ಡಿ ವಿ ಪ್ರಹ್ಲಾದರ ಆರ್ತ ಯಾಪನೆ “ದಯಾ ನೀ, ಭವಾ ನೀ” ಡಿ ವಿ ಪ್ರಹ್ಲಾದ ತಮ್ಮ ಹೊಸ ಸಂಕಲನ “ದಯಾ ನೀ, ಭವಾ ನೀ” ಸಂಕಲನಕ್ಕೆ ನನ್ನನ್ನೆರಡು ಮಾತು ಬರೆಯಲು ಕೇಳಿದಾಗ ನನಗೆ ಆಶ್ಚರ್ಯ. ಏಕೆಂದರೆ ನಮ್ಮಲ್ಲಿ ಬಹುತೇಕರು ಸ್ವ ಪ್ರತಿಷ್ಠೆ ಮತ್ತು ಒಣ ಸಿದ್ಧಾಂತಗಳನ್ನು ಮೆರೆಸಲು ಈ ನಡುವೆ ಕವಿತೆಯನ್ನೂ ಗುರಾಣಿಯಂತೆ ಬಳಸುತ್ತಿರುವ ಸಂಧಿಗ್ದ ಕಾಲವಿದು. ಈ ಇಂಥ ಕಾಲದಲ್ಲಿ ನಮ್ಮ ಸಂಕಲನಗಳಿಗೆ ಮುನ್ನುಡಿ ಹಿನ್ನುಡಿ ಬೆನ್ನುಡಿಗಳಿಗೆ ನಾವಾಶ್ರಯಿಸುವುದು ಪೀಠಾಧಿಪತಿಗಳ ಬೆನ್ನು ಕೆರೆಯುವ ಸನ್ನಿಧಾನಕ್ಕೆ […]
ನಾ ಮೆಚ್ಚಿದ ನಾಟಕ
ಲೇಖನ ನಾ ಮೆಚ್ಚಿದ ನಾಟಕ ಮಾಲಾ ಮ ಅಕ್ಕಿಶೆಟ್ಟಿ. ಸುಮಾರು ಒಂದುವರೆ ವರ್ಷದ ಹಿಂದೆ ಬೆಳಗಾವಿಯಲ್ಲಿ ಕುವೆಂಪು ವಿರಚಿತ “ಶ್ರೀರಾಮಾಯಣ ದರ್ಶನಂ” ನ ನಾಟಕ ರೂಪ, ದೇಹ ಮತ್ತು ಮನಸ್ಸಿಗೆ ಆನಂದ ನೀಡಿತ್ತು. ಅದ್ಭುತವಾದ ನಾಟಕ ಪ್ರದರ್ಶನವನ್ನು ನೋಡಿದ ಕೃತಜ್ಞತಾಭಾವ ಆ ವರ್ಷಕ್ಕೆ ಸಲ್ಲುತ್ತದೆ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಈ ಕೃತಿ ನಿರ್ಮಾಣಕ್ಕೆ ಸುಮಾರು ಒಂಬತ್ತು ವರ್ಷ ತಗುಲಿದೆ. ಅಂದರೆ ಕುವೆಂಪು ಇದನ್ನು ತಮ್ಮ ಮೂವತ್ತೆರಡನೇ ವಯಸ್ಸಿನಲ್ಲಿ ಪ್ರಾರಂಭಿಸಿ ನಲ್ವತ್ತೋಂದರಲ್ಲಿ ಮುಗಿಸಿದರು. ಈ ಕೃತಿಗೆ ಐವತ್ತು […]
ಕೊಂಕಣಿ ಕವಿ ಪರಿಚಯ
