ಕವಿತೆ ಕಾರ್ನರ್

ಕವಿತೆ ಕಾರ್ನರ್

ತಬ್ಬಲಿ ಕವಿತೆ ಮಾತುಗಳ ಅಟ್ಟಹಾಸದೊಳಗೆ ಅಪಹಾಸ್ಯಕ್ಕೀಡಾದ ಮೌನ ಶಬ್ದಗಳ ಜಾತ್ರೆಯೊಳಗೆ ತೇರಿನ ಗಾಲಿಯಡಿ ಅಪ್ಪಚ್ಚಿಯಾಯಿತು. ಮುಳ್ಳುಗಳ ಕಾವಲಿನಲಿದ್ದ ಹೂಗಳು ನಗುವುದನ್ನೆ ಮರೆತುಬಿಟ್ಟವು ವಿರಹದಲಿ ಬಣ್ಣಗೆಟ್ಟ ಚಿಟ್ಟೆಗಳು ಹಸಿವಿನಲಿ ಕಂಗೆಟ್ಟವು. ನಿನ್ನೆ ಸಂಜೆಯ  ಮುದಿಬಿಸಿಲಲಿ ಅಕಾಲ ಮಳೆಸುರಿಯುತು ವಿದಾಯದ ಹೊತ್ತಿನಲಿ ಬಿಕ್ಕಿದವಳ ನೋಡಿ ಒಂಟಿಹಕ್ಕಿ ಮಮ್ಮುಲ ಮರುಗಿತು. ಕವಿತೆಯೊಂದ ಕಟ್ಟುವ ನೆಪದಲಿ ಶಬ್ದಗಳ ಮಾರಣಹೋಮ ಕವಿಯ ಸಮಾದಿಯ ಮೇಲೆ ಅಪರಿಚಿತ ಓದುಗನ ಹೂಗುಚ್ಚ. ಎರಡು ಸಾಲಾದರು ಬರೆದು ಹೋಗು ಗೋಗರೆದ ಕವಿತೆಯೀಗ ತಬ್ಬಲಿ. ******** ಕು.ಸ.ಮಧುಸೂದನ

ಕಾವ್ಯಯಾನ

ಇನ್ನಷ್ಟು ಯೌವನ ಕೊಡು ಮಂಜುನಾಥ ನಾಯ್ಕ ಹಾಲುಮಾರುವ ಹುಡುಗ ಕಾಜುಗಣ್ಣಿನ ವಿನೋದನೊರೆ ಹಾಲಿನಂತವನು ಪೇಟೆಯ ತುಂಬಹಾಲು ಹಂಚುವ ಉಮೇದಿಕಾಜುಗಣ್ಣ ಬಿಂಬಗೊಳಗೆಉಫ್ ಉಫ್ ಎಂದು ರಸ್ತೆ ಉಬ್ಬಿನಲಿ ತುಳಿದಿದ್ದಕ್ಕೆ ಸೈಕಲ್ಲುಬಿದ್ದು ರಕ್ತಕಾರಿಕೊಂಡ ಹೆಬ್ಬಟ್ಟಿನ ಉರಿ ಬ್ರೇಕೊತ್ತಿದೆಸೈಕಲ್ಲಿನ ವೇಗಕ್ಕೆಅಪ್ಪನ ಕ್ಯಾನ್ಸರಿಗೆ, ಅಮ್ಮನ ಮಧುಮೇಹಕ್ಕೆಚಂದನದ ಕೊರಡುತೇಯುತ್ತಿದೆ ಬೀದಿಯಲಿಕಾಯುತ್ತಿದೆಹಾಲಿನ ಮನಸ್ಸೊಂದುಮಗನ ಬರುವಿಕೆಗೆಅಡುಗೆ ಮನೆಯಲಿ ಬೇನೆಯಲಿಬೇಯುವ ಹಂಚಿನ ರೊಟ್ಟಿ ಐನೋರ ತೋಟದ ಮರದ ತುದಿಗೇರಿ ಅಡಿಕೆಗೊನೆ,ಸಿಂಗಾರ,ಸಿಯಾಳಕಾಯಿ ಕೊಯ್ವ ಈರಜ್ಜಕಸರತ್ತುಗಯ್ಯುತ್ತಾಆಕಾಶ ಮುಟ್ಟುವಂತೆಮರದ ತುದಿಯಲಿಒಂದೊಂದೇ ಫಲಗಳಎಸೆಯುವ ಕೆಳಗೆನುಣ್ಣಗೆ ಜಾರುವ ಮರತಡವರಿಸುವುದು ಒಮ್ಮೊಮ್ಮೆ ಈರನ ಕಾಲುಕೆಳಗೆ ಭೂಮಿ ಬಾಯ್ತೆರೆದು […]

