ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಶಾಲಿನಿ ಕೆಮ್ಮಣ್ಣು ಅವರ ಕವಿತೆ “ಬಹುಮುಖ”

ಕಾವ್ಯ ಸಂಗಾತಿ ಶಾಲಿನಿ ಕೆಮ್ಮಣ್ಣು “ಬಹುಮುಖ” ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ದರ್ಪಣದಿಂದ ಕಾಣದು ಮೂರ್ಖದರ್ಪದ ಅಹಮ್ಮಿನ ಕೋರೆಮುಖತೊಡಲುಬೇಕು ದಿನವೂ ಬಹುಮುಖನಾನು ನೀನು ಕೊನೆಯಾಗುವ ತನಕ ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ದಿನಗಳೆದಂತೆ ಬರಿದಾಗುವ ದೇಹಇಲ್ಲದ ಬಯಸುವ ಮನುಜನ ಮೋಹಎಂದಿಗೂ ತೀರದ ಸ್ವಾರ್ಥದ ದಾಹಜಗದಲಿ ನಿಲ್ಲದ ದುಗುಡದ ವಾಹ ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ಮೋಸದ ಬಲೆಯಲಿ ಚಿನ್ನದ ಮೀನುಪರಿಶ್ರಮಕಿಲ್ಲಿ  ಸಿಗುವುದೆ ಜೇನುಮರಗಳ ಕಡಿದು ಬರಿದಾಗಿದೆ ಕಾನುಕಡಲಿನ ಮೊರೆತಕೆ ಬಾಗಿದೆ ಬಾನು ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ನನ್ನವರು ಪರರು ನಡುವೆ ನಾ ಯಾರುಅರಿಯದೆ ಸಾಗಿದೆ ಜನಪದ ತೇರುಅಂಕಿಯ ಅಂಕುಶದಿ ಬಡಿದಾಡುವ ಜನರುಮಾನವ ಮರೆತು ಯುದ್ಧವ ಸಾರುತಲಿಹರು ಯಾವುದು ನಿಜ ಸುಖ ಎಲ್ಲಿದೆ ನಾಕನೀನೆಯ ಹೇಳು ನನ್ನ ಸಖ ಶಾಲಿನಿ ಕೆಮ್ಮಣ್ಣು

ಶಾಲಿನಿ ಕೆಮ್ಮಣ್ಣು ಅವರ ಕವಿತೆ “ಬಹುಮುಖ” Read Post »

ನಿಮ್ಮೊಂದಿಗೆ

ಪ್ರಶಾಂತ್ ಬೆಳತೂರು ಅವರ ಕವಿತೆ “ನೀವು..ಮತ್ತೂ… ಈ..ಪ್ರೇಮ”

