ಕಾವ್ಯಯಾನ

ಕಾವ್ಯಯಾನ

ನೆನಪುಗಳಲ್ಲಿ ಅವಳು ಲಕ್ಷ್ಮೀ ಪಾಟೀಲ್ ಅವಳ ಏಕಾಂತ ತೆರೆಯುತ್ತದೆ ನಿತ್ಯ ಕೈ ಮುಟ್ಟಿಕೂದಲು ಹಿಡಿದರೆ ಎದುರು ಮರದ ಕೆಳಗೆಸಂಧ್ಯಾ ರಾಗದ ಸಂಜೆ ಅದೇ ಮರ ಕೈ ಮಾಡಿ ಕರೆಯುತ್ತದೆ ಕೂದಲ ಸಿಕ್ಕು ಬಿಡಿಸಿಕೊಳ್ಳಲುನೀಟಾಗಿ ನೆನಪುಗಳ ತಲೆ ಬಾಚಲುಏಕಾಂತಕ್ಕೆ ಜೊತೆ ಹುಡುಕಿ ಧ್ಯಾನಿಸಲು ಸಂಧ್ಯಾರಾಗದೆ ದುರು ತಾನು ಮತ್ತೊಂದು ಕವಿತೆಯಾಗಲು !ಬರೆಯದ ಭಾವ ಗಳೆಲ್ಲ ಸಿಕ್ಕುಗಳಂತೆ ಮುತ್ತುವವು ಧ್ಯಾನಸ್ಥಳಾಗುವಳಾಗ ಕವಿತೆಯ ಸುತ್ತ !ಎಷ್ಟೊಂದು ಕವಿತೆ ಬದುಕಿದೆನಲ್ಲ ಬರೆಯಲು ಬಂದಿದ್ದರೆಪೈಪೋಟಿಯಲ್ಲಿ ಕವಿತೆ ಗೆಲ್ಲಿಸಬಹುದಿತ್ತುಈ ಹೇನು ಹರಿದಾಡಿಸಿಕೊಳ್ಳುವ ಹಿಂಸೆಗೆಮುಕ್ತಿ ಸಿಗಬಹುದಿತ್ತು ಎಂದುಕೊಳ್ಳುವಳುಈ […]

ಕಾವ್ಯಯಾನ

ನಾನು ಕೆಟ್ಟವಳು ಶೀಲಾ ಭಂಡಾರ್ಕರ್ ನಿನ್ನ ಪ್ರೀತಿಯ ಪರಿಮಾಣದಲ್ಲಿಒಂದಿಷ್ಟು ಆಚೆ ಈಚೆಯಾದಾಗನಾನು ಕೆಟ್ಟವಳು. ನನ್ನನ್ನು ಬದಿಗೆ ತಳ್ಳಿಇನ್ಯಾರನ್ನೋ ತಲೆ ಮೇಲೆಕೂರಿಸಿಕೊಂಡಾಗ,ನಾನು ಕೆಟ್ಟವಳು. ಅತಿಯಾಗಿ ಸಿಟ್ಟು ಬಂದಾಗನಿನ್ನ ಚುಚ್ಚಿ ನೋಯಿಸಿಖುಷಿ ಪಡುವಾಗನಿಜವಾಗಲೂನಾನು ಕೆಟ್ಟವಳು. ಇಷ್ಟೇ.. ನಾನು ಕೆಟ್ಟವಳಾಗುವುದುಇವಿಷ್ಟೇ ಸಂದರ್ಭಗಳಲ್ಲಿ. ನಾನು ಕೆಟ್ಟವಳಾದಮರುಕ್ಷಣವೇಮನವರಿಕೆಯಾಗಿಮತ್ತೆ ನಿನ್ನೆಡೆಗೆ ಬಂದಾಗ, ನೀನು ಎಂದಿನಂತೆಮುದ್ದಿಸುವಿಯಲ್ಲ..!ಆಗ ಮಾತ್ರ..ನೀನೇ ಕೆಟ್ಟವನು. ************

