ಆತ್ಮಸಾಕ್ಷಿ
ನನ್ನ ಮುಂದೆ ನಡೆ
ಎಂದು ನಾನು ಕೇಳುವುದಿಲ್ಲ
ನನ್ನ ಹಿಂದೆ ಬಾ
ಎಂದು ನಾನು ಹೇಳುವುದಿಲ್ಲ
ನನ್ನ ಎಡಕ್ಕೆ ಇಲ್ಲಾ ಬಲಕ್ಕೆ
ಬಾ
ಎಂದು ನಾನು ಭೇಡುವುದಿಲ್ಲ!
ನಾ ನಕ್ಕಾಗ
ನನ್ನೊಡನೆ ನಗು
ನಾ ಅತ್ತಾಗ
ನನ್ನೊಡನೆ ಅಳು
ನಾ ನಡೆವಾಗ ನನ್ನ ನೆರಳಾಗಿರು
ನಾ ನುಡಿವಾಗ ನನ್ನ ಕೊರಳಾಗಿರು
ಎಂದೂ ಕೇಳುವುದಿಲ್ಲ!
ಹೇಗೆ ನಾನು
ನಡೆಯುತ್ತೇನೆಯೊ
ನನ್ನ ಆತ್ಮಸಾಕ್ಷಿಯ ಹಾಗೆ!
ನೀನೂ ನಡೆ
ನಿನ್ನ ಆತ್ಮಸಾಕ್ಷಿಯ ಹಾಗೆ
ಅಂತಲಾದರೂ
ನಾನು ಯಾಕೆ ಹೇಳಲಿ?
ಸೂಪರ್… ಆತ್ಮಸಾಕ್ಷಿಯೇ ಮೂಲಾಧಾರ…ಚೆನ್ನಾಗಿದೆ