ಕಾವ್ಯ ಸಂಗಾತಿ ಪ್ರಶಾಂತ್ ಬೆಳತೂರು “ನೀವು..ಮತ್ತೂ… ಈ..ಪ್ರೇಮ” ಈ ಪ್ರೇಮವೆಂಬುದುಮಹಾಕವಿಯೊಬ್ಬ ಬರೆದಅನವಶ್ಯಕವಿವರಣೆಗಳನ್ನೊಳಗೊಂಡ ಮಹಾಕಾದಂಬರಿಯಂತೆ ರಸಹೀನವಾದುದಲ್ಲ..! ಅದು..!ಎಲ್ಲೋ..ದೂರದಲ್ಲಿ..!ಅಜ್ಞಾತವಾಗಿ ಕೂತಅನಾಮಿಕನೊಬ್ಬನ ಎದೆಯಲ್ಲಿತಣ್ಣಗೆ ಹುಟ್ಟಿಕೊಂಡಬಲು ಸೂಕ್ಷ್ಮ ಮತ್ತು ತೀವ್ರ ಮೊನಚುಳ್ಳಆತ್ಮಸಂವೇದನೆಯಗಂಭೀರ ದನಿಯ ಹಿನ್ನೆಲೆಯಲ್ಲಿಹೃದಯದಲ್ಲೊಂದುಸಣ್ಣಗೆ ಕಂಪನ ಉಂಟು ಮಾಡಬಲ್ಲಎರಡೇ ಎರಡು ಸಾಲಿನಬಂಡಾಯದ ಬೆಂಕಿಯಂತಹಕಾವ್ಯ ರೂಪಕ..! ಒಮ್ಮೆಲೇ ಸುಡುವುದಿಲ್ಲನಿಮ್ಮನ್ನು ಅದುನಿಧಾನವಾಗಿ ಹೆಜ್ಜೆಯೂರುತ್ತದೆಸಮ್ಮೋಹನಗೊಳಿಸುತ್ತದೆ..!ಎಷ್ಟೇ ಎಚ್ಚರಿಕೆ ವಹಿಸಿದರೂಕ್ಷಣಾರ್ಧದಲ್ಲಿ ಕಣ್ಮುಂದಿನಹಾದಿಯನ್ನು ಮರೆಸಿ ಬಿಡುತ್ತದೆ..! ಸರಿಯಾದಒಂದೇ ಒಂದು ವಿಳಾಸವಿಲ್ಲಅದರ ತೆಕ್ಕೆಯೊಳಗೆಗೂಡು ಮರೆತ ಹಕ್ಕಿಯಂತೆಬಯಲ ತುಂಬಾಎಲ್ಲೆಲ್ಲೂ ಹಾರಿ ವಿಹರಿಸುತ್ತಾಆನಂದದಲ್ಲಿತೇಲಿಸುತ್ತದೆನೀವು ಕಾಣದಿರುವಹೊಸ ಭ್ರಮಾ ಲೋಕಗಳಲ್ಲಿಮಿಂಚಿನ ಸಂಚಲನ ಸೃಷ್ಟಿಸಿಕಣ್ಣನ್ನು ಕುರುಡಾಗಿಸುತ್ತದೆ..! ಅಚ್ಚರಿಯೇನಿಸುವುದಿಲ್ಲಯಾರೊಬ್ಬರಿಗೂಎದೆಗೂಡಿನಲ್ಲಿನೂರಾರು ಕನಸುಗಳಿಗೆಮೊಟ್ಟೆಯಿಟ್ಟು ಮರಿ ಮಾಡುವಾಗಆದರೆಎಷ್ಟು ಕಾಲಹೀಗೆ ಕನಸಿನಲ್ಲಿ ಹಾರುವಿರಿ?ಹಾರುವ ರೆಕ್ಕೆಗಂಟಿಕೊಂಡೇಬೆನ್ನೇರಿರುತ್ತದೆಒಂದು ಸಣ್ಣ ಆತಂಕಅಥವಾಬಿರುಕು ಮೂಡಿಸುವನಿಮ್ಮದೇ ನೆರಳುಗಳ ಛಾಯೆ..! ತತ್ ಕ್ಷಣಪ್ರೇಮದ ಕನಸುಗಳಿಂದನಿಜಕ್ಕೂ ಎಚ್ಚರವಾಗುತ್ತೀರಿ..!ಆರಂಭದಲ್ಲಿಕಣ್ಣೀರು ಹಾಕುತ್ತಾಕೂಗಾಡುತ್ತೀರಿವಾಗ್ವಾದಗಳಲ್ಲಿಗುದ್ದಾಡುತ್ತಾ ಜಿದ್ದಿಗೆ ಬಿದ್ದಂತೆವರ್ತಿಸುತ್ತೀರಿದನಿಯೆತ್ತುವುದನ್ನು ಕಲಿಯುತ್ತೀರಿಪ್ರತಿಭಟಿಸುತ್ತೀರಿ..! ಆದರೆ ವಿಪರ್ಯಾಸ..!ಕಾಲ ಸರಿದಂತೆಲ್ಲಾತಣ್ಣಾಗುಗುತ್ತೀರಿತುಂಬಾ ಆಳದಲ್ಲಿ ಬಿದ್ದಿರುತ್ತೀರಿಮೌನವಾಗುತ್ತೀರಿಕೊನೆಗೊಮ್ಮೆಗಂಭೀರವಾಗಿಏಕಾಂತದ ಸಂಜೆಗಳಲ್ಲಿಸುಖಾಸುಮ್ಮನೆತಾವೊಬ್ಬರೇ ತಮ್ಮಷ್ಟಕ್ಕೆ ತಾವೇಕಳೆದು ಹೋಗುತ್ತೀರಿ…! ಧಾವಂತವಿಲ್ಲನಿಮಗೆ ಬದುಕಿನಲ್ಲಿಗುನುಗುತ್ತದೆ ಕಿವಿಗಳಿಗೆಶೋಕದಲ್ಲೂ ನೆಮ್ಮದಿ ತರಬಲ್ಲಮಹಮ್ಮದ್ ರಫಿಕಿಶೋರ್ ಕುಮಾರ್ , ಮುಖೇಶ್ ಮನ್ನಾಡೇಯಯಾವೊದಾದರೊಂದುಹಳೆಯ ಹಾಡು..! ಕೂತುಬಿಡುತ್ತೀರಿಪ್ರೇಮದ ಹರಿವಿನಲ್ಲಿಮುಗುಳ್ನಗುವ ಬುಧ್ಧನಂತೆಆಗ ನಿಜಕ್ಕೂ ಕೇಳಿಸುತ್ತದೆಪ್ರೇಮದ ಒಳದನಿಪಿಸುಗುಡುತ್ತೀರಿನೀವು ಕೂಡ ಅದರೊಟ್ಟಿಗೆಬೆಂಕಿಯನ್ನು ಬೆಳಕಾಗಿಸಿಕೊಂಡಕಲಾತ್ಮಕಕವಿತೆಯೊಂದರ ಹಾಗೆ…! ಪ್ರಶಾಂತ್ ಬೆಳತೂರು

