ಗಝಲ್

ಗಝಲ್

ಶಾಂತ ಜೆ ಅಳದಂಗಡಿ ನೀಡೆನಗೆ ನನ್ನೊಡೆಯ ನಿನ್ನೊಲುಮೆ ಬಾಳ ಪಥದಲಿ ಆಗಲೆನಗದು ಹಿರಿಮೆ ನಿನಗಾಗಿ ಮಿಡಿಯುತಿದೆ ಸಂತಸದೆ ನಾಡಿ ಬಾಳದಾರಿಯಲಿ ಅನುಕ್ಷಣ ಸಂತಸ ದೇವನಿತ್ತ ವರದೊಲುಮೆ ಬದುಕ ದಾರಿಯಲಿ ನೀ ಮಾರ್ಗಸೂಚಿ ಸಪ್ತನಾಡಿಗಳೂ ಅರಸುತಿವೆ ದಾರಿ ದೊರೆತರದುವೆ ಮನಕೆ ಸಂತಸ ನಿನ್ನೊಲವು ಜೀವಕದು ಗರಿಮೆ ಆಸೆ ಒಲೆ ಹೂಡಿ ಹಿಡಿದು ಅಗ್ನಿ ನಾಡಿ ಪ್ರೇಮ ಪ್ರೀತಿಯ ಪಾಕ ನಿನಗಾಗಿ ಅಟ್ಟಡಿಗೆ ಉಂಡರದುವೆನಗೆ ಸಂತಸ ಗಮ್ಯ ಸೇರಲು ಇದೆ ಪಯಣವೊಮ್ಮೆ ನಡೆವ ದಾರಿಗೆ ಚೆಲ್ಲುವೆ ಮಲ್ಲಿಗೆ ನಿನಗಾಗಿ ದೃಷ್ಟಿ […]

ಲಹರಿ

ಸಂಬಂಧಗಳ ಸಂಭ್ರಮ ದೀಪಾಜಿ ಪುಟ್ಟ ಪುಟ್ಟ ಸಂಭ್ರಮಗಳನ್ನು ಬದುಕಿನುದ್ದಕ್ಕೂ ಹಿಡಿದಿಟ್ಟುಕೊಳ್ಳುವುದು ತುಂಬ ಮುಖ್ಯ. ಹೀಗೆ ಹಿಡಿದಿಟ್ಟುಕೊಂಡ ಆ ಮಧುರ ಕ್ಷಣಗಳನ್ನ ಆಗಾಗ ಮೆಲಕು ಹಾಕುತ್ತ ಅಂತ ಸಂದರ್ಭಕ್ಕೆ ಸಾಕ್ಷಿಯಾದ ಸಂಬಂಧಿಗಳನ್ನು, ಸ್ನೇಹಬಳಗವನ್ನು ನೆನೆಯುತ್ತ, ಅವಕಾಶ ಸಿಕ್ಕಾಗ ಮತ್ತೆ ಮತ್ತೆ ಭೇಟಿ ಮಾಡುತ್ತ, ಕಡಿಮೆ‌ ವೆಚ್ಚದ ಕೂಟಗಳನ್ನ ಏರ್ಪಡಿಸುತ್ತ , ಸಂಬಂಧಗಳನ್ನ ಹಸಿರಾಗಿಟ್ಟುಕೊಳ್ಳುವ ಅನಿವಾರ್ಯತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ದಿನ ದಿನಕ್ಕೆ ಬದುಕು ನಾವು ಉಹಿಸಿದ್ದಕ್ಕಿಂತಲೂ ಹೆಚ್ಚು ದುರ್ಬರವಾಗುತ್ತ ನಡೆದಿದೆ. ಸಣ್ಣ ಪುಟ್ಟ ಮಾತುಗಳು ದೊಡ್ಡ ದೊಡ್ಡ ಸಂಬಂಧಗಳ […]

