ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ರಂಗಭೂಮಿ

“ಲೋಕಾಯುಕ್ತರು ಬರುತ್ತಾರೆ” ವ್ಯಂಗ್ಯ, ಹಾಸ್ಯ, ಸಾಮಾಜಿಕ ಸತ್ಯ ಸಮನ್ವಯ  ನಾಟಕ.ಗೊರೂರು ಅನಂತರಾಜು

ರಂಗ ಸಂಗಾತಿ ಗೊರೂರು ಅನಂತರಾಜು “ಲೋಕಾಯುಕ್ತರು ಬರುತ್ತಾರೆ” ವ್ಯಂಗ್ಯ, ಹಾಸ್ಯ, ಸಾಮಾಜಿಕ ಸತ್ಯ ಸಮನ್ವಯ  ನಾಟಕ. “ಲೋಕಾಯುಕ್ತರು ಬರುತ್ತಾರೆ”ಸ್ತುತಿ : ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರು, ಗಂಧದಕೋಠಿ. ಹಾಸನ.ಮೂಲ: ನಿಕೊಲಾಯ್ ಗೊಗೊಲ್.ಕನ್ನಡ ರೂಪ, ಸಂಗೀತ ನಿರ್ದೇಶನ ಧನಂಜಯ ದಿಯಾನ್ ರಂಗ ಪ್ರಯೋಗ ಹಾಸನದ ನಾಟ್ಯ ವೈಭವ, ರಂಗಸಿರಿ ಮತ್ತು ಜಿಲ್ಲಾ ಪತ್ರಕರ್ತರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ 3 ದಿನಗಳ ಕಾಲೇಜು ರಂಗೋತ್ಸವದಲ್ಲಿ 2ನೇ ದಿನ ಬುಧವಾರಸ್ತುತಿ : ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರು, ಗಂಧದಕೋಠಿ. ಹಾಸನ.ಮೂಲ: ನಿಕೊಲಾಯ್ ಗೊಗೊಲ್.ಕನ್ನಡ ರೂಪ, ಸಂಗೀತ ನಿರ್ದೇಶನ ಧನಂಜಯ ದಿಯಾನ್ ಅವರದು. ಬೆಳಿಗ್ಗೆ ಪ್ರದರ್ಶಿಸಿದ ನಾಟಕ ಲೋಕಾಯುಕ್ತರು ಬರುತ್ತಾರೆ. ಪ್ರಲೋಕಾಯುಕ್ತರು ಬರುತ್ತಾರೆ ನಾಟಕವು ವ್ಯಂಗ್ಯ, ಹಾಸ್ಯ ಮತ್ತು ಸಾಮಾಜಿಕ ಸತ್ಯಗಳ ಸಮನ್ವಯದಲ್ಲಿ ಮೂಡಿ ಬಂದ ಒಂದು ಶಕ್ತಿಯುತ ರಂಗಕೃತಿ. ಇದು ಮೂಲತಃ The Government Inspector ಎಂಬ ಪ್ರಸಿದ್ಧ ನಾಟಕದಿಂದ ಪ್ರೇರಿತವಾಗಿದ್ದು, Nikolai Gogol ಅವರ ಕೃತಿಯ ಆತ್ಮವನ್ನು ಕನ್ನಡದ ನೆಲದ ಸನ್ನಿವೇಶಕ್ಕೆ ತಂದು, ಧನಂಜಯ ದಿಯಾನ್ ಅವರು ಹೊಸ ಅರ್ಥಭರಿತ ರೂಪದಲ್ಲಿ ಮರು ಸೃಷ್ಟಿಸಿದ್ದಾರೆ. ಈ ನಾಟಕದ ಕೇಂದ್ರದಲ್ಲಿ ಇರುವ ವಿಷಯ ಭಯ!ಆದರೆ ಅದು ಸಾಮಾನ್ಯ ಭಯವಲ್ಲ. ಅದು ಅಧಿಕಾರಿಗಳ ಅಂತರಂಗದಲ್ಲಿರುವ ಅಪರಾಧ ಭಾವನೆಯ ಭಯ. ಲೋಕಾಯುಕ್ತರು ಬರುತ್ತಾರೆ ಎಂಬ ಒಂದು ವದಂತಿ ಮಾತ್ರವೇ ಸಂಪೂರ್ಣ ವ್ಯವಸ್ಥೆಯನ್ನು ನಡುಗಿಸುತ್ತದೆ. ಈ ಕಲ್ಪನೆ ನಾಟಕದ ಹೃದಯವಾಗಿದ್ದು, ಅಧಿಕಾರದ ಅಹಂಕಾರ, ಭ್ರಷ್ಟಾಚಾರ ಮತ್ತು ಸುಳ್ಳಿನ ಮೇಲೆ ಕಟ್ಟಿದ ವ್ಯವಸ್ಥೆಯ ದುರ್ಬಲತೆಯನ್ನು ಬಯಲಿಗೆಳೆಯುತ್ತದೆ.ನಾಟಕದಲ್ಲಿ ಪಟ್ಟಣದ ಮೇಯರ್ ಹಾಗೂ ಇತರೆ ಅಧಿಕಾರಿಗಳು ತಮ್ಮ ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ತೊಡಗುತ್ತಾರೆ. ಯಾರೂ ನೇರವಾಗಿ ಸತ್ಯವನ್ನು ಎದುರಿಸಲು ಸಿದ್ಧರಿರುವುದಿಲ್ಲ. ಆದರೆ ನಿಜವಾದ ಲೋಕಾಯುಕ್ತರು ಬಂದಿರಲಿ ಇಲ್ಲದಿರಲಿ ಅವರ ಭಯವೇ ಅವರನ್ನು ಒಳಗಿನಿಂದ ಒಡೆದುಹಾಕುತ್ತದೆ. ಇದು ಈ ನಾಟಕದ ಅತ್ಯಂತ ಪರಿಣಾಮಕಾರಿ ವ್ಯಂಗ್ಯ ವಿಡಂಬನೆ. ಧನಂಜಯ ದಿಯಾನ್ ಅವರ ರೂಪಾಂತರದಲ್ಲಿ ಈ ಕಥೆ ಕೇವಲ ಒಂದು ಆಡಳಿತ ವ್ಯವಸ್ಥೆಯ ವಿಮರ್ಶೆಯಾಗಿ ಉಳಿಯುವುದಿಲ್ಲ. ಅದು ಸಮಗ್ರ ಸಮಾಜದ ಪ್ರತಿಬಿಂಬವಾಗುತ್ತದೆ. ಲೋಕಾಯುಕ್ತರು ಇಲ್ಲಿ ಕೇವಲ ಒಂದು ಸಂಸ್ಥೆಯ ಹೆಸರು ಅಲ್ಲ.ಅದು ನಮ್ಮೊಳಗಿನ ಅಂತಃಕರಣ,ನಮ್ಮ ಪ್ರಜ್ಞೆ,ನಮ್ಮ ಸತ್ಯದ ಕಣ್ಣು.ಈ ನಾಟಕದ ಇನ್ನೊಂದು ವಿಶಿಷ್ಟತೆ ಎಂದರೆ ಇದನ್ನು ಮಹಿಳಾ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ ನಿರ್ದೇಶಕರು. ಸಾಮಾನ್ಯವಾಗಿ ಪುರುಷ ಪ್ರಧಾನವಾಗಿರುವ ಪಾತ್ರಗಳನ್ನು ಇಲ್ಲಿ ಮಹಿಳಾ ಧ್ವನಿಗಳ ಮೂಲಕ ಹೊಸ ರೀತಿಯಲ್ಲಿ ಅಭಿವ್ಯಕ್ತಿಸಲಾಗಿದೆ. ಇದರಿಂದ ನಾಟಕವು ಹೊಸ ಸಂವೇದನೆ,  ಹೊಸ ದೃಷ್ಟಿಕೋನವನ್ನು ಪಡೆಯುತ್ತದೆ. ಮಹಿಳೆಯರ ಅನುಭವ ಅವರ ಒಳ ಜಗತ್ತು  ಅವರ ಪ್ರಶ್ನೆಗಳು ಈ ನಾಟಕದ ಮೂಲಕ ಹೆಚ್ಚು ತೀವ್ರವಾಗಿ ಹೊರಹೊಮ್ಮುತ್ತವೆ.ಶೈಲಿಯಲ್ಲಿ, ನಾಟಕವು ಹಾಸ್ಯ ಮತ್ತು ವ್ಯಂಗ್ಯವನ್ನು ಬಳಸಿಕೊಂಡು ಗಂಭೀರ ವಿಷಯಗಳನ್ನು ಹೇಳುತ್ತದೆ. ಸಂಭಾಷಣೆಗಳಲ್ಲಿ ಲಯ, ಪ್ರಾಸ, ನಾಟಕೀಯ ತೀವ್ರತೆ ಕಂಡುಬರುತ್ತದೆ. ಕೆಲವೆಡೆ ಕಾಮಿಡಿ ದೃಶ್ಯಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತವೆ. ಅಂತೆಯೇ ಆ ನಗುವಿನ ಹಿಂದಿನ ಕಠಿಣ ಸತ್ಯವೂ ಗೋಚರಿಸುತ್ತದೆ. ಇದು  ನಾಟಕದ ಒಂದು ಶಕ್ತಿ.