ದಿಕ್ಸೂಚಿ

ತೊಂದರೆ ಕೊಡಬೇಡಿ ಅಂತ ಹೇಳಿಬಿಡಿ ಜಯಶ್ರೀ.ಜೆ.ಅಬ್ಬಿಗೇರಿ ಮೊದಲೇ ಓದಿನ ಒತ್ತಡ. ಇದು ಸಾಲುವುದಿಲ್ಲ ಎಂಬಂತೆ ಬಹು ದಿನಗಳಿಂದ ಬೆನ್ನು ಬಿಡದಿರುವ ಕೆಲ ವೈಯುಕ್ತಿಕ ಸಮಸ್ಯೆಗಳು. ತಲೆ ತಿನ್ನುತ್ತಿವೆ. ಒಂದಿಷ್ಟು ಹೊತ್ತು ಎಲ್ಲೋ ಒಂದು ಕಡೆ ಹೋಗಿ ಮೌನವಾಗಿದ್ದು ಬರೋಣವೆಂದರೆ ನಿಮ್ಮ ಗೆಳೆಯ/ ಗೆಳತಿ ನಿಮಗೆ ಸಂಬಂಧವಿಲ್ಲದ ಯಾವುದೋ ವಿಷಯ ಹೇಳಿ ತಲೆ ತಿನ್ನುತ್ತಿದ್ದರೆ ಕೋಪ ನೆತ್ತಿಗೇರಿ ಬಿಡುತ್ತದೆ. ಖಂಡ ತುಂಡವಾಗಿ ಹೇಳಿ ಹೊರಗೆ ಅಟ್ಟಬೇಕೆನಿಸಿದರೂ ಹಾಗೆ ಮಾಡಲು ಸಾಧ್ಯವಿಲ್ಲವೆಂದು ಹೇಗೋ ಸಹಿಸಿಕೊಳ್ಳುತ್ತೀರಿ. ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ […]

ಕವಿತೆ ಕಾರ್ನರ್

ಅವಳು ಮತ್ತು ಕವಿತೆ! ಅವಳು ನೋವಿನ ಬಗ್ಗೆ ಕವಿತೆ ಬರೆದಳು ಓದಿದ ಜನ ಅವಳ ನೋವನ್ನು ಸವಿದು ಸಂಭ್ರಮಿಸಿದರುಅದರ ಆಳಅಗಲಗಳ ಅಳೆದು ತೂಗಿದರು ಆ ನೋವಿನ ಉತ್ಕಟತೆಯನ್ನಳೆಯಲುಇರಬಹುದೆಮಾಪಕವೆನಾದರೆಂದು ಅದನೂ ಹುಡುಕಾಡಿದರು ಅವಳ ನೋವಿಗಿರಬಹುದಾದ ಕಾರಣಗಳ ಕುರಿತುಸಂಶೋಧನೆಯನ್ನೇ ನಡೆಸಿದರು ಭಗ್ರಪ್ರೇಮ, ಮುರಿದ ದಾಂಪತ್ಯಹೀಗೆ ಕಾರಣಗಳ ಪಟ್ಟಿ ಮಾಡುತ್ತ ಹೋದರು ನೋವಿಗೂ ಮಾರುಕಟ್ಟೆ ಇದೆಯೆಂದರಿತ ಅವಳುಹೀಗೆಯೇ ವರ್ಷಗಟ್ಟಲೆಕವಿತೆ ಬರೆಯುತ್ತ ಪ್ರಸಿದ್ದಳಾಗುತ್ತ ಹೋದಳು ಅದ್ಯಾಕೊ ಒಂದು ದಿನಬರಿದೇ ನೋವಿನ ಬಗ್ಗೆ ಬರೆಯುವುದು ಬೇಸರವೆನಿಸಿನಗುವಿನ ಬಗ್ಗೆಬರೆಯತೊಡಗಿದಳು. ಅವಳ ನೋವಿಗೆ ಲೊಚಗುಟ್ಟುವುದಕ್ಕೆಒಗ್ಗಿ ಹೋಗಿದ್ದ ಓದುಗರುಅವಳ […]

