭಾವಗಳನ್ನು ವಿವರಿಸುತ್ತಾ,ತನ್ನ ಗಂಡನಿಗೂ ಮತ್ತು ಇತರ ಮಹಿಳೆಯರ ಗಂಡಂದಿರರಿಗೂ   ಇರುವ ವ್ಯತ್ಯಾಸವನ್ನು ಮತ್ತೆ ಮತ್ತೆ ಕೆಣಕಿದ್ದಾಳೆ   . ಎಲ್ಲರ ಗಂಡಂದಿರರು ಪರರ ಅಳಲನ್ನು ವಿನಾಶ ಮಾಡಿದರೆ ,ತನ್ನ ಗಂಡ ತನ್ನ ಮನದ ಅಳಲನ್ನು ನಾಶ ಮಾಡುತ್ತಾನೆ .ಎಲ್ಲರ ಗಂಡರು ಆನೆಯನ್ನು ಭೇಟೆಯಾಡಿದರೆ. ತನ್ನ ಗಂಡ ವಿಷಯಾದಿಗಳನ್ನು ತುಂಬಿದ ಮನದ ಭೇಟೆಯಾಡುವವನು.ಉಳಿದ ಗಂಡಂದಿರರು ತಂದದ್ದನ್ನು ತಿನ್ನುವವರು .ತನ್ನ ಗಂಡ ತಾರದೆ ತಿನ್ನುವವನು.ಎಲ್ಲರ ಗಂಡಂದಿರರು ಸೃಷ್ಟಿ ಸ್ಥಿತಿ ಲಯ -ಸ್ಥೂಲ ಸೂಕ್ಷ್ಮ ಹಾಗು ಕಾರಣ ಶರೀರಕ್ಕೆ  ಅಂಟಿಕೊಂಡವ್ರು. ತನ್ನ ಗಂಡ ಮಾತ್ರ ಕಾರಣ ಶರೀರಕ್ಕೆ ನಿಂತ ಚೈತನ್ಯ ಚೇತನವೆನ್ನುತ್ತಾಳೆ ಕದಿರ ರೆಮ್ಮವ್ವೆ.. ತುಂಬಾ ಗಹನವಾದ ವಿಷಯವನ್ನು ಸಲೀಲಾಗಿ ಹೇಳುವ ಶರಣೆಯ ವಚನದಲ್ಲಿ ಅಕ್ಕ ಮಹಾದೇವಿಯ ಚೆನ್ನ ಮಲ್ಲಿಕಾರ್ಜುನನ್ನು ನೆನಯುವ ಧ್ವನಿ ಧೋರಣೆ ಎದ್ದು ಕಾಣುತ್ತದೆ.ಕದಿರ ರೆಮ್ಮವ್ವೆಯ ವಚನಗಳಲ್ಲಿ ತಾನು ಪ್ರಾಪಂಚಿಕ ಬದುಕಿಗೆ  ಮಾತ್ರ ಸೀಮಿತವಲ್ಲ ತಾನು ಆಧ್ಯಾತ್ಮಿಕ ಪಾರಮಾರ್ಥಿಕ ಸುಖವನ್ನು ಉಣ್ಣಲು ಬಂದವಳು ಎಂದಿದ್ದಾಳೆ. ಹೀಗೆ ಲಿಂಗ ಭೇದವಳಿದು ತಾನೇ ಲಿಂಗವಾದ ಬಗೆಯನ್ನು ಅರ್ಥಪೂರ್ಣವಾಗಿ ವಿವರಿಸಿದ ಅತ್ಯಂತ ಜ್ಞಾನಿ ಅವಿರಳ ವಚನಕಾರ್ತೆ   ಕದಿರ ರೆಮ್ಮವ್ವೆ . ಕದಿರ ರೆಮ್ಮವ್ವೆಯ ಸಿಕ್ಕ ನಾಲ್ಕು ವಚನಗಳು ಅತ್ಯಂತ ಉತ್ಕೃಷ್ಟ ಚಿಂತನೆಯಿಂದ ಕೂಡಿವೆ.ಅವಳ ವಚನದ ಅಂಕಿತವು ಕದಿರ ರೆಮ್ಮಿಯೊಡೆಯ  ಗುಮ್ಮೆಶ್ವರಾ”. ಗುಮ್ಮೆಶ್ವರ-ಇದು ಗುಹೇಶ್ವರ  ಅಂಕಿತದ ಸಾಮ್ಯತೆ ಇದ್ದು  ಪಾಠಾಂತರ   ಸಮಯದಲ್ಲಿ ಇದು ಗುಮ್ಮೆಶ್ವರ ಆದ ಎಲ್ಲಾ ಸಾಧ್ಯತೆಗಳಿವೆ. ಕದಿರ ರೆಮ್ಮವ್ವೆ ಅಲ್ಲಮ ಪ್ರಭುವಿನ ಗರಡಿಯಲ್ಲಿ ಬೆಳೆದಳವಳು . ತನ್ನ ಒಂದು ವಚನದಲ್ಲಿ ತಾನು ಗುರು ಅಲ್ಲಮರ ಕಾರುಣ್ಯವೆಂದು ಹೇಳಿಕೊಂಡಿದ್ದಾಳೆ. —– ಎನ್ನ ಕಾರಣ ತನುವೆ ಪ್ರಭುದೇವರಯ್ಯಾ         ಇಂತಿವರ ಕರುಣದಿಂದಲಾನು ಬದುಕಿದೆನಯ್ಯಾ .            ಕದಿರ ರೆಮ್ಮಿಯೊಡೆಯ  ಗುಮ್ಮೆಶ್ವರಾ ಎಂದು ಹೇಳಿ ತನ್ನ ಗುರುವಿನ ಮೇಲಿನ ಅಭಿಮಾನ ಗೌರವ ಮತ್ತು ಪ್ರೀತಿಯನ್ನು ವ್ಯಕ್ತ ಪಡಿಸಿದ್ದಾಳೆ. ಈ ಕಾರಣದಿಂದ ಅವಳು ಅಲ್ಲಮ ಪ್ರಭುಗಳ ಆಪ್ತ ವಲಯದ ಸಹಾಯಕಿ, ಶಿಷ್ಯೆ ಎಂದು ಪರಿಗಣಿಸಬಹುದು. ನನ್ನ  ಈ ತರ್ಕಕ್ಕೆ ಗ್ರಹಿಕೆಗೆ ಇನ್ನೊಂದು ಕೆಲವು ಕಾರಣಗಳಿವೆ . ಅವುಗಳಲ್ಲಿ ಕಲ್ಯಾಣ ಕ್ರಾಂತಿಯ ಮೊದಲು ಮತ್ತು ನಂತರ ಕೆಲ ಶರಣರು ಕಲ್ಯಾಣವನ್ನು ತೊರೆದರು ಎಂದು ನಮಗೆ ತಿಳಿದು ಬರುತ್ತದೆ. ಹೀಗೆ ಕಲ್ಯಾಣ ರಕ್ತ ಕ್ರಾಂತಿಯ ಮೊದಲೆ ಕಲ್ಯಾಣ ತೊರೆದವರಲ್ಲಿ ಅಕ್ಕ ಮಹಾದೇವಿ  ಮತ್ತು  ಅಲ್ಲಮರು . ಚರಿತ್ರೆ ಇತಿಹಾಸದಲ್ಲಿ  ಲಭ್ಯವಿರುವ ಘಟನಗಳನ್ನಾಧರಿಸಿ ಶರಣರ ಮಾರ್ಗದ ಸಂಭಾವ್ಯತೆಯನ್ನು  ನಿರ್ಧರಿಸಲಾಯಿತು. ಕಳೆದ ಮೂವತ್ತು ವರ್ಷದಿಂದ ನಾನು ಶರಣರ ಸಮಾಧಿಗಳನ್ನು ಅತ್ಯಂತ ಕೂತಹಲದಿಂದ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಅಲ್ಲಮ ಪ್ರಭುಗಳು ತೇರದಾಳದಲ್ಲಿ ಐಕ್ಯರಾಗಿದ್ದಾರೆ ಅಲ್ಲಿ ಪ್ರಭುದೇವರ ಗದ್ದುಗೆ ಇದೆಯೆಂದು    ಚಿಕ್ಕ ಬಾಲಕನಿಂದಲೂ ಕೇಳಿಸಿಕೊಂಡು ಬಂದಿದ್ದೆ.ಆದರೆ ತೇರದಾಳದಲ್ಲಿ ಅಲ್ಲಮರು ಕಲ್ಯಾಣ ತೊರೆದನಂತರ ಕೆಲಕಾಲ ತಂಗಿದ್ದರು ಎಂದು ಮುಂದೆ ಶ್ರೀಶೈಲಕ್ಕೆ  ಹೋಗುತ್ತಾರೆ ಎಂದುತಿಳಿದು ಬರುತ್ತದೆ. ಅಲ್ಲಮ ಪ್ರಭುಗಳು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ

ಸಾವಿಲ್ಲದ ಶರಣರು ಮಾಲಿಕೆ- “ಕಾಯಕಯೋಗಿನಿ -ಕದಿರ ರೆಮ್ಮವ್ವೆ”, ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಕಾವ್ಯಯಾನ

ನಾಗರಾಜ ಬಿ. ನಾಯ್ಕ “ಮನಸ್ಸಿನ ಸೇತುವೆ”

ಕಾವ್ಯ ಸಂಗಾತಿ ನಾಗರಾಜ ಬಿ. ನಾಯ್ಕ “ಮನಸ್ಸಿನ ಸೇತುವೆ” ನಮ್ಮದೆನ್ನುವ ಪುಟ್ಟಮನಸ್ಸು ಪುಟ್ಟ ದೋಣಿಯಂತೆವಿಹಾರ ಹೊರಡುತ್ತದೆಬದುಕಿನುದ್ದಕ್ಕೂಎಲ್ಲರ ಮನದಿ ಮಲ್ಲಿಗೆಯಾಗಿಬಳ್ಳಿಯಂತೆ ಹಬ್ಬಿನಿಂತಿರುವ ಬದುಕಿಗೆಚಲನೆಯಾಗುತ್ತದೆವಿಶಾಲ ಆಗಸದ ಬಾನಂಚುಮುಟ್ಟುವ ಹಕ್ಕಿಯರೆಕ್ಕೆಯ ಬಡಿತವಾಗಿಮನಸ್ಸು ತುಂಬುತ್ತದೆಗೂಡಂಗಡಿಯ ಮರದಬೆಂಚುಗಳ ಮೇಲೆಕುಳಿತು ಅವಲಕ್ಕಿತಿನ್ನುವಾಗ ಅರಿವಿನ ಮೂಲಕ್ಕೊಂದು ಅಡಿಪಾಯದಚಿತ್ರ ಬರೆಯುತ್ತದೆಹೂವಿನಂದದ ಮಗುವಿನ ನಗುಕವಿತೆಯಾಗಿ ಸಾಲುಗಳಬರೆದು ಬೆಟ್ಟವಾಗುತ್ತದೆಬೆಟ್ಟದ ತುದಿಯಿಂದಹರಿದು ಬಂದ ಝರಿಯೊಂದುಜೀವವಾಗಿ ಊರತುಂಬಾ ಹರಿಯುತ್ತದೆಬೆಳಗು ನಗುವ ಹೂಗಳಕಂಪಿನ ನಡುವೆ ನಿಂತುಗಾಳಿಯಲ್ಲಿ ಸುಳಿದಾಡುತ್ತದೆಮನಸಿನ ಸೇತುವೆ ಮೇಲೆಅನ್ನ ನೀರಿನ ಘನತೆಮನಸು ಮುಟ್ಟುತ್ತದೆಸುಮ್ಮನೇ ಸೈಕಲ್ ಮೇಲೆಕುಳಿತು ಹೋದ ಹಿರಿಯನಹಿಂದೆ ಇರುವ ಭತ್ತದ ಸಸಿಗಳಲ್ಲಿ ಮತ್ತೊಂದುಸೇತುವೆಯ ಮಾತುನೆಲದನಿಯಾಗಿ ಕೇಳುತ್ತದೆಮನಸಿನ ಮನಸಿಗೆಮಾತೇ ಸೇತುವೆಯಾಗಿಮನಸ್ಸು ದಾಟಿಸುತ್ತದೆಮನದ ಖುಷಿಗೆಬಣ್ಣ ತುಂಬಿಮಾಯವಾಗುತ್ತದೆ…….. ನಾಗರಾಜ ಬಿ. ನಾಯ್ಕ