ಪುಸ್ತಕ ಸಂಗಾತಿ

ಹಾಲಕ್ಕಿ ಕೋಗಿಲೆ ಮಾರ್ಚ್ ತಿಂಗಳಿನಲ್ಲಿ ಬರಹ ಓಡಾಟ ಎಂದುಕೊಂಡು ಸದಾ ಕೆಲಸದ ಒತ್ತಡದಲ್ಲಿದ್ದ ನನಗೆ ಒಮ್ಮೆಲೆ ಅನಿರೀಕ್ಷಿತವಾಗಿ ಕೋವಿಡ- 19 ನಿಂದಾಗಿ ಲಾಕ್ಡೌನ ಆದಾಗಿನಿಂದ ಮಾನಸಿಕ ಗೊಂದಲ.ಭಯದಿಂದ ಮನೆಯ ನಾಲ್ಕು ಗೋಡೆಗಳ ನಡುವೆ ಸುಧಾರಿಸಿಕೊಳ್ಳಲು ಕೆಲವು ದಿನಗಳು ಬೇಕಾದವು.ಬಳಿಕ ನಾವೆಲ್ಲ ನಮ್ಮ ಆಸಕ್ತಿಗೆ ತಕ್ಕಂತೆ ಮನಸ್ಸು ಪ್ರಪುಲ್ಲಗೊಳಿಸಿಕೊಳ್ಳಲು ಮಾರ್ಗ ಹುಡುಕುತ್ತಿದ್ದಾಗ ಕಣ್ಣಿಗೆ ಬಿದ್ದದ್ದು ಅಕ್ಷತಾಕೃಷ್ಣಮೂರ್ತಿ ಅವರ ಹಾಲಕ್ಕಿ ಕೋಗಿಲೆ. ಮುಖಪುಟದಲ್ಲಿದ್ದ ಮುಗ್ಧ ನಗುವಿನ ಸುಕ್ರಜ್ಜಿಯನ್ನು ಕಂಡ ಮೇಲಂತೂ ಒಂಥರಾ ಖುಷಿ. ಇದಕ್ಕೆ ಒಂದು ತಿಂಗಳ ಮೊದಲಷ್ಟೆ ಬಡಗೇರಿಯ […]

ಕಾವ್ಯಯಾನ

ಗಝಲ್ ರತ್ನರಾಯಮಲ್ಲ ಆಗಸದಲ್ಲಿ ನೇಸರ ಹುಟ್ಟುತಿದ್ದಾನೆ ನೋಡಿಕನಸುಗಳು ಮೂಟೆ ತರುತಿದ್ದಾನೆ ನೋಡಿ ಇರುಳು ಕಳೆದು ಹೋಗಿದೆ ಹಗಲಿನ ಒಡಲಲ್ಲಿಚೈತನ್ಯವನ್ನು ಹೊತ್ತು ಬಂದಿದ್ದಾನೆ ನೋಡಿ ಮೂಡಣದಲ್ಲಿ ರವಿ ಅಂಬೆಗಾಲು ಇಡುತಿರುವನುಅಕ್ಷಯ ಉಲ್ಲಾಸವನ್ನು ಹಂಚುತಿದ್ದಾನೆ ನೋಡಿ ಅವನಿಯನ್ನು ಹೊಂಗಿರಣಗಳು ಚುಂಬಿಸುತಿವೆಪಾದರಸದ ಚಲನೆಯನ್ನು ನೀಡುತಿದ್ದಾನೆ ನೋಡಿ ಹಕ್ಕಿಗಳ ಚಿಲಿಪಿಲಿಯು ಹೃದಯವನ್ನು ತಟ್ಟುತ್ತಿದೆನಿರಾಸೆಯ ಕೊಳೆಯನ್ನು ತೊಳೆಯುತಿದ್ದಾನೆ ನೋಡಿ ಗಿಡ-ಮರಗುಳು ತಂಗಾಳಿಯಿಂದ ಸ್ವಾಗತಿಸುತಿವೆಬಾಳಿನ ಅನನ್ಯ ಕಲೆಯನ್ನು ಕಲಿಸುತಿದ್ದಾನೆ ನೋಡಿ ಹಾಸಿಗೆಯನ್ನು ತೊರೆದು ಹೊರಗೆ ನೋಡು ಮಲ್ಲಿಮಂದಹಾಸದ ಪಾಠವನ್ನು ಹೇಳುತಿದ್ದಾನೆ ನೋಡಿ

ಕಾವ್ಯಯಾನ

ನೀ ಹೋದರೂ.. ಶೀಲಾ ಭಂಡಾರ್ಕರ್ ನಿನ್ನ ನೆನಪುಗಳು..ನನ್ನ ಬಳಿಯೇ ಉಳಿದಿವೆನಿನ್ನ ಜತೆ ಹೋಗದೆ.. ಇನ್ನೂ ..ಚೆನ್ನಾಗಿ ಬೆಳೆಯುತ್ತಿವೆ..ದಟ್ಟವಾಗಿಮನದ ತೋಟದೊಳಗೆ ನೀನಾಡಿದ್ದ ಮಾತುಗಳುಆಸೆಯಿಂದ ಕತ್ತೆತ್ತುತ್ತವೆ ಆಗಾಗಹಳೆಯ ಆಲದ ಮರದಪೊಟರೆಯೊಳಗಿನಿಂದಮರಿ ಕೋಗಿಲೆಗಳು ಇಣುಕಿದ ಹಾಗೆ. ಎಷ್ಟು ದೂರದವರೆಗೆನಡೆದು ಬಂದಿವೆ ನೋಡುಆ ನೆನಪುಗಳು ಬರಿಗಾಲಿನಲ್ಲಿ.ಬೇಸಿಗೆಯಿಂದ ಮಳೆಯವರೆಗೆಬಾಲ್ಯದಿಂದ ತಾರುಣ್ಯದವರೆಗೆ ಅಡಗಿ ಕುಳಿತುಸಂಭಾಷಿಸುತ್ತವೆ ಕೆಲವುತಮ್ಮ ತಮ್ಮಲ್ಲೇಒಳಕೋಣೆಯೊಳಗೆ. ಎಲ್ಲವೂ ನೆನಪಿದೆ ನನಗೆನಿನ್ನ ಪ್ರೀತಿ. ನಿನ್ನ ಮಾತು..ತಿಳಿ ಹಾಸ್ಯ ಮತ್ತು ನಿನ್ನ ನಗೆ. ನೇರಳೆ ಹಣ್ಣೆಂದು ತಿನ್ನಿಸಿದಬೇವಿನ ಹಣ್ಣಿನ ರುಚಿಯೂಮರೆತಿಲ್ಲ ಇನ್ನೂ ನನಗೆ ಕಹಿ ಹಾಗೆಯೇ ಉಳಿದುಕೊಂಡಿದೆ..ನಾಲಿಗೆಯ […]

ಕಾವ್ಯಯಾನ

ಗಝಲ್ ಸುಜಾತಾ ಲಕ್ಮನೆ ಗಂಟಿಕ್ಕಿ ಹುರಿ ಹುಬ್ಬು ಹಾರಿಸಿದಂತೆಲ್ಲ ನಾನೇನೂ ಬೆದರುವುದಿಲ್ಲಪೊದೆ ಮೀಸೆಯಲ್ಲೇ ರೋಷ ಉಕ್ಕಿಸಬೇಡ ಸೊಪ್ಪು ಹಾಕುವುದಿಲ್ಲ ತವರಲ್ಲಿ ಮುದ್ದಾಗಿ ಅಂಗೈಲೇ ಬುವಿ ಬಾನು ದೋಚಿದವಳು ನಾನುಕಣ್ಣಲ್ಲೇ ಕೆಣಕಿದಂತೆಲ್ಲ ಮೈ ಮನದ ಕಣಗಳೆಲ್ಲ ನವಿರೇಳುವುದಿಲ್ಲ ನಿನ್ನಂತೆಯೇ ಆಡಿ ನಲಿದು ಬಣ್ಣದ ಲಂಗದಲಿ ಕನಸ ಜೀಕಿದವಳುಮಾತು ಮೌನಕೆ ಮಣಿವ ಬೆಳ್ನಗೆಯಲಿ ಸ್ವಂತಿಕೆ ನಳನಳಿಸುವುದಿಲ್ಲ ನಿನ್ನ ಸೇವೆಯೇ ಎನ್ನ ಜೀವನದ ಪರಮ ಗುರಿಯೆಂಬ ಭ್ರಮೆಯೇಕೆಸದಾ ಕೀಲುಗೊಂಬೆಯಂತೆ ನಡೆವ ಪರಿ ನನಗೂ ಇಷ್ಟವಾಗುವುದಿಲ್ಲ ಕಾಲ ಮೇಲೆ ಕಾಲು ಹಾಕಿ ಕೂತು […]