ಸಂಗೀತ, ಲಯಬದ್ಧ ಹಾಡುಗಳು ಮತ್ತು ರಂಗರೂಪಗಳು ನಾಟಕಕ್ಕೆ ಮತ್ತಷ್ಟು ಜೀವ ತುಂಬುತ್ತವೆ. ವಿಶೇಷವಾಗಿ ಲಂಚಾವತಾರ ನಿಲ್ಲಬೇಕು ಎಂಬ ಸಂದೇಶದ ಹಾಡುಗಳು ಕೇವಲ ಹಾಡುಗಳಲ್ಲಅವು ಒಂದು ಸಾಮಾಜಿಕ ಘೋಷಣೆ, ಒಂದು ಹೋರಾಟದ ನಾದವಾಗಿ ಹೊರಹೊಮ್ಮಿದೆ.ಕ್ಲೈಮಾಕ್ಸ್‌ನಲ್ಲಿ ನಾಟಕ ತನ್ನ ಶಿಖರವನ್ನು ತಲುಪುತ್ತದೆ. ಎಲ್ಲಾ ಭ್ರಮೆಗಳು ಒಡೆದುಹೋಗುತ್ತವೆ. ಸುಳ್ಳಿನ ಮೇಲಿರುವ ಕಟ್ಟಡ ಕುಸಿಯುತ್ತದೆ. ಪ್ರೇಕ್ಷಕರ ಮುಂದೆ ಉಳಿಯುವುದು ಒಂದೇ ಪ್ರಶ್ನೆನಿಜವಾದ ಲೋಕಾಯುಕ್ತರು ಯಾರು?ಹೊರಗಿನಿಂದ ಬರುವವನಾ?ಅಥವಾ ನಮ್ಮೊಳಗೇ ಇರುವ ನ್ಯಾಯ ಬುದ್ಧಿಯೇನಾ?ಒಟ್ಟಾರೆ ಲೋಕಾಯುಕ್ತರು ಬರುತ್ತಾರೆ ನಾಟಕವು ಕೇವಲ ಮನರಂಜನೆ ನೀಡುವ ಕೃತಿ ಅಲ್ಲ. ಅದು ಒಂದು ಜಾಗೃತಿ. ಒಂದು ಪ್ರತಿಬಿಂಬ. ಒಂದು ಎಚ್ಚರಿಕೆ.ಇದು ಪ್ರೇಕ್ಷಕರನ್ನು ನಗಿಸುತ್ತದೆ, ಯೋಚಿಸಲು ಪ್ರೇರೇಪಿಸುತ್ತದೆ, ಮತ್ತು ಕೊನೆಗೆಸತ್ಯದ ಎದುರು ನಿಲ್ಲುವ ಧೈರ್ಯವನ್ನು ನೀಡುತ್ತದೆ.ಇಲ್ಲಿ ನನ್ನ (ಗೊರೂರು ಅನಂತರಾಜು) ಒಂದೆರಡು ಅನುಭವಗಳು ನೆನಪಾದವು. ಹಿಂದೊಮ್ಮೆ  ಲೋಕಾಯುಕ್ತ ಡಿ.ವೈ.ಎಸ್.ಪಿ. ಯಾಗಿದ್ದವರು ನನ್ನ  ಕವಿ ಮಿತ್ರರು.  ಇವರ ಒಂದು ಹನಿಗವನ ಸಂಕಲನದ ವಿಮರ್ಶೆ  ಬರೆದಿದ್ದನು. ಹಿಂದೊಮ್ಮೆ ಇವರು ನಡೆಸಿದ  ರೈಡ್ ಗೆ ನಾನೇ  ಸಾಕ್ಷಿಯಾಗಿ ಹೋಗಿ ಬಾಲ್ಯದಲ್ಲಿ ನಾನು ಓದುತ್ತಿದ್ದ . ಎನ್.ನರಸಿಂಹಯ್ಯನವರ  ಪತ್ತೇದಾರಿ ಕಾದಂಬರಿ ಡಿಡೆಕ್ಟಿವ್ ಪತ್ತೇದಾರಿ ಪುರುಷೋತ್ತಮನ ಸಹಾಯಕ ಮೃತ್ಯುಂಜಯನ ಪಾತ್ರ ಮತ್ತು ಚಲನಚಿತ್ರನಟ ಬಾಲಕೃಷ್ಣ ಒಂದು ಸಿನಿಮಾದಲ್ಲಿ  ಹೇಳುತ್ತಿದ್ದ ಥ್ರಿಲ್ ರೋಮಾಂಚನ! ಸಂಭಾಷಣೆ ದೃಶ್ಯ ಎಲ್ಲಾ ಒಟ್ಟೊಟ್ಟಿಗೆ ನೆನಪಾದವು.. ನನ್ನ ಹಾಸ್ಯ ಸವಿ ಹನಿಗವನ ಸಂಕಲನದಕವಿಗವನಗಳು ಹೀಗಿದೆ.ಕವಿಗಳು ಶ್ರೀಮಂತರುಹಾಗೆಂದು ಲೋಕಾಯುಕ್ತರುದಾಳಿ ಮಾಡಿದರೆ ಸಿಗಬಹುದುಶಾಲು ಕೃತಿಗಳು ನಿಘಂಟುಸಿಗಲಾರದು ಗಂಟುಏಕೆಂದರೆ ಇವರು ಬರೇಭಾವನೆಗಳ ಹೃದಯ ಶ್ರೀಮಂತರು ಇನ್ನೂ   ನಿರ್ದೇಶಕರು Dhananjaya Diyan ಅವರು ಕನ್ನಡ ರಂಗಭೂಮಿಯಲ್ಲಿ ವೈಶಿಷ್ಟ್ಯಮಯ ಚಿಂತನೆ, ಸಂವೇದನಾಶೀಲ ಅಭಿವ್ಯಕ್ತಿ ಮತ್ತು ಆಳವಾದ ಕಲಾತ್ಮಕ ದೃಷ್ಟಿಯಿಂದ ಗುರುತಿಸಿಕೊಂಡಿರುವ ನಿರ್ದೇಶಕ, ನಟನಾ ತರಬೇತುದಾರ ಹಾಗೂ ಸಾಹಿತ್ಯಕರ್ತ. ನಿನಾಸಂನಲ್ಲಿ ಪಡೆದ ರಂಗಶಿಕ್ಷಣದ ಆಧಾರದ ಮೇಲೆ, ಅವರು ರಂಗಭೂಮಿಯನ್ನು ಕೇವಲ ಮನರಂಜನೆಗೆ ಸೀಮಿತಗೊಳಿಸದೆ, ಸಮಾಜದ ಒಳನೋಟಗಳನ್ನು ಅನಾವರಣಗೊಳಿಸುವ ಶಕ್ತಿಯಾಗಿ ಬಳಸುತ್ತಾರೆ.40ಕ್ಕೂ ಹೆಚ್ಚು ರಂಗತರಬೇತಿ ಶಿಬಿರಗಳನ್ನು ನಡೆಸಿ, ಅನೇಕ ಯುವ ಪ್ರತಿಭೆಗಳನ್ನು ರೂಪಿಸಿರುವ ಇವರು, ಕಲಿಕೆಯನ್ನು ಅನುಭವಾತ್ಮಕ ಪ್ರಕ್ರಿಯೆಯಾಗಿ ರೂಪಿಸುವಲ್ಲಿ ವಿಶೇಷತೆ ಹೊಂದಿದ್ದಾರೆ. Andhayuga, Tughlaq, Kusumabaale ಸೇರಿದಂತೆ ಹಲವು ಪ್ರಮುಖ ನಾಟಕಗಳನ್ನು ನಿರ್ದೇಶಿಸಿರುವ ಇವರ ಪ್ರತಿಯೊಂದು ಕೃತಿಯಲ್ಲೂ ಭಾವನೆ, ದಾರ್ಶನಿಕತೆ ಮತ್ತು ಜೀವನದ ಸೂಕ್ಷ್ಮತೆಗಳನ್ನು ಒಳಗೊಂಡಿರುತ್ತವೆ.‘Innu Saku Badukiddu ಎಂಬ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮ ಸ್ಪರ್ಶ ಮೂಡಿಸಿರುವ ಇವರು ಬರವಣಿಗೆ, ನಿರ್ದೇಶನ ಮತ್ತು ತರಬೇತಿಯ ಮೂಲಕ ಸಮಗ್ರ ಕಲಾ ವ್ಯಕ್ತಿತ್ವವಾಗಿ ಬೆಳೆದಿದ್ದಾರೆ. ಇವರ ದೃಷ್ಟಿಯಲ್ಲಿ ರಂಗಭೂಮಿ ಒಂದು ಸಾಧನೆ ಮನಸ್ಸುಗಳನ್ನು ಸ್ಪರ್ಶಿಸಿ, ಚಿಂತನೆಗೆ ಪ್ರೇರೇಪಿಸುವ ಶಕ್ತಿಯುತ ಸಾಧನ. ಇದಿಷ್ಟು ಮಾಹಿತಿಯನ್ನು ಹಂಚಿಕೊಂಡ  ಇದೇ ಧನಂಜಯ್ ಅವರು 15 ವರ್ಷಗಳ ಹಿಂದೆ ಇದೇ ರಂಗಸಿರಿ ಸಂಘಟನೆಯಲ್ಲಿ ಹಾಸನದಲ್ಲಿ ನಡೆದ ಕಾಲೇಜು ರಂಗೋತ್ಸವದಲ್ಲಿ ಹಾಸನ ಸರ್ಕಾರಿ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿನಿಯರಿಗೆ ವಿಶ್ರಾಂತ ನಾಟಕ ನಿರ್ದೇಶಿಸಿದ್ದರು. ಇದರ ವಿಮರ್ಶಾ ಬರಹ 2011 ರಲ್ಲಿ ಪ್ರಕಟವಾಗಿರುವ ನನ್ನ ರಂಗಪ್ರಯೋಗ ಕೃತಿಯಲ್ಲಿಯೂ ದಾಖಲಾಗಿದೆ ಗೊರೂರು ಅನಂತರಾಜು, ಹಾಸನ9449462879ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, 3ನೇ ಕ್ರಾಸ್,ಹಾಸನ- .573201