ಹೊತ್ತಾರೆ

ಅಮ್ಮನೂರಿನ ನೆನಪುಗಳು ಅಮೇರಿಕಾದಿಂದ ಅಶ್ವಥ್ ಬರೆಯುತ್ತಾರೆ ಅಶ್ವಥ್ ರಂಗ ತಿಮ್ಮರಿಗೆ ನಿಯಂತ್ರಣದ ಅಥವಾ ಮೇಲ್ವಿಚಾರಣೆಯ ಅವಶ್ಯಕತೆಯೂ ಇರಲಿಲ್ಲ. ಗುಡ್ಡದಂತಿದ್ದ ನಮ್ಮ ಊರಿನಲ್ಲಿ ನೀರಿನ ವ್ಯವಸ್ಥೆಗೆ ಇದ್ದದ್ದು ಎರಡು ಕೈಪಂಪು (ಬೋರ್ ವೆಲ್) ಮತ್ತೊಂದು ಸೇದುವಬಾವಿ.  ನಮ್ಮ ಮನೆ ಗುಡ್ಡದ ತುದಿಯಲ್ಲಿದ್ದ ಮತ್ತು ಊರಿನ ಹಿಂಭಾಗದಲ್ಲಿದ್ದ ಕಡೇ ಮನೆ.  ಬಾವಿ ಮತ್ತು ಬೋರ್ ವೆಲ್ ಗಳು ಊರಿನ ಮುಂದಿನ ಭಾಗದಲ್ಲಿದ್ದವು. ನೀರು ಹೊರುವುದು ಒಂದು ಫಜೀತಿ. ಹಾಗಾಗಿ  ಗಾಡಿಯ ಮೇಲೆ ಬ್ಯಾರೆಲ್ ಇರಿಸಿ ನೀರು ತರುವುದು ನಮ್ಮ ಮನೆಯ ರೂಢಿ. ತಿಮ್ಮ ರಂಗರ […]

ಉಯ್ಯಾಲೆ

ಟಿ.ಎಸ್.ಶ್ರವಣಕುಮಾರಿ ಉಯ್ಯಾಲೆ ಉಯ್ಯಾಲೆ ಈಗಾರು ತಿಂಗಳಿನಿಂದಲೂ ಸೀತಕ್ಕನಿಗೆ ಅಷ್ಟು ಅರಾಮಿಲ್ಲ. ದಿನಕ್ಕೊಂದೊಂದು ತೊಂದರೆ. ಡಾಕ್ಟರಿಗೆ ತೋರಿಸಿಯೂ ಏನೂ ಪ್ರಯೋಜನವಾಗಿಲ್ಲ. ಅವರ ಪ್ರಕಾರ ವಯಸ್ಸಾಗಿರುವುದನ್ನು ಬಿಟ್ಟರೆ ಬೇರೇನೂ ಇಲ್ಲ. ಆದರೆ ಸೀತಕ್ಕನಿಗೆ ಮಾತ್ರಾ ದಿನದಿಂದ ದಿನಕ್ಕೆ ನಿತ್ರಾಣ. ಐವತ್ತು ಜನ ಬಂದರೂ ಹೆದರದೆ ಅಡುಗೆ ಮಾಡುತ್ತಿದ್ದವಳಿಗೆ ಈಗ ಐದು ಜನಕ್ಕೂ ಮಾಡಲೂ ಸಾದ್ಯವಾಗದಂತಾಗಿದೆ. ಈಗೊಂದು ತಿಂಗಳಿನಿಂದಂತೂ ಪೂರಾ ಹಾಸಿಗೆ ಹಿಡಿದು ಬಿಟ್ಟಿದ್ದಾಳೆ. ಶಾಮಿ, ಸರಳನೂ ತಮ್ಮ ಕೈಲಾದ್ದೆಲ್ಲಾ ಮಾಡುತ್ತಿದ್ದಾರೆ. ಸೀತಕ್ಕನಿಗೋ, ಹುಶಾರು ತಪ್ಪಿದಾಗಿನಿಂದಾಗಲೂ ಮಕ್ಕಳಿಗಾಗಿ ಹಂಬಲಿಸುವಂತಾಗಿದೆ. ಅವರೇನು ಹತ್ತಿರ […]

ನೇಣಿಗೇರಿದ ನೈತಿಕ ಮೌಲ್ಯ.

