ಲೋರ್ನ್ ಗುಡಿಸನ್(1947)
ಜಮೈಕಾ ದೇಶದ ಕವಿಯಿತ್ರಿ
ಕೆರಿಬಿಯನ್ ಕಾವ್ಯ
ಅನುವಾದ-ಕಮಲಾಕರ ಕಡವೆ
“ನನ್ನ ಅಮ್ಮನಾಗುತ್ತಿದ್ದೇನೆ ನಾನು”
ಯಾವಾಗಲೂ ಈರುಳ್ಳಿ ವಾಸನೆ ಸೂಸುವ ಬೆರಳುಗಳ
ಹಳದಿ/ಕಂದು ಮಹಿಳೆ
ಅಪರೂಪದ ಗಿಡಗಳ ಬೆಳೆಸುತ್ತಾಳೆ ನನ್ನ ಅಮ್ಮ
ಅವುಗಳಿಗೆ ಚಹಾ ಹಾಕಿ ಪೋಷಿಸುತ್ತಾಳೆ
ಅವಳ ಹುಟ್ಟಿನ ನೀರು ನದಿಗಳಂತೆ ಹಾಡುವವು
ನಾನೀಗ ನನ್ನ ಅಮ್ಮ.
ಬಾನಿನ ಬಣ್ಣದ
ನಾರುಬಟ್ಟೆಯಿತ್ತು ಅಮ್ಮನ ಬಳಿ
ಕೂಡಿಟ್ಟ ಕಸೂತಿ ಮತ್ತು ಡಾಮಾಸು ಬಟ್ಟೆಯ
ಟೇಬಲ್ ಕ್ಲಾಥ್
ನಾಚಿಕೆಯ ತನ್ನ ಕಣ್ಣಿಂದ ದೂರ ಮಾಡಲು
ನಾನಾಗುತ್ತಿದ್ದೇನೆ ನನ್ನ ಅಮ್ಮ
ಯಾವಾಗಲೂ ಈರುಳ್ಳಿ ವಾಸನೆ ಸೂಸುವ ಬೆರಳುಗಳ
ಹಳದಿ/ಕಂದು ಮಹಿಳೆ
ಮೂಲಕವಿತೆ:
I am becoming my mother”
Yellow/brown woman
Fingers smelling always of onions
My mother raises rare blooms
and waters them with tea
her birth waters sang like rivers
my mother is now me.
My mother had a linen dress
the colour of the sky
and stored lace and damask
tablecloths
to pull shame out of her eye.
I am becoming my mother
brown/yellow woman
fingers smelling always of onions
ತುಂಬಾ ಸುಂದರ ಅನುವಾದ