Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಸ್ತ್ರೀ ಹೆಜ್ಜೆ ಕವಿತಾ ಸಾರಂಗಮಠ ಸ್ತ್ರೀ ಹೆಜ್ಜೆ ಲಂಗ ದಾವಣಿ ತೊಟ್ಟ ಬಾಲೆಯರು ವಿರಳ.. ಹಿಡಿದಿದೆ ಫ್ಯಾಶನ್ನಿನ ಮರುಳ.. ಮಾಯವಾಗಿವೆ ಉದ್ದ ಜಡೆ ಮೊಗ್ಗುಗಳ.. ಕೇಶ ಕತ್ತರಿಸಿ ನಡೆಯುವರು ಸರಳ..! ಅನುಕರಣೆ ಹೆಸರಲಿ ನಡೆದಿದೆ ಅಂಧರ ಆಟ.. ತೋರುತಿದೆ ತೆಳು ಧಿರಿಸಿನಲಿ ಅವಳ ಮೈಮಾಟ.‌. ಹಗಲಿರುಳೂ ಅವಳ ಪೀಡಿಸುತ್ತಿದೆ ಕಾಮುಕರ ಕೂಟ..! ಮಾಧ್ಯಮಗಳಲ್ಲಿ ಜಾಹಿರಾತುಗಳ ದರಬಾರು.. ಮಹಿಳೆಯರ ಮನೆ-ಮನಗಳಲ್ಲಿ ಅವುಗಳದ್ದೇ ಸಂಚಾರು.. ಹೋಗುತಿರುವ ಅವಳದೇ ಮಾನಕೆ ಇಲ್ಲವೇ ಇಲ್ಲ ಕೊಂಚ ವಿಚಾರ..! *********

ಕಾವ್ಯಯಾನ

ಸೀರೆಯ ಸಹವಾಸ ತ್ರಿವೇಣಿ ಜಿ.ಹೆಚ್ ಸೀರೆಯ ಸಹ ವಾಸ. ಸೆರಗು ನಿರಿಗೆಗಳ ಸಮೀಕರಿಸಿ ಉಬ್ಬಿದೆದೆ ಕಂಡೂ ಕಾಣಿಸದಂತೆ ಮಣಿಸಿ ನಡುವೆ ‌”ನಡು”ವಿನ ಆಕಾರವ ಅಂದಗಾಣಿಸಿದರೂ ಜಗ್ಗುವ ಬೊಜ್ಜು. ಒಂದೊಂದು ಸೀರೆ ಉಟ್ಟಾಗಲೂ ಮತ್ತೆಷ್ಟೋ ನೆನಪುಗಳ ಕದ ಬಡಿದು ಅಳಿಸಲಾಗದವನ್ನಲ್ಲೇ ಮುಚ್ಚಿಟ್ಟು… ಕಣ್ಣ ಕನಸುಗಳನ್ನೂ ಬೆಚ್ಚಗಿಟ್ಟು… ಜರಿ ಅಂಚಿನ ಸೀರೆ, ಅಲ್ಲಲ್ಲಿ ಸಣ್ಣ ಹೂಬಳ್ಳಿಯಂಚು, ನವಿರು ಭಾವ ಒಲವ ಮೆಲುಕು. ಚಿತ್ತಾಕರ್ಷಕ ಚಿತ್ತಾರ. ಉಟ್ಟು ತೊಟ್ಟು ಸಂಭ್ರಮಿಸಿದ ಆ ಘಳಿಗೆ. ಅಷ್ಟೊಂದು ಸುಲಭವಲ್ಲ ಸೆರಗ ತುದಿಯಲ್ಲಿ ಕನಸು ಕಟ್ಟಿಕೊಂಡೇ […]

ಕಾವ್ಯಯಾನ

ಗಾಳಿಯ ಉತ್ಸವ ಪ್ರೇಮಶೇಖರ ಗಕ್ಕನೆ ಹಾರಿ ಗಬಕ್ಕನೆ ಹಿಡಿದು ನುಂಗೇಬಿಟ್ಟಿತು ನಮ್ಮೂರ ಕೆರೆಯ ಮೀನೊಂದನು ಸಾವಿರ ಸಾವಿರ ಮೈಲು ದೂರದ ಸೈಬೀರಿಯಾ ದಿಂದ ಹಾರಿ ಬಂದು ಬೆಳ್ಳಂಬೆಳಿಗ್ಗೆ ಕೆರೆ ಏರಿ ಮೇಲಿನ ಅರಳೀಮರದ ಕೊಂಬೆಯೇರಿ ಕೂತ ಸ್ವಾಲೋ ಹಕ್ಕಿಯೊಂದು. ಇಂದು ನವೆಂಬರ್ ಒಂದು. ತುರ್ತಾಗಿ ಹೋಗ ಬೇಕಿದೆ ನಾನೀಗ ರಾಜ್ಯೋತ್ಸವದಾಚರಣೆಗೆ, ನನಗಾಗಿ ಕಾದು ನಿಂತಿದೆ ಕಾರ್ಯಕರ್ತನ ಬೈಕು, ಕೂಗಿ ಕರೆಯುತ್ತಲೂ ಇದೆ ಮೈಕು. ಭದ್ರವಾಗಿದೆ ನನ್ನ ಜೇಬಿನಲಿ ಭಾಷಣದ ಹಾಳೆ, ಸಿಕ್ಕಿನಿಂತಿದೆ ನನ್ನ ಗಂಟಲಲಿ ಸ್ವಾಲೋ ನುಂಗಿದ […]