ಲೇಖನ ಕೊಂಕಣಿ ಕವಿ ಪರಿಚಯ ಮೆಲ್ವಿನ್ ಕಾವ್ಯನಾಮ : ಮೆಲ್ವಿನ್ ರಾಡ್ರಿಗಸ್. ಬಿಬಿಮ್ ಓದಿನ ನಂತರ ಸೋಷಿಯೋಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೆಲ್ವಿನ್ ಅವರು ಕರಾವಳಿಯ ಪ್ರಸಿದ್ಧ “ದಾಯ್ಜಿ ವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾಗಿದ್ದಾರೆ. ಸಾಹಿತ್ಯ ಸೇವೆಯಲ್ಲಿ ಇವರಿಗೆ ದೊರೆತ ಪ್ರಶಸ್ತಿಗಳು ಅಪಾರ. ಕೊಂಕಣಿ ಭಾಷಾ ಮಂಡಲ್ ಗೋವಾ (1989) ಕೊಂಕಣಿ ಕುಟುಂಮ್, ಬೆಹರೈನ್ (2006) ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುರಸ್ಕಾರ (2006). ಡಾಕ್ಟರ್ ಟಿ.ಎಮ್.ಎ ಪೈ ಫೌಂಡೇಶನ್ ಉತ್ತಮಕೊಂಕಣಿ ಪುಸ್ತಕ ಪ್ರಶಸ್ತಿ.(2009) ಸಾಹಿತ್ಯ […]
ಕಾಯುವಿಕೆ
ಕವಿತೆ ಕಾಯುವಿಕೆ ತೇಜಾವತಿ ಹೆಚ್.ಡಿ. ಎಷ್ಟು ಘಮಘಮಿಸಿತ್ತಿದ್ದೆ ನೀನು..ಸುತ್ತೆಲ್ಲಾ ಮೂಲೆಗೂ ಕಂಪ ಪಸರಿಸುತ್ತಿದ್ದೆಯಲ್ಲ.. !ದಾರಿಹೋಕರನ್ನೂ ಕೈಬೀಸಿ ಕರೆದುತನ್ನೆಡೆಗೆ ಸೆಳೆವ ಮಾಯಾವಿ ನೀನು! ನಿನ್ನ ನೋಡಿದಾಗೆಲ್ಲ ಮುದ್ದಿಸಲೇ ಒಮ್ಮೆ ಎನ್ನಿಸುತ್ತುತ್ತು..ನೀನೋ…ಮುಟ್ಟಿದರೆ ಮಾಸುವಷ್ಟು ಶುಭ್ರ ಮೃದುಮಲ್ಲಿಗೆ..ಹಿತವೆನಿಸುತ್ತಿತ್ತು ಸಾಂಗತ್ಯಸಿಕ್ಕರೆ ದಿನವೂ ಮುಡಿಯಬೇಕೆನಿಸುತ್ತಿತ್ತು.. ಈಗಲೂ ಅಲ್ಲೇ ನಿನ್ನ ವಾಸ್ತವ್ಯಅದೇ ಗಿಡ ಅದೇ ಬಳ್ಳಿಎಲ್ಲೆಡೆ ಹರಡಿ ಮೈತುಂಬಾ ಹೂಗಳ ಪರಿಮಳ ! ಆದರೆ ಈಗೀಗ ಯಾಕೋನೀನೇ ತಲೆನೋವಾಗಿರುವೆಯಲ್ಲ !ಮುಡಿಯುವುದಿರಲಿ ವಾಸನೆಯೂ ಸೇರದುಇಲ್ಲಿ ಬದಲಾಗಿದ್ದು ಘಮಲೋ ಭಾವವೋ ನಾನರಿಯೆಅಂತೂ ಅಂದು ಆಕರ್ಷಿತವಾಗಿದ್ದೆ ಇಂದು ತಿರಸ್ಕೃತವಾಯ್ತು.. ನಾನು […]
ಪುಸ್ತಕ ಪರಿಚಯ
