ಹೆಣ್ಣು ಬದುಕಿನ ಘನತೆ
ಹೆಣ್ಣು ಬದುಕಿನ ಘನತೆ ವಸುಂಧರಾ ಕದಲೂರು. ವಸುಂಧರಾ ಕದಲೂರು. ಒಪ್ಪಿಗೆ ಇಲ್ಲದೇ ಮಹಿಳೆ ಮೈ ಮುಟ್ಟುವಂತಿಲ್ಲ ( ದೆಹಲಿ ನ್ಯಾಯಾಲಯ ತೀರ್ಪು 22-1-2018) ‘ಅರೆ.., ಹೆಣ್ಣಿನ ಮೈ ಮುಟ್ಟಲು, ಆಕೆಯ ಒಪ್ಪಿಗೆಯ ಅಗತ್ಯವಿದೆಯಾ’ ಎಂದು ಕುಹಕವಾಡುವ ಮಂದಿಯ ನಡುವಲ್ಲೇ ‘ಇದನ್ನೂ ಸಹ ನ್ಯಾಯಾಲಯವೇ ಹೇಳಿಕೊಡಬೇಕೆ ಅಷ್ಟೂ ಸೂಕ್ಷ್ಮ ಅರ್ಥವಾಗದೇ’ ಎಂದು ನೊಂದುಕೊಳ್ಳುವ ಮನಸ್ಸುಗಳು ಎಷ್ಟಿವೆಯೋ.. ಏನೆಲ್ಲಾ ಸಾಧಸಿ ಸೈ ಎನಿಸಿಕೊಂಡರೂ ಈ ಕ್ಷಣಕ್ಕೂ ಹೆಣ್ಣುಮಗುವಾಗಿ ಹುಟ್ಟುವ ಹಕ್ಕಿನಿಂದ ವಂಚಿತವಾಗಿ ಗರ್ಭ ಸೀಳಿಸಿಕೊಂಡು ಹೊರಬಂದು […]
ಕಾವ್ಯಯಾನ
ನಿನ್ನ ಧ್ಯಾನ ಮಲ್ನಾಡ್ ಮಣಿ ಅರಳು ಮಲ್ಲಿಗೆಯ ಮಾಲೆ ಮಾಡಿ ನಿನ್ನ ಕೊರಳ ಧ್ಯಾನಿಸುತ್ತಲಿರುವೆ. ಎಂದು ಬರುವೆಯೆಂದು ದಾರಿ ಕಾಯುವ ಶಬರಿ ನಾನು. ದೇಹ ಮಲ್ಲಿಗೆ ಗೀಡವು ಭಾವ ಅದರ ಹೂವು, ನಿನ್ನ ನೆನಪಿನ ನೀರನೆರೆದು ಹೂ ಕಿತ್ತು ಕಟ್ಟಿ ಮಾಲೆ ಮಾಡಿದೆ. ನಿನ್ನ ದಾರಿ ಕಾದು ಮತ್ತೆ ಮಲ್ಲೆ ಹೂವ ಕಂಡೆ, ಅರಳು ಮಲ್ಲಿಗೆ ನಗುವ ಬೀರಿತು. ಹೊತ್ತು ಹಾದು ಹೋದರು ನಿನ್ನ ಸುಳಿವು ಕಾಣದು ಬರುವ ಸಂಜೆಗೆಂಪು ನಗುವ ಮಾಸಿತು. ನೆರಳಿನಲ್ಲಿ ನನ್ನ ನೆರಳು […]
ಸ್ವಾತ್ಮಗತ
ಅಭಿವೃದ್ಧಿಯಾಗಬೇಕಾದ ‘ಹೆಳವರು’..! ಅಭಿವೃದ್ಧಿಯಾಗಬೇಕಾದ ‘ಹೆಳವರು’..! ಇವರ ಒಟ್ಟು ಸಂಖ್ಯೆ ಸುಮಾರು 80 ಸಾವಿರಬಹುದು. ಇದಿಷ್ಟೇ ಈ ಜಾನಂಗದ ಜನರಿಗೆ 180 ಕ್ಕೂ ಹೆಚ್ಚು ಬೆಡಗುಗಳು ಅಥವಾ ಕುಲಗಳು ಇರಬಹುದು. ಅಂದರೆ, ಪ್ರತಿ 444 ಜನರಿಗೆ ಒಂದು ‘ಕುಲ’ವಾಯಿತು..! ಅಲ್ಪಸ್ವಲ್ಪ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರೂ ಇವರ ಮೂಲ ವೃತ್ತಿ ಭಿಕ್ಷಾಟನೆಯಾಗಿದೆ. ಈ ಜನಾಂಗ ಇವರ ಮೂಲ ಕಸುಬಾದ ಭಿಕ್ಷಾಟನೆ ಬಿಟ್ಟಿಲ್ಲ.ಅದೂ ಈ ಜನರು ಎಲ್ಲರ ಮನೆಗೆ ಅಂದರೆ ಕಂಡ, ಕಂಡವರ ಮನೆಗೆ ಭಿಕ್ಷಾಟನೆಗೆ ಹೋಗುವುದಿಲ್ಲ. ತಮ್ಮ ಒಕ್ಕಲು ಮನೆಯವರ […]
ಕಾವ್ಯಯಾನ
ಗಝಲ್ ಡಾ.ಗೋವಿಂದ ಹೆಗಡೆ ಈ ಬೆಳಗು ಎಂದಿನಂತಿಲ್ಲ ಈ ಬದುಕು ಎಂದಿನಂತಿಲ್ಲ ಅಲೆಗಳೆಷ್ಟು ಕ್ಷುಬ್ಧವಾಗಿವೆ ಈ ಕಡಲು ಎಂದಿನಂತಿಲ್ಲ ಮಧುಶಾಲೆಗೇ ಗರ ಬಡಿದು ಈ ಗುಟುಕು ಎಂದಿನಂತಿಲ್ಲ ಎಂಥ ಮರುಳಿತ್ತು ಸಂಜೆಯಲ್ಲಿ ಈ ಇರುಳು ಎಂದಿನಂತಿಲ್ಲ ಮುಖ ತಿರುಗಿಸಿ ನಡೆದಳಲ್ಲ ಯಾಕವಳು ಎಂದಿನಂತಿಲ್ಲ ಎದೆಯೂಟೆ ಬತ್ತಿಹೋಯಿತೇ ಈ ಮಡಿಲು ಎಂದಿನಂತಿಲ್ಲ ಬಾಂದಳಕೆ ಬೆಂಕಿ ಬಿದ್ದಿದೆ ಈ ಮುಗಿಲು ಎಂದಿನಂತಿಲ್ಲ ಸಾಂತ್ವನವ ಅರಸಿದೆ ‘ಜಂಗಮ’ ಈ ಹೆಗಲು ಎಂದಿನಂತಿಲ್ಲ ********
ಪುಸ್ತಕ ಸಂಗಾತಿ
ಹಿಂದಿನ ಬೆಂಚಿನ ಹುಡುಗಿಯರು ಕೃತಿ: ಹಿಂದಿನ ಬೆಂಚಿನ ಹುಡುಗಿಯರು ಲೇಖಕಿ :- ಶೈಲಜಾ ಹಾಸನ # ಸಾಬು :- ತನಗೆಷ್ಟೇ ಕಷ್ಟಗಳಿದ್ದರೂ ಮಗ ತನ್ನಂತೆ ಆಗಬಾರದೆಂದು ಹೊಟ್ಟೆ ಬಟ್ಟೆ ಕಟ್ಟಿ, ಬೀದಿ ಬೀದಿ ಅಲೆದು ಕಷ್ಟಪಟ್ಟು ಮಗನನ್ನು ದೊಡ್ಡ ವ್ಯಕ್ತಿ ಯಾಗಿಸುವ ತಂದೆ. ಇಳಿ ವಯಸ್ಸಿನಲ್ಲಿ ತನ್ನ ತಂದೆ ತಾಯಿಗೆ ಮತ್ತೊಂದು ಮಗುವಾಗುವುದನ್ನು ಅರಿತು ಅವರನ್ನು ದೂರ ಮಾಡುವ ಮಗ. ಹುಟ್ಟಲಿರುವ ಮಗುವಿನ ಬದುಕನ್ನು ಕಟ್ಟಲು ಮತ್ತೆ ತನ್ನ ವೃದ್ಧಾಪ್ಯದಲ್ಲಿ ಪಾತ್ರೆ ಪಗಡೆ ಮಾರಾಟಕ್ಕೆ ಹೊರಡುವ […]
ಕಾರ್ಮಿಕ ದಿನದ ವಿಶೇಷ-ಗಝಲ್
ಗಝಲ್ ತೇಜಾವತಿ ಹೆಚ್.ಡಿ. ಗಝಲ್ ಕನಿಷ್ಠ ಕೂಲಿಗಾಗಿ ಮೈಯೊಳು ಬೆವರ ಹರಿಸುವೆವು ಕಾರ್ಮಿಕರು ನಾವು ಒಂದ್ಹೊತ್ತಿನ ಗಂಜಿಗಾಗಿ ಶ್ರಮದ ಬದುಕ ಸಾಗಿಸುವೆವು ಕಾರ್ಮಿಕರು ನಾವು ಕರ್ತವ್ಯ ನಿಷ್ಠೆಯಲಿ ಹಗಲಿರುಳೆನ್ನದೆ ಸ್ವಾರ್ಥವ ತೊರೆದು ಹೋರಾಡುವೆವು ಬಿಸಿಲು ಮಳೆ ಗಾಳಿಗೆ ಜಗ್ಗದೆ ತನುವ ಒಡ್ದುವೆವು ಕಾರ್ಮಿಕರು ನಾವು ಮಲಗಲು ಸೂರಿಲ್ಲದೆ ಮೈಗೆ ಹೊದಿಕೆಯಿಲ್ಲದೆ ಚಳಿಗೆ ನಲುಗಿದರೂ ಒಡೆಯನಿಗೆ ಸುಸಜ್ಜಿತ ಅರಮನೆ ನಿರ್ಮಿಸುವೆವು ಕಾರ್ಮಿಕರು ನಾವು ಕೃಷಿಯನ್ನೇ ನಂಬಿ ಮುಗಿಲನ್ನು ನೋಡುತ ಮಳೆಯ ಕಾಯುವೆವು ದೇಶಕ್ಕಾಗಿ ಹೊಲವ ಉತ್ತು ಅನ್ನವ ಬೆಳೆಯುವೆವು […]
ಕಾರ್ಮಿಕ ದಿನದ ವಿಶೇಷ-ಬರಹ
ಮೇ 1 ಚಿಂತನೆ- ಚಿಂತೆಗಳು ಪೂರ್ಣಿಮಾ ಸುರೇಶ್ ಮೇ 1 ಚಿಂತನೆ- ಚಿಂತೆಗಳು ಮೇ ದಿನ ಅಂದರೆ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ, (ಅಂತರರಾಷ್ಟ್ರೀಯ ಶೃಮಿಕ ದಿನಾಚರಣೆಯೂ ಹೌದು )ವರ್ಗ ಹೋರಾಟಗಳ ವಾರ್ಷಿಕ ದಿನಾಚರಣೆಯಾಗಿ ಕಾರ್ಮಿಕ ವರ್ಗ ಆಚರಿಸುತ್ತಿದ್ದಾರೆ. ಕಾರ್ಮಿಕರ ಸಭೆ, ವಿಚಾರಗೋಷ್ಠಿ,ಪ್ರದರ್ಶನ, ಹಕ್ಕುಗಳನ್ನು ಸಾಧಿಸಲು ಮೆರವಣಿಗೆ ಮುಂತಾದವುಗಳನ್ನು ಹಮ್ಮಿಕೊಳ್ಳುವ ಕಾರ್ಮಿಕರ ಉತ್ಸವದ ದಿನ . ಸಾರ್ವಜನಿಕ ರಜಾ ದಿನವಾಗಿಯೂ ಘೋಷಿತವಾಗಿದೆ .ದೇಶವೊಂದರ ಜೀವನಾಡಿಯಂತಿರುವ ಕಾರ್ಮಿಕರ ಬದುಕಿನ ಸಮಾನತೆಗಾಗಿ ಅವರ ಹೋರಾಟದ ಬದುಕನ್ನು ನೆನಪಿಸುವ ದಿನದ ಆಚರಣೆಯ ಹಿಂದೆ […]
ಕಾರ್ಮಿಕ ದಿನದ ವಿಶೇಷ-ಕವಿತೆ
ಬೆವರ ಹನಿಗಳು ಚೈತ್ರಾ ಶಿವಯೋಗಿಮಠ ಬೆವರ ಹನಿಗಳು ದುಡಿಯುವ ಕೈಗಳು, ದೇವರ ಕೈಗಳು ಹೊಲದಲಿ ಕೃಷಿಕ ಗಡಿಯಲಿ ಸೈನಿಕ ದುಡಿಯಲು ಕಾರ್ಮಿಕ ಕಾಯಕ ಯೋಗದ ಹರಿಕಾರರು ಬಸವಾದಿ ಪ್ರಮಥರು ದುಡಿಮೆ, ಶ್ರಮದ ಮಹತ್ವ ಸಾರಿದ ಜಗದ ಶ್ರೇಷ್ಠ ಕಾರ್ಮಿಕರು ದುಡಿಯುವ ಜೀವಗಳಿಗೆ ಸದಾ ಸಮೃದ್ಧಿಯಿರಲಿ ದುಡಿಸುವವರಿಗೆ, ಶ್ರಮಿಕರಿಗೆ ಪ್ರೀತಿ-ಗೌರವ ನೀಡುವ ಬುದ್ಧಿ ಸರ್ವದಾ ಇರಲಿ ಕಠಿಣ ಪರಿಶ್ರಮ ದುಡಿಮೆಯೇ ರಾಮನಾಮ. ಕಾರ್ಮಿಕನಿಗಿಲ್ಲ ವಿರಾಮ! ಇವರಿಗೆ, ದುಡಿಮೆಯೆ ದೈವ ಸ್ವಾಭಿಮಾನವೆ ಭವ-ಭಾವ ಪರಿಶ್ರಮವೆ ವಿಭವ! ಬೇಕು, ಚಿಪ್ಪಿಗೆ ಸ್ವಾತಿ […]
ಕಾರ್ಮಿಕ ದಿನದ ವಿಶೇಷ-ಬರಹ
ಕಾರ್ಮಿಕ ದಿನಾಚರಣೆಯೂ ವರ್ತಮಾನದ ಆತಂಕವೂ ರಾಮಸ್ವಾಮಿ ಡಿ.ಎಸ್. ಕಾರ್ಮಿಕ ದಿನಾಚರಣೆಯೂ ವರ್ತಮಾನದ ಆತಂಕವೂ ಮೇ ಒಂದನೇ ತಾರೀಖು ಬರುವ ವಾರ ಮೊದಲೇ ಬಂಟಿಂಗ್ಸ್, ಬ್ಯಾನರ್, ಪ್ಲಕಾರ್ಡುಗಳನ್ನು ಸಿದ್ಧಪಡಿಸಿ ಎಲ್ಲ ಕಛೇರಿಗಳ ಕಾರ್ಮಿಕ ಸಂಘಟನೆಗಳಿಗೆ ಮನವಿ ಪತ್ರ ಕಳಿಸಿ ಒಂದನೇ ತಾರೀಖಿನ ಬಹಿರಂಗ ಸಭೆ ಮತ್ತು ಮತಪ್ರದರ್ಶನಕ್ಕೆ ಬರಲು ಒತ್ತಾಯಿಸುತ್ತಿದ್ದ ದಿನಗಳು ನೆನಪಿಗೆ ಬಂದವು. ನಾನಿರುವ ಊರಿನಲ್ಲಿ ದೊಡ್ಡ ಕಾರ್ಖಾನೆಗಳೇನೂ ಇಲ್ಲ. ಹಾಗಾಗಿ ನಮ್ಮ ಮೇ ದಿನದ ಸಭೆಗೆ ಬ್ಯಾಂಕ್, ಎಲ್ಲೈಸಿ, ಟೆಲಿಫೋನ್, ಅಂಚೆ ಕಛೇರಿಗಳ ನೌಕರರನ್ನು ಸೇರಿಸುತ್ತಿದ್ದೆವಾದರೂ […]
ಕಾವ್ಯಯಾನ
ಮೇ – ಒಂದು ಕಪ್ಪು ಹಾಡು ನೂರುಲ್ಲಾ ತ್ಯಾಮಗೊಂಡ್ಲು ಮೇ – ಒಂದು ಕಪ್ಪು ಹಾಡು ಕಾರ್ಲ್ ಮಾರ್ಕ್ಸ್ ನ ಹೆಣ ಹೊತ್ತ ಕೈಗಳಿನ್ನು ಬೀದಿ ಬೀದಿ ತರಗೆಲೆಯಂತೆ ತೆವಳುತ್ತಲೇ ಇವೆ ಸಂಜೆಯ ಸೂರ್ಯ ಸದ್ದಿಲ್ಲದೆ ನೋಡುತ್ತಾನೆ ಕೈಗಳಿಗಂಟಿದ ಕತ್ತಲನ್ನು ಶತಮಾನಗಳಿಂದಲೂ ಹೀಗೆ ಬದುಕು ಸಂಕೇತಗಳಲ್ಲಿ ಹರಿದು ಹೋಗಿದೆ ಸಂಜೆ ಮಲ್ಲಿಗೆಯ ಕನಸಿನಲ್ಲಿ ಕಂಪಿನ ಹಿತವಿಲ್ಲ ಖಾಲಿ ಜೋಬುಗಳ ತುಂಬ ಸ್ವೇದದ ಕಮಟು ಹೆಂಡತಿ ಮಕ್ಕಳು ಕೈ ನೀಡಿದಾಗ ತಬ್ಬಿಕೊಳ್ಳುವ ಕೈಗಳಲ್ಲಿ ನಿತ್ರಾಣವಿಲ್ಲ ಒಂದು ಹಗಲು ಅಥವಾ […]