“ಲೋಕಾಯುಕ್ತರು ಬರುತ್ತಾರೆ” ವ್ಯಂಗ್ಯ, ಹಾಸ್ಯ, ಸಾಮಾಜಿಕ ಸತ್ಯ ಸಮನ್ವಯ  ನಾಟಕ.ಗೊರೂರು ಅನಂತರಾಜು Read Post »

ಕಾವ್ಯಯಾನ

ಡಾ. ಪುಷ್ಪಾವತಿ ಶಲವದಿಮಠ ಅವರ ಕವಿತೆ “ಅರಿವಿನ ದಾರಿ ಹುಡುಕುತ”

ಕಾವ್ಯ ಸಂಗಾತಿ ಡಾ. ಪುಷ್ಪಾವತಿ ಶಲವದಿಮಠ “ಅರಿವಿನ ದಾರಿ ಹುಡುಕುತ” ಇದ್ದು ಬಿಡು ಸುಮ್ಮನೆ   ಸುಮ್ಮನಿದ್ದುಬಿಡುಹೊರಟು ಬಿಡುಬುದ್ಧನಂತೆ ಎದ್ದು ಬಿಡು ಈ ಜಗದ ಜಂಜಡ ಕಳೆದುಕೊಂಡು ಬಿಡು ಕೊಡವಿಕೊಂಡು ಬಿಡು  ಹೊರಟು ಬಿಡು ನೀನುನಡೆವ ದಾರಿ ದೊಡ್ಡದಿದೆಕಲ್ಲು ಮುಳ್ಳು ಚುಚ್ಚಬಹುದುರಕ್ತ ಒಸರಬಹುದುಮುಲಾಮು ಹಚ್ಚಿಕೋಪಟ್ಟಿ ಕಟ್ಟಿಕೋನಡೆಯುವುದು  ಮಾತ್ರ ಬಿಡಬೇಡಎಲ್ಲೂ ನಿಲ್ಲಬೇಡಾನಡೆಯುತ್ತಲೇ ಇದ್ದುಬಿಡು ನಿನ್ನ ಅಂಜಿಸುವವರು ಹೀಯಾಳಿಸುವವರುಅನುಮಾನಿಸುವವರುಹಿಂದೆಳೆಯುವವರುತೆಗಳುವವರುಬೈಯುವವರುಇರಬಹುದು ನೂರೆಂಟು ಮಂದಿಬಿಟ್ಟು ಬಿಡು ಅವರಿವರ ಮಾತುಗಳಮನದ ಮಾತು ಕೇಳು ಸಾಕು ನಿನ್ನ ಕಷ್ಟ ಕಣ್ಣಿರಿಗೆ ಕರುಗುವರಿಲ್ಲಕರಗಲೆಂದು ಕಾಯುತ್ತ ಬೇಡಿಕೊಳ್ಳಬೇಡಈ ದುರ್ಬಲತೆಯ ನೀಗಲೇ ಬೇಕು ನೀನುನಿನಗೆ ನೀನು ಆಸರೆಯಾಗಬೇಕುಕಾಲ ನಿಲ್ಲುವುದಿಲ್ಲನೀನು ನಿಂತರೆ ಹೇಗೆ?!ತಳ್ಳಿಕೊಂಡೆ ಹೋಗಿಬಿಡುವುದು ಕಾಲಜೊತೆಗೆ ನಿಲ್ಲುವರಿಲ್ಲನಿಲ್ಲಬೇಡ  ನೀನು ಚಲಿಸುತ್ತಲಿರುಯಾರಿಗೂ ಕಾಯಬೇಡಯಾರೂ ಕಾದಿಲ್ಲ ನಿನಗಾಗಿ ಒಂಟಿ ಪಯಣವೆಂದು ಬೇಸರಸದಿರುದೂರದ  ದಡ ಸೇರಲುಒಂಟಿಯಾಗಿಯೇ ನಡೆಯಬೇಕುನಿನ್ನ ಪಾಪ ಪುಣ್ಯಗಳ ಮೂಟೆ ನೀನೇ ಹೆಗಲಿಗೆರಿಸಿಕೊಳ್ಳಬೇಕುಪಾಲುದಾರರಿಲ್ಲ ಪಾಪಗಳಿಗೆನಡೆದು ಬಿಡು ಮೋಹ ಮಮಕಾರಗಳ ತೊರೆದುಬುದ್ಧ ಬಸವ ಅಂಬೇಡ್ಕರ್ ನಡೆಯಲಿಲ್ಲವೇಅವರ ದಾರಿಯೇನು ಸಲೀಸಾಗಿತ್ತೆ?! ಬೆಳಕಿನ ಅರಮನೆಗೆನೂರಾರು ದಾರಿಗಳಿವೆಯಂತೆನಡೆದು ಬಿಡು ಬೆಳಕಿನೆಡೆಗೆಸವಿ ಸಗ್ಗ ಪಡೆಯಲುಇಹದ ಕಗ್ಗ ಬಿಡಿಸಿಕೊಳ್ಳಬೇಕುಬಿಡಿಸಿಕೊಂಡು ಬಿಡುಅಲ್ಲಮ ನಡೆದ ದಾರಿಅಕ್ಕ ನಡೆದ ದಾರಿನಿನ್ನೆದುರಿಗಿದೆಆ ದಾರಿಗುಂಟ ನಡೆದು ಬಿಡುಸಿಗಬಹುದು ನಿನಗೆಅರಿವಿನ ಮನೆಬೆಳಕಿನ ಅರಮನೆ ತೊರೆದು ಬಿಡು ಸಾವಿರ ಚಿಂತೆಇದ್ದು ಬಿಡು ಬುದ್ಧನಂತೆಹೊರಟು ಬಿಡು ಹೊರಟು ಬಿಡುಬಿಟ್ಟು ಅವರಿವರ ಚಿಂತೆಅರಿವ ದಾರಿ ಹುಡುಕುತಕನಕ ಶರೀಫರು ಮೀಟಿದತಂಬೂರಿ ಮೀಟತ…..  ಡಾ. ಪುಷ್ಪಾವತಿ ಶಲವದಿಮಠ