ಅನುಭವ

                      ಮನೆ……. ಹಕ್ಕಿ ಮನೆ ಅನುಪಮಾ ರಾಘವೇಂದ್ರ                       ಮನೆ……. ಹಕ್ಕಿ ಮನೆ        ಈ ಮರೆವು  ಅನ್ನೋದು ಮನುಷ್ಯರಿಗೆ ಮಾತ್ರವೋ….? ಅಲ್ಲಾ ಪ್ರಾಣಿ ಪಕ್ಷಿಗಳಿಗೂ ಇರುತ್ತೋ…..? ನನಗೀ ಸಂಶಯ ಬರಲು ಕಾರಣವೇನೋ ಇದೆ. ಕೆಲವು ದಿನಗಳ ಹಿಂದಿನ ಘಟನೆ……          ಸಂಜೆ ವೇಳೆ ಹಟ್ಟಿ ಬಳಿಗೆ ಹೋದಾಗ ಹಟ್ಟಿಯ ಒಳಗಿನಿಂದ ಹಕ್ಕಿಯೊಂದು ಪುರ್ರನೆ ಹಾರಿ ಹೋಯ್ತು. ಮರುದಿನ ಬೆಳಗ್ಗೆಯೂ ಅದೇ ರೀತಿ ಹಕ್ಕಿ  ಹಾರುವುದು ಕಂಡಿತು. ಹಕ್ಕಿಗಳ ಕಿಚ ಪಿಚ ಸುಮಧುರವಾದ ಸಂಗೀತ…… ನಾನು ಹೋದ […]

ಕಾವ್ಯಯಾನ

ಗಝಲ್ ತೇಜಾವತಿ ಹೆಚ್.ಡಿ. ಅಸಲಿಗೆ ನಕಲಿಯ ಲೇಪನ ಬಳಿದಿರಬಹುದು ನೋಡುಕಂಗಳಿಗೆ ಆವರಿಸಿರುವ ಪೊರೆಯ ಸರಿಸಿ ಅರಿಯಬಹುದು ನೋಡು ಭಿತ್ತಿಯ ಮೇಲೆ ಬಿದ್ದ ಛಾಯೆಯು ಮಿಥ್ಯವಿರಬಹುದು ಒಮೊಮ್ಮೆಅಂತಃಕರಣದ ಅಕ್ಷಿಯರಳಿಸಿ ದಿಟವ ತಿಳಿಯಬಹುದು ನೋಡು ತಳವಿಲ್ಲದ ಬಾವಿ ಅನಂತ ಆಳವ ತೋರಿರಬಹುದು ಅಲ್ಲಿಭ್ರಮೆಯಿಂದ ಹೊರಬಂದು ನೈಜತೆಯ ಕಾಣಬಹುದು ನೋಡು ದಿಗಂತವು ಇಳೆ ಆಗಸವು ಸಂಧಿಸಿದಂತೆ ಭಾಸವಾಗುವುದುವಿಶ್ವವನ್ನೊಮ್ಮೆ ಪರ್ಯಟಿಸಿ ಅವಲೋಕಿಸಬಹುದು ನೋಡು ಅಖಂಡ ಆಗಸವು ನೀಲವರ್ಣದಿ ಗೋಚರಿಸುವುದು ಮೇಲೆಬೆಳಕಿನ ಮೂಲದ ಸತ್ಯಾಸತ್ಯತೆಯನ್ನು ಪರಾಮರ್ಶಿಸಬಹುದು ನೋಡು ********