ಕಾವ್ಯಯಾನ

ಕ್ಷಮಿಸದಿರಿ ಸಂಕಟಗಳನ್ನು ಕವಿತೆ ಮಾಡುವುದು ಕ್ರೂರ ಅನ್ನಿಸಿ ಎಷ್ಟೋ ಸಲ ಸುಮ್ಮನಾಗುತ್ತೇನೆ.. ಇದು ಕವಿತೆಯಲ್ಲ; ಒಡಲ ಉರಿ. ವಿಜಯಶ್ರಿ ಹಾಲಾಡಿ ಆಸ್ಟ್ರೇಲಿಯಾದ ಕಾಳ್ಗಿಚ್ಚಿಗೆಬೆಂದ ನರಳಿದ ನೊಂದಅಳಿಲುಗಳೇ ಮೊಲಗಳೇಜಿಂಕೆಗಳೇ ನವಿಲುಗಳೇಹುಲಿ ಚಿರತೆ ಹಾವುಗಳೇಕ್ರಿಮಿ ಕೀಟ ಜೀವಾದಿಗಳೇಮರ ಗಿಡ ಪಕ್ಷಿಗಳೇಕೆಲಸಕ್ಕೆ ಬಾರದ’ ಕವಿತೆ’ಹಿಡಿದು ನಿಮ್ಮೆದುರುಮಂಡಿಯೂರಿದ್ದೇನೆಕ್ಷಮಿಸದಿರಿ ನನ್ನನ್ನುಮತ್ತುಇಡೀ ಮನುಕುಲವನ್ನು ಹಸಿರು ಹೂವು ಚಿಗುರೆಂದುಈ ನೆಲವನ್ನು ವರ್ಣಿಸುತ್ತಲೇಕಡಿದು ಕೊಚ್ಚಿ ಮುಕ್ಕಿಸರ್ವನಾಶ ಮಾಡಿದ್ದೇವೆಇಷ್ಟಾದರೂಹನಿ ಕಣ್ಣೀರಿಗೂ ಬರಬಂದಿದೆನಮ್ಮ ನಮ್ಮ ಲೋಕಗಳುಮಹಲುಗಳನ್ನು ನಾವಿನ್ನೂಇಳಿದಿಲ್ಲ ಇಳಿಯುವುದೂ ಇಲ್ಲಕ್ಷಮಿಸಲೇಬೇಡಿ ಕೊನೆಗೊಂದು ಅರಿಕೆಪ್ರಾಣಿಪಕ್ಷಿಗಳೇಮತ್ತೊಂದು ಜನ್ಮವಿದ್ದರೆ ನನಗೆದಯಮಾಡಿ ನಿಮ್ಮ ಸಂಕುಲಕ್ಕೆಕರೆದುಕೊಳ್ಳಿ- ಇಲ್ಲವೆಂದಾದರೆನಿಮ್ಮ ಪಾದ […]

ಕಾವ್ಯಯಾನ

ಓ ಸಖಿ! ನಿರ್ಮಲಾ ಆರ್. ಹೊಲದಾಗಿನ ಹಸಿರು ಎಷ್ಟು ಚೆಂದ ಓ ಸಖಿ ಪುರ್ರೆಂದು ಹಾರುವ ಹಕ್ಕಿ ತಿನ್ನುತ್ತಿತ್ತು ಮೆಕ್ಕೆ ತೆನೆಯ ಕುಕ್ಕಿ ಕುಕ್ಕಿ ಒಂದು ಬದಿ ಕರಿ ಎಳ್ಳಿನ ರಾಶಿ ಬಣ್ಣದ ಹೂಗಳು ನಲಿಯುತ್ತಿದ್ದವು ಕಂಪ ಸೂಸಿ ಬದುವಿನ ಹೂ ಬಳ್ಳಿ ಸ್ವಾಗತ ಮಾಡುತಿತ್ತು ತನ್ನ ತಾ ಹಾಸಿ ಪ್ರಕೃತಿಯ ಬಣ್ಣಿಸಲು ಪದಗಳಿಲ್ಲ ಸಖಿ ತಂಗಾಳಿಯು ಹಾದು ಹೋಗುತ್ತಿತ್ತು ನಮ್ಮ ಸೋಕಿ ರಾಶೀಯಲ್ಲಿನ ಎಳ್ಳು ತಿನ್ನುತ್ತಿದ್ದೆವು ಮುಕ್ಕಿ ಮುಕ್ಕಿ ಸಂಜೆಗೆ ವಿದಾಯ ಹೇಳಲು ಮೂಡುತ್ತಿತ್ತು ಆಗಸದಲಿ […]