ನಾಗರಾಜ ಬಿ. ನಾಯ್ಕ “ಮನಸ್ಸಿನ ಸೇತುವೆ” Read Post »

ಕಾವ್ಯಯಾನ

ಕಲ್ಪನಾ ಎಸ್‌ ಪಾಟೀಲ “ನಾಚಿದ ಬೆಳದಿಂಗಳು”

ಕಾವ್ಯ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ನಾಚಿದ ಬೆಳದಿಂಗಳು” ಅಸುನೀಗುತಿದ್ದ ಬೆಳದಿಂಗಳಿಗೆನನ್ನವಳ ಕುರಿತಾಗಿ ಹೇಳುತಿದ್ದೆಒಂಚೂರು ನಗದೆ ಇತ್ತು ಕೊಂಚವೂ ಆಸೆ ತೋರದೆನನ್ನನೇ ನಿರ್ಲಕ್ಷ್ಯ ಮಾಡುತಿತ್ತುಇವನೊಬ್ಬ! ಎನ್ನುತಿತ್ತು ನನ್ನದೇ ನನಗೆ ಹೇಳುವುದೆಷ್ಟೋಉಳಿದಿದೆ ಕೇಳಿಸಿಕೊಳ್ಳುವರಿಲ್ಲಕಗ್ಗತ್ತಲೆಯು ಹಂಗಿಸಿ ನಗುತಿದೆ ಬೆಳದಿಂಗಳ ಮನದಮಾತಿಗೆ ಕಿವಿಯಾದರೂ ಚಂದಿರನಬರುವಿಕೆಯತ್ತಲೆ ಅದರೊಲವಿತ್ತು ನಾನು ನನ್ನ ಒಲವಿನ ದಾರಿ ಹಿಡಿದೆಬೆಳದಿಂಗಳು ನೋವ ಮರೆತುನಸುನಗುತಿತ್ತು ನಾಚುತಿತ್ತು. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್‌ ಪಾಟೀಲ “ನಾಚಿದ ಬೆಳದಿಂಗಳು” Read Post »

ಕಾವ್ಯಯಾನ

ಮಧು ವಸ್ತ್ರದ ಮುಂಬಯಿ “ಮಾನವನಾಗು”

ಕಾವ್ಯಸಂಗಾತಿ ಮಧು ವಸ್ತ್ರದ ಮುಂಬಯಿ “ಮಾನವನಾಗು” ಪುಟ್ಟ ಗಲ್ಲಿಯಾಗು, ಚಿಕ್ಕ, ಚೊಕ್ಕ ಹಳ್ಳಿಯಾಗು, ಹೃದಯಹೀನ ನಗರವಾಗದಿರುಎಳೆಯ ಬಿಸಿಲಾಗು, ನಗುವ ಮುಸ್ಸಂಜೆಯಾಗು,ನೆತ್ತಿ ಉರಿಸುವ ಬಿಸಿಲಾಗದಿರುಹರಿವ ನದಿಯಾಗು, ಭೋರ್ಗರೆವ ಅಬ್ಧಿಯಾಗು, ನಿಂತ ನೀರಂತೆ ಜಡ ಆಗದಿರುಸುಗಂಧದ ಧೂಪವಾಗು, ಬೆಳಕಿನ ದೀಪವಾಗು, ಅಜ್ಞಾನದ ಅಂಧಕಾರ ಆಗದಿರುಹೂವನೀವ ಗಿಡವಾಗು, ತಂಪನೀವ ವೃಕ್ಷವಾಗು, ಕಡಿಯುವ ಕೊಡಲಿ ಆಗದಿರುಪಥಿಕನಾಗು, ಮಾರ್ಗದರ್ಶಿಯಾಗು ಗುರಿಯನು ಹೊಂದದ ಅಲೆಮಾರಿ ಆಗದಿರುಕೋಪವಾಗು, ಮೌನವಾಗು ಮಾತಾಗು ಕಠೋರ ಮಾತಿನ ಪರನಿಂದಕ ಆಗದಿರುಶಕ್ತನಾಗು ಭಕ್ತನಾಗು,ಸಾತ್ವಿಕ ಹೃದಯವಂತನಾಗುನಯವಂಚಕ ಆಗದಿರುಶ್ರಮಿಕನಾಗು ಪ್ರಾಮಾಣಿಕನಾಗು, ಮಾನವನಾಗು, ಅಹಂಕಾರಿ ದಾನವನಾಗದಿರು.. ಮಧು ವಸ್ತ್ರದಮುಂಬಯಿ

ಮಧು ವಸ್ತ್ರದ ಮುಂಬಯಿ “ಮಾನವನಾಗು” Read Post »

