ಲೇಖನ
ಮಕ್ಕಳಿಗೆ ಬದುಕಿನ ಪಾಠ
ನಿಖಿಲ ಎಸ್.
ಮಕ್ಕಳಿಗೆ ಬೇಕು ಶಿಕ್ಷಣದ ಜೊತೆಗೆ ಜೀವನದ ಪಾಠ.ಒಬ್ಬ ತಂದೆ ತಾನು ಅನುಭವಿಸಿದ ನೋವು ನನ್ನ ಮಕ್ಕಳಿಗೆ ಬರಬಾರದು ಎನ್ನುವಷ್ಟು ಚೆನ್ನಾಗಿ ಓದಿಸಿ,ಒಂದು ಒಳ್ಳೆಯ ನೌಕರಿ ಸೇರಿಸಬೇಕು, ಎಂಬ ಭಾವನೆ ಹೆಚ್ಚಿನ ಪೋಷಕರದ್ದಾಗಿರುತ್ತದೆ. ಇದು ಸಹಜ ಹಾಗೆಯೇ ಇದು ತಪ್ಪಲ್ಲ. ಆದರೆ ಮಕ್ಕಳಿಗೆ ಕಷ್ಟವೇ ಇರಬಾರದು ಎಂದು ಮುದ್ದಿನಿಂದ ಬೆಳೆಸುವುದರಿಂದ ಜೀವನದ ಶಿಕ್ಷಣ ಪಾಠ ಕಲಿಸದೆ ಕೇಳಿದೆಲ್ಲವನ್ನು ತಕ್ಷಣವೇ ಅವರ ಕೈಗೆಟಕುವಂತೆ ನೀಡುವುದರಿಂದ ಮಕ್ಕಳು ಹಣವನ್ನು ಗೆಲ್ಲುತ್ತಾರೆ ವಿನಹ ಜೀವನವನ್ನಲ್ಲ.“ಮಕ್ಕಳಿಗೆ ಆಸ್ತಿಯನ್ನು ಮಾಡುವುದರ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಡಾ. ಅಬ್ದುಲ್ ಕಲಾಂ ಅವರು ಹೇಳಿದ್ದಾರೆ. . ”ಬಾಲ್ಯದಿಂದಲೇ ಜೀವನ ಶಿಕ್ಷಣ ಕಲಿಸಬೇಕೆನ್ನುವ ಸತ್ಯ ಈ ಮಾತಿನ ಹಿಂದಿದೆ.ಹಾಗಿದ್ದರೆ ಜೀವನ ಶಿಕ್ಷಣವೆಂದರೇನು ಎಂಬುದು ಸಹಜವಾಗಿ ಏಳುವ ಪ್ರಶ್ನೆ.ಸಂಸ್ಕಾರ, ಆತ್ಮವಿಶ್ವಾಸ, ಸವಾಲುಗಳನ್ನು ಸ್ವೀಕರಿಸುವ ಆತ್ಮಸ್ದೈರ್ಯ, ಕಠಿಣಪರಿಶ್ರಮ, ಮಾನವೀಯತೆ, ಸ್ವತಂತ್ರ ನಿರ್ಧಾರವನ್ನು ತೆಗೆದುಕೊಳ್ಳುವ ಭರವಸೆ, ಸಕರಾತ್ಮಕ ಮನೋಬಾವನೆಯನ್ನ ಬೆಳೆಸಿಕೊಳ್ಳುವುದೇ ಜೀವನ.
ಸಂಸ್ಕಾರಕಲಿಸಿ:
ಜೀವನದಲ್ಲಿ ಮುಖ್ಯವಾಗಿ ಬೇಕಿರುವುದು“ಸಂಸ್ಕಾರ”ಸುಂದರಬದುಕಿಗೊಂದು ಭದ್ರ ಬುನಾದಿ,ಮನೆಯೇ ಮೊದಲ ಪಾಠಶಾಲೆ. ಮಕ್ಕಳಿಗೆ ವಯಸ್ಸಿಗೆ ಬರುವವರೆಗೂ ತಂದೆ-ತಾಯಿಯೇ ಆದರ್ಶರಾಗಿರುತ್ತಾರೆ.ಅವರ ನಡವಳಿಕೆಗಳನ್ನೆ ಅನುಸರಿಸುತ್ತಾರೆ. “ಬಿತ್ತಿದಂತೆ ಬೆಳೆ” ಎಂಬ ನಾಣ್ಣುಡಿಯಂತೆ ಮಕ್ಕಳಿಗೆ ಮೌಲ್ಯವನ್ನು ತಿಳಿಹೇಳಿದರೆ ಆ ಆದರ್ಶದಂತೆಯೇ ಬೆಳೆಯುತ್ತಾರೆ. ಅವರಲ್ಲಿ ಸಕರಾತ್ಮಕ ಚಿಂತನೆಯನ್ನ ಬೆಳೆಸುವುದು. ಹಿರಿಯರನ್ನ ಗೌರವಿಸುವುದು. ಭಗವಂತನ ಶ್ರದ್ದೆ ಮತ್ತು ನಂಬಿಕೆಯನ್ನಿಡುವುದು. ಕುಟುಂಬ, ಸಂಬಂದಿಕರೊಂದಿಗೆ ಉತ್ತಮ ಬಾಂದವ್ಯವನ್ನ ಹೊಂದುವುದು. ಜೊತೆಗಿರುವ ಸ್ನೇಹಿತರನ್ನು ಆಧರಿಸಿ ಜೀವನದ ದಿಕ್ಕು ಸಾಗುವುದಿದೆ.
ಅವಲಂಬನೆ ತಗ್ಗಿಸಿ:
ಹೆತ್ತವರು ಮಕ್ಕಳಿಗೆ ಬದುಕಿನ ಅನುಭವಗಳನ್ನು ಕಲಿಸಬೇಕು. ಮಗು ಎಡವಿಬಿದ್ದಾಗ ಅಳುತ್ತಾರೆ. ಆ ನೋವಿನ ಅನುಭವದಿಂದ ಮುಂದೆ ಎಚ್ಚರಿಕೆಯಿಂದ ಹೆಜ್ಜೆಯನ್ನು ಹಾಕಿ ಮುಂದೆ ಸಾಗಬೇಕು.ಮಕ್ಕಳು ಕೇಳಿದನ್ನೆಲ್ಲಾ ತಂದು ಕೊಡುವ ಬದಲು ಆ ವಸ್ತುವನ್ನು ಖರೀದಿಸುವ ಶ್ರಮವನ್ನ ತಿಳಿಸಿಕೊಡಬೇಕು. ಮಕ್ಕಳು ಪ್ರತಿಯೊಂದು ವಿಷಯದಲ್ಲೊ ಪೋಷಕರನ್ನೇ ಅವಲಂಬಿಸಿದರೆ ಕಲಿಕೆ ಮುಗಿದ ನಂತರ ನೀರಿನಿಂದ ಹೊರ ತೆಗೆದ ಮೀನಿನಂತಾಗುತ್ತದೆ. ಯಾವುದಾದರೂ ಸಣ್ಣಪುಟ್ಟ ವಿಷಯದಲ್ಲಿ ಮಕ್ಕಳೇ ನಿರ್ದಾರ ತೆಗೆದುಕೊಳ್ಳುವಂತಾಗಬೇಕು.
ಒತ್ತಡ ಬೇಡ:
ನನ್ನ ಮಗ ನಾನು ಹೇಳಿದ ಹಾಗೆ ಕೇಳಬೇಕು, ಹೇಳಿದ್ದನ್ನೆ ಓದಬೇಕು, ನಾನು ಹಾಕಿದ ಗೆರೆ ದಾಟಬಾರದು ಎಂಬ ಭಾವನೆ ಬೆಳೆಸಿಕೊಳ್ಳದೆ ಅವರ ಮನಸ್ಸನ್ನು ಅರಿತು ಅವರು ಬಯಸಿದ ಕ್ಷೇತ್ರದಲ್ಲಿ ಅವರಿಗೆ ಇಷ್ಟವಾದ ವಿಷಯವನ್ನು ಆಯ್ದುಕೊಳ್ಳಲು ಅವಕಾಶ ನೀಡಬೇಕು.
ಸ್ನೇಹಬಾವದಿಂದಿರಿ:
ಮಕ್ಕಳ ಪ್ರತಿಯೊಂದು ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡದೇ ಕೆಲವವೊಂದು ನಿರ್ದಾರವನ್ನು ಅವರೇ ತೆಗೆದುಕೊಳ್ಳುವ ಹಾಗೆ ಸ್ವಾತಂತ್ರ್ಯ ನೀಡಬೇಕು.
ಮಕ್ಕಳಿಗೆ ಜೀವನಶಿಕ್ಷಣದ ಪಾಟವನ್ನು ಕೊಡುವವರು ಬೆಳೆಯುವ ಪರಿಸರ, ತಂದೆ-ತಾಯಿ, ಗುರು-ಹಿರಿಯರು ಅವರ ಮಾರ್ಗದರ್ಶನಲ್ಲಿ ಮಕ್ಕಳು ಉತ್ತಮವಾಗಿ ಬೆಳೆಯಲು ಸಾದ್ಯ…
***************************************************************