ಡಾ. ಪುಷ್ಪಾವತಿ ಶಲವದಿಮಠ ಅವರ ಕವಿತೆ “ಅರಿವಿನ ದಾರಿ ಹುಡುಕುತ” Read Post »

ಕಾವ್ಯಯಾನ

ಶಾಲಿನಿ ರುದ್ರಮುನಿ ಹುಬ್ಬಳ್ಳಿ ಅವರ ಕವಿತೆ “ನಾನು ಅಪೂರ್ಣಳಲ್ಲ”

ಕಾವ್ಯಸಂಗಾತಿ ಶಾಲಿನಿ ರುದ್ರಮುನಿ ಹುಬ್ಬಳ್ಳಿ “ನಾನು ಅಪೂರ್ಣಳಲ್ಲ” pic:gemini ನಾನು ಪರಿಪೂರ್ಣ ತಾಯಿ ಅಲ್ಲಈ ಒಪ್ಪಿಗೆನನ್ನ ಸೋಲಿನ ದನಿಯಂತು ಅಲ್ಲ!, ಬದುಕಿನ ಸತ್ಯದ ನಿಸ್ಸಂಶಯ ಮೌನದಿನವೆಲ್ಲಾ ಹರಿದಾಡುವಕ್ಷಣಗಳ ನಡುವೆ,ನನ್ನ ಉಸಿರು ಕೂಡಾ ಕೆಲಸದಲಯಗತಿಯಲ್ಲೆ ಸಾಗುತ್ತದೆ,ಕೈಗಳಲ್ಲಿ ಮನೆಯ ಒಪ್ಪ ಓರಣ,ಮನಸ್ಸಿನಲ್ಲಿ ನಿನ್ನ ನಾಳೆಗಳು!, ಕಣ್ಣುಗಳಲ್ಲಿ ಅನೇಕ ಪ್ರಶ್ನೆಗಳ ನೆರಳು,ಕೆಲವೊಮ್ಮೆಧ್ವನಿ ಎತ್ತರವಾಗುತ್ತದೆ,ಅದು ಕೋಪದ ಭಾಷೆಯಲ್ಲ,ದಣಿವಿನ ಅನುವಾದ, ಸಹನೆಯ ಹೂವಲ್ಲುಮುಳ್ಳಿನ ಕೊನೆ,ಆದರೂ, ಅದರ ಬೇರುಪ್ರೀತಿಯಲ್ಲೇ ನಾಟಿದೆ, ನನ್ನೊಳಗೆಒಂದು ನಿರಂತರ ಸಂಭಾಷಣೆ,“ಸಾಕ ನಾನು ?”“ಸಾಕ್ಷಮಳಾ ನಾನು?”ಈ ಪ್ರಶ್ನೆಗಳೇನನ್ನ ತಾಯಿತನದ ಪ್ರತಿದಿನದ ಪರೀಕ್ಷೆ.ಕೆಲ ಕ್ಷಣಗಳಲ್ಲಿನಾನು ಕಳೆದುಹೋಗುವೆ,ಪಾತ್ರಗಳ ನಡುವೆ,ನೀರೀಕ್ಷೆಗಳ ಗೋಡೆ ಬಿರುಕಿನಲಿ,ಜವಾಬ್ದಾರಿಗಳ ಗದ್ದಲದಲ್ಲಿ,ನನ್ನನ್ನೇ ಹುಡುಕುವ ಪ್ರಯತ್ನದಲ್ಲಿ ಕಡೆಗೆ,ಆದರೂ!ತಾಯಿಯಾಗಿರುವುದುಪರಿಪೂರ್ಣತೆಯ ಮಾನದಂಡವಲ್ಲ ಅಲ್ವಾ?,ಅದು ಅಪೂರ್ಣತೆಯನ್ನುಸ್ವೀಕರಿಸುವ ಧೈರ್ಯ.ನಾನು ಸಂಪೂರ್ಣಳಲ್ಲ,ಆದರೆ ನಿನಗಾಗಿ ನಾನುಪ್ರತಿ ದಿನ ಪುನಃ ಹುಟ್ಟುತ್ತೇನೆ,ಸೂರ್ಯನಂತೆ, ನನ್ನ ಪ್ರೀತಿ,ಅದು ನಿಯಮಗಳಿಗೆಸಿಕ್ಕದ ಒಂದು ನದಿ,ತಪ್ಪುಗಳನ್ನೂ ತೊಳೆದುಮತ್ತೆ ಮತ್ತೆ ನಿನ್ನತ್ತ ಹರಿಯುವನಿಷ್ಕಳಂಕ ಸತ್ಯ ಹರಿವು,ನಾನು ಪರಿಪೂರ್ಣ ತಾಯಿ ಅಲ್ಲ,ಆದರೆನಿನ್ನನ್ನು ಪ್ರೀತಿಸುವ ನನ್ನ ಹೃದಯಅದು ಎಂದಿಗೂ ಅಪೂರ್ಣವಾಗುವುದಿಲ್ಲ… ಶಾಲಿನಿ ರುದ್ರಮುನಿ ಹುಬ್ಬಳ್ಳಿ