ಇತರೆ

“ಮುಂದೆ ಅಪರೂಪವಾಗ ಬಹುದಾದ ಸೈಕಲ್”ವಿಶೇಷಲೇಖನ ಎನ್‌ ವಿ ರಮೇಶ್

ಸೈಕಲ್‌ ಸಂಗಾತಿ ಎನ್‌ ವಿ ರಮೇಶ್ “ಮುಂದೆ ಅಪರೂಪವಾಗ ಬಹುದಾದ ಸೈಕಲ್” ಸನಿಹದಲ್ಲೇ ಮುಂದೊಂದು ಕಾಲ ಬರಬಹುದು ಮನೆಯ ಗೋಡೆಯ ಮೇಲಿನ ಚಿತ್ರಗಳಲ್ಲಿ ಮಾತ್ರ ಕಾಣುವ ಸೈಕಲ್ಲನ್ನು ಮುಂದಿನ ತಲೆಮಾರಿನ ಮಗು ಏನೋ ವಿಚಿತ್ರ ವಸ್ತು ಎಂಬಂತೆ ಕಾಣಬಹುದು. ಏಕೆಂದರೆ ಹಿಂದೆ ಎಲ್ಲರೂ ಸಂಚರಿಸುತ್ತಿದ್ದ, ಬರಬರುತ್ತಾ, ಕೆಲವರು ಮಾತ್ರ ಸವಾರಿ ಮಾಡುತ್ತಿದ್ದ ಸೈಕಲ್ ಇಂದು ಕೇವಲ ಬಡವರು, ಶ್ರಮಜೀವಿಗಳು, ಕ್ರೀಡಾಪಟುಗಳು, ಬೊಜ್ಜು ಕರಗಿಸಲು ಹಲವರು ಬಳಸುತ್ತಿರುವ ವಾಹನವಾಗಿದೆ.ನಾನು ನೀವೆಲ್ಲಾ ಚಿಕ್ಕಂದಿನಲ್ಲಿ, ಅಪ್ಪ, ಅಣ್ಣ, ಅವರ ಗೆಳೆಯರು ಸೈಕಲ್ ಓಡಿಸುತ್ತಿದ್ದುದ್ದನ್ನು ಬೆರಗಾಗಿ ಕಂಡು, ನಾನು ಎಂದು ಸೈಕಲ್ ಓಡಿಸುತ್ತೇನೋ ಎಂದು ತುಂಬಾ ಆಸೆ, ಕಾತುರಗಳಿಂದ ಕಾಯುತ್ತಿದ್ದ ಆ ದಿನಗಳು ನಿಮಗೆ ನೆನಪಿದೆಯೇ? ಅಣ್ಣ, ಅಪ್ಪ, ಮಾವ, ಚಿಕ್ಕಪ್ಪ, ಸೈಕಲ್ಲಿನಲ್ಲಿ ಹೊರಟರೆ, ಆಗಾಗ ಮಕ್ಕಳಾದ ನಮ್ಮನ್ನು ಸೈಕಲ್ ಬಾರ್ ಮೇಲೆ (ಮುಂದುಗಡೆ) ಅಥವಾ ಕ್ಯಾರಿಯರ್ (ಸೈಕಲ್ ಹಿಂಭಾಗ) ಕೂರಿಸಿಕೊಂಡು ಹೋಗುವ ಗಳಿಗೆಗಾಗಿ ಅತ್ಯಂತ ಆಸಕ್ತಿ, ಕುತೂಹಲಗಳಿಂದ ಕಣ್ಣು ದೊಡ್ಡದಾಗಿ ತೆಗೆದು ಕಾಯುತ್ತಿದ್ದ ಆ ನಮ್ಮ ನಿಮ್ಮ ಬಾಲ್ಯದ ನೆನಪುಗಳು ಈಗ ಫೋಟೋದಲ್ಲಿ ಮಾತ್ರ ನೋಡ ಸಿಗುವಂತಹ ದೃಶ್ಯವಾಗಿದೆ. ಕಾಲ ಬದಲಾದಂತೆ ಈಗ ಬಹಳ ಸ್ಥಳಗಳಲ್ಲಿ ನಮ್ಮ ಜೀವನದಿಂದ ಮಾಯವಾಗಿದೆ. ಹಿಂದೆ ಇಂದಿನ ಅನೇಕ ವಾಹನಗಳು ರಸ್ತೆಗೆ ಬಂದಿರದ ಕಾಲದಲ್ಲಿ, ಸೈಕಲ್ ಎಲ್ಲ ಜನರ ದಿನನಿತ್ಯದ ಆವಶ್ಯಕತೆಯ ವಸ್ತುವಾಗಿತ್ತು. ಕಾಲ ಬದಲಾದಂತೆ, ಜನರ ಆಸೆ, ಆಸಕ್ತಿ, ಬಯಕೆ, ಬದಲಾದಂತೆ, ಜನರ ಕೈಯಲ್ಲಿ ಹೆಚ್ಚು ಹೆಚ್ಚು ಹಣ ಕುಣಿದಾಡಿದಂತೆ ಸೈಕಲ್‌ಗೆ ಪರ್ಯಾಯವಾದ ಅನೇಕ ವಾಹನಗಳು ಬಂದಿವೆ. ಸುಮಾರು ಎಪ್ಪತ್ತು ವರ್ಷಗಳ ಕೆಳಗೆ ನನಗೆ ಐದು ವರ್ಷವಾಗಿದ್ದಾಗ, ನಾನು ನನ್ನ ತಂದೆಯ ಸೈಕಲ್ಲಿನ ಮುಂಭಾಗದಲ್ಲಿ ಕುಳಿತು ಹೋಗುತ್ತಿದ್ದಾಗ ಬಲಗೈಗೆ ಸಿಗುತ್ತಿದ್ದ ಸೈಕಲ್ ಬೆಲ್ ಅನ್ನು ಟಣ್ ಟಣ್ ಎಂದು ಬಾರಿಸಿದ್ದು ಈಗಲೂ ನನ್ನ ಕಣ್ಣ ಮುಂದೆ ಕಟ್ಟಿದಂತಿದೆ. ಆ ಕಾಲದಲ್ಲಿ ನಡೆದು ಹೋಗುವವರಿಗಿಂತ, ಬಸ್ಸಿನಲ್ಲಿ ಹೋಗುವವರಿಗಿಂತ ಸೈಕಲ್ ಇಟ್ಟಿದ್ದವರೇ ಸಾಹುಕಾರರು. ಎಂದು ನಮ್ಮ ಆ ಕಾಲದ ಭಾವನೆಯಾಗಿತ್ತು. ಕ್ರಮೇಣ ಕಾಲ ಸರಿದಂತೆ ಸೈಕಲ್ ಹಿನ್ನೆಲೆಗೆ ಹೋಗಿ ನಾನಾ ತರಹದ ವಿವಿಧ ಕಂಪನಿಗಳ ಸ್ಕೂಟರ್, ಬೈಕ್, ಕಾರುಗಳು ಬಂದು ಸೈಕಲ್ ಈಗ ಬೊಜ್ಜು ಇಳಿಸಲು ಜನ ಬಳಸುವ ಒಂದು ಸಾಧನವಾಗಿದೆ. ಕ್ರೀಡಾಪಟುಗಳು ಹಾಗೂ ಶಾರೀರಿಕ ವ್ಯಾಯಾಮ ಬೇಕೆಂದವರು ಇನ್ನೊಮ್ಮೆ ಸೈಕಲ್ಲಿನ ಬೆನ್ನು ಹತ್ತಿದ್ದಾರೆ. ಮಕ್ಕಳಿಗೆ ಮೂರು ಚಕ್ರದ ಸೈಕಲ್‌ಗಳು ಹಿಂದೆ ಜನಪ್ರಿಯವಾಗಿದ್ದವು. ಆಗ ಮದುವೆಯಲ್ಲಿ  ಮಾವ ಬಲುಕಷ್ಟಪಟ್ಟು ಅಳಿಯನಿಗೆ ಕೊಡುತ್ತಿದ್ದ ಸೈಕಲ್ ಉಡುಗೊರೆ ಆಗಿನ ಕಾಲದಲ್ಲಿ ಅದೇ ಬೆಲೆಬಾಳುವ ಕಾಣಿಕೆಯಾಗಿತ್ತು. ಈಗ ಒಮ್ಮೆ ಹೇಳಿ ನೋಡಿ – ಹತ್ತು ವರ್ಷ ದಾಟಿದ ಮಗು ಸಹ, ತನಗೆ ಲೈಸೆನ್ಸ್ ಸಿಗದಿದ್ದರೂ ಬೈಕ್ ಓಡಿಸಲು ಮುಂದೆ ನುಗ್ಗುತ್ತಾನೆ ಹೊರತು ಸೈಕಲ್ ಕಂಡರೆ “ತೂ ಇದರಲ್ಲಿ ನಾನು ಹೋಗುವುದಿಲ್ಲ.” ಟಿ.ವಿಯಲ್ಲಿ, ರಸ್ತೆ ಬೋರ್ಡುಗಳಲ್ಲಿ, ಆಕರ್ಷಕ ಬ್ಯಾನರ್‌ಗಳಲ್ಲಿ, ಸಿನಿಮಾ ಟಾಕೀಸಿನ ಜಾಹೀರಾತಿನಲ್ಲಿ ಕಂಡು ಬರುವ ಚಲನಚಿತ್ರ ನಟ-ನಟಿಯರು, ಖ್ಯಾತ ಕ್ರೀಡಾಪಟುಗಳು, ಬೈಕ್-ಕಾರ್ ಓಡಿಸುವ ರೋಲ್ ಮಾಡಲ್‌ಗಳು ಇವರನ್ನು ಕಂಡು ಮರುಳಾಗಿ, ತಾವು ಯಾವಾಗ ಲಕ್ಷ ಲಕ್ಷ ರೂಪಾಯಿ ಕೊಟ್ಟು ಇಂತಹ ಬೈಕ್ ಕೊಂಡು ಸ್ನೇಹಿತ ಅಥವಾ ಸ್ನೇಹಿತೆ, ಪ್ರಿಯತಮ-ಪ್ರಿಯತಮೆಯೊಂದಿಗೆ ಜಿಗಿದು, ಹಾರಿ, ಓವರ್ ಸ್ಪೀಡಿನಲ್ಲಿ ಯರ‍್ಯಾರಿಗೋ, ಯಾವ್ಯಾವುದಕ್ಕೋ, ಡಿಕ್ಕಿ ಹೊಡೆಯುವ ವೇಗದಲ್ಲಿ ಹಾರುತ್ತೇವೆಯೋ ಎಂಬ ಭ್ರಮಾ ಲೋಕದಲ್ಲಿದ್ದಾರೆ. ಜೇಬಿನಲ್ಲಿ ದುಡ್ಡು ಇಲ್ಲದಿದ್ದರೂ. ಓದು, ಕೆಲಸ, ಇಲ್ಲದಿದ್ದರೂ ಬೈಕ್-ಕಾರುಗಳ ಹಗಲು ಕನಸು ಕಾಣುವ ಕನಸುಗಾರರ ಪ್ರಪಂಚ ಇಂದು ಎಲ್ಲೆಡೆ ಇದೆ. ವಿಶ್ವದಲ್ಲಿ ಒಂದೆಡೆ ಹೆಚ್ಚುತ್ತಿರುವ ಜನಸಂಖ್ಯೆಯ ಅಪಾರ ಬೇಡಿಕೆ, ಪೂರೈಸಲಾಗದ ಬೇಡಿಕೆ, ಕಂಡು ಬರುತ್ತಿದೆ. ಅದರಲ್ಲೂ ಈಗ ವಿಶ್ವದಲ್ಲಿ ಹಲವಾರು ತಿಂಗಳುಗಳಿAದ ನಡೆದಿರುವ ಯುದ್ಧ, ವಿವಿಧ ದೇಶಗಳ ಮಧ್ಯದ ಸಂಘರ್ಷ, ನಾ ಹೆಚ್ಚು ನನ್ನ ಮಾತು ಕೇಳು, ಇದೇ ನನ್ನ ಮಾತು ನಡೆಯಬೇಕು, ಕೇಳದಿದ್ದರೇ ಆಕ್ರಮಣ. ಈ ರೀತಿ ಪರಸ್ಪರ ಹೊಂದಾಣಿಕೆ ಇಲ್ಲದೇ, ತಿಂಗಳಾನುಗಟ್ಟಲೆ ನಡೆದ ಯುದ್ಧ, ಪ್ರತಿಕ್ಷಣ ಏನಾಗುವುದೋ ಎಂಬ ಆತಂಕ, ಭಯ ನಮ್ಮನ್ನೆಲ್ಲಾ ಆವರಿಸಿದೆ. ನಮ್ಮ ದೇಶದಲ್ಲಿ ವಿವಿಧ ಮೂಲಗಳಿಂದ ಉತ್ಪಾದನೆಯಾಗುವ ಇಂಧನ ತೈಲಗಳ ಪೂರೈಕೆಯ ಸಾಮರ್ಥ್ಯ, ಈ ದೇಶದಲ್ಲಿ ಲಭ್ಯವಿರುವ ಇಂಧನ ಇವುಗಳು, ಈ ದೇಶದಲ್ಲಿಯ ಮಿತಿಮೀರಿದ ಬೇಡಿಕೆಯ ಇಂಧನ ಪೂರೈಕೆಗೆ ದೊಡ್ಡ ಜನಸಂಖ್ಯೆಯ ದೊಡ್ಡ ಬೇಡಿಕೆ, ಪೂರೈಸಲಾಗದ, ಅತ್ಯಂತ ಕಷ್ಟದಿಂದ ಪೂರೈಸಬೇಕಾದ ಸ್ಥಿತಿಗೆ ಒಂದು ದೊಡ್ಡ ಚಾಲೆಂಜ್ ಅಥವಾ ಆಹ್ವಾನವಾಗಿದೆ. ನಮ್ಮ ದೇಶದ ಪ್ರಧಾನ ಮಂತ್ರಿಗಳು, ತೈಲ ಇಂಧನ ಪೂರೈಸುವ ಕಂಪನಿಗಳು, ಇದಕ್ಕೆ ಸಂಬAಧಿಸಿದ ಕೇಂದ್ರ ಸರ್ಕಾರದ ಇಲಾಖೆಗಳು ಹಗಲೂ ರಾತ್ರಿ ಪ್ರಯತ್ನಿಸಿದರೂ ಸಂಪೂರ್ಣ ಬೇಡಿಕೆ ಬಯಸಿದ ಕ್ಷಣದಲ್ಲಿ ಕೆಲವು ಕಡೆಗಳಲ್ಲಿ ಸಿಗುತ್ತಿಲ್ಲ. ಆಗ ಅನೇಕ ಸಾಮಾನ್ಯ ಜನ ಸರ್ಕಾರವನ್ನು ಟೀಕಿಸುತ್ತಾರೆ. ಆದರೆ ೯೯% ಪ್ರತಿಶತ ೯೯ ಜನ ಪರ್ಯಾಯ ಮಾರ್ಗಗಳನ್ನು ಬಳಸಲು ಮನಸಾರೆ ಪ್ರಯತ್ನ ಮಾಡುತ್ತಿಲ್ಲ. ವ್ಯಕ್ತಿಗಳು ತಮ್ಮ ಕುಟುಂಬದಲ್ಲೀಯ ಹಣಕಾಸು ಸೇರಿದಂತೆ ವಿವಿಧ ವಸ್ತುಗಳ ಕೊರತೆಯಾದಾಗ ಬಹಳಷ್ಟು ಬಾರಿ ಇದ್ದುದ್ದಕ್ಕೇ, ಇದ್ದಷ್ಟಕ್ಕೇ ಸುಲಭವಾಗಿ ಹೊಂದಿಕೊಳ್ಳುತ್ತಾರೆ. ಆದರೆ ದೇಶದಲ್ಲಿ ಇಂಧನ ಸಮಸ್ಯೆಯಾದಾಗ ಅದಕ್ಕೆ ತಕ್ಷಣ ಹೊಂದಿಕೊಳ್ಳಲು ನಿರಾಕರಿಸುತ್ತಾರೆ. ಬಹುಶಃ ಅದಕ್ಕೇ ಏನೋ, ಪ್ರಕೃತಿ ಮೌನವಾಗಿ ಗಹಗಹಿಸಿ ನಗುತ್ತಾ “ ನನ್ನ ಮಕ್ಕಳೇ, ನೀವು ಹೀಗೆಯೇ ಜೀವನ ಕೇವಲ ಮೋಜು ಮಸ್ತಿ ಎಂದು ತಿಳಿದುಕೊಂಡು ಭೂಮಿಯ ಮೇಲೆ ಭೂಮಿಯ ಅಂತರಾಳದಲ್ಲಿ ಇರುವ ಎಲ್ಲಾ ಸಂಪನ್ಮೂಲಗಳನ್ನೂ ದೆವ್ವ ಕಬಳಿಸುವಂತೆ ರಾಕ್ಷಸವೇಗದಲ್ಲಿ ಕಬಳಿಸುತ್ತಾ ಬರುತ್ತಿದ್ದೀರಲ್ಲವೇ? ನಾನು ನಿಮ್ಮ ವೇಗವನ್ನು ತಡೆಯ ಬಯಸಿದರೇ, ನಿಮ್ಮ ಮಧ್ಯೆ ಇರುವ ಅನುಭವಿ ಹಿರಿಯರು, ದೇಶ ಕಟ್ಟುವವರು, ಹೇಳುವ ಕಿವಿ ಮಾತನ್ನು ಅಲಕ್ಷಿಸಿಸುತ್ತಿದ್ದೀರಿ. ಹೀಗಾಗಿ ನಿಮಗೆ ಒಳ್ಳೆಯ ಮಾತಿನಿಂದ, ಮೃದುವಾಗಿ, ಸೂಕ್ಷö್ಮವಾಗಿ, ಎಷ್ಟು ಬಾರಿ ಹೇಳಿದರೂ ಕಿಂಚಿತ್ತೂ ಕಿವಿಗೆ ಹಾಕಿಕೊಳ್ಳದ ನಿಮ್ಮನ್ನು ಎಚ್ಚರಿಸಲು ಪ್ರಯತ್ನಿಸುತ್ತಿದ್ದೇನೆ. ನನ್ನ ಎಚ್ಚರಿಕೆಯ ಮಾತುಗಳ ಗಂಟೆ ನಿಮಗೆ ಕೇಳಿಸುತ್ತಿಲ್ಲ. ಎಚ್ಚರ…” ಬಹುಶಃ ಭೂದೇವಿ ಹೀಗೆ ಕಿವಿ ಕೇಳಿಸುವವರಿಗೆ ಮಾತ್ರ ಹೇಳುತ್ತಿರಬಹುದು. ನನ್ನಂತವರಿಗೆ ಮಾತ್ರ ಈ ಕರೆ ಕೇಳಿಸಿದೆ.ಪ್ರಿಯ ಯುವಜನರೇ, ನನ್ನ ಮಾತುಗಳನ್ನು ದಯವಿಟ್ಟು ಕೇಳಿ “ಭೂಗರ್ಭದೊಳಗಿಂದ ಅಗೆದು ತೆಗೆದ, ಹೂತು ಹೋಗಿದ್ದ, ಪಳೆಯುಳಿಕೆ ಇಂಧನವಾದ ಪೆಟ್ರೋಲ್, ಡೀಸಲ್, ಮುಂತಾದ ಕಚ್ಛಾತೈಲ ಹಂತ ಹಂತವಾಗಿ ಕರಗುತ್ತಾ ಬರುತ್ತಿದೆ. ಎಂಬ ಲಕ್ಷಣಗಳನ್ನು ನಿಮ್ಮ ಕಣ್ಣಿಗೆ ಕಾಣುವಂತೆ ವಿವಿಧ ರೀತಿ ಭೂದೇವಿ ನಮಗೆ ತೋರಿಸುತ್ತಿದ್ದಾಳೆ.”ಇದಕ್ಕೆ ಪರ್ಯಾಯವಾಗಿ ಜಲಜನಕ ಆಧರಿಸಿದ ಇಂಧನ ಸಮೃದ್ಧವಾಗಿ ಉತ್ಪಾದಿಸಲು ಪ್ರಯತ್ನ ನಡೆಸಿರುವ ಕೆಲವು ವಿಜ್ಞಾನಿಗಳ ಸಂಶೋಧನೆಗಳನ್ನು ನಾನು ಗಮನಿಸಿದ್ದೇನೆ. ಆದರೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಜನಸಂಖ್ಯೆ, ಮತ್ತು ಕರಗಲಾರದ ಪರ್ವತದಂತೆ ಹಬ್ಬುತ್ತಿರುವ ಮಾನವರ ಆಸೆಯನ್ನು ಗಮನಿಸಿದಾಗ ಇಂತಹ ಪ್ರಯತ್ನಗಳು ಎಷ್ಟೇ ನಡೆದರೂ ಬಳಕೆದಾರ ಮಾನವರ ಬೇಡಿಕೆ ಕಡಿಮೆಯಾಗುತ್ತಿಲ್ಲ. ಇಂಧನದ ಬೆಲೆ ಎಷ್ಟೇ ಹೆಚ್ಚಾಗಲೀ, ನಾವು ಕೊಂಡೇ ಕೊಳ್ಳುತ್ತೇವೆ ಎಂಬ ಹಠ, ಚೆನ್ನಾಗಿ ಸಂಪಾದಿಸುವ ಯುವಜನರದು. ಮಕ್ಕಳು ಕಣ್ಣು ಬಿಟ್ಟ ತಕ್ಷಣ ಅವರ ತಂದೆ-ತಾಯಿ ಈ ವಾಹನಗಳ ಮೇಲೆ ಕೂರಿಸಿಕೊಂಡು ಹೋಗುವುದರಿಂದ, ನೋಡ ನೋಡುತ್ತಾ ಬೆಳೆದ ಈ ಮಕ್ಕಳು ಯುವ ಜನರಾದ ತಕ್ಷಣ ತಂದೆ-ತಾಯಿಯರನ್ನೂ ಬೈಕ್‌ಗಾಗಿ ಪೀಡಿಸುತ್ತಾರೆ. ನಮ್ಮ ಮನೆ ಬಳಿ ಒಬ್ಬ ಹಿರಿಯರ ಹದಿಹರೆಯದ ಮೊಮ್ಮಗ, ಮೂರನೇ ಅಂತಸ್ತಿನಿAದ ಕೂಗುತ್ತಿದ್ದ. ದೃಶ್ಯ ನನ್ನ ಕಿವಿಗೆ ಕೇಳಿಸಿತು, ನಂತರ ನನ್ನ ಕಣ್ಣಿಗೆ ಕಾಣಿಸಿತು. ಅವನು ಜೋರಾಗಿ ಕೂಗುತ್ತಿದ್ದ “ತಾತ, ನೀನು ನನಗೆ ತಕ್ಷಣ… ಬ್ರಾö್ಯಂಡಿನ ಬೈಕ್ ತೆಗೆದುಕೊಡದಿದ್ದರೆ ನಾನು ಮೇಲಿಂದ ಹಾರಿ ಕೆಳಗೆ ಬೀಳುತ್ತೇನೆ, ಪ್ರಾಣ ಕಳೆದುಕೊಳ್ತೀನಿ ಗಾಡಿ ಇಲ್ಲದಿದ್ದರೆ, ನಾನು ಬದುಕಲಾರೆ”ಸದ್ಯದಲ್ಲಿ ವಿಶ್ವದಲ್ಲಿರುವ ಮುಂದೇನು? ಎಂಬ ಒತ್ತಡದ, ಹೆದರಿಕೆಯ ವಾತಾವರಣದಲ್ಲಿ ನಾನು ಯೋಚಿಸುತ್ತಾ ಕುಳಿತ್ತಿದ್ದಾಗ, ಒಬ್ಬ ವೃದ್ಧರು ಸೈಕಲ್ ಹೊಡೆಯುತ್ತಾ ಬಂದು ನನ್ನ ಬಳಿ ನಿಂತು ಕೇಳಿದರು. “ ನನ್ನ ಹಾಗೆ ನಿನಗೂ ಸೈಕಲ್ ಹೊಡೆಯೋಕೆ ಬರುತ್ತಾ!?” ನಾನು ನಗುತ್ತಾ ಅಂದೆ, “ಅಜ್ಜಾ, ನಾನೂ ನಿನ್ನಂತೆಯೇ ಸೈಕಲ್ ಹೊಡೆಯುತ್ತೇನೆ, ನಡೆದು ಹೋಗುತ್ತೇನೆ,” ಆ ವೃದ್ಧರು ನಗುತ್ತಾ ಆಶ್ಚರ್ಯದಿಂದ ಕೇಳಿದರು “ಯಾಕೆ ನಿನಗೆ ಬೈಕ್ ಕಾರು ಚಾಲನೆ ಮಾಡಲು ಬರುವುದಿಲ್ಲವೇ” ನಾನು ಉತ್ತರಿಸಿದೆ. “ಬರುತ್ತಿತ್ತು ಹಿಂದೆ. ನನ್ನ ಯೌವ್ವನದ ಕಾಲದಲ್ಲಿ ನಾನೂ ಮೋಪೆಡ್ ಕಲಿತು ೨೬ ವರ್ಷ ಓಡಿಸಿದ್ದೇನೆ. ಆದರೆ ವಯಸ್ಸಾಗುತ್ತಿದ್ದಂತೆ, ರಸ್ತೆಯಲ್ಲಿಯ ಜನರ ಹಾಗೂ ವಾಹನ ದಟ್ಟಣೆ, ಆಗಾಗ ಸಂಭವಿಸುವ ರಸ್ತೆ ಅಪಘಾತಗಳನ್ನು ಕಂಡು ವಾಹನ ಪ್ರಯಾಣವನ್ನು ೨೦೧೧ರ ಡಿಸೆಂಬರ್ ಒಂದರಿAದ ನಿಲ್ಲಿಸಿದ್ದೇನೆ. ಹೀಗಾಗಿ ಸೈಕಲ್ ಓಡಿಸುತ್ತೇನೆ. ಅದಕ್ಕಿಂತ ಹೆಚ್ಚಾಗಿ ವಾಕಿಂಗ್ ಹೋಗುತ್ತೇನೆ.” ಎನ್.ವ್ಹಿ.ರಮೇಶ್. ನಿವೃತ್ತ ಕಾರ್ಯಕ್ರಮ ಅಧಿಕಾರಿಗಳುಆಕಾಶವಾಣಿಮೈಸೂರುಮೊ:೯೮೪೫೫೬೫೨೩೮