ಅಮೇರಿಕಾ ಬೊಗಸೆಯಲ್ಲಿ ಕಂಡಷ್ಟು ನೆನಪಿನಲ್ಲಿ ಉಳಿದಷ್ಟು ಪುಸ್ತಕದ ಹೆಸರು – ಅಮೇರಿಕಾ – ಬೊಗಸೆಯಲ್ಲಿ ಕಂಡಷ್ಟು ನೆನಪಿನಲ್ಲಿ ಉಳಿದಷ್ಟು ಪುಸ್ತಕದ ಬೆಲೆ ನೂರು ರೂಪಾಯಿ. ಹತ್ತು ಪರ್ಸೆಂಟ್ ರಿಯಾಯಿತಿಯಲ್ಲಿ ತೊಂಭತ್ತು ರೂಪಾಯಿಗಳು. ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ನಲ್ಲಿ ಕಳಿಸುವುದಕ್ಕೆ ಸರಿಸುಮಾರು ಮೂವತ್ತೈದು ರೂಪಾಯಿಗೂ ಮೇಲ್ಪಟ್ಟು ಆಗುತ್ತದೆ. ಹಾಗಾಗಿ ಒಟ್ಟು 90+35 ನೂರಾ ಇಪ್ಪತ್ತೈದು ಆಗುತ್ತದೆ. ಬ್ಯಾಂಕ್ ಟ್ರಾನ್ಸ್ಫರ್ ಮಾಡುವುದಾದರೆ ಎಸ್. ಬಿ. ಐ. ಖಾತೆ ಸಂಖ್ಯೆ 10386457906. ಜಯನಗರ ಎರಡನೇ ಬ್ಲಾಕ್ ಶಾಖೆ IFSC Code […]
ಮೂಕ ಸಾಕ್ಷಿ
ಕವಿತೆ ಮೂಕ ಸಾಕ್ಷಿ ಸರೋಜಾ ಶ್ರೀಕಾಂತ್ ಇತ್ತೀಚೆಗೆ ಸುಣ್ಣವಿರದ ಗೋಡೆಯೂ ಸನಿಹ ಬರಗೊಡದುಬಣ್ಣಿಸುವ ಕಿವಿಯಾಗುವುದು ಬಿಟ್ಟು ವರ್ಷಗಳೇ ಆದವೇನು!? ನೆಪಕ್ಕಾದರೂ ಸಾಂತ್ವನದ ನುಡಿಗಳಾರೂ ಆಡಲಿಲ್ಲದಿನಂಪ್ರತಿ ಸಾಯೋರಿಗೆ ಅಳುವರಾರು ಅಂದರೆಲ್ಲ ಈಗೀಗ ಜೋತು ಬಿದ್ದ ಸೂರಿನ ಜಂತಿಗೂ ಜಿಗುಪ್ಸೆಸಂಕಷ್ಟದ ಮಾಳಿಗೆ ಬಿಟ್ಟು ಕಾಲನಡಿ ಅಡಗಿ ಮಾಯವಾಗುವುದೇ ಇಷ್ಟವಂತೆ ಇಲಿ ಬಿಡಿ,ಇರುವೆ ಜಿರಳೆಗಳ ಹಾವಳಿಯಾವುದೂ ಇಲ್ಲಿಲ್ಲಬರಿದಾದ ಡಬರಿಗೆ ಯಾವ ಸಪ್ಪಳದ ಖಬರಿಲ್ಲ….! ನಿದ್ರೆ ಇರದ ರಾತ್ರಿಗಳಲ್ಲೆಲ್ಲಾ ಹರಕು ಹಾಸಿಗೆಯಿಂದ ಹೊರ ಬರುತ್ತಲೇ ಇರುವ ಕಾಲುಗಳುಸುಳ್ಳಾಗಿಸುತ್ತವೆ ಗಾದೆ ಮಾತನ್ನು ನಿತ್ಯ ಒಂದಿಷ್ಟು […]
ಗೆಲುವಿಗೆ ಶತ್ರುಗಳಿವೆ. . . . ಎಚ್ಚರಿಕೆ‼