ಶಾಲಿನಿ ರುದ್ರಮುನಿ ಹುಬ್ಬಳ್ಳಿ ಅವರ ಕವಿತೆ “ನಾನು ಅಪೂರ್ಣಳಲ್ಲ” Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ-15 ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್‌ ಚೇತನ. ಲೇ:ಸವಿತಾ ದೇಶಮುಖ  ೧೯೪೭ರ ಸಮಯ… ದೇಶಕ್ಕೆ ಸ್ವಾತಂತ್ರ್ಯದ ಸುಳಿವು ಸಿಗುತ್ತಿದ್ದಂತೆಯೇ, ಜಯದೇವಿ ತಾಯಿಯವರು ಸ್ತ್ರೀಯರನ್ನು ಒಗ್ಗೂಡಿಸಿ ಸಭೆಗಳನ್ನು ನಡೆಸಲಾರಂಭಿಸಿದರು.ಸ್ವಾಭಿಮಾನಿ ಸಮಾಜ, ಸ್ತ್ರೀಯರ ಕರ್ತವ್ಯ ಮತ್ತು ಸ್ವಾತಂತ್ರ ಭಾರತದ ಬದುಕಿನ ಬಗ್ಗೆ ಊರು-ಊರುಗಳಲ್ಲಿ ಜಾಗೃತಿ ಮೂಡಿಸಿದರು. ಮನೆಯಲ್ಲಿ ಗಂಡನ ಆರೋಗ್ಯ ಸರಿಯಿಲ್ಲದಿದ್ದರೂ, ಕುಟುಂಬದ ಬೆಂಬಲದೊಂದಿಗೆ ಅವರು ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಕೊಂಡರು. ಕೊನೆಗೂ… ಆ ಮಹಾನ್ ಕ್ಷಣ ಬಂತು ಭಾರತ ಮಾತೆ ಬಿಡುಗಡೆ ಹೊಂದುವ ದಿನ ಬಂದೇಬಿಟ್ಟಿತು… ಭಾರತದ ಕೊನೆಯ ಬ್ರಿಟನ್  ವೈಸರಾಯ ಲೂಯಿಸ್ ಲಾರ್ಡ್ ಮೌಂಟ್ ಬೆಂಟನ್   ಭಾರತಕ್ಕೆ ಸ್ವಾತಂತ್ರ್ಯವನ್ನು ಘೋಷಿಸಿದ…… ೧೪-೮-೧೯೪೭ ರಂದು ದೇಶ ಸ್ವಾತಂತ್ರ್ಯವಾಗುವ ಸಂತಸದ ಮುನ್ನಾ ದಿನ…. ಅಂದು ಸಂಜೆ ತಾಯಿ ಸಂಗವ್ವನವರು,  ಅಜ್ಜಿಯಂದಿರಾದ ಬಸವ್ವಬಾಯಿ ವಾರದ ಮತ್ತು ಗೌರವ್ವ ಬಾಯಿ ವಾರದ ಮುಂತಾದ ಹಿರಿಯರೊಡನೆ ಜಯದೇವಿ ತಾಯಿಯವರು ಶಿವಯೋಗಿ ಸಿದ್ದರಾಮೇಶ್ವರನ ಮಂದಿರದಲ್ಲಿ ಅವನ ಸನ್ನಿಧಿಗೆ ಬಂದರು …ಮೊಟ್ಟಮೊದಲ ಬಾರಿಗೆ ಸಿದ್ದರಾಮನ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಿದರು ‌.ಇಡೀ ರಾತ್ರಿ ಅಲ್ಲಿಯೇ ಉಳಿದರು…. ಆ ಕಡೆ ದೇಶ ಸ್ವಾತಂತ್ರವಾಗುತ್ತಿದ್ದರೆ ಈಕಡೆ ಎಲ್ಲ ತಾಯಿಯಂದಿರು ಮಂದಿರದಲ್ಲಿ ಪೂಜೆ ಪುನಸ್ಕಾರ ಸಲ್ಲಿಸುತ್ತಿದ್ದರು‌. ಧ್ಯಾನ ಭಜನೆ ಜಾಗರಣೆಯು ಪ್ರಾರಂಭವಾಗಿತ್ತು. ೧೫-೮-೧೯೪೭ ರ ಸುಪ್ರಭಾತದಲ್ಲಿ ಗೌರವ್ವಬಾಯಿ ವಾರದ ಧ್ವಜಾರೋಹಣ ಮಾಡಿದರು.  ಎಲ್ಲರೂ ಕೂಡಿ ಇಡೀ ಊರಿಗೆ ಊಟ ಕೊಟ್ಟರು .ಸ್ವಾತಂತ್ರದ ಸಂಭ್ರಮಾಚರಣೆ ಮಾಡಿದರು. ಸ್ವಾತಂತ್ರ್ಯ ಸಿಗುವ ಹಿಂದಿನ ದಿನದಿಂದ ಅಂದರೆ ೧೪ ರಿಂದ ೧೮ ತಾರೀಖಿನ ಮುಂಜಾನೆಯವರೆಗೂ  ಮೂರು ದಿನ ಮತ್ತು ನಾಲ್ಕು ರಾತ್ರಿಗಳು ಸತತವಾಗಿ ಎಲ್ಲ ತಾಯಂದಿರು ದೇವಾಲಯದ ಆವರಣದಲ್ಲಿಯೇ ಹಗಲು ಹೊತ್ತು ಚರಕದ ಮೂಲಕ ನೂಲ ತೆಗೆಯುವ ನೇಯ್ಗಗೆ ಕಾಯಕ ಮತ್ತು ಅನ್ನದಾಸೋಹ ಮಾಡಿದರು….ರಾತ್ರಿ ಹೊತ್ತು ಸಿದ್ದರಾಮನ ಸನ್ನಿಧಿಯಲ್ಲಿ ಕಾಲ ಕಳೆದರು.ಊರಿನ ಎಲ್ಲರಿಗೂ ಅನ್ನದಾಸೋಹ ನಡೆಯಿತು.ಮೂರು ದಿನಗಳ ಕಾಲ ಸೇವೆ, ಭಕ್ತಿ ಮತ್ತು ಕಾಯಕ ಒಂದಾಗಿ ಬೆಸೆದವು. ಭಾರತಾಂಬೆಯ ಬಿಡುಗಡೆಯ ಸಂದರ್ಭವನ್ನು ಜಯದೇವಿ ತಾಯಿಯವರು ನಮ್ಮೆದುರಿಗೆ ಈ ರೀತಿಯಾಗಿ ವಿವರಿಸಿ ಹೇಳುತ್ತಿದ್ದರು…….  ಭಾರತಭೂಮಿಯ ಇತಿಹಾಸದಲ್ಲಿ ಒಂದು ಹೊಸ ಬೆಳಗಿನ ಉದಯವಾಗಿತ್ತು. ಶತಮಾನಗಳ ದಾಸ್ಯದಿಂದ ಬಳಲಿದ ಜನರ ಹೃದಯಗಳಲ್ಲಿ, ಆ ದಿನ ಉದಯಿಸಿದ ಸೂರ್ಯ ಕೇವಲ ಬೆಳಕನ್ನ ಅಲ್ಲಸ್ವಾತಂತ್ರ್ಯದ ಉಸಿರಾಟಕ್ಕೆ ಉಸಿರು ತಂದನು.  “ಭಾರತ ದೇಶಕ್ಕೆ ಸ್ವಾತಂತ್ರ್ಯ”……ಘೋಷಣೆ ಆಗುತ್ತಿದ್ದಂತೆ, ದೇಶದಾದ್ಯಂತ ಒಂದು ಅದ್ಭುತ ಭಾವನಾತ್ಮಕ ಅಲೆ ಹರಡಿತು.ಗ್ರಾಮದಿಂದ ನಗರವರೆಗೆ, ಶ್ರೀಮಂತರಿಂದ ಬಡವರವರೆಗೆ ಪ್ರತಿ ಹೃದಯದಲ್ಲೂ ಒಂದೇ ಮಾತು……“ನಾವು ಸ್ವತಂತ್ರರು!”ರಾತ್ರಿಯ ಮಧ್ಯದಲ್ಲಿ ರೇಡಿಯೋಗಳ ಮುಂದೆ ಕುಳಿತು ಜನರ ಕಣ್ಣುಗಳು ಕಣ್ಣೀರಿನಿಂದ ತುಂಬಿಕೊಂಡವು……ಆ ಕಣ್ಣೀರು… ಅನೇಕ ಶೂರರು ವೀರರ ತ್ಯಾಗ ಬಲಿದಾನದ ಕನಸು ನೆರವೇರಿದ ಸಂತಸದ ಕಣ್ಣೀರು……!!!