ಕಾವ್ಯಯಾನ

ಪ್ರೇಮವೆಂದೂ ಹೇರಲ್ಪಡುವುದಿಲ್ಲ ಪೂರ್ಣಿಮಾ ಸುರೇಶ್ ಪ್ರೇಮವೆಂದೂ ಹೇರಲ್ಪಡುವುದಿಲ್ಲ.ಮತ್ತೆಮತ್ತೆ ನಿನ್ನೆಗಳನುಕರೆತಂದುಎದುರು ನಿಲ್ಲಿಸಿಯುದ್ಧ ಹೂಡುವೆಯೇಕೆ.. ಒಪ್ಪುವೆಜೊತೆ ಸೇರಿಯೇಬುತ್ತಿ ಕಟ್ಟಿದ್ದೆವುನಾಳೆಗೆ ನಡೆವ ನಡೆಎಡವಿದ ಹೆಜ್ಜೆತಿರುವುಗಳುಗಂಧ ಮಾರುತದಸೆಳೆತದಾರಿ ಕವಲಾಗಿನೀನುನೀನಾಗಿ ನಾನು ಒಂಟಿಯಾಗಿಅನಿವಾರ್ಯ ಹೆಜ್ಜೆಗಳು ಅದೆಷ್ಟು ಮಳೆ..ಸುರಿಸುರಿದುಒದ್ದೆ ಒದ್ದೆ ಒಳಕಂಪನ ಹೊರನಡುಕತೊಯ್ದ ಹಸಿವೆಗೆಹಳಸಿಹೋದತಂಗಳು ಬುತ್ತಿಚಾಚಿದ ಕೈ ಬೊಗಸೆಖಾಲಿ ಖಾಲಿ ಹೌದುಅದು ತಿರುವೊಂದರ ಆಕಸ್ಮಿಕಮನಸುಗಳ ಡಿಕ್ಕಿನಡೆದ ಹಾದಿಯ ಬೆವರಿನ ವಾಸನೆಮುಡಿದ ಹೂವಿನ ಘಮತನ್ಮಯತೆಯನುನಮ್ಮೊಳಗೆ ಅರಳಿಸಿತ್ತು ಬಿಗಿದ ತೆಕ್ಕೆ ಸಡಿಲಿಸಲೇ ಬೇಕುಉದುರಿ ಬಿದ್ದ ಹೂ ಎಸಳುಗಳು ಕೊಡವಿಕೊಂಡೆಅಂಟಿದಬೆವರು ಕಳಚುವ ಮಳೆಗೆನಾನೂ ಕಾದೆ ಬೇಡ. ತಂಗಳು ಬಿಡಿಸದಿರುಇರಲಿ ಬಿಡು […]

ಪುಸ್ತಕ ಸಂಗಾತಿ

ಎದೆಯ ಕದ ತೆರೆದಾಗ. “ಎದೆಯ ಕದವ ತೆರೆಯುತಿರೆ| ಒಳಗೆ ಬೆಳಕು ಹರಿಯಿತು|ಹೂಗಳೆಸಳು ಬಿರಿಯುತಿರೆ |ತುಂಬಿ ಹಾಡು ಮೊರೆಯಿತು”——ಕವಿ ಕಯ್ಯಾರರ ‘ಯುಗಾದಿ’ ಕವನದ ಸಾಲುಗಳಿವು.ಯುಗಾದಿ ಸಮೃದ್ಧಿಯ ಸಂಕೇತ.ಪ್ರಕೃತಿ-ಮಾನವ ಅನುಸಂಧಾನದ ಪ್ರತೀಕ.ಕವಿಗಳು ಪರಿಸರ ಪ್ರೇಮಿಗಳು.ಮಣ್ಣಿನಲ್ಲಿ ಸ್ವರ್ಣವನ್ನು, ಶಿಲೆಯಲ್ಲಿ ಶಿಲ್ಪವನ್ನು ಕಾಣುವವರು.ಎದೆಯ ಕದ ತೆರೆದು ಆತ್ಮದ ಮಿಂಚನ್ನು ಹೊಳೆಯಿಸುವವರು.ಅಂತರಂಗದ ಬೆಳಕಲ್ಲಿ ಬಹಿರಂಗವನ್ನು ಬೆಳಗಿಸುವವರು.ಮೊಗ್ಗು ಹೂವಾಗಿ ದಳ ಬಿರಿದು ನಿಂತಾಗ ಒಂದು ರೀತಿಯ ನಿಸ್ವನ.ಹೂವಿನ ಮಕರಂದ ಹೀರುವ ದುಂಬಿಗಳು,ಝೇಂಕಾರದ ನಾದಮಯತೆ,ನವನವೋನ್ಮೇಷ, ಮಾಧುರ್ಯದ ಮೊರೆತಕ್ಕೆ ಮನವರಳುವುದು ಸಹಜ.ಹೀಗೆ ರವಿ ಕಾಣದ್ದನ್ನು ಕವಿ ಕಂಡೇ ಕಾಣುತ್ತಾನೆ […]