ಪುಸ್ತಕ ಸಂಗಾತಿ

“ಪಮ್ಮಿ” ಹನಿಗವಿತೆಗಳು ಕನ್ನಡದಲ್ಲಿ ಚುಟುಕು ಸಾಹಿತ್ಯಕ್ಕೆ ಮಹತ್ವದ ಸ್ಥಾನವಿದೆ.ನಮ್ಮ‌ಜನಪದ ತ್ರಿಪದಿಗಳು ಮೂರೆ ಸಾಲಿನಲ್ಲಿ ಥಟ್ ಅಂತ ಒಂದು ವಸ್ತುವಿಷಯದ ಮೇಲೆ ಬೆಳಕು ಚೆಲ್ಲಿ ಬೆಳಗಿಸಿಬಿಡುವ ಮಿಣುಕು ಹುಳುಗಳಂತಹವು.ಜೀವನಾನುಭವದಿಂದ ಮೂಡಿದ ನುಡಿಮುತ್ತುಗಳು.ಹೊಸಗನ್ನಡದಲ್ಲಿ ಚುಟುಕುಗಳ ಬ್ರಹ್ಮನೆಂದೆ ಖ್ಯಾತರಾದ ದಿನಕರ ದೇಸಾಯಿ ಅವರ ದ್ವಿಪದಿ, ಬೀಚಿ ಅವರ ಹಾಸ್ಯದ ಚುಟುಕುಗಳು,ದುಂಡೀರಾಜ್ ಅವರ ಪಂಚ್ ಗಳು ಪ್ರಸಿದ್ದಿಯಾದವು.ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗದ ಕಂದ ಪದ್ಯಗಳು ತಾತ್ವಿಕ ವಿಚಾರಗಳನ್ನು ತುಂಬಿಕೊಂಡೆ‌ ತೆನೆಗಳು.ಚುಟುಕುಗಳ ಮುಖ್ಯ ಲಕ್ಷಣವೇ ಯಾವ ವಿಷಯವನ್ನಾದರೂ ಪರಿಣಾಮಕಾರಿಯಾಗಿ ಚಿಕ್ಕದಾಗಿ ಚೊಕ್ಕಾವಾಗಿ ಭಾವ ಸ್ಪುರಿಸುವಂತೆ […]

ದಿಕ್ಸೂಚಿ

ಸೋಲು ಒಪ್ಪಿಕೊಳ್ಳುವ ಮುನ್ನ ಕೊಂಚ ಪ್ರಶ್ನಿಸಿಕೊಳ್ಳಿ ಜಯಶ್ರೀ ಅಬ್ಬಿಗೇರಿ ನಾನು ಕೈ ಹಾಕಿದ ಯಾವ ಕೆಲಸದಲ್ಲೂ ಗೆಲುವು ಸಿಗುತ್ತಲೇ ಇಲ್ಲ. ನನ್ನ ಹಣೆ ಬರಹವೇ ಚೆನ್ನಾಗಿಲ್ಲ. ನಸೀಬು ಕೆಟ್ಟಿದೆ. ಸಾಲು ಸಾಲು ಸೋಲುಗಳು ನನ್ನ ಬೆನ್ನು ಹತ್ತಿವೆ. ಹೀಗೇ ಇನ್ನೊಂದಿಷ್ಟು ಸಮಯ ಕಳೆದರೆ ಜೀವನದ ಆಸೆಗಳೇ ಕಮರಿ ಹೋಗಿ ಬಿಡುತ್ತವೆ. ನನ್ನಿಂದೇನೂ ಮಾಡಲು ಸಾಧ್ಯವಿಲ್ಲವೆಂದು ಊಟ ತಿಂಡಿ ಬಿಟ್ಟು ಕೈ ಕಟ್ಟಿ ಕುಳಿತು ಚಿಂತಿಸಿದರೆ ಬದುಕು ನಿಂತ ನೀರಾಗಿ ಬಿಡುತ್ತದೆ. ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುತ್ತವೆ. ಉಗ್ರ ರೂಪ […]

Back To Top