ಎಲ್ಲಿ ನೋಡಿದರಲ್ಲಿ ಹಬ್ಬದ ಸಂಭ್ರಮದ ವಾತಾವರಣಮಕ್ಕಳು ಯುವಕರು ಹಿರಿಯರು ಓಡಾಡುತ್ತಾ “ವಂದೇ ಮಾತರಂ” ಎಂದು ಕೂಗುತ್ತಿದ್ದರು, ಮಹಿಳೆಯರು ಮನೆ ಮುಂಭಾಗ ರಂಗೋಲಿ ಹಾಕಿ, ದೀಪ ಬೆಳಗಿಸಿ ಹಬ್ಬ ಆಚರಿಸುತ್ತಿದ್ದರು, ಎಲ್ಲಹಳೆಯ ಕಷ್ಟಗಳನ್ನು ಮರೆತು ಎಲ್ಲರೂ ಪರಸ್ಪರ ಅಪ್ಪಿಕೊಂಡು ಹರ್ಷ ವ್ಯಕ್ತಪಡಿಸುತ್ತಿದ್ದರು. ರಸ್ತೆಗಳು ಜನಸಾಗರದಿಂದ ತುಂಬಿ ಹೋಗಿದ್ದವು.ತ್ರಿವರ್ಣ ಧ್ವಜವು ಗಾಳಿಯಲ್ಲಿ ಹಾರಾಡುತ್ತಿತ್ತು…… *ಜನರ ಹೃದಯದಲಿ ಗರ್ವದ ಬಾವುಟ ಹಾರಾಡುತಿತ್ತು..*ಜನರು ನೃತ್ಯ ಮಾಡಿ, ಹಾಡಿ, ಸಿಹಿ ಹಂಚಿಕೊಂಡು ಉಲ್ಲಾಸದಲ್ಲಿ ಮುಳುಗಿದ್ದರು. ಅಂದು ಕೆಲವರು ತಮ್ಮ ಜೀವವನ್ನು ತ್ಯಾಗ ಮಾಡಿದವರನ್ನು ನೆನೆದು ಮೌನವಾಗಿ ಕಣ್ಣೀರಿಟ್ಟರು.ಸುಭಾಷ್ ಚಂದ್ರ ಬೋಸ್- ಭಗತ್ ಸಿಂಗ್ ಹೀಗೆ ಅನೇಕ ವೀರರ ಬಲಿದಾನವೇ ಈ ಸ್ವಾತಂತ್ರ್ಯದ ಬೆಲೆ ಎಂಬ ಅರಿವು ಜನರಲ್ಲಿ ಗಾಢವಾಗಿತ್ತು.ಹೃದಯಗಳಲ್ಲಿ ಒಂದೇ ಭಾವನೆ….“ಇದು ನಮ್ಮ ದೇಶ… ನಮ್ಮ ಸ್ವಾತಂತ್ರ್ಯ… ನಮ್ಮ ಭವಿಷ್ಯ!”ಆ ದಿನದ ಹರುಷವನ್ನು ಪದಗಳಲ್ಲಿ ಸಂಪೂರ್ಣವಾಗಿ ಹಿಡಿಯಲು ಸಾಧ್ಯವಿಲ್ಲ.ಅದು ನಮ್ಮ ದೇಶದ ಪುನರ್ಜನ್ಮ ಸಂದರ್ಭ….ದೇಶದ ಆತ್ಮ ಪುನಃ ಹುಟ್ಟಿದ ಕ್ಷಣ…….ಆ ಕ್ಷಣದಲ್ಲೇ ಜನರು ಭವಿಷ್ಯದ ಕನಸುಗಳನ್ನು ಕಟ್ಟಿಕೊಂಡರು….ನಮ್ಮ ಭಾರತ ದೇಶವು ಅಂದಿನಿಂದಬಡತನವಿಲ್ಲದ ದೇಶ, ಸಮಾನತೆಯ ಸಮಾಜ, ಶಾಂತಿಯ ಭಾರತ ಕಟ್ಟವ ಕನಸು ಕಂಡುಕೊಳ್ಳಲಾರಂಭಿಸಿದ್ದೇವು…ಆದರೆ…ಆ ಹರುಷದ ನಡುವೆಯೇ ವಿಭಜನೆಯ ನೋವು ಕೂಡ ಎಲ್ಲ ಹೃದಯಗಳನ್ನು ಕಾಡುತ್ತಿತ್ತು. ಆದರೂ, ಆ ದಿನದ ಸಂತೋಷದ ಹೊಳೆಯು ಆ ನೋವನ್ನು ಸಹ ಮಸುಕಾಗಿಸಿತು.೧೯೪೭ ರ ಆ ದಿನ…ಭಾರತದ ಪ್ರತಿಯೊಂದು ಹೃದಯವೂ ಒಂದೇ ಲಯದಲ್ಲಿ ಹಾಡುತಿತ್ತು…….*ಜೈ ಹಿಂದ*.. ಜೈ ಹಿಂದ್… ಭಾರತ ಮಾತೆಗೆ ಜಯವಾಗಲಿ…. ಭಾರತ ಮಾತಾ ಕಿ ಜೈ ಎನ್ನುವ ಕೂಗು ಎಲ್ಲಡೇಗೂ ಕೇಳುತ್ತಿತ್ತು…….!!!! ಭಾರತೀಯರು ಸ್ವಾತಂತ್ರ್ಯದ ದಿನಗಳನ್ನು ಅನುಭವಿಸುವದ್ರಲ್ಲಿಯೇ ದೇಶಕ್ಕೆ ಒಂದು ದೊಡ್ಡ ಅಘಾತ ಕಾದಿತ್ತು ….ಸ್ವಾತಂತ್ರ ಲಭಿಸಿದ ಕೆಲವು ತಿಂಗಳೊಳಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹತ್ತೆ ಆಗಿತ್ತು……..ಈ ದುರಂತ ಜಯದೇವಿ ತಾಯಿಯವರನ್ನು ಬಹಳ ದುಃಖಕ್ಕೆ ಇಡುಮಾಡಿತ್ತು…  ತಾಯಿಯವರು ಹೇಳುತ್ತಿದ್ದಂತೆ ಗಾಂಧೀಜಿಯವರು ತೀರಿಕೊಂಡಾಗ ಇಡೀ ದೇಶವೇ ಸ್ಮಶಾಣದ ಮೌನದಲಿ ಮುಳಗಿತ್ತು.. ಅಘಾತಕ್ಕೆ ಒಳಗಾಗಿತ್ತು…ಗಾಂಧೀಜಿಯವರ ಹತ್ಯೆ (೧೯೪೮ ಜನವರಿ ೩0) ದೇಶದ ಇತಿಹಾಸದಲ್ಲಿ ಅತಿ ದುಃಖಭರಿತ ಕ್ಷಣವಾಗಿತ್ತು….. ಜನ- ಮನಗಳನ್ನು ತಲ್ಲಣಗೊಳಿಸಿತು. ಜಯದೇವಿ ತಾಯಿಯವರು ಈ ಸುದ್ದಿಯನ್ನು ಕೇಳಿದಾಗ ಅವರ ಮನ ಕುಸಿದುಹೋಯಿತು. ….“ದೇಶಕ್ಕೆ ಅಹಿಂಸೆಯ ದೀಪ ಹಚ್ಚಿದ ಮಹಾತ್ಮನನ್ನು ಕತ್ತಲೆಯು ನುಂಗಿದೆ. ಅಹಿಂಸೆಯ ಪಾಠ ಹೇಳಿಕೊಟ್ಟ ಮಹಾತ್ಮರು ಹಿಂಸೆಯ ಅಟ್ಟಹಾಸಕ್ಕೆಬಲಿಯಾದರು….ಅವರು ಬದುಕಿದ್ದರೆ ನಮ್ಮ ಹಾದಿ ಬೆಳಗುತ್ತಿತ್ತು… ಈಗ ನಮ್ಮೊಳಗೆ ನಾವು ಬೆಳಕಾಗಬೇಕು.ಗಾಂಧೀಜಿಯವರ ದೇಹ ಹೋಗಿರಬಹುದು, ಆದರೆ ಅವರ ತತ್ತ್ವಗಳು ಸಾಯುವುದಿಲ್ಲ” ಎಂದು ಜನರಿಗೆ ಧೈರ್ಯ ತುಂಬಿದರು.ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯಿತು.. ಜೊತೆಗೆ ಹೃದಯದಲ್ಲಿ ಒಂದು ದಿಟ್ಟ ಸಂಕಲ್ಪ ಹುಟ್ಟಿತು….. ಗಾಂಧೀಜಿಯ ಆಚಾರ ವಿಚಾರಗಳನ್ನು ಮುಂದುವರಿಸಿಕೊಂಡು ಹೋಗುವ ಪಣತೊಟ್ಟರು. ದೇಶದಾದ್ಯಂತ .. ಜನರ ನೋವು ಆಕ್ರೋಶದಲಿ ಮೂಳಗಿರುವುದನ್ನು ನೋಡಿದಾಗ….. ಗಾಂಧೀಜಿಯವರು ಜನರ ಮೇಲೆ ಅದೆಷ್ಟು ಪ್ರಭಾವ ಬೀರಿದ್ದರು ಎನ್ನುವುದು ತೋರುತ್ತಿತ್ತು….