ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಾನು ಇನ್ನೂ ಚಿಕ್ಕವಳಿದ್ದೆ ಒಂದು ದಿನ ಅಂದು ಭಾನುವಾರ. ನಮ್ಮದೇ ಅಂಗಡಿ ಇತ್ತು, ಅಂಗಡಿಗೆ ಹೋಗಿ ಪಾರ್ಲೆ ಬಿಸ್ಕಿಟ್ ತರಬೇಕ ಅಂತ ಹೋದೆ.ಬಹಳ ದೂರ,ಅಷ್ಟು ಸಮೀಪ ಅಲ್ಲದ,ನಡೆದುಕೊಂಡೆ ಹೋಗಬೇಕಿತ್ತು.‌ ಅಂಗಡಿಯಲ್ಲಿ ಅಪ್ಪ ಇದ್ದರೆ, ಎನ್ ಬೇಕೋ ಅದನೆಲ್ಲ ತಿನ್ನಬಹುದಿತ್ತು.. ಆದರೆ ದೊಡ್ಡಪ್ಪ ಇದ್ದಾಗ ಕಿರಿ ಕಿರಿ, ಅದನ್ನ ತಿನ್ನಬ್ಯಾಡ್ರಿ,ಮುಟ್ಟಬ್ಯಾಡ್ರಿ ಅಂತ ಕಣ್ಣಲ್ಲೇ ಬಯ್ಯುವ. ಅಂದು ದಾರಿಯಲ್ಲಿ ಒಬ್ಬ ಹುಡುಗ ಹರಿದ ಬಟ್ಟೆ, ಕೆದರಿದ ಕೂದಲು, ಕೊಳಕು ಕೈ,ಕಾಲುಗಳು. ನನ್ನ ಬೆನ್ನತ್ತಿ ಬಂದಿದ್ದ. ನಾನು ಬಿಸ್ಕಿಟ್ ತಗೊಂಡು ಮನೆಗೆ ಬರತಿದ್ದಾಗ ಅವನು ಹಿಂದಿಂದೆ ಬಂದು ಮನೆಗೆ ಹತ್ತಿರ ಆಗ್ತಿದ್ದಂತೆ ” ಓಯ್ ಪಾರ್ಲೆ ಹುಡುಗಿ, ಓsಯ್ , ಕಿವಿ ಕೇಳಿಸೋದಿಲ್ಲ ನಿನಗ? ಎನ್ನುತಾ ನಮ್ಮ ಮನೆಯ ಕಟ್ಟೆಯ ಮೇಲೆ ಬಂದು ಕುಳಿತ”. ಎಲ್ಲರಿಗೂ ಆಶ್ಚರ್ಯ, ಯಾರ ಇವನು? ಇವನನ್ನ ಯಾಕ ಕರೆದುಕೊಂಡ ಬಂದೆ? ನೂರೆಂಟು ಪ್ರಶ್ನೆಗಳು. ಅವನ್ನ ನಾನು ಕರಕೊಂಡ ಬಂದಿಲ್ಲ, ಅವನೇ ಬಂದಿದ್ದಾನ ಅಂದೆ, ಅವ್ವ, ಯಾರೋ ಕಂದ ನೀನು ? ಎನ್ ಬೇಕು? ನಿಮ್ಮನೆ ಎಲ್ಲಿ? ನಿನ್ಯಾಕಿಲ್ಲಿ ಬಂದಿಯಾ? ಅಂದಾಗ ಅವನ ದೃಷ್ಟಿ ಆ ಬಿಸ್ಕಿಟ್ ಕಡೆಗೆ ಇತ್ತು. ಆವಾಗ ಅನಿಸಿತ್ತು ನನಗೆ ಓಹೋ, ಪಾಪ! ಇವನಿಗೆ ಬಿಸ್ಕಿಟ್ ತಿನ್ನುವ ಆಸೆ ಆಗಿರಬೇಕು. ಬಿಸ್ಕಿಟ್ ಬೇಕಾ? ಅಂತ ಬರಿ ಕೈ ಮುಂದೆ ಮಾಡಿದೆ, ಕಿತ್ತುಕೊಂಡವನೇ ಅಲ್ಲಿಂದ ಓಡಿ ಹೋದ.ಅವ್ವ,ಬಾರೋ ಇಲ್ಲಿ ಊಟ ಮಾಡುವಂತೆ. ಅಂತ ಕೂಗಿದರೂ ತಿರುಗಿ ನೋಡಲಿಲ್ಲ ಅವನು. ಅವ್ವ ಅವನು ಮರೆಯಾಗುವವರೆಗೆ ಬಿಡಳು. ಅಯ್ಯೋ, ಅವ್ವಾ ಅವನು ಹೋದಾ, ನನಗೆ ಹಸಿವಾಗಿದೆ.‌ಮತ್ತೆ ಅಂಗಡಿಗೆ ಹೋಗಿ ಬಿಸ್ಕಿಟ್ ತರಲಾ? ಅಂದೆ. ಬೇಡ ಊಟ ಮಾಡು ಬಾ. ಬಿಸ್ಕಿಟ್ ಬಹಳ ತಿನ್ನಬಾರದು ಅಂತ ಒಳಗೆ ಹೋದಳು. ಇದ್ದದ್ದನ್ನ ಕಸಿದುಕೊಂಡು ಹೋದ, ಇನ್ನೂ ತಿನ್ನೊದೆಲ್ಲಿಂದ. ನನಗೆ ಊಟ ಬೇಡವಾಗಿತ್ತು, ಆ ಹುಡುಗ ಯಾರಿರಬಹುದು? ದಾರಿಯಲ್ಲಿ ತಾನಾಗಿಯೇ ಹಿಂದೆ ಬಂದು ಹೋಗಿಯೆ ಬಿಟ್ಟ್ನಲ್ಲ.! ಅನಾಥನಾ? ಅವನಿಗೆ ಅವ್ವ-ಅಪ್ಪ ಇಲ್ಲವಾ? ಅವನು ಹಾಗೇಕಿದ್ದ. ಉತ್ತರವಿಲ್ಲದ ಪ್ರಶ್ನೆಗಳು.ಆ ದಿನ ,ಆ ಕ್ಷಣ ನನ್ನಲ್ಲಿ ಮೂಡಿದ ಪ್ರಶ್ನೆಗಳಿಗೆ ಕಾರಣ ಆ ಹುಡುಗ ಹುಡುಕಿದರೂ‌ ಸಿಗದವ. ಹಸಿವು ಅನ್ನೋದು ಏನೆಲ್ಲ ಮಾಡಿಸಬಹುದಲ್ಲವೆ.??!!

pics:chatgpt


About The Author

Leave a Reply

You cannot copy content of this page

Scroll to Top