ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಬ್ಬೆ ನಿನ್ನ ನೋಡಿ ದಿಬ್ಬೆರಗಾದೆ
ಎತ್ತರದಿಂದ ದುಮ್ಮುಕ್ಕುವ ನಿನ್ನ ಜಲದಾರೆ|
ಹಾಲನೊರೆಯ ಪರದೆಯ ಪರಿಯು
ಸೊರೆ ಗೊಂಡಿಹುದು ಮನಸಾರೆ||

ಒರಟು ಕಲ್ಲು ಬಂಡೆ ಮೇಲೆ ಸ್ಪುರಿಸುವ
ಮೃದು ಅಮೃತದ ಹಾಲಹೊಳೆ ಸಂತೆ|
ಗಡಸು ದೇಹದೋಳಗೆ ಗುಪ್ತವಾಗಿ ಹರಿಯುವ
ಪ್ರೀತಿ, ಪ್ರೇಮ ಕರುಣೆಯ ಕಹಳೆ‌ ಅಂತೆ||

ನಿನ್ನ ಆಳದೊಳಗೆ ನಾನಿಳಿದು
ನನ್ನ ಅಂತರಾಳದ ನೋವನ್ನು ಮರತೆ|
ನಿನ್ನ ಬೋರ್ಗರೆಯುವ ಶಬ್ಧದೊಳಗೆ
ಸಂಸಾರದ ಜಂಜಡದ ಬೆಂಬಿಡದ
ಕರ್ಕಸವನ್ನು ಕ್ಷಣಕಾಲ ತೊರದೆ||

ದೃಡವಾದ ಕಲ್ಲುಬಂಡೆಯನ್ನು ಕೂಡಾ
ಪಾಚಿಗಟ್ಟಿಸಿ ಜಾರಿ ಎಡವಿ ಬಿಳಿಸುವದು
ಕಲಿಸುವದು ಪಾಠ ಮನದೊಳಗೆ|
ರಾಚಿಸುವ ರಾಡಿ ಕೆಡುಸುವದು
ಬೀಳಿಸುವದು ನಿನ್ನ ಬದುಕಿನ ಏಳಿಗೆ||

ಉನ್ಮಾದದ ಅಲೆಗಳನ್ನು ತಡೆಯಲು
ಹೆಬ್ಬಂಡೆಗಳನ್ನು ಹೊತ್ತು ನಿಂತಹಿಳು ಧಾತ್ರಿ|
ಬಿಳಿ ಸೀರೆ ಉಟ್ಟ ನಿತ್ಯ ನೃತ್ಯವನ್ನು
ಕಣ್ಣತುಂಬಿಕೊಳ್ಳಲು ಮುತ್ತಿಹುದು ಜನಜಾತ್ರಿ||
ಶ್ರೀದೇವಿ. ಮ.ಗುಮ್ಮಗೋಳ

About The Author

Leave a Reply

You cannot copy content of this page

Scroll to Top