ಕಾವ್ಯಯಾನ

ಅಪ್ಪ ಅಂದರೆ ಆಕಾಶ ದೇವಿ ಬಳಗಾನೂರ ಅಪ್ಪ ಅಂದರೆ ಆಕಾಶ ಅಪ್ಪ ಅಂದ್ರೆ ಅಗೋಚರ ಪ್ರೀತಿಯ ಕಡಲು ನನ್ನಮ್ಮನಂತ ಕರುಣೆಯ ಮಡಿಲು ಮಗಳ ಸಾಧನೆಯು ಪ್ರಜ್ವಲಿಸಲು ಕಾರಣವಾದ ತಿಳಿಮುಗಿಲು ಮಗಳಿಗಾಗಿ ದಣಿದನದೆಷ್ಟೋ ಹಗಲು ಅವಳಿಗಾಗಿಯೇ ಕಾಯ್ದಿರಿಸಿದನು ತನ್ನ ಇರುಳು ಅಪ್ಪ ಅಂದ್ರೆ ಮಗಳ ಪಾಲಿನ ನಾಯಕ ಅವಳ ಬದುಕ ದೋಣಿಯ ನಿಜ ನಾವಿಕ ಮಗಳ ಮುಗ್ದ ನಗುವಿಗಾಗಿ ಕಾದ ಅಮಾಯಕ ಅವಳ ಬದುಕ ರೂಪಣೆಯ ನಿಜ ಮಾಲಿಕ ಅಪ್ಪ ಅಂದ್ರೆ ಮಗಳಿಗಾಗಿಯೇ ಬದುಕೋ ಜೀವ ಅವಳ ಖುಷಿಯಲ್ಲೆ […]

ಕಾವ್ಯಯಾನ

ಕವಿತೆ ಯಶು ಬೆಳ್ತಂಗಡಿ ಮೊದಲು ಶಿಶುವಾಗಿ ಭುವಿ ಸ್ಪರ್ಶಿಸಿ,, ಮೊದಲ ಉಸಿರಾಟ ನಡೆಸಿ,, ಮೊದಲ ಕಣ್ಣೀರ ಸುರಿಸಿ,, ಮೊದಮೊದಲು ಕಂಡ ತೊದಲು ಮಾತಿನ ಕನಸು… ಮೊದಲ ತರಗತಿಗೆ,, ಮೊದಲ ಹೆಜ್ಜೆಯಿಟ್ಟಾಗ,, ಭಯದಲ್ಲೇ ಕಂಡ ನೂರೊಂದು ಕನಸು.. ಮೊದಲ ಬಾರಿ ರಾಷ್ಟ್ರನಾಯಕರ ಕಥೆ ಕೇಳಿದಾಗ,, ಮೊದಲು ಸ್ವಾತಂತ್ರ್ಯದ ಘಟನೆ ಓದಿದಾಗ,, ಅರಳಿದ ದೇಶಪ್ರೇಮದ ಕನಸು… ಮೊದಲು ಚಲನಚಿತ್ರದಿ ಮಧ್ಯಪಾನ ನೋಡಿದಾಗ,, ಮೊದಮೊದಲು ಗಲಾಟೆ ದೊಂಬಿಗಳ ನೋಡಿದಾಗ,, ಅವರಂತೆ ನಾಯಕನಾಗಬೇಕೆಂದು ಕಂಡ ಹುಚ್ಚು ಕನಸು.. ಅವನ ಸುಂದರ ಕಣ್ಣು ಕಂಡಾಗ,, […]