ಪ್ರಶಾಂತ್ ಬೆಳತೂರು ಅವರ ಕವಿತೆ “ನೀವು..ಮತ್ತೂ… ಈ..ಪ್ರೇಮ” Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಮನದ ಮಗು ಹಠ ಮಾಡುವ ಮುನ್ನ ಬಂದುಬಿಡುನೊಂದು ಬಿಕ್ಕಿ ಅಳುವ ಮುನ್ನ ಬಂದುಬಿಡು ಇರಲಿ ಮೈಲುಗಟ್ಟಲೇ ಅಂತರ  ಇಬ್ಬರ ನಡುವೆ ನೆನಪು ನರಳುತ ಮಾಸುವ ಮುನ್ನ ಬಂದುಬಿಡು  ನನಗೂ ಇದೆ ಹಗಲು ದುಡಿಯುವ ಜವಾಬ್ದಾರಿಇರುಳ ಕನಸು ಸಾಯುವ ಮುನ್ನ ಬಂದುಬಿಡು ಜೊತೆ ಬಾಳುವ ಅವಕಾಶವೇ ಇಲ್ಲ ನಮಗೆಪ್ರೀತಿಯ ಎದೆಬಡಿತ ನಿಲ್ಲುವ ಮುನ್ನ ಬಂದುಬಿಡು ವಾಣಿಯ ಈ ಜನ್ಮವೆನೋ ಕಳೆಯುವುದು ವಿರಹದಿಮರುಜನ್ಮದಿ ಮತ್ಯಾರೋ ಕೈ ಹಿಡಿವ ಮುನ್ನ ಬಂದುಬಿಡು ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

ಡಾ. ಪುಷ್ಪಾವತಿ ಶಲವದಿಮಠ ಅವರ ಕವಿತೆ “ಅರಿವಿನ ದಾರಿ ಹುಡುಕುತ”