“ಮುಂದೆ ಅಪರೂಪವಾಗ ಬಹುದಾದ ಸೈಕಲ್”ವಿಶೇಷಲೇಖನ ಎನ್‌ ವಿ ರಮೇಶ್ Read Post »

ಕಾವ್ಯಯಾನ

“ಬೈಸಿಕಲ್ಲು” ವಿಶ್ವ ಸೈಕಲ್ ದಿನಕ್ಕೊಂದು ಕವಿತೆ ಸುಜಾತಾ ರವೀಶ್ ಮೈಸೂರು

ಕಾವ್ಯ ಸಂಗಾತಿ “ಬೈಸಿಕಲ್ಲು” ವಿಶ್ವ ಸೈಕಲ್ ಸುಜಾತಾ ರವೀಶ್ ಮೈಸೂರು ಹಿಂದೊಂದು ಕಾಲದ ಪ್ರತಿಷ್ಠೆಯ ಲಾಂಛನಇಂದು ಹೆಸರೇ ಇದರದು ಬಡವರ ವಾಹನಗಾಲಿಯ ಆವಿಷ್ಕಾರದೊಂದಿಗೆ ಇದರ ಉಗಮಸೈಕಲೇರಿದರೆ ಎಷ್ಟು ಮಜಾ! ಆಹಾ ಆರಾಮ! ಬೇಡದು ಹೆಚ್ಚಿನ ಖರ್ಚಿನ ಇಂಧನಕೇಳದು ದುಬಾರಿ ಸರ್ವೀಸು ಉಸ್ತುವಾರಿಗಳತುಳಿದು ತುಳಿದು ರಟ್ಟೆ ಕಾಲುಗಳಿಗೆ ಬಲಹತ್ತಿರ ಸುಳಿಯದು ಬೊಜ್ಜು ರೋಗ ರುಜಿನ ಇಲ್ಲ ಸೈಕಲ್ ಸವಾರಿ ಮಾಡಲು ಬಯಸದ ಮನಸುಕೆಲವರಿಗಂತೂ ಉಳಿದೇ ಬಿಟ್ಟಿದೆ ಇದಾಗಿ ಕನಸುಅಗೆಯುತ್ತಾ ಹೋದರೆ ಬಾಲ್ಯದ ನೆನಪುಗಳ ಗಣಿಸಿಗುವುದು ಎಲ್ಲರಿಗೂ ಸೈಕಲ್ ಕಲಿಕೆಯ ಮೆಲುಕ ಮಣಿ ಆಗುತ್ತಾ ಹೋದಂತೆ ಮನುಜರು ಸೋಮಾರಿವಿರಳವಾಯಿತು ಸೈಕಲ್ ಉಪಯೋಗ ಸವಾರಿವ್ಯಾಯಾಮ ಆರೋಗ್ಯ ನೀಡುತ್ತಿದ್ದ ಆ ಉಪಕಾರಿಈಗ ತುಕ್ಕು ಹಿಡಿದ ಕಂಬಿಗಳ ಆಸ್ತಿಪಂಜರ ಬರೀ. ಸಮಯದ ಪರಿವರ್ತನೆಯ ನಿಯಮಗಳಸಾರುವಂತಿದೆ ನಶ್ವರ ಜೀವನದ ತತ್ವಗಳಹೇಳುತ್ತಲಿದೆ ಏಳು ಬೀಳುಗಳ ಪಾಠಗಳವಿಪರ್ಯಾಸಗಳ ವೈಚಿತ್ರ್ಯ ವೈರುಧ್ಯಗಳ ಕಥೆಗಳ ಹೆಚ್ಚುತ್ತಿರುವ ಪರಿಸರ ಮಾಲಿನ್ಯಕ್ಕೆ ಇದು ವರಕಾಣದ ಕೇಳದ ರೋಗಗಳಿಗೆ ಕೊಡುವ ಉತ್ತರಬನ್ನಿ ಎಲ್ಲಾ ಉಪಯೋಗಿಸೋಣ ಸೈಕಲ್ಲುಕಡಿಮೆ ಮಾಡೋಣ ಪೆಟ್ರೋಲು ಡಾಕ್ಟರ ಬಿಲ್ಲು ಸುಜಾತಾ ರವೀಶ್ ಮೈಸೂರು

“ಬೈಸಿಕಲ್ಲು” ವಿಶ್ವ ಸೈಕಲ್ ದಿನಕ್ಕೊಂದು ಕವಿತೆ ಸುಜಾತಾ ರವೀಶ್ ಮೈಸೂರು Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ಎದೆ ಹಾಲು”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಎದೆ ಹಾಲು” ನವಮಾಸ ಕತ್ತಲೊಳಗೆರಕ್ತ ದೀಪ ಹೊತ್ತಿತು,ಕರುಳು ಬಳ್ಳಿಯ ಸೇತುವೆಯಲಿಜೀವ ಹನಿ ತೇಲಿತು. ಪ್ರಸವ ನೋವಿನ ಅಲೆಗಳಲಿಸಾವಿನ ಬಾಗಿಲ ತಟ್ಟಿತು,ಮೊದಲ ಅಳುವ ನಾದದೊಡನೆಮಮತೆ ಹೊಳೆ ಹರಿಯಿತು. ಎದೆ ಹಾಲಿನ ಬಿಳಿಹರಿವುಕರಗಿದ ರಕ್ತ ಜ್ಯೋತಿ,ಮಗುವ ತುಟಿ ನಗುವಿನಲಿಮತ್ತೆ ಮೊಳೆದ ಜೀವಶಕ್ತಿ. ಕನ್ನಡಿ ಮಿಂಚಿನ ಮೋಹದಲಿಮಡಿಲ ಜೋಗುಳ ಮಂಕಾಯಿತು,ಮೊಬೈಲಿನ ನೀಲಿ ಕಣ್ಣಲಿಬಾಲ್ಯ ಮೌನವಾಗಿ ಕರಗಿತು. ಕರುಳು ಬಳ್ಳಿಯ ನoಟ್ಟಿoದುಕಸಬುಟ್ಟಿ ದಾರಿ ಹಿಡಿಯಿತು,ಕಣ್ಣೀರ ಹನಿಯ ಆಳದಲಿಮಮತೆ ದೀಪ ಉಳಿಯಿತು. ತಾಯಿಯೆಂದರೆ  ಚಂದ್ರನಲ್ಲ,ಸುಟ್ಟು ಕರಕಾದ ದೀಪ,ಕರಗಿದ ಉಸಿರ ಬೂದಿಯಲಿಬಾಲ್ಯ ದಾರಿಯ ರೂಪ. ಡಾ. ಹೆಚ್. ನಟರಾಜ್ ಆರ್ಯ.

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ಎದೆ ಹಾಲು” Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಇಳಿದುಬಿಡು”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಇಳಿದುಬಿಡು“ ಇಳಿದು ಬಿಡು ಮಳೆ  ಬೇಗನೆ, ಸುಡುವ ಧರೆಗೆ ತಂಪು ನೀಡು.ಕಾದು ಕುಳಿತಿವೆ  ಜೀವ ಜಾಲ,ಕಾಯುತ್ತಿವೆ ಸಿಹಿ ಹನಿಗಳ ಮುತ್ತು ರತ್ನ . ಬತ್ತಿದ ಕೆರೆ ತೊರೆಗಳ ತುಂಬಿಸು,ನಗೆ ಅರಳಲಿ ಗಿಡ.ಮರ ಬಳ್ಳಿಗಳಲಿ ಒರೆಸು  ಕಣ್ಣೀರು ಸರಿಸಿ ಸಾಲದ ಮೂಟೆ,ಹಸಿರ ಹಂದರವ ಎಲ್ಲೆಡೆ ಕಟ್ಟಿ. ಚಲಿಸುವ ಕಾರ್ಮೋಡಗಳು ಒಂದಾಗಿ ಬನ್ನಿ,ತೆಪ್ಪನೆ ಮಳೆ  ಸುರಿದು ಜಗವ ನಲಿಸಿ.ಮಣ್ಣು ಹುಡಿ ಭಂಡಾರ ತೂರಿ  , ಜನ್ಮ ಆಸೆಯ ಮತ್ತೆ ಚಿಗುರಿಸಿ. ನಿನ್ನ ತಂಪ ಆ ಸಿಹಿ ಸಿಂಚನ,ಸೃಷ್ಟಿಯ ಒಡಲಿಗೆ ಜೀವ ಗಾನ!ಸದ್ದಿಲ್ಲದೆ  ಹೊರಟು ಬಿಡುನಿನ್ನ ದಾರಿ  ಬದುಕು ಪಾವನ ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಇಳಿದುಬಿಡು” Read Post »

ಅನುವಾದ, ಕಥಾಗುಚ್ಛ

ತೆಲುಗು ಕಥೆ “ಶೋಭನ್‌ ಬಾಬು-ಗಣೇಶ್‌ ಬೀಡಿ” ತೆಲುಗುಮೂಲ ಜಿ.ಉಮಾಮಹೇಶ್ವರ್‌ , ಕನ್ನಡಕ್ಕೆ ರಂಗನಾಥ ರಾಮಚಂದ್ರ ರಾವು