“ಇನ್ನು ಮುಂದೆ ದೇಶಕ್ಕೆ ದಾರಿ ತೋರುವರು ಯಾರು?! ಎಂಬ ಪ್ರಶ್ನೆ ಜನರನ್ನು ಕಾಡಿತು.ಹೊಸತಾಗಿ ಸಿಕ್ಕ ಸ್ವಾತಂತ್ರ್ಯದ ಸ್ಥಿರತೆಗೆ ಬಗ್ಗೆ ಯೋಚಿಸಿ ಜನರಲ್ಲಿ ಭಯ ಉಂಟಾಯಿತು. ಜೊತೆ ಜೊತೆಗೆ ಧರ್ಮ, ಜಾತಿ ಭೇದಗಳಿಂದ ದೂರ ಇರಬೇಕು ಎಂಬ ಅರಿವು ಮೂಡಿಸುವ ಸಲುವಾಗಿಗ್ರಾಮಗಳಲ್ಲಿ, ನಗರಗಳಲ್ಲಿ ಶೋಕ ಸಭೆಗಳು ನಡೆದಸಿದರು….. ಗಾಂಧೀಜಿಯವರು ಬೋಧಿಸಿದ ಅಹಿಂಸೆ, ಸತ್ಯದ ಮಾರ್ಗವನ್ನು ಮತ್ತೆ ನೆನಪಿಸಿಕೊಟ್ಟರು .ಜನರು ತಮ್ಮೊಳಗಿನ ನಾಯಕತ್ವವನ್ನು ಹುಡುಕಲು ಪ್ರೇರೇಪಿಸಿದರು.“ನಾವು ಗಾಂಧೀಜಿಯವರಂತೆ ಬದುಕಬೇಕು” ಎಂಬ ಮನೋಭಾವನ್ನು ಬೆಳೆಸಲು ಸತತವಾಗಿ ಪ್ರಯತ್ನಿಸಿದರು .ಜಯದೇವಿ ತಾಯಿಯವರು ಜನರನ್ನು ಉದ್ದೇಶಿಸಿ“ಗಾಂಧೀಜಿಯವರ ರಕ್ತದ ಪ್ರತಿಯೊಂದು ಹನಿ ನಮ್ಮ ಹೃದಯದಲ್ಲಿ ದೇಶಭಕ್ತಿಯ ಬೀಜವಾಗಬೇಕು.ಕೋಪದಿಂದ ಅಲ್ಲ, ಪ್ರೀತಿಯಿಂದ ಈ ದೇಶವನ್ನು ಕಟ್ಟೋಣ…..ಗಾಂಧೀಜಿಯವರ ಹತ್ಯೆ ಕೇವಲ ಒಬ್ಬ ಮಹಾನ್ ವ್ಯಕ್ತಿಯ ಮರಣವಲ್ಲ,ಅದು ಒಂದು ಯುಗದ ಅಂತ ಆದರೆ ಮತ್ತೊಂದು ಯುಗದ ಆರಂಭವೂ ಹೌದು …. ಜನರು ಅವರ ಮಾರ್ಗವನ್ನು ಅನುಸರಿಸಲು ಪ್ರೇರೇಪಿತವಾಗು ಕ್ಷಣ ಬಂದೋದಗಿದೆ .ನಾವೆಲ್ಲರೂ ಸೇರಿ ಭಾರತ ಮಾತೆಯ ಸೇವೆ ಗ್ಯ್ಯೋಣ ಎಂದು ಸಾರಿದರು. ಗಾಂಧೀಜಿಯವರ ಹತ್ಯೆಯಾದ ಸಮಯದಲ್ಲಿ ಜಾತಿ ಮತಗಳ ಮಧ್ಯೆ ಕಲಹ ಪ್ರಾರಂಭವಾಗಿತ್ತು ಸಾಮರಸ್ಯ ಕಳೆದು ಹೋಗಿದ್ದು ಬಹುತೇಕ ಜನರು ಜಾತಿಗಲಭೆ ನಡೆಯುತ್ತಿದ್ದವು ಅಲ್ಲಲ್ಲಿ ಭಾವಿಸಿ ತಾಯಿಯವರು ಸಹನೆ ಸಾಮರಸ್ಯದಂತ ವಿಚಾರಗಳನ್ನು ಜನರಿಗೆ ಮನದಟ್ಟು ಮಾಡಿಕೊಳ್ಳುವಲ್ಲಿ  ಪ್ರಯತ್ನ ಪಟ್ಟರು. ಗಾಢ ದುಃಖ, ಆತಂಕ ಮತ್ತು ಜಾಗೃತಿ ತುಂಬಿದ ಒಂದು ಭಾಷಣವನ್ನು ಜತದೇವಿ ತಾಯಿಯವರು“ಸಹೋದರ ಸಹೋದರಿಯರೇ…”ಇಂದು ನಮ್ಮ ಹೃದಯಗಳು ಒಡೆದಿವೆ…ನಮ್ಮ ದೇಶದ ಆತ್ಮವೇ ಆಗಿದ್ದ ಮಹಾತ್ಮ ಗಾಂಧೀಜಿ ಅವರು ನಮ್ಮನ್ನೆ ಬಿಟ್ಟು ಹೋಗಿದ್ದಾರೆ.ಅವರ ದೇಹ ಕೊನೆಗೊಂಡಿರಬಹುದು… ಆದರೆ ಅವರ ಚಿಂತನೆ, ಅವರ ಅಹಿಂಸೆಯ ಮಾರ್ಗ ಯಾವತ್ತೂ ಸಾಯುವುದಿಲ್ಲ.ಇಂತಹ ಸಮಯದಲ್ಲಿ, ಕೆಲವರು ಜಾತಿ-ಧರ್ಮದ ಹೆಸರಿನಲ್ಲಿ ಮತ್ತೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.ಆದರೆ ನಾನು ಒಂದು ಪ್ರಶ್ನೆ ಕೇಳುತ್ತೇನೆಗಾಂಧೀಜಿ ಅವರು ತಮ್ಮ ಪ್ರಾಣವನ್ನೇ ಕೊಟ್ಟದ್ದು ಏಕೆ?ಅವರು ಹಿಂದು, ಮುಸ್ಲಿಂ, ದಲಿತ, ಬ್ರಾಹ್ಮಣ… ಎನ್ನದೇ“ನಾವು ಎಲ್ಲರೂ ಭಾರತೀಯರು” ಎಂದು ಬದುಕಿದರು…ಅದೇ ಮಾತನ್ನು ಅವರು ಕೊನೆಯ ಉಸಿರಿನಲ್ಲೂ ಹೇಳಿ ಹೋಗಿದ್ದಾರೆ.ಇಂದು ನಾವು ಜಗಳ ಮಾಡಿದರೆ…ಅದು ಗಾಂಧೀಜಿಯವರ ಆತ್ಮಕ್ಕೆ ನೋವು ಕೊಡುತ್ತದೆ.ಅವರು ನಮಗೆ ತೋರಿಸಿದ ದಾರಿ — ಪ್ರೀತಿ, ಸಹನೆ, ಸೌಹಾರ್ದ — ಅದನ್ನೇ ನಾವು ಅನುಸರಿಸಬೇಕು.ಜಾತಿ ಎನ್ನುವುದು ನಮ್ಮ ನಡುವೆ ಗೋಡೆ ಕಟ್ಟಲು ಅಲ್ಲ…ಅದು ವೈವಿಧ್ಯದ ಸುಂದರತೆಯನ್ನು ಅರಿಯಲು.ಇಂದು ನಾನು ನಿಮಗೆ ವಿನಂತಿ ಮಾಡುತ್ತೇನೆ  ಕೋಪ ದ್ವೇಷ ಕಲಹವನ್ನು ಬಿಡಿ…ಹೃದಯವನ್ನು ತೆರೆದುಕೊಳ್ಳಿ…ಒಬ್ಬರನ್ನೊಬ್ಬರು ಅಪ್ಪಿಕೊಳ್ಳಿ…ಗಾಂಧೀಜಿ ಜೀವಂತವಾಗಿರುವುದು ನಮ್ಮ ನಡೆ-ನುಡಿಯಲ್ಲಿ…ನಮ್ಮ ಒಗ್ಗಟ್ಟಿನಲ್ಲಿ… ನಮ್ಮ ಮಾನವೀಯತೆಯಲ್ಲಿ…ನಾವು ಒಟ್ಟಿಗೆ ನಿಂತರೆ… ಭಾರತ ಸದಾ ಶಕ್ತಿಶಾಲಿಯಾಗಿರುತ್ತದೆ. “ಸಿದ್ದರಾಮ ಬಸವ| ಬುದ್ಧ ಗಾಂಧೀಜಿಯುತಿದ್ದಲು ಜನ ಮನ ದುಡದಾರ- ಲೋಕವೂಶುದ್ಧ ಸದಾಚಾರಿ ಮಾಡಲು!!”