ಕಾವ್ಯಯಾನ

ಸಂಕ್ರಾಂತಿ ಅನಿಲ್ ಕರೋಲಿ ಸಂಕ್ರಾಂತಿ ಸಡಗರ ಪ್ರೀತಿಯ ಉಡುಗೊರೆ ಹಳ್ಳಿ ಹಳ್ಳಿಯು ಹಬ್ಬವೂ ..ಹಬ್ಬವೊ.. ರೈತರ ಪ್ರತಿ ಮನೆಯಲ್ಲೂ ಸಂಭ್ರಮ ಸಾಗರ ದನ-ಕರುಗಳು ಹೊಸ ಬಗೆಯ ಶೃಂಗಾರ ರೈತರು ಸಂಕ್ರಾತಿಯಲ್ಲಿ ಬೆಳೆದ ಬೆಳಯ ನಿರೀಕ್ಷೆಯಲ್ಲಿ ಎಲ್ಲರೂ ಏಳ್ಳು-ಬೆಲ್ಲ ಹಂಚಿ ಖುಷಿಯ ಹಂಚುವರು ಹಳ್ಳಿಗಳಲ್ಲಿ ಇದೊಂದು ವಿಶೇಷ ಹಬ್ಬವು ಜಗಳ ಮನಸ್ಥಾಪ ಮಾಡಿಕೊಂಡವರನ್ನು ಒಬ್ಬರನ್ನೊಬ್ಬರು ರಾಜಿಮಾಡಿಸುವುದು ನಮ್ಮಿ ಹಳ್ಳಿ ಹಬ್ಬ ಪ್ರೀತಿಯು ಇಲ್ಲಿ ಲಭ್ಯ ಖುಷಿಯಲೇ ನಾವು ತೇಲುವೆವು ಇಂದು ========

ಕಾವ್ಯಯಾನ

ಸಾಕು ಬಿಡು ಸಖಿ ಬಸವರಾಜ ಜಿ ಸಂಕನಗೌಡರ ಸೂರ್ಯ ಚಂದ್ರರಿಬ್ಬರನೂ ಮಧುಶಾಲೆಯಲೇ ಕಾಣುತ್ತಿರುವೆ ಸಾಕು ಬಿಡು ಸಖಿ . ನನ್ನೆದೆಯ ನೋವ ನೀ ಸುರಿಸೋ ಕಣ್ಣೀರು ತಣ್ಣಗಾಗಿಸಲಾರದು ಸಾಕು ಬಿಡು ಸಖಿ ಊರ ಮುಂದಿನ ಅಗಸಿ ಕಲ್ಲು ನೀ ಹೋದದ್ದಕ್ಕೆ ಸಾಕ್ಷಿ ಕೊಟ್ಟಿದೆ. ಮತ್ತೇಕೆ ಕನಸಲಿ ಕಾಡುವೆ ಸಾಕು ಬಿಡು ಸಖಿ. ನೀ ಬರುವ ಹಾದಿಗೆ ಬೇಲಿ ಬೆಳೆದಿದೆ. ನಾನೀಗ ಮಧುಶಾಲೆಯ ಖಾಯಂ ಗಿರಾಕಿ ಕಾಡಬೇಡ ಸಾಕು ಬಿಡು ಸಖಿ ಡೋಲಿಯಲಿ ಮಲಗಿದ ಹೆಣದ ಮೇಲೆ ನೀ […]

ಕಾವ್ಯಯಾನ

ಮಾತು-2 ಡಾ.ಗೋವಿಂದ ಹೆಗಡೆ ಮಾತು ಮಾತನಾಡುವಾಗ ಹೀಗೇನಾದರೂ ಕಿಟಕಿ ತೆರೆದುಬಿಟ್ಟಿದ್ದರೆ ಎಂಥ ಅನಾಹುತವಾಗುತ್ತಿತ್ತು ತೂರಿ ಹೋಗಿ ಕೆಳಗೆ ರಸ್ತೆಯಲ್ಲಿ ಬ್ಯಾಡ್ಮಿಂಟನ್ ಆಡುತ್ತಿರುವ ಚಿಣ್ಣರ ರಾಕೆಟ್ ಮೇಲೆ ಬಿದ್ದು ಆ ಕಡೆ ಈ ಕಡೆ ಹಾರಿ ಬಿದ್ದು ಹಾರಿ ಬಿದ್ದು ಹೇಗೆ ಇಳಿಯಬಹುದಿತ್ತು ಕುರ್ಚಿ ಹಾಕಿ ಮುಗುಮ್ಮಾಗಿ ಕೂತು ಈ ಮಾಗಿಯ ಇಳಿ ಹೊತ್ತು ತೆರೆದು ಕೂತು ಮಾತಿನ ಲೋಕ ಎಂಥ ವಿಚಿತ್ರ ಈ ಮಾತಿನದು ಮಾತು ಮಾತಾಗಲು ಕಂಠ ನಾಲಗೆ ತುಟಿ ಅಷ್ಟೇ ಸಾಲದು ಕಿವಿಯೂ ಬೇಕು […]

Back To Top