ದೀಪಾಜಿ ನಾನು ಕೂಗುತ್ತಲೆ‌ ಇದ್ದೆ ಯಾರಾದರೂ ಬಂದು ಉಳಿಸಿಯಾರೆಂದು ಓಡುತ್ತಲೆ ಇದ್ದೆ ಯಾರಾದರೂ ಹಿಡಿದು ನಿಲ್ಲಿಸಿ ಆಸ್ಪತ್ರೆಯ ಬೆಡ್ಡಿನವರೆಗೆ ತಂದು ಬಿಟ್ಟಾರೆಂದು. ಬದುಕುವ ಆಸೆಗಲ್ಲ ಜೀವದ ಹಂಗಿಗೂ ಅಲ್ಲ ನೋವಿನ ನರಳಿಕೆಗಂತೂ ಅಲ್ಲವೇ ಅಲ್ಲ ಅದೆಲ್ಲವ ಅಂದೆ ಕೈಬಿಟ್ಟಿದ್ದೆ ಅತ್ಯಾಚಾರಕೆ ಸಿಲುಕಿ ಪೋಲೀಸ್ ಠಾಣೆ ನ್ಯಾಯಾಲಯ ಮಾಧ್ಯಮಗಳ ಮುಂದೆ ಬಂದ ದಿನವೆ ನಾನು ಸತ್ತು ಹೋಗಿದ್ದೆ ಇಲ್ಲಿ ಉಳಿದದ್ದು ವರ್ಷಾನುಗಟ್ಟಲೆ‌ ಚಪ್ಪಲಿ ಸವೆಯುವಂತೆ ತಿರುಗುತ್ತಿದ್ದದ್ದು ಕೇವಲ ಅಳಿದುಳಿದ ನಂಬಿಕೆ ಎಂಬ ಭರವಸೆಯ ಮೇಲೆ ತಪ್ಪಿದಸ್ತರ ಪೊಗರು ಕಳಚಿ […]

ಮತ್ತೆಂದೂ ಬರೆಯಲಾರೆ

ನಾನಿನ್ನು ಕಾಯಲಾರೆಮುರಿದ ಮೌನದೊಳಗೆ ತೇಲಿಬರುವನಿನ್ನ ಮಾತಿನೊಂದು ಹೆಣಕ್ಕಾಗಿನಾನಿನ್ನು ಕಾಯಲಾರೆಕುಸಿದುಬಿದ್ದ ನಂಬಿಕೆಯೊಂದುಮತ್ತೊಮ್ಮೆ ಚಿಗುರುವ ಚಣಕ್ಕಾಗಿನಾನಿನ್ನು ಕಾಯಲಾರೆ ಎಂದೂ ಅರಳಲಾರೆನೆಂದು ಮುನಿಸಿಕೊಂಡಹೂವು ಬಿರಿಯುವಾ ಕ್ಷಣಕ್ಕಾಗಿನಾನಿನ್ನು ಕಾಯಲಾರೆಸ್ವರ್ಗದ ನಿರೀಕ್ಷೆಯಲಿನಿತ್ಯ ನರಕದ ಬಾಗಿಲು ಕಾಯುವಯಾತನಾದಾಯಕ ಬದುಕಿನಂಗಳದಲ್ಲಿನಾನಿನ್ನು ಕಾಯಲಾರೆಹೊರದಾರಿಗಳೇ ಇರದೀ ನರಕದೆಡೆಗೆನಡೆದು ಬರುವೆಂಬ ನಂಬಿಕೆಯಲ್ಲಿ ನಾನಿನ್ನು ಬರೆಯಲಾರೆಬರೆದದ್ದೆಲ್ಲ ವ್ಯರ್ಥಪ್ರಲಾಪವಾಗಿಲೋಕನಿಂದಿತನಾದವನ ಕಂಡುನಗುವ ಜನರ ಬಾಯಿಗೆ ಅನ್ನವಾಗಿನರಳುವ ಕುನ್ನಿಯಾಗಿ! ಕಾಯಲಾರೆಬೇಡಲಾರೆಮರುಗಲಾರೆಮತ್ತೆಂದೂಬರೆಯಲಾರೆ.