ಅನುವಾದ ಸಂಗಾತಿ ಶೋಭನ್‌ ಬಾಬು-ಗಣೇಶ್‌ ಬೀಡಿ ತೆಲುಗುಮೂಲ ಜಿ.ಉಮಾಮಹೇಶ್ವರ್‌ಕನ್ನಡಕ್ಕೆ ರಂಗನಾಥ ರಾಮಚಂದ್ರ ರಾವು ಶ್ರೀಶೈಲದಂತಹ ಆಧ್ಯಾತ್ಮಿಕ ಕ್ಷೇತ್ರದ ಅಂಚಿನಲ್ಲಿ ಇರುವುದರಿಂದಲೋ ಅಥವಾ ಮಧ್ಯಮ ವರ್ಗದ ನೌಕರರ  ಕುಟುಂಬಗಳು ಅಧಿಕವಾಗಿ ಇರುವುದರಿಂದಲೋ ಮತ್ತು ಸುನ್ನಿಪೆಂಟದಲ್ಲಿ  ಭಕ್ತಿ ಕಾರ್ಯಕ್ರಮಗಳು, ಮತ್ತು ಹಬ್ಬಗಳ ಸಂಭ್ರಗಳು ಚೆನ್ನಾಗಿ ಇರುತ್ತಿದ್ದವು. ವಿನಾಯಕಚವಿತಿಗೆ, ರಾಮನವಮಿಗೆ ಚಪ್ಪರಗಳನ್ನು ಹಾಕುವವರು. ಒಂಬತ್ತು ದಿನಗಳ ಹಬ್ಬದ ಗಡಿಬಿಡಿಯಲ್ಲಿ ನಾಟಕಗಳು, ಹರಿಕಥೆಗಳು, ಬುರ್ರಕಥೆಗಳು ಅದರಲ್ಲಿ ಭಾಗವಾಗಿದ್ದವು. ಚಿಕ್ಕಮಕ್ಕಳಿಗೆ ಹಾಡುಗಳು, ಏಕಪಾತ್ರಾಭಿನಯಗಳು, ನೃತ್ಯಸ್ಪರ್ಧೆಗಳಲ್ಲಿ ಬಹುಮಾನಗಳು ವಿತರಿಸುವವರು. ಶಿವರಾತ್ರಿಗೆ ಸಿನಿಮಾ ಹಾಲುಗಳಲ್ಲಿ ತ್ರೀ ಶೋಸ್ ಹಾಕುವವರು. ಧನುರ್ಮಾಸದಲ್ಲಿ ನಗರ ಸಂಕೀರ್ತನೆಗಳು ಚಳಿಯನ್ನು ಜಯಿಸುತ್ತವೆ. ಸಂಕ್ರಾಂತಿಗೆ ಅಘೋಷಿತ ರಂಗೋಳಿ ಸ್ಪರ್ಧೆಗಳು ನಡೆಯುತ್ತಿದ್ದವು. ಯಾರ ರಥ ಎಷ್ಟು ದೂರ ಸಾಗಿತೋ ಎಂದು ಅಳೆಯುತ್ತಿದ್ದರು. ದೊಡ್ಡ ದೊಡ್ಡ ರಂಗೋಳಿಗಳಿಗೆ ವಿಶೇಷ ಪ್ರಶಂಸೆಗಳು ದೊರೆಯುತ್ತಿದ್ದವು. ಅಕ್ಕಾತಂಗಿಯರು,ತಾಯಿ-ಆತ್ತೆಗಳು ರಂಗೊಳಿಗಳು ಹಾಕುತ್ತಿದ್ದಾರೆ  ಅಣ್ಣ-ತಮ್ಮಂದಿರು, ತುಂಟ ಮಕ್ಕಳು ಸ್ವಂತ ರಂಗೊಳಿಗಳಿಗೆ ಕಾಪಾಲಾ ಕಾಯುತ್ತಾ, ಹೊರಗಿನ ರಂಗೊಳಿಗಳನ್ನು ವಿಶ್ಲೇಷಿಸುತ್ತಾ ತಿರುಗಾಡುತ್ತಿದ್ದರು. ಸುನ್ನಿಪೆಂಟಗೆ ಸಂಬಂಧಿಸಿದವರೆಗೂ ಸತ್ಯನಾರಾಯಣಸ್ವಾಮಿ ದೇವಸ್ಥಾನ, ರಾಮಮಂದಿರಗಳು ಭಕ್ತಿ ಮತ್ತು ಆಧ್ಯಾತ್ಮಿಕ ಕೇಂದ್ರಗಳಾಗಿವೆ.ಶ್ರೀಶೈಲದಲ್ಲಿ ಸಹಜ ಸಿದ್ಧವಾಗಿ ಕೆಲವುರು ಸಾಧುಗಳು, ಸನ್ಯಾಸಿಗಳು ಯಾವಾಗಲೂ ಕಂಡು ಬರುತ್ತಿರುತ್ತಾರೆ. ಇವರಲ್ಲದೆ, ಹೊರ ಪ್ರದೇಶಗಳಿಂದಲೂ ಕೆಲವರು ಬಂದು ಇಲ್ಲಿ ಯಾವುದೋ ಸತ್ರದಲ್ಲಿ ಊಟ ಮಾಡುತ್ತಾ, ಕಾಲ ಕಳೆಯುತ್ತಾ   ಬದುಕುವವರು ಅನೇಕರು ಇರುವವರು. ಮುಮುಕ್ಷುವುರಾದ ಸಾಧುಗಳು ಯಾರೋ, ಭಿಕ್ಷುಕುರಾದ ಸನ್ಯಾಸಿಗಳು ಯಾರೋ ಕಂಡುಹಿಡಿಯುವುದು ತುಂಬಾಕಷ್ಟ. ಉಡುಗೆ ತೊಡುಗೆಗಳಿಂದ, ಹಾವಭಾವಗಳಿಂದ, ಮಾತಿನ ಪದ್ಧತಿ ಸುಮಾರಾಗಿ ಒಂದೇ ವಿಧವಾಗಿ ಇರುತ್ತದೆ.ಒಮ್ಮೆ ಪೂರ್ಣಾನಂದ ಸ್ವಾಮಿ ಎಂಬ ಸ್ವಾಮಿಗಳು ತಮ್ಮ ಪತ್ನಿಸಮೇತ ಶ್ರೀಶೈಲಕ್ಕೆ ಬಂದರು.  ಅಯ್ಯಪ್ಪಸ್ವಾಮಿಯ ದೇವಸ್ಥಾನದಲ್ಲಿ ಕೆಲವು ದಿನಗಳು, ಮತ್ತು ಸತ್ಯನಾರಾಯಣ ಸ್ವಾಮಿಯ ದೇವಸ್ಥಾನದಲ್ಲಿ ಕೆಲವು ದಿನಗಳು ಪ್ರವಚನಗಳನ್ನು ಹೇಳುತ್ತಾ ಸುಮಾರು ಮೂರುತಿಂಗಳ ಕಾಲವು ಅವರು ಸುನ್ನಿಪೆಂಟದಲ್ಲಿ ಕಳೆದರು. ಹಾಗಾಗಿ ಪೂರ್ಣಾನಂದಸ್ವಾಮಿಗಳು ಶ್ರೀಶೈಲದಲ್ಲಿದ್ದ ಮೂರುತಿಂಗಳಲ್ಲಿ ಒಂದುತಿಂಗಳು ನಮ್ಮ ಮನೆಯಲ್ಲಿಯೇ ಇದ್ದರು. ಪೂರ್ಣಾನಂದಸ್ವಾಮಿಗಳು, ತಾವು ವೇದಾಂತಂ ಲಕ್ಷ್ಮಯ್ಯನವರ ಶಿಷ್ಯರೆಂದು, ಅವರ ಊರು ಕಡಪಜಿಲ್ಲೆಯ ಮಾಮಿಡಾಲಪಲ್ಲೆ ಎಂದೋ, ಇನ್ನೂ ಯವುದೋ ಊರು ಎಂದು ಹೇಳಿದ್ದು ನೆನಪಿದೆ. ಪ್ರತಿದಿನ, ಸಾಯಂಕಾಲ ಆರರಿಂದ ಏಳರ ವರೆಗೆ ಅವರು  ಉಪದೇಶ ಮಾಡುತ್ತಿದ್ದರು. ಆಗ ಹೆಂಗಸರೆಲ್ಲ ಆ ಸಮಯಕ್ಕೆ  ಸೇರಿ ಸ್ವಲ್ಪ ಹೊತ್ತು ಕಾಲಕ್ಷೇಪ ಮಾಡುತ್ತಿದ್ದರು. ಭಾನುವಾರಗಳಲ್ಲಿ ಮಾತ್ರ ಮಧ್ಯಾಹ್ನ ಮೂರರಿಂದ ನಾಲ್ಕರವರೆಗೂ ಹೇಳುತ್ತಿದ್ದರು.ಒಂದುದಿನ ಯಾವುದೋ ಕೆಲಸಕ್ಕೆ ನನ್ನ ತಾಯಿಯನ್ನು ಕರೆದುಕೊಂಡು ಬರಬೇಕೆಂದು ಅಪ್ಪ ಹೇಳಿದರೇ ನಾನು ದೇವಸ್ಥಾನಕ್ಕೆ ಹೋಗಿದ್ದೆ. ಇನ್ನೊಂದು ಐದು ನಿಮಿಷಗಳಲ್ಲಿ ಮುಗಿಯುತ್ತದೆ. ಕೂತ್ಕೋ ಅಂದರೆ, ನಾನೂ ಕೂತ್ಕೊಂಡು ಕೇಳುತ್ತಿದ್ದೇನೆ. ಅವರು ಶ್ಯಾಸೆದ ಬಗ್ಗೆ, ಶ್ಯಾಸೆ ಮೇಲಿನ ಧ್ಯಾಸದ ಬಗ್ಗೆ, ಮೌನವಾಗಿ ಮಾಡುವ ಧ್ಯಾನದ ಬಗ್ಗೆ ಹೇಳುತ್ತಾ  ಅಧ್ಯಾತ್ಮಿಕ ಸಂಬಂಧವಾದ ಮಾತುಗಳೇನೊ ಹೇಳಿತ್ತಿದ್ದರು.ನಾನು ಏನೋ  ಯೋಚಿಸುತ್ತಾ ಕೂತಿದ್ದಾರೆ ನಾಗಮಣಿ ಅತ್ತೆ ನನ್ನನ್ನು ಹತ್ತಿರಕ್ಕೆ ಕರೆದು –“ಈ ಸ್ವಾಮಿ ಇಷ್ಟೊಂದು ಮಾತುಗಳು ಹೇಳ್ತಾನೆ, ಆದರೆ, ಇವರಿಗೆ ಸಿನಿಮಾ ಹುಚ್ಚು ಹೋಗಿಲ್ಲ” ಎಂದಳು.ವಾಸ್ತವಕ್ಕೆ ಈ ಚರ್ಚೆಯಲ್ಲಿ ಚಲನ ಚಿತ್ರಗಳ ಪ್ರಸ್ತಾವನೆ ಏಕೆ ಬಂದವೋ ನನಗೆ ಅರ್ಥವಾಗಿಲ್ಲ. ಆ ಅತ್ತೆ ಸಿನಿಮಾಗಳು ಚೆನ್ನಾಗಿ ನೋಡುತ್ತಾಳೆ. ಚೆನ್ನಾಗಿ ಫಾಲೋ ಆಗುತ್ತಾಳೆ  ಕೂಡಾ. ಇವರಿಗೆ ಸಿನಿಮಾಹುಚ್ಚು ಎಂದು ಹೇಗೆ ನಿರ್ಧರಿಸಿದ್ದಾಳೋ  ತಿಳಿಯದೆ ನಾನು ತಲೆ ಕೆಡಿಸಿಕೊಂಡಾಗ, ಅವರೇ ನನ್ನನ್ನು ಮತ್ತಿಷ್ಟೂ ಹತ್ತಿರಕ್ಕೆ ಕರೆದು-“ಬೇಕಿದ್ದರೆ ಕೇಳು, ಅವರು ಮಾತು ಮಾತಿಗೆ ಶೋಭನ್ ಬಾಬು, ಶೋಭನ್ ಬಾಬು ಎನ್ನುತ್ತಿದ್ದಾನೆ”ನಾನು ಸ್ವಲ್ಪ ಕಿವಿಕೊಟ್ಟು ಶ್ರದ್ಧೆ ಯಿಂದ ಕೇಳಿದಾಗ, ಹಾಗೆ ಅನಿಸಿತು, ಆದರೆ ಅದಲ್ಲ ಅಂತಲೂ ಅನಿಸಿತು. ನನಗೆ ತೆಲುಗು ಭಾಷೆಯೆಂದರೆ ಒಲವು, ಮನೆಯಲ್ಲಿದ್ದ ಪುಸ್ತಕಗಳನ್ನು(ಪೂರ್ಣಾನಂದಸ್ವಾಮಿ ಅವರವು ಕೂಡಾ) ನೋಡಿದ್ದೇನೆ. ಅದರಿಂದ ಮತ್ತಿಷ್ಟೂ ಶ್ರದ್ಧೆಯಿಂದ ಕೇಳಿದರೆ  ಆಗ  ಸ್ಫುರಿಸಿತು ಆ ಪದವು, ಅದರ ಅರ್ಥ್!