ಗೆಲುವಿಗೆ ಶತ್ರುಗಳಿವೆ. . . . ಎಚ್ಚರಿಕೆ‼ ನನ್ನಲ್ಲಿರುವ ಚೂರು ಪಾರು ಆತ್ಮವಿಶ್ವಾಸವನ್ನು ಒಗ್ಗೂಡಿಸಿ ಏನನ್ನೇ ಮಾಡಲು ಹೊರಟರೂ ಉತ್ಸಾಹಕ್ಕೆ ತಣ್ಣೀರೆರುಚುವವರು ಸುತ್ತಲೂ ಸುತ್ತುವರೆದಂತೆ ಇರುತ್ತಾರೆ. ಅಷ್ಟೇ ಅಲ್ಲ ಮನದಲ್ಲಿ ಉಕ್ಕುತ್ತಿರುವ ಹಂಬಲವನ್ನು ಚಿವುಟಿ ಚಿಂದಿ ಮಾಡುತ್ತಾರೆ. ಎಷ್ಟೋ ಸಲ ನನ್ನಿಂದ ಏನೂ ಆಗುವುದಿಲ್ಲ ಅನ್ನುವ ಭಾವವನ್ನು ಮೂಡಿಸುವವರೂ ಇದ್ದಾರೆ. ಅವರಿವರ ಇಂಥ ಗಿರಕಿಯೊಳಗೆ ಸಿಕ್ಕಿ ಬಿದ್ದರೆ ನನ್ನ ಕಥೆ ಮುಗಿದೇ ಹೋಗುತ್ತದೆ ಅಂತ ಅನ್ನಿಸಿದರೂ ಅದರಿಂದಾಚೆ ಬರಲು ಆಗುತ್ತಿಲ್ಲ. ‘ಏನಾದರೂ ಆಗಲಿ ಮುನ್ನುಗ್ಗು ಎಂಥ […]
ಏನೂ ಸಾಧ್ಯವಿಲ್ಲವೆಂಬ ಕಾಲಘಟ್ಟದಲ್ಲಿ ಪ್ರತಿರೋಧಗಳು ಬಂದಿವೆ ಬಿ.ಶ್ರೀನಿವಾಸ ಬಂಡ್ರಿ ಗೆಳೆಯ ಬಿ.ಶ್ರೀನಿವಾಸ ಕಡುಬಡತನದ, ಅನಕ್ಷರಸ್ಥ ಕುಟುಂಬದಲ್ಲಿ ಜನಿಸಿದರು. ೦೧-೦೬-೧೯೭೦ ಅವರ ಜನ್ಮದಿನ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ತಂದೆ ಬಂಡ್ರಿ ನರಸಪ್ಪ, ತಾಯಿ ಓಬವ್ವರಿಗೆ ಹನ್ನೊಂದು ಮಕ್ಕಳ ಪೈಕಿ, ಬದುಕುಳಿದ ಏಳು ಮಕ್ಕಳಲ್ಲಿ ಶ್ರೀನಿವಾಸ ಸಹ ಒಬ್ಬರು.ಸಂಡೂರು ತಾಲೂಕಿನ ಬಂಡ್ರಿ ಗ್ರಾಮದ ಜೋಗಿಕಲ್ಲು ಗುಡ್ಡದಿಂದ ಬದುಕನ್ನರಸಿ ಕೂಡ್ಲಿಗಿಯಲ್ಲಿ ನೆಲೆನಿಂತರು. ಪ್ರಾಥಮಿಕ,ಪ್ರೌಢಶಾಲಾ ವಿದ್ಯಾಭ್ಯಾಸವನ್ನೆಲ್ಲ ಕೂಡ್ಲಿಗಿಯಲ್ಲಿ ಪೂರೈಸಿದ ನಂತರ,ಕೊಟ್ಟೂರು,ಹೂವಿನಹಡಗಲಿ,ಹೊಸಪೇಟೆಯಲ್ಲಿ ಬಿ.ಎಸ್.ಸಿ ಪದವಿ ನಂತರ ಕಲಬುರಗಿಯಲ್ಲಿ ನ್ಯೂಕ್ಲಿಯರ್ ಭೌತಶಾಸ್ತ್ರದಲ್ಲಿ ಎಮ್.ಎಸ್.ಸಿ.ಸ್ನಾತಕೋತ್ತರ ಪದವಿ ಪಡೆದರು.ಪ್ರಜಾವಾಣಿ […]
ಮಕ್ಕಳಿಗೆ ಬದುಕಿನ ಪಾಠ