ರಾಜಕಾರಣ

ಪಕ್ಷ ರಾಜಕಾರಣಕ್ಕೊಂದು ಪರ್ಯಾಯ ಗಣೇಶ ಭಟ್, ಶಿರಸಿ ಕೊಳೆತು ನಾರುತ್ತಿರುವ ಪಕ್ಷ ರಾಜಕಾರಣಕ್ಕೊಂದು ಪರ್ಯಾಯ…… ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದಕ್ಕಿಂತ ಹೆಚ್ಚು ಪಕ್ಷಗಳಿದ್ದಾಗ, ಆಡಳಿತ ಪಕ್ಷದ ತಪ್ಪು, ಒಪ್ಪುಗಳನ್ನು ವಿರೋಧ ಪಕ್ಷಗಳು ವಿಶ್ಲೇಷಿಸುತ್ತವೆಂದು ಭಾವಿಸಲಾಗಿತ್ತು. ಜನಹಿತವೇ ಆಡಳಿತದ ಉದ್ದೇಶವಾಗಿದ್ದರೂ ಅದನ್ನು ಸಕಾರಗೊಳಿಸುವುದಕ್ಕಾಗಿ ಪ್ರತಿಯೊಂದು ಪಕ್ಷಕ್ಕೂ ತನ್ನದೇ ಆದ ಸಿದ್ದಾಂತ, ಪ್ರಣಾಳಿಕೆ, ಕಾರ್ಯವಿಧಾನವಿರುತ್ತದೆಂಬ ಭಾವನೆಯಿಂದ ಪಕ್ಷ ಆಧಾರಿತ ಚುನಾವಣೆ, ಸರ್ಕಾರ ರಚನೆಗಳಿಗೆ ನಮ್ಮ ಸಂವಿಧಾನ ಅವಕಾಶ ಕಲ್ಪಿಸಿದೆ. ಪಾಶ್ಚಾತ್ಯ ಪ್ರಜಾಪ್ರಭತ್ವ ದೇಶಗಳಲ್ಲಿರುವಂತೆ ನಮ್ಮಲ್ಲಿಯೂ ಸೀಮಿತ ಸಂಖ್ಯೆಯ ರಾಜಕೀಯ ಪಕ್ಷಗಳು ನಮ್ಮ […]

ಪಯಣ

ಸಂಜಯ ಮಹಾಜನ್ ಅಳಿದು ಹೋಗುವ ಮಾನವ ನಿರ್ಮಿತ ಕಟ್ಟಡಗಳ ಮಧ್ಯ ಅಳಿಯದೆ ಮುಂದೆ ಸಾಗಿದೆ ಹಸಿರೆಲೆಗಳ ಪಯಣ ಸದ್ದಿಲ್ಲದೆ ಮಾಸಿ ಹೋಗುವ ದೇಹಕ್ಕೆ ಚೈತನ್ಯ ತುಂಬುವ ಹೃದಯಾಂತರಾಳದ ನೆನಪುಗಳ ಪಯಣ ಪಚ್ಚೆಯಾಗಸದಿ ಸುರಿವ ಮಳೆಹನಿ ಕಪ್ಪು ಹಂಚಿನ ಹಸಿರ ಹಾಸಿನ ಮಧ್ಯ ಮಳೆಹನಿಗಳ ಪಯಣ ಮೊಳಕೆಯೊಂದು ಬೇರೂರಿ ಆಗಸಕ್ಕೆ ಕೈಚಾಚಲು ಗಟ್ಟಿ ಕಾಂಕ್ರೀಟು ಮೇಲೆ ನಡೆಸಿದೆ ಸೆನಸಾಟದ ಪಯಣ ಭೂವಿಯಲ್ಲಿ ಹೆಜ್ಜೆಯುರಿದ ಕಬ್ಬಿಣದ ಸರಳುಗಳು ಬಿಡುಗಡೆಗೆ ನಡೆಸಿವೇ ಕನಸುಗಳ ಪಯಣ ಈ ಪಯಣಗಳ ಮಧ್ಯ ಚಂಚಲ ನನ್ನ […]

ಕವಿತೆ ಕಾರ್ನರ್

ಆತ್ಮಸಾಕ್ಷಿ ನನ್ನ ಮುಂದೆ ನಡೆಎಂದು ನಾನು ಕೇಳುವುದಿಲ್ಲ ನನ್ನ ಹಿಂದೆ ಬಾಎಂದು ನಾನು ಹೇಳುವುದಿಲ್ಲ ನನ್ನ ಎಡಕ್ಕೆ ಇಲ್ಲಾ ಬಲಕ್ಕೆಬಾಎಂದು ನಾನು ಭೇಡುವುದಿಲ್ಲ! ನಾ ನಕ್ಕಾಗನನ್ನೊಡನೆ ನಗು ನಾ ಅತ್ತಾಗನನ್ನೊಡನೆ ಅಳು ನಾ ನಡೆವಾಗ ನನ್ನ ನೆರಳಾಗಿರುನಾ ನುಡಿವಾಗ ನನ್ನ ಕೊರಳಾಗಿರುಎಂದೂ ಕೇಳುವುದಿಲ್ಲ! ಹೇಗೆ ನಾನುನಡೆಯುತ್ತೇನೆಯೊನನ್ನ ಆತ್ಮಸಾಕ್ಷಿಯ ಹಾಗೆ! ನೀನೂ ನಡೆನಿನ್ನ ಆತ್ಮಸಾಕ್ಷಿಯ ಹಾಗೆಅಂತಲಾದರೂನಾನು ಯಾಕೆ ಹೇಳಲಿ?

Back To Top