ಕಾವ್ಯ ಸಂಗಾತಿ ಡಾ. ಪುಷ್ಪಾವತಿ ಶಲವದಿಮಠ “ಅರಿವಿನ ದಾರಿ ಹುಡುಕುತ” ಇದ್ದು ಬಿಡು ಸುಮ್ಮನೆ  ಬುದ್ಧನಂತೆ ಸುಮ್ಮನಿದ್ದುಬಿಡುಹೊರಟು ಬಿಡು ಈ ಜಗದ ಜಂಜಡ ಕಳೆದುಕೊಂಡು ಬಿಡು  ಹೊರಟು ಬಿಡು ನೀನುನಡೆವ ದಾರಿ ದೊಡ್ಡದಿದೆಕಲ್ಲು ಮುಳ್ಳು ಚುಚ್ಚಬಹುದುರಕ್ತ ಒಸರಬಹುದುಮುಲಾಮು ಹಚ್ಚಿಕೋಪಟ್ಟಿ ಕಟ್ಟಿಕೋನಡೆಯುವುದು  ಮಾತ್ರ ಬಿಡಬೇಡಎಲ್ಲೂ ನಿಲ್ಲಬೇಡಾ ನಡೆಯುತ್ತಲೇ ಇದ್ದುಬಿಡು ನಿನ್ನ ಅಂಜಿಸುವವರುಹೀಯಾಳಿಸುವವರುಅನುಮಾನಿಸುವವರುಹಿಂದೆಳೆಯುವವರುತೆಗಳುವವರುಬೈಯುವವರುನೂರೆಂಟು ಮಂದಿ ಇರಬಹುದುಬಿಟ್ಟು ಬಿಡು ಮಂದಿಯ ಸಹವಾಸಮನದ ಮಾತು ಕೇಳು ಸಾಕು ನಿನ್ನ ಕಷ್ಟ ಕಣ್ಣಿರಿಗೂ ಕರುಗುವರಿಲ್ಲಈ ದುರ್ಬಲತೆಯ ನೀಗಲೇ ಬೇಕು ನೀನುನಿನಗೆ ನೀನು ಆಸರೆಯಾಗಬೇಕುಕಾಲ ನಿಲ್ಲುವುದಿಲ್ಲನೀನು ನಿಂತರೆ ಹೇಗೆ?!ತಳ್ಳಿಕೊಂಡೆ ಹೋಗಿಬಿಡುವುದು ಕಾಲಜೊತೆಗೆ ನಿಲ್ಲುವರಿಲ್ಲನಿಲ್ಲಬೇಡ  ನೀನು ಓಡು ಓಡುಯಾರಿಗೂ ಕಾಯಬೇಡಯಾರೂ ಕಾದಿಲ್ಲ ನಿನಗಾಗಿ ಒಂಟಿ ಪಯಣವೆಂದು ಬೇಸರಸದಿರುದೂರದ  ದಡ ಸೇರಲುಒಂಟಿಯಾಗಿಯೇ ನಡೆಯಬೇಕುನಿನ್ನ ಪಾಪ ಪುಣ್ಯಗಳ ಮೂಟೆ ಹೆಗಲಿಗೆರಿಸಿಕೊಂಡುನಡೆದು ಬಿಡು ಮೋಹ ಮಮಕಾರಗಳ ತೊರೆದುಬುದ್ಧ ಬಸವ ನಡೆಯಲಿಲ್ಲವೇಅವರ ದಾರಿಯೇನು ಸಲೀಸಾಗಿತ್ತೆ?! ಬೆಳಕಿನ ಅರಮನೆಗೆನೂರಾರು ದಾರಿಗಳಿವೆಯಂತೆನಡೆದು ಬಿಡು ಬೆಳಕಿನೆಡೆಗೆಸವಿ ಸಗ್ಗ ಪಡೆಯಲುಇಹದ ಕಗ್ಗ ಬಿಡಿಸಿಕೊಳ್ಳಬೇಕುಬಿಡಿಸಿಕೊಂಡು ಬಿಡುಅಲ್ಲಮ ನಡೆದ ದಾರಿಅಕ್ಕ ನಡೆದ ದಾರಿನಿನ್ನೆದುರಿಗಿದೆಆ ದಾರಿಗುಂಟ ನಡೆದು ಬಿಡುಸಿಗಬಹುದು ನಿನಗೆಅರಿವಿನ ಮನೆಬೆಳಕಿನ ಅರಮನೆ ತೊರೆದು ಬಿಡು ಸಾವಿರ ಚಿಂತೆಇದ್ದು ಬಿಡು ಬುದ್ಧನಂತೆಹೊರಟು ಬಿಡು ಹೊರಟು ಬಿಡುಬಿಟ್ಟು ಅವರಿವರ ಚಿಂತೆಅರಿವ ದಾರಿ ಹುಡುಕುತಕನಕ ಶರೀಫರು ಮೀಟಿದತಂಬೂರಿ ಮೀಟತ…..  ಡಾ. ಪುಷ್ಪಾವತಿ ಶಲವದಿಮಠ

ಡಾ. ಪುಷ್ಪಾವತಿ ಶಲವದಿಮಠ ಅವರ ಕವಿತೆ “ಅರಿವಿನ ದಾರಿ ಹುಡುಕುತ” Read Post »

ಇತರೆ

ಮಾಧ್ಯಮಗಳು ಭಾಷೆಯ ಆರೋಗ್ಯ ಕಾಪಾಡುವ ವೈದ್ಯರಾಗಬೇಕು -ಜಯಲಕ್ಷ್ಮಿ ಮಡಿಕೇರಿ.