ಆ ಅತ್ತೆ ಮತ್ತೆ ಕರೆದು  “ಗಮನಿಸಿದ್ದೀಯಾ?” ಎಂದು ಕೇಳಿದಳು.ಆಗ ನಾನು ಅವಳಿಗೆ ಹೇಳಿದೆ –“ಅತ್ತೆ, ಅದು ನೀವು ಅಂದುಕೊಂಡಂತೆ ಶೋಭಾನ್ ಬಾಬು ಅಲ್ಲ – ಸೋಹಂ ಭಾವ – ಅಂದರೆ ನಾನೇ ದೇವರು ಎಂಬ ಭಾವನೆ ” ಎಂದು ಹೇಳಿದರೆ  ಅವಳ ಮುಖ ಸಂಪೂರ್ಣವಾಗಿ ಕಳೆಗುಂದಿತ್ತು. ನಂಬಿದಂತೆ ಕಾಣಿಸಲಿಲ್ಲ. ಮನೆಗೆ ಬಂದಮೇಲೆ ನನ್ನ ಅಕ್ಕಗೆ ಹೇಳಿದೆ. ಈಗಲೂ  ಆ ವಿಷಯವನ್ನು ನೆನೆದರೆ  ತಡೆಯಲಾರದಷ್ಟು ನಗು ಬರುತ್ತದೆ.ಇನ್ನೊಂದು ಸಲ ಸನ್ಯಾಸಿಯೊಬ್ಬರು ಮಹದೇವಪ್ಪನವರನ್ನು ಭೇಟಿಮಾಡಿ  ತಾನು ಬಂದು ವ್ರತವನ್ನು ಸಂಕಲ್ಪಿಸಿದ್ದೇ ನೆಂದು ಅದು ಮುಗಿಯುವ ತನಕ ಅವರ ಸಹಾಯ ಬೇಕೆಂದು ಕೇಳಿದ. ಬೋಳ ಶಂಕರನಂತಹ  ಮಹದೇವಪ್ಪ ಮಾಮಾ ಆ ವ್ರತವು ಏನು, ಅದು ಮುಗಿಸಲು ಎಷ್ಟು ದಿನಗಳು ಬೇಕಾಗುತ್ತವೋ  ಅದಕ್ಕೆ  ಏನೇನು ಬೇಕಾಗುತ್ತವೋ ಏನೂ  ಕೇಳದೆ ಅವರಿಗೆ ಅಭಯ ಕೊಟ್ಟರು.  ಅಯ್ಯಪ್ಪಸ್ವಾಮಿಯ ದೇವಸ್ಥಾನದಲ್ಲಿ ಆಶ್ರಯವೂ ಕೊಡಿಸಿದರು. ಒಂದುವಾರ ಅವರಿಗೆ ಎರಡು ಸಲ ಊಟ ಕಳುಹಿಸುವ ಸರದಿ ನಮ್ಮದಾಗಿತ್ತು.ದೇವಸ್ಥಾನದ ಈಶಾನ್ಯದ  ಮೂಲೆಯಲ್ಲಿ ಸ್ವಲ್ಪ ಖಾಲೀ ಜಾಗವಿತ್ತು. ಅಲ್ಲಿಯೇ ಅವರು ತಮ್ಮ ಚೀಲ ಇಟ್ಟುಕೊಂಡು, ಅಲ್ಲಿಯೇ ಇದ್ದ ನಲ್ಲಿಯ ಬಳಿ ಸ್ನಾನ ಮಾಡುತ್ತಿದ್ದರು. ಅವರು ಅಷ್ಟೊಂದು ಪೂಜೆ ಪುಂಸ್ಕಾರಗಳು ಮಾಡಿದಂತೆ ಕಾಣಿಸುತ್ತಿರಲಿಲ್ಲ. ಯಾವಾಗಲೂ ಮೌನವಾಗಿ ಏನೋ ಯೋಚಿಸುತ್ತಿದ್ದವನಂತೆ ಇರುವವನು. ಆಗಾಗ, ಕೆಲವೊಮ್ಮೆ ಗೋಡೆಗೆ ಒರಗಿ ಮಲಗಿದ್ದೇನೋ  ಧ್ಯಾನ ಮಾಡುತ್ತಿದ್ದಾನೋ ತಿಳಿಯದ ಸ್ಥಿತಿಯಲ್ಲಿ ಇರುತ್ತಿದ್ದ.ಅಯ್ಯಪ್ಪಸ್ವಾಮಿ ದೇವಸ್ಥಾನ ನಮ್ಮ  ಕಾರ್ಯಕಲಾಪಕ್ಕೆ ಮುಖ್ಯವಾದ ಜಾಗಾ. ಅದು ದೊಡ್ಡ  ಜನಸಂದಣಿ ಇರುವ ದೇವಸ್ಥಾನ ವಲ್ಲ. ಆ ಪ್ರಾಜೆಕ್ಟ್ ನಲ್ಲಿ ಉದ್ಯೋಗಿಯೊಬ್ಬರು ಆ ದೇವಸ್ಥಾನಕ್ಕೆ ಧರ್ಮ ಕರ್ತ, ಪೂಜಾರಿ  ಎಲ್ಲಾ ಅವನೇ ಆಗಿ ನಡೆಸುತ್ತಿದ್ದನು. ಆ ದೇವಸ್ಥಾನ, ಅವರ ಮನೆ ಪೂಜಾ ಕೋಣೆಗೆ ತುಂಬಾ ದೊಡ್ಡದಾಗಿದಂತೆ,  ಮತ್ತು ಸಾಂಪ್ರದಾಯಿಕ ದೇವಸ್ಥಾನಗಳಿಗೆ ತುಂಬಾ ಚಿಕ್ಕದಾಗಿದಂತೆ ಕಾಣಿಸುತ್ತಿತ್ತು. ಅವರ ಮನೆ ಒಳೆಗೆಯಿಂದ ದೇವಸ್ಥಾನಕ್ಕೆ ದಾರಿಯಿತ್ತು. ದೇವಸ್ಥಾನಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ, ಪೂಜೆ, ನೈವೇದ್ಯ ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಿದ್ದರು. ಅವರ ಮಗನ  ಹೆಸರು ಮಣಿಕಂಠ. ಅದೇನೇ ಇರಲಿ, ಶನಿವಾರ ರಾತ್ರಿಯಿಂದ ಭಾನುವಾರ ರಾತ್ರಿಯ ವರೆಗೂ ಅದು ಮಕ್ಕಳ ಆಟಗಳ  ಜಾಗಾವಾಗಿತ್ತು.ಶನಿವಾರ ಸಂಜೆ ಏಳುಗಂಟೆಗೆಲ್ಲಾ , ‘ಈಗಲಪೆಂಟ’ದಿಂದ ಒಬ್ಬ ಮಲಯಾಳ/ ತಮಿಳ ಭಜನ ತಂಡ ಬರುತ್ತಿತ್ತು. ಅಲ್ಲಿಯ ವರೆಗೂ ಅಲ್ಲಲ್ಲಿ ಆಟವಾಡುತ್ತಿದ್ದ ಮಕ್ಕಳೆಲ್ಲರು ಮನೆಗೆ  ಹೋಗಿ ಕೈಕಾಲೂ ತೊಳೆದುಕೊಂಡು ಬಂದು  ಭಜನೆಯಲ್ಲಿ ಭಾಗ ವಹಿಸುವವರು. ಘಂಟೆಸಾಲ ಅವರ ಶುಕ್ಲಾಂಬರಧರಂದಿಂದ ಪ್ರಾರಂಭವಾಗಿ “ಸುಬ್ರಹ್ಮಣ್ಯಂ ಸುಬ್ರಹ್ಮಣ್ಯಂ”, “ಚಂದ್ರಶೇಖರ, ಚಂದ್ರಶೇಖರ” ಎಂಬ ಭಜನೆಗಳ ಮೂಲಕ  “ಒನ್ರಾಮ್ ತಿರುಪ್ಪಡಿ ಶರಣಂ ಪುನ್ನಯ್ಯಪ್ಪ” ಎಂದು  ಸಾಗುವ ಸೋಪಾನದ ಗೀತೆಯೊಂದಿಗೆ ಕೊನೆಗೊಳ್ಳುವುದು.  ಸೋಪಾನಗಳ ಹಾಡು ಉಂಬಾ ಉತ್ಸಾಹದಿಂದ  ತುಂಬಿ ತುಳುಕುತ್ತಿತ್ತು. ಪ್ರತಿಯೊಂದು ಸೋಪಾನಕ್ಕೆ ಒಂದು ಚರಣವಿದೆ. ಪ್ರತಿಚರಣ ಮುಗಿಯುತ್ತಿದ್ದಂತೆ, ಪ್ರಸಾದಕ್ಕೆ ಹತ್ತಿರವಾಗುತ್ತಿದ್ದ ತೃಪ್ತಿ. ನಡುವೆ ಕಾಲಕ್ಷೇಪಕ್ಕಾಗಿ ನಾನು ಶಿವ ಶಿವ ಶಂಕರ…  ಎನ್ನುತ್ತಾ ಭಕ್ತ  ಕನ್ನಪ್ಪ ಗೀತವನ್ನು ಹಾಡುತ್ತಿದ್ದೆ.  ಆ ಭಜನ ತಂಡಕ್ಕೇ ನನ್ನ ಹೆಸರು ಶಿವ ಶಿವ ಶಂಕರ ಎಂದೇ ಗುರುತು. ಕೊನೆಗೆ ಮಂಗಳಾರತಿಯ ನಂತರ ಅರ್ಚಕರು ಬಿಸಿಬಿಸಿ ಚಕ್ಕರ ಪೊಂಗಲಿಯನ್ನು  ಚಿಕ್ಕ ಚಿಕ್ಕ  ದೊನ್ನೆಗಳಲ್ಲೋ , ಎಲೆಗಳಲ್ಲೋ  ಹಂಚುವವರು.  ಅಂದು ರಾತ್ರಿ ಆರತಿ ಮುಗಿಸಿದ ಮೇಲೆ ತಿನ್ನುವ ಆ ಪ್ರಸಾದ ಅದ್ಬುತವಾದ ರುಚಿಯಿಂದ, ಆಹಾ… ಅನ್ನಿಸುವಷ್ಟು ರುಚಿಯಾಗಿ ಇರುತ್ತಿತ್ತು. ಬಹಳಷ್ಟು ಬಾರಿ  ಆ ಪ್ರಸಾದದ ಮೇಲೆ ಅನುರಕ್ತಿಯಿಂದ ದೇವಸ್ಥಾನಕ್ಕೆ ಹೋಗುತ್ತಿದ್ದೇವೆ ಎಂದರೆ  ಅದರಲ್ಲಿ ಸ್ವಲ್ಪವಾದರೂ ಸುಳ್ಳು ಇಲ್ಲ..ಹಾಗೆ ಆದಿವಾರದ ಬೆಳಿಗ್ಗೆ ತಮ್ಮ ತಮ್ಮ ಮನೆಗಳಲ್ಲಿ ತಾವು ತಿಂಡಿ ಮುಗಿಸಿಕೊಂಡು ಎಲ್ಲಿ ಆಟ ಆಡಬಹುದು, ಏನು ಆಡಬೇಕು ಎಂದು ಚರ್ಚಿಸಿತ್ತಿದ್ದೆವು. ಹಾಗೆ ನಾವು ಚರ್ಚಿಸಲು ಹೋಗುವ ಮೊತ್ತ ಮೊದಲಿನ ಪ್ರದೇಶ ಅಯ್ಯಪ್ಪಸ್ವಾಮಿ ದೇವಸ್ಥಾನವು.  ಆ ದಿನವೂ ಎಂದಿನಂತೆ ಎಲ್ಲರೂ ಗುಂಪು ಸೇರಿ ಯಾವಾವು ಆಟಗಳು ಆಡಬೇಕೋ ಚರ್ಚಿಕೊಳ್ಳುತ್ತಿದ್ದರೆ ಸಾಧುವು ನನ್ನನು ಆತ್ತ ಇತ್ತ  ನೋಡಿ  ಇಲ್ಲಿಬಾ ಎಂಬಂತೆ ಕೈ ಸನ್ನೆ ಮಾಡಿದ.  ನನ್ನೇ ಎಂದು ನಿರ್ಧರಿಸಿಕೊಂಡು ನಾನೇ ಅವಾರ ಕಡೆಗೆ ಹೋದ. ಅವರು ನನ್ನನ್ನು ದೇವಸ್ಥಾನದ ಹಿಂಭಾಗಕ್ಕೆ ಕರೆದೊಯ್ದು, ಮೇಲಿನ ಜೇಬಿನಿಂದ ಒಂದು ರೂಪಾಯಿ ನೋಟು ತೆಗೆದು, ‘ಒಂದು ಗಣೇಶ್ ಬೀಡಿ ಕಟ್ಟು ತೆಗೆದುಕೊಂಡು ಬಾ ಮಗು. ಹಾಗೆ ನಿನಗೂ ಬೇಕಾದರೆ,  ಐದುಪೈಸೆಗೆ ಏನಾದರೂ  ಕೊಂಡುಕೋ’  ಎಂದು ಹೇಳಿ ಆ ರೂಪಾಯನ್ನು ಕೈಯಲ್ಲಿ ಇಟ್ಟ.ನಾನು ಏನೂ ಯೋಚಿಸದೆಯೇ  ಅಂಗಡಿಯ ಕಡೆಗೆ ಓಡಿದೆ. ಮಲ್ಲಿಕಾರ್ಜುನ ಟಾಕೀಸುಗೆ ತಿರುಗುವ ಮೂಲೆಯಲ್ಲಿ ಒಂದು ಅಂಗಡಿ ಇತ್ತು. ಅಲ್ಲೇ ನಾವು ರೂಢಿಯಾಗಿ ಸಾಮಾನುಗಳನ್ನು ತಂದುಕೊಳ್ಳುತ್ತಿದ್ದೆವು. ಆ ಅಂಗಡಿಯಲ್ಲಿ ಇಬ್ಬರು ಸಹೋದರರು ಇರುತ್ತಿದ್ದರು. ನಾವು ಅವರನ್ನು ಚಿಕ್ಕ ಶೆಟ್ಟಿ  ಮತ್ತು ದೊಡ್ಡ ಶೆಟ್ಟಿ ಎಂದು ಕರೆದುಕೊಳ್ಳುತಿದ್ದೆವು.   .ಚಿಕ್ಕ ಶೆಟ್ಟಿ ಎಲ್ಲರೊಂದಿಗೆ ಚೆನ್ನಾಗಿ ಮಾತನಾಡುತ್ತಾ, ಉತ್ತಮ ಗ್ರಾಹಕರ ಪ್ರಜ್ಞೆಯನ್ನು ತೋರಿಸುವವನು. ನಾನು ಬೀಡಿ ಕೇಳಿದೊಡನೆ ಒಂದು ಕಟ್ಟು ಕೊಟ್ಟು ಏನೋ ಕೇಳುತ್ತಿದ್ದಾಗ ನಾನು ಓಡುತ್ತಾ ಬಂದುಬಿಟ್ಟೆ. ದೇವಸ್ಥಾನದಲ್ಲಿ ಗಣೇಶ್ ಬೀಡಿಗಳ ಕಟ್ಟು, ಉಳಿದ ಚಿಲ್ಲರೆ, ಸಾಧುವಿಗೆ ನೀಡಿ, ನನ್ನ ಆಟಗಳಲ್ಲಿ ನಾನು ಮುಳುಗಿಹೋದೆ.ಒಂದು ವಾರದ ನಂತರ, ಅಪ್ಪ ಯಥಾಲಾಪವಾಗಿ  ಪಡಶಾಲೆಯಲ್ಲಿ ಇದ್ದ ನನ್ನನ್ನು ಕರೆದು “ಏನೋ ಬೀಡಿ ಸೇದುತ್ತಿದ್ದೀಯಾ?”  ಎಂದು ಸ್ವಲ್ಪ ಕಟುವಾಗಿಯೇ ಕೇಳಿದರು.  ನನ್ನ ಬಾಯಿಂದ ಮಾತು ಬರಲಿಲ್ಲ. ಅಷ್ಟರಲ್ಲಿ ಅಮ್ಮನೂ ಬಂದಳು. ವಿಷಯ ತಿಳಿದುಕೊಂಡು, “ಛ, ಚ ಅವನು ಏಕೆ ಸೇದುತ್ತಾನೆ? ” ಎಂದು ನನ್ನನ್ನು ಸಮರ್ಥಿಸಿದಳು.ಮತ್ತೆ ತಾನೇ “ಇಷ್ಟಕ್ಕೂ ನಿಮಗೆ ಯಾರು ಹೇಳಿದರು?” ಎಂದು ಕೇಳಿದಾಗ, ಅಪ್ಪ “ಯಾರೋ ಹೇಳಿದರೆ ನಾನೇಕೆ ನಂಬುತ್ತೇನೆ,  ಯಾರ ಹತ್ರ  ಇವನು ಖರೀದಿಸಿದನೋ  ಅವನೇ, ಚಿಕ್ಕಶೆಟ್ಟಿ ಹೇಳಿದ” ಎಂದ.ನನಗೆ ವಿಷಯವು ಅರ್ಥವಾಯಿತು. ನಾನು ಮುಗುಳ್ನಗುತ್ತಾ “ಓಹ್, ಅದಾ, ದೇವಸ್ಥಾನದಲ್ಲಿ ಸ್ವಾಮಿ ಇದ್ದಾನಲ್ಲ, ಕಳೆದ ಭಾನುವಾರ ಅವರು ಖರೀದಿಸಿಕೊಂಡು ಬಾ ಅಂತ ಹೇಳಿದರು. ಆಗ ನಾನು  ಖರೀದಿಸಿದೇ. ನಾನು ಕುಡಿಯಲು ಅಲ್ಲ.”ಎಂದೆ.ಅಪ್ಪ ನಂಬುವಂತೆ ಕಾಣಲಿಲ್ಲ. “ನೀವು ತಪ್ಪು ಮಾಡಿದ್ದು ಅಲ್ಲದೆ, ಅಪರಾಧವನ್ನು ಇನ್ನೊಬ್ಬರಿ ಮೇಲೆ ಹಾಕುವೇ ” ಎಂದು ಅವರು ಪ್ರತಿದಾಳಿ ನಡೆಸಿದರು.ಆ ಮಾತುಗಳಿಗೆ ನನ್ನ ಮುಖವು ಕೆಂಪಾಯಿತು. ದುಃಖವಾಯಿತು. ಕೀಚಲು ಧ್ವನಿಯಲ್ಲಿ ನಮ್ಮಮ್ಮಯೊಂದಿಗೆ, “ಬೇಕಾದರೆ ಈಗಲೇ ದೇವಸ್ಥಾನಕ್ಕೆ ಹೋಗೋಣ. ಅವರಿಂದಲೇ ಮಾತನಾಡಿಸುವೆ” ಎಂದೆ.ನನ್ನ  ನಿರಪರಾಧತ್ವ ಮೇಲೆ ನನಗಿಂತಲೂ ಜಾಸ್ತಿ ನಂಬಿಕೆ ಇರುವ ಅಮ್ಮ ತಕ್ಷಣ-“ಹೋಗಿ ಅವರನ್ನೇ ಕೇಳೋಣ” ಎಂದಳು.ನನ್ನ ತಂದೆಯೂ ಅಂಗಿ ಧರಿಸುತ್ತಾ-“ತಕ್ಷಣ ಹೋಗಿ ಮಹದೇವಪ್ಪ ಮಾಮನವರನ್ನು ಕರೆದುಕೊಂಡುಬಾ ಹೋಗು, ಇಲ್ಲಿ ಇದ್ದಂತೆ ಬರಬೇಕು. ಏಕೆ ಎಂದು ಕೇಳಿದರೆ ಬಂದಾಗಾ ಅಪ್ಪ ಹೇಳುತ್ತರಂತೆ ಎಂದು ಹೇಳು. ನಾವು ದೇವಸ್ಥಾನದ ಹೊರಗೆ ಇರುತ್ತೇವೆ” ಎಂದೆ.ನಾನು ಮಿಂಚಿನ ವೇಗದಿಂದ ಹೋಗಿ ಹತ್ತು ನಿಮಿಷದಲ್ಲಿ ಮಹದೇವಪ್ಪ ಮಾಮಾನ ಜೊತೆ ದೇವಸ್ಥಾನಕ್ಕೆ ಬಂದೆ. ಅಪ್ಪ ಮಾಮನೊಂದಿಗೆ ಏನೋ ಮಾತಾಡಿದರು. ಮಾಮ, ಹಿಂದೆ ಅಪ್ಪ, ಆ ಹಿಂದೆ ಅಮ್ಮ, ನಾನು ದೇವಸ್ಥಾನದ ಒಳಗೆ ಹೋಗಿ ಸ್ವಾಮಿ ಕುಳಿತಿದ್ದ ಜಾಗಕ್ಕೆ ಸೇರೀದೆವು .ನಮ್ಮ ಬರುವಿಕೆಯನ್ನು ನಿಜಕ್ಕೆ ಊಹಿಸದ ಅವರು, ‘ರಾತ್ರಿ ಊಟ ತೆಗೊಂಡು ಯಾರೋ ಭಕ್ತರು ಬರಬೇಕಾದ ಸಮಯದಲ್ಲಿ ಇವರು ಬಂದಿದ್ದರೇನು?’ ಎಂದು ಆಶ್ಚರ್ಯ ಹೋದ. ಸ್ವಲ್ಪ ತಬ್ಬಿಬ್ಬಾದ.ಮಹದೇವಪ್ಪ ಮಾಮ ಅವು ಇವು ಮಾತಾಡಿ-“ನೀವು ಈ ಹುಡುಗನೊಂದಿಗೆ ಹೋದ ವಾರ

ತೆಲುಗು ಕಥೆ “ಶೋಭನ್‌ ಬಾಬು-ಗಣೇಶ್‌ ಬೀಡಿ” ತೆಲುಗುಮೂಲ ಜಿ.ಉಮಾಮಹೇಶ್ವರ್‌ , ಕನ್ನಡಕ್ಕೆ ರಂಗನಾಥ ರಾಮಚಂದ್ರ ರಾವು Read Post »

You cannot copy content of this page

Scroll to Top