ಲೇಖನ ಮಕ್ಕಳಿಗೆ ಬದುಕಿನ ಪಾಠ ನಿಖಿಲ ಎಸ್. ಮಕ್ಕಳಿಗೆ ಬೇಕು ಶಿಕ್ಷಣದ ಜೊತೆಗೆ ಜೀವನದ ಪಾಠ.ಒಬ್ಬ ತಂದೆ ತಾನು ಅನುಭವಿಸಿದ ನೋವು ನನ್ನ ಮಕ್ಕಳಿಗೆ ಬರಬಾರದು ಎನ್ನುವಷ್ಟು ಚೆನ್ನಾಗಿ ಓದಿಸಿ,ಒಂದು ಒಳ್ಳೆಯ ನೌಕರಿ ಸೇರಿಸಬೇಕು, ಎಂಬ ಭಾವನೆ ಹೆಚ್ಚಿನ ಪೋಷಕರದ್ದಾಗಿರುತ್ತದೆ. ಇದು ಸಹಜ ಹಾಗೆಯೇ ಇದು ತಪ್ಪಲ್ಲ. ಆದರೆ ಮಕ್ಕಳಿಗೆ ಕಷ್ಟವೇ ಇರಬಾರದು ಎಂದು ಮುದ್ದಿನಿಂದ ಬೆಳೆಸುವುದರಿಂದ ಜೀವನದ ಶಿಕ್ಷಣ ಪಾಠ ಕಲಿಸದೆ ಕೇಳಿದೆಲ್ಲವನ್ನು ತಕ್ಷಣವೇ ಅವರ ಕೈಗೆಟಕುವಂತೆ ನೀಡುವುದರಿಂದ ಮಕ್ಕಳು ಹಣವನ್ನು ಗೆಲ್ಲುತ್ತಾರೆ ವಿನಹ ಜೀವನವನ್ನಲ್ಲ.“ಮಕ್ಕಳಿಗೆ […]
ಗುಟ್ಟು
ಕವಿತೆ ಗುಟ್ಟು ಎಸ್ ನಾಗಶ್ರೀ ಸಣ್ಣ ಊರಿನ ಪ್ರೇಮಿಗಳಪಾಡು ಹೇಳಬಾರದುರಂಗೋಲಿ ಗೆರೆಯಲ್ಲಿನಸಣ್ಣ ಮಾರ್ಪಾಡುಮೂಲೆಯಂಗಡಿಯ ಕಾಯಿನ್ನುಬೂತಿನನಿಮಿಷಗಳ ಲೆಕ್ಕಕಾಲೇಜು ಬಿಟ್ಟ ಕರಾರುವಕ್ಕುನಿಮಿಷ ಸೆಕೆಂಡುಯಾವ ಬಸ್ಸಿನ ದಾರಿಯಲಿಅಡ್ಡ ನಿಂತಳು ಪೋರಿಯಾರ ಮನೆಯ ಚಿತ್ರಾನ್ನತಿಂದುಂಡ ಕೈ ಘಮನಾಯಿಗೇಕೆ ಅಲ್ಲೇ ನಡೆದಾಟಕೆನ್ನೆಗುಳಿ ಹೆಚ್ಚು ಹೊತ್ತುಯಾರ ಮುಂದಿತ್ತುಬೆಳಿಗ್ಗೆ ಮುಡಿಯದ ಹೂಸಂಜೆ ಹೆರಳಿಗೆ ಬಂದದ್ದು ಹೇಗೆಂಬಸೂಕ್ಷ್ಮಗಳು ಇಲ್ಲಿನಗೋಡೆ, ಗಿಡ, ಮರ, ಬೇಲಿಗಳಿಗೆ ಸಲೀಸುಕಣ್ಣಲ್ಲೇ ತೂಕದ ಬಟ್ಟು ಹೊತ್ತುತಿರುಗುವ ತಕ್ಕಡಿಗಳುರಸ್ತೆಬದಿಗೆ ನಿರಪಾಯ ನಿಂತುಮನೆ ಹಿರಿಯರಿಗೆಸಂದೇಶ ಕಳಿಸಿಮಜಾ ನೋಡುತ್ತವೆ ಸಣ್ಣ ಊರಿನ ಹೆಂಗೆಳೆಯರಬುದ್ಧಿ ಬ್ರಹ್ಮಾಂಡ ಬೆಳೆಯುವುದು ಹೀಗೆಪ್ರೀತಿಸಿದಾಗ ಬುದ್ಧಿ ಕಳೆಯದೆಜೋಪಾನ […]