ಭಾಷಾ ಸಂಗಾತಿ ಜಯಲಕ್ಷ್ಮಿ ಮಡಿಕೇರಿ. ಮಾಧ್ಯಮಗಳು ಭಾಷೆಯ ಆರೋಗ್ಯ ಕಾಪಾಡುವ ವೈದ್ಯರಾಗಬೇಕು ಮನುಷ್ಯನ ಅತಿ ದೊಡ್ಡ ಸಂಶೋಧನೆಗಳಲ್ಲಿ ಭಾಷೆ ಕೂಡಾ ಒಂದು. ಹಾಗಾಗಿ ಭಾಷೆಯನ್ನು ಬೆಳಕಿಗೆ ಹೋಲಿಸಲಾಗಿದೆ, ಅದಕ್ಕೆ ಬೆಳಕಿನ ಪಟ್ಟವನ್ನು ನೀಡಲಾಗಿದೆ. ಜಗತ್ತಿನಲ್ಲಿ ಸಹಸ್ರಾರು ಭಾಷೆಗಳಿದ್ದರೂ ಕನ್ನಡಕ್ಕೆ ಒಂದು ವಿಶೇಷ ಸ್ಥಾನಮಾನವಿದೆ. ಕವಿರತ್ನತ್ರಯರಿಂದ ಬೆಳೆದು ಬಂದು ಅದ್ವಿತೀಯ ಸಾಹಿತ್ಯ ರಚನೆಗಳನ್ನು ಸಾರಸ್ಕೃತ ಲೋಕಕ್ಕೆ ನೀಡಿದ, ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿದ ಹೆಗ್ಗಳಿಕೆ ನಮ್ಮ ಭಾಷೆಗಿದೆ.  ಇದು ಮಾಧ್ಯಮಗಳ ಯುಗ.  ಪುಲಿಗೆರೆಯ ಸೋಮನಾಥ ಹೇಳುವಂತೆ ” ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳಂ ಕೇಳುತಂ  ಕೆಲವಂ ಮಾಳ್ಪವರಿಂದ ಕೆಲವಂ  ಸುಜ್ಞಾನದಿಂದ,   ಅರಿತುಕೊಂಡು ಬೆಳೆಯಲು  ಯಾರಿಗೂ ಸಮಯವಾಗಲಿ ವ್ಯವಧಾನವಾಗಲಿ ಇಲ್ಲ.  ಮುದ್ರಣ ಮಾಧ್ಯಮದಲ್ಲಿ ಪ್ರಧಾನ ಪಾತ್ರವಹಿಸಿರುವ ಪುಸ್ತಕಗಳ ಓದು ಬದಿಗೆ ಸರಿದ ಕಾಲವಿದು. ಸ್ವಚ್ಛ ಶುದ್ಧ ಭಾಷೆಯ ಬೆಳವಣಿಗೆಗೆ  ಪೂರಕವಾಗಿರುವ ರೇಡಿಯೋ, ಸೃಜನಶೀಲ ಬರಹಗಳು, ಪತ್ರಿಕೆಗಳು ನಿಯತಕಾಲಿಕೆಗಳು ಇವೆಲ್ಲವುಗಳನ್ನು ಮೀರಿ ಟಿವಿ ಸಿನಿಮಾ ಇಂಟರ್ನೆಟ್ ವಾಟ್ಸಪ್ ಫೇಸ್ಬುಕ್ ಇತ್ಯಾದಿಗಳಿಗೆ ಜನ ಮುಗಿ ಬೀಳುವ ಕಾಲಘಟ್ಟವಿದು.  ಒಂದೆಡೆ ಇಂಗ್ಲಿಷ್ ಭಾಷೆಯನ್ನು ಬಳಸಿ ಮಾತನಾಡುವುದೇ ಒಂದು ಹೆಗ್ಗಳಿಕೆ  ಎಂಬ ಭ್ರಮೆಯಲ್ಲಿರುವ ಕನ್ನಡಿಗರು, ಇನ್ನೊಂದೆಡೆ ತಾವು ಬಳಸಿದ್ದೇ ಭಾಷೆ ಎನ್ನುವಂತೆ ಕನ್ನಡ ಭಾಷೆ ಗೌರವಕ್ಕೆ ಚ್ಯುತಿ  ತರುವಂತೆ ಪ್ರತಿ ದಿನ  ತಪ್ಪುಗಳನ್ನೇ ತೋರುವ ಹೇಳುವ ಕೆಲ ದೃಶ್ಯ ಮಾಧ್ಯಮಗಳು. ಇವುಗಳಿಂದ ಕನ್ನಡ ಭಾಷೆ ತನ್ನ  ಅಂದ ಚಂದವನ್ನು, ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದ್ದು  ನಮ್ಮ ಭಾಷಾ ಸಹಜತೆಯನ್ನು ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ದೃಶ್ಯ ಮಾಧ್ಯಮಗಳಲ್ಲಿ ಅತಿ ದೊಡ್ಡದಾಗಿ ಬಿತ್ತರ ವಾಗುವ ತಪ್ಪು ತಪ್ಪಾದ ಪದಗಳನ್ನು ಚಿತ್ತಬಿತ್ತಿಯಲ್ಲಿ ಮುದ್ರಿಸಿಕೊಳ್ಳುವ ಮಕ್ಕಳು ಅದುವೇ ಸರಿಯಾದ ಕನ್ನಡ ಎಂದು ತಿಳಿದು ಅದನ್ನೇ ಕಲಿಯುತ್ತಾರೆ. ಭಾಷಾ ಬೆಳವಣಿಗೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸ ತಕ್ಕಂತಹ ಪಾ.ವೆಂ. ಆಚಾರ್ಯರ   ‘ಪದಾರ್ಥ ಚಿಂತಾಮಣಿ ‘ , ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ” ಇಗೋ ಕನ್ನಡ “, ಕೊಕ್ಕಡ ವೆಂಕಟರಮಣ ಭಟ್ಟರ ” ಸರಿಗನ್ನಡ ಸರಿಕನ್ನಡ ” ಶುದ್ಧ ಕನ್ನಡದ ಬಗ್ಗೆ ನಮಗೆ ಅರಿವಾಗುತ್ತದೆ ಮತ್ತು ಮುದ್ರಣ ಮಾಧ್ಯಮ ಭಾಷ ಕ್ಷೇತ್ರದಲ್ಲಿ ಮೂಡಿಸಿದ ಜಾಗೃತಿಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಹಿರಿಯರು ಪುಸ್ತಕಗಳನ್ನು ಓದುವ ಸಂಸ್ಕೃತಿಯನ್ನು ರೂಢಿಸಿಕೊಳ್ಳುವ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಬೇಕಿದೆ. ಅಧಿಕಾರ ಸ್ಥಾನದಲ್ಲಿ ಇರುವವರು, ಶಿಕ್ಷಕರು, ಪೋಷಕರು ಮಾಧ್ಯಮ ಬಂಧುಗಳು ಕನ್ನಡ ಭಾಷಾ ಶುದ್ಧಿಯನ್ನು ಕಾಪಾಡಿಕೊಂಡು ಬರಬೇಕಿದೆ ಹೊಂಬೆಳಕು ಮಾಸಿಕ ಕಾರ್ಯಕ್ರಮದ ಮೂಲಕ ಹಲವಾರು ತತ್ವ ಚಿಂತನೆಗಳು ಮಠದಲ್ಲಿ ನಡೆಯುತ್ತಿದ್ದು ಹಲವಾರು ಪುಸ್ತಕಗಳು ಕೂಡ ಈ ವೇದಿಕೆಯಲ್ಲಿ ಲೋಕಾರ್ಪಣೆಗೊಳ್ಳುತ್ತಿರುವ ಬಗ್ಗೆ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಸಂತಸ ವ್ಯಕ್ತಪಡಿಸಿದರು. ತಮ್ಮ ಅಮೃತ ಹಸ್ತದಿಂದ  ಕೆ ಜಯಲಕ್ಷ್ಮಿ ಅವರ  ‘ ನಡೆದಷ್ಟೂ ದಾರಿ ‘ ಕೃತಿಯನ್ನು ಲೋಕಾರ್ಪಣೆಗೊಳಿಸಿ ಶುಭ ಕೋರಿದರಲ್ಲದೆ ಶರಣ ಶರಣೆಯರ ಜೀವನ ಆದರ್ಶಗಳ ಬಗ್ಗೆ ಹೇಳುತ್ತಾ  ವಚನಗಳ ಸಾರ್ವಕಾಲಿಕ ಮೌಲ್ಯಗಳ  ಬಗ್ಗೆ ವಿವರಿಸಿದರು. ನೆರೆದಿರುವ ಭಕ್ತ ವೃಂದಕ್ಕೆ ಆಶೀರ್ವಚನ ನೀಡಿದರು .  ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷರು ಹಾಗೂ ಶಕ್ತಿ ದಿನಪತ್ರಿಕೆಯ  ಸಲಹಾ ಸಂಪಾದಕರಾದ ಬಿಜಿ ಅನಂತಶಯನ ರವರು ಸಾಮಾಜಿಕ ಧಾರ್ಮಿಕ ಕ್ಷೇತ್ರಕ್ಕೆ ಅರಮೇರಿ ಮಠದ ಪರಮಪೂಜ್ಯ ಗುರುಗಳು ನೀಡುತ್ತಾ ಬರುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಶಿಕ್ಷಕಿ ಸಾಹಿತಿ ಸುನಿತಾ ಕುಶಾಲನಗರ ಅವರು ಜಯಲಕ್ಷ್ಮಿ ಕೆ ಯವರ” ನಡೆದಷ್ಟೂ ದಾರಿ  ” ತೃತೀಯ ಬಗ್ಗೆ ಮಾತನಾಡುತ್ತಾ ಓದುವ ಕುತೂಹಲವನ್ನು ಕೆರಳಿಸುವ , ವಿಚಾರಧಾರೆಗಳ ಸ್ಪಷ್ಟ ನಿರೂಪಣೆಯ ಪುಸ್ತಕವಿದು. ಲೇಖಕಿ ಬಳಸಿದ ಭಾಷೆ ಸರಳ ಸ್ವಚ್ಛ ಸುಂದರ ಎಂದರು.ಉದಾತ್ತ  ವ್ಯಕ್ತಿಗಳ ಜೀವನ ಚರಿತ್ರೆಯನ್ನು ವಿವರಿಸಿತ್ತ  ವಾಸ್ತವದಲ್ಲಿ ಬದುಕುವ ಚಿಂತನೆ ಉತ್ತಮ ಎಂದರು. ಪೊನ್ನಂಪೇಟೆ ಸಿ ಐ ಟಿ ಕಾಲೇಜಿನ ಉಪನ್ಯಾಸಕಿ ಸುಶ್ಮಿತಾ ರವರು  ಜಯಲಕ್ಷ್ಮಿ ಅವರ ಕೆಲವು ಲೇಖನಗಳ ಬಗ್ಗೆ ಮಾತನಾಡಿದರು.ಕುಮಾರಿ ಮಿನುಗು  ಪ್ರಾರ್ಥಿಸಿದಳು. ಕಿಗ್ಗಾಲ್ ಹರೀಶ್  ನಿರೂಪಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಕೇಶವ ಕಾಮತ್, ಮಾಜಿ ಅಧ್ಯಕ್ಷರಾದ ಶ್ರೀ ಲೋಕೇಶ್ ಸಾಗರ್, ಸಾಹಿತಿ ಕಿಗ್ಗಾಲ್ ಗಿರೀಶ್, ಡಾಕ್ಟರ್ ಸತೀಶ್, ಸಮರ್ಥ ಕನ್ನಡಿಗರು ಸಂಸ್ಥೆಯ ಸಂಚಾಲಕಿಯರು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಮಾಧ್ಯಮಗಳು ಭಾಷೆಯ ಆರೋಗ್ಯ ಕಾಪಾಡುವ ವೈದ್ಯರಾಗಬೇಕು -ಜಯಲಕ್ಷ್ಮಿ ಮಡಿಕೇರಿ. Read Post »

You cannot copy content of this page

Scroll to Top