Read Post »

ಕಾವ್ಯ ದರ್ಪಣ

ಡಾ.ಅನ್ನಪೂರ್ಣ ಹಿರೇಮಠ ಅವರ ಗಜಲ್

ಕಾವ್ಯಸಂಗಾತಿ ಡಾ.ಅನ್ನಪೂರ್ಣ ಹಿರೇಮಠ ಗಜಲ್ ನೀನಿರದ ಏಕಾಂತ ಕೊಲ್ಲುತಿದೆಯೋ ಕಾಂತನೀನಿಲ್ಲದ ಬೇಸರವೇ ಸುಡುತಿದೆಯೋ ಕಾಂತ ಹೇಳಲಾಗದ ದುಃಖ ತಾನೇ ಬಿಕ್ಕಳಿಸುತಿದೆ ಅಲ್ಲೇಕಕ್ಕುಲತೆಯ ಒಲವು ಸೋರಗುತಿದೆಯೋ ಕಾಂತ ಒಡಲಾಳದೆ ಕೋಲಾಹಲವೆದ್ದು ವಿರಹದ ಗಾಳಿಮುತ್ತುಗಳಿಲ್ಲದ ಗಲ್ಲ ನಿಲ್ಲದಾಗಿದೆಯೋ ಕಾಂತ ನೋವು ಸುಡುಗಾಡನೇ ಮೆದ್ದು ಪೆದ್ದಾಗಿದೆ ಬಿದ್ದುಸರಸವಿಲ್ಲದ ಸೊಲ್ಲು ಅಡಗೋಗಿದೆಯೋ ಕಾಂತ ಅದೇನೋ ತಳಮಳ ತಾಪದೆ ಒದ್ದಾಡುತಿದೆ ನೆನಪಅಪ್ಪುಗೆಗಾಗಿ ತನು ತೊಳಲಾಡುತಿದೆಯೋ ಕಾಂತ ಜೀವಕುಸುಮದಂಬಲ ಹಲುಬಿ ಹಿಂಡುತಿದೆ ಹಿಸುಕಿಹಸಿದ ಕಣ್ಣಂಚಿನ ಕಾತುರ ಕಂಗೆಟ್ಟಿದೆಯೋ ಕಾಂತ ಅನುಳ ವೇದನೆ ಒಂದೇ ಸವನೆ ಕತ್ತು ಕೊಯ್ಯುತಿದೆಭರವಸೆಯೇ ಮಣ್ಣಾಗಿ ಕೊಳೆಯುತಿದೆಯೋ ಕಾಂತ ಡಾ ಅನ್ನಪೂರ್ಣ ಹಿರೇಮಠ

ಡಾ.ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

ಕಾವ್ಯಯಾನ

ಎ.ಹೇಮಗಂಗಾ ಅವರ ತನಗಗಳು

ಕಾವ್ಯ ಸಂಗಾತಿ ಎ.ಹೇಮಗಂಗಾ ತನಗಗಳು ಕೆಂಡದಂತೆ ಕಾದಿದೆಪಲ್ಲಂಗವಿಂದು ನಲ್ಲಕಾರಣ ಈ ವಿರಹಗ್ರೀಷ್ಮ ಋತುವು ಅಲ್ಲ ಕದಪು ಕೆಂಪಾಗಿದೆಬಿಸಿ ಉಸಿರು ತಾಗಿನಲ್ಲ ಬಳಿ ಬರಲುತೋಳಲಿ ಬಳಸಲು ನಿನ್ನ ಅನುಪಸ್ಥಿತಿನಿತ್ಯವೂ ಕಾಡುತಿದೆಅತಿಯಾದ ಪ್ರೀತಿಯೇನನ್ನನ್ನು ಕೊಲ್ಲುತಿದೆ ಒಮ್ಮೊಮ್ಮೆ ಬಿಸಿಗಾಳಿಮಗದೊಮ್ಮೆ ತಂಗಾಳಿಹವೆ ಬಲು ಚಂಚಲಬಂಡೆ ಮಾತ್ರ ಅಚಲ ಮೈ ಶಾಖ ಹೆಚ್ಚಿಸಿದೆವೈಶಾಖದ ಬಿಸಿಲುಒಣಗಿ ಉದುರಿದೆಮರಗಳ ಟಿಸಿಲು ಊಟದಲಿ ಕೊಂಚವೂತಿಳಿಯುತ್ತಿಲ್ಲ ಸ್ವಾದಬಿಸಿಲ ತಾಪದಿಂದಮೊಗದ ತುಂಬ ಸ್ವೇದ ಬದುಕೀಗ ನರಕಹೆಚ್ಚಿದೆ ತಾಪಮಾನಕಾದ ಕಾವಲಿ ಭೂಮಿಕಾಣದಾದ ವರುಣ ತಡೆಯಬಲ್ಲೆ ನಾನುಬೇಸಿಗೆಯ ಈ ಧಗೆಸಹಿಸಲಾರೆ ಎಂದೂನಲ್ಲನಾದರೆ ಹಗೆ ಕೆರೆ ಕುಂಟೆಗಳೀಗನೀರಿಲ್ಲದೇ ಬರಡುನಿನ್ನ ಸ್ಪರ್ಶವಿರದೇತನುವಿಂದು ಕೊರಡು ಅಪರೂಪದ ಮಳೆರಸ್ತೆ ಗುಂಡಿ ತುಂಬಿತುಹರುಷದಿಂದ ಮಗುಅಲ್ಲಿ ಕುಪ್ಪಳಿಸಿತು ಎ.ಹೇಮಗಂಗಾ

ಎ.ಹೇಮಗಂಗಾ ಅವರ ತನಗಗಳು Read Post »

You cannot copy content of this page

Scroll to Top