ಪ್ರಸ್ತುತ

ಮತ್ತೆ ಕಾಣಬಲ್ಲೆವೇ ಆ ದಿನಗಳನು..? ಮಲ್ಲಿಕಾರ್ಜುನ ಕಡಕೋಳ ದುರಿತಕಾಲ ಎಂಬ ಪದ ನಾವೆಲ್ಲ ಬರಹಗಳಲ್ಲಿ ಸೂಕ್ಷ್ಮತೆಯಿಂದ ಬಳಕೆ ಮಾಡಿದ ಪರಿಚಯವಿತ್ತು. ಪ್ರಸ್ತುತ ನಾವು ಅನುಭವಿಸುತ್ತಿರುವ ಖರೇ, ಖರೇ ದುರಿತಕಾಲದ ಈ ದಿನಗಳಿಗೆ ಕೊನೆಯೆಂಬುದು ಯಾವಾಗ ಎಂಬ ದುಗುಡ ನಮ್ಮನ್ನೀಗ ಘೋರವಾಗಿ ಬಾಧಿಸುತ್ತಿದೆ. ಅಷ್ಟಕ್ಕೂ ಕೊರೊನಾದ ಈ ಕಾಲಘಟ್ಟಕ್ಕೆ ಕೊನೆಯೆಂಬುದು ಇದೆಯೋ, ಇಲ್ಲವೋ ಎಂಬ ಕ್ರೂರ ಆತಂಕ. ಹಗಲು ರಾತ್ರಿಗಳೆನ್ನದೇ ಕಿವಿ, ಕಣ್ಣು, ಬಾಯಿ, ಮೂಗು, ಮನಗಳ ತುಂಬೆಲ್ಲ ಸೋಂಕಿತರು, ಶಂಕಿತರು, ರೆಡ್ ಝೋನ್, ಎಲ್ಲೋ ಝೋನ್, ಪೋಲಿಸರು, […]

ಕಾವ್ಯಯಾನ

ನೇಪಥ್ಯ ಎಮ್ . ಟಿ . ನಾಯ್ಕ.ಹೆಗಡೆ ಆ ನೀಲಿ ಬಾನು, ಮಿನುಗು ತಾರೆಬೆಳೆದು ಕರಗುವ ಚಂದ್ರಈ ಭೂಮಿ – ಅದರ ಕಣಿವೆಮೊರೆವ ಕಡಲು….ಆ ತಂಗಾಳಿ, ಮುಂದೆ ಬಿರುಗಾಳಿನದಿಯ ಓಟ, ಆ ನಾದದುಂಬಿ ಗಾನಗಾಳಿಗಂಟಿದ ಬದುಕಿನಎಕ್ಕೆ ಬಿತ್ತಗಳೆಲ್ಲಾಬಿತ್ತುತ್ತಾ ಹೊರಟದ್ದುಯಾವ ಕತೆ ? ಯಾರ ಕತೆ ? ಗತಿಸಿದ ಸಾಮ್ರಾಜ್ಯಕರಗಿದ ಅರಮನೆಉರುಳಿದ ಕಿರೀಟಕ್ಕೆ–ಲ್ಲ, ಹಿನ್ನೆಲೆ ಏನು ಕತೆ ? ಬಂದ ಗುರುತುಗಳಿಹುದುನಿಂದ ಗುರುತುಗಳಿಹುದುಹೋದ ಗುರುತುಗಳಿಹುದುಆದರೆ —ಬಂದವರು ಬಂದಂತೆಹೋದುದು ಯಾಕೆ ? ಆ ಬಾನು , ಈ ಭೂಮಿ ,ಅದರ […]

ಕಾವ್ಯಯಾನ

ರಸಧಾರೆ, ಮತ್ತಿತರೆ ಕವನಗಳು ವಸುಂಧರಾ ಕದಲೂರು ಹಸಿರೆಲೆ ಕಾನನಹಸುರಲೆ ಮಲೆಯೋ ಹೊಸ ಬಗೆ ನರ್ತನಹರುಷದ ನೆಲೆಯೋ ಹುಮ್ಮಸಿನ ಮನವೋಹುರುಪಿನ ಚೆಲುವೋ ಹರಸುವ ಖುಷಿಗೆಹಾತೊರೆವ ಕ್ಷಣವೋ ಸಂಭ್ರಮ ಸಂತಸಮಳೆ ಹನಿ ಜೊತೆಗೆ ಸುರಿದಿದೆ ಹರಿದಿದೆಜೀವರಸಧಾರೆಚೈತನ್ಯದೆಡೆಗೆ ‘ಮತ್ತಿತರೆ’ ಅತ್ತಲೂ ಇತ್ತಲೂಸುತ್ತಲೂ ಕತ್ತಲೆ ಬತ್ತಿದ ಹೊಳೆಬಾರದ ಮಳೆಬಿತ್ತದ ಇಳೆಕಟ್ಟಿದೆ ಕೊಳೆಸುಟ್ಟಿದೆ ಕಳೆ ಕದಡಿದ ಕನಸಿಗೆಹೊಸತರ ಕನವರಿಕೆ ಬೇಸರದ ಭಾರಕೆಬರಿ ಭಾವ ನಿಸೂರ ಇತ್ತಲಾಗಿ ಹೊತ್ತೂಹೋಗದು ಅತ್ತಲಾಗಿಚಿತ್ತವೂ ಸ್ವಸ್ಥವಾಗದು ಹಾಗಾಗಿಬೇಕಿಲ್ಲ ಯಾವುವೂಇತರೆಇನ್ನಿತರೆ ಮತ್ತಿತರೆ. ************

ಕಾವ್ಯಯಾನ

ಕವಿತೆ. ದೀಪಾ ಗೋನಾಳ ಏಷ್ಟವಸರಅದೆಷ್ಟು ಗಡಿಬಿಡಿಎಷ್ಟೇ ಬೇಗ ಎದ್ದರೂತಿಂಡಿತಿನ್ನಲೂ ಆಗುವುದೆ ಇಲ್ಲಅನುಗಾಲ ಒಳ ಹೊರಗೆ ಗುಡಿಸಿಹಸನ ಮಾಡುವುದರಲ್ಲೆಅರ್ಧಾಯುಷ್ಯ ,,,ತಿಂದರೊ ಇಲ್ಲವೊ..!?ಕಟ್ಟಿಕೊಟ್ಟ ಡಬ್ಬಿ ಇಟ್ಟುಕೊಂಡರೊ ಇಲ್ಲವೊ..!?ತೊಳೆದ ಬಾಟಲಿಗೆ ನೀರು ತುಂಬಿದ್ದೆ ಒಯ್ದರೊ ಇಲ್ಲವೊ..!?ಹಾಲಿನ ಪಾತ್ರೆಗೆ ಮುಚ್ಚಿದೆನೊ ಇಲ್ಲವೊ..!?ಮೊಸರು ಫ್ರಿಜ್ಜಿಗೆ ದಬ್ಬಿದೆನೊ ಇಲ್ಲವೊ..!?ಬದುಕೆಲ್ಲ ಉದ್ಘರಾದ ಹಾರ..ದಾರಿಯ ತುಂಬ ಹೋಯ್ದಾಟಮನಸ್ಸಿನ ಮಾತು ಕಿವಿಗೆ ಕೇಳುವಷ್ಟು ದೀರ್ಘ ಆಲೋಚನೆ ಒಳಗೊಳಗೆ..ಜೋಲಿ ಹೊಡಿಯುವ ಬಸ್ಸಿನಲ್ಲಿ ಎದುರಿಗೆ ನನ್ನಂತೆ ಅವಸರಕ್ಕೆಎದ್ದೋಡಿ ಬಂದವಳು ಹೇಳುತ್ತಾಳೆ,ಕುಂಕುಮ ಹಚ್ಚೆ ಇಲ್ಲ!!ಓಹ್! ಹೌದು ಕನ್ನಡಿ ಮುಂದೆ ನಿಲ್ಲಲೇ ಇಲ್ಲ, ನನ್ನ